Jeremiah · chapter 2 · verse 5
Jeremiah 2:5 in Kannada
ಕರ್ತನು ಹೀಗೆ ಹೇಳುತ್ತಾನೆ, ನಿಮ್ಮ ತಂದೆಗಳು ನನಗೆ ದೂರವಾಗಿ ವ್ಯರ್ಥತ್ವವನ್ನು ಹಿಂದಟ್ಟಿ ವ್ಯರ್ಥವಾಗುವ ಹಾಗೆ ನನ್ನಲ್ಲಿ ಯಾವ ಅಕ್ರಮವನ್ನು ಕಂಡಿದ್ದಾರೆ?
Kartanu heege heluttaane, nimma tandegalu nanage dooravaagi vyarthatvavannu hindatti vyarthavaaguva haage nannalli yaava akramavannu kandiddaare?
Jeremiah 2:5 in English
- King James Version (KJV)
- Thus saith the LORD, What iniquity have your fathers found in me, that they are gone far from me, and have walked after vanity, and are become vain?
- World English Bible (WEB)
- The LORD says, “What unrighteousness have your fathers found in me, that they have gone far from me, and have walked after worthless vanity, and have become worthless?
- American Standard Version (ASV)
- Thus saith Jehovah, What unrighteousness have your fathers found in me, that they are gone far from me, and have walked after vanity, and are become vain?
- Bible in Basic English (BBE)
- These are the words of the Lord: What evil have your fathers seen in me that they have gone far from me, and, walking after what is false, have become false?
- Darby Translation (DBY)
- Thus saith Jehovah: What injustice have your fathers found in me, that they are gone far from me, and have walked after vanity, and become vain?
- Webster's Bible (WBS)
- Thus saith the LORD, What iniquity have your fathers found in me, that they have gone far from me, and have walked after vanity, and have become vain?
- Young's Literal Translation (YLT)
- Thus said Jehovah: What — have your fathers found in Me perversity, That they have gone far off from Me, And go after the vanity, and become vain,
Read in context
- 3ಇಸ್ರಾಯೇಲು ಕರ್ತನಿಗೆ ಪರಿಶುದ್ಧವೂ ಆತನ ಹುಟ್ಟುವಳಿಯ ಪ್ರಥಮ ಫಲವೂ ಆಗಿತ್ತು; ಅದನ್ನು ತಿಂದುಬಿಟ್ಟವರೆಲ್ಲರೂ ಅಪರಾಧಿ ಗಳಾಗುವರು; ಅವರಿಗೆ ಕೇಡು ಬರುವದೆಂದು ಕರ್ತನು ಅನ್ನುತ್ತಾನೆ.
- 4ಓ ಯಾಕೋಬಿನ ಮನೆತನವೇ, ಇಸ್ರಾಯೇಲಿನ ಮನೆತನದ ಎಲ್ಲಾ ಕುಟುಂಬಗಳೇ, ಕರ್ತನ ವಾಕ್ಯವನ್ನು ನೀವು ಕೇಳಿರಿ.
- 5ಕರ್ತನು ಹೀಗೆ ಹೇಳುತ್ತಾನೆ, ನಿಮ್ಮ ತಂದೆಗಳು ನನಗೆ ದೂರವಾಗಿ ವ್ಯರ್ಥತ್ವವನ್ನು ಹಿಂದಟ್ಟಿ ವ್ಯರ್ಥವಾಗುವ ಹಾಗೆ ನನ್ನಲ್ಲಿ ಯಾವ ಅಕ್ರಮವನ್ನು ಕಂಡಿದ್ದಾರೆ?
- 6ನಮ್ಮನ್ನು ಐಗುಪ್ತ ದೇಶದೊಳಗಿಂದ ಬರಮಾಡಿ ನಮ್ಮನ್ನು ಅರಣ್ಯದಲ್ಲಿ ಕಾಡೂ ಕುಣಿಗಳೂ ಉಳ್ಳ ದೇಶದಲ್ಲಿ, ಕ್ಷಾಮದ ಮತ್ತು ಮರಣದ ನೆರಳಾದಂಥ ದೇಶದಲ್ಲಿ, ಒಬ್ಬರೂ ಹಾದು ಹೋಗದೆ ಯಾರೂ ವಾಸಮಾಡದೆ ಇರುವಲ್ಲಿ ನಡಿಸಿದ ಕರ್ತನು ಎಲ್ಲಿ ಎಂದು ಅವರು ಅಂದುಕೊಳ್ಳಲಿಲ್ಲ.
- 7ನಿಮ್ಮನ್ನು ಸಮೃದ್ಧಿಯಾದ ದೇಶಕ್ಕೆ ಅದರ ಫಲವನ್ನೂ ಮೇಲನ್ನೂ ತಿನ್ನುವ ಹಾಗೆ ಕರಕೊಂಡು ಬಂದೆನು. ಆದರೆ ನೀವು ಬಂದು ನನ್ನ ದೇಶವನ್ನು ಅಶುದ್ಧಮಾಡಿ, ನನ್ನ ಸ್ವಾಸ್ತ್ಯವನ್ನು ಅಸಹ್ಯ ಮಾಡಿದಿರಿ.
Cross references
- 2 Kings 17:15 2 ಅರಸುಗಳು 17:15ಕಠಿಣಪಡಿಸಿ ಆತನ ಕಟ್ಟಳೆಗಳನ್ನೂ ಆತನು ತಮ್ಮ ಪಿತೃಗಳ ಸಂಗಡ ಮಾಡಿದ ಆತನ ಒಡಂಬಡಿಕೆಯನ್ನೂ ಆತನು ಅವರಿಗೆ ಹೇಳಿದ ಸಾಕ್ಷಿ ಗಳನ್ನೂ ಅಲಕ್ಷ್ಯಮಾಡಿ ವ್ಯರ್ಥವಾದದ್ದನ್ನು ಹಿಂಬಾ ಲಿಸಿ ವ್ಯರ್ಥವಾದವರಾಗಿ -- ನೀವು ಅವರ ಹಾಗೆ ಮಾಡಬೇಡಿರೆಂದು ಕರ್ತನು ಅವರಿಗೆ ಆಜ್ಞಾಪಿಸಿದರೂ ಅವರ ಸುತ್ತಲಿರುವ ಅನ್ಯಜನಾಂಗಗಳ ಹಿಂದೆ ಹೋದರು.
- Romans 1:21 ರೋಮಾಪುರದವರಿಗೆ 1:21ಅವರು ದೇವರನ್ನು ಅರಿತಾಗ ಆತನನ್ನು ದೇವರೆಂದು ಮಹಿಮೆಪಡಿಸಲಿಲ್ಲ, ಕೃತಜ್ಞತೆಯುಳ್ಳವರಾಗಿಯೂ ಇರಲಿಲ್ಲ; ಅವರು ತಮ್ಮ ಕಲ್ಪನೆಗಳಲ್ಲಿ ವಿಫಲರಾದರು ಮತ್ತು ಮೂರ್ಖತನದ ಅವರ ಹೃದಯವು ಕತ್ತಲಾ ಯಿತು.
- Jonah 2:8 ಯೋನ 2:8ಸುಳ್ಳಾದ ವ್ಯರ್ಥತ್ವಗಳನ್ನು ಅನುಸರಿಸುವವರು ತಮ್ಮ ಸ್ವಂತ ಕರುಣೆಯನ್ನು ಮರೆತು ಬಿಡುತ್ತಾರೆ.
- Jeremiah 10:14–15 ಯೆರೆಮೀಯ 10:14–15ಪ್ರತಿ ಮನುಷ್ಯನು ತನ್ನ ಜ್ಞಾನದಲ್ಲಿ ಪಶುವಾಗಿದ್ದಾನೆ; ಎರಕ ಹೊಯ್ಯುವವರೆಲ್ಲಾ ಕೆತ್ತಿದ ವಿಗ್ರಹಕ್ಕೋಸ್ಕರ ನಾಚಿಕೆಪಡುತ್ತಾರೆ; ಅವರ ಎರಕ ವಿಗ್ರಹವು ಸುಳ್ಳಾದದ್ದು; ಅವುಗಳಲ್ಲಿ ಉಸಿರು ಇಲ್ಲ. ಅವು ವ್ಯರ್ಥವೇ, ತಪ್ಪಾದ ಕೆಲಸವೇ; ಅವು ವಿಚಾ ರಿಸಲ್ಪಡುವ ಕಾಲದಲ್ಲಿ ನಾಶವಾಗುವವು.
- Psalm 115:8 ಕೀರ್ತನೆಗಳು 115:8ಅವುಗಳನ್ನು ಮಾಡುವವರೂ ಅವುಗಳಲ್ಲಿ ಭರವಸವಿಡುವವ ರೆಲ್ಲರೂ ಅವುಗಳ ಹಾಗೆಯೇ ಇದ್ದಾರೆ.
- 1 Samuel 12:21 1 ಸಮುವೇಲನು 12:21ಅವು ವ್ಯರ್ಥ ವಾದವುಗಳೇ ಸರಿ. ಯಾಕಂದರೆ ಕರ್ತನು ತನ್ನ ಮಹತ್ತಾದ ಹೆಸರಿಗೋಸ್ಕರ ತನ್ನ ಜನರನ್ನು ಕೈಬಿಡು ವದಿಲ್ಲ.
- Deuteronomy 32:21 ಧರ್ಮೋಪದೇಶಕಾಂಡ 32:21ದೇವರಲ್ಲದ್ದರಿಂದ ಅವರು ನನಗೆ ರೋಷ ಹುಟ್ಟಿಸಿ ದರು; ತಮ್ಮ ವ್ಯರ್ಥವಾದವುಗಳಿಂದ ನನಗೆ ಕೋಪ ವನ್ನು ಎಬ್ಬಿಸಿದರು. ಜನವಲ್ಲದ್ದರಿಂದ ನಾನು ಅವರಿಗೆ ರೋಷ ಹುಟ್ಟಿಸುವೆನು; ಮೂಢ ಜನಾಂಗದಿಂದ ಅವರಿಗೆ ಕೋಪವನ್ನೆಬ್ಬಿಸುವೆನು.
- Jeremiah 51:17–18 ಯೆರೆಮೀಯ 51:17–18ಮನುಷ್ಯ ರೆಲ್ಲರೂ ತಮ್ಮ ತಿಳುವಳಿಕೆಯಿಂದ ಮೂಢರಾಗಿದ್ದಾರೆ; ಎರಕ ಹೊಯ್ಯುವವರೆಲ್ಲರೂ ವಿಗ್ರಹದಿಂದ ನಾಚಿಕೆ ಪಡುತ್ತಾರೆ; ಅವರ ಎರಕದ ಬೊಂಬೆಗಳು ಸುಳ್ಳೇ; ಅವುಗಳಲ್ಲಿ ಉಸಿರು ಇಲ್ಲ. ಅವು ಮಾಯವೇ, ಮೋಸದ ಕೆಲಸವೇ; ಅವುಗಳ ವಿಚಾರಣೆಯ ಕಾಲದಲ್ಲಿ ನಾಶವಾಗುವವು.
- Acts 14:15 ಅಪೊಸ್ತಲರ ಕೃತ್ಯಗಳು 14:15ಅಯ್ಯಗಳಿರಾ, ನೀವು ಇವುಗಳನ್ನು ಯಾಕೆ ಮಾಡು ತ್ತೀರಿ? ನಾವೂ ಮನುಷ್ಯರು, ನಿಮ್ಮಂಥ ಸ್ವಭಾವ ವುಳ್ಳವರು. ನೀವು ಈ ವ್ಯರ್ಥವಾದವುಗಳನ್ನು ಬಿಟ್ಟು ಬಿಟ್ಟು ಭೂಮ್ಯಾಕಾಶಗಳನ್ನೂ ಸಮುದ್ರವನ್ನೂ ಅವುಗಳ ಲ್ಲಿರುವ ಸಮಸ್ತವನ್ನೂ ನಿರ್ಮಾಣ ಮಾಡಿದ ಜೀವ ಸ್ವರೂಪನಾದ ದೇವರ ಕಡೆಗೆ ತಿ
- Isaiah 44:9 ಯೆಶಾಯ 44:9ಕೆತ್ತಿದ ವಿಗ್ರಹವನ್ನು ಮಾಡುವವರೆಲ್ಲರೂ ವ್ಯರ್ಥ ರೇ; ಅವರ ಮನೋರಂಜಕ ವಸ್ತುಗಳು ಯಾತಕ್ಕೂ ಬಾರವು; ಅವರು ನೋಡದೆ ಇಲ್ಲವೆ ತಿಳಿಯದೆ, ನಾಚಿಕೆಗೆ ಗುರಿಯಾಗುವಂತೆ ಅವುಗಳೇ ಅವರಿಗೆ ಸ್ವಂತ ಸಾಕ್ಷಿಗಳಾಗಿರುವವು.
- Isaiah 5:3–4 ಯೆಶಾಯ 5:3–4ಓ ಯೆರೂಸಲೇಮಿನ ನಿವಾಸಿಗಳೇ, ಯೆಹೂದದ ಮನುಷ್ಯರೇ, ನನಗೂ ನನ್ನ ದ್ರಾಕ್ಷೆಯ ತೋಟಕ್ಕೂ ನ್ಯಾಯತೀರಿಸಿರಿ ಎಂದು ನಿಮ್ಮನ್ನು ಪ್ರಾರ್ಥಿಸುತ್ತೇನೆ. ನನ್ನ ದ್ರಾಕ್ಷೇ ತೋಟದಲ್ಲಿ ನಾನು ಮಾಡಿದ್ದಕ್ಕಿಂತ ಇನ್ನೂ ಹೆಚ್ಚಾಗಿ ಅದಕ್ಕೆ ಏನು ಮಾಡಬೇಕಾಗಿತ್ತು? ಹೀಗಿರಲು ಅದು ಒಳ್ಳೇ ದ್ರಾಕ್ಷೇ ಫಲವನ್ನು ಫಲಿಸುವದೆಂದು ನಾನು ನಿರೀಕ್ಷಿಸುತ್ತಿರಲು ಅದು ಕಾಡುಹಣ್ಣನ್ನು ಕೊಟ್ಟಿದ್ದು ಯಾಕೆ?
- Jeremiah 2:31 ಯೆರೆಮೀಯ 2:31ಓ ಸಂತತಿಯೇ, ನೀವು ಕರ್ತನ ವಾಕ್ಯವನ್ನು ನೋಡಿರಿ; ನಾನು ಇಸ್ರಾಯೇಲಿನ ಅರಣ್ಯವಾ ದೆನೋ? ಕತ್ತಲೆಯ ದೇಶವಾದೆನೋ? ಯಾತಕ್ಕೆ ನನ್ನ ಜನರು--ನಾವು ಪ್ರಭುಗಳು, ಇನ್ನು ಮೇಲೆ ನಿನ್ನ ಬಳಿಗೆ ಎಂದೂ ಬರುವದಿಲ್ಲ ಎಂದು ಹೇಳುತ್ತಾರೆ.