Isaiah · chapter 54 · verse 6
Isaiah 54:6 in Kannada
ನೀನು ಬಿಡಲ್ಪಟ್ಟು ಆತ್ಮದಲ್ಲಿ ವ್ಯಥೆಪಟ್ಟ ಹೆಂಗಸು, ತ್ಯಜಿಸಲ್ಪಟ್ಟವಳಾದ ಯೌವನದ ಪತ್ನಿಯ ಹಾಗೆ ಇದ್ದಾಗ ಕರ್ತನು ನಿನ್ನನ್ನು ಕರೆದಿದ್ದಾನೆ ಎಂದು ನಿನ್ನ ದೇವರು ಹೇಳುತ್ತಾನೆ.
Neenu bidalpattu aatmadalli vyathepatta hengasu, tyajisalpattavalaada yauvanada patniya haage iddaaga kartanu ninnannu karediddaane endu ninna devaru heluttaane.
Isaiah 54:6 in English
- King James Version (KJV)
- For the LORD hath called thee as a woman forsaken and grieved in spirit, and a wife of youth, when thou wast refused, saith thy God.
- World English Bible (WEB)
- For the LORD has called you as a wife forsaken and grieved in spirit, even a wife of youth, when she is cast off,” says your God.
- American Standard Version (ASV)
- For Jehovah hath called thee as a wife forsaken and grieved in spirit, even a wife of youth, when she is cast off, saith thy God.
- Bible in Basic English (BBE)
- For the Lord has made you come back to him, like a wife who has been sent away in grief of spirit; for one may not give up the wife of one's early days.
- Darby Translation (DBY)
- For Jehovah hath called thee as a woman forsaken and grieved in spirit, and as a wife of youth, that hath been refused, saith thy God.
- Webster's Bible (WBS)
- For the LORD hath called thee as a woman forsaken and grieved in spirit, and a wife of youth, when thou wast refused, saith thy God.
- Young's Literal Translation (YLT)
- For, as a woman forsaken and grieved in spirit, Called thee hath Jehovah, Even a youthful wife when she is refused, said thy God.
Read in context
- 4ಹೆದರಬೇಡ, ನಿನಗೆ ನಾಚಿಕೆಯಾಗುವದಿಲ್ಲ. ಇಲ್ಲವೆ ಗಾಬರಿ ಪಡಬೇಡ, ನಿನ್ನ ಯೌವನದ ಲಜ್ಜೆಯನ್ನು ಮರೆತು ಬಿಡುವಿ ನಿನ್ನ ವೈಧವ್ಯದಲ್ಲಿ ನಿನಗಾದ ನಿಂದೆಯನ್ನು ಎಂದಿಗೂ ನಿನ್ನ ಜ್ಞಾಪಕಕ್ಕೆ ತರುವದಿಲ್ಲ.
- 5ನಿನ್ನನ್ನು ಉಂಟುಮಾಡಿದವನೇ ನಿನ್ನ ಪತಿ; ಸೈನ್ಯಗಳ ಕರ್ತನು ಎಂಬದು ಆತನ ಹೆಸರು; ನಿನ್ನ ವಿಮೋಚಕನು ಇಸ್ರಾ ಯೇಲಿನ ಪರಿಶುದ್ಧನೇ; ಸಮಸ್ತ ಭೂಮಿಯ ದೇವರು ಎಂದು ಆತನು ಕರೆಯಲ್ಪಡುವನು.
- 6ನೀನು ಬಿಡಲ್ಪಟ್ಟು ಆತ್ಮದಲ್ಲಿ ವ್ಯಥೆಪಟ್ಟ ಹೆಂಗಸು, ತ್ಯಜಿಸಲ್ಪಟ್ಟವಳಾದ ಯೌವನದ ಪತ್ನಿಯ ಹಾಗೆ ಇದ್ದಾಗ ಕರ್ತನು ನಿನ್ನನ್ನು ಕರೆದಿದ್ದಾನೆ ಎಂದು ನಿನ್ನ ದೇವರು ಹೇಳುತ್ತಾನೆ.
- 7ಕ್ಷಣ ಮಾತ್ರಕ್ಕೆ ನಿನ್ನನ್ನು ನಾನು ಬಿಟ್ಟಿದ್ದೇನೆ; ಆದರೆ ಮಹಾ ಕೃಪೆಗಳೊಂದಿಗೆ ನಿನ್ನನ್ನು ನಾನು ಕೂಡಿಸುವೆನು.
- 8ರೌದ್ರವೇರಿದಾಗ ನನ್ನ ಮುಖವನ್ನು ನಿನಗೆ ಕ್ಷಣ ಮಾತ್ರವೇ ಮರೆಮಾಡಿಕೊಂಡೆನು; ಆದರೆ ನಿರಂತರ ವಾದ ದಯದಿಂದ ನಿನ್ನ ಮೇಲೆ ಕರುಣೆಯನ್ನು ಇಟ್ಟಿ ದ್ದೇನೆ ಎಂದು ನಿನ್ನ ವಿಮೋಚಕನಾದ ಕರ್ತನು ಹೇಳು ತ್ತಾನೆ.
Cross references
- Isaiah 62:4 ಯೆಶಾಯ 62:4ಇನ್ನು ಮೇಲೆ ನೀನು ಬಿಡಲ್ಪಟ್ಟವಳೆಂದು ಹೇಳಲ್ಪಡುವದಿಲ್ಲ, ಇಲ್ಲವೆ ನಿನ್ನ ದೇಶಕ್ಕೆ ಹಾಳಾದದ್ದೆಂದು ಹೇಳಲ್ಪಡುವದಿಲ್ಲ: ಆದರೆ ನೀನು (ಹೆಫ್ಜೀಬಾ) ಮೆಚ್ಚಿದವಳೆಂದೂ ನಿನ್ನ ದೇಶವು (ಬೆಯೂಲಾ) ಮದುವೆಯಾದದ್ದೆಂದೂ ಕರೆಯಲ್ಪ ಡುವದು; ಯಾಕಂದರೆ ಕರ್ತನು ನಿನ್ನಲ್ಲಿ ಉಲ್ಲಾಸಿಸು ವನು; ನಿನ್ನ ದೇಶವು ಮದುವೆಯಾಗುವದು.
- Proverbs 5:18 ಜ್ಞಾನೋಕ್ತಿಗಳು 5:18ನಿನ್ನ ಬುಗ್ಗೆಯು ಆಶೀರ್ವದಿಸಲ್ಪಡಲಿ; ನಿನ್ನ ಯೌವನ ಕಾಲದ ಹೆಂಡತಿಯೊಂದಿಗೆ ಆನಂದಿಸು.
- Ecclesiastes 9:9 ಪ್ರಸಂಗಿ 9:9ನಿನ್ನ ನಿರ್ಥಕವಾದ ಎಲ್ಲಾ ದಿನಗಳಲ್ಲಿ ಸೂರ್ಯನ ಕೆಳಗೆ ಆತನು ನಿನಗೆ ಕೊಟ್ಟ ಜೀವನದ ಎಲ್ಲಾ ದಿನಗಳಲ್ಲಿ ನೀನು ಪ್ರೀತಿಸುವ ನಿನ್ನ ಹೆಂಡತಿ ಯೊಡನೆ ಆನಂದದಿಂದ ವಾಸಿಸು; ಸೂರ್ಯನ ಕೆಳಗೆ ನೀನು ಪಡುವ ಕಷ್ಟದಲ್ಲಿಯೂ ಇದೇ ನಿನ್ನ ಪಾಲಾಗಿದೆ.
- Hosea 2:14–15 ಹೋಶೇಯ 2:14–15ಆದದರಿಂದ ಇಗೋ, ನಾನು ಅವಳನ್ನು ಮೋಹಿಸಿ ಅವಳನ್ನು ಅರಣ್ಯದೊಳಗೆ ಕರೆದುಕೊಂಡು ಬಂದು ಅವಳ ಸಂಗಡ ಹಿತಕರವಾಗಿ ಮಾತನಾಡು ವೆನು. ಅವಳ ದ್ರಾಕ್ಷೇ ತೋಟಗಳನ್ನು ಅಲ್ಲಿರುವಾ ಗಲೇ ಅವಳಿಗೆ ಹಿಂದಕ್ಕೆ ಕೊಡುವೆನು. ಆಕೋರಿನ ತಗ್ಗನ್ನೇ ಅವಳ ನಿರೀಕ್ಷೆಗೆ ದ್ವಾರವನ್ನಾಗಿ ಮಾಡುವೆನು; ಅಲ್ಲಿ ಅವಳು ಯೌವನದ ದಿನಗಳಲ್ಲಿಯೂ ಐಗುಪ್ತ ದೇಶದೊಳಗಿಂದ ಹೊರಟುಬಂದ ದಿನದಲ್ಲಿಯೂ ಆದ ಹಾಗೆ ಹಾಡುವಳು.
- Hosea 2:1–2 ಹೋಶೇಯ 2:1–2ನೀವು ನಿಮ್ಮ ಸಹೋದರರಿಗೆ ಅಮ್ಮಿ ಎಂದೂ ನಿಮ್ಮ ಸಹೋದರಿಯರಿಗೆ ರುಹಾಮ ಎಂದೂ ಹೇಳಿರಿ. ನಿಮ್ಮ ತಾಯಿಯ ಸಂಗಡ ವಾದಿಸಿರಿ, ವಾದಿಸಿರಿ; ಅವಳು ನನ್ನ ಹೆಂಡತಿಯಲ್ಲ; ಇಲ್ಲವೆ ನಾನು ಅವಳ ಗಂಡನಲ್ಲ; ಆದದರಿಂದ ಅವಳು ತನ್ನ ದೃಷ್ಟಿಯಿಂದ ತನ್ನ ವ್ಯಭಿಚಾರತ್ವಗಳನ್ನು ತನ್ನ ಸ್ತನಗಳ ಮಧ್ಯದಿಂದ ತನ್ನ ವ್ಯಭಿಚಾರಗಳನ್ನು ತೊಲಗಿಸಲಿ.
- Isaiah 49:14–21 ಯೆಶಾಯ 49:14–21ಆದರೆ ಚೀಯೋನು--ಕರ್ತನು ನನ್ನನ್ನು ತಳ್ಳಿ ಬಿಟ್ಟಿದ್ದಾನೆ ಮತ್ತು ನನ್ನ ಕರ್ತನು ನನ್ನನ್ನು ಮರೆತು ಬಿಟ್ಟಿದ್ದಾನಲ್ಲಾ ಎಂದು ಅಂದುಕೊಂಡಳು. ತನ್ನ ಗರ್ಭದ ಮಗನ ಮೇಲೆ ಕರುಣಿಸದೆ ಒಬ್ಬ ಹೆಂಗಸು ತನ್ನ ಮೊಲೇ ಕೂಸನ್ನು ಮರೆತಾಳೇ? ಹೌದು, ಅವಳು ಮರೆಯಬಹುದು, ಆದರೂ ನಾನು ನಿನ್ನನ್ನು ಮರೆ ಯುವದಿಲ್ಲ. ಇಗೋ, ನಾನು ನನ್ನ ಅಂಗೈಗಳಲ್ಲಿ ನಿನ್ನನ್ನು ಕೆತ್ತಿಕೊಂಡಿದ್ದೇನೆ; ನಿನ್ನ ಗೋಡೆಗಳು ಸದಾ ನನ್ನ ಕಣ್ಣೆದುರಿನಲ್ಲಿವೆ. ನಿನ್ನ ಮಕ್ಕಳು ತ್ವರೆಪಡುವರು; ನಿನ್ನನ್ನು ಕೆಡವಿ ಹಾಳುಮಾಡಿದವರು ನಿನ್ನೊಳಗಿಂದ ಹೊರಟುಹೋಗುವರು. ನಿನ್ನ ಕಣ್ಣುಗಳನ್ನು ಎತ್ತಿ ಸುತ್ತಲೂ ನೋಡು. ಇಗೋ, ಇವರೆಲ್ಲರೂ ಕೂಡಿ ಕೊಂಡು ನಿನ್ನ ಬಳಿಗೆ ಬರುತ್ತಿದ್ದಾರೆ. ಕರ್ತನು ಹೇಳುವದೇನಂದರೆ--ನನ್ನ ಜೀವದಾಣೆ, ನಿಶ್ಚಯವಾಗಿ ನೀನು ಅವರನ್ನೆಲ್ಲಾ ಆಭರಣಗಳಂತೆ ಧರಿಸಿಕೊಳ್ಳುವಿ ಮತ್ತು ನೀನು ಅವರನ್ನು ಮದಲಗಿತ್ತಿಯಂತೆ ಕಟ್ಟಿ ಕೊಳ್ಳುವಿ. ನಿನ್ನ ಹಾಳಾದ ಸ್ಥಳಗಳೂ ನಿನ್ನ ಏಕಾಂತ ಸ್ಥಳಗಳೂ ಕೆಡವಲ್ಪಟ್ಟ ನಿನ್ನ ದೇಶವೂ ಈಗ ನಿವಾಸಿ ಗಳಿಗೆ ಇಕ್ಕಟ್ಟಾಗುವವು; ನಿನ್ನನ್ನು ನುಂಗಿದವರು ದೂರ ವಾಗುವರು. ನೀನು ಕಳಕೊಂಡ ಮಕ್ಕಳ ಸ್ಥಳವು ನನಗೆ ಇಕ್ಕಟ್ಟಾಯಿತು; ನಾನು ವಾಸಿಸುವದಕ್ಕೆ ಸ್ಥಳ ಕೊಡು ಎಂದು ಹೇಳುವರು. ಆಗ ನೀನು ನನ ಗೋಸ್ಕರ ಇವರನ್ನು ಯಾರು ನನ್ನಲ್ಲಿ ಪಡೆದರು? ನಾನೋ, ಮಕ್ಕಳನ್ನು ಕಳೆದುಕೊಂಡವಳು, ಏಕಾಂತ ವಾಗಿ ಸೆರೆಯಲ್ಲಿದ್ದು ಹೊರಗೆ ಹಾಕಲ್ಪಟ್ಟವಳ ಹಾಗೆ ಇದ್ದೆನು. ಇವರನ್ನು ಸಾಕಿದವರು ಯಾರು? ಅವರೆ ಲ್ಲಿದ್ದರು ಎಂದು ಅಂದುಕೊಳ್ಳುವಿ.
- Isaiah 50:1–2 ಯೆಶಾಯ 50:1–2ಕರ್ತನು ಹೀಗನ್ನುತ್ತಾನೆ--ನಾನು ಬಿಟ್ಟು ಬಿಟ್ಟದ್ದಕ್ಕೆ ನಿನ್ನ ತಾಯಿಯ ತ್ಯಾಗಪತ್ರವು ಎಲ್ಲಿ? ಇಲ್ಲವೆ ನಾನು ನನ್ನ ಸಾಲಗಾರರಲ್ಲಿ ಯಾರಿಗೆ ನಿಮ್ಮನ್ನು ಮಾರಿಬಿಟ್ಟೇನು? ಇಗೋ, ನಿಮ್ಮ ಅಕ್ರಮ ಗಳ ನಿಮಿತ್ತ ನಿಮ್ಮನ್ನು ನೀವೇ ಮಾರಿಕೊಂಡಿದ್ದೀರಿ; ನಿಮ್ಮ ದ್ರೋಹಗಳ ನಿಮಿತ್ತವೇ ನಿಮ್ಮ ತಾಯಿಯನ್ನು ಬಿಟ್ಟಿದ್ದೇನೆ. ನಾನು ಬಂದಾಗ ಯಾಕೆ ಅಲ್ಲಿ ಒಬ್ಬನೂ ಇರಲಿಲ್ಲ? ನಾನು ಕರೆದಾಗ ಯಾಕೆ ಯಾರೂ ಉತ್ತರ ಕೊಡಲಿಲ್ಲ? ನನ್ನ ಹಸ್ತವು ವಿಮೋಚಿಸದಂಥಾ ಮೋಟುಗೈಯೋ? ಇಲ್ಲವೇ ಬಿಡಿಸುವದಕ್ಕೆ ನನ್ನಲ್ಲಿ ಶಕ್ತಿಯಿಲ್ಲವೋ? ಇಗೋ, ನನ್ನ ಗದರಿಕೆಯಿಂದ ನಾನು ಸಮುದ್ರವನ್ನು ಒಣಗಿಸುತ್ತೇನೆ. ನಾನು ನದಿಗಳನ್ನು ಅರಣ್ಯವನ್ನಾಗಿ ಮಾಡುತ್ತೇನೆ. ನೀರಿಲ್ಲದ ಕಾರಣ ಅಲ್ಲಿಯ ವಿಾನುಗಳು ಬಾಯಾರಿ ಸತ್ತುನಾರುವವು.
- Malachi 2:14 ಮಲಾಕಿಯ 2:14ಆದಾಗ್ಯೂ ನೀವು--ಯಾತಕ್ಕೆ ಅನ್ನುತ್ತೀರಿ? ಕರ್ತನು ನಿನಗೂ ನೀನು ವಂಚಿಸಿದ ನಿನ್ನ ಯೌವನದ ಹೆಂಡತಿಗೂ ಸಾಕ್ಷಿಯಾಗಿ ದ್ದನು; ಆದಾಗ್ಯೂ ಅವಳು ನಿನ್ನ ಜತೆಯವಳೂ ನಿನ್ನ ಒಡಂಬಡಿಕೆಯ ಹೆಂಡತಿಯೂ ಆಗಿದ್ದಾಳೆ.
- 2 Corinthians 7:9–10 2 ಕೊರಿಂಥದವರಿಗೆ 7:9–10ಆದರೂ ನಿಮಗೆ ದುಃಖವಾಯಿತೆಂದು ನಾನು ಸಂತೋಷಪಡದೆ ನೀವು ದುಃಖಪಟ್ಟು ಮಾನಸಾಂತರ ಹೊಂದಿದ್ದಕ್ಕಾಗಿ ಈಗ ಸಂತೋಷ ಪಡುತ್ತೇನೆ; ಯಾಕಂದರೆ ನೀವು ದೇವರ ಚಿತ್ತಾನುಸಾರ ವಾಗಿ ದುಃಖಿಸಿದ್ದರಿಂದ ನಮ್ಮಿಂದ ಯಾವದರಲ್ಲಿಯೂ ನೀವು ನಷ್ಟಪಡಲಿಲ್ಲವಲ್ಲಾ. ದೇವರ ಚಿತ್ತಾನುಸಾರ ವಾಗಿರುವ ದುಃಖವು ರಕ್ಷಣೆಗಾಗಿ ಮಾನಸಾಂತರ ವನ್ನುಂಟು ಮಾಡುತ್ತದೆ. ಮಾನಸಾಂತರದಲ್ಲಿ ಪಶ್ಚಾತ್ತಾಪಕ್ಕೆ ಅಸ್ಪದವಿಲ್ಲ; ಆದರೆ ಲೋಕಸಂಬಂಧ ವಾದ ದುಃಖವು ಮರಣವನ್ನುಂಟುಮಾಡುತ್ತದೆ.
- Matthew 11:28 ಮತ್ತಾಯನು 11:28ಕಷ್ಟಪಡುವವರೇ ಮತ್ತು ಭಾರಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ, ನಾನು ನಿಮಗೆ ವಿಶ್ರಾಂತಿಯನ್ನು ಕೊಡುವೆನು.
- 2 Corinthians 7:6 2 ಕೊರಿಂಥದವರಿಗೆ 7:6ಆದಾಗ್ಯೂ ಕುಗ್ಗಿಹೋದ ವರನ್ನು ಸಂತೈಸುವ ದೇವರು ತೀತನ ಬರುವಿಕೆಯಿಂದ ನಮ್ಮನ್ನು ಸಂತೈಸಿದನು.