Isaiah · chapter 13 · verse 2
Isaiah 13:2 in Kannada
ಅವರು(ಶತ್ರುಗಳು) ಬಂದು ಘನವಂತ ದ್ವಾರಗಳೊಳಗೆ ಹೋಗುವಂತೆ ಎತ್ತರವಾದ ಪರ್ವತದ ಮೇಲೆ ನೀವು ಧ್ವಜವನ್ನೆತ್ತಿ ಅವರಿಗೆ ನಿಮ್ಮ ಶಬ್ದವನ್ನು ಕೇಳಿಸುವಂತೆ ಜೋರಾಗಿ ಕೂಗಿ ಕರೆಯಿರಿ.
Avaru(shatrugalu) bandu ghanavanta dvaaragalolage hoguvante ettaravaada parvatada mele neevu dhvajavannetti avarige nimma shabdavannu kelisuvante joraagi koogi kareyiri.
Isaiah 13:2 in English
- King James Version (KJV)
- Lift ye up a banner upon the high mountain, exalt the voice unto them, shake the hand, that they may go into the gates of the nobles.
- World English Bible (WEB)
- Set up a banner on the bare mountain! Lift up your voice to them! Wave your hand, that they may go into the gates of the nobles.
- American Standard Version (ASV)
- Set ye up an ensign upon the bare mountain, lift up the voice unto them, wave the hand, that they may go into the gates of the nobles.
- Bible in Basic English (BBE)
- Put up a flag on a clear mountain-top, make a loud outcry to them, give directions with the hand, so that they may go into the doors of the great ones.
- Darby Translation (DBY)
- Lift up a banner upon a bare mountain, raise the voice unto them, shake the hand, that they may enter the gates of the nobles.
- Webster's Bible (WBS)
- Lift ye up a banner upon the high mountain, exalt the voice to them, shake the hand, that they may go into the gates of the nobles.
- Young's Literal Translation (YLT)
- 'On a high mountain lift ye up an ensign, Raise the voice to them, wave the hand, And they go in to the openings of nobles.
Read in context
- 1ಆಮೋಚನ ಮಗನಾದ ಯೆಶಾಯನಿಗೆ ಬಾಬೆಲಿನ ವಿಷಯವಾಗಿ ಕಂಡುಬಂದ ದೈವೋಕ್ತಿ.
- 2ಅವರು(ಶತ್ರುಗಳು) ಬಂದು ಘನವಂತ ದ್ವಾರಗಳೊಳಗೆ ಹೋಗುವಂತೆ ಎತ್ತರವಾದ ಪರ್ವತದ ಮೇಲೆ ನೀವು ಧ್ವಜವನ್ನೆತ್ತಿ ಅವರಿಗೆ ನಿಮ್ಮ ಶಬ್ದವನ್ನು ಕೇಳಿಸುವಂತೆ ಜೋರಾಗಿ ಕೂಗಿ ಕರೆಯಿರಿ.
- 3ನಾನು ನನ್ನ ಪರಿಶುದ್ಧರಿಗೆ ಆಜ್ಞಾಪಿಸಿ ನನ್ನ ಮಹಿಮೆಯಲ್ಲಿ ಉಲ್ಲಾಸಿಸುವವರನ್ನೂ ಶೂರರನ್ನೂ ನನ್ನ ಕೋಪಕ್ಕೆ ಕರೆದಿದ್ದೇನೆ.
- 4ಬಹು ಸಮೂಹವು ಇದ್ದಂತೆ ಗದ್ದಲವು ಬೆಟ್ಟಗಳಲ್ಲಿ ಕೇಳಿಬರುತ್ತದೆ; ಒಟ್ಟಿಗೆ ಕೂಡಿಕೊಂಡ ರಾಜ್ಯ ಜನಾಂಗ ಗಳ ಆರ್ಭಟ; ಸೈನ್ಯಗಳ ಕರ್ತನು ಯುದ್ಧಕ್ಕೆ ಸೈನ್ಯವನ್ನು ಸಿದ್ಧಮಾಡುತ್ತಾನೆ.
Cross references
- Jeremiah 51:58 ಯೆರೆಮೀಯ 51:58ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಬಾಬೆಲಿನ ಅಗಲವಾದ ಗೋಡೆಗಳು ಸಂಪೂರ್ಣವಾಗಿ ಕೆಡವಲ್ಪ ಡುವವು; ಅವಳ ಎತ್ತರವಾದ ಬಾಗಲುಗಳು ಬೆಂಕಿ ಯಿಂದ ಸುಡಲ್ಪಡುವವು; ಜನರು ವ್ಯರ್ಥಕ್ಕಾಗಿಯೂ ಪ್ರಜೆಗಳು ಬೆಂಕಿಗಾಗಿಯೂ ಕಷ್ಟಪಟ್ಟು ಆಯಾಸ ಪಡುವರು.
- Isaiah 5:26 ಯೆಶಾಯ 5:26ಆತನು ದೂರದ ಜನಾಂಗದವರಿಗೆ ಗುರುತಿಗಾಗಿ ಧ್ವಜವನ್ನೆತ್ತಿ, ಭೂಮಿಯ ಅಂಚಿನಿಂದ ಅವರಿಗೆ ಸಿಳ್ಳುಹಾಕುವನು. ಇಗೋ, ಅವರು ತ್ವರೆಯಾಗಿ ಫಕ್ಕನೆ ಬರುವರು;
- Jeremiah 50:2 ಯೆರೆಮೀಯ 50:2ಜನಾಂಗಗಳಿಗೆ ತಿಳಿಸಿರಿ, ಸಾರಿರಿ; ಧ್ವಜವನ್ನೆತ್ತಿರಿ; ಸಾರಿರಿ, ಮರೆಮಾಡಬೇಡಿರಿ, ಬಾಬೆಲು ಹಿಡಿಯ ಲ್ಪಟ್ಟಳು, ಬೇಲ್ನಿಗೆ ನಾಚಿಕೆಯಾಯಿತು, ಮೆರೋದಾ ಕನು ತುಂಡು ತುಂಡಾಗಿ ಮುರಿದು ಹೋದನು, ಅವಳ ವಿಗ್ರಹಗಳಿಗೆ ನಾಚಿಕೆಯಾಯಿತು. ಅವಳ ವಿಗ್ರಹಗಳು ಮುರಿದು ಹೋದವೆಂದು ಹೇಳಿರಿ;
- Jeremiah 51:25 ಯೆರೆಮೀಯ 51:25ನಾಶಮಾಡುವ ಬೆಟ್ಟವೇ! ಭೂಮಿಯನ್ನೆಲ್ಲಾ ನಾಶಮಾಡುವಂಥಾದ್ದೇ! ಇಗೋ, ನಾನು ನಿನಗೆ ವಿರೋಧವಾಗಿದ್ದೇನೆಂದು ಕರ್ತನು ಅನ್ನುತ್ತಾನೆ. ನಿನ್ನ ಮೇಲೆ ನನ್ನ ಕೈಯನ್ನು ಚಾಚಿ ಬಂಡೆಗಳ ಮೇಲಿನಿಂದ ನಿನ್ನನ್ನು ಹೊರಳಿಸಿ ನಿನ್ನನ್ನು ಸುಟ್ಟ ಬೆಟ್ಟವಾಗಿ ಮಾಡುತ್ತೇನೆ.
- Isaiah 45:1–3 ಯೆಶಾಯ 45:1–3ಕರ್ತನು ತನ್ನ ಅಭಿಷಿಕ್ತನಾದ ಕೋರೆಷನಿಗೆ, ಯಾವನ ಕೈಯನ್ನು ಹಿಡಿದು, ಯಾವನ ಮುಂದೆ ಜನಾಂಗಗಳನ್ನು ಕೆಡವಿಬಿಟ್ಟು, ಅರಸುಗಳ ನಡುವುಗಳನ್ನು ಬಿಚ್ಚಿ ಯಾವನ ಮುಂದೆ ಎರಡು ಕದಗಳುಳ್ಳ ಬಾಗಿಲುಗಳನ್ನು ತೆರೆಯುತ್ತೇನೋ, ಯಾವನ ಮುಂದೆ ದ್ವಾರಗಳು ಮುಚ್ಚಲ್ಪಡುವವೋ ಅವನಿಗೆ ಹೇಳುವದೇನಂದರೆ-- ನಾನು ನಿನ್ನ ಮುಂದೆ ಹೋಗಿ ಡೊಂಕಾದ ಸ್ಥಳಗಳನ್ನು ಸಮಮಾಡಿ, ಹಿತ್ತಾ ಳೆಯ ಕದಗಳನ್ನು ಒಡೆದು ಕಬ್ಬಿಣದ ಅಗುಳಿಗಳನ್ನು ಮುರಿದು ಬಿಡುವೆನು. ನಿನ್ನನ್ನು ಹೆಸರು ಹಿಡಿದು ಕರೆಯುವ ಕರ್ತನು ನಾನೇ, ಇಸ್ರಾಯೇಲಿನ ದೇವರು ಎಂದು ನೀನು ತಿಳಿದುಕೊಳ್ಳುವ ಹಾಗೆ ಕತ್ತಲಲ್ಲಿ ಬಚ್ಚಿಟ್ಟಿರುವ ಬಂಡಾರವನ್ನೂ ಗುಪ್ತ ಸ್ಥಳಗಳಲ್ಲಿ ಮರೆ ಮಾಡಿದ ನಿಧಿ ನಿಕ್ಷೇಪಗಳನ್ನೂ ನಿನಗೆ ಕೊಡುವೆನು.
- Isaiah 10:32 ಯೆಶಾಯ 10:32ಆ ದಿನ ದಲ್ಲಿ ಅವನು ನೋಬಿನಲ್ಲಿ ಇಳುಕೊಂಡವನಂತೆ ಇದ್ದಾಗ್ಯೂ ಚೀಯೋನ್ ಕುಮಾರ್ತೆಯ ಪರ್ವತಕ್ಕೂ ಯೆರೂಸಲೇಮಿನ ಗುಡ್ಡಕ್ಕೂ ವಿರೋಧವಾಗಿ ತನ್ನ ಕೈಯನ್ನು ಅಲ್ಲಾಡಿಸುವನು.
- Isaiah 18:3 ಯೆಶಾಯ 18:3ಭೂಲೋಕದ ನಿವಾಸಿಗಳೆಲ್ಲರೇ! ಭೂಮಿಯಲ್ಲಿ ವಾಸ ವಾಗಿರುವವರೆಲ್ಲರೇ! ಬೆಟ್ಟಗಳಲ್ಲಿ ಆತನು ಧ್ವಜವನ್ನು ಎತ್ತುವಾಗ ನೋಡಿರಿ; ಅವನು ತುತೂರಿಯನ್ನೂದು ವಾಗ ಕೇಳಿರಿ.
- Isaiah 11:15 ಯೆಶಾಯ 11:15ಕರ್ತನು ಐಗುಪ್ತ ಸಮುದ್ರದ ನಾಲಿಗೆಯನ್ನು ಸಂಪೂರ್ಣವಾಗಿ ನಾಶಮಾಡುವನು; ಆತನು ತನ್ನ ಬಲವಾದ ಗಾಳಿಯಿಂದ ನದಿಯ ಮೇಲೆ ಕೈಯನ್ನು ಜಾಡಿಸಿ ಅದನ್ನು ಏಳು ಹೊಳೆಗಳಾಗಿ ಹೊಡೆದು ಮನುಷ್ಯರ ಕೆರಗಳು ನೆನೆಯದಂತೆ ದಾಟಿಸು ವನು.ಇದಲ್ಲದೆ ಇಸ್ರಾಯೇಲ್ಯರು ಐಗುಪ್ತದೇಶ ದಿಂದ ಹೊರಟುಬಂದ ಕಾಲದಲ್ಲಿ ಅವರಿಗೆ ಹೇಗೆ ಮಾರ್ಗವು ಇತ್ತೋ ಹಾಗೆಯೇ ಅಶ್ಶೂರದಿಂದ ತಪ್ಪಿಸಿ ಕೊಂಡು ಬರುವ ತನ್ನ ಉಳಿದ ಜನರಿಗೆ ವಿಶಾಲ ವಾದ ಮಾರ್ಗವು ಇರುವದು.
- Isaiah 11:12 ಯೆಶಾಯ 11:12ಜನಾಂಗ ಗಳಿಗೆ ಗುರುತಾಗಿ ಇಟ್ಟ ಇಸ್ರಾಯೇಲಿನಿಂದ ತಳ್ಳಿಬಿಟ್ಟವ ರನ್ನು ಕೂಡಿಸುವನು ಮತ್ತು ಯೆಹೂದದಿಂದ ಚದರಿದ ವರನ್ನು ಭೂಮಿಯ ನಾಲ್ಕು ಮೂಲೆಗಳಿಂದ ಒಟ್ಟುಗೂಡಿಸುವನು.
- Jeremiah 51:27–28 ಯೆರೆಮೀಯ 51:27–28ದೇಶದಲ್ಲಿ ಧ್ವಜವನ್ನೆತ್ತಿರಿ; ಜನಾಂಗಗಳಲ್ಲಿ ತುತೂರಿಯನ್ನೂದಿರಿ; ಅದಕ್ಕೆ ವಿರೋಧವಾಗಿ ಜನಾಂಗಗಳನ್ನು ಸಿದ್ಧಮಾಡಿರಿ; ಅರರಾಟ್, ಮಿನ್ನಿ, ಅಷ್ಕೆನಜ್ ರಾಜ್ಯಗಳನ್ನು ಅದಕ್ಕೆ ವಿರೋಧವಾಗಿ ಕರೆಯಿರಿ; ಅದಕ್ಕೆ ವಿರೋಧವಾಗಿ ಸೈನ್ಯಾಧಿಪತಿಯನ್ನು ನೇಮಿಸಿರಿ; ಬಿರುಸಾದ ಮಿಡತೆ ದಂಡಿನಂತೆ ಕುದುರೆ ಗಳನ್ನು ಬರಮಾಡಿರಿ. ಅದಕ್ಕೆ ವಿರೋಧವಾಗಿ ಜನಾಂಗಗಳನ್ನೂ ಮೇದ್ಯರ ಅರಸರನ್ನೂ ಅದರ ಅಧಿಪತಿಗಳನ್ನೂ ಅಧಿಕಾರಿಗಳೆಲ್ಲರನ್ನೂ ಅವನ ರಾಜ್ಯದ ದೇಶವನ್ನೆಲ್ಲಾ ಸಿದ್ಧಮಾಡಿರಿ.