Isaiah · chapter 43 · verse 4
Isaiah 43:4 in Kannada
ನೀನು ನನ್ನ ದೃಷ್ಟಿಯಲ್ಲಿ ಅಮೂಲ್ಯನೂ ಮಾನ್ಯನೂ ಪ್ರಿಯನೂ ಆಗಿರುವದರಿಂದ ನಾನು ನಿನಗೋಸ್ಕರ ಮನುಷ್ಯರನ್ನೂ ನಿನ್ನ ಪ್ರಾಣಕ್ಕೆ (ಪ್ರತಿಯಾಗಿ) ಜನಾಂಗಗಳನ್ನೂ ಕೊಡುವೆನು.
Neenu nanna drushtiyalli amoolyanoo maanyanoo priyanoo aagiruvadarinda naanu ninagoskara manushyarannoo ninna praanakke (pratiyaagi) janaangagalannoo koduvenu.
Isaiah 43:4 in English
- King James Version (KJV)
- Since thou wast precious in my sight, thou hast been honourable, and I have loved thee: therefore will I give men for thee, and people for thy life.
- World English Bible (WEB)
- Since you have been precious and honored in my sight, and I have loved you, therefore I will give people in your place, and nations instead of your life.
- American Standard Version (ASV)
- Since thou hast been precious in my sight, [and] honorable, and I have loved thee; therefore will I give men in thy stead, and peoples instead of thy life.
- Bible in Basic English (BBE)
- Because of your value in my eyes, you have been honoured, and loved by me; so I will give men for you, and peoples for your life.
- Darby Translation (DBY)
- Since thou wast precious in my sight, thou hast been honourable, and I have loved thee; and I will give men for thee, and peoples for thy life.
- Webster's Bible (WBS)
- Since thou hast been precious in my sight, thou hast been honorable, and I have loved thee: therefore will I give men for thee, and people for thy life.
- Young's Literal Translation (YLT)
- Since thou wast precious in Mine eyes, Thou wast honoured, and I have loved thee, And I appoint men in thy stead, And peoples instead of thy life.
Read in context
- 2ನೀನು ಜಲರಾಶಿಯನ್ನು ದಾಟಿ ಹೋಗುವಾಗ ನಾನು ನಿನ್ನೊಂದಿಗಿರುವೆನು; ನದಿಗಳನ್ನು ನೀನು ದಾಟುವಾಗ ಅವು ನಿನ್ನನ್ನು ಮುಳುಗಿಸುವದಿಲ್ಲ; ಬೆಂಕಿಯಲ್ಲಿ ನೀನು ನಡೆಯುವಾಗ ಸುಡಲ್ಪಡುವದಿಲ್ಲ; ಇಲ್ಲವೆ ಜ್ವಾಲೆಯು ನಿನ್ನನ್ನು ದಹಿಸದು.
- 3ನಾನೇ ನಿನ್ನ ಕರ್ತನೂ ದೇವರೂ ಇಸ್ರಾಯೇಲಿನ ಪರಿಶುದ್ಧನೂ ರಕ್ಷಕನೂ ಆಗಿದ್ದೇನೆ. ಐಗುಪ್ತವನ್ನು ನಿನ್ನ ವಿಮೋಚನೆಗೂ ಇಥಿಯೋಪ್ಯ ಮತ್ತು ಸೆಬಾ ಸೀಮೆಗಳನ್ನು ನಿನಗೊಸ್ಕರ ಕೊಟ್ಟಿದ್ದೇನೆ.
- 4ನೀನು ನನ್ನ ದೃಷ್ಟಿಯಲ್ಲಿ ಅಮೂಲ್ಯನೂ ಮಾನ್ಯನೂ ಪ್ರಿಯನೂ ಆಗಿರುವದರಿಂದ ನಾನು ನಿನಗೋಸ್ಕರ ಮನುಷ್ಯರನ್ನೂ ನಿನ್ನ ಪ್ರಾಣಕ್ಕೆ (ಪ್ರತಿಯಾಗಿ) ಜನಾಂಗಗಳನ್ನೂ ಕೊಡುವೆನು.
- 5ಭಯಪಡಬೇಡ; ನಾನೇ ನಿನ್ನೊಂದಿಗೆ ಇದ್ದೇನೆ; ನಿನ್ನ ಸಂತತಿಯವರನ್ನು ಮೂಡಣದಿಂದ ತರುವೆನು; ಪಶ್ಚಿಮದಿಂದ ನಿನ್ನನ್ನು ಕೂಡಿಸುವೆನು.
- 6ನಾನು--ಒಪ್ಪಿಸಿಬಿಡು ಎಂದು ಉತ್ತರಕ್ಕೆ ತಡೆಯಬೇಡ ಎಂದು ದಕ್ಷಿಣಕ್ಕೆ ಹೇಳಿ, ದೂರದಲ್ಲಿರುವ ನನ್ನ ಕುಮಾರರನ್ನು ಭೂಮಿಯ ಅಂತ್ಯದಿಂದ ನನ್ನ ಕುಮಾರ್ತೆಯರನ್ನು
Cross references
- Deuteronomy 7:6–8 ಧರ್ಮೋಪದೇಶಕಾಂಡ 7:6–8ಯಾಕಂದರೆ ನೀನು ನಿನ್ನ ದೇವರಾದ ಕರ್ತನಿಗೆ ಪರಿಶುದ್ಧ ಜನವೇ; ನಿನ್ನ ದೇವರಾದ ಕರ್ತನು ನಿನ್ನನ್ನು ಭೂಮಿಯ ಮೇಲಿರುವ ಎಲ್ಲಾ ಜನಗಳೊಳಗಿಂದ ತನಗೆ ಸ್ವಕೀಯ ಜನವಾಗುವ ಹಾಗೆ ಆರಿಸಿಕೊಂಡಿ ದ್ದಾನೆ. ನೀವು ಎಲ್ಲಾ ಜನಗಳಿಗಿಂತ ಹೆಚ್ಚಾಗಿರುವ ಕಾರಣ ಕರ್ತನು ನಿಮ್ಮನ್ನು ಪ್ರೀತಿಸಿ ಆರಿಸಿಕೊಳ್ಳಲಿಲ್ಲ; ನೀವು ಎಲ್ಲಾ ಜನಗಳಿಗಿಂತ ಬಹಳ ಸ್ವಲ್ಪ. ಕರ್ತನು ನಿಮ್ಮನ್ನು ಪ್ರೀತಿಸಿದ್ದರಿಂದಲೂ ನಿಮ್ಮ ಪಿತೃಗಳಿಗೆ ಮಾಡಿದ ಪ್ರಮಾಣವನ್ನು ಕಾಪಾಡುವದರಿಂದಲೂ ಕರ್ತನು ನಿಮ್ಮನ್ನು ಬಲವಾದ ಕೈಯಿಂದ ಹೊರಗೆ ಬರಮಾಡಿ ನಿನ್ನನ್ನು ದಾಸತ್ವದ ಮನೆಯಿಂದಲೂ ಐಗುಪ್ತದ ಅರಸನಾದ ಫರೋಹನ ಕೈಯಿಂದಲೂ ವಿಮೋಚಿಸಿದನು.
- 1 Peter 2:9 1 ಪೇತ್ರನು 2:9ಕತ್ತಲೆಯೊಳಗಿದ್ದ ನಿಮ್ಮನ್ನು ತನ್ನ ಆಶ್ಚರ್ಯವಾದ ಬೆಳಕಿಗೆ ಸೇರಿಸಿದಾತನ ಸ್ತುತಿಗಳನ್ನು ಪ್ರಕಟಿಸುವವ ರಾಗುವಂತೆ ನೀವು ಆಯಲ್ಪಟ್ಟ ವಂಶದವರೂ ರಾಜರಾದ ಯಾಜಕವರ್ಗದವರೂ ಪರಿಶುದ್ಧ ಜನಾಂಗವೂ ಅಸಮಾನ್ಯರಾದ ಜನರೂ ಆಗಿದ್ದೀರಿ.
- Jeremiah 31:3 ಯೆರೆಮೀಯ 31:3ಹಿಂದಿನಂತೆ ಕರ್ತನು ಬಂದು ನನಗೆ ಕಾಣಿಸಿಕೊಂಡು--ಹೌದು, ಶಾಶ್ವತವಾದ ಪ್ರೀತಿ ಯಿಂದ ನಿನ್ನನ್ನು ಪ್ರೀತಿ ಮಾಡಿದ್ದೇನೆ; ಆದದರಿಂದ ಪ್ರೀತಿ ದಯೆಗಳಿಂದ ನಿನ್ನನ್ನು ಎಳೆದಿದ್ದೇನೆ.
- Revelation 3:9 ಪ್ರಕಟನೆ 3:9ಇಗೋ, ಯೆಹೂದ್ಯ ರಲ್ಲದವರಾಗಿದ್ದರೂ ತಾವು ಯೆಹೂದ್ಯರೆಂದು ಸುಳ್ಳಾಗಿ ಹೇಳಿಕೊಳ್ಳುವ ಸೈತಾನನ ಸಭಾಮಂದಿರದವರನ್ನು ಬರಮಾಡಿ, ಇಗೋ, ಅವರನ್ನು ನಿನ್ನ ಪಾದಗಳ ಮುಂದೆ ಆರಾಧಿಸುವಂತೆ ಮಾಡುವೆನು, ಇದರಿಂದ ನಾನು ನಿನ್ನನ್ನು ಪ್ರೀತಿಸಿದ್ದೇನೆಂದು ಅವರು ತಿಳುಕೊಳ್ಳುವಂತೆ ಮಾಡು
- Genesis 12:2 ಆದಿಕಾಂಡ 12:2ನಾನು ನಿನ್ನನ್ನು ದೊಡ್ಡ ಜನಾಂಗವಾಗ ಮಾಡಿ ನಿನ್ನನ್ನು ಆಶೀರ್ವದಿಸಿ ನಿನ್ನ ಹೆಸರನ್ನು ದೊಡ್ಡ ದಾಗಿ ಮಾಡುವೆನು, ನೀನು ಆಶೀರ್ವಾದವಾಗಿರುವಿ.
- John 16:27 ಯೋಹಾನನು 16:27ನೀವು ನನ್ನನ್ನು ಪ್ರೀತಿಸಿ ನಾನು ದೇವರ ಬಳಿಯಿಂದ ಹೊರಟುಬಂದೆನೆಂದು ನಂಬಿದ್ದರಿಂದ ತಂದೆಯು ತಾನೇ ನಿಮ್ಮನ್ನು ಪ್ರೀತಿಸುತ್ತಾನೆ.
- Hosea 11:1 ಹೋಶೇಯ 11:1ಇಸ್ರಾಯೇಲನು ಮಗುವಾಗಿದ್ದಾಗ ನಾನು ಅವನನ್ನು ಪ್ರೀತಿಮಾಡಿದೆನು, ಮತ್ತು ನನ್ನ ಮಗನನ್ನು ಐಗುಪ್ತದೊಳಗಿಂದ ಕರೆದೆನು.
- Deuteronomy 32:9–14 ಧರ್ಮೋಪದೇಶಕಾಂಡ 32:9–14ಕರ್ತನ ಪಾಲು ಆತನ ಜನವೇ; ಯಾಕೋಬು ಆತನ ಸ್ವಾಸ್ತ್ಯದ ಪಾಲು. ಆತನು ಅರಣ್ಯದ ಭೂಮಿಯಲ್ಲಿಯೂ ಕಿರುಚುವ ಅಡವಿಯ ಕಾಡಿನಲ್ಲಿಯೂ ಅವನನ್ನು ಕಂಡುಕೊಂಡನು; ಆತನು ಅವನನ್ನು ನಡಿಸಿ, ಉಪದೇಶಿಸಿದನು. ತನ್ನ ಕಣ್ಣುಗುಡ್ಡೆಯಂತೆ ಕಾಪಾಡಿದನು. ಹದ್ದು ತನ್ನ ಗೂಡಿನಿಂದ ಮರಿಗಳನ್ನು ಹೊರಡಿಸಿ ಅವುಗಳ ಮೇಲೆ ರೆಕ್ಕೆಯನ್ನಾಡಿಸಿ ತನ್ನ ರೆಕ್ಕೆಗಳನ್ನು ಚಾಚಿ, ತಕ್ಕೊಂಡು ರೆಕ್ಕೆಯ ಮೇಲೆ ಎತ್ತಿಕೊಳ್ಳುವಂತೆ ಕರ್ತನು ಒಬ್ಬನೇ ಅವನನ್ನು ನಡಿಸಿದನು. ಅನ್ಯ ದೇವರು ಒಬ್ಬನೂ ಅವನ ಸಂಗಡ ಇದ್ದಿಲ್ಲ. ಅವನು ಹೊಲದ ಆದಾಯವನ್ನು ತಿನ್ನುವ ಹಾಗೆ ಭೂಮಿಯ ಎತ್ತರವಾದ ಸ್ಥಳಗಳಲ್ಲಿ ಅವನನ್ನು ಹೋಗ ಮಾಡಿ ಬಂಡೆಯೊಳಗಿಂದ ಜೇನನ್ನೂ ಬಿಳೀ ಕಲ್ಲಿನ ಬಂಡೆಯೊಳಗಿಂದ ಎಣ್ಣೆಯನ್ನೂ ಅವನಿಗೆ ಕುಡಿಯಲು ಕೊಟ್ಟನು. ಹಸುಗಳ ಬೆಣ್ಣೆಯನ್ನೂ ಕುರಿಗಳ ಹಾಲನ್ನೂ ಕುರಿಮರಿಗಳ ಕೊಬ್ಬಿನೊಂದಿಗೆ ಬಾಷಾನಿನ ಟಗರು ಗಳನ್ನೂ ಹೋತಗಳನ್ನೂ ಉತ್ತಮ ಗೋಧಿಯ ಸಂಗಡ ಕೊಟ್ಟನು. ನೀನು ಶುದ್ಧ ದ್ರಾಕ್ಷಾರಸವನ್ನು ಕುಡಿದಿ.
- John 17:23 ಯೋಹಾನನು 17:23ನಾನು ಇವರಲ್ಲಿಯೂ ನೀನು ನನ್ನಲ್ಲಿಯೂ (ಇರುವಂತೆ) ಅವರೂ ಒಂದಾಗಿ ಪರಿಪೂರ್ಣರಾಗಿ ರುವರು; ನೀನು ನನ್ನನ್ನು ಕಳುಹಿಸಿದ್ದೀ ಎಂತಲೂ ನನ್ನನ್ನು ಪ್ರೀತಿ ಮಾಡಿದಂತೆ ಅವರನ್ನು ನೀನು ಪ್ರೀತಿಮಾಡಿದ್ದೀ ಎಂತಲೂ ಲೋಕವು ತಿಳಿದುಕೊಳ್ಳುವದು.
- Exodus 19:5–6 ವಿಮೋಚನಕಾಂಡ 19:5–6ಆದದರಿಂದ ಈಗ ನೀವು ನನ್ನ ಮಾತನ್ನು ಕೇಳಿ ನನ್ನ ಒಡಂಬಡಿಕೆಯನ್ನು ಕಾಪಾಡಿ ದರೆ, ಸಮಸ್ತ ಜನರಲ್ಲಿ ನೀವು ನನ್ನ ಅಸಮಾನ್ಯವಾದ ಸಂಪತ್ತಾಗಿರುವಿರಿ; ಭೂಮಿಯೆಲ್ಲಾ ನನ್ನದೇ. ನೀವು ನನಗೆ ಯಾಜಕ ರಾಜ್ಯವೂ ಪರಿಶುದ್ಧ ಜನಾಂಗವೂ ಆಗಿರುವಿರಿ ಎಂದು ಇಸ್ರಾಯೇಲ್ ಮಕ್ಕಳಿಗೆ ಹೇಳ ಬೇಕಾದ ಮಾತುಗಳು ಇವೇ ಅಂದನು.
- Deuteronomy 14:2 ಧರ್ಮೋಪದೇಶಕಾಂಡ 14:2ನೀನು ನಿನ್ನ ದೇವರಾದ ಕರ್ತನಿಗೆ ಪರಿಶುದ್ಧ ಜನವೇ. ನಿನ್ನನ್ನು ಕರ್ತನು ತನಗೆ ಅಸಮಾನ್ಯಜನವಾಗುವ ಹಾಗೆ ಭೂಮಿಯ ಮೇಲಿರುವ ಎಲ್ಲಾ ಜನಗಳೊಳಗಿಂದ ನಿನ್ನನ್ನು ಆದುಕೊಂಡಿದ್ದಾನೆ.
- Deuteronomy 26:18 ಧರ್ಮೋಪದೇಶಕಾಂಡ 26:18ಕರ್ತನು ಈಹೊತ್ತು ನಿನಗೆ ತಾನು ವಾಗ್ದಾನಮಾಡಿದಂತೆ ನೀನು ಆತನಿಗೆ ಅಸಮಾನ್ಯ ಜನವಾಗಬೇಕೆಂದೂ ಆತನ ಎಲ್ಲಾ ಆಜ್ಞೆಗಳನ್ನು ಕಾಪಾಡಬೇಕೆಂದೂಆತನು ಮಾಡಿದ ಎಲ್ಲಾ ಜನಾಂಗಗಳ ಮೇಲೆ ಸ್ತುತಿಯಲ್ಲಿಯೂ ಹೆಸರಿನಲ್ಲಿಯೂ ಘನತೆಯಲ್ಲಿಯೂ ನೀನು ಉನ್ನತ ವಾಗಬೇಕೆಂದೂ ನೀನು ನಿನ್ನ ದೇವರಾದ ಕರ್ತನಿಗೆ ಆತನು ಹೇಳಿದಂತೆ ಪರಿಶುದ್ಧ ಜನವಾಗಬೇಕೆಂದೂ ದೃಢವಾಗಿ ಹೇಳಿದ್ದಾನೆ.