Isaiah · chapter 51 · verse 1
Isaiah 51:1 in Kannada
ನೀತಿಯನ್ನು ಹಿಂಬಾಲಿಸುವವರೇ, ಕರ್ತನನ್ನು ಹುಡುಕುವವರೇ, ನನ್ನ ಕಡೆಗೆ ಕಿವಿ ಗೊಡಿರಿ; ನೀವು ಯಾವ ಬಂಡೆಯೊಳಗಿಂದ ಕಡಿಯ ಲ್ಪಟ್ಟಿರೋ ಮತ್ತು ಯಾವ ಗುಂಡಿಯೊಳಗಿಂದ ಅಗೆಯ ಲ್ಪಟ್ಟಿರೋ ಆ ಕಡೆಗೆ ನೋಡಿರಿ.
Neetiyannu himbaalisuvavare, kartanannu hudukuvavare, nanna kadege kivi godiri; neevu yaava bandeyolaginda kadiya lpattiro mattu yaava gundiyolaginda ageya lpattiro aa kadege nodiri.
Isaiah 51:1 in English
- King James Version (KJV)
- Hearken to me, ye that follow after righteousness, ye that seek the LORD: look unto the rock [whence] ye are hewn, and to the hole of the pit [whence] ye are digged.
- World English Bible (WEB)
- “Listen to me, you who follow after righteousness, you who seek the LORD. Look to the rock you were cut from, and to the quarry you were dug from.
- American Standard Version (ASV)
- Hearken to me, ye that follow after righteousness, ye that seek Jehovah: look unto the rock whence ye were hewn, and to the hole of the pit whence ye were digged.
- Bible in Basic English (BBE)
- Give ear to me, you who are searching for righteousness, who are looking for the Lord: see the rock from which you were cut out, and the hole out of which you were taken.
- Darby Translation (DBY)
- Hearken unto me, ye that follow after righteousness, ye that seek Jehovah: look unto the rock [whence] ye were hewn, and to the hole of the pit [whence] ye were digged.
- Webster's Bible (WBS)
- Hearken to me, ye that follow after righteousness, ye that seek the LORD: look to the rock [whence] ye are hewn, and to the hole of the pit [whence] ye are digged.
- Young's Literal Translation (YLT)
- Hearken unto Me, ye pursuing righteousness, Seeking Jehovah, Look attentively unto the rock — ye have been hewn, And unto the hole of the pit — ye have been digged.
Read in context
- 1ನೀತಿಯನ್ನು ಹಿಂಬಾಲಿಸುವವರೇ, ಕರ್ತನನ್ನು ಹುಡುಕುವವರೇ, ನನ್ನ ಕಡೆಗೆ ಕಿವಿ ಗೊಡಿರಿ; ನೀವು ಯಾವ ಬಂಡೆಯೊಳಗಿಂದ ಕಡಿಯ ಲ್ಪಟ್ಟಿರೋ ಮತ್ತು ಯಾವ ಗುಂಡಿಯೊಳಗಿಂದ ಅಗೆಯ ಲ್ಪಟ್ಟಿರೋ ಆ ಕಡೆಗೆ ನೋಡಿರಿ.
- 2ನಿಮ್ಮ ತಂದೆಯಾದ ಅಬ್ರಹಾಮನನ್ನು ಮತ್ತು ನಿಮ್ಮನ್ನು ಹೆತ್ತ ಸಾರಳನ್ನು ದೃಷ್ಟಿಸಿರಿ; ನಾನು ಅವನೊಬ್ಬನನ್ನೇ ಕರೆದು ಆಶೀರ್ವ ದಿಸಿ ವೃದ್ಧಿಗೊಳಿಸಿದೆನು.
- 3ಕರ್ತನು ಚೀಯೋನನ್ನು ಆದರಿಸುವನು; ಆತನು ಅದರ ಹಾಳಾದ ಸ್ಥಳಗ ಳನ್ನು ಸುಧಾರಿಸುವನು; ಅದರ ಅರಣ್ಯವನ್ನು ಏದೆನ್ ಹಾಗೆಯೂ ಮರುಭೂಮಿಯನ್ನು ಕರ್ತನ ತೋಟದ ಹಾಗೆಯೂ ಮಾಡುವನು. ಅಲ್ಲಿ ಆನಂದವೂ ಉಲ್ಲಾ ಸವೂ ಉಪಕಾರ ಸ್ತುತಿಯೂ ಇಂಪಾದ ಸ್ವರವೂ ಕಂಡುಬರುವವು.
Cross references
- Isaiah 51:7 ಯೆಶಾಯ 51:7ನೀತಿಯನ್ನು ಅರಿತು ನನ್ನ ನ್ಯಾಯಪ್ರಮಾಣವನ್ನು ಹೃದಯದಲ್ಲಿಟ್ಟು ಕೊಂಡಿರುವ ಜನರೇ, ನನಗೆ ಕಿವಿಗೊಡಿರಿ, ಮನುಷ್ಯರ ನಿಂದೆಗೆ ಭಯಪಡಬೇಡಿರಿ; ಇಲ್ಲವೆ ಅವರ ದೂಷಣೆಗೆ ಹೆದರ ಬೇಡಿರಿ.
- Psalm 94:15 ಕೀರ್ತನೆಗಳು 94:15ನ್ಯಾಯವು ನೀತಿಗೆ ತಿರುಗಿಕೊಳ್ಳುವದು; ಯಥಾರ್ಥ ಹೃದಯದವರೆಲ್ಲರು ಅದನ್ನು ಹಿಂಬಾಲಿಸುವರು.
- Hebrews 12:14 ಇಬ್ರಿಯರಿಗೆ 12:14ಎಲ್ಲರ ಸಂಗಡ ಸಮಾಧಾನದಿಂದಿರುವದನ್ನೂ ಪರಿಶುದ್ಧತೆಯನ್ನೂ ಅನುಸರಿಸಿರಿ; ಪರಿಶುದ್ಧತೆಯಿಲ್ಲದೆ ಯಾವನೂ ಕರ್ತನನ್ನು ಕಾಣುವದಿಲ್ಲ.
- Psalm 105:3–4 ಕೀರ್ತನೆಗಳು 105:3–4ಆತನ ಪರಿಶುದ್ಧ ನಾಮದಲ್ಲಿ ಹೊಗಳಿಕೊಳ್ಳಿರಿ; ಕರ್ತನನ್ನು ಹುಡುಕುವವರ ಹೃದಯವು ಸಂತೋಷಿಸಲಿ. ಕರ್ತನನ್ನೂ ಆತನ ಬಲವನ್ನೂ ಹುಡುಕಿರಿ. ಆತನ ಮುಖ ವನ್ನು ಯಾವಾಗಲೂ ಹುಡುಕಿರಿ.
- Romans 14:19 ರೋಮಾಪುರದವರಿಗೆ 14:19ಆದದರಿಂದ ನಾವು ಸಮಾಧಾನವನ್ನುಂಟು ಮಾಡುವವುಗಳನೂ ಪರಸ್ಪರ ಭಕ್ತಿವೃದ್ಧಿಯನ್ನುಂಟು ಮಾಡುವವುಗಳನ್ನೂ ಅನುಸರಿಸೋಣ.
- Romans 9:30–32 ರೋಮಾಪುರದವರಿಗೆ 9:30–32ಹಾಗಾದರೆ ನಾವು ಏನು ಹೇಳೋಣ? ನೀತಿ ಯನ್ನು ಹೊಂದುವದಕ್ಕೆ ಪ್ರಯತ್ನಮಾಡದ ಅನ್ಯ ಜನರಿಗೆ ನೀತಿಯು ಅಂದರೆ ನಂಬಿಕೆಯಿಂದುಂಟಾಗುವ ನೀತಿಯು ದೊರಕಿತು. ಆದರೆ ನ್ಯಾಯಪ್ರಮಾಣ ದಿಂದುಂಟಾದ ನೀತಿಯನ್ನು ಅನುಸರಿಸಿದ ಇಸ್ರಾಯೇ ಲ್ಯರು ನ್ಯಾಯಪ್ರಮಾಣದ ನೀತಿಯನ್ನು ಹೊಂದದೆ ಹೋಗಿದ್ದಾರೆ. ಅದಕ್ಕೆ ಕಾರಣವೇನು? ಅವರು ನಂಬಿಕೆಯನ್ನು ಆಧಾರಮಾಡಿಕೊಳ್ಳದೆ ನ್ಯಾಯ ಪ್ರಮಾಣದ ಕ್ರಿಯೆಗಳನ್ನು ಆಧಾರಮಾಡಿಕೊಂಡದ್ದೇ ಕಾರಣ.ಇಗೋ, ನಾನು ಚೀಯೋನಿನಲ್ಲಿ ಎಡವುವ ಕಲ್ಲನ್ನೂ ಮುಗ್ಗರಿಸುವ ಬಂಡೆಯನ್ನೂ ಇಡುತ್ತೇ ನೆಂತಲೂ ಅದರ ಮೇಲೆ ನಂಬಿಕೆಯಿಡುವವನು ಆಶಾ ಭಂಗಪಡುವದಿಲ್ಲವೆಂತಲೂ ಬರೆದಿರುವ ಪ್ರಕಾರ ಆ ಎಡವುವ ಕಲ್ಲಿಗೆ ಅವರು ಎಡವಿಬಿದ್ದರು ಎಂಬದೇ.
- 2 Timothy 2:22 2 ತಿಮೊಥೆಯನಿಗೆ 2:22ಯೌವನದ ಇಚ್ಚೆಗಳಿಂದ ಸಹ ಓಡಿಹೋಗು; ಶುದ್ಧ ಹೃದಯವುಳ್ಳವರಾಗಿ ಕರ್ತನನ್ನು ಬೇಡಿಕೊಳ್ಳು ವವರ ಸಂಗಡ ನೀತಿ ವಿಶ್ವಾಸ ಪ್ರೀತಿ ಸಮಾಧಾನ ಇವುಗಳನ್ನು ಅನುಸರಿಸು.
- Isaiah 48:12 ಯೆಶಾಯ 48:12ಓ ಯಾಕೋಬೇ, ನಾನು ಕರೆದ ಇಸ್ರಾಯೇಲೇ, ನನ್ನ ಕಡೆಗೆ ಕಿವಿಗೊಡು; ಆತನು--ನಾನೇ; ನಾನೇ ಮೊದಲನೆಯವನು, ನಾನೇ ಕಡೆಯವನು.
- Proverbs 21:21 ಜ್ಞಾನೋಕ್ತಿಗಳು 21:21ನೀತಿಯನ್ನೂ ಕರುಣೆಯನ್ನೂ ಹಿಂಬಾಲಿಸುವವನು; ಜೀವವನ್ನೂ ನೀತಿಯನ್ನೂ ಕೀರ್ತಿಯನ್ನೂ ಕಂಡು ಕೊಳ್ಳುತ್ತಾನೆ.
- Amos 5:6 ಆಮೋಸ 5:6ನೀವು ಕರ್ತನನ್ನು ಹುಡುಕಿ ಬದುಕಿರಿ, ಇಲ್ಲದಿದ್ದರೆ ಆತನು ಬೆಂಕಿಯಂತೆ ಯೋಸೇಫನ ಮನೆತನದಲ್ಲಿ ಪ್ರವೇಶಿಸುವನು; ಅದು ನುಂಗಿಬಿಡುವದು, ಅದನ್ನು ಆರಿಸುವವರು ಬೇತೇಲಿನಲ್ಲಿ ಯಾರೂ ಇರುವದಿಲ್ಲ.
- Ephesians 2:11–12 ಎಫೆಸದವರಿಗೆ 2:11–12ಆದಕಾರಣ ಪೂರ್ವಕಾಲದಲ್ಲಿ ಶಾರೀರಿಕವಾಗಿ ಅನ್ಯಜನರಾಗಿದ್ದು ಶರೀರದಲ್ಲಿ ಕೈಗಳಿಂದ ಮಾಡಲ್ಪಟ ಸುನ್ನತಿಯಿದ್ದವರೆಂದು ಕರೆಯಲ್ಪಟ್ಟವರಿಂದ ಸುನ್ನತಿಯಿಲ್ಲ ದವರೆಂದು ನೀವು ಕರೆಯಲ್ಪಟ್ಟಿದ್ದೀರಿ. ಇದಲ್ಲದೆ ನೀವು ಆ ಕಾಲದಲ್ಲಿ ಕ್ರಿಸ್ತನಿಲ್ಲದವರು ಇಸ್ರಾಯೇಲಿನ ಬಾಧ್ಯತೆಯಲ್ಲಿ ಹಕ್ಕಿಲ್ಲದವರೂ ಪರಕೀಯರು ವಾಗ್ದಾನಕ್ಕೆ ಸಂಬಂಧವಾದ ಒಡಂಬಡಿಕೆಗಳಿಗೆ ಅನ್ಯರೂ ನಿರೀಕ್ಷೆ ಯಿಲ್ಲದವರೂ ಈ ಲೋಕದಲ್ಲಿ ದೇವರಿಲ್ಲದವರೂ ಆಗಿದ್ದಿರೆಂದು ಜ್ಞಾಪಕಮಾಡಿಕೊಳ್ಳಿರಿ.
- Psalm 24:6 ಕೀರ್ತನೆಗಳು 24:6ಆತನನ್ನು ಹುಡುಕುವ ಸಂತತಿಯು ಇದೇ; ಓ ಯಾಕೋಬ್ಯರ ದೇವರೇ, ನಿನ್ನ ಸನ್ನಿಧಿಯನ್ನು ಹುಡುಕುವವರು ಇಂಥವರೇ. ಸೆಲಾ.