Isaiah · chapter 43 · verse 3
Isaiah 43:3 in Kannada
ನಾನೇ ನಿನ್ನ ಕರ್ತನೂ ದೇವರೂ ಇಸ್ರಾಯೇಲಿನ ಪರಿಶುದ್ಧನೂ ರಕ್ಷಕನೂ ಆಗಿದ್ದೇನೆ. ಐಗುಪ್ತವನ್ನು ನಿನ್ನ ವಿಮೋಚನೆಗೂ ಇಥಿಯೋಪ್ಯ ಮತ್ತು ಸೆಬಾ ಸೀಮೆಗಳನ್ನು ನಿನಗೊಸ್ಕರ ಕೊಟ್ಟಿದ್ದೇನೆ.
Naane ninna kartanoo devaroo israayelina parishuddhanoo rakshakanoo aagiddene. Aiguptavannu ninna vimochanegoo ithiyopya mattu sebaa seemegalannu ninagoskara kottiddene.
Isaiah 43:3 in English
- King James Version (KJV)
- For I [am] the LORD thy God, the Holy One of Israel, thy Saviour: I gave Egypt [for] thy ransom, Ethiopia and Seba for thee.
- World English Bible (WEB)
- For I am the LORD your God, the Holy One of Israel, your Savior. I have given Egypt as your ransom, Ethiopia and Seba in your place.
- American Standard Version (ASV)
- For I am Jehovah thy God, the Holy One of Israel, thy Saviour; I have given Egypt as thy ransom, Ethiopia and Seba in thy stead.
- Bible in Basic English (BBE)
- For I am the Lord your God, the Holy One of Israel, your saviour; I have given Egypt as a price for you, Ethiopia and Seba for you.
- Darby Translation (DBY)
- For I [am] Jehovah thy God, the Holy One of Israel, thy Saviour: I gave Egypt for thy ransom, Ethiopia and Seba for thee.
- Webster's Bible (WBS)
- For I [am] the LORD thy God, the Holy One of Israel, thy Savior: I gave Egypt [for] thy ransom, Cush and Seba for thee.
- Young's Literal Translation (YLT)
- For I — Jehovah thy God, The Holy One of Israel, thy Saviour, I have appointed Egypt thine atonement, Cush and Seba in thy stead.
Read in context
- 1ಈಗಲಾದರೋ ಓ ಯಾಕೋಬೇ, ಇಸ್ರಾಯೇಲೇ ನಿನ್ನನ್ನು ಸೃಷ್ಟಿಸಿದಾತನೂ ರೂಪಿಸಿದಾತನೂ ಆದ ಕರ್ತನು ಇಂತೆನ್ನುತ್ತಾನೆ--ಹೆದರಬೇಡ, ನಾನು ನಿನ್ನನ್ನು ವಿಮೋಚಿಸಿದೆನಲ್ಲಾ ನಿನ್ನ ಹೆಸರು ಹಿಡಿದು ಕರೆದೆನಲ್ಲಾ; ನೀನು ನನ್ನವನೇ.
- 2ನೀನು ಜಲರಾಶಿಯನ್ನು ದಾಟಿ ಹೋಗುವಾಗ ನಾನು ನಿನ್ನೊಂದಿಗಿರುವೆನು; ನದಿಗಳನ್ನು ನೀನು ದಾಟುವಾಗ ಅವು ನಿನ್ನನ್ನು ಮುಳುಗಿಸುವದಿಲ್ಲ; ಬೆಂಕಿಯಲ್ಲಿ ನೀನು ನಡೆಯುವಾಗ ಸುಡಲ್ಪಡುವದಿಲ್ಲ; ಇಲ್ಲವೆ ಜ್ವಾಲೆಯು ನಿನ್ನನ್ನು ದಹಿಸದು.
- 3ನಾನೇ ನಿನ್ನ ಕರ್ತನೂ ದೇವರೂ ಇಸ್ರಾಯೇಲಿನ ಪರಿಶುದ್ಧನೂ ರಕ್ಷಕನೂ ಆಗಿದ್ದೇನೆ. ಐಗುಪ್ತವನ್ನು ನಿನ್ನ ವಿಮೋಚನೆಗೂ ಇಥಿಯೋಪ್ಯ ಮತ್ತು ಸೆಬಾ ಸೀಮೆಗಳನ್ನು ನಿನಗೊಸ್ಕರ ಕೊಟ್ಟಿದ್ದೇನೆ.
- 4ನೀನು ನನ್ನ ದೃಷ್ಟಿಯಲ್ಲಿ ಅಮೂಲ್ಯನೂ ಮಾನ್ಯನೂ ಪ್ರಿಯನೂ ಆಗಿರುವದರಿಂದ ನಾನು ನಿನಗೋಸ್ಕರ ಮನುಷ್ಯರನ್ನೂ ನಿನ್ನ ಪ್ರಾಣಕ್ಕೆ (ಪ್ರತಿಯಾಗಿ) ಜನಾಂಗಗಳನ್ನೂ ಕೊಡುವೆನು.
- 5ಭಯಪಡಬೇಡ; ನಾನೇ ನಿನ್ನೊಂದಿಗೆ ಇದ್ದೇನೆ; ನಿನ್ನ ಸಂತತಿಯವರನ್ನು ಮೂಡಣದಿಂದ ತರುವೆನು; ಪಶ್ಚಿಮದಿಂದ ನಿನ್ನನ್ನು ಕೂಡಿಸುವೆನು.
Cross references
- Isaiah 60:16 ಯೆಶಾಯ 60:16ಅನ್ಯಜನಾಂಗಗಳ ಹಾಲನ್ನು ಹೀರಿಕೊಳ್ಳುವಿ; ಅರಸರ ಮೊಲೆಯನ್ನು ಸಹ ಹೀರಿಕೊಳ್ಳುವಿ; ಆಗ ಕರ್ತನಾದ ನಾನೇ ನಿನ್ನ ರಕ್ಷಕನೂ ನಿನ್ನ ವಿಮೋ ಚಕನೂ ಯಾಕೋಬನ ಪರಾಕ್ರಮಿಯೂ ಎಂದು ತಿಳುಕೊಳ್ಳುವಿ.
- Isaiah 45:15 ಯೆಶಾಯ 45:15ಓ ಇಸ್ರಾಯೇಲ್ಯರ ದೇವರೇ, ರಕ್ಷಕನೇ, ನಿಶ್ಚಯವಾ ಗಿಯೂ ನೀನು ಮರೆಮಾಡಿಕೊಳ್ಳುವ ದೇವರಾಗಿದ್ದೀ.
- Isaiah 49:26 ಯೆಶಾಯ 49:26ನಿನ್ನ ಹಿಂಸಕರಿಗೆ ಅವರ ಮಾಂಸವನ್ನೇ ಅವರಿಗೆ ತಿನ್ನಿಸುವೆನು ಮತ್ತು ಸಿಹಿಯಾದ ದ್ರಾಕ್ಷಾರಸವನ್ನು ಕುಡಿಯುವಂತೆ ಅವರು ತಮ್ಮ ಸ್ವಂತ ರಕ್ತವನ್ನೇ ಕುಡಿಯುವರು. ಆಗ ಕರ್ತನಾದ ನಾನೇ ನಿನ್ನ ರಕ್ಷಕನೂ ನಿನ್ನ ವಿಮೋಚಕನೂ ಯಾಕೋಬ್ಯರ ಶೂರನೂ ಎಂದು ನರಜನ್ಮದವರೆ ಲ್ಲರಿಗೂ ಗೊತ್ತಾಗುವದು.
- 2 Chronicles 14:9–14 2 ಪೂರ್ವಕಾಲವೃತ್ತಾಂತ 14:9–14ಆದರೆ ಕೂಷಿಯನಾದ ಜೆರಹನು ಅವರಿಗೆ ವಿರೋ ಧವಾಗಿ ಹೊರಟು ಮಾರೇಷದ ಮಟ್ಟಿಗೂ ಬಂದನು. ಅವನ ಸಂಗಡ ಹತ್ತು ಲಕ್ಷ ಜನ ರಾಣುವೆಯೂ ಮುನ್ನೂರು ರಥಗಳೂ ಇದ್ದವು. ಆಸನು ಅವನಿ ಗೆದುರಾಗಿ ಹೊರಟುಹೋದನು. ಮಾರೇಷದ ಬಳಿ ಯಲ್ಲಿ ಚೆಫಾತಾ ತಗ್ಗಿನಲ್ಲಿ ವ್ಯೂಹ ಕಟ್ಟಿದರು. ಆಗ ಆಸನು ತನ್ನ ದೇವರಾದ ಕರ್ತನನ್ನು ಕರೆದು--ಕರ್ತನೇ, ಅನೇಕರ ಮಧ್ಯದಲ್ಲಿ ಬಲಹೀನರಿಗೆ ಸಹಾಯಕೊಡು ವವನು ನಮ್ಮ ದೇವರಾದ ಕರ್ತನೇ, ನಮಗೆ ಸಹಾಯ ಕೊಡು; ಯಾಕಂದರೆ ನಾವು ನಿನ್ನ ಮೇಲೆ ಆತುಕೊಂಡಿ ದ್ದೇವೆ; ನಿನ್ನ ಹೆಸರಿನಲ್ಲಿ ನಾವು ಈ ಗುಂಪಿನ ಮೇಲೆ ಹೋಗುತ್ತೇವೆ; ಓ ಕರ್ತನೇ, ನಿನ್ನ ಹೊರತು ಬೇರೆ ಯಾರೂ ಇಲ್ಲ, ನೀನೇ ನಮ್ಮ ದೇವರು; ಮನುಷ್ಯನು ನಿನ್ನೆದುರಿನಲ್ಲಿ ಬಲಗೊಳ್ಳದಿರಲಿ ಅಂದನು. ಆಗ ಕರ್ತನು ಕೂಷಿಯರನ್ನು ಆಸನ ಮುಂದೆಯೂ ಯೆಹೂ ದದವರ ಮುಂದೆಯೂ ಹೊಡೆದನು. ಆದದರಿಂದ ಕೂಷಿಯರು ಓಡಿಹೋದರು. ಆಗ ಆಸನೂ ಅವನ ಸಂಗಡ ಇದ್ದ ಜನರೂ ಅವರನ್ನು ಗೆರಾರಿನ ವರೆಗೂ ಹಿಂದಟ್ಟಿದರು. ಕೂಷಿಯರು ತಮಗೆ ತ್ರಾಣವಿಲ್ಲದ ಹಾಗೆ ಸೋತುಹೋದರು. ಅವರು ಕರ್ತನ ಮುಂದೆಯೂ ಆತನ ಸೈನ್ಯದ ಮುಂದೆಯೂ ನಾಶ ವಾದರು. ಯೆಹೂದದವರು ಬಹು ಕೊಳ್ಳೆಯನ್ನು ಒಯ್ದರು. ಅವರು ಗೆರಾರಿನ ಸುತ್ತಲಿರುವ ಸಮಸ್ತ ಪಟ್ಟಣಗಳನ್ನು ಹೊಡೆದರು. ಕರ್ತನ ಭಯವು ಅವರ ಮೇಲೆ ಬಂತು. ಆ ಪಟ್ಟಣಗಳಲ್ಲಿ ಬಹು ಕೊಳ್ಳೆ ಇದ್ದದ್ದರಿಂದ ಇವುಗಳನ್ನೆಲ್ಲಾ ಕೊಳ್ಳೆಮಾಡಿದರು.ಪಶುಗಳಿದ್ದ ಡೇರೆಗಳನ್ನು ಹೊಡೆದು ಕುರಿಗಳನ್ನೂ ಒಂಟೆಗಳನ್ನೂ ಬಹಳವಾಗಿ ತೆಗೆದುಕೊಂಡು ಯೆರೂ ಸಲೇಮಿಗೆ ತಿರುಗಿದರು.
- Exodus 20:2 ವಿಮೋಚನಕಾಂಡ 20:2ನಿನ್ನನ್ನು ಐಗುಪ್ತದೇಶದಿಂದಲೂ ದಾಸತ್ವದ ಮನೆಯೊಳ ಗಿಂದಲೂ ಹೊರಗೆ ತಂದ ನಿನ್ನ ದೇವರಾದ ಕರ್ತನು ನಾನೇ.
- Proverbs 21:18 ಜ್ಞಾನೋಕ್ತಿಗಳು 21:18ನೀತಿ ವಂತರಿಗಾಗಿ ದುಷ್ಟರೂ ಯಥಾರ್ಥವಂತರಿಗಾಗಿ ದೋಷಕರೂ ಈಡಾಗುವರು.
- Isaiah 45:21 ಯೆಶಾಯ 45:21ನೀವು ಹೇಳಿರಿ ಮತ್ತು ಅವರನ್ನು ಸವಿಾಪಕ್ಕೆ ತನ್ನಿರಿ; ಹೌದು, ಒಟ್ಟಿಗೆ ಅವರು ಆಲೋಚಿಸಲಿ; ಈ ಸಂಗತಿಗಳನ್ನು ಪುರಾತನ ಕಾಲದಿಂದಲೂ ಪ್ರಕಟಿಸಿದವರು ಯಾರು? ಆ ಕಾಲ ದಿಂದ ತಿಳಿಸಿದವನು ಯಾರು? ಕರ್ತನಾದ ನಾನೇ ಅಲ್ಲವೇ? ನನ್ನ ಹೊರತು ಬೇರೆ ದೇವರು ಇಲ್ಲವೇ ಇಲ್ಲ, ನನ್ನ ಹೊರತಾಗಿ ನೀತಿಯುಳ್ಳ ದೇವರೂ ರಕ್ಷಕನೂ ಇಲ್ಲವೇ ಇಲ್ಲ.
- Titus 3:4–6 ತೀತನಿಗೆ 3:4–6ಆದರೆ ನಮ್ಮ ರಕ್ಷಕನಾದ ದೇವರ ದಯೆಯೂ ಪ್ರೀತಿಯೂ ಮನುಷ್ಯನ ಕಡೆಗೆ ಪ್ರತ್ಯಕ್ಷವಾದಾಗ ನಾವು ಮಾಡಿದ ನೀತಿಯ ಕ್ರಿಯೆ ಗಳಿಂದಲ್ಲ, ಆತನ ಕರುಣೆಯಿಂದಲೇ ಪುನರ್ಜನ್ಮದ ತೊಳೆಯುವಿಕೆಯಿಂದಲೂ ಪವಿತ್ರಾತ್ಮನು ನೂತನ ಸ್ವಭಾವವನ್ನುಂಟು ಮಾಡುವದರಿಂದಲೂ ಆತನು ನಮ್ಮನ್ನು ರಕ್ಷಿಸಿದನು. ಆತನು (ದೇವರು) ನಮ್ಮ ರಕ್ಷಕನಾದ ಯೇಸು ಕ್ರಿಸ್ತನ ಮೂಲಕ ಆತನನ್ನು (ಪವಿತ್ರಾತ್ಮನನ್ನು) ನಮ್ಮ ಮೇಲೆ ಧಾರಾಳವಾಗಿ ಸುರಿಸಿ ದ್ದಾನೆ.
- Jude 1:25 ಯೂದನು 1:25ಒಬ್ಬನೇ ಜ್ಞಾನವುಳ್ಳ ನಮ್ಮ ರಕ್ಷಕನಾದ ದೇವರಿಗೆ ಪ್ರಭಾವ ಮಹತ್ವ ಆಧಿಪತ್ಯ ಅಧಿಕಾರಗಳು ಈಗಲೂ ಯಾವಾಗಲೂ ಇರಲಿ. ಆಮೆನ್.
- Hosea 13:4 ಹೋಶೇಯ 13:4ಆದಾಗ್ಯೂ ನಾನು ಐಗುಪ್ತದಿಂದ ನಿನ್ನ ದೇವರಾಗಿರುವ ಕರ್ತನಾಗಿದ್ದೇನೆ, ನೀನು ನನ್ನ ಹೊರತು ಯಾವ ದೇವರನ್ನೂ ತಿಳಿದುಕೊಳ್ಳಬಾರದು; ಯಾಕಂದರೆ ನನ್ನ ಹೊರತು ನಿನಗೆ ಬೇರೆ ರಕ್ಷಕನು ಇಲ್ಲ.
- Proverbs 11:8 ಜ್ಞಾನೋಕ್ತಿಗಳು 11:8ನೀತಿವಂತನು ಇಕ್ಕಟ್ಟಿನಿಂದ ತಪ್ಪಿಸಿಕೊಳ್ಳುತ್ತಾನೆ; ಅವನ ಸ್ಥಳದಲ್ಲಿ ದುಷ್ಟನು ಬರುತ್ತಾನೆ.
- Isaiah 30:11 ಯೆಶಾಯ 30:11ನಿಮ್ಮ ದಾರಿಗೆ ಓರೆಯಾಗಿರಿ, ಮಾರ್ಗ ದಿಂದ ತೊಲಗಿರಿ; ಇಸ್ರಾಯೇಲ್ಯರ ಪರಿಶುದ್ಧನನ್ನು ನಮ್ಮ ಮುಂದೆ ನಿಲ್ಲದ ಹಾಗೆ ಮಾಡಿರಿ ಎಂದು ಹೇಳುತ್ತಾರೆ.