Isaiah · chapter 65 · verse 19
Isaiah 65:19 in Kannada
ಯೆರೂಸಲೇಮಿನಲ್ಲಿ ಉಲ್ಲಾಸಿಸಿ, ನನ್ನ ಜನರಲ್ಲಿ ಸಂತೋಷಪಡುವೆನು; ಅದರಲ್ಲಿ ಅಳುವ ಸ್ವರವೂ ಕೂಗುವ ಸ್ವರವೂ ಇನ್ನು ಕೇಳಲ್ಪಡುವದಿಲ್ಲ.
Yeroosaleminalli ullaasisi, nanna janaralli santoshapaduvenu; adaralli aluva svaravoo kooguva svaravoo innu kelalpaduvadilla.
Isaiah 65:19 in English
- King James Version (KJV)
- And I will rejoice in Jerusalem, and joy in my people: and the voice of weeping shall be no more heard in her, nor the voice of crying.
- World English Bible (WEB)
- I will rejoice in Jerusalem, and delight in my people; and the voice of weeping and the voice of crying will be heard in her no more.
- American Standard Version (ASV)
- And I will rejoice in Jerusalem, and joy in my people; and there shall be heard in her no more the voice of weeping and the voice of crying.
- Bible in Basic English (BBE)
- And I will be glad over Jerusalem, and have joy in my people: and the voice of weeping will no longer be sounding in her, or the voice of grief.
- Darby Translation (DBY)
- And I will rejoice over Jerusalem, and will joy in my people; and the voice of weeping shall be no more heard in her, nor the voice of crying.
- Webster's Bible (WBS)
- And I will rejoice in Jerusalem, and joy in my people: and the voice of weeping shall be no more heard in her, nor the voice of crying.
- Young's Literal Translation (YLT)
- And I have rejoiced in Jerusalem, And have joyed in My people, And not heard in her any more Is the voice of weeping, and the voice of crying.
Read in context
- 17ಇಗೋ, ನಾನು ಹೊಸ ಆಕಾಶವನ್ನೂ ಹೊಸ ಭೂಮಿಯನ್ನೂ ಸೃಷ್ಟಿಸುತ್ತೇನೆ. ಮುಂಚಿನವುಗಳು ಜ್ಞಾಪಕದಲ್ಲಿರುವದಿಲ್ಲ ಇಲ್ಲವೆ ಅದರ ಸ್ಮರಣೆಗೆ ಬರುವ ದಿಲ್ಲ.
- 18ಆದರೆ ನಾನು ಸೃಷ್ಟಿಸಿದವುಗಳಲ್ಲಿ ನೀವು ಸಂತೋಷಿಸಿ ಎಂದೆಂದಿಗೂ ಉಲ್ಲಾಸಪಡಿರಿ; ಯಾಕಂ ದರೆ ಇಗೋ, ನಾನು ಯೆರೂಸಲೇಮಿನಲ್ಲಿ ಉಲ್ಲಾಸ ವನ್ನೂ ಅವಳ ಜನರಲ್ಲಿ ಸಂತೋಷವನ್ನೂ ಸೃಷ್ಟಿಸು ತ್ತೇನೆ.
- 19ಯೆರೂಸಲೇಮಿನಲ್ಲಿ ಉಲ್ಲಾಸಿಸಿ, ನನ್ನ ಜನರಲ್ಲಿ ಸಂತೋಷಪಡುವೆನು; ಅದರಲ್ಲಿ ಅಳುವ ಸ್ವರವೂ ಕೂಗುವ ಸ್ವರವೂ ಇನ್ನು ಕೇಳಲ್ಪಡುವದಿಲ್ಲ.
- 20ಅಲ್ಲಿ ಕೆಲವು ದಿವಸಗಳ ಕೂಸೂ ತನ್ನ ದಿನ ತುಂಬದ ಮುದುಕನೂ ಇನ್ನು ಇರುವದಿಲ್ಲ; ಯಾಕಂದರೆ ಮಗುವು ನೂರು ವರುಷದ್ದಾಗಿ ಸಾಯುವದು, ಆದರೆ ಪಾಪಿಷ್ಠನು ನೂರು ವರುಷದವನಾಗಿ ಶಾಪ ಹೊಂದು ವನು.
- 21ಇದಲ್ಲದೆ, ಅವರು ಮನೆಗಳನ್ನು ಕಟ್ಟಿ, ವಾಸಮಾಡುವರು; ದ್ರಾಕ್ಷೇ ತೋಟಗಳನ್ನು ನೆಟ್ಟು, ಅವುಗಳ ಫಲವನ್ನು ಉಣ್ಣುವರು.
Cross references
- Revelation 21:4 ಪ್ರಕಟನೆ 21:4ದೇವರು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣ ವಿರುವದಿಲ್ಲ. ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವದೇ ಇಲ್ಲ. ಮೊದಲಿದ್ದವುಗಳೆಲ್ಲಾ ಇಲ್ಲದೆ ಹೋದವು ಎಂದು ಹೇಳಿತು.
- Isaiah 25:8 ಯೆಶಾಯ 25:8ಆತನು ಮರಣವನ್ನು ಜಯದಲ್ಲಿ ನುಂಗಿಬಿಡುವನು. ಕರ್ತನಾದ ದೇವರು ಎಲ್ಲಾ ಮುಖ ಗಳಲ್ಲಿರುವ ಕಣ್ಣೀರನ್ನೂ ಒರಸಿಬಿಡುವನು. ತನ್ನ ಜನರ ನಿಂದೆಯನ್ನೂ ಭೂಮಂಡಲದಿಂದಲೇ ತೆಗೆದುಹಾಕು ವನು, ಕರ್ತನೇ ಇದನ್ನು ನುಡಿದಿದ್ದಾನೆ.
- Revelation 7:17 ಪ್ರಕಟನೆ 7:17ಸಿಂಹಾಸನದ ಮಧ್ಯದಲ್ಲಿರುವ ಕುರಿಮರಿಯಾದಾತನು ಅವರನ್ನು ಮೇಯಿಸಿ ಜೀವ ಜಲದ ಒರತೆಗಳ ಬಳಿಗೆ ನಡಿಸುತ್ತಾನೆ; ಮತ್ತು ದೇವರು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು ಎಂದು ಹೇಳಿದನು.
- Isaiah 35:10 ಯೆಶಾಯ 35:10ಕರ್ತನಿಂದ ವಿಮೋಚಿಸಲ್ಪಟ್ಟವರು ಹಿಂತಿರುಗಿಕೊಂಡು ತಮ್ಮ ತಲೆಗಳ ಮೇಲೆ ಉತ್ಸಾಹಧ್ವನಿ ನಿತ್ಯವಾದ ಸಂತೋಷಗಳೊಂದಿಗೆ ಚೀಯೋನಿಗೆ ಬರು ವರು; ಅವರು ಹರ್ಷಾನಂದಗಳನ್ನು ಅನುಭವಿಸು ವರು. ದುಃಖವೂ, ನಿಟ್ಟುಸಿರೂ ಓಡಿಹೋಗುವವು.
- Jeremiah 32:41 ಯೆರೆಮೀಯ 32:41ಹೌದು, ಅವರಿಗೆ ಒಳ್ಳೇದನ್ನು ಮಾಡುವದಕ್ಕೆ ಅವ ರೊಂದಿಗೆ ಆನಂದಪಡುವೆನು; ನಿಜವಾಗಿ ನನ್ನ ಪೂರ್ಣ ಹೃದಯದಿಂದಲೂ ನನ್ನ ಪೂರ್ಣ ಪ್ರಾಣದಿಂದಲೂ ಅವರನ್ನು ಈ ದೇಶದಲ್ಲಿ ನೆಡುತ್ತೇನೆ.
- Isaiah 60:20 ಯೆಶಾಯ 60:20ನಿನ್ನ ಸೂರ್ಯನು ಅಸ್ತಮಿಸು ವದಿಲ್ಲ, ನಿನ್ನ ಚಂದ್ರನು ಕಾಣದೆ ಹೋಗುವದಿಲ್ಲ; ಕರ್ತನು ನಿನಗೆ ನಿತ್ಯವಾದ ಬೆಳಕಾಗಿರುವನು ನಿನ್ನ ದುಃಖದ ದಿನಗಳು ಮುಗಿದುಹೋಗಿರುವವು.
- Isaiah 51:11 ಯೆಶಾಯ 51:11ಆದಕಾರಣ ಕರ್ತನಿಂದ ವಿಮೋಚಿ ಸಲ್ಪಟ್ಟವರು ತಿರುಗಿಕೊಂಡು ಹಾಡುತ್ತಾ ಚೀಯೋನಿಗೆ ಬರುವರು; ಶಾಶ್ವತವಾದ ಆನಂದವು ಅವರ ತಲೆಯ ಮೇಲಿರುವದು, ಅವರು ಹರ್ಷಾನಂದಗಳನ್ನು ಹೊಂದಿಕೊಳ್ಳುವರು; ದುಃಖವು, ವ್ಯಥೆಯು ಓಡಿ ಹೋಗುವವು.
- Isaiah 51:3 ಯೆಶಾಯ 51:3ಕರ್ತನು ಚೀಯೋನನ್ನು ಆದರಿಸುವನು; ಆತನು ಅದರ ಹಾಳಾದ ಸ್ಥಳಗ ಳನ್ನು ಸುಧಾರಿಸುವನು; ಅದರ ಅರಣ್ಯವನ್ನು ಏದೆನ್ ಹಾಗೆಯೂ ಮರುಭೂಮಿಯನ್ನು ಕರ್ತನ ತೋಟದ ಹಾಗೆಯೂ ಮಾಡುವನು. ಅಲ್ಲಿ ಆನಂದವೂ ಉಲ್ಲಾ ಸವೂ ಉಪಕಾರ ಸ್ತುತಿಯೂ ಇಂಪಾದ ಸ್ವರವೂ ಕಂಡುಬರುವವು.
- Isaiah 62:4–5 ಯೆಶಾಯ 62:4–5ಇನ್ನು ಮೇಲೆ ನೀನು ಬಿಡಲ್ಪಟ್ಟವಳೆಂದು ಹೇಳಲ್ಪಡುವದಿಲ್ಲ, ಇಲ್ಲವೆ ನಿನ್ನ ದೇಶಕ್ಕೆ ಹಾಳಾದದ್ದೆಂದು ಹೇಳಲ್ಪಡುವದಿಲ್ಲ: ಆದರೆ ನೀನು (ಹೆಫ್ಜೀಬಾ) ಮೆಚ್ಚಿದವಳೆಂದೂ ನಿನ್ನ ದೇಶವು (ಬೆಯೂಲಾ) ಮದುವೆಯಾದದ್ದೆಂದೂ ಕರೆಯಲ್ಪ ಡುವದು; ಯಾಕಂದರೆ ಕರ್ತನು ನಿನ್ನಲ್ಲಿ ಉಲ್ಲಾಸಿಸು ವನು; ನಿನ್ನ ದೇಶವು ಮದುವೆಯಾಗುವದು. ಯೌವನಸ್ಥನು ಕನ್ಯಾಸ್ತ್ರೀಯನ್ನು ಮದುವೆಮಾಡಿ ಕೊಳ್ಳುವ ಪ್ರಕಾರ ನಿನ್ನ ಕುಮಾರರು ನಿನ್ನನ್ನು ಮದುವೆ ಮಾಡಿಕೊಳ್ಳುವರು; ಮದಲಿಂಗನು ಮದಲಗಿತ್ತಿಯಲ್ಲಿ ಆನಂದಪಡುವ ಪ್ರಕಾರ ನಿನ್ನ ದೇವರು ನಿನ್ನಲ್ಲಿ ಆನಂದಪಡುವನು.
- Zephaniah 3:17 ಚೆಫನ್ಯ 3:17ನಿನ್ನ ದೇವರಾದ ಕರ್ತನು ನಿನ್ನ ಮಧ್ಯದಲ್ಲಿ ಪರಾಕ್ರಮಿಯಾಗಿದ್ದಾನೆ. ಆತನು ರಕ್ಷಿಸು ವಂಥ ವನು; ಆನಂದದಿಂದ ನಿನ್ನಲ್ಲಿ ಸಂತೋಷಿಸು ವನು; ತನ್ನ ಪ್ರೀತಿಯಲ್ಲಿ ಮೌನವಾಗಿರುವನು; ಆನಂದ ಸ್ವರದಿಂದ ನಿನ್ನ ಮೇಲೆ ಉಲ್ಲಾಸಿಸುವನು.
- Song of Solomon 3:11 ಪರಮಗೀತೆ 3:11ಚೀಯೋನಿನ ಕುಮಾರ್ತೆಯರೇ, ನೀವು ಹೊರಟು ಹೋಗಿ ಅವನ ಮದುವೆಯ ದಿವಸದಲ್ಲಿಯೂ ಹೃದ ಯದ ಸಂತೋಷದ ದಿವಸದಲ್ಲಿಯೂ ತನ್ನ ತಾಯಿ ತನಗೆ ಧರಿಸಿದ ಕಿರೀಟ ಇರುವ ಅರಸನಾದ ಸೊಲೊ ಮೋನನನ್ನು ನೋಡಿರಿ.
- Jeremiah 31:12 ಯೆರೆಮೀಯ 31:12ಆದದರಿಂದ ಅವರು ಬಂದು ಚೀಯೋನಿನ ಉನ್ನತದಲ್ಲಿ ಹಾಡಿ ಕರ್ತನ ಒಳ್ಳೇತನದ ಬಳಿಗೆ ಗೋಧಿಯ ನಿಮಿತ್ತವೂ ದ್ರಾಕ್ಷಾರಸದ ನಿಮಿತ್ತವೂ ಎಣ್ಣೆಯ ನಿಮಿತ್ತವೂ ಮಂದೆ ದನ ಮರಿಗಳ ನಿಮಿತ್ತವೂ ಪ್ರವಾಹದಂತೆ ಬರುವರು; ಅವರ ಪ್ರಾಣವು ಚೆನ್ನಾಗಿ ನೀರು ಹಾಕಿದ ತೋಟದ ಹಾಗೆ ಇರುವದು; ಅವರು ಇನ್ನು ಮೇಲೆ ಯಾವಾಗಲೂ ದುಃಖಪಡುವದಿಲ್ಲ.