Isaiah · chapter 52 · verse 8
Isaiah 52:8 in Kannada
ನಿನ್ನ ಕಾವಲುಗಾರರು ಸ್ವರವನ್ನೆತ್ತುವರು; ಆ ಸ್ವರದೊಂದಿಗೆ ಒಟ್ಟಾಗಿ ಅವರು ಹಾಡುವರು; ಕರ್ತನು ಚೀಯೋನನ್ನು ತಿರಿಗಿ ತರು ವಾಗ ಅವರು ಕಣ್ಣಲ್ಲಿ ಕಣ್ಣು ಇಟ್ಟು ನೋಡುವರು.
Ninna kaavalugaararu svaravannettuvaru; aa svaradondige ottaagi avaru haaduvaru; kartanu cheeyonannu tirigi taru vaaga avaru kannalli kannu ittu noduvaru.
Isaiah 52:8 in English
- King James Version (KJV)
- Thy watchmen shall lift up the voice; with the voice together shall they sing: for they shall see eye to eye, when the LORD shall bring again Zion.
- World English Bible (WEB)
- Your watchmen lift up their voice. Together they sing; for they shall see eye to eye when the LORD returns to Zion.
- American Standard Version (ASV)
- The voice of thy watchmen! they lift up the voice, together do they sing; for they shall see eye to eye, when Jehovah returneth to Zion.
- Bible in Basic English (BBE)
- The voice of your watchmen! their voices are loud in song together; for they will see him, eye to eye, when the Lord comes back to Zion.
- Darby Translation (DBY)
- — The voice of thy watchmen, they lift up the voice, they sing aloud together; for they shall see eye to eye, when Jehovah shall bring again Zion.
- Webster's Bible (WBS)
- Thy watchmen shall lift up the voice; with the voice together shall they sing: for they shall see eye to eye, when the LORD shall bring again Zion.
- Young's Literal Translation (YLT)
- The voice of thy watchmen! They have lifted up the voice, together they cry aloud, Because eye to eye they see, in Jehovah's turning back [to] Zion.
Read in context
- 6ಆದದರಿಂದ ನನ್ನ ಜನರು ನನ್ನ ಹೆಸರನ್ನು ತಿಳಿದುಕೊಳ್ಳುವರು; ಹೀಗೆ ಆ ದಿನದಲ್ಲಿ ಮಾತನಾಡಿದಾತನು ನಾನೇ, ಇಗೋ, ಅದು ನಾನೇ ಎಂದು ಅವರು ಗ್ರಹಿಸುವರು.
- 7ಒಳ್ಳೆಯ ಶುಭಸಮಾಚಾರವನ್ನು ತರುವವನ, ರಕ್ಷಣೆಯನ್ನು ಪ್ರಕಟಿಸುವವನ, ಚೀಯೋನಿಗೆ ನಿನ್ನ ದೇವರು ದೊರೆತನ ಮಾಡುತ್ತಾನೆ ಎಂದು ಹೇಳಿ, ಶುಭಸಮಾಚಾರವನ್ನು ತಂದು, ಸಮಾಧಾನವನ್ನು ಪ್ರಕಟಿಸಿ ಹೇಳುವಾತನ ಪಾದಗಳು ಪರ್ವತಗಳ ಮೇಲೆ ಎಷ್ಟೋ ಅಂದವಾಗಿವೆ!
- 8ನಿನ್ನ ಕಾವಲುಗಾರರು ಸ್ವರವನ್ನೆತ್ತುವರು; ಆ ಸ್ವರದೊಂದಿಗೆ ಒಟ್ಟಾಗಿ ಅವರು ಹಾಡುವರು; ಕರ್ತನು ಚೀಯೋನನ್ನು ತಿರಿಗಿ ತರು ವಾಗ ಅವರು ಕಣ್ಣಲ್ಲಿ ಕಣ್ಣು ಇಟ್ಟು ನೋಡುವರು.
- 9ಯೆರೂಸಲೇಮಿನ ಹಾಳಾದ ಸ್ಥಳಗಳೇ, ಆನಂದ ಧ್ವನಿಗೈಯಿರಿ ಒಟ್ಟಾಗಿ ಹಾಡಿರಿ; ಯಾಕಂದರೆ ಕರ್ತನು ತನ್ನ ಪ್ರಜೆಗಳನ್ನು ಆದರಿಸಿದ್ದಾನೆ, ಆತನು ಯೆರೂಸ ಲೇಮನ್ನು ವಿಮೋಚಿಸಿದ್ದಾನೆ.
- 10ಕರ್ತನು ತನ್ನ ಪರಿ ಶುದ್ಧವಾದ ಬಾಹುವನ್ನು ಸಕಲ ಜನಾಂಗಗಳ ಕಣ್ಣು ಗಳಿಗೆ ತೋರಮಾಡಿದ್ದಾನೆ. ಭೂಮಿಯ ಅಂತ್ಯದವ ರೆಲ್ಲಾ ನಮ್ಮ ದೇವರ ರಕ್ಷಣೆಯನ್ನು ನೋಡುವರು.
Cross references
- Isaiah 62:6 ಯೆಶಾಯ 62:6ಓ ಯೆರೂಸಲೇಮೇ, ನಿನ್ನ ಗೋಡೆಗಳ ಮೇಲೆ ಕಾವಲುಗಾರರನ್ನು ನೇಮಿಸಿದ್ದೇನೆ; ಅವರು ಹಗಲಿ ನಲ್ಲೂ ರಾತ್ರಿಯಲ್ಲೂ ಮೌನವಾಗಿರುವದೇ ಇಲ್ಲ. ಕರ್ತನನ್ನು ಜ್ಞಾಪಕಪಡಿಸುವವರೇ, ಸುಮ್ಮನಿರಬೇಡಿರಿ.
- Jeremiah 32:39 ಯೆರೆಮೀಯ 32:39ಅವರಿಗೂ ಅವರ ತರುವಾಯ ಅವರ ಮಕ್ಕಳಿಗೂ ಒಳ್ಳೇದಕ್ಕಾಗಿ ಅವರು ಯಾವಾಗಲೂ ನನಗೆ ಭಯ ಪಡುವ ಹಾಗೆ ಅವರಿಗೆ ಒಂದೇ ಹೃದಯವನ್ನೂ ಒಂದೇ ಮಾರ್ಗವನ್ನೂ ಕೊಡುವೆನು.
- Ezekiel 33:7 ಯೆಹೆಜ್ಕೇಲನು 33:7ಓ ಮನುಷ್ಯಪುತ್ರನೇ, ನಿನ್ನನ್ನು ನಾನು ಇಸ್ರಾಯೇಲಿನ ಮನೆತನದವರಿಗೆ ಕಾವಲುಗಾರನನ್ನಾಗಿ ಇಟ್ಟಿದ್ದೇನೆ; ಆದದರಿಂದ ನೀನು ನನ್ನ ಬಾಯಿಯ ವಾಕ್ಯವನ್ನು ಕೇಳು, ನನ್ನಿಂದ ಅವರನ್ನು ಎಚ್ಚರಿಸು.
- Jeremiah 33:11 ಯೆರೆಮೀಯ 33:11ಇನ್ನು ಮೇಲೆ ಆನಂದದ ಸ್ವರವೂ ಸಂತೋಷದ ಸ್ವರವೂ ಮದಲಿಂಗನ ಸ್ವರವೂ ಮದಲ ಗಿತ್ತಿಯ ಸ್ವರವೂ--ಸೈನ್ಯಗಳ ಕರ್ತನನ್ನು ಕೊಂಡಾಡಿರಿ; ಕರ್ತನು ಒಳ್ಳೆಯವನೇ, ಆತನ ಕೃಪೆ ನಿರಂತರವೇ ಎಂದು ಹೇಳಿ, ಸ್ತೋತ್ರದ ಬಲಿಯನ್ನು ಕರ್ತನ ಆಲ ಯಕ್ಕೆ ತರುವವರ ಸ್ವರವೂ ಕೇಳಲ್ಪಡುವದು; ನಾನು ಮುಂಚಿನ ಹಾಗೆ ದೇಶದ ಸೆರೆಯನ್ನು ತಿರುಗಿಸುತ್ತೇ ನೆಂದು ಕರ್ತನು ಹೇಳುತ್ತಾನೆ.
- 1 Corinthians 1:10 1 ಕೊರಿಂಥದವರಿಗೆ 1:10ಸಹೋದರರೇ, ನಿಮ್ಮೆಲ್ಲರ ಮಾತು ಒಂದೇ ಆಗಿರಬೇಕು; ನಿಮ್ಮಲ್ಲಿ ಭೇದಗಳಿರಬಾರದು, ನೀವು ಒಂದೇ ಮನಸ್ಸೂ ಒಂದೇ ಅಭಿಪ್ರಾಯವೂ ಉಳ್ಳವ ರಾಗಿದ್ದು ಹೊಂದಿಕೆಯಿಂದಿರಬೇಕು ಎಂಬದಾಗಿ ನಾನು ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಿಮ್ಮನ್ನು ಬೇಡಿಕೊಳ್ಳುತ್ತೇನೆ.
- Isaiah 30:26 ಯೆಶಾಯ 30:26ಇಷ್ಟೇ ಅಲ್ಲದೆ ಕರ್ತನು ತನ್ನ ಜನರ ವ್ರಣವನ್ನು ಕಟ್ಟಿ ಅವರ ಪೆಟ್ಟಿನಗಾಯವನ್ನು ವಾಸಿಮಾಡುವ ದಿನದಲ್ಲಿ ಚಂದ್ರನ ಬೆಳಕು ಸೂರ್ಯನ ಬೆಳಕಿನ ಹಾಗೆಯೂ ಮತ್ತು ಸೂರ್ಯನ ಬೆಳಕು ಏಳರಷ್ಟು ಹೆಚ್ಚಾಗಿ ಏಳು ದಿನಗಳ ಬೆಳಕಿ ನಂತಾಗುವದು.
- Isaiah 35:10 ಯೆಶಾಯ 35:10ಕರ್ತನಿಂದ ವಿಮೋಚಿಸಲ್ಪಟ್ಟವರು ಹಿಂತಿರುಗಿಕೊಂಡು ತಮ್ಮ ತಲೆಗಳ ಮೇಲೆ ಉತ್ಸಾಹಧ್ವನಿ ನಿತ್ಯವಾದ ಸಂತೋಷಗಳೊಂದಿಗೆ ಚೀಯೋನಿಗೆ ಬರು ವರು; ಅವರು ಹರ್ಷಾನಂದಗಳನ್ನು ಅನುಭವಿಸು ವರು. ದುಃಖವೂ, ನಿಟ್ಟುಸಿರೂ ಓಡಿಹೋಗುವವು.
- 1 Corinthians 13:12 1 ಕೊರಿಂಥದವರಿಗೆ 13:12ಈಗ ನಾವು ಕನ್ನಡಿಯಲ್ಲಿ ಮೊಬ್ಬಾಗಿ ನೋಡುತ್ತೇವೆ. ತರುವಾಯ ಮುಖಾಮುಖಿ ಯಾಗಿ ನೋಡುವೆವು; ಈಗ ನಾನು ಅಪೂರ್ಣವಾಗಿ ತಿಳಿದಿದ್ದೇನೆ. ತರುವಾಯ ದೇವರು ನನ್ನನ್ನು ತಿಳಿದು ಕೊಂಡಂತೆಯೇ ನಾನೂ ತಿಳಿದುಕೊಳ್ಳುತ್ತೇನೆ.ಹೀಗೆ ನಂಬಿಕೆ ನಿರೀಕ್ಷೆ ಪ್ರೀತಿ ಈ ಮೂರೇ ನಿಲ್ಲುತ್ತವೆ; ಆದರೆ ಇವುಗಳಲ್ಲಿ ದೊಡ್ಡದು ಪ್ರೀತಿಯೇ.
- Isaiah 56:10 ಯೆಶಾಯ 56:10ಅವನ ಕಾವಲುಗಾರರು ಕುರುಡರು, ಅವರೆಲ್ಲರೂ ತಿಳುವಳಿಕೆ ಯಿಲ್ಲದವರು; ಅವರೆಲ್ಲರೂ ಮೂಕ ನಾಯಿಗಳು; ಅವು ಬೊಗಳಲಾರವು, ನಿದ್ರಿಸುತ್ತವೆ, ಬಿದ್ದುಕೊಂಡಿ ರುತ್ತವೆ. ತೂಕಡಿಕೆಯನ್ನು ಪ್ರೀತಿಸುತ್ತವೆ.
- Isaiah 48:20 ಯೆಶಾಯ 48:20ಬಾಬೆಲಿನಿಂದ ಹೊರಡಿರಿ, ಕಸ್ದೀಯರ ಕಡೆ ಯಿಂದ ಓಡಿಹೋಗಿರಿ; ಹರ್ಷ ಧ್ವನಿಯಿಂದ ಇದನ್ನು ಹೇಳಿ ಪ್ರಕಟಿಸಿರಿ, ಭೂಮಿಯ ಕಟ್ಟಕಡೆಯವರೆಗೂ ಪ್ರಚಾರಪಡಿಸಿರಿ; ಕರ್ತನು ತನ್ನ ಸೇವಕನಾದ ಯಾಕೋಬನನ್ನು ವಿಮೋಚಿಸಿದ್ದಾನೆಂದು ನೀವು ಹೇಳಿರಿ.
- Zephaniah 3:9 ಚೆಫನ್ಯ 3:9ಆಗ ನಾನು ಶುದ್ಧ ಭಾಷೆಯನ್ನು ಜನಾಂಗಗಳಿಗೆ ತಿರುಗಿ ಕೊಡುವೆನು; ಅವರೆಲ್ಲರು ಕರ್ತನ ಹೆಸರಿನಲ್ಲಿ ಮೊರೆಯಿಟ್ಟು ಏಕ ಮನಸ್ಸಿನಿಂದ ಆತನಿಗೆ ಸೇವೆ ಮಾಡು ವರು.
- Jeremiah 31:6–7 ಯೆರೆಮೀಯ 31:6–7ಒಂದು ದಿನವದೆ; ಆಗ ಎಫ್ರಾಯಾಮಿನ ಪರ್ವತದಲ್ಲಿ ಕಾಯುವವರು--ಏಳಿರಿ, ಚೀಯೋನಿಗೆ, ನಮ್ಮ ದೇವರಾದ ಕರ್ತನ ಬಳಿಗೆ ಹೋಗೋಣ ಎಂದು ಕೂಗುವರು. ಕರ್ತನು ಹೀಗೆ ಹೇಳುತ್ತಾನೆ --ಯಾಕೋಬನ ವಿಷಯ ಸಂತೋಷದಿಂದ ಹಾಡಿ ಮುಖ್ಯವಾದ ಜನಾಂಗಗಳೊಳಗೆ ಆರ್ಭಟಿಸಿರಿ, ಸಾರಿರಿ, ಸ್ತುತಿಸಿರಿ; ಕರ್ತನೇ, ನಿನ್ನ ಜನರನ್ನೂ ಇಸ್ರಾಯೇಲಿನ ಉಳಿದವರನ್ನೂ ರಕ್ಷಿಸು ಎಂದು ಹೇಳಿರಿ.