Isaiah · chapter 58 · verse 1
Isaiah 58:1 in Kannada
ಗಟ್ಟಿಯಾಗಿ ಕೂಗು, ಹಿಂತೆಗೆಯಬೇಡ. ತುತೂರಿಯಂತೆ ನಿನ್ನ ಸ್ವರವನ್ನೆತ್ತು, ನನ್ನ ಜನರಿಗೆ ಅವರ ದ್ರೋಹವನ್ನೂ ಯಾಕೋಬನ ಮನೆಯವರಿಗೆ ಅವರ ಪಾಪವನ್ನೂ ತೋರಿಸು.
Gattiyaagi koogu, hintegeyabeda. Tutooriyante ninna svaravannettu, nanna janarige avara drohavannoo yaakobana maneyavarige avara paapavannoo torisu.
Isaiah 58:1 in English
- King James Version (KJV)
- Cry aloud, spare not, lift up thy voice like a trumpet, and shew my people their transgression, and the house of Jacob their sins.
- World English Bible (WEB)
- “Cry aloud! Don’t spare! Lift up your voice like a trumpet! Declare to my people their disobedience, and to the house of Jacob their sins.
- American Standard Version (ASV)
- Cry aloud, spare not, lift up thy voice like a trumpet, and declare unto my people their transgression, and to the house of Jacob their sins.
- Bible in Basic English (BBE)
- Make a loud cry, do not be quiet, let your voice be sounding like a horn, and make clear to my people their evil doings, and to the family of Jacob their sins.
- Darby Translation (DBY)
- Cry aloud, spare not, lift up thy voice like a trumpet, and declare unto my people their transgression, and to the house of Jacob their sins.
- Webster's Bible (WBS)
- Cry aloud, spare not, lift up thy voice like a trumpet, and show my people their transgression, and the house of Jacob their sins.
- Young's Literal Translation (YLT)
- Call with the throat, restrain not, As a trumpet lift up thy voice, And declare to My people their transgression, And to the house of Jacob their sins;
Read in context
- 1ಗಟ್ಟಿಯಾಗಿ ಕೂಗು, ಹಿಂತೆಗೆಯಬೇಡ. ತುತೂರಿಯಂತೆ ನಿನ್ನ ಸ್ವರವನ್ನೆತ್ತು, ನನ್ನ ಜನರಿಗೆ ಅವರ ದ್ರೋಹವನ್ನೂ ಯಾಕೋಬನ ಮನೆಯವರಿಗೆ ಅವರ ಪಾಪವನ್ನೂ ತೋರಿಸು.
- 2ಆದಾಗ್ಯೂ ಅವರು ನನ್ನನ್ನು ಪ್ರತಿನಿತ್ಯವೂ ಹುಡುಕು ತ್ತಾರೆ. ನನ್ನ ಮಾರ್ಗಗಳನ್ನು ತಿಳಿದುಕೊಳ್ಳುವದರಲ್ಲಿ ಸಂತೋಷಪಡುತ್ತಾರೆ. ತನ್ನ ದೇವರ ನ್ಯಾಯವನ್ನು ಬಿಡದೆ ನೀತಿಯನ್ನಾಚರಿಸುವ ಜನಾಂಗದ ಹಾಗೆಯೇ ನೀತಿಯುಳ್ಳ ನ್ಯಾಯಗಳನ್ನು ನನ್ನಿಂದ ಕೇಳುತ್ತಾರೆ. ದೇವರನ್ನು ಸವಿಾಪಿಸುವದರಲ್ಲಿ ಸಂತೋಷಿಸುತ್ತಾರೆ.
- 3ನಾವು ಉಪವಾಸ ಮಾಡಿದ್ದೇವೆ, ನೀನು ಯಾಕೆ ನೋಡುವದಿಲ್ಲ? ನಮ್ಮ ಪ್ರಾಣವನ್ನು ಕುಂದಿಸಲು ನೀನು ಗಮನಿಸದಿರುವದೇಕೆ ಎಂದು ಅವರು ಅಂದು ಕೊಳ್ಳುತ್ತಾರೆ; ಇಗೋ, ನಿಮ್ಮ ಉಪವಾಸದ ದಿನದಲ್ಲಿ ನಿಮ್ಮ ಇಷ್ಟವನ್ನು ತೀರಿಸುತ್ತೀರಿ ಮತ್ತು ನಿಮ್ಮ ಎಲ್ಲಾ ದುಡಿತವನ್ನು ನಿರ್ಬಂಧಿಸುತ್ತೀರಿ.
Cross references
- Titus 2:15 ತೀತನಿಗೆ 2:15ಈ ಕಾರ್ಯಗಳ ವಿಷಯದಲ್ಲಿ ಮಾತನಾಡುತ್ತಾ ಎಚ್ಚರಿಸುತ್ತಾ ಪೂರ್ಣ ಅಧಿಕಾರದಿಂದ ಖಂಡಿಸುತ್ತಾ ಇರು. ಯಾರೂ ನಿನ್ನನ್ನು ತಿರಸ್ಕರಿಸದಿರಲಿ.
- Hosea 8:1 ಹೋಶೇಯ 8:1ನಿನ್ನ ಬಾಯಿಗೆ ತುತೂರಿಯನ್ನು ಇಟ್ಟುಕೋ, ಅವರು ನನ್ನ ಒಡಂಬಡಿಕೆಯನ್ನು ವಿಾರಿ ನನ್ನ ನ್ಯಾಯಪ್ರಮಾಣಕ್ಕೆ ವಿರುದ್ಧವಾಗಿ ಅಪರಾಧ ಮಾಡಿದ್ದರಿಂದ ಅವನು ಹದ್ದಿನ ಹಾಗೆ ಕರ್ತನ ಆಲಯಕ್ಕೆ ವಿರುದ್ಧವಾಗಿ ಬರುತ್ತಾನೆ.
- Acts 20:26–27 ಅಪೊಸ್ತಲರ ಕೃತ್ಯಗಳು 20:26–27ಆದಕಾರಣ ಎಲ್ಲಾ ಮನುಷ್ಯರ ರಕ್ತದ ವಿಷಯದಲ್ಲಿ ನಾನು ನಿರ್ದೋಷಿಯಾಗಿದ್ದೇನೆಂಬದಕ್ಕೆ ಈ ದಿವಸ ನೀವೇ ನನಗೆ ಸಾಕ್ಷಿಗಳು. ಯಾಕಂದರೆ ದೇವರ ಸಂಕಲ್ಪ ವನ್ನೆಲ್ಲಾ ನಿಮಗೆ ತಿಳಿಸುವದರಲ್ಲಿ ನಾನು ಹಿಂದೆಗೆಯ ಲಿಲ್ಲ.
- Acts 7:51–52 ಅಪೊಸ್ತಲರ ಕೃತ್ಯಗಳು 7:51–52ಬಗ್ಗದ ಕುತ್ತಿಗೆಯುಳ್ಳವರೇ, ಹೃದಯದಲ್ಲಿಯೂ ಕಿವಿಗಳಲ್ಲಿಯೂ ಸುನ್ನತಿಯಿಲ್ಲದವರೇ, ನಿಮ್ಮ ಪಿತೃಗಳು ಹೇಗೋ ಹಾಗೆಯೇ ನೀವು ಯಾವಾಗಲೂ ಪವಿತ್ರಾತ್ಮನನ್ನು ಎದುರಿಸುವವರಾಗಿದ್ದೀರಿ. ಪ್ರವಾದಿ ಗಳಲ್ಲಿ ನಿಮ್ಮ ಪಿತೃಗಳು ಹಿಂಸೆಪಡಿಸದವರು ಯಾರಿ ದ್ದಾರೆ? ಅವರು ಆ ನೀತಿವಂತನ ಆಗಮನದ ವಿಷಯದಲ್ಲಿ ಮುಂತಿಳಿಸಿದವರನ್ನು ಕೊಂದರು. ನೀವು ಈಗ ಆತನನ್ನು ಹಿಡುಕೊಟ್ಟು ಕೊಂದವರಾದಿರಿ.
- Ezekiel 3:17–21 ಯೆಹೆಜ್ಕೇಲನು 3:17–21ಮನುಷ್ಯಪುತ್ರನೇ, ನಾನು ನಿನ್ನನ್ನು ಇಸ್ರಾಯೇ ಲಿನ ಮನೆಯನ್ನು ಕಾಯಲು ಕಾವಲುಗಾರನನ್ನಾಗಿ ಮಾಡಿದ್ದೇನೆ. ಆದದರಿಂದ ನನ್ನ ವಾಕ್ಯವನ್ನು ನನ್ನ ಬಾಯಿಂದ ಕೇಳಿ ನನ್ನಿಂದ ಅವರಿಗೆ ಎಚ್ಚರಿಕೆ ಕೊಡು. ನಾನು ದುಷ್ಟನಿಗೆ--ನೀನು ನಿಶ್ಚಯವಾಗಿ ಸಾಯುವಿ ಯೆಂದು ಹೇಳುವಾಗ ನೀನು ಅವನನ್ನು ಎಚ್ಚರಿಸದೆ ಅವನನ್ನು ಬದುಕಿಸುವ ಹಾಗೆ ದುಷ್ಟನನ್ನು ಅವನ ದುಷ್ಟಮಾರ್ಗದ ವಿಷಯದಲ್ಲಿ ಎಚ್ಚರಿಸಿ ಮಾತನಾಡದೆ ಹೋದರೆ ಆ ದುಷ್ಟನು ತನ್ನ ಅಕ್ರಮದಲ್ಲೇ ಸಾಯು ವನು. ಆದರೆ ಅವನ ರಕ್ತವನ್ನು ನಿನ್ನ ಕೈಯಿಂದ ದುಷ್ಟತ್ವ ಕ್ಕಾಗಿ ನಾನು ವಿಚಾರಿಸುವೆನು. ಆದರೆ ನೀನು ದುಷ್ಟ ನನ್ನು ಎಚ್ಚರಿಸಿದ ಮೇಲೆ ಅವನು ತನ್ನ ದುಷ್ಟತ್ವವನ್ನೂ ದುಷ್ಟಮಾರ್ಗವನ್ನೂ ಬಿಟ್ಟು ತಿರುಗದೆ ಹೋದರೆ ಅವನು ತನ್ನ ದುಷ್ಟತ್ವದಲ್ಲಿಯೇ ಸಾಯುವನು. ಆದರೆ ನೀನು ನಿನ್ನ ಪ್ರಾಣವನ್ನು ಉಳಿಸಿಕೊಂಡಿರುವಿ. ಮತ್ತೆ ಯಾವಾಗ ನೀತಿವಂತನು ತನ್ನ ನೀತಿಯನ್ನು ಬಿಟ್ಟು ಅನ್ಯಾಯ ಮಾಡುವನೋ, ಆಗ ನಾನು ಅವನ ಮುಂದೆ ಅಡಚಣೆಯನ್ನು ಇಡುವೆನು, ಅವನು ಸಾಯು ವನು; ನೀನು ಅವನನ್ನು ಎಚ್ಚರಿಸದೆ ಇದ್ದದರಿಂದಲೇ ಅವನು ತನ್ನ ಪಾಪದಲ್ಲಿ ಸಾಯುವನು; ಅವನು ಮಾಡಿರುವ ಅವನ ನೀತಿಯು ಜ್ಞಾಪಕ ಮಾಡಲ್ಪಡು ವದಿಲ್ಲ; ಆದರೆ ಅವನ ರಕ್ತವನ್ನು ನಾನು ನಿನ್ನ ಕೈಯಿಂದ ವಿಚಾರಿಸುವೆನು; ಆದಾಗ್ಯೂ ನೀತಿವಂತನು ಪಾಪ ಮಾಡದ ಹಾಗೆ ನೀನು ನೀತಿವಂತನನ್ನು ಎಚ್ಚರಿಸುವಾಗ ಅವನು ಪಾಪಮಾಡದೆ ಎಚ್ಚರಿಕೆಯಾದದರಿಂದ ನಿಶ್ಚಯವಾಗಿ ಬದುಕುವನು; ನೀನು ನಿನ್ನ ಪ್ರಾಣವನ್ನು ಸಹ ಉಳಿಸಿಕೊಂಡಿರುವಿ.
- Matthew 3:7–9 ಮತ್ತಾಯನು 3:7–9ಆದರೆ ಫರಿಸಾಯರಲ್ಲಿಯೂ ಸದ್ದುಕಾಯರಲ್ಲಿಯೂ ಅನೇಕರು ತನ್ನಿಂದ ಬಾಪ್ತಿಸ್ಮ ಮಾಡಿಸಿಕೊಳ್ಳು ವದಕ್ಕಾಗಿ ಬರುವದನ್ನು ಅವನು ಕಂಡು ಅವರಿಗೆ-- ಓ ಸರ್ಪ ಸಂತತಿಯವರೇ, ಬರುವದಕ್ಕಿರುವ ಕೋಪ ದಿಂದ ತಪ್ಪಿಸಿಕೊಳ್ಳುವದಕ್ಕೆ ನಿಮ್ಮನ್ನು ಎಚ್ಚರಿಸಿದವರು ಯಾರು? ಹಾಗಾದರೆ ಮಾನಸಾಂತರಕ್ಕೆ ತಕ್ಕ ಫಲ ಗಳನ್ನು ಫಲಿಸಿರಿ; ಮತ್ತು -- ಅಬ್ರಹಾಮನು ನಮಗೆ ತಂದೆಯಾಗಿದ್ದಾನೆ ಎಂದು ನಿಮ್ಮ ನಿಮ್ಮೊಳಗೆ ಅಂದು ಕೊಳ್ಳಬೇಡಿರಿ; ಯಾಕಂದರೆ ದೇವರು ಅಬ್ರಹಾಮನಿಗೆ ಈ ಕಲ್ಲುಗಳಿಂದ ಮಕ್ಕಳನ್ನು ಎಬ್ಬಿಸ ಶಕ್ತನೆಂದು ನಾನು ನಿಮಗೆ ಹೇಳುತ್ತೇನೆ.
- Ezekiel 3:5–9 ಯೆಹೆಜ್ಕೇಲನು 3:5–9ನೀನು ಕಠಿಣವಾದ ಭಾಷೆಯಲ್ಲಿ ಸೋಜಿಗದ ಮಾತುಗಳ ನ್ನಾಡುವ ಜನರ ಬಳಿಗೆ ಕಳುಹಿಸದೆ ಇಸ್ರಾಯೇಲಿನ ಮನೆಯವರ ಬಳಿಗೆ ಕಳುಹಿಸಲ್ಪಟ್ಟಿರುವಿ. ನೀನು ಕಠಿಣ ಭಾಷೆಯಲ್ಲಿ ಸೋಜಿಗದ ಮಾತುಗಳನ್ನಾಡುವವರ ಬಳಿಗೆ ಕಳುಹಿಸಲ್ಪಟ್ಟವನಲ್ಲ; ಇಂಥವರ ಕಡೆಗೆ ನಾನು ನಿನ್ನನ್ನು ಕಳುಹಿಸಿದ್ದ ಪಕ್ಷದಲ್ಲಿ ನಿಶ್ಚಯವಾಗಿ ಅವರು ನಿನ್ನ ಮಾತಿಗೆ ಕಿವಿಗೊಡುತ್ತಿದ್ದರು. ಆದರೆ ಇಸ್ರಾ ಯೇಲಿನ ಮನೆತನದವರು ನಿನಗೆ ಕಿವಿಗೊಡುವದಿಲ್ಲ; ಅವರು ನನಗೆ ಕಿವಿಗೊಟ್ಟಿಲ್ಲ. ಯಾಕಂದರೆ ಎಲ್ಲಾ ಇಸ್ರಾಯೇಲಿನ ಮನೆತನದವರು ಕಠಿಣ ಹೃದಯ ದವರೂ ನಿರ್ಲಜ್ಜರೂ (ನಾಚಿಕೆಗೆಟ್ಟವರೂ) ಆಗಿದ್ದಾರೆ. ಇಗೋ, ನಾನು ನಿನ್ನ ಮುಖವನ್ನು ಅವರ ಮುಖಗಳ ಎದುರಿಗೆ ಕಠಿಣ ಮಾಡಿದ್ದೇನೆ; ಮತ್ತು ನಿನ್ನ ಹಣೆಯನ್ನು ಅವರ ಹಣೆಗಳ ಎದುರಾಗಿ ಬಲಪಡಿಸಿದ್ದೇನೆ. ನಾನು ನಿನ್ನ ಹಣೆಯನ್ನು ಅಭೇದ್ಯವಾದ ಕಲ್ಲಿಗಿಂತ ಗಟ್ಟಿಯಾಗಿ ವಜ್ರದಂತೆ ಮಾಡಿದ್ದೇನೆ; ಇಲ್ಲವೆ ತಿರುಗಿ ಬೀಳುವ ಮನೆತನದವರಾದರೂ ನೀನು ಅವರಿಗೆ ಭಯಪಡ ಬೇಡ; ಮತ್ತು ಅವರ ನೋಟಕ್ಕೆ ನೀನು ಗಾಬರಿಯಾಗ ಬೇಡ.
- Revelation 14:9–10 ಪ್ರಕಟನೆ 14:9–10ತರುವಾಯ ಮೂರನೆಯ ದೂತನು ಅವರನ್ನು ಹಿಂಬಾಲಿಸಿ--ಯಾರಾದರೂ ಮೃಗವನ್ನೂ ಅದರ ವಿಗ್ರಹವನ್ನೂ ಆರಾಧಿಸಿ ತನ್ನ ಹಣೆಯ ಮೇಲಾಗಲಿ ತನ್ನ ಕೈಯ ಮೇಲಾಗಲಿ ಅದರ ಗುರುತು ಹಾಕಿಸಿ ಕೊಂಡರೆ ಅಂಥವನು ದೇವರ ಕೋಪವೆಂಬ ಪಾತ್ರೆ ಯಲ್ಲಿ ಏನೂ ಬೆರಸದೆ ಹಾಕಿದ ಆತನ ರೌದ್ರವೆಂಬ ದ್ರಾಕ್ಷಾರಸವನ್ನು ಕುಡಿಯುವನು. ಪರಿಶುದ್ಧ ದೂತರ ಮುಂದೆಯೂ ಕುರಿಮರಿಯಾದಾತನ ಮುಂದೆಯೂ ಬೆಂಕಿಯಿಂದ ಮತ್ತು ಗಂಧಕದಿಂದ ಯಾತನೆಪಡು ವನು.
- Ezekiel 20:4 ಯೆಹೆಜ್ಕೇಲನು 20:4ಅವರಿಗೆ ನ್ಯಾಯತೀರಿಸುವಿಯೋ? ಮನುಷ್ಯಪುತ್ರನೇ, ನೀನು ಅವರಿಗೆ ನ್ಯಾಯತೀರಿಸು ವಿಯೋ? ಅವರ ತಂದೆಗಳ ಅಸಹ್ಯವಾದವುಗಳನ್ನು ಅವರಿಗೆ ತಿಳಿಸು.
- Micah 3:8–12 ಮೀಕ 3:8–12ಆದರೆ ನಿಶ್ಚಯವಾಗಿ ನಾನು ಯಾಕೋ ಬ್ಯರಿಗೆ ಅವನ ಅಪರಾಧವನ್ನೂ ಇಸ್ರಾಯೇಲಿಗೆ ಅವನ ಪಾಪವನ್ನೂ ತಿಳಿಸುವದಕ್ಕೆ ದೇವರ ಆತ್ಮನ ಮುಖಾಂತರ ಶಕ್ತಿಯಿಂದಲೂ ನ್ಯಾಯದಿಂದಲೂ ತ್ರಾಣದಿಂದಲೂ ತುಂಬಿದ್ದೇನೆ. ಯಾಕೋಬನ ಮನೆತನದವರ ಪ್ರಧಾನರೇ, ಇಸ್ರಾಯೇಲಿನ ಮನೆತನದವರ ನ್ಯಾಯಾ ಧಿಪತಿಗಳೇ, ನ್ಯಾಯವನ್ನು ಅಸಹ್ಯಿಸಿ ಎಲ್ಲಾ ಯಥಾರ್ಥ ತ್ವವನ್ನು ಡೊಂಕು ಮಾಡುವವರೇ, ಚೀಯೋನನ್ನು ರಕ್ತದಿಂದಲೂ ಯೆರೂಸಲೇಮನ್ನು ಅಕ್ರಮದಿಂದಲೂ ಕಟ್ಟುವವರೇ, ಈಗ ಇದನ್ನು ಕೇಳಿರಿ. ಅದರ ಮುಖ್ಯಸ್ಥರು ಲಂಚಕ್ಕೆ ನ್ಯಾಯತೀರಿಸುತ್ತಾರೆ; ಅದರ ಯಾಜಕರು ಸಂಬಳಕ್ಕೆ ಬೋಧಿಸುತ್ತಾರೆ; ಅದರ ಪ್ರವಾ ದಿಗಳು ಹಣಕ್ಕೆ ಶಕುನ ಹೇಳುತ್ತಾರೆ; ಆದರೂ ಕರ್ತನ ಮೇಲೆ ಆತುಕೊಂಡು--ಕರ್ತನು ನಮ್ಮ ಮಧ್ಯದಲ್ಲಿ ಇಲ್ಲವೋ? ನಮ್ಮ ಮೇಲೆ ಕೇಡು ಬರುವದಿಲ್ಲ ಅನ್ನು ತ್ತಾರೆ.ಆದಕಾರಣ ನಿಮ್ಮ ನಿಮಿತ್ತವೇ, ಚೀಯೋನು ಹೊಲದ ಹಾಗೆ ಉಳಲ್ಪಡುವದು; ಯೆರೂಸಲೇಮು ದಿಬ್ಬೆಗಳಾಗುವದು, ಆಲಯದ ಪರ್ವತವು ಅಡವಿಯ ಉನ್ನತ ಸ್ಥಳಗಳ ಹಾಗಾಗುವದು. ಆದಕಾರಣ ನಿಮ್ಮ ನಿಮಿತ್ತವೇ, ಚೀಯೋನು ಹೊಲದ ಹಾಗೆ ಉಳಲ್ಪಡುವದು; ಯೆರೂಸಲೇಮು ದಿಬ್ಬೆಗಳಾಗುವದು, ಆಲಯದ ಪರ್ವತವು ಅಡವಿಯ ಉನ್ನತ ಸ್ಥಳಗಳ ಹಾಗಾಗುವದು.
- Isaiah 40:9–10 ಯೆಶಾಯ 40:9–10ಶುಭಸಮಾಚಾರವನ್ನು ತಿಳಿಸುವ ಓ ಚೀಯೋನೇ, ನೀನು ಉನ್ನತಪರ್ವತವನ್ನು ಏರು; ಶುಭಸಮಾ ಚಾರವನ್ನು ತಿಳಿಸುವ ಓ ಯೆರೂಸಲೇಮೇ, ಬಲವಾಗಿ ನಿನ್ನ ಸ್ವರವನ್ನು ಎತ್ತು, ಭಯಪಡದೆ ಎತ್ತು; ಯೆಹೂದದ ಪಟ್ಟಣಗಳಿಗೆ ಇಗೋ, ನಿನ್ನ ದೇವರು ಎಂದು ಹೇಳು. ಇಗೋ, ಕರ್ತನಾದ ದೇವರು ಬಲವುಳ್ಳ ಕೈಯಿಂದ ಬರುತ್ತಾನೆ, ಆತನ ತೋಳು ತನಗೋಸ್ಕರ ಆಳುವದು. ಇಗೋ, ಆತನ ಬಹುಮಾನವು ಆತನ ಸಂಗಡಲೂ ಆತನ ಪ್ರತಿಫಲವು ಆತನ ಮುಂದೆಯೂ ಇದೆ.
- Jeremiah 7:8–11 ಯೆರೆಮೀಯ 7:8–11ಇಗೋ, ನೀವು ಪ್ರಯೋಜನವಿಲ್ಲದ ಸುಳ್ಳಾದ ಮಾತುಗಳಲ್ಲಿ ನಂಬಿಕೆ ಇಡುತ್ತೀರಿ. ಕಳ್ಳತನ ಹತ್ಯಹಾದರ ಇವುಗಳನ್ನು ನೀವು ನಡಿಸುವಿರೋ? ಸುಳ್ಳುಪ್ರಮಾಣವನ್ನು ಮಾಡಿ ಬಾಳನಿಗೆ ಧೂಪವನ್ನು ಸುಡುವಿರೋ? ನಿಮಗೆ ತಿಳಿಯದ ಬೇರೆ ದೇವರು ಗಳನ್ನು ಹಿಂಬಾಲಿಸಿ ಆಮೇಲೆ ಬಂದು ನನ್ನ ಹೆಸರಿನಲ್ಲಿ ಕರೆಯಲ್ಪಟ್ಟ ಈ ಆಲಯದಲ್ಲಿ ನನ್ನ ಮುಂದೆ ನಿಂತು ಕೊಂಡು--ನಾವು ಈ ಅಸಹ್ಯವಾದವುಗಳನ್ನೆಲ್ಲಾ ಮಾಡುವ ಹಾಗೆ ಒಪ್ಪಿಸಲ್ಪಟ್ಟಿದ್ದೇವೆಂದು ಹೇಳು ವಿರೋ? ನನ್ನ ಹೆಸರಿನಲ್ಲಿ ಕರೆಯಲ್ಪಟ್ಟ ಈ ಆಲಯವು ನಿಮ್ಮ ಕಣ್ಣುಗಳಲ್ಲಿ ಕಳ್ಳರ ಗವಿಯಾಯಿತೋ? ಇಗೋ, ನಾನೇ ಅದನ್ನು ನೋಡಿದ್ದೇನೆಂದು ಕರ್ತನು ಅನ್ನುತ್ತಾನೆ.
Original words (Hebrew)
- Cry · H7121קָרָא qârâʼ
- aloud · H1627גָּרוֹן gârôwn
- spare · H2820חָשַׂךְ châsak
- lift · H7311רוּם rûwm
- voice · H6963קוֹל qôwl
- trumpet · H7782שׁוֹפָר shôwphâr
- shew · H5046נָגַד nâgad
- people · H5971עַם ʻam
- transgression · H6588פֶּשַׁע peshaʻ
- house · H1004בַּיִת bayith
- Jacob · H3290יַעֲקֹב Yaʻăqôb
- sins · H2403חַטָּאָה chaṭṭâʼâh