Isaiah · chapter 51 · verse 2
Isaiah 51:2 in Kannada
ನಿಮ್ಮ ತಂದೆಯಾದ ಅಬ್ರಹಾಮನನ್ನು ಮತ್ತು ನಿಮ್ಮನ್ನು ಹೆತ್ತ ಸಾರಳನ್ನು ದೃಷ್ಟಿಸಿರಿ; ನಾನು ಅವನೊಬ್ಬನನ್ನೇ ಕರೆದು ಆಶೀರ್ವ ದಿಸಿ ವೃದ್ಧಿಗೊಳಿಸಿದೆನು.
Nimma tandeyaada abrahaamanannu mattu nimmannu hetta saaralannu drushtisiri; naanu avanobbananne karedu aasheerva disi vruddhigolisidenu.
Isaiah 51:2 in English
- King James Version (KJV)
- Look unto Abraham your father, and unto Sarah [that] bare you: for I called him alone, and blessed him, and increased him.
- World English Bible (WEB)
- Look to Abraham your father, and to Sarah who bore you; for when he was but one I called him, I blessed him, and made him many.
- American Standard Version (ASV)
- Look unto Abraham your father, and unto Sarah that bare you; for when he was but one I called him, and I blessed him, and made him many.
- Bible in Basic English (BBE)
- Let your thoughts be turned to Abraham, your father, and to Sarah, who gave you birth: for when he was but one, my voice came to him, and I gave him my blessing, and made him a great people.
- Darby Translation (DBY)
- Look unto Abraham your father, and unto Sarah that bore you; for I called him when he was alone, and blessed him, and multiplied him.
- Webster's Bible (WBS)
- Look to Abraham your father, and to Sarah [that] bore you: for I called him alone, and blessed him, and increased him.
- Young's Literal Translation (YLT)
- Look attentively unto Abraham your father, And unto Sarah — she bringeth you forth, For — one — I have called him, And I bless him, and multiply him.
Read in context
- 1ನೀತಿಯನ್ನು ಹಿಂಬಾಲಿಸುವವರೇ, ಕರ್ತನನ್ನು ಹುಡುಕುವವರೇ, ನನ್ನ ಕಡೆಗೆ ಕಿವಿ ಗೊಡಿರಿ; ನೀವು ಯಾವ ಬಂಡೆಯೊಳಗಿಂದ ಕಡಿಯ ಲ್ಪಟ್ಟಿರೋ ಮತ್ತು ಯಾವ ಗುಂಡಿಯೊಳಗಿಂದ ಅಗೆಯ ಲ್ಪಟ್ಟಿರೋ ಆ ಕಡೆಗೆ ನೋಡಿರಿ.
- 2ನಿಮ್ಮ ತಂದೆಯಾದ ಅಬ್ರಹಾಮನನ್ನು ಮತ್ತು ನಿಮ್ಮನ್ನು ಹೆತ್ತ ಸಾರಳನ್ನು ದೃಷ್ಟಿಸಿರಿ; ನಾನು ಅವನೊಬ್ಬನನ್ನೇ ಕರೆದು ಆಶೀರ್ವ ದಿಸಿ ವೃದ್ಧಿಗೊಳಿಸಿದೆನು.
- 3ಕರ್ತನು ಚೀಯೋನನ್ನು ಆದರಿಸುವನು; ಆತನು ಅದರ ಹಾಳಾದ ಸ್ಥಳಗ ಳನ್ನು ಸುಧಾರಿಸುವನು; ಅದರ ಅರಣ್ಯವನ್ನು ಏದೆನ್ ಹಾಗೆಯೂ ಮರುಭೂಮಿಯನ್ನು ಕರ್ತನ ತೋಟದ ಹಾಗೆಯೂ ಮಾಡುವನು. ಅಲ್ಲಿ ಆನಂದವೂ ಉಲ್ಲಾ ಸವೂ ಉಪಕಾರ ಸ್ತುತಿಯೂ ಇಂಪಾದ ಸ್ವರವೂ ಕಂಡುಬರುವವು.
- 4ನನ್ನ ಜನರೇ, ಕೇಳಿರಿ; ನನ್ನ ಜನಾಂಗವೇ, ನನ್ನ ಕಡೆಗೆ ಕಿವಿಗೊಡಿರಿ; ನ್ಯಾಯಪ್ರಮಾಣವು ನನ್ನಿಂದ ಹೊರಡುವದು ಮತ್ತು ನನ್ನ ನ್ಯಾಯವನ್ನು ಜನರಿಗೆ ಬೆಳಕನ್ನಾಗಿ ಮಾಡುವೆನು.
Cross references
- Ezekiel 33:24 ಯೆಹೆಜ್ಕೇಲನು 33:24ಮನುಷ್ಯಪುತ್ರನೇ, ಇಸ್ರಾಯೇಲಿನ ದೇಶದ ಹಾಳು ಪ್ರದೇಶಗಳಲ್ಲಿ ವಾಸಿಸುವರು-- ಅಬ್ರಹಾಮನೇ ಒಬ್ಬನಾಗಿದ್ದು ದೇಶವನ್ನು ಸ್ವತಂತ್ರಿಸಿ ಕೊಂಡನು, ಆದರೆ ನಾವು ಬಹಳ ಜನರಾಗಿದ್ದು ದೇಶವು ನಮಗೆ ಸ್ವಾಸ್ತ್ಯವಾಗಿ ಕೊಡಲ್ಪಟ್ಟಿದೆ ಎಂದು ಹೇಳುತ್ತಾರೆ.
- Romans 4:1–5 ರೋಮಾಪುರದವರಿಗೆ 4:1–5ಹಾಗಾದರೆ ನಮ್ಮ ಮೂಲಪಿತೃವಾಗಿರುವ ಅಬ್ರಹಾಮನು ಶರೀರಸಂಬಂಧವಾಗಿ ಏನು ಪಡೆದುಕೊಂಡನೆಂದು ಹೇಳಬೇಕು? ಅಬ್ರಹಾ ಮನು ಕ್ರಿಯೆಗಳಿಂದಲೇ ನೀತಿವಂತನಾದ ಪಕ್ಷದಲ್ಲಿ ಹೊಗಳಿಕೊಳ್ಳುವದಕ್ಕೆ ಅವನಿಗೆ ಅಸ್ಪದವಿರುವದು; ಆದರೆ ದೇವರ ಮುಂದೆ ಹೊಗಳಿಕೊಳ್ಳುವದಕ್ಕೆ ಆಸ್ಪದವಿರುವದಿಲ್ಲ. ಹಾಗಾದರೆ ಬರಹವು ಹೇಳುವ ದೇನು? ಅಬ್ರಹಾಮನು ದೇವರನ್ನು ನಂಬಿದನು; ಆ ನಂಬಿಕೆಯು ಅವನ ಲೆಕ್ಕಕ್ಕೆ ನೀತಿ ಎಂದು ಎಣಿಸಲ್ಪಟ್ಟಿತು. ಕೆಲಸ ಮಾಡಿದವನಿಗೆ ಬರುವ ಸಂಬಳವು ಕೃಪೆಯಿಂದ ದೊರಕುವಂಥದ್ದೆಂದು ಎಣಿಕೆ ಯಾಗುವದಿಲ್ಲ; ಅದು ಸಲ್ಲತಕ್ಕದ್ದೇ. ಆದರೆ ಯಾವನು ಪುಣ್ಯಕ್ರಿಯೆಗಳನ್ನು ಮಾಡಿದವನಾಗಿರದೆ ಭಕ್ತಿಹೀನರನ್ನು ನೀತಿವಂತರೆಂದು ನಿರ್ಣಯಿಸುವಾತನಲ್ಲಿ ನಂಬಿಕೆ ಯಿಡುತ್ತಾನೋ ಅವನ ನಂಬಿಕೆಯೇ ನೀತಿ ಎಂದು ಎಣಿಸಲ್ಪಡುವದು.
- Galatians 3:9–14 ಗಲಾತ್ಯದವರಿಗೆ 3:9–14ಹೀಗಿರಲಾಗಿ ನಂಬುವವರು ನಂಬಿಕೆಯಿಟ್ಟ ಅಬ್ರಹಾಮನೊಂದಿಗೆ ಆಶೀರ್ವಾದವನ್ನು ಹೊಂದುತ್ತಾರೆ. ನ್ಯಾಯ ಪ್ರಮಾಣದ ಕ್ರಿಯೆಗಳನ್ನು ಆಧಾರ ಮಾಡಿಕೊಳ್ಳುವವ ರೆಲ್ಲರೂ ಶಾಪಾಧೀನರಾಗಿದ್ದಾರೆ. ಹೇಗಂದರೆ, ನ್ಯಾಯ ಪ್ರಮಾಣದ ಗ್ರಂಥದೊಳಗೆ ಬರೆದಿರುವವುಗಳನ್ನೆಲ್ಲಾ ನಿತ್ಯವೂ ಕೈಕೊಳ್ಳದಿರುವ ಪ್ರತಿಯೊಬ್ಬನು ಶಾಪಗ್ರಸ್ತ ನೆಂದು ಬರೆದದೆ. ಇದಲ್ಲದೆ ನ್ಯಾಯಪ್ರಮಾಣದಿಂದ ಯಾವನೂ ದೇವರ ಸನ್ನಿಧಿಯಲ್ಲಿ ನೀತಿವಂತ ನಾಗುವದಿಲ್ಲವೆಂಬದು ಸ್ಪಷ್ಟವಾಗಿದೆ. ಯಾಕಂದರೆ-- ನೀತಿವಂತನು ನಂಬಿಕೆಯಿಂದಲೇ ಬದುಕುವನು ಎಂಬದು. ನ್ಯಾಯಪ್ರಮಾಣಕ್ಕೆ ನಂಬಿಕೆಯು ಆಧಾರ ವಲ್ಲ. ಆದರೆ--ಅದರ ಕ್ರಿಯೆಗಳನ್ನು ಮಾಡುವವನೇ ಅವುಗಳ ಮೂಲಕ ಬದುಕುವನು ಎಂಬದೇ. ಕ್ರಿಸ್ತನು ನಮ್ಮ ನಿಮಿತ್ತ ಶಾಪವಾಗಿ ಮಾಡಲ್ಪಟ್ಟು ನ್ಯಾಯಪ್ರಮಾಣದ ಶಾಪದೊಳಗಿಂದ ನಮ್ಮನ್ನು ಬಿಡಿಸಿದನು. ಯಾಕಂದರೆ--ಮರಕ್ಕೆ ತೂಗಹಾಕಲ್ಪಟ್ಟ ಪ್ರತಿಯೊಬ್ಬನು ಶಾಪಗ್ರಸ್ತನು ಎಂದು ಬರೆದದೆಯಲ್ಲಾ. ಅಬ್ರಹಾಮನಿಗೆ ಉಂಟಾದ ಆಶೀರ್ವಾದವು ಯೇಸು ಕ್ರಿಸ್ತನ ಮೂಲಕ ಆನ್ಯಜನರಿಗೆ ಉಂಟಾಗು ವಂತೆ ದೇವರು ವಾಗ್ದಾನ ಮಾಡಿದ ಆತ್ಮನು ನಮಗೆ ನಂಬಿಕೆಯ ಮೂಲಕ ದೊರಕುವಂತಾಯಿತು.
- Hebrews 11:8–12 ಇಬ್ರಿಯರಿಗೆ 11:8–12ನಂಬಿಕೆಯಿಂದಲೇ ಅಬ್ರಹಾಮನು ಕರೆಯ ಲ್ಪಟ್ಟಾಗ ವಿಧೇಯನಾಗಿ ತಾನು ಬಾಧ್ಯವಾಗಿ ಹೊಂದ ಬೇಕಾಗಿದ್ದ ಸ್ಥಳಕ್ಕೆ ಹೊರಟುಹೋದನು; ತಾನು ಹೋಗಬೇಕಾದ ಸ್ಥಳವು ಯಾವದೆಂದು ತಿಳಿಯದೆ ಹೊರಟನು. ನಂಬಿಕೆಯಿಂದಲೇ ಅವನು ವಾಗ್ದತ್ತ ದೇಶದಲ್ಲಿ ಅನ್ಯದೇಶದಲ್ಲಿ ಇದ್ದವನಂತೆ ಗುಡಾರಗಳಲ್ಲಿ ಇದ್ದುಕೊಂಡು ಪ್ರವಾಸಿಯಾಗಿದ್ದನು. ಅದೇ ವಾಗ್ದಾನಕ್ಕೆ ಬಾಧ್ಯರಾಗಿದ್ದ ಇಸಾಕ ಯಾಕೋಬರೊಂದಿಗೆ ಗುಡಾರಗಳಲ್ಲಿ ವಾಸಿಸಿದನು. ಯಾಕಂದರೆ ದೇವರು ಯಾವದನ್ನು ಕಟ್ಟುವಾತನೂ ಮಾಡುವಾತನೂ ಆಗಿದ್ದಾನೋ ಅಸ್ತಿವಾರಗಳ್ಳುಳ್ಳ ಆ ಪಟ್ಟಣಕ್ಕೋಸ್ಕರ ಅವನು ಎದುರುನೋಡುತ್ತಿದ್ದನು. ಇದಲ್ಲದೆ ಸಾರಳು ಸಹ ವಾಗ್ದಾನ ಮಾಡಿದಾತ ನನ್ನು ನಂಬತಕ್ಕವನೆಂದು ತೀರ್ಮಾನಿಸಿ ತಾನು ಪ್ರಾಯ ವಿಾರಿದವಳಾಗಿದ್ದರೂ ನಂಬಿಕೆಯಿಂದಲೇ ಗರ್ಭವತಿ ಯಾಗುವದಕ್ಕೆ ಶಕ್ತಿಯನ್ನು ಹೊಂದಿ ಒಂದು ಮಗುವನ್ನು ಹೆತ್ತಳು. ಆದದರಿಂದ ಮೃತಪ್ರಾಯನಾಗಿದ್ದ ಒಬ್ಬ ನಿಂದ ಆಕಾಶದ ನಕ್ಷತ್ರಗಳಂತೆ ಗುಂಪುಗುಂಪಾಗಿಯೂ ಸಮುದ್ರ ತೀರದಲ್ಲಿರುವ ಉಸುಬಿನಂತೆ ಅಸಂಖ್ಯ ವಾಗಿಯೂ ಹುಟ್ಟಿದರು.
- Genesis 18:11–13 ಆದಿಕಾಂಡ 18:11–13ಇದಲ್ಲದೆ ಅಬ್ರಹಾಮನೂ ಸಾರಳೂ ದಿನ ಗತಿಸಿದವರಾಗಿ ಮುದುಕರಾಗಿದ್ದರು; ಸಾರಳಿಗೆ ಹೆಂಗಸರಿಗೆ ಆಗುವ ಕ್ರಮವು ನಿಂತುಹೋಗಿತ್ತು. ಆದದರಿಂದ ಸಾರಳು ತನ್ನೊಳಗೆ ನಕ್ಕು--ನಾನು ವೃದ್ಧಳಾಗಿದ್ದೇನೆ. ನನ್ನ ಯಜಮಾನನು ಸಹ ಮುದುಕನಾಗಿದ್ದಾನೆ. ಹೀಗಿರು ವಲ್ಲಿ ನನಗೆ ಸಂತೋಷವಾದೀತೇ? ಅಂದಳು. ಆಗ ಕರ್ತನು ಅಬ್ರಹಾಮನಿಗೆ--ನಾನು ಮುದಿಪ್ರಾಯದ ವಳಾಗಿ ಮಗುವನ್ನು ಹೆರುವದು ನಿಜವೋ ಎಂದು ಅಂದುಕೊಂಡು ಯಾಕೆ ಸಾರಳು ನಕ್ಕಳು?
- Isaiah 29:22 ಯೆಶಾಯ 29:22ಆದದರಿಂದ ಅಬ್ರಹಾಮನನ್ನು ವಿಮೋಚಿಸಿದ ಕರ್ತನು ಯಾಕೋಬನ ಮನೆತನದ ವಿಷಯವಾಗಿ ಹೇಳುವದೇನಂದರೆ--ಈಗ ಯಾಕೋಬ್ಯರು ನಾಚಿಕೆ ಪಡುವದಿಲ್ಲ ಇಲ್ಲವೆ ಅವನ ಮುಖವು ಕಳೆಗುಂದು ವದಿಲ್ಲ.
- Genesis 24:1 ಆದಿಕಾಂಡ 24:1ಅಬ್ರಹಾಮನು ಮುದುಕನೂ ದಿನಗತಿಸಿದವನೂ ಆಗಿದ್ದನು. ಕರ್ತನು ಅಬ್ರಹಾಮ ನನ್ನು ಎಲ್ಲಾದರಲ್ಲಿ ಆಶೀರ್ವದಿಸಿದನು.
- Genesis 22:17 ಆದಿಕಾಂಡ 22:17ನಿನ್ನನ್ನು ಆಶೀರ್ವದಿ ಸಿಯೇ ಆಶೀರ್ವದಿಸುವೆನು; ನಿನ್ನ ಸಂತಾನವನ್ನು ಆಕಾಶದ ನಕ್ಷತ್ರಗಳ ಹಾಗೆಯೂ ಸಮುದ್ರದ ತೀರ ದಲ್ಲಿರುವ ಮರಳಿನ ಹಾಗೆಯೂ ಹೆಚ್ಚಿಸೇ ಹೆಚ್ಚಿಸುವೆನು; ನಿನ್ನ ಸಂತಾನವು ತನ್ನ ಶತ್ರುಗಳ ದ್ವಾರವನ್ನು ವಶ ಮಾಡಿಕೊಳ್ಳುವದು.
- Genesis 12:1–3 ಆದಿಕಾಂಡ 12:1–3ಆಗ ಕರ್ತನು ಅಬ್ರಾಮನಿಗೆ--ನೀನು ನಿನ್ನ ದೇಶದೊಳಗಿಂದಲೂ ಬಂಧು ಗಳಿಂದಲೂ ನಿನ್ನ ತಂದೆಯ ಮನೆಯಿಂದಲೂ ಹೊರ ಬಂದು ನಾನು ನಿನಗೆ ತೋರಿಸುವ ದೇಶಕ್ಕೆ ಹೋಗು. ನಾನು ನಿನ್ನನ್ನು ದೊಡ್ಡ ಜನಾಂಗವಾಗ ಮಾಡಿ ನಿನ್ನನ್ನು ಆಶೀರ್ವದಿಸಿ ನಿನ್ನ ಹೆಸರನ್ನು ದೊಡ್ಡ ದಾಗಿ ಮಾಡುವೆನು, ನೀನು ಆಶೀರ್ವಾದವಾಗಿರುವಿ. ನಿನ್ನನ್ನು ಆಶೀರ್ವದಿಸುವವರನ್ನು ಆಶೀರ್ವದಿಸು ವೆನು. ನಿನ್ನನ್ನು ಶಪಿಸುವವರನ್ನು ಶಪಿಸುವೆನು; ನಿನ್ನಲ್ಲಿ ಭೂಮಿಯ ಎಲ್ಲಾ ಜನಾಂಗಗಳು ಆಶೀರ್ವದಿಸಲ್ಪಡು ವವು ಎಂದು ಹೇಳಿದನು.
- Genesis 24:35 ಆದಿಕಾಂಡ 24:35ಕರ್ತನು ನನ್ನ ಯಜಮಾನನನ್ನು ಬಹಳವಾಗಿ ಆಶೀರ್ವದಿಸಿದ್ದರಿಂದ ಅವನು ದೊಡ್ಡವನಾದನು. ಆತನು ಅವನಿಗೆ ಕುರಿದನಗಳನ್ನೂ ಬೆಳ್ಳಿಬಂಗಾರವನ್ನೂ ದಾಸದಾಸಿಯರನ್ನೂ ಒಂಟೆಗಳನ್ನೂ ಕತ್ತೆಗಳನ್ನೂ ಕೊಟ್ಟಿದ್ದಾನೆ.
- Genesis 15:1–2 ಆದಿಕಾಂಡ 15:1–2ಇವುಗಳಾದ ಮೇಲೆ ಅಬ್ರಾಮನಿಗೆ ದರ್ಶನದಲ್ಲಿ ಕರ್ತನ ವಾಕ್ಯವು ಬಂದು--ಅಬ್ರಾಮನೇ, ಭಯಪಡಬೇಡ; ನಾನೇ ನಿನ್ನ ಗುರಾಣಿಯೂ ನಿನ್ನ ಅತ್ಯಧಿಕವಾದ ಬಹುಮಾನವೂ ಆಗಿದ್ದೇನೆ. ಅದಕ್ಕೆ ಅಬ್ರಾಮನು--ಕರ್ತನಾದ ದೇವರೇ, ನನಗೆ ಏನು ಕೊಟ್ಟರೇನು? ನಾನು ಮಕ್ಕಳಿಲ್ಲದವನಾಗಿದ್ದೇನೆ. ಈ ದಮಸ್ಕದವನಾದ ಎಲೀಯೆಜರನು ನನ್ನ ಮನೆಯ ಮನೆವಾರ್ತೆಯವನಾ ಗಿದ್ದಾನಲ್ಲಾ ಅಂದನು.
- Genesis 13:14–17 ಆದಿಕಾಂಡ 13:14–17ಲೋಟನು ಅಬ್ರಾಮನಿಂದ ಅಗಲಿದ ಮೇಲೆ ಕರ್ತನು ಅವನಿಗೆ--ನಿನ್ನ ಕಣ್ಣುಗಳನ್ನು ಎತ್ತಿ ನೀನಿರುವ ಸ್ಥಳದಿಂದ ಉತ್ತರಕ್ಕೂ ದಕ್ಷಿಣಕ್ಕೂ ಪೂರ್ವಕ್ಕೂ ಪಶ್ಚಿಮಕ್ಕೂ ನೋಡು. ನೀನು ನೋಡುವ ದೇಶ ವನ್ನೆಲ್ಲಾ ನಾನು ನಿನಗೂ ನಿನ್ನ ಸಂತತಿಗೂ ಶಾಶ್ವತವಾಗಿ ಕೊಡುವೆನು. ನಿನ್ನ ಸಂತತಿಯನ್ನು ಭೂಮಿಯ ಧೂಳಿನಷ್ಟು ಮಾಡುವೆನು. ಭೂಮಿಯ ಧೂಳನ್ನು ಒಬ್ಬನು ಲೆಕ್ಕಿಸಬಹುದಾದರೆ ನಿನ್ನ ಸಂತಾನವು ಸಹ ಲೆಕ್ಕಿಸಲ್ಪಡುವದು. ಎದ್ದು ಭೂಮಿಯ ಉದ್ದಗಲದ ಪ್ರಕಾರ ಅದರಲ್ಲಿ ತಿರುಗಾಡು. ನಾನು ನಿನಗೆ ಅದನ್ನು ಕೊಡುವೆನು ಅಂದನು.ಆಗ ಅಬ್ರಾಮನು ತನ್ನ ಗುಡಾರವನ್ನು ತೆಗೆದುಕೊಂಡು ಹೆಬ್ರೋನಿನ ಲ್ಲಿರುವ ಮಮ್ರೆಯ ಮೈದಾನಕ್ಕೆ ಬಂದು ಅಲ್ಲಿ ವಾಸವಾಗಿದ್ದನು. ಅವನು ಅಲ್ಲಿ ಕರ್ತನಿಗೆ ಬಲಿ ಪೀಠವನ್ನು ಕಟ್ಟಿದನು.