Isaiah · chapter 47 · verse 15
Isaiah 47:15 in Kannada
ನೀನು ಪ್ರಯಾಸ ಪಟ್ಟವುಗಳೆಲ್ಲಾ ನಿನಗೆ ಹೀಗಾಗುವವು; ನಿನ್ನ ಯೌವನ ಪ್ರಾಯದಿಂದ ನಿನ್ನ ವರ್ತಕರು ಚದುರಿ ತಮ್ಮ ತಮ್ಮ ಪ್ರಾಂತ್ಯಕ್ಕೆ ಹೋಗಿ ಬಿಡುವರು; ನಿನ್ನನ್ನು ರಕ್ಷಿಸಲು ಒಬ್ಬನೂ ಇರನು.
Neenu prayaasa pattavugalellaa ninage heegaaguvavu; ninna yauvana praayadinda ninna vartakaru chaduri tamma tamma praantyakke hogi biduvaru; ninnannu rakshisalu obbanoo iranu.
Isaiah 47:15 in English
- King James Version (KJV)
- Thus shall they be unto thee with whom thou hast laboured, [even] thy merchants, from thy youth: they shall wander every one to his quarter; none shall save thee.
- World English Bible (WEB)
- The things that you labored in will be like this: those who have trafficked with you from your youth will each wander in his own way. There will be no one to save you.
- American Standard Version (ASV)
- Thus shall the things be unto thee wherein thou hast labored: they that have trafficked with thee from thy youth shall wander every one to his quarter; there shall be none to save thee.
- Bible in Basic English (BBE)
- Small profit have you had from those who, from your earliest days, got great profit out of you; they have gone in flight, every one straight before him, and you have no saviour.
- Darby Translation (DBY)
- Thus shall they be unto thee with whom thou hast laboured, they that trafficked with thee from thy youth: they shall wander every one to his own quarter; there is none to save thee.
- Webster's Bible (WBS)
- Thus shall they be to thee with whom thou hast labored, [even] thy merchants, from thy youth: they shall wander every one to his quarter; none shall save thee.
- Young's Literal Translation (YLT)
- So have they been to thee with whom thou hast laboured, Thy merchants from thy youth, Each to his passage they have wandered, Thy saviour is not!
Read in context
- 13ನೀನು ನಿನ್ನ ಬಹಳವಾದ ಆಲೋಚನೆಗಳಿಂದ ಆಯಾಸಗೊಂಡಿದ್ದೀ. ಖಗೋಲಜ್ಞರು, ಜೋಯಿಸರು, ಪಂಚಾಂಗದವರು ಇವರೆ ಲ್ಲರೂ ನಿಂತುಕೊಂಡು ನಿನಗೆ ಬರುವ ವಿಪತ್ತುಗಳಿಂದ ನಿನ್ನನ್ನು ರಕ್ಷಿಸಲಿ.
- 14ಇಗೋ, ಅವರೆಲ್ಲಾ ಕೂಳೆ ಯಂತಿರುವರು, ಬೆಂಕಿಯು ಅವರನ್ನು ಸುಟ್ಟುಬಿಡು ವದು, ಜ್ವಾಲೆಯ ಶಕ್ತಿಯಿಂದ ತಮ್ಮನ್ನು ರಕ್ಷಿಸಿಕೊಳ್ಳ ಲಾರರು; ಇಲ್ಲವೆ ಕಾಯಿಸಿಕೊಳ್ಳುವದಕ್ಕೆ ಕೆಂಡವಿರು ವದಿಲ್ಲ, ಹತ್ತಿರ ಕೂತುಕೊಳ್ಳಲು ಬೆಂಕಿ ಇಲ್ಲ.ನೀನು ಪ್ರಯಾಸ ಪಟ್ಟವುಗಳೆಲ್ಲಾ ನಿನಗೆ ಹೀಗಾಗುವವು; ನಿನ್ನ ಯೌವನ ಪ್ರಾಯದಿಂದ ನಿನ್ನ ವರ್ತಕರು ಚದುರಿ ತಮ್ಮ ತಮ್ಮ ಪ್ರಾಂತ್ಯಕ್ಕೆ ಹೋಗಿ ಬಿಡುವರು; ನಿನ್ನನ್ನು ರಕ್ಷಿಸಲು ಒಬ್ಬನೂ ಇರನು.
- 15ನೀನು ಪ್ರಯಾಸ ಪಟ್ಟವುಗಳೆಲ್ಲಾ ನಿನಗೆ ಹೀಗಾಗುವವು; ನಿನ್ನ ಯೌವನ ಪ್ರಾಯದಿಂದ ನಿನ್ನ ವರ್ತಕರು ಚದುರಿ ತಮ್ಮ ತಮ್ಮ ಪ್ರಾಂತ್ಯಕ್ಕೆ ಹೋಗಿ ಬಿಡುವರು; ನಿನ್ನನ್ನು ರಕ್ಷಿಸಲು ಒಬ್ಬನೂ ಇರನು.
Cross references
- Jeremiah 51:6–9 ಯೆರೆಮೀಯ 51:6–9ಬಾಬೆಲಿನೊಳಗಿಂದ ಓಡಿಹೋಗಿರಿ, ಒಬ್ಬೊಬ್ಬನು ತನ್ನ ತನ್ನ ಪ್ರಾಣವನ್ನು ತಪ್ಪಿಸಿಕೊಳ್ಳಲಿ; ಅದರ ಅಕ್ರಮದಲ್ಲಿ ನಾಶವಾಗ ಬೇಡಿರಿ; ಇದು ಕರ್ತನ ಪ್ರತಿದಂಡನೆಯ ಕಾಲವು; ಆತನೇ ಅದಕ್ಕೆ ಮುಯ್ಯಿಗೆಮುಯ್ಯಿ ಕೊಡುತ್ತಾನೆ. ಬಾಬೆಲ್ ಕರ್ತನ ಕೈಯಲ್ಲಿ ಭೂಮಿಗೆಲ್ಲಾ ಅಮಲೇರಿ ಸಿದ ಚಿನ್ನದ ಪಾತ್ರೆಯಾಗಿತ್ತು; ಜನಾಂಗಗಳು ಅದರ ದ್ರಾಕ್ಷಾರಸವನ್ನು ಕುಡಿದವು; ಆದದರಿಂದ ಜನಾಂಗ ಗಳು ಹುಚ್ಚರಾದರು. ಇದ್ದಕ್ಕಿದ್ದ ಹಾಗೆ ಬಾಬೆಲ್ ಬಿದ್ದು ಮುರಿಯಲ್ಪಟ್ಟಿದೆ; ಅದರ ವಿಷಯ ಗೋಳಾ ಡಿರಿ; ಅದರ ನೋವಿಗೆ ತೈಲ ತಕ್ಕೊಳ್ಳಿರಿ; ಒಂದು ವೇಳೆ ವಾಸಿಯಾದೀತು. ನಾವು ಬಾಬೆಲನ್ನು ವಾಸಿಮಾಡುವದಕ್ಕಿದ್ದೆವು. ಆದರೆ ಅದು ವಾಸಿಯಾಗಲಿಲ್ಲ; ಅದನ್ನು ಬಿಡು, ನಮ್ಮ ಸ್ವಂತ ದೇಶಗಳಿಗೆ ಹೋಗೋಣ; ಅದರ ನ್ಯಾಯ ತೀರ್ವಿಕೆಯು ಆಕಾಶಗಳಿಗೆ ಮುಟ್ಟುತ್ತದೆ; ಆಕಾಶಗಳ ವರೆಗೂ ಏಳುತ್ತದೆ.
- Revelation 18:11–19 ಪ್ರಕಟನೆ 18:11–19ಇದಲ್ಲದೆ ಭೂಲೋಕದ ವರ್ತಕರು ಅವಳ ನಿಮಿತ್ತವಾಗಿ ಅತ್ತು ಗೋಳಾಡುವರು. ಯಾಕಂದರೆ ಅವರ ಸರಕುಗಳನ್ನು ಅಂದರೆ ಚಿನ್ನ, ಬೆಳ್ಳಿ, ಅಮೂಲ್ಯವಾದ ಕಲ್ಲುಗಳು, ಮುತ್ತುಗಳು, ನಯವಾದ ನಾರುಮಡಿ, ಧೂಮ್ರವರ್ಣದ ವಸ್ತ್ರ, ರೇಶ್ಮೆ, ರಕ್ತಾಂಬರ, ಸಕಲ ವಿಧವಾದ ಅಗಿಲುಮರ, ಸಕಲ ವಿಧವಾದ ದಂತದ ಪಾತ್ರೆಗಳು, ಬಹು ಅಮೂಲ್ಯವಾದ ಮರ, ಹಿತ್ತಾಳೆ, ಸಕಲ ವಿಧವಾದ ಪಾತ್ರೆಗಳು, ಕಬ್ಬಿಣ, ಚಂದ್ರಕಾಂತ, ಲವಂಗ, ಚೆಕ್ಕೆ, ಧೂಪ, ಸುಗಂಧ ತೈಲ, ಸಾಂಬ್ರಾಣಿ, ದ್ರಾಕ್ಷಾರಸ, ಎಣ್ಣೆ, ನಯವಾದಹಿಟ್ಟು, ಗೋಧಿ, ದನಗಳು, ಕುರಿ ಗಳು, ಕುದುರೆಗಳು, ರಥಗಳು, ಗುಲಾಮರು, ಮನುಷ್ಯರ ಪ್ರಾಣಗಳು ಇವೇ ಮೊದಲಾದವುಗಳನ್ನು ಯಾರೂ ಎಂದೂ ಕೊಂಡುಕೊಳ್ಳುವರಿಲ್ಲ ಎಂದು ದುಃಖಿಸುವರು. ನಿನ್ನ ಜೀವವು ಅಪೇಕ್ಷಿಸಿದ ಹಣ್ಣು ಗಳು ನಿನ್ನನ್ನು ಬಿಟ್ಟು ಹೋದವು; ಸೊಗಸಾಗಿಯೂ ಶೋಭಾಯಮಾನವಾಗಿಯೂ ಇರುವವುಗಳೆಲ್ಲವೂ ನಿನ್ನನ್ನು ಬಿಟ್ಟು ಹೋದವು. ಅವು ಇನ್ನು ಮೇಲೆ ನಿನಗೆ ಸಿಕ್ಕುವದೇ ಇಲ್ಲ. ಅವಳಿಂದ ಐಶ್ವರ್ಯವಂತ ರಾದ ಈ ಸರಕುಗಳ ವರ್ತಕರು ಅವಳ ಯಾತನೆಗೆ ಭಯಪಟ್ಟು ದೂರದಲ್ಲಿ ನಿಂತು ಅಳುತ್ತಾ ಗೋಳಾ ಡುತ್ತಾ-- ಅಯ್ಯೋ, ಅಯ್ಯೋ, ಮಹಾನಗರಿಯೇ, ನಯವಾದ ನಾರುಮಡಿಯನ್ನೂ ಧೂಮ್ರವರ್ಣದ ವಸ್ತ್ರವನ್ನೂ ರಕ್ತಾಂಬರವನ್ನೂ ಧರಿಸಿಕೊಂಡು ಚಿನ್ನ ಅಮೂಲ್ಯವಾದ ಕಲ್ಲುಗಳು ಮುತ್ತುಗಳು ಇವುಗಳಿಂದ ಅಲಂಕರಿಸಲ್ಪಟ್ಟವಳೇ, ಅಷ್ಟು ದೊಡ್ಡ ಐಶ್ವರ್ಯವು ಒಂದೇ ಗಳಿಗೆಯಲ್ಲಿ ಇಲ್ಲದೆ ಹೋಯಿತಲ್ಲಾ ಅನ್ನುವರು. ಇದಲ್ಲದೆ ಹಡಗುಗಳ ಯಜಮಾನರೂ ಹಡಗುಗಳಲ್ಲಿ ಜೊತೆಯಾಗಿರುವವರೂ ನಾವಿಕರೂ ಸಮುದ್ರದ ಮೇಲೆ ವ್ಯಾಪಾರ ಮಾಡುವವರೆಲ್ಲರೂ ದೂರದಲ್ಲಿ ನಿಂತು ಅವಳ ದಹನದ ಹೊಗೆಯನ್ನು ನೋಡುತ್ತಾ--ಈ ಮಹಾ ಪಟ್ಟಣಕ್ಕೆ ಸಮಾನವಾದ ಪಟ್ಟಣವು ಯಾವದು ಎಂದು ಕೂಗಿ ಹೇಳಿದರು. ಆಗ ಅವರು ತಮ್ಮ ತಲೆಗಳ ಮೇಲೆ ಧೂಳನು ಹೊಯಿದುಕೊಂಡು ಕೂಗುತ್ತಾ ಅಳುತ್ತಾ, ಗೋಳಾ ಡುತ್ತಾ--ಅಯ್ಯೋ, ಅಯ್ಯೋ ಸಮುದ್ರದ ಮೇಲೆ ಹಡಗುಗಳಿದ್ದವರೆಲ್ಲರನ್ನು ತನ್ನ ಅಮೂಲ್ಯ ದ್ರವ್ಯ ಗಳಿಂದ ಐಶ್ವರ್ಯವಂತರನ್ನಾಗಿ ಮಾಡಿದ ಆ ಮಹಾ ನಗರಿಯು ಒಂದೇ ಗಳಿಗೆಯಲ್ಲಿ ಹಾಳಾದಳಲ್ಲಾ ಎಂದು
- Isaiah 56:11 ಯೆಶಾಯ 56:11ಹೌದು, ಎಂದಿಗೂ ಸಾಕೆನ್ನದ ಹೊಟ್ಟೇಬಾಕ ನಾಯಿಗಳು, ಅವರು ಗ್ರಹಿಕೆಯಿಲ್ಲದ ಕುರುಬರು; ಅವರೆಲ್ಲರು ತಮ್ಮ ತಮ್ಮ ಸ್ವಂತ ಮಾರ್ಗಕ್ಕೂ ಪ್ರತಿಯೊಬ್ಬನು ತನಗೆ ಲಾಭ ಸಿಕ್ಕುವ ಕಡೆಗೂ ತಿರುಗಿ ಕೊಳ್ಳುವನು.ಬನ್ನಿರಿ, ನಾನು ದ್ರಾಕ್ಷಾರಸವನ್ನು ತರುವೆನು; ನಮ್ಮನ್ನು ನಾವೇ ಅಮಲೇರುವ ಮದ್ಯದಿಂದ ತುಂಬಿಸಿ ಕೊಳ್ಳುವ! ನಾಳೆಯು ಈ ದಿವಸದಂತೆಯೇ ಬಹಳ ಸಮೃದ್ಧಿಯಾಗಿರುವದು.
- Ezekiel 27:12–25 ಯೆಹೆಜ್ಕೇಲನು 27:12–25ತಾರ್ಷೀಷಿನವರು ನಿನ್ನ ಕಡೆಯ ವರ್ತಕರಾಗಿ ಬೆಳ್ಳಿ, ಕಬ್ಬಿಣ, ತವರ, ಸೀಸಗಳಿಂದ ನಿನ್ನ ಸಂತೆಗಳಲ್ಲಿ ವ್ಯಾಪಾರ ಮಾಡಿದರು; ಅಪಾರವಾದ ಬಗೆಬಗೆಯ ಆಸ್ತಿಯು ನಿನಗೆ ಬೇಕಾಗಿತ್ತು. ಯಾವಾನ್, ತೂಬಲ್, ಮೇಷೆಕ್ ಇವರು ನಿನ್ನ ವರ್ತಕರಾಗಿದ್ದರು; ಮನುಷ್ಯರ ಪ್ರಾಣಗಳಿಂದಲೂ (ವ್ಯಕ್ತಿ) ಹಿತ್ತಾಳೆಯ ಪಾತ್ರೆ ಗಳಿಂದಲೂ ನಿನ್ನ ಸಂತೆಯಲ್ಲಿ ವ್ಯಾಪಾರ ನಡಿಸಿದರು. ತೋಗರ್ಮದ ಮನೆತನದವರು ಕುದುರೆಗಳಿಂ ದಲೂ ಕುದುರೆ ಸವಾರಿಗಳಿಂದಲೂ ಹೇಸರ ಕತ್ತೆ ಗಳಿಂದಲೂ ನಿನ್ನ ಸಂತೆಗಳಲ್ಲಿ ವ್ಯಾಪಾರ ನಡಿಸಿದರು. ದೇದಾನಿನವರು ನಿನ್ನ ವರ್ತಕರಾಗಿದ್ದರು; ಅನೇಕ ದ್ವೀಪಗಳು ನಿನ್ನ ಕೈಕೆಳಗೆ ವ್ಯಾಪಾರವನ್ನು ನಡೆಸಿದವು; ಅವರು ದಂತದಕೊಂಬುಗಳನ್ನೂ ಕರೀ ಮರಗಳನ್ನೂ ನಿನಗೆ ಕಾಣಿಕೆಯಾಗಿ ತರುತ್ತಿದ್ದರು. ನಿನ್ನ ಕೈಕೆಲಸದ ವಸ್ತುಗಳು ಅಪಾರವಾಗಿದ್ದದರಿಂದ ಅರಾಮಿನವರು ನಿನ್ನವರಾಗಿ ವ್ಯಾಪಾರಮಾಡಿ ಕೆಂಪರಳು, ರಕ್ತಾಂಬರ, ಕಸೂತಿಯ ವಸ್ತ್ರ, ನಾರುಬಟ್ಟೆ, ಹವಳ, ಮಾಣಿಕ್ಯ ಮೊದಲಾದ ಸರಕುಗಳನ್ನು ನಿನಗೆ ತಂದು ಸುರಿದರು. ಯೆಹೂದವೂ ಇಸ್ರಾಯೇಲ್ ದೇಶವೂ ನಿನ್ನ ಕಡೆಯ ವರ್ತಕರಾಗಿ ಮಿನ್ನೀಥಿನ ಗೋಧಿಯಿಂದಲೂ ಕಂಡಸಕ್ಕರೆ, ಜೇನು, ಎಣ್ಣೆ ಮತ್ತು ಸುಗಂಧ ತೈಲ ದಿಂದಲೂ ನಿನ್ನ ಸಂತೆಯಲ್ಲಿ ವ್ಯಾಪಾರ ನಡೆಸಿದರು. ನಿನ್ನ ಕೈಕೆಲಸದ ವಸ್ತುಗಳು ನಿನ್ನಲ್ಲಿ ಅಪಾರವಾಗಿ ದ್ದದರಿಂದಲೂ ಅಪರಿಮಿತವಾದ ಬಗೆ ಬಗೆಯ ಆಸ್ತಿಯೂ ನಿನಗೆ ಬೇಕಾಗಿದ್ದರಿಂದಲೂ ದಾನ್ ಮತ್ತು ಯಾವಾನ್ ಸಹ ಹೋಗುವಾಗ ಬರುವಾಗ ನಿನ್ನ ಸಂತೆಗಳಲ್ಲಿ ವ್ಯಾಪಾರ ನಡೆಸಿದರು. ಮೆರಗುವ ಕಬ್ಬಿಣ ದಾಲ್ಚಿನ್ನಿ, ಬಜೆ ಇವುಗಳು ನಿನ್ನ ಸಂತೆಯಲ್ಲಿ ಇದ್ದವು. ದೇದಾನು ರಥಗಳ ಸವಾರಿಗಳಿಗೆ ತಕ್ಕ ಒಳ್ಳೆಯ ಬಟ್ಟೆಗಳಿಂದ ನಿನ್ನ ಸಂಗಡ ವ್ಯಾಪಾರ ಮಾಡುತ್ತಿತ್ತು. ಅರಬಿಯ ಮತ್ತು ಕೇದಾರಿನ ಎಲ್ಲಾ ಪ್ರಧಾನಿಗಳು ನಿನ್ನ ಕೈಕೆಲಸದ ವ್ಯಾಪಾರಿಗಳಾಗಿದ್ದರು; ಕುರಿಮರಿಗಳಿಂದಲೂ ಟಗರುಗಳಿಂದಲೂ ಹೋತಗ ಳಿಂದಲೂ ನಿನ್ನೊಡನೆ ವ್ಯಾಪಾರ ಮಾಡಿದರು. ಶೆಬ ದವರು, ರಗ್ಮದವರು ನಿನ್ನ ಕಡೆಯ ವರ್ತಕರಾಗಿ ಶ್ರೇಷ್ಟವಾದ ಎಲ್ಲಾ ಸುಗಂಧ ದ್ರವ್ಯದಿಂದಲೂ ಬೆಲೆ ಯುಳ್ಳ ಎಲ್ಲಾ ರತ್ನಗಳಿಂದಲೂ ಚಿನ್ನದಿಂದಲೂ ನಿನ್ನ ಸಂತೆಗಳಲ್ಲಿ ವ್ಯಾಪಾರ ನಡೆಸಿದರು. ಹಾರಾನ್, ಕನ್ನೆ, ಏದೆನ್, ಶೆಬ, ಅಶ್ಶೂರ್ ಮತ್ತು ಕಿಲ್ಮದ್ವರು ನಿನ್ನ ವ್ಯಾಪಾರಿಗಳಾಗಿದ್ದರು. ಇವರು ಎಲ್ಲಾ ತರಹದ ಸಾಮಾನುಗಳಲ್ಲೂ ನಿನ್ನ ವ್ಯಾಪಾರಿಗಳಾಗಿದ್ದರು. ಅಂದರೆ ನೀಲಿಬಟ್ಟೆಗಳು, ಕಸೂತಿಯ ಕೆಲಸ ದೇವ ದಾರುವಿನಿಂದ ಮಾಡಿ ಹಗ್ಗಗಳಿಂದ ಕಟ್ಟಿದಂತ, ರೇಷ್ಮೆ ತುಂಬಿಸಿದ ಪೆಟ್ಟಿಗೆಗಳನ್ನು ತಂದು ನಿನ್ನ ಪಟ್ಟಣಗಳಲ್ಲಿ ವರ್ತಕರಾಗಿದ್ದರು. ತಾರ್ಷೀಷಿನ ಹಡಗುಗಳು ನಿನ್ನ ಮಾರುಕಟ್ಟೆಯಲ್ಲಿ ಸರಕುಗಳನ್ನು ತರುತ್ತಿದ್ದವು; ಹೀಗೆ ನೀನು ತುಂಬಿದ್ದೀ ಮತ್ತು ಸಮುದ್ರಗಳ ಮಧ್ಯದಲ್ಲಿ ಬಹಳ ಘನವುಳ್ಳವಳಾದಿ.