Isaiah · chapter 48 · verse 20
Isaiah 48:20 in Kannada
ಬಾಬೆಲಿನಿಂದ ಹೊರಡಿರಿ, ಕಸ್ದೀಯರ ಕಡೆ ಯಿಂದ ಓಡಿಹೋಗಿರಿ; ಹರ್ಷ ಧ್ವನಿಯಿಂದ ಇದನ್ನು ಹೇಳಿ ಪ್ರಕಟಿಸಿರಿ, ಭೂಮಿಯ ಕಟ್ಟಕಡೆಯವರೆಗೂ ಪ್ರಚಾರಪಡಿಸಿರಿ; ಕರ್ತನು ತನ್ನ ಸೇವಕನಾದ ಯಾಕೋಬನನ್ನು ವಿಮೋಚಿಸಿದ್ದಾನೆಂದು ನೀವು ಹೇಳಿರಿ.
Baabelininda horadiri, kasdeeyara kade yinda odihogiri; harsha dhvaniyinda idannu heli prakatisiri, bhoomiya kattakadeyavaregoo prachaarapadisiri; kartanu tanna sevakanaada yaakobanannu vimochisiddaanendu neevu heliri.
Isaiah 48:20 in English
- King James Version (KJV)
- Go ye forth of Babylon, flee ye from the Chaldeans, with a voice of singing declare ye, tell this, utter it [even] to the end of the earth; say ye, The LORD hath redeemed his servant Jacob.
- World English Bible (WEB)
- Leave Babylon! Flee from the Chaldeans! With the sound of joyful shouting announce this, tell it even to the end of the earth; say, “The LORD has redeemed his servant Jacob!”
- American Standard Version (ASV)
- Go ye forth from Babylon, flee ye from the Chaldeans; with a voice of singing declare ye, tell this, utter it even to the end of the earth: say ye, Jehovah hath redeemed his servant Jacob.
- Bible in Basic English (BBE)
- Go out of Babylon, go in flight from the Chaldaeans; with the sound of song make it clear, give the news, let the word go out even to the end of the earth: say, The Lord has taken up the cause of his servant Jacob.
- Darby Translation (DBY)
- Go ye forth from Babylon, flee from the Chaldeans, with a voice of singing; declare, cause this to be heard, utter it to the end of the earth; say ye, Jehovah hath redeemed his servant Jacob.
- Webster's Bible (WBS)
- Go ye forth from Babylon, flee ye from the Chaldeans, with a voice of singing declare ye, tell this, utter it [even] to the end of the earth; say ye, The LORD hath redeemed his servant Jacob.
- Young's Literal Translation (YLT)
- Go out from Babylon, flee from the Chaldeans, With a voice of singing declare, Cause ye this to be heard, Bring it forth unto the end of the earth, Say, Redeemed hath Jehovah His servant Jacob.
Read in context
- 18ಓ, ನೀನು ನನ್ನ ಆಜ್ಞೆಗಳಿಗೆ ಕಿವಿಗೊಟ್ಟಿದ್ದರೆ ಚೆನ್ನಾಗಿತ್ತು! ಆಗ ನಿನ್ನ ಸಮಾಧಾನವು ನದಿಯಂತೆಯೂ ನಿನ್ನ ನೀತಿಯು ಸಮುದ್ರದ ಅಲೆಗಳಂತೆಯೂ ಇರುತ್ತಿದ್ದವು;
- 19ನಿನ್ನ ಸಂತಾನವು ಸಹ ಹರಳಿನಂತೆಯೂ ನಿನ್ನ ಹೊಟ್ಟೆಯಲ್ಲಿ ಹುಟ್ಟುವವರು ದಪ್ಪ ಮರಳಿನಂತೆಯೂ ಇರುವರು; ಅವರ ಹೆಸರು ತೆಗೆದುಹಾಕಲ್ಪಡದೆ ನನ್ನ ಸಮ್ಮುಖದಿಂದ ನಾಶವಾಗದೆ ಇರುತ್ತಿತ್ತು.
- 20ಬಾಬೆಲಿನಿಂದ ಹೊರಡಿರಿ, ಕಸ್ದೀಯರ ಕಡೆ ಯಿಂದ ಓಡಿಹೋಗಿರಿ; ಹರ್ಷ ಧ್ವನಿಯಿಂದ ಇದನ್ನು ಹೇಳಿ ಪ್ರಕಟಿಸಿರಿ, ಭೂಮಿಯ ಕಟ್ಟಕಡೆಯವರೆಗೂ ಪ್ರಚಾರಪಡಿಸಿರಿ; ಕರ್ತನು ತನ್ನ ಸೇವಕನಾದ ಯಾಕೋಬನನ್ನು ವಿಮೋಚಿಸಿದ್ದಾನೆಂದು ನೀವು ಹೇಳಿರಿ.
- 21ಆತನು ಅವರನ್ನು ಮರುಭೂಮಿಯಲ್ಲಿ ನಡೆಸಿದಾಗ ಅವರು ದಾಹಗೊಳ್ಳಲಿಲ್ಲ; ಅವರಿಗಾಗಿ ನೀರನ್ನು ಬಂಡೆಯೊಳಗಿಂದ ಹರಿಸಿದನು; ಆತನು ಬಂಡೆಯನ್ನು ಸೀಳಲು ನೀರು ರಭಸದಿಂದ ಹೊರಗೆ ಬಂತು;ದುಷ್ಟರಿಗೆ ಸಮಾಧಾನವೇ ಇಲ್ಲ ಎಂದು ಕರ್ತನು ನುಡಿಯುತ್ತಾನೆ.
- 22ದುಷ್ಟರಿಗೆ ಸಮಾಧಾನವೇ ಇಲ್ಲ ಎಂದು ಕರ್ತನು ನುಡಿಯುತ್ತಾನೆ.
Cross references
- Jeremiah 51:45 ಯೆರೆಮೀಯ 51:45ನನ್ನ ಜನರೇ, ಅದರೊಳಗಿಂದ ಹೊರಡಿರಿ; ಪ್ರತಿಯೊಬ್ಬನೂ ತನ್ನ ತನ್ನ ಪ್ರಾಣವನ್ನು ಕರ್ತನ ಕೋಪದ ಉರಿಗೆ ತಪ್ಪಿಸಿರಿ.
- Isaiah 52:9 ಯೆಶಾಯ 52:9ಯೆರೂಸಲೇಮಿನ ಹಾಳಾದ ಸ್ಥಳಗಳೇ, ಆನಂದ ಧ್ವನಿಗೈಯಿರಿ ಒಟ್ಟಾಗಿ ಹಾಡಿರಿ; ಯಾಕಂದರೆ ಕರ್ತನು ತನ್ನ ಪ್ರಜೆಗಳನ್ನು ಆದರಿಸಿದ್ದಾನೆ, ಆತನು ಯೆರೂಸ ಲೇಮನ್ನು ವಿಮೋಚಿಸಿದ್ದಾನೆ.
- Jeremiah 50:8 ಯೆರೆಮೀಯ 50:8ಬಾಬೆಲಿನೊಳ ಗಿಂದ ಓಡಿಹೋಗಿರಿ; ಕಸ್ದೀಯರ ದೇಶದಿಂದ ಹೊರ ಡಿರಿ, ಮಂದೆಯ ಮುಂದೆ ಹೋತಗಳ ಹಾಗೆ ಇರ್ರಿ.
- Jeremiah 51:6 ಯೆರೆಮೀಯ 51:6ಬಾಬೆಲಿನೊಳಗಿಂದ ಓಡಿಹೋಗಿರಿ, ಒಬ್ಬೊಬ್ಬನು ತನ್ನ ತನ್ನ ಪ್ರಾಣವನ್ನು ತಪ್ಪಿಸಿಕೊಳ್ಳಲಿ; ಅದರ ಅಕ್ರಮದಲ್ಲಿ ನಾಶವಾಗ ಬೇಡಿರಿ; ಇದು ಕರ್ತನ ಪ್ರತಿದಂಡನೆಯ ಕಾಲವು; ಆತನೇ ಅದಕ್ಕೆ ಮುಯ್ಯಿಗೆಮುಯ್ಯಿ ಕೊಡುತ್ತಾನೆ.
- Revelation 18:4 ಪ್ರಕಟನೆ 18:4ಪರಲೋಕದಿಂದ ಮತ್ತೊಂದು ಶಬ್ದವನ್ನು ನಾನು ಕೇಳಿದೆನು; ಅದು--ನನ್ನ ಜನರೇ, ಅವಳಿಂದ ಹೊರಗೆ ಬನ್ನಿರಿ; ನೀವು ಅವಳ ಪಾಪಗಳಲ್ಲಿ ಪಾಲುಗಾರರಾಗ ಬಾರದು; ಅವಳಿಗಾಗುವ ಉಪದ್ರವಗಳಿಗೆ ಗುರಿ ಯಾಗಬಾರದು.
- Zechariah 2:6–7 ಜೆಕರ್ಯ 2:6–7ಓಹೋ, ನೀವು ಹೊರಗೆ ಬಂದು ಉತ್ತರ ದೇಶ ದಿಂದ ಓಡಿಹೋಗಿರಿ; ಆಕಾಶದ ನಾಲ್ಕು ದಿಕ್ಕುಗಳಂತೆ ನಿಮ್ಮನ್ನು ಚದರಿಸಿದ್ದೇನೆಂದು ಕರ್ತನು ಅನ್ನುತ್ತಾನೆ. ಓ ಚೀಯೋನೇ, ಬಾಬೆಲಿನ ಮಗಳ ಬಳಿಯಲ್ಲಿ ವಾಸವಾಗಿರುವವಳೇ, ತಪ್ಪಿಸಿಕೋ.
- Isaiah 26:1 ಯೆಶಾಯ 26:1ಆ ದಿವಸದಲ್ಲಿ ಯೆಹೂದ ದೇಶದೊಳಗೆ ಈ ಹಾಡನ್ನು ಹಾಡುವರು; ನಮಗೆ ಬಲ ವಾದ ಪಟ್ಟಣವಿದೆ. ರಕ್ಷಣೆಯನ್ನು ಕೋಟೆಯನ್ನಾ ಗಿಯೂ ಹೊರಪೌಳಿಯನ್ನಾಗಿಯೂ ದೇವರು ಮಾಡು ವನು.
- Isaiah 45:22–23 ಯೆಶಾಯ 45:22–23ಎಲ್ಲಾ ದಿಗಂತಗಳವರೇ, ನನ್ನ ಕಡೆಗೆ ನೋಡಿ ರಕ್ಷಣೆಯನ್ನು ಹೊಂದಿರಿ; ಯಾಕಂದರೆ ನಾನೇ ದೇವರು, ನನ್ನ ಹೊರತು ಯಾರೂ ಇಲ್ಲ. ನನ್ನಷ್ಟಕ್ಕೆ ನಾನೇ ಆಣೆಯನ್ನು ಇಟ್ಟಿದ್ದೇನೆ, ನೀತಿಯುಳ್ಳ ವಾಕ್ಯವು ನನ್ನ ಬಾಯಿಂದ ಹೊರಟಿದೆ, ಅದು ಹಿಂದಿರುಗದು: ಎಲ್ಲರೂ ನನಗೆ ಅಡ್ಡಬೀಳುವರು, ಪ್ರತಿ ನಾಲಿಗೆಯು ಪ್ರತಿಜ್ಞೆ ಮಾಡು ವದು.
- Isaiah 49:13 ಯೆಶಾಯ 49:13ಆಕಾಶವೇ, ಹರ್ಷಿಸು; ಭೂಮಿಯೇ, ಉಲ್ಲಾಸಪಡು! ಪರ್ವತ ಗಳೇ ಹರ್ಷಧ್ವನಿಗೈಯಿರಿ. ಯಾಕಂದರೆ ಕರ್ತನು ತನ್ನ ಜನರನ್ನು ಆದರಿಸಿ, ಶ್ರಮೆಪಟ್ಟ ತನ್ನವರನ್ನು ಕರುಣಿಸುವನು.
- Revelation 19:1–6 ಪ್ರಕಟನೆ 19:1–6ಇವುಗಳಾದ ಮೇಲೆ ಪರಲೋಕದಲ್ಲಿ ಬಹಳ ಜನರ ಮಹಾ ಶಬ್ದವನ್ನು ನಾನು ಕೇಳಿದೆನು; ಅವರು--ಹಲ್ಲೆಲೂಯಾ; ನಮ್ಮ ದೇವ ರಾದ ಕರ್ತನಿಗೆ ರಕ್ಷಣೆಯೂ ಮಹಿಮೆಯೂ ಘನವೂ ಅಧಿಕಾರವೂ ಉಂಟಾದವು. ಆತನ ನ್ಯಾಯತೀರ್ಪು ಗಳು ಸತ್ಯವೂ ನೀತಿಯುಳ್ಳವುಗಳೂ ಆಗಿವೆ; ಯಾಕಂ ದರೆ ಜಾರತ್ವದಿಂದ ಭೂಲೋಕವನ್ನು ಕೆಡಿಸುತ್ತಿದ್ದ ಆ ಮಹಾಜಾರಸ್ತ್ರೀಗೆ ಆತನು ನ್ಯಾಯತೀರಿಸಿ ಆತನ ಸೇವಕರ ರಕ್ತಕ್ಕಾಗಿ ಅವಳಿಗೆ ಪ್ರತಿ ದಂಡನೆಯನ್ನು ಮಾಡಿದ್ದಾನೆ ಎಂದು ಹೇಳಿದರು. ತಿರಿಗಿ ಅವರು --ಹಲ್ಲೆಲೂಯಾ ಅಂದರು. ಅವಳ ಹೊಗೆಯು ಯುಗಯುಗಾಂತರಗಳಲ್ಲಿಯೂ ಏರಿ ಹೋಗುತ್ತದೆ. ಆಗ ಇಪ್ಪತ್ತನಾಲ್ಕು ಮಂದಿ ಹಿರಿಯರೂ ಆ ನಾಲ್ಕು ಜೀವಿಗಳೂ--ಆಮೆನ್. ಹಲ್ಲೆಲೂಯಾ ಎಂದು ಹೇಳುತ್ತಾ ಸಿಂಹಾಸನದ ಮೇಲೆ ಕೂತಿದ್ದ ದೇವರ ಮುಂದೆ ಅಡ್ಡಬಿದ್ದು ಆರಾಧಿಸಿದರು. ಆಮೇಲೆ ಸಿಂಹಾಸನದ ಕಡೆಯಿಂದ ಬಂದ ಒಂದು ಶಬ್ದವು--ದೇವರ ಸೇವಕರೆಲ್ಲರೇ, ಆತನಿಗೆ ಭಯ ಪಡುವ ಹಿರಿಕಿರಿಯರೇ, ನಮ್ಮ ದೇವರನ್ನು ಕೊಂಡಾಡಿರಿ ಎಂದು ಹೇಳಿತು. ತರುವಾಯ ಜನರ ದೊಡ್ಡ ಗುಂಪಿನ ಶಬ್ದದಂತೆಯೂ ಬಹಳ ನೀರುಗಳ ಘೋಷದಂತೆಯೂ ಗಟ್ಟಿಯಾದ ಗುಡುಗುಗಳ ಶಬ್ದದಂತೆಯೂ ಇದ್ದ ಒಂದು ಶಬ್ದವನ್ನು ನಾನು ಕೇಳಿದೆನು; ಅದು--ಹಲ್ಲೆಲೂಯಾ, ಸರ್ವಶಕ್ತನಾಗಿರುವ ದೇವರಾದ ಕರ್ತನು ಆಳುತ್ತಾನೆ.
- Exodus 15:1–21 ವಿಮೋಚನಕಾಂಡ 15:1–21ಆಗ ಮೋಶೆಯೂ ಇಸ್ರಾಯೇಲ್ ಮಕ್ಕಳೂ ಕರ್ತನಿಗೆ ಈ ಹಾಡನ್ನು ಹಾಡಿ ಹೇಳಿದ್ದೇನಂದರೆ--ನಾನು ಕರ್ತನಿಗೆ ಹಾಡುತ್ತೇನೆ; ಆತನು ಪ್ರಭಾವದಿಂದ ಜಯಶಾಲಿಯಾದನು; ಕುದುರೆ ಯನ್ನೂ (ಕುದುರೆಯ) ಸವಾರನನ್ನೂ ಸಮುದ್ರದಲ್ಲಿ ದೊಬ್ಬಿದ್ದಾನೆ. ಕರ್ತನು ನನ್ನ ಬಲವೂ ಕೀರ್ತನೆಯೂ ಆಗಿದ್ದಾನೆ, ಆತನು ನನ್ನ ರಕ್ಷಣೆಯಾದನು, ಆತನು ನನ್ನ ದೇವರು, ಆತನಿಗಾಗಿ ನಾನು ಒಂದು ನಿವಾಸವನ್ನು ಸಿದ್ಧಮಾಡುವೆನು. ಆತನು ನನ್ನ ತಂದೆಯ ದೇವರು, ನಾನು ಆತನನ್ನು ಘನಪಡಿಸುವೆನು. ಕರ್ತನು ಯುದ್ಧ ಶೂರನು; ಕರ್ತನು ಎಂಬದೇ ಆತನ ಹೆಸರು. ಆತನು ಫರೋಹನ ರಥಗಳನ್ನೂ ಅವನ ಸೈನ್ಯವನ್ನೂ ಸಮುದ್ರ ದಲ್ಲಿ ನೂಕಿದ್ದಾನೆ; ಆಯಲ್ಪಟ್ಟ ಅವನ ಅಧಿಪತಿಗಳು ಸಹ ಕೆಂಪು ಸಮುದ್ರದಲ್ಲಿ ಮುಳುಗಿಹೋದರು. ಅಗಾಧಗಳು ಅವರನ್ನು ಮುಚ್ಚಿಕೊಂಡವು. ಅವರು ಕಲ್ಲಿನಂತೆ (ಸಮುದ್ರದ) ತಳಕ್ಕೆ ಮುಳುಗಿದರು. ಓ ಕರ್ತನೇ, ನಿನ್ನ ಬಲಗೈ ಶಕ್ತಿಯಲ್ಲಿ ಮಹಿಮೆಯುಳ್ಳ ದ್ದಾಗಿದೆ. ಓ ಕರ್ತನೇ, ನಿನ್ನ ಬಲಗೈ ಶತ್ರುವನ್ನು ಜಜ್ಜಿ ಪುಡಿಮಾಡಿತು. ನಿನ್ನ ಮಹತ್ತಾದ ಘನತೆಯಲ್ಲಿ ನಿನಗೆ ವಿರೋಧವಾಗಿ ಎದ್ದವರನ್ನು ಕೆಡವಿ ಬಿಟ್ಟಿರುವಿ. ನಿನ್ನ ರೌದ್ರವು ಹೊರಟು ಅವರನ್ನು ಹುಲ್ಲಿನಂತೆ ದಹಿಸಿಬಿಟ್ಟಿತು. ನಿನ್ನ ಮೂಗಿನ ಬಿರುಸಾದ ಗಾಳಿ ಯಿಂದ ನೀರುಗಳು ಒಟ್ಟುಗೂಡಿದವು. ಪ್ರವಾಹಗಳು ರಾಶಿಯಂತೆ ನಿಂತವು; ಸಮುದ್ರದ ಅಗಾಧಗಳ ನೀರು ಗಟ್ಟಿಯಾದವು. ಶತ್ರುವು--ನಾನು ಹಿಂದಟ್ಟಿ, ಹಿಡಿ ಯುವೆನು, ಕೊಳ್ಳೆಯನ್ನು ಹಂಚಿಕೊಳ್ಳುವೆನು, ನನ್ನ ಆಶೆಗಳು ಅವರಿಂದ ತೃಪ್ತಿಹೊಂದುವವು. ನಾನು ನನ್ನ ಖಡ್ಗವನ್ನು ಹಿರಿಯುವೆನು, ನನ್ನ ಕೈ ಅವರನ್ನು ಸಂಹಾರ ಮಾಡುವದು ಅಂದನು. ನೀನು ನಿನ್ನ ಗಾಳಿಯನ್ನು ಊದಿದಾಗ ಸಮುದ್ರವು ಅವರನ್ನು ಮುಚ್ಚಿಕೊಂಡಿತು. ಅವರು ಸೀಸದಂತೆ ಮಹಾಜಲಗಳಲ್ಲಿ ಮುಳುಗಿ ಹೊದರು. ದೇವರುಗಳಲ್ಲಿ ಓ ಕರ್ತನೇ, ನಿನ್ನ ಹಾಗೆ ಯಾರಿದ್ದಾರೆ? ಪರಿಶುದ್ಧತ್ವದಲ್ಲಿ ಮಹಿಮೆ ಹೊಂದಿದವನೂ ಸ್ತೋತ್ರಗಳಲ್ಲಿ ಭಯಂಕರನೂ ಅದ್ಭುತಗಳನ್ನು ಮಾಡುವಾತನೂ ಆದ ನಿನ್ನ ಹಾಗೆ ಯಾರಿದ್ದಾರೆ? ನೀನು ನಿನ್ನ ಬಲಗೈಯನ್ನು ಚಾಚಲು ಭೂಮಿಯು ಅವರನ್ನು ನುಂಗಿತು. ನೀನು ವಿಮೋಚಿ ಸಿದ ಜನರನ್ನು ಕರುಣೆಯಿಂದ ನಡಿಸಿದಿ; ನೀನು ಅವ ರನ್ನು ನಿನ್ನ ಬಲದಿಂದ ನಿನ್ನ ಪರಿಶುದ್ಧ ನಿವಾಸಕ್ಕೆ ನಡಿಸಿದಿ. ಜನರು ಇದನ್ನು ಕೇಳಿ ಭಯಪಡುವರು; ದುಃಖವು ಫಿಲಿಷ್ಟಿಯದಲ್ಲಿ ವಾಸಿಸುವವರನ್ನು ಹಿಡಿಯುವದು. ಆಗ ಎದೋಮಿನ ಪ್ರಭುಗಳು ದಿಗ್ಭ್ರಮೆಗೊಳ್ಳು ವರು; ಮೋವಾಬಿನ ಬಲಿಷ್ಠರನ್ನು ಕಂಪನವು ಹಿಡಿಯು ವದು. ಕಾನಾನಿನ ನಿವಾಸಿಗಳೆಲ್ಲಾ ಕರಗಿ ಹೋಗುವರು. ಭಯವೂ ಹೆದರಿಕೆಯೂ ಅವರ ಮೇಲೆ ಬೀಳು ವದು; ನಿನ್ನ ಜನರು ದಾಟಿ ಹೋಗುವ ವರೆಗೆ ಓ ಕರ್ತನೇ, ನೀನು ಕೊಂಡುಕೊಂಡ ಜನರು ದಾಟಿ ಹೋಗುವ ವರೆಗೆ ನಿನ್ನ ಬಾಹುವಿನ ದೊಡ್ಡಸ್ತಿಕೆಯಿಂದ ಅವರು ಕಲ್ಲಿನಂತೆ ಸ್ತಬ್ಧರಾಗುವರು. ನೀನು ಅವರನ್ನು ಒಳಗೆ ಬರಮಾಡಿ ಓ ಕರ್ತನೇ, ನಿನ್ನ ಕೈಗಳು ಸ್ಥಾಪಿಸಿದ ಪರಿಶುದ್ಧ ನಿವಾಸದಲ್ಲಿಯೂ (ಓ ಕರ್ತನೇ,) ನೀನು ವಾಸಿಸುವದಕ್ಕೆ ಮಾಡಿಕೊಂಡಿರುವ ನಿನ್ನ ಸ್ವಾಸ್ಥ್ಯದ ಪರ್ವತದಲ್ಲಿಯೂ ಅವರನ್ನು ಸ್ಥಾಪಿಸುವಿ. ಕರ್ತನು ಯುಗಯುಗಾಂತರಗಳ ವರೆಗೆ ಆಳುವನು. ಫರೋ ಹನ ಕುದುರೆಗಳು ಅವನ ರಥಗಳ ಸಂಗಡಲೂ ಸವಾರರ ಸಂಗಡಲೂ ಸಮುದ್ರದೊಳಗೆ ಬಂದಾಗ ಕರ್ತನು ಸಮುದ್ರದ ನೀರನ್ನು ಅವರ ಮೇಲೆ ತಿರಿಗಿ ಬರ ಮಾಡಿದನು; ಆದರೆ ಇಸ್ರಾಯೇಲ್ ಮಕ್ಕಳು ಸಮುದ್ರದ ಮಧ್ಯದಲ್ಲಿ ಒಣನೆಲದ ಮೇಲೆ ಹೋದರು. ಆಗ ಪ್ರವಾದಿನಿಯಾಗಿದ್ದ ಆರೋನನ ಸಹೋ ದರಿ ಮಿರ್ಯಾಮಳು ಕೈಯಲ್ಲಿ ದಮ್ಮಡಿಯನ್ನು ತೆಗೆದು ಕೊಂಡಳು. ಸ್ತ್ರೀಯರೆಲ್ಲರೂ ದಮ್ಮಡಿಗಳನ್ನು ಹಿಡಿದು ಕೊಂಡು ನಾಟ್ಯವಾಡುತ್ತಾ ಆಕೆಯನ್ನು ಹಿಂಬಾಲಿಸಿ ಹೋದರು. ಮಿರ್ಯಾಮಳು ಅವರಿಗೆ ಕೊಟ್ಟ ಉತ್ತರವೇನಂದರೆ--ನೀವು ಕರ್ತನಿಗೆ ಹಾಡಿರಿ, ಆತನು ಮಹಿಮೆಯಿಂದ ಜಯಿಸಿದ್ದಾನೆ; ಕುದುರೆಯನ್ನು ಸವಾರ ನನ್ನು ಸಮುದ್ರದಲ್ಲಿ ಹಾಕಿದ್ದಾನೆ ಎಂಬದು.
- Exodus 19:4–6 ವಿಮೋಚನಕಾಂಡ 19:4–6ನಾನು ಐಗುಪ್ತ್ಯರಿಗೆ ಮಾಡಿದ್ದನ್ನು ನೀವು ನೋಡಿದ್ದೀರಿ; ನಿಮ್ಮನ್ನು ಹದ್ದುಗಳ ರೆಕ್ಕೆಗಳ ಮೇಲೆ ನಾನು ಹೇಗೆ ಹೊತ್ತುಕೊಂಡು ನನ್ನ ಬಳಿಗೆ ಬರಮಾಡಿದೆನೆಂಬದನ್ನೂ ನೀವು ನೋಡಿದ್ದೀರಿ; ಆದದರಿಂದ ಈಗ ನೀವು ನನ್ನ ಮಾತನ್ನು ಕೇಳಿ ನನ್ನ ಒಡಂಬಡಿಕೆಯನ್ನು ಕಾಪಾಡಿ ದರೆ, ಸಮಸ್ತ ಜನರಲ್ಲಿ ನೀವು ನನ್ನ ಅಸಮಾನ್ಯವಾದ ಸಂಪತ್ತಾಗಿರುವಿರಿ; ಭೂಮಿಯೆಲ್ಲಾ ನನ್ನದೇ. ನೀವು ನನಗೆ ಯಾಜಕ ರಾಜ್ಯವೂ ಪರಿಶುದ್ಧ ಜನಾಂಗವೂ ಆಗಿರುವಿರಿ ಎಂದು ಇಸ್ರಾಯೇಲ್ ಮಕ್ಕಳಿಗೆ ಹೇಳ ಬೇಕಾದ ಮಾತುಗಳು ಇವೇ ಅಂದನು.
Original words (Hebrew)
- forth · H3318יָצָא yâtsâʼ
- Babylon · H894בָּבֶל Bâbel
- flee · H1272בָּרַח bârach
- Chaldeans · H3778כַּשְׂדִּי Kasdîy
- voice · H6963קוֹל qôwl
- singing · H7440רִנָּה rinnâh
- declare · H5046נָגַד nâgad
- tell · H8085שָׁמַע shâmaʻ
- utter · H3318יָצָא yâtsâʼ
- end · H7097קָצֶה qâtseh
- earth · H776אֶרֶץ ʼerets
- say · H559אָמַר ʼâmar
- redeemed · H1350גָּאַל gâʼal
- servant · H5650עֶבֶד ʻebed
- Jacob · H3290יַעֲקֹב Yaʻăqôb