Jeremiah · chapter 32 · verse 41
Jeremiah 32:41 in Kannada
ಹೌದು, ಅವರಿಗೆ ಒಳ್ಳೇದನ್ನು ಮಾಡುವದಕ್ಕೆ ಅವ ರೊಂದಿಗೆ ಆನಂದಪಡುವೆನು; ನಿಜವಾಗಿ ನನ್ನ ಪೂರ್ಣ ಹೃದಯದಿಂದಲೂ ನನ್ನ ಪೂರ್ಣ ಪ್ರಾಣದಿಂದಲೂ ಅವರನ್ನು ಈ ದೇಶದಲ್ಲಿ ನೆಡುತ್ತೇನೆ.
Haudu, avarige olledannu maaduvadakke ava rondige aanandapaduvenu; nijavaagi nanna poorna hrudayadindaloo nanna poorna praanadindaloo avarannu ee deshadalli neduttene.
Jeremiah 32:41 in English
- King James Version (KJV)
- Yea, I will rejoice over them to do them good, and I will plant them in this land assuredly with my whole heart and with my whole soul.
- World English Bible (WEB)
- Yes, I will rejoice over them to do them good, and I will plant them in this land assuredly with my whole heart and with my whole soul.”
- American Standard Version (ASV)
- Yea, I will rejoice over them to do them good, and I will plant them in this land assuredly with my whole heart and with my whole soul.
- Bible in Basic English (BBE)
- And truly, I will take pleasure in doing them good, and all my heart and soul will be given to planting them in this land in good faith.
- Darby Translation (DBY)
- And I will rejoice over them to do them good, and I will assuredly plant them in this land with my whole heart and with my whole soul.
- Webster's Bible (WBS)
- Yes, I will rejoice over them to do them good, and I will plant them in this land assuredly with my whole heart and with my whole soul.
- Young's Literal Translation (YLT)
- and I have rejoiced over them to do them good, and have planted them in this land in truth, with all my heart, and with all My soul.
Read in context
- 39ಅವರಿಗೂ ಅವರ ತರುವಾಯ ಅವರ ಮಕ್ಕಳಿಗೂ ಒಳ್ಳೇದಕ್ಕಾಗಿ ಅವರು ಯಾವಾಗಲೂ ನನಗೆ ಭಯ ಪಡುವ ಹಾಗೆ ಅವರಿಗೆ ಒಂದೇ ಹೃದಯವನ್ನೂ ಒಂದೇ ಮಾರ್ಗವನ್ನೂ ಕೊಡುವೆನು.
- 40ಅವರಿಗೆ ಒಳ್ಳೇದನ್ನು ಮಾಡುವ ಹಾಗೆ ನಾನು ತಿರುಗಿಸಿ ಬಿಡೆನೆಂದು ನಿತ್ಯವಾದ ಒಡಂಬಡಿಕೆಯನ್ನು ಅವರ ಸಂಗಡ ಮಾಡುತ್ತೇನೆ; ಅವರು ನನ್ನನ್ನು ಬಿಡದ ಹಾಗೆ ನನ್ನ ಭಯವನ್ನು ಅವರ ಹೃದಯಗಳಲ್ಲಿ ಇಡುತ್ತೇನೆ.
- 41ಹೌದು, ಅವರಿಗೆ ಒಳ್ಳೇದನ್ನು ಮಾಡುವದಕ್ಕೆ ಅವ ರೊಂದಿಗೆ ಆನಂದಪಡುವೆನು; ನಿಜವಾಗಿ ನನ್ನ ಪೂರ್ಣ ಹೃದಯದಿಂದಲೂ ನನ್ನ ಪೂರ್ಣ ಪ್ರಾಣದಿಂದಲೂ ಅವರನ್ನು ಈ ದೇಶದಲ್ಲಿ ನೆಡುತ್ತೇನೆ.
- 42ಕರ್ತನು ಹೀಗೆ ಹೇಳುತ್ತಾನೆ--ನಾನು ಹೇಗೆ ಈ ಜನರ ಮೇಲೆ ದೊಡ್ಡ ಕೇಡನ್ನು ಬರಮಾಡಿದೆನೋ ಹಾಗೆಯೇ ನಾನು ಅವರಿಗೆ ವಾಗ್ದಾನದ ಮೇಲನ್ನೆಲ್ಲಾ ಅವರ ಮೇಲೆ ಬರಮಾಡುವೆನು.
- 43ಯಾವದರ ವಿಷಯ--ಅದು ಮನುಷ್ಯರೂ ಪಶುಗಳೂ ಇಲ್ಲದೆ ಹಾಳಾಯಿತು. ಕಸ್ದೀಯರ ಕೈಯಲ್ಲಿ ಒಪ್ಪಿಸಲ್ಪಟ್ಟಿದೆ ಎಂದು ನೀವು ಹೇಳುತ್ತೀರೋ ಆ ದೇಶದಲ್ಲಿ ಇನ್ನು ಹೊಲಗಳು ಕೊಂಡುಕೊಳ್ಳಲ್ಪಡುವವು.ಬೆನ್ಯಾವಿಾನನ ದೇಶದ ಲ್ಲಿಯೂ ಯೆರೂಸಲೇಮಿನ ಪ್ರದೇಶಗಳಲ್ಲಿಯೂ ಯೆಹೂದದ ಪಟ್ಟಣಗಳಲ್ಲಿಯೂ ಬೆಟ್ಟದ ಪಟ್ಟಣಗಳ ಲ್ಲಿಯೂ ತಗ್ಗಿನ ಪಟ್ಟಣಗಳಲ್ಲಿಯೂ ದಕ್ಷಿಣದ ಪಟ್ಟಣಗಳ ಲ್ಲಿಯೂ ಹೊಲಗಳನ್ನು ಹಣಕ್ಕೆ ಕೊಂಡುಕೊಂಡು ಪತ್ರಗಳನ್ನು ಬರೆದು ಮುದ್ರೆ ಹಾಕಿ ಸಾಕ್ಷಿಗಳನ್ನು ಇಟ್ಟುಕೊಳ್ಳುವರು; ನಾನು ಅವರ ಸೆರೆಯಿಂದ ಹಿಂದಿರು ಗುವಂತೆ ಮಾಡುವೆನು ಎಂದು ಕರ್ತನು ಅನ್ನುತ್ತಾನೆ.
Cross references
- Jeremiah 24:6 ಯೆರೆಮೀಯ 24:6ನಾನು ನನ್ನ ಕಣ್ಣುಗಳನ್ನು ಅವರ ಮೇಲೆ ಒಳ್ಳೇದಕ್ಕಾಗಿ ಇಡುವೆನು. ಈ ದೇಶಕ್ಕೆ ಅವರನ್ನು ತಿರಿಗಿ ಬರಮಾಡುವೆನು; ಕೆಡವಿ ಹಾಕದೆ ಅವರನ್ನು ಕಟ್ಟುವೆನು, ಕೀಳದೆ ಅವರನ್ನು ನೆಡುವೆನು.
- Zephaniah 3:17 ಚೆಫನ್ಯ 3:17ನಿನ್ನ ದೇವರಾದ ಕರ್ತನು ನಿನ್ನ ಮಧ್ಯದಲ್ಲಿ ಪರಾಕ್ರಮಿಯಾಗಿದ್ದಾನೆ. ಆತನು ರಕ್ಷಿಸು ವಂಥ ವನು; ಆನಂದದಿಂದ ನಿನ್ನಲ್ಲಿ ಸಂತೋಷಿಸು ವನು; ತನ್ನ ಪ್ರೀತಿಯಲ್ಲಿ ಮೌನವಾಗಿರುವನು; ಆನಂದ ಸ್ವರದಿಂದ ನಿನ್ನ ಮೇಲೆ ಉಲ್ಲಾಸಿಸುವನು.
- Isaiah 62:5 ಯೆಶಾಯ 62:5ಯೌವನಸ್ಥನು ಕನ್ಯಾಸ್ತ್ರೀಯನ್ನು ಮದುವೆಮಾಡಿ ಕೊಳ್ಳುವ ಪ್ರಕಾರ ನಿನ್ನ ಕುಮಾರರು ನಿನ್ನನ್ನು ಮದುವೆ ಮಾಡಿಕೊಳ್ಳುವರು; ಮದಲಿಂಗನು ಮದಲಗಿತ್ತಿಯಲ್ಲಿ ಆನಂದಪಡುವ ಪ್ರಕಾರ ನಿನ್ನ ದೇವರು ನಿನ್ನಲ್ಲಿ ಆನಂದಪಡುವನು.
- Amos 9:15 ಆಮೋಸ 9:15ನಾನು ಅವರನ್ನು ಅವರ ದೇಶದಲ್ಲಿ ನೆಡುವೆನು; ನಾನು ಅವರಿಗೆ ಕೊಟ್ಟಿರುವ ದೇಶದಿಂದ ಅವರು ಇನ್ನು ಮೇಲೆ ಕಿತ್ತು ಹಾಕಲ್ಪಡರೆಂದು ನಿನ್ನ ದೇವರಾದ ಕರ್ತನು ಹೇಳುತ್ತಾನೆ.
- Hosea 2:19–20 ಹೋಶೇಯ 2:19–20ನಿನ್ನನ್ನು ನನಗೆ ಸದಾ ಕಾಲಕ್ಕೆ ನಿಶ್ಚಿತ್ತಾರ್ಥ ಮಾಡಿಕೊಳ್ಳುವೆನು; ಹೌದು, ನೀತಿ ಯಿಂದಲೂ ನ್ಯಾಯದಿಂದಲೂ ದಯೆಯಿಂದಲೂ ಕರುಣೆಯಿಂದಲೂ ನನ್ನನ್ನು ನಿನಗೆ ನಿಶ್ಚಿತ್ತಾರ್ಥಮಾಡಿ ಕೊಳ್ಳುವೆನು. ನಾನು ನಿನ್ನನ್ನು ನಂಬಿಕೆಯಿಂದಲೇ ನಿಶ್ಚಿತಾರ್ಥ ಮಾಡಿಕೊಳ್ಳುವೆನು; ಆಗ ನೀನು ಕರ್ತನನ್ನು ತಿಳಿದುಕೊಳ್ಳುವಿ.
- Isaiah 65:19 ಯೆಶಾಯ 65:19ಯೆರೂಸಲೇಮಿನಲ್ಲಿ ಉಲ್ಲಾಸಿಸಿ, ನನ್ನ ಜನರಲ್ಲಿ ಸಂತೋಷಪಡುವೆನು; ಅದರಲ್ಲಿ ಅಳುವ ಸ್ವರವೂ ಕೂಗುವ ಸ್ವರವೂ ಇನ್ನು ಕೇಳಲ್ಪಡುವದಿಲ್ಲ.
- Deuteronomy 30:9 ಧರ್ಮೋಪದೇಶಕಾಂಡ 30:9ಇದಲ್ಲದೆ ಕರ್ತನು ನಿನ್ನನ್ನು ನಿನ್ನ ಎಲ್ಲಾ ಕೈಕೆಲಸದಲ್ಲಿ, ಗರ್ಭದ ಫಲದಲ್ಲಿ, ಪಶುಗಳ ಫಲದಲ್ಲಿ, ಭೂಮಿಯ ಫಲದಲ್ಲಿ ಒಳ್ಳೇದಕ್ಕೋಸ್ಕರ ಅಭಿವೃದ್ಧಿ ಮಾಡುವನು.
- Jeremiah 18:9 ಯೆರೆಮೀಯ 18:9ಇದಲ್ಲದೆ ಯಾವ ಕ್ಷಣದಲ್ಲಿ ನಾನು ಒಂದು ಜನಾಂಗದ ವಿಷಯವಾಗಿಯೂ ಒಂದು ರಾಜ್ಯದ ವಿಷಯವಾಗಿಯೂ ಅದನ್ನು ಕಟ್ಟುವದಕ್ಕೂ ನೆಡುವದಕ್ಕೂ ಮಾತನಾಡುತ್ತೇನೋ
- Jeremiah 31:28 ಯೆರೆಮೀಯ 31:28ನಾನು ಕೀಳುವದಕ್ಕೂ ಮುರಿಯುವದಕ್ಕೂ ಕೆಡವುದಕ್ಕೂ ನಾಶಮಾಡು ವದಕ್ಕೂ ಕುಗ್ಗಿಸುವದಕ್ಕೂ ಅವರ ವಿಷಯ ಹೇಗೆ ಎಚ್ಚರವಾಗಿದ್ದೆನೋ ಹಾಗೆಯೇ ಕಟ್ಟುವದಕ್ಕೂ ನೆಡು ವದಕ್ಕೂ ಅವರನ್ನು ಕಾಯುವೆ ನೆಂದು ಕರ್ತನು ಅನ್ನುತ್ತಾನೆ.