Isaiah · chapter 56 · verse 3
Isaiah 56:3 in Kannada
ಇಲ್ಲವೆ ಕರ್ತನೊಂದಿಗೆ ಅನ್ಯನ ಮಗನು ಸೇರಿಕೊಂಡು--ಕರ್ತನು ತನ್ನ ಜನರಿಂದ ನನ್ನನ್ನು ಸಂಪೂರ್ಣವಾಗಿ ಅಗಲಿಸುವನು ಎಂದು ಮಾತಾಡ ದಿರಲಿ; ಅಥವಾ ನಪುಂಸಕನು--ಇಗೋ, ನಾನು ಒಣಗಿದ ಮರವೆಂದು ಹೇಳದಿರಲಿ.
Illave kartanondige anyana maganu serikondu--kartanu tanna janarinda nannannu sampoornavaagi agalisuvanu endu maataada dirali; athavaa napunsakanu--igo, naanu onagida maravendu heladirali.
Isaiah 56:3 in English
- King James Version (KJV)
- Neither let the son of the stranger, that hath joined himself to the LORD, speak, saying, The LORD hath utterly separated me from his people: neither let the eunuch say, Behold, I [am] a dry tree.
- World English Bible (WEB)
- Let no foreigner who has joined himself to the LORD speak, saying, “The LORD will surely separate me from his people.” Do not let the eunuch say, “Behold, I am a dry tree.”
- American Standard Version (ASV)
- Neither let the foreigner, that hath joined himself to Jehovah, speak, saying, Jehovah will surely separate me from his people; neither let the eunuch say, Behold, I am a dry tree.
- Bible in Basic English (BBE)
- And let not the man from a strange country, who has been joined to the Lord, say, The Lord will certainly put a division between me and his people: and let not the unsexed man say, See, I am a dry tree.
- Darby Translation (DBY)
- And let not the son of the alien, that hath joined himself to Jehovah, speak saying, Jehovah hath entirely separated me from his people; neither let the eunuch say, Behold, I am a dry tree;
- Webster's Bible (WBS)
- Neither let the son of the stranger, that hath joined himself to the LORD, speak, saying, The LORD hath utterly separated me from his people: neither let the eunuch say, Behold, I [am] a dry tree.
- Young's Literal Translation (YLT)
- Nor speak let a son of the stranger, Who is joined unto Jehovah, saying: 'Jehovah doth certainly separate me from His people.' Nor say let the eunuch, 'Lo, I am a tree dried up,'
Read in context
- 1ಕರ್ತನು ಹೀಗನ್ನುತ್ತಾನೆ--ನ್ಯಾಯವನ್ನು ಕೈಕೊಳ್ಳಿರಿ, ನೀತಿಯಲ್ಲಿ ನಡೆಯಿರಿ; ಯಾಕಂದರೆ ನನ್ನ ರಕ್ಷಣೆಯು ಬರುವದಕ್ಕೂ ನನ್ನ ನೀತಿಯು ಪ್ರಕಟವಾಗುವದಕ್ಕೂ ಸವಿಾಪವಾಗಿದೆ.
- 2ಇದನ್ನು ಮಾಡುವ ಮನುಷ್ಯನೂ ಇದನ್ನು ಹಿಡಿದು ಕೊಳ್ಳುವವರ ಪುತ್ರನೂ ಅಂದರೆ ಸಬ್ಬತ್ ದಿನವನ್ನು ಅಪವಿತ್ರಮಾಡದೆ ಕೈಕೊಳ್ಳುವನೋ ಯಾವ ಕೇಡನ್ನು ಮಾಡದ ಹಾಗೆ ತನ್ನ ಕೈಯನ್ನು ಕಾಯುವನೋ ಅವನು ಧನ್ಯನು.
- 3ಇಲ್ಲವೆ ಕರ್ತನೊಂದಿಗೆ ಅನ್ಯನ ಮಗನು ಸೇರಿಕೊಂಡು--ಕರ್ತನು ತನ್ನ ಜನರಿಂದ ನನ್ನನ್ನು ಸಂಪೂರ್ಣವಾಗಿ ಅಗಲಿಸುವನು ಎಂದು ಮಾತಾಡ ದಿರಲಿ; ಅಥವಾ ನಪುಂಸಕನು--ಇಗೋ, ನಾನು ಒಣಗಿದ ಮರವೆಂದು ಹೇಳದಿರಲಿ.
- 4ಕರ್ತನು ತನ್ನ ಸಬ್ಬತ್ತನ್ನು ಕೈಕೊಂಡು ತನಗೆ ಮೆಚ್ಚಿಕೆಯಾದದ್ದನ್ನು ಆದುಕೊಂಡು ತನ್ನ ಒಡಂಬಡಿಕೆಯನ್ನು ಹಿಡಿದು ಕೊಂಡಿರುವ ನಪುಂಸಕರಿಗೆ--
- 5ನನ್ನ ಆಲಯದ ಲ್ಲಿಯೂ ಗೋಡೆಗಳ ಬಳಿಗೂ ಕುಮಾರ ಕುಮಾರ್ತೆ ಯರಿಗಿಂತ ಉತ್ತಮವಾದ ಸ್ಥಳವನ್ನೂ ಹೆಸರನ್ನೂ ನಾನು ಕೊಡುತ್ತೇನೆ. ಎಂದಿಗೂ ಅಳಿಯದ ಶಾಶ್ವತ ವಾದ ಹೆಸರನ್ನು ಅವರಿಗೆ ನಾನು ಕೊಡುವೆನು ಎಂದು ಹೇಳುತ್ತಾನೆ.
Cross references
- 1 Corinthians 6:17 1 ಕೊರಿಂಥದವರಿಗೆ 6:17ಆದರೆ ಕರ್ತನನ್ನು ಸೇರಿಕೊಳ್ಳುವವನು ಒಂದೇ ಆತ್ಮವಾಗಿದ್ದಾನೆ.
- Acts 10:34 ಅಪೊಸ್ತಲರ ಕೃತ್ಯಗಳು 10:34ಆಗ ಪೇತ್ರನು ತನ್ನ ಬಾಯಿ ತೆರೆದು ಹೇಳಿದ್ದೇನಂದರೆ--ನಿಜವಾಗಿಯೂ ದೇವರು ಪಕ್ಷಪಾತಿ ಅಲ್ಲವೆಂದು ನಾನು ತಿಳಿದಿದ್ದೇನೆ.
- Matthew 19:12–30 ಮತ್ತಾಯನು 19:12–30ಯಾಕಂದರೆ ತಮ್ಮ ತಾಯಿಯ ಗರ್ಭದಿಂದ ಹುಟ್ಟಿ ದಾಗಲೇ ಕೆಲವರು ನಪುಂಸಕರಾದವರಿದ್ದಾರೆ, ಮತ್ತು ಕೆಲವರು ಮನುಷ್ಯರಿಂದ ನಪುಂಸಕರಾಗಿ ಮಾಡಲ್ಪಟ್ಟ ವರು ಇದ್ದಾರೆ, ಇನ್ನು ಕೆಲವರು ಪರಲೋಕರಾಜ್ಯದ ನಿಮಿತ್ತವಾಗಿ ತಮ್ಮನ್ನು ತಾವೇ ನಪುಂಸಕರಾಗ ಮಾಡಿ ಕೊಂಡವರೂ ಇದ್ದಾರೆ; ಇದ ತರುವಾಯ ಆತನು ತನ್ನ ಕೈಗಳನ್ನಿಟ್ಟು ಪ್ರಾರ್ಥಿಸು ವಂತೆ ಕೆಲವರು ಚಿಕ್ಕಮಕ್ಕಳನ್ನು ಆತನ ಬಳಿಗೆ ತಂದರು. ಆಗ ಶಿಷ್ಯರು ಅವರನ್ನು ಗದರಿಸಿದರು. ಆದರೆ ಯೇಸು--ಚಿಕ್ಕಮಕ್ಕಳನ್ನು ಬಿಡಿರಿ, ನನ್ನ ಬಳಿಗೆ ಬಾರ ದಂತೆ ಅವುಗಳಿಗೆ ಅಡ್ಡಿ ಮಾಡಬೇಡಿರಿ; ಯಾಕಂದರೆ ಪರಲೋಕರಾಜ್ಯವು ಇಂಥವರದೇ ಅಂದನು. ಮತ್ತು ಆತನು ಅವುಗಳ ಮೇಲೆ ತನ್ನ ಕೈಗಳನ್ನಿಟ್ಟು ಅಲ್ಲಿಂದ ಹೊರಟು ಹೋದನು. ಆಗ ಇಗೋ, ಒಬ್ಬನು ಬಂದು ಆತನಿಗೆ-- ಒಳ್ಳೇ ಬೋಧಕನೇ, ನಾನು ನಿತ್ಯಜೀವವನ್ನು ಹೊಂದುವದಕ್ಕೆ ಯಾವ ಒಳ್ಳೇ ಕಾರ್ಯವನ್ನು ಮಾಡ ಬೇಕು ಎಂದು ಕೇಳಿದನು. ಆಗ ಆತನು ಅವನಿಗೆ--ನನ್ನನ್ನು ಒಳ್ಳೆಯವನೆಂದು ನೀನು ಯಾಕೆ ಕರೆಯುತ್ತೀ? ದೇವರೊಬ್ಬನೇ ಹೊರತು ಮತ್ತಾವನೂ ಒಳ್ಳೆಯವ ನಲ್ಲ; ಆದರೆ ನೀನು ಜೀವದಲ್ಲಿ ಸೇರಬೇಕೆಂದು ಅಪೇ ಕ್ಷಿಸಿದರೆ(ದೇವರ)ಆಜ್ಞೆಗಳನ್ನು ಕೈಕೊಂಡು ನಡೆದುಕೋ ಅಂದನು. ಅವನು ಆತನಿಗೆ--ಅವು ಯಾವವು ಎಂದು ಕೇಳಿದನು. ಅದಕ್ಕೆ ಯೇಸು--ನೀನು ನರಹತ್ಯ ಮಾಡಬಾರದು, ನೀನು ವ್ಯಭಿಚಾರ ಮಾಡಬಾರದು, ನೀನು ಕದಿಯ ಬಾರದು, ನೀನು ಸುಳ್ಳುಸಾಕ್ಷಿ ಹೇಳ ಬಾರದು. ನಿನ್ನ ತಂದೆ ತಾಯಿಗಳನ್ನು ಸನ್ಮಾನಿಸಬೇಕು; ಮತ್ತು ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಮಾಡ ಬೇಕು ಎಂದು ಹೇಳಿದನು. ಆಗ ಆ ಯೌವನಸ್ಥನು ಆತನಿಗೆ--ಇವೆಲ್ಲವುಗಳನ್ನು ನಾನು ಬಾಲ್ಯದಿಂದಲೇ ಕೈಕೊಂಡಿದ್ದೇನೆ; ಇನ್ನು ನನಗೇನು ಕಡಿಮೆಯಾಗಿದೆ ಎಂದು ಕೇಳಿದನು. ಯೇಸು ಅವನಿಗೆ--ನೀನು ಸಂಪೂರ್ಣನಾಗಲು ಅಪೇಕ್ಷಿಸಿದರೆ ಹೋಗಿ ನಿನಗೆ ಇದ್ದದ್ದನ್ನು ಮಾರಿ ಬಡವರಿಗೆ ಕೊಡು; ಆಗ ನಿನಗೆ ಪರಲೋಕದಲ್ಲಿ ಸಂಪತ್ತಿರುವದು; ಮತ್ತು ನೀನು ಬಂದು ನನ್ನನ್ನು ಹಿಂಬಾಲಿಸು ಎಂದು ಹೇಳಿದನು. ಆದರೆ ಆ ಯೌವನಸ್ಥನು ಆತನು ಹೇಳಿದ್ದನ್ನು ಕೇಳಿ ದುಃಖ ದಿಂದ ಹೊರಟುಹೋದನು. ಯಾಕಂದರೆ ಅವನಿಗೆ ಬಹಳ ಆಸ್ತಿ ಇತ್ತು. ತರುವಾಯ ಯೇಸು ತನ್ನ ಶಿಷ್ಯರಿಗೆ-- ಐಶ್ವರ್ಯ ವಂತನು ಪರಲೋಕ ರಾಜ್ಯದಲ್ಲಿ ಸೇರುವದು ಕಷ್ಟ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ. ತಿರಿಗಿ ನಾನು ನಿಮಗೆ ಹೇಳುವದೇನಂದರೆ-- ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವದಕ್ಕಿಂತ ಸೂಜಿಯ ಕಣ್ಣಿನೊಳಗೆ ಒಂಟೆಯು ನುಗ್ಗುವದು ಸುಲಭ ಅಂದನು. ಇದನ್ನು ಕೇಳಿದಾಗ ಆತನ ಶಿಷ್ಯರು ಅತ್ಯಂತ ವಿಸ್ಮಯಗೊಂಡು-- ಹಾಗಾದರೆ ರಕ್ಷಿಸಲ್ಪಡುವವರು ಯಾರು ಎಂದು ಕೇಳಿದರು. ಅದಕ್ಕೆ ಯೇಸು ಅವರನ್ನು ದೃಷ್ಟಿಸಿ ನೋಡಿ ಅವರಿಗೆ--ಇದು ಮನುಷ್ಯರಿಗೆ ಅಸಾಧ್ಯ; ಆದರೆ ದೇವರಿಗೆ ಎಲ್ಲವು ಸಾಧ್ಯವೇ ಎಂದು ಹೇಳಿದನು. ಆಮೇಲೆ ಪೇತ್ರನು ಆತನಿಗೆ--ಇಗೋ, ನಾವು ಎಲ್ಲವನ್ನು ಬಿಟ್ಟು ನಿನ್ನನ್ನು ಹಿಂಬಾಲಿಸಿದೆವು; ಆದದ ರಿಂದ ನಮಗೆ ಏನು ದೊರೆಯುವದು ಎಂದು ಕೇಳಿದನು. ಯೇಸು ಅವರಿಗೆ--ನಾನು ನಿಮಗೆ ನಿಜವಾಗಿ ಹೇಳುತ್ತೇನೆ--ಹೊಸ ಸೃಷ್ಟಿಯಲ್ಲಿ ಮನುಷ್ಯಕುಮಾರನು ತನ್ನ ಮಹಿಮೆಯ ಸಿಂಹಾಸನ ದಲ್ಲಿ ಕೂತುಕೊಂಡಿರಲು ನನ್ನನ್ನು ಹಿಂಬಾಲಿಸಿದವರಾದ ನೀವು ಸಹ ಹನ್ನೆರಡು ಸಿಂಹಾಸನಗಳ ಮೇಲೆ ಕೂತುಕೊಂಡು ಇಸ್ರಾಯೇಲಿನ ಹನ್ನೆರಡು ಗೋತ್ರ ಗಳವರಿಗೆ ನ್ಯಾ ಮತ್ತು ತನ್ನ ಮನೆಗಳನ್ನಾಗಲೀ ಸಹೋದರರನ್ನಾಗಲೀ ಸಹೋದರಿ ಯರನ್ನಾಗಲೀ ತಂದೆಯನ್ನಾಗಲೀ ತಾಯಿಯನ್ನಾಗಲೀ ಮಕ್ಕಳನ್ನಾಗಲೀ ಭೂಮಿಯನ್ನಾಗಲೀ ನನ್ನ ಹೆಸರಿ ನಿಮಿತ್ತವಾಗಿ ಬಿಟ್ಟುಬಿಡುವ ಪ್ರತಿಯೊಬ್ಬನು ನೂರರಷ್ಟು ಹೊಂದಿಕೊಳ್ಳುವನು; ಮತ್ತು ನಿತ್ಯಜೀವವನ್ನು ಬಾಧ್ಯ ವಾಗಿ ಹೊಂದುವನುಆದರೆ ಮೊದಲನೆಯ ವರಾದ ಬಹುಮಂದಿ ಕಡೆಯವರಾಗುವರು; ಮತ್ತು ಕಡೆಯವರಾದವರು ಮೊದಲನೆಯವರಾಗುವರು. ಆದರೆ ಮೊದಲನೆಯ ವರಾದ ಬಹುಮಂದಿ ಕಡೆಯವರಾಗುವರು; ಮತ್ತು ಕಡೆಯವರಾದವರು ಮೊದಲನೆಯವರಾಗುವರು.
- Matthew 8:10–11 ಮತ್ತಾಯನು 8:10–11ಯೇಸು ಅದನ್ನು ಕೇಳಿ ಆಶ್ಚರ್ಯಪಟ್ಟು ತನ್ನ ಹಿಂದೆ ಬರುತ್ತಿದ್ದವರಿಗೆ--ನಾನು ಇಂಥಾ ದೊಡ್ಡ ನಂಬಿಕೆಯನ್ನು ಕಾಣಲಿಲ್ಲ, ಇಸ್ರಾಯೇಲಿನಲ್ಲಿಯೂ ಕಾಣಲಿಲ್ಲ ಎಂದು ನಿಮಗೆ ನಿಜವಾಗಿ ಹೇಳುತ್ತೇನೆ ಅಂದನು. ನಾನು ನಿಮಗೆ ಹೇಳುವದೇನಂದರೆ--ಬಹಳ ಜನರು ಪೂರ್ವದಿಂದಲೂ ಪಶ್ಚಿಮದಿಂದಲೂ ಬಂದು ಪರ ಲೋಕರಾಜ್ಯದಲ್ಲಿ ಅಬ್ರಹಾಮ್ ಇಸಾಕ್ ಯಾಕೋಬ್ ಅವರೊಂದಿಗೆ ಕೂತುಕೊಳ್ಳುವರು.
- Luke 7:6–8 ಲೂಕನು 7:6–8ಆಗ ಯೇಸು ಅವರೊಂದಿಗೆ ಹೋದನು. ಆತನು ಮನೆಗೆ ಇನ್ನೂ ಸ್ವಲ್ಪ ದೂರ ಇರುವಾಗ ಶತಾಧಿಪತಿಯು ಸ್ನೇಹಿತರನ್ನು ಆತನ ಬಳಿಗೆ ಕಳುಹಿಸಿ ಆತನಿಗೆ--ಕರ್ತನೇ, ನಿನ್ನನ್ನು ತೊಂದರೆಪಡಿಸಿ ಕೊಳ್ಳಬೇಡ; ಯಾಕಂದರೆ ನೀನು ನನ್ನ ಮನೆಯಲ್ಲಿ ಪ್ರವೇಶಿಸುವದಕ್ಕೆ ನಾನು ಯೋಗ್ಯನಲ್ಲ. ಇಲ್ಲವೆ ನಾನೂ ನಿನ್ನ ಬಳಿಗೆ ಬರುವದಕ್ಕೆ ಯೋಗ್ಯನಲ್ಲವೆಂದು ಎಣಿಸಿಕೊಂಡಿದ್ದೇನೆ; ಆದರೆ ನೀನು ಒಂದು ಮಾತು ಹೇಳು, ಆಗ ನನ್ನ ಆಳು ಗುಣಹೊಂದುವನು; ನಾನು ಸಹ ಅಧಿಕಾರದ ಕೆಳಗಿರುವವನು; ನನ್ನ ಅಧೀನದಲ್ಲಿಯೂ ಸೈನಿಕರಿದ್ದಾರೆ ಮತ್ತು ನಾನು ಒಬ್ಬನಿಗೆ--ಹೋಗು ಅಂದರೆ ಅವನು ಹೋಗುತ್ತಾನೆ; ಮತ್ತೊಬ್ಬನಿಗೆ--ಬಾ ಅಂದರೆ ಅವನು ಬರುತ್ತಾನೆ; ನನ್ನ ಸೇವಕನಿಗೆ--ಇದನ್ನು ಮಾಡು ಅಂದರೆ ಅವನು ಅದನ್ನು ಮಾಡುತ್ತಾನೆ ಎಂದು ಹೇಳಿ ಕಳುಹಿಸಿ
- Daniel 1:3–21 ದಾನಿಯೇಲನು 1:3–21ಅರಸನು ತನ್ನ ಕಂಚುಕಿಯರ ಯಜಮಾನನಾದ ಅಶ್ವೆವಜನ ಸಂಗಡ ಮಾತನಾಡಿ ಅವನು ಇಸ್ರಾಯೇಲಿನ ಮಕ್ಕಳೊಳಗೆ ಕೆಲವರನ್ನು ಅರಸನ ಸಂತಾನದೊಳ ಗಿಂದಲೂ ಮತ್ತು ಪ್ರಧಾನರಲ್ಲಿಯೂ ಕಳಂಕ ಇಲ್ಲ ದವರಾಗಿಯೂ ಸುಂದರರಾಗಿಯೂ ಸಕಲ ಜ್ಞಾನದಲ್ಲಿ ಪ್ರವೀಣರಾಗಿಯೂ ತಿಳುವಳಿಕೆಯಲ್ಲಿ ನಿಪುಣರಾ ಗಿಯೂ ಮತ್ತು ವಿಜ್ಞಾನದಲ್ಲಿ ತಿಳುವಳಿಕೆಯುಳ್ಳವ ರಾಗಿಯೂ ಅರಸನ ಅರಮನೆಯಲ್ಲಿ ಸೇವೆಮಾಡಲು ಸಾಮರ್ಥ್ಯವುಳ್ಳವರಾಗಿಯೂ ಇರುವ ಯೌವನಸ್ಥರನ್ನು ತಂದು ಕಸ್ದೀಯರ ವಿದ್ಯೆಯನ್ನೂ ಭಾಷೆಯನ್ನೂ ಅವರಿಗೆ ಬೋಧಿಸಬೇಕೆಂದು ಆಜ್ಞಾಪಿಸಿದನು. ಅರಸನು ರಾಜ ಭೋಜನದಲ್ಲಿಯೂ ತಾನು ಕುಡಿಯುವ ದ್ರಾಕ್ಷಾರಸ ದಲ್ಲಿಯೂ ಪ್ರತಿದಿನವೂ ಅವರಿಗೆ ಪಾಲನ್ನು ನೇಮಿ ಸಿದನು; ಹೀಗೆ ಅವರು ಮೂರು ವರುಷಗಳ ಕಾಲ ಪೋಷಿಸಲ್ಪಟ್ಟ ಮೇಲೆ ಅರಸನ ಮುಂದೆ ನಿಲ್ಲತಕ್ಕವರಾಗುವರು. ಇವರಲ್ಲಿ ಯೆಹೂದನ ಮಕ್ಕಳೊಳಗಿಂದ ದಾನಿಯೇಲ, ಹನನ್ಯ, ವಿಾಶಾಯೇಲ, ಅಜರ್ಯ ಎಂಬವರಿದ್ದರು. ಇವರಿಗೆ ಕಂಚುಕಿಯ ಯಜಮಾ ನನು ಹೆಸರುಗಳನ್ನಿಟ್ಟನು, ಹೇಗಂದರೆ ದಾನಿಯೇಲ ನನ್ನು ಬೇಲ್ತೆಶಚ್ಚರನೆಂದೂ ಹನನ್ಯನನ್ನು ಶದ್ರಕ್ನೆಂದೂ ವಿಾಶಾಯೇಲನನ್ನು ಮೇಶಕ್ನೆಂದೂ ಅಜರ್ಯನಿಗೆ ಅಬೆದ್ನೆಗೋ ಎಂದು ಕರೆದನು. ಆದರೆ ದಾನಿಯೇಲನು ತಾನು ಅರಸನ ಭೋಜನದ ಪಾಲಿನಿಂದಲಾದರೂ ಅವನು ಕುಡಿಯುವ ದ್ರಾಕ್ಷಾರಸದಿಂದಾದರೂ ತನ್ನನ್ನು ಅಶುದ್ಧಪಡಿಸಿಕೊಳ್ಳುವದಿಲ್ಲವೆಂದು ತನ್ನ ಹೃದಯದಲ್ಲಿ ನಿಶ್ಚಯಿಸಿಕೊಂಡನು; ಆದುದರಿಂದ ತಾನು ಅಶುದ್ಧ ವಾಗದ ಹಾಗೆ ಕಂಚುಕಿಯರ ಯಜಮಾನನ್ನು ಬೇಡಿ ಕೊಂಡನು. ಆಗ ದೇವರು ದಾನಿಯೇಲನನ್ನು ಕಂಚುಕಿಯರ ಯಜಮಾನನ ದಯೆಯಲ್ಲಿಯೂ ಕರುಣೆ ಯಲ್ಲಿಯೂ ಸೇರಿಸಿದನು. ಕಂಚುಕಿಯ ಯಜಮಾ ನನು ಹೇಳಿದ್ದೇನಂದರೆ--ನಿಮ್ಮ ಅನ್ನಪಾನಾದಿಗಳನ್ನು ನೇಮಿಸಿದ ನನ್ನ ಒಡೆಯನಾದ ಅರಸನಿಗೆ ನಾನು ಭಯಪಡುತ್ತೇನೆ; ಅವನು ಯಾಕೆ ನಿಮ್ಮ ಮುಖಗಳನ್ನು ನಿಮ್ಮ ಸ್ಥಿತಿಯಲ್ಲಿಯೇ ಇರುವ ಯೌವನಸ್ಥರಿಗಿಂತ ಕಳೆಗುಂದಿದವುಗಳನ್ನಾಗಿ ನೋಡಬೇಕು? ಈ ಪ್ರಕಾರ ನೀವು ಅರಸನ ಹತ್ತಿರ ನನ್ನ ತಲೆಗೆ ಅಪಾಯವನ್ನು ಬರಮಾಡುತ್ತೀರಿ ಅಂದನು. ಆ ಮೇಲೆ ಕಂಚುಕಿಯರ ಯಜಮಾನನು ದಾನಿಯೇಲ್, ಹನನ್ಯ, ವಿಾಶಾ ಯೇಲ, ಅಜರ್ಯ ಇವರನ್ನು ನೋಡಿಕೊಳ್ಳುವದಕ್ಕೆ ಇಟ್ಟಿದ್ದ ಮೇಲ್ಜಾರನಿಗೆ ದಾನಿಯೇಲನು ಹೇಳಿದ್ದೇ ನಂದರೆ-- ನಿನ್ನ ಸೇವಕರನ್ನು ಹತ್ತು ದಿವಸಗಳ ವರೆಗೂ ಪರೀಕ್ಷಿಸಿ ನೋಡು, ಅವರು ನಮಗೆ ಆಹಾರಕ್ಕೆ ಕಾಯಿಪಲ್ಯಗಳನ್ನು ಕುಡಿಯುವದಕ್ಕೆ ನೀರನ್ನು ಕೊಡಲಿ. ಆಗ ನಮ್ಮ ಮುಖಗಳು ಅರಸನ ಭೋಜನದ ಪಾಲನ್ನು ತಿನ್ನುವ ಯೌವನಸ್ಥರ ಮುಖಗಳು ನಿಮ್ಮ ಮುಂದೆ ಕಾಣಬರಲಿ; ನಿನಗೆ ಕಾಣುವ ಪ್ರಕಾರ ನಿನ್ನ ಸೇವಕರಿಗೆ ನೋಡುವ ಹಾಗೆ ಮಾಡು ಎಂದು ಬೇಡಿ ಕೊಂಡನು. ಹಾಗೆಯೇ ಅವನು ಈ ಕಾರ್ಯದ ವಿಷಯವಾಗಿ ಒಪ್ಪಿ ಹತ್ತು ದಿವಸಗಳ ವರೆಗೂ ಅವರನ್ನು ಪರೀಕ್ಷಿಸಿದನು. ಹತ್ತು ದಿವಸಗಳ ಕೊನೆಯ ವರೆಗೂ ಅರಸನ ಭೋಜನದ ಪಾಲನ್ನು ತಿನ್ನುವ ಯೌವನಸ್ಥರೆ ಲ್ಲರಿಗಿಂತ ಇವರ ಮುಖಗಳು ನೋಡುವದಕ್ಕೆ ಸುಂದರ ವಾಗಿಯೂ ಶರೀರದಲ್ಲಿ ಪುಷ್ಟರಾಗಿಯೂ ಕಾಣಿಸಿದವು. ಮೇಲ್ವಿಚಾರಕನು ಅವರ ಭೋಜನದ ಪಾಲನ್ನು ಅವರು ಕುಡಿಯುವಂತ ದ್ರಾಕ್ಷಾರಸವನ್ನು ತೆಗೆದುಹಾಕಿ ಅವರಿಗೆ ಸಸ್ಯಾಹಾರವನ್ನು ಕೊಟ್ಟನು. ಈ ನಾಲ್ಕು ಯೌವನಸ್ಥರ ವಿಷಯವು: ದೇವರು ಅವರಿಗೆ ಎಲ್ಲಾ ವಿದ್ಯೆಯಲ್ಲಿಯೂ ಜ್ಞಾನದಲ್ಲಿಯೂ ತಿಳುವಳಿಕೆಯನ್ನೂ ವಿವೇಕವನ್ನೂ ಕೊಟ್ಟನು; ದಾನಿಯೇಲನು ಸಕಲ ದರ್ಶನಗಳಲ್ಲಿಯೂ ಕನಸುಗಳಲ್ಲಿಯೂ ತಿಳುವಳಿಕೆ ಯುಳ್ಳವನಾಗಿದ್ದನು. ಆಗ ಅರಸನು ಅವರನ್ನು ತರಬೇಕೆಂದು ಹೇಳಿದ್ದರಿಂದ ನೇಮಿಸಿದ ದಿವಸಗಳ ಕೊನೆಯಲ್ಲಿ ಕಂಚುಕಿಯರ ಯಜಮಾನನು ಅವರನ್ನು ನೆಬೂಕದ್ನೆಚ್ಚರನ ಮುಂದೆ ತಂದನು. ಅರಸನು ಅವರ ಸಂಗಡ ಮಾತನಾಡಿದನು; ಅವರೆಲ್ಲರಲ್ಲಿ ದಾನಿ ಯೇಲ, ಹನನ್ಯ, ವಿಾಶಾಯೇಲ ಮತ್ತು ಅಜರ್ಯ ಇವರ ಹಾಗೆ ಒಬ್ಬನೂ ಸಿಗಲಿಲ್ಲ. ಆದದರಿಂದಲೇ ಇವರು ಅರಸನ ಸನ್ನಿಧಾನದಲ್ಲಿ ನಿಂತರು. ಅರಸನು ಅವರ ಹತ್ತಿರ ವಿಚಾರಿಸಿದ ಸಮಸ್ತ ಜ್ಞಾನ ವಿವೇಕಗಳ ವಿಷಯದಲ್ಲಿ ತನ್ನ ರಾಜ್ಯದಲ್ಲಿರುವ ಎಲ್ಲಾ ಮಂತ್ರಗಾರ ರಿಗಿಂತಲೂ ಜೋತಿಷ್ಯರಿಗಿಂತಲೂ ಇವರೇ ಹತ್ತರಷ್ಟು ಉತ್ತಮರೆಂದು ಕಂಡರು.ದಾನಿಯೇಲನು ರಾಜ ನಾದ ಕೋರೆಷನ ಆಳಿಕೆಯ ಮೊದಲನೆಯ ವರುಷದ ತನಕ ಸನ್ನಿಧಿಸೇವಕನಾಗಿಯೇ ಇದ್ದನು. ದಾನಿಯೇಲನು ರಾಜ ನಾದ ಕೋರೆಷನ ಆಳಿಕೆಯ ಮೊದಲನೆಯ ವರುಷದ ತನಕ ಸನ್ನಿಧಿಸೇವಕನಾಗಿಯೇ ಇದ್ದನು.
- Isaiah 39:7 ಯೆಶಾಯ 39:7ನಿನ್ನಿಂದ ಹುಟ್ಟುವಂಥ ನೀನು ಪಡೆದ ನಿನ್ನ ಮಕ್ಕಳನ್ನು ತೆಗೆದು ಕೊಂಡು ಹೋಗುವರು; ಬಾಬೆಲಿನ ಅರಸನ ಅರಮನೆ ಯಲ್ಲಿ ಅವರು ಕಂಚುಕಿಗಳಾಗಿರುವರು ಎಂದು ಕರ್ತನು ಹೇಳುತ್ತಾನೆ ಅಂದನು.ಆಗ ಹಿಜ್ಕೀಯನು--ಹೇಗೂ ನನ್ನ (ದಿನಗಳಲ್ಲಿ) ಜೀವಮಾನ ದಲ್ಲಿ ಸಮಾಧಾನವು ಸತ್ಯವು ಇರುವವು ಎಂದು ಅಂದುಕೊಂಡು ಯೆಶಾಯ ನಿಗೆ--ನೀನು ಹೇಳಿದ ಕರ್ತನ ವಾಕ್ಯವು ಒಳ್ಳೇದೆ ಅಂದನು.
- Isaiah 14:1 ಯೆಶಾಯ 14:1ಕರ್ತನು ಯಾಕೋಬ್ಯರನ್ನು ಕರುಣಿಸಿ ಮತ್ತೆ (ಇನ್ನೂ) ಇಸ್ರಾಯೇಲ್ಯರನ್ನು ಆದುಕೊಂಡು ಅವರನ್ನು ತಮ್ಮ ಸ್ವಂತ ದೇಶದಲ್ಲಿ ಸೇರಿಸಬೇಕೆಂದಿದ್ದಾನೆ. ಅನ್ಯರು ಅವರೊಂದಿಗೆ ಕೂಡಿ ಬಂದು ಯಾಕೋಬನ ಮನೆತನಕ್ಕೆ ಸೇರಿಕೊಳ್ಳುವರು.
- Romans 15:16 ರೋಮಾಪುರದವರಿಗೆ 15:16ಹೀಗೆ ಅನ್ಯಜನಗಳೆಂಬ ಅರ್ಪಣೆಯು ಪವಿತ್ರಾತ್ಮನ ಮೂಲಕ ಶುದ್ಧೀಕರಿಸಲ್ಪಟ್ಟು ಆತನಿಂದ ಅಂಗೀಕಾರವಾಗುವಂತೆ ನಾನು ದೇವರ ಸುವಾರ್ತಾ ಸೇವೆಯನ್ನು ನಡಿಸುತ್ತಾ ಅನ್ಯಜನರಿಗೆ ಯೇಸು ಕ್ರಿಸ್ತನ ಸೇವಕನಾಗಿರುವೆನು.
- Zechariah 8:20–23 ಜೆಕರ್ಯ 8:20–23ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಜನಗಳೂ ಅನೇಕ ಪಟ್ಟಣಗಳ ನಿವಾಸಿಗಳೂ ಇನ್ನು ಬರುವರು; ಒಂದರ ನಿವಾಸಿಗಳು ಮತ್ತೊಂದಕ್ಕೆ ಹೋಗಿ--ನಾವು ಕರ್ತನ ಮುಂದೆ ಬೇಡಿಕೊಳ್ಳುವದಕ್ಕೂ ಸೈನ್ಯಗಳ ಕರ್ತನನ್ನು ಹುಡುಕುವದಕ್ಕೂ ಬೇಗ ಹೋಗೋಣ; ನಾನು ಕೂಡ ಹೋಗುತ್ತೇನೆ ಎಂದು ಹೇಳುವರು. ಹೌದು, ಅನೇಕ ಜನಗಳೂ ಬಲವಾದ ಜನಾಂಗಗಳೂ ಸೈನ್ಯಗಳ ಕರ್ತನನ್ನು ಯೆರೂಸಲೇಮಿನಲ್ಲಿ ಹುಡುಕುವದಕ್ಕೂ ಕರ್ತನ ಮುಂದೆ ಬೇಡಿಕೊಳ್ಳುವದಕ್ಕೂ ಬರುವವು.ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಆ ದಿವಸ ಗಳಲ್ಲಿ ಜನಾಂಗಗಳ ಸಮಸ್ತ ಭಾಷೆಯವರೊಳಗಿಂದ ಹತ್ತು ಮನುಷ್ಯರು ಯೆಹೂದ್ಯನಾಗಿರುವವನ ಸೆರಗನ್ನು ಹಿಡಿದು--ನಾವು ನಿಮ್ಮ ಸಂಗಡ ಹೋಗುತ್ತೇವೆ; ಯಾಕಂದರೆ ನಿಮ್ಮ ಸಂಗಡ ದೇವರು ಇದ್ದಾನೆಂದು ಕೇಳಿದ್ದೇವೆ ಎಂದು ಹೇಳುವರು. ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಆ ದಿವಸ ಗಳಲ್ಲಿ ಜನಾಂಗಗಳ ಸಮಸ್ತ ಭಾಷೆಯವರೊಳಗಿಂದ ಹತ್ತು ಮನುಷ್ಯರು ಯೆಹೂದ್ಯನಾಗಿರುವವನ ಸೆರಗನ್ನು ಹಿಡಿದು--ನಾವು ನಿಮ್ಮ ಸಂಗಡ ಹೋಗುತ್ತೇವೆ; ಯಾಕಂದರೆ ನಿಮ್ಮ ಸಂಗಡ ದೇವರು ಇದ್ದಾನೆಂದು ಕೇಳಿದ್ದೇವೆ ಎಂದು ಹೇಳುವರು.
- Zephaniah 2:11 ಚೆಫನ್ಯ 2:11ಕರ್ತನು ಅವರಿಗೆ ಭಯಂಕರನಾಗಿ ರುವನು. ಆತನು ಭೂಮಿಯ ಎಲ್ಲಾ ದೇವರುಗಳನ್ನು ಕ್ಷೀಣಮಾಡುವನು; ಅನ್ಯಜನಾಂಗಗಳ ದ್ವೀಪಗಳವ ರೆಲ್ಲರು ತಮ್ಮ ತಮ್ಮ ಸ್ಥಳಗಳಿಂದ ಆತನನ್ನು ಆರಾ ಧಿಸುವರು.
- Ephesians 2:22 ಎಫೆಸದವರಿಗೆ 2:22ಆತನಲ್ಲಿ ನೀವು ಸಹ ಆತ್ಮನ ಮೂಲಕವಾಗಿ ದೇವರಿಗೆ ನಿವಾಸಸ್ಥಾನವಾಗುವಂತೆ ಒಟ್ಟಾಗಿ ಕಟ್ಟಲ್ಪಡುತ್ತಾ ಇದ್ದೀರಿ.