Isaiah · chapter 47 · verse 13
Isaiah 47:13 in Kannada
ನೀನು ನಿನ್ನ ಬಹಳವಾದ ಆಲೋಚನೆಗಳಿಂದ ಆಯಾಸಗೊಂಡಿದ್ದೀ. ಖಗೋಲಜ್ಞರು, ಜೋಯಿಸರು, ಪಂಚಾಂಗದವರು ಇವರೆ ಲ್ಲರೂ ನಿಂತುಕೊಂಡು ನಿನಗೆ ಬರುವ ವಿಪತ್ತುಗಳಿಂದ ನಿನ್ನನ್ನು ರಕ್ಷಿಸಲಿ.
Neenu ninna bahalavaada aalochanegalinda aayaasagondiddee. Khagolajnyaru, joyisaru, panchaangadavaru ivare llaroo nintukondu ninage baruva vipattugalinda ninnannu rakshisali.
Isaiah 47:13 in English
- King James Version (KJV)
- Thou art wearied in the multitude of thy counsels. Let now the astrologers, the stargazers, the monthly prognosticators, stand up, and save thee from [these things] that shall come upon thee.
- World English Bible (WEB)
- You are wearied in the multitude of your counsels. Now let the astrologers, the stargazers, and the monthly prognosticators stand up and save you from the things that will happen to you.
- American Standard Version (ASV)
- Thou art wearied in the multitude of thy counsels: let now the astrologers, the star-gazers, the monthly prognosticators, stand up, and save thee from the things that shall come upon thee.
- Bible in Basic English (BBE)
- But your mind is troubled by the number of your guides: let them now come forward for your salvation: the measurers of the heavens, the watchers of the stars, and those who are able to say from month to month what things are coming on you.
- Darby Translation (DBY)
- Thou art wearied in the multitude of thy counsels. Let now the interpreters of the heavens, the observers of the stars, who predict according to the new moons what shall come upon thee, stand up, and save thee.
- Webster's Bible (WBS)
- Thou art wearied in the multitude of thy counsels. Let now the astrologers, the star-gazers, the monthly prognosticators, stand up, and save thee from [these things] that shall come upon thee.
- Young's Literal Translation (YLT)
- Thou hast been wearied in the multitude of thy counsels, Stand up, I pray thee, and save thee, Let the charmers of the heavens, Those looking on the stars, Those teaching concerning the months, From those things that come on thee!
Read in context
- 11ಆದದರಿಂದ ನೀನು ಮಂತ್ರಿಸಿ ನಿವಾರಿಸ ಲಾರದ ಕೇಡು ನಿನ್ನ ಮೇಲೆ ಬರುವದು. ನೀನು ಪರಿಹರಿಸಲಾಗದ ವಿಪತ್ತು ನಿನ್ನ ಮೇಲೆ ಬೀಳುವದು; ನಿನಗೆ ತಿಳಿಯದ ನಾಶನವು ಪಕ್ಕನೆ ನಿನ್ನ ಮೇಲೆ ಬರುವದು.
- 12ನಿನ್ನ ಮಾಟಗಳ ಸಂಗಡ ನಿಂತುಕೋ ನಿನ್ನ ಯೌವನದಾರಭ್ಯ ಬೇಸತ್ತು ಅಭ್ಯಾಸಿಸಿರುವ ನಿನ್ನ ಮಂತ್ರತಂತ್ರಗಳನ್ನೂ ನಿನ್ನ ಮಾಟಗಳನ್ನೂ ಲೆಕ್ಕವಿಲ್ಲದೆ ಪ್ರಯೋಗಿಸು; ಇದರಿಂದ ಒಂದು ವೇಳೆ ನಿನಗೆ ಲಾಭವಾದೀತು. ಒಂದು ವೇಳೆ ನೀನು ಎದು ರಾಗಿ ನಿಲ್ಲಬಹುದು.
- 13ನೀನು ನಿನ್ನ ಬಹಳವಾದ ಆಲೋಚನೆಗಳಿಂದ ಆಯಾಸಗೊಂಡಿದ್ದೀ. ಖಗೋಲಜ್ಞರು, ಜೋಯಿಸರು, ಪಂಚಾಂಗದವರು ಇವರೆ ಲ್ಲರೂ ನಿಂತುಕೊಂಡು ನಿನಗೆ ಬರುವ ವಿಪತ್ತುಗಳಿಂದ ನಿನ್ನನ್ನು ರಕ್ಷಿಸಲಿ.
- 14ಇಗೋ, ಅವರೆಲ್ಲಾ ಕೂಳೆ ಯಂತಿರುವರು, ಬೆಂಕಿಯು ಅವರನ್ನು ಸುಟ್ಟುಬಿಡು ವದು, ಜ್ವಾಲೆಯ ಶಕ್ತಿಯಿಂದ ತಮ್ಮನ್ನು ರಕ್ಷಿಸಿಕೊಳ್ಳ ಲಾರರು; ಇಲ್ಲವೆ ಕಾಯಿಸಿಕೊಳ್ಳುವದಕ್ಕೆ ಕೆಂಡವಿರು ವದಿಲ್ಲ, ಹತ್ತಿರ ಕೂತುಕೊಳ್ಳಲು ಬೆಂಕಿ ಇಲ್ಲ.ನೀನು ಪ್ರಯಾಸ ಪಟ್ಟವುಗಳೆಲ್ಲಾ ನಿನಗೆ ಹೀಗಾಗುವವು; ನಿನ್ನ ಯೌವನ ಪ್ರಾಯದಿಂದ ನಿನ್ನ ವರ್ತಕರು ಚದುರಿ ತಮ್ಮ ತಮ್ಮ ಪ್ರಾಂತ್ಯಕ್ಕೆ ಹೋಗಿ ಬಿಡುವರು; ನಿನ್ನನ್ನು ರಕ್ಷಿಸಲು ಒಬ್ಬನೂ ಇರನು.
- 15ನೀನು ಪ್ರಯಾಸ ಪಟ್ಟವುಗಳೆಲ್ಲಾ ನಿನಗೆ ಹೀಗಾಗುವವು; ನಿನ್ನ ಯೌವನ ಪ್ರಾಯದಿಂದ ನಿನ್ನ ವರ್ತಕರು ಚದುರಿ ತಮ್ಮ ತಮ್ಮ ಪ್ರಾಂತ್ಯಕ್ಕೆ ಹೋಗಿ ಬಿಡುವರು; ನಿನ್ನನ್ನು ರಕ್ಷಿಸಲು ಒಬ್ಬನೂ ಇರನು.
Cross references
- Isaiah 44:25 ಯೆಶಾಯ 44:25ಸುಳ್ಳುಗಾರರ ಗುರುತುಗಳನ್ನು ನಿರರ್ಥಕಮಾಡುವವನೂ ಕಣಿ ಹೇಳು ವವರನ್ನು ಹುಚ್ಚರನ್ನಾಗಿ ಮಾಡುವವನೂ ಜ್ಞಾನಿಗಳನ್ನು ಹಿಂದಕ್ಕೆ ತಳ್ಳಿ ಅವರ ತಿಳುವಳಿಕೆಯನ್ನು ಬುದ್ದಿಹೀನ ವಾಗ ಮಾಡುವವನೂ
- Isaiah 57:10 ಯೆಶಾಯ 57:10ನಿನ್ನ ಮಾರ್ಗದಲ್ಲಿ ಬಹಳವಾಗಿ ದಣಿದಿದ್ದರೂ ನಿರೀಕ್ಷೆಯೇ ಇಲ್ಲ ಎಂದು ಅಂದುಕೊಳ್ಳಲಿಲ್ಲ. ನಿನ್ನ ಕೈಯಲ್ಲಿರುವ ಜೀವವನ್ನು ಕಂಡುಕೊಂಡಿದ್ದೀ, ಆದದರಿಂದ ನೀನು ದುಃಖಿಸಲಿಲ್ಲ.
- Ezekiel 24:12 ಯೆಹೆಜ್ಕೇಲನು 24:12ಅದರ ಕಲ್ಮಶವು ಆಯಾಸವನ್ನುಂಟು ಮಾಡಿತೇ ಹೊರತು ಅದಕ್ಕೆ ಹತ್ತಿದ್ದ ಆ ಬಹಳವಾದ ಕಿಲುಬು ಹೋಗಲಿಲ್ಲ, ಅದು ಬೆಂಕಿಯಲ್ಲಿರಲಿ;
- Daniel 2:2–10 ದಾನಿಯೇಲನು 2:2–10ಆಗ ಅರಸನಿಗೆ ತನ್ನ ಕನಸುಗಳನ್ನು ತಿಳಿಸುವ ಹಾಗೆ ಅರಸನು ಮಂತ್ರಗಾರರನ್ನೂ ಜೋತಿಷ್ಯರನ್ನೂ ಮಾಟ ಗಾರರನ್ನೂ ಕಸ್ದೀಯರನ್ನೂ ಕರೆಯಲು ಆಜ್ಞಾಪಿಸಿ ದನು; ಇವರೆಲ್ಲರೂ ಬಂದು ಅರಸನ ಮುಂದೆ ನಿಂತರು. ಆಗ ಅರಸನು ಅವರಿಗೆ--ನಾನು ಒಂದು ಕನಸ್ಸು ಕಂಡಿದ್ದೇನೆ; ಆ ಕನಸಿನ ಅರ್ಥವನ್ನು ತಿಳಿಯುವದಕ್ಕಾಗಿ ನನ್ನ ಆತ್ಮವು ಕಳವಳಗೊಂಡಿದೆ ಅಂದನು. ಆಗ ಕಸ್ದೀಯರು ಅರಸನಿಗೆ ಅರಮಾಯ ಭಾಷೆಯಲ್ಲಿ ಹೇಳಿ ದ್ದೇನಂದರೆ--ಓ ಅರಸನೇ, ನಿರಂತರವಾಗಿ ಬಾಳು, ಕನಸನ್ನು ನಿನ್ನ ಸೇವಕರಿಗೆ ಹೇಳು; ಆಗ ನಾವು ಅದರ ಅರ್ಥಗಳನ್ನು ತಿಳಿಸುವೆವು ಅಂದರು. ಅರಸನು ಕಸ್ದೀ ಯರಿಗೆ ಪ್ರತ್ಯುತ್ತರವಾಗಿ--ಆ ಕನಸಿನ ಸಂಗತಿಯು ನನ್ನನ್ನು ಬಿಟ್ಟು ಹೋಯಿತು; ನೀವು ಕನಸನ್ನು ಅದರ ಅರ್ಥದೊಂದಿಗೆ ನನಗೆ ತಿಳಿಸದಿದ್ದರೆ ನೀವು ತುಂಡು ತುಂಡಾಗಿ ಕತ್ತರಿಸಲ್ಪಡುವಿರಿ; ನಿಮ್ಮ ಮನೆಗಳು ತಿಪ್ಪೆ ಗುಂಡಿಗಳನ್ನಾಗಿ ಮಾಡಿಸುವೆನು. ಆದರೆ ನೀವು ಕನ ಸನ್ನೂ ಅದರ ಅರ್ಥಗಳನ್ನೂ ತಿಳಿಸಿದರೆ, ದಾನಗಳನ್ನೂ ಬಹುಮಾನಗಳನ್ನೂ ಬಹಳ ಘನವನ್ನೂ ನನ್ನಿಂದ ಪಡೆಯುವಿರಿ; ಹೀಗಿರಲಾಗಿ ಕನಸನ್ನೂ ಅದರ ಅಭಿ ಪ್ರಾಯವನ್ನೂ ನನಗೆ ತಿಳಿಸಿರಿ ಎಂದು ಹೇಳಿದನು. ಅವರು ಮತ್ತೆ ಉತ್ತರವಾಗಿ--ಅರಸನು ತನ್ನ ಸೇವಕರಿಗೆ ಕನಸನ್ನು ಮೊದಲು ಹೇಳಲಿ, ಆಗ ಅದರ ಅರ್ಥವನ್ನು ನಾವು ತಿಳಿಸುವೆವು ಅಂದರು. ಆಗ ಅರಸನು ಪ್ರತ್ಯುತ್ತರವಾಗಿ--ಅದು ಗತಿಸಿದ ವಿಷಯವೆಂದು ನೀವು ತಿಳಿದಿದ್ದರಿಂದಲೇ ಕಾಲಹರಣ ಮಾಡುತ್ತಿರುವಿರೆಂದು ನಾನು ನಿಶ್ಚಯವಾಗಿ ಬಲ್ಲೆನು. ಆದರೆ ನೀವು ಕನಸ್ಸನ್ನು ನನಗೆ ತಿಳಿಸದೆ ಹೋದರೆ ನಿಮಗೆ ಒಂದೇ ನಿರ್ಣಯ ಉಂಟು; ಕಾಲ ಬದಲಾಗುವ ವರೆಗೂ ನೀವು ನನ್ನ ಮುಂದೆ ಕೆಟ್ಟ ಸುಳ್ಳು ಮಾತುಗಳನ್ನು ಮಾತನಾಡಲು ಸಿದ್ಧಮಾಡಿಕೊಂಡಿರುವಿರಿ; ಆದದರಿಂದ ಕನಸನ್ನು ನನಗೆ ತಿಳಿಸಿ, ಅದರ ಅರ್ಥವನ್ನೂ ನನಗೆ ತಿಳಿಸಬಲ್ಲಿ ರೆಂದು ನಾನು ತಿಳಿದುಕೊಂಡಿರುತ್ತೇನೆ ಎಂದು ಹೇಳಿ ದನು. ಆಗ ಕಸ್ದೀಯರು ಅರಸನಿಗೆ ಉತ್ತರವಾಗಿ--ಅರಸನ ಸಂಗತಿಯನ್ನು ತಿಳಿಸಬಲ್ಲ ವ್ಯಕ್ತಿ ಭೂಲೋಕ ದಲ್ಲಿಲ್ಲ; ಆದದರಿಂದ ಯಾವ ಅರಸನಾದರೂ ಯಾವ ಪ್ರಭುವಾದರೂ ಯಾವ ಯಜಮಾನನಾದರೂ ಯಾವೊಬ್ಬ ಮಂತ್ರಗಾರನಲ್ಲೂ ಜೋತಿಷ್ಯನಲ್ಲೂ ಕಸ್ದೀಯನಲ್ಲೂ ಇಂಥ ಸಂಗತಿಗಳನ್ನು ಕೇಳಲಿಲ್ಲ.
- Jeremiah 51:58 ಯೆರೆಮೀಯ 51:58ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಬಾಬೆಲಿನ ಅಗಲವಾದ ಗೋಡೆಗಳು ಸಂಪೂರ್ಣವಾಗಿ ಕೆಡವಲ್ಪ ಡುವವು; ಅವಳ ಎತ್ತರವಾದ ಬಾಗಲುಗಳು ಬೆಂಕಿ ಯಿಂದ ಸುಡಲ್ಪಡುವವು; ಜನರು ವ್ಯರ್ಥಕ್ಕಾಗಿಯೂ ಪ್ರಜೆಗಳು ಬೆಂಕಿಗಾಗಿಯೂ ಕಷ್ಟಪಟ್ಟು ಆಯಾಸ ಪಡುವರು.
- Isaiah 47:15 ಯೆಶಾಯ 47:15ನೀನು ಪ್ರಯಾಸ ಪಟ್ಟವುಗಳೆಲ್ಲಾ ನಿನಗೆ ಹೀಗಾಗುವವು; ನಿನ್ನ ಯೌವನ ಪ್ರಾಯದಿಂದ ನಿನ್ನ ವರ್ತಕರು ಚದುರಿ ತಮ್ಮ ತಮ್ಮ ಪ್ರಾಂತ್ಯಕ್ಕೆ ಹೋಗಿ ಬಿಡುವರು; ನಿನ್ನನ್ನು ರಕ್ಷಿಸಲು ಒಬ್ಬನೂ ಇರನು.
- Daniel 5:30 ದಾನಿಯೇಲನು 5:30ಅದೇ ರಾತ್ರಿಯಲ್ಲಿ ಕಸ್ದೀಯರ ಅರಸನಾದ ಬೇಲ್ಯಚ್ಚರನು ಕೊಲ್ಲಲ್ಪಟ್ಟನು.ಮೇದ್ಯಯನಾದ ದಾರ್ಯಾವೆಷನು ಅರವತ್ತೆರಡು ವರುಷದವನಾಗಿ ರಾಜ್ಯವನ್ನು ವಶಪಡಿಸಿಕೊಂಡನು.
- Daniel 5:7–8 ದಾನಿಯೇಲನು 5:7–8ಆಗ ಅರಸನು ಗಟ್ಟಿಯಾಗಿ ಕಿರುಚಿ ಜ್ಯೋತಿಷ್ಯರನ್ನೂ ಕಸ್ದೀಯರನ್ನೂ ಶಕುನರನ್ನೂ ಕರೆಸಿ ಬಾಬೆಲಿನ ಜ್ಞಾನಿ ಗಳಿಗೆ ಹೇಳಿದ್ದೇನಂದರೆ--ಯಾವನೂ ಈ ಬರಹವನ್ನು ಓದಿ ಅದರ ಅರ್ಥವನ್ನು ನನಗೆ ತಿಳಿಸುವನೋ ಅವರಿಗೆ ಧೂಮ್ರವಸ್ತ್ರವನ್ನು ಹೊದಿಸಿ ಅವನ ಕೊರಳಿಗೆ ಚಿನ್ನದ ಹಾರವನ್ನು ಹಾಕಿ ರಾಜ್ಯದ ಮೂರನೆಯ ಅಧಿಕಾರಿ ಯಾಗಿ ಮಾಡುವೆನು ಅಂದನು. ಆಗ ಅರಸನ ಎಲ್ಲಾ ಜ್ಞಾನಿಗಳು ಒಳಗೆ ಬಂದರು. ಆದರೆ ಆ ಬರಹ ವನ್ನು ಓದಲೂ ಅದರ ಅರ್ಥವನ್ನು ಅರಸನಿಗೆ ತಿಳಿ ಸಲೂ ಅವರಿಗೆ ಆಗದೆಹೋಯಿತು.
- Habakkuk 2:13 ಹಬಕ್ಕೂಕ 2:13ಇಗೋ, ಇದು ಸೈನ್ಯಗಳ ಕರ್ತನಿಂದ ಅಲ್ಲವೋ? ಏನಂದರೆ, ಜನರು ಬೆಂಕಿಗೋಸ್ಕರ ಪರಿಶ್ರಮಪಟ್ಟ ವ್ಯರ್ಥಕ್ಕೋಸ್ಕರ ಆಯಾಸಪಡುವದೇ.
- Daniel 5:15–16 ದಾನಿಯೇಲನು 5:15–16ಈಗ ಈ ಬರಹವನ್ನು ಓದುವದಕ್ಕೂ ಅದರ ಅಭಿಪ್ರಾಯವನ್ನು ನನಗೆ ತಿಳಿಸು ವದಕ್ಕೂ ಜ್ಯೋತಿಷ್ಯರಾದ ಜ್ಞಾನಿಗಳು ನನ್ನ ಮುಂದೆ ತರಲ್ಪಟ್ಟಿದ್ದಾರೆ, ಆದರೆ ಇದರ ಅರ್ಥವನ್ನು ಹೇಳಲಾರದೆ ಹೋದರು. ನೀನು ಅರ್ಥಗಳನ್ನು ವಿವರಿಸುವದ ರಲ್ಲಿಯೂ ಮರ್ಮಗಳನ್ನು ಬಿಚ್ಚುವದರಲ್ಲಿಯೂ ಸಮರ್ಥನೆಂದು ನಾನು ನಿನ್ನ ವಿಷಯವಾಗಿ ಕೇಳಿದ್ದೇನೆ; ಹೀಗಾದರೆ ಆ ಬರಹವನ್ನು ಓದುವದಕ್ಕೂ ಅದರ ಅರ್ಥವನ್ನು ತಿಳಿಸುವದಕ್ಕೂ ನಿನ್ನಿಂದ ಆದರೆ ನೀನು ಧೂಮ್ರವಸ್ತ್ರ ಧರಿಸಲ್ಪಟ್ಟು ಕೊರಳಿಗೆ ಚಿನ್ನದ ಹಾರ ಹಾಕಿಸಿಕೊಂಡವನಾಗಿ ರಾಜ್ಯದ ಮೂರನೆಯ ಅಧಿಕಾರಿ ಯಾಗುವಿ ಎಂದು ಹೇಳಿದನು.