Isaiah · chapter 46 · verse 11
Isaiah 46:11 in Kannada
ಮೂಡಲಿಂದ ಒಂದು ಕ್ರೂರವಾದ ಪಕ್ಷಿಯೂ ದೂರದೇಶದಿಂದ ನನ್ನ ಆಜ್ಞೆಯನ್ನು ನಡಿ ಸುವ ಮನುಷ್ಯನೂ ಬರಲಿ ಎಂದು ಕರೆದಿದ್ದೇನೆ; ಹೌದು, ನಾನು ನುಡಿದಿದ್ದೇನೆ, ಅದನ್ನು ನಾನು ಈಡೇರಿಸುವೆನು; ನಾನು ನಿರ್ಣಯಿಸಿದ್ದೇನೆ, ಅದನ್ನು ನಾನು ಮಾಡುವೆನು.
Moodalinda ondu krooravaada pakshiyoo dooradeshadinda nanna aajnyeyannu nadi suva manushyanoo barali endu karediddene; haudu, naanu nudididdene, adannu naanu eederisuvenu; naanu nirnayisiddene, adannu naanu maaduvenu.
Isaiah 46:11 in English
- King James Version (KJV)
- Calling a ravenous bird from the east, the man that executeth my counsel from a far country: yea, I have spoken [it], I will also bring it to pass; I have purposed [it], I will also do it.
- World English Bible (WEB)
- I call a ravenous bird from the east, the man of my counsel from a far country. Yes, I have spoken. I will also bring it to pass. I have planned. I will also do it.
- American Standard Version (ASV)
- calling a ravenous bird from the east, the man of my counsel from a far country; yea, I have spoken, I will also bring it to pass; I have purposed, I will also do it.
- Bible in Basic English (BBE)
- Sending for a bird of strong flight from the east, the man of my purpose from a far country; I have said it, and I will give effect to it; the thing designed by me will certainly be done.
- Darby Translation (DBY)
- calling a bird of prey from the east, the man of my counsel from a far country. Yea, I have spoken, I will also bring it to pass; I have purposed it, I will also do it.
- Webster's Bible (WBS)
- Calling a ravenous bird from the east, the man that executeth my counsel from a far country: yes, I have spoken [it] , I will also bring it to pass; I have purposed [it] , I will also perform it.
- Young's Literal Translation (YLT)
- Calling from the east a ravenous bird, From a far land the man of My counsel, Yea, I have spoken, yea, I bring it in, I have formed [it], yea, I do it.
Read in context
- 9ಪುರಾತನದ ಹಳೇ ಸಂಗತಿಗಳನ್ನು ಜ್ಞಾಪಿಸಿಕೊಳ್ಳಿರಿ; ನಾನೇ ದೇವರು, ಮತ್ತೊಬ್ಬನಿಲ್ಲ; ನಾನೇ ದೇವರು, ನನಗೆ ಸರಿಸಮಾ ನನು ಇಲ್ಲ.
- 10ಆರಂಭದಲ್ಲಿಯೇ ಅಂತ್ಯವನ್ನೂ ಪೂರ್ವಕಾಲದಿಂದ ಇನ್ನೂ ನಡೆಯದ ಸಂಗತಿಗಳನ್ನೂ ಪ್ರಕಟಿಸಿದ್ದೇನೆ; ನನ್ನ ಆಲೋಚನೆಯು ನಿಲ್ಲುವ ದೆಂದೂ ನಾನು ಮೆಚ್ಚಿದ್ದನ್ನೆಲ್ಲಾ ಮಾಡುವೆನೆಂದೂ ಅರುಹಿದ್ದೇನೆ.
- 11ಮೂಡಲಿಂದ ಒಂದು ಕ್ರೂರವಾದ ಪಕ್ಷಿಯೂ ದೂರದೇಶದಿಂದ ನನ್ನ ಆಜ್ಞೆಯನ್ನು ನಡಿ ಸುವ ಮನುಷ್ಯನೂ ಬರಲಿ ಎಂದು ಕರೆದಿದ್ದೇನೆ; ಹೌದು, ನಾನು ನುಡಿದಿದ್ದೇನೆ, ಅದನ್ನು ನಾನು ಈಡೇರಿಸುವೆನು; ನಾನು ನಿರ್ಣಯಿಸಿದ್ದೇನೆ, ಅದನ್ನು ನಾನು ಮಾಡುವೆನು.
- 12ಕಠಿಣ ಹೃದಯವುಳ್ಳವರೇ, ನೀತಿಗೆ ದೂರವಾದವರೇ, ನನಗೆ ಕಿವಿಗೊಡಿರಿ;ನನ್ನ ನೀತಿಯನ್ನು ಹತ್ತಿರಕ್ಕೆ ಬರಮಾಡುವೆನು, ಅದು ಇನ್ನು ದೂರವಾಗಿರದು. ನನ್ನ ರಕ್ಷಣೆಯು ಇನ್ನು ತಡವಾ ಗದು; ನನ್ನ ಮಹಿಮೆಯಾಗಿರುವ ಇಸ್ರಾಯೇಲಿ ಗೋಸ್ಕರ ಚೀಯೋನಿನಲ್ಲಿ ರಕ್ಷಣೆಯನ್ನು ಉಂಟು ಮಾಡುವೆನು.
- 13ನನ್ನ ನೀತಿಯನ್ನು ಹತ್ತಿರಕ್ಕೆ ಬರಮಾಡುವೆನು, ಅದು ಇನ್ನು ದೂರವಾಗಿರದು. ನನ್ನ ರಕ್ಷಣೆಯು ಇನ್ನು ತಡವಾ ಗದು; ನನ್ನ ಮಹಿಮೆಯಾಗಿರುವ ಇಸ್ರಾಯೇಲಿ ಗೋಸ್ಕರ ಚೀಯೋನಿನಲ್ಲಿ ರಕ್ಷಣೆಯನ್ನು ಉಂಟು ಮಾಡುವೆನು.
Cross references
- Numbers 23:19 ಅರಣ್ಯಕಾಂಡ 23:19ಸುಳ್ಳಾಡುವ ಹಾಗೆ ದೇವರು ಮನುಷ್ಯನಲ್ಲ, ಪಶ್ಚಾತ್ತಾಪಪಡುವ ಹಾಗೆ ನರಪುತ್ರನಲ್ಲ; ಆತನು ನುಡಿದದ್ದನ್ನು ಮಾಡದಿರುವನೇ? ಮಾತನಾಡಿದ್ದನ್ನು ಆತನು ಸ್ಥಾಪಿಸನೇ?
- Isaiah 14:24–27 ಯೆಶಾಯ 14:24–27ಸೈನ್ಯಗಳ ಕರ್ತನು ಆಣೆಯಿಟ್ಟು ಹೇಳುವದೇನ ಂದರೆ--ನಾನು ನೆನಸಿದ ಪ್ರಕಾರವೇ ನೆರವೇರುವದು; ನಾನು ಉದ್ದೇಶಿಸಿದ್ದೇ ನಿಲ್ಲುವದು. ಏನಂದರೆ ಅಶ್ಶೂ ರ್ಯರನ್ನು ನನ್ನ ದೇಶದಲ್ಲಿ ಮುರಿದುಬಿಡುತ್ತೇನೆ. ನನ್ನ ಪರ್ವತಗಳ ಮೇಲೆ ಅವನನ್ನು ತುಳಿದುಬಿಡುತ್ತೇನೆ; ಅವನ ನೊಗವು ಅವರ ಮೇಲಿನಿಂದ ತೊಲಗಿ ಅವ ನ ಭಾರವು ಅವನ ಭುಜದ ಮೇಲಿನಿಂದ ತೊಲಗು ವದು. ಇದೇ ಸಮಸ್ತ ಭೂಮಿಯ ವಿಷಯ ಆಲೋ ಚಿಸಿದ ಉದ್ದೇಶ. ಇದೇ ಜನಾಂಗಗಳ ಮೇಲೆಲ್ಲಾ ಚಾಚಿದ ನನ್ನ ಕೈ. ಸೈನ್ಯಗಳ ಕರ್ತನುಉದ್ದೇಶಿಸಿ ದ್ದಾನೆ; ಅದನ್ನು ಯಾರು ವ್ಯರ್ಥಪಡಿಸುವರು. ಆತನ ಕೈಚಾಚಿದೆ, ಹಿಂದಕ್ಕೆ ತಳ್ಳುವವರು ಯಾರು ಎಂಬದೇ.
- Job 23:13 ಯೋಬನು 23:13ಆದರೆ ಆತನು ಒಂದೇ ಮನಸ್ಸುಳ್ಳವನು, ಆತ ನನ್ನು ತಿರುಗಿಸುವವನ್ಯಾರು? ತನ್ನ ಪ್ರಾಣವು ಅಪೇ ಕ್ಷಿಸುವ ಪ್ರಕಾರವೇ ಮಾಡುತ್ತಾನೆ.
- Isaiah 41:2 ಯೆಶಾಯ 41:2ಮೂಡಣದಿಂದ ನೀತಿವಂತ ನನ್ನು ಎಬ್ಬಿಸಿ, ಅವನನ್ನು ತನ್ನ ಪಾದಸನ್ನಿಧಿಗೆ ಕರೆದು ಜನಾಂಗಗಳನ್ನು ಅವನ ಮುಂದೆ ಕೊಟ್ಟುಬಿಟ್ಟು ಅವ ನನ್ನು ರಾಜರ ಮೇಲೆ ಆಳುವದಕ್ಕೆ ಮಾಡಿದವನು ಯಾರು? ಅವನ ಕತ್ತಿಗೆ ದೂಳನ್ನಾಗಿಯೂ ಅವನ ಬಿಲ್ಲಿಗೆ ಹಾರಿ ಹೋಗುವ ಹೊಟ್ಟಿನಂತೆಯೂ ಅವ ರನ್ನು ಕೊಟ್ಟನು.
- Ephesians 1:11 ಎಫೆಸದವರಿಗೆ 1:11ಆತನ ಸ್ವಚಿತ್ತದ ಆಲೋಚನೆಗನುಸಾರವಾಗಿ ಎಲ್ಲಾ ಕಾರ್ಯ ಗಳನ್ನು ಸಾಧಿಸುವ ಆತನ ಉದ್ದೇಶದ ಮೇರೆಗೆ ಮೊದಲೇ ನೇಮಿಸಲ್ಪಟ್ಟವರಾದ ನಾವು ಆತನಲ್ಲಿ ಬಾಧ್ಯತೆಯನ್ನು ಸಹ ಹೊಂದಿದೆವು.
- Acts 5:39 ಅಪೊಸ್ತಲರ ಕೃತ್ಯಗಳು 5:39ಅದು ದೇವರಿಂದಾಗಿದ್ದರೆ ನೀವು ಅದನ್ನು ಗೆಲ್ಲಲಾರಿರಿ; ಒಂದು ವೇಳೆ ನೀವು ದೇವರಿಗೆ ವಿರುದ್ಧ ವಾಗಿ ಹೋರಾಡುವವರಾಗಿ ಕಾಣಿಸಿಕೊಂಡೀರಿ ಎಂದು ಹೇಳಿದನು.
- Psalm 119:24 ಕೀರ್ತನೆಗಳು 119:24ನಿನ್ನ ಸಾಕ್ಷಿಗಳೇ ನನ್ನ ಆನಂದವೂ ಆಲೋಚನಾ ಕರ್ತರೂ ಆಗಿವೆ.
- Isaiah 48:14–15 ಯೆಶಾಯ 48:14–15ನೀವೆಲ್ಲರೂ ಕೂಡಿಕೊಂಡು ಕೇಳಿರಿ. ಅವುಗಳ ಮಧ್ಯದಲ್ಲಿ ಈ ಸಂಗತಿಗಳನ್ನು ಪ್ರಕಟಿಸಿದವರು ಯಾರು? ಕರ್ತನು ಅವನನ್ನು ಪ್ರೀತಿಮಾಡಿದ್ದಾನೆ. ಆತನು ಬಾಬೆಲಿನಲ್ಲಿ ಅವನ ಇಷ್ಟವನ್ನು ನೆರವೇರಿಸುವನು; ಆತನ ಹಸ್ತವು ಕಸ್ದೀಯರ ಮೇಲಿರುವದು. ನಾನೇ ನಾನಾಗಿಯೇ ಮಾತಾಡಿದ್ದೇನೆ; ಹೌದು, ನಾನು ಅವನನ್ನು ಕರೆದು ಬರಮಾಡಿದ್ದೇನೆ; ಅವನು ಅವನ ಮಾರ್ಗವನ್ನು ಏಳಿಗೆ ಪಡಿಸುವನು.
- Ezra 1:2 ಎಜ್ರನು 1:2ಪಾರಸಿಯ ಅರಸನಾದ ಕೋರೆಷನು ಹೀಗೆ ಹೇಳುತ್ತಾನೆ--ಪರಲೋಕದ ದೇವರಾಗಿರುವ ಕರ್ತನು ಭೂಮಿಯ ರಾಜ್ಯಗಳನ್ನೆಲ್ಲಾ ನನಗೆ ಕೊಟ್ಟಿದ್ದಾನೆ; ಆತನು ಯೆಹೂದ ದಲ್ಲಿರುವ ಯೆರೂಸಲೇಮಿನಲ್ಲಿ ತನಗೆ ಮನೆಯನ್ನು ಕಟ್ಟಿಸಲು ನನಗೆ ಆಜ್ಞಾಪಿಸಿದ್ದಾನೆ.
- Isaiah 38:15 ಯೆಶಾಯ 38:15ನಾನು ಏನು ಹೇಳಲಿ; ಆತನು ನನಗೆ ಮಾತುಕೊಟ್ಟು ತಾನೇ ಅದನ್ನು ನೆರವೇರಿಸಿ ದ್ದಾನೆ. ನನ್ನ ಆತ್ಮಕ್ಕೆ ಸಂಭವಿಸಿದ ದುಃಖದಲ್ಲಿ ನನ್ನ ವರುಷಗಳಲ್ಲೆಲ್ಲಾ ಮೆಲ್ಲಗೆ ನಡೆಯುವೆನು.
- Isaiah 13:2–4 ಯೆಶಾಯ 13:2–4ಅವರು(ಶತ್ರುಗಳು) ಬಂದು ಘನವಂತ ದ್ವಾರಗಳೊಳಗೆ ಹೋಗುವಂತೆ ಎತ್ತರವಾದ ಪರ್ವತದ ಮೇಲೆ ನೀವು ಧ್ವಜವನ್ನೆತ್ತಿ ಅವರಿಗೆ ನಿಮ್ಮ ಶಬ್ದವನ್ನು ಕೇಳಿಸುವಂತೆ ಜೋರಾಗಿ ಕೂಗಿ ಕರೆಯಿರಿ. ನಾನು ನನ್ನ ಪರಿಶುದ್ಧರಿಗೆ ಆಜ್ಞಾಪಿಸಿ ನನ್ನ ಮಹಿಮೆಯಲ್ಲಿ ಉಲ್ಲಾಸಿಸುವವರನ್ನೂ ಶೂರರನ್ನೂ ನನ್ನ ಕೋಪಕ್ಕೆ ಕರೆದಿದ್ದೇನೆ. ಬಹು ಸಮೂಹವು ಇದ್ದಂತೆ ಗದ್ದಲವು ಬೆಟ್ಟಗಳಲ್ಲಿ ಕೇಳಿಬರುತ್ತದೆ; ಒಟ್ಟಿಗೆ ಕೂಡಿಕೊಂಡ ರಾಜ್ಯ ಜನಾಂಗ ಗಳ ಆರ್ಭಟ; ಸೈನ್ಯಗಳ ಕರ್ತನು ಯುದ್ಧಕ್ಕೆ ಸೈನ್ಯವನ್ನು ಸಿದ್ಧಮಾಡುತ್ತಾನೆ.
- Isaiah 45:13 ಯೆಶಾಯ 45:13ನಾನೇ ಅವನನ್ನು ನೀತಿಯಲ್ಲಿ ಎಬ್ಬಿಸಿ ದ್ದೇನೆ; ಅವನ ಎಲ್ಲಾ ಮಾರ್ಗಗಳನ್ನು ಸರಾಗ ಮಾಡು ತ್ತೇನೆ; ಅವನು ನನ್ನ ಪಟ್ಟಣವನ್ನು ಕಟ್ಟಿ ಕ್ರಯವ ನ್ನಾಗಲೀ ಬಹುಮಾನವನ್ನಾಗಲೀ ಕೇಳಿಕೊಳ್ಳದೆ ನನ್ನ ಸೆರೆಯವರನ್ನು ಕಳುಹಿಸಿಬಿಡುವನು ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ.