Isaiah · chapter 65 · verse 3
Isaiah 65:3 in Kannada
ಇವರು ಯಾವಾಗಲೂ ನನ್ನ ಮುಖದೆ ದುರಿಗೆ ನನಗೆ ಕೋಪೋದ್ರೇಕವನ್ನು ಎಬ್ಬಿಸುವ ಜನರು; ತೋಟಗಳಲ್ಲಿ ಬಲಿ ಅರ್ಪಿಸಿ, ಇಟ್ಟಿಗೆಯ ಯಜ್ಞವೇದಿಯ ಮೇಲೆ ಧೂಪ ಸುಡುವರು;
Ivaru yaavaagaloo nanna mukhade durige nanage kopodrekavannu ebbisuva janaru; totagalalli bali arpisi, ittigeya yajnyavediya mele dhoopa suduvaru;
Isaiah 65:3 in English
- King James Version (KJV)
- A people that provoketh me to anger continually to my face; that sacrificeth in gardens, and burneth incense upon altars of brick;
- World English Bible (WEB)
- a people who provoke me to my face continually, sacrificing in gardens, and burning incense on bricks;
- American Standard Version (ASV)
- a people that provoke me to my face continually, sacrificing in gardens, and burning incense upon bricks;
- Bible in Basic English (BBE)
- A people who make me angry every day, making offerings in gardens, and burning perfumes on bricks.
- Darby Translation (DBY)
- the people that provoke me to anger continually to my face, sacrificing in gardens and burning incense upon the bricks;
- Webster's Bible (WBS)
- A people that provoketh me to anger continually to my face; that sacrificeth in gardens, and burneth incense upon altars of brick;
- Young's Literal Translation (YLT)
- The people who are provoking Me to anger, To My face continually, Sacrificing in gardens, and making perfume on the bricks:
Read in context
- 1ಕೇಳದವರಿಂದ ನಾನು ವಿಚಾರಿಸಲ್ಪಟ್ಟಿದ್ದೇನೆ, ನನ್ನನ್ನು ಹುಡುಕದವರಿಗೂ ಕಂಡು ಕೊಳ್ಳಲ್ಪಟ್ಟಿದ್ದೇನೆ; ನನ್ನ ಹೆಸರಿನಿಂದ ಕರೆಯಲ್ಪಡದ ಜನಾಂಗಕ್ಕೆ--ಇಗೋ, ಇದ್ದೇನೆ; ಇಗೋ, ಇದ್ದೇನೆ ಎಂದು ಹೇಳಿದೆನು.
- 2ಒಳ್ಳೇದಲ್ಲದ ಮಾರ್ಗದಲ್ಲಿ ತಮ್ಮ ಆಲೋಚನೆಗಳ ಪ್ರಕಾರ ನಡೆದುಕೊಂಡು ತಿರುಗಿ ಬೀಳುವ ಜನರಿಗೆ ಹಗಲೆಲ್ಲಾ ನನ್ನ ಕೈಗಳನ್ನು ಚಾಚಿದ್ದೇನೆ.
- 3ಇವರು ಯಾವಾಗಲೂ ನನ್ನ ಮುಖದೆ ದುರಿಗೆ ನನಗೆ ಕೋಪೋದ್ರೇಕವನ್ನು ಎಬ್ಬಿಸುವ ಜನರು; ತೋಟಗಳಲ್ಲಿ ಬಲಿ ಅರ್ಪಿಸಿ, ಇಟ್ಟಿಗೆಯ ಯಜ್ಞವೇದಿಯ ಮೇಲೆ ಧೂಪ ಸುಡುವರು;
- 4ಸಮಾ ಧಿಗಳಲ್ಲಿ ಉಳಿದು ಗವಿಗಳಲ್ಲಿ ತಂಗುವವರು; ಹಂದಿ ಯ ಮಾಂಸವನ್ನು ತಿನ್ನುವವರು ತಮ್ಮ ಪಾತ್ರೆಗಳಲ್ಲಿ ಅಸಹ್ಯವಾದವುಗಳ ಸಾರುಳ್ಳವರು; ಅವರು--
- 5ನಿನ್ನ ಷ್ಟಕ್ಕೆ ನೀನೇ ನಿಂತುಕೋ, ನನ್ನ ಬಳಿಗೆ ಬರಬೇಡ, ಯಾಕಂದರೆ ನಿನಗಿಂತ ನಾನು ಪರಿಶುದ್ಧನಾಗಿದ್ದೇ ನೆಂದು ಹೇಳುವವರು; ಇವರು ನನ್ನ ಮೂಗಿನಲ್ಲಿ ಹೊಗೆಯಾಗಿಯೂ ಹಗಲೆಲ್ಲಾ ಉರಿಯುವ ಬೆಂಕಿ ಯಾಗಿಯೂ ಇದ್ದಾರೆ.
Cross references
- Isaiah 1:29 ಯೆಶಾಯ 1:29ನೀವು ಇಷ್ಟ ಪಟ್ಟ ಏಲಾಮರಗಳ ನಿಮಿತ್ತ ನಾಚಿಕೊಳ್ಳುವರು, ಆರಿಸಿಕೊಂಡ ವನಗಳ ವಿಷಯವಾಗಿ ಲಜ್ಜೆಪಡುವಿರಿ.
- Isaiah 66:17 ಯೆಶಾಯ 66:17ತೋಟಗಳ ಮಧ್ಯದಲ್ಲಿ ಒಂದು ಮರದ ಹಿಂದೆ ತಮ್ಮನ್ನು ಪರಿಶುದ್ಧ ಮಾಡಿ ಕೊಂಡು ಪವಿತ್ರಮಾಡಿಕೊಳ್ಳುವವರೂ ಹಂದಿ ಮಾಂಸವನ್ನೂ ಅಸಹ್ಯವಾದದ್ದನ್ನೂ ಇಲಿಯನ್ನೂ ತಿನ್ನು ವವರೂ ಒಟ್ಟಾಗಿ ದಹಿಸಲ್ಪಡುವರು ಎಂದು ಕರ್ತನು ಹೇಳುತ್ತಾನೆ.
- Deuteronomy 32:21 ಧರ್ಮೋಪದೇಶಕಾಂಡ 32:21ದೇವರಲ್ಲದ್ದರಿಂದ ಅವರು ನನಗೆ ರೋಷ ಹುಟ್ಟಿಸಿ ದರು; ತಮ್ಮ ವ್ಯರ್ಥವಾದವುಗಳಿಂದ ನನಗೆ ಕೋಪ ವನ್ನು ಎಬ್ಬಿಸಿದರು. ಜನವಲ್ಲದ್ದರಿಂದ ನಾನು ಅವರಿಗೆ ರೋಷ ಹುಟ್ಟಿಸುವೆನು; ಮೂಢ ಜನಾಂಗದಿಂದ ಅವರಿಗೆ ಕೋಪವನ್ನೆಬ್ಬಿಸುವೆನು.
- 2 Kings 17:14–17 2 ಅರಸುಗಳು 17:14–17ಆದರೆ ಅವರು ಕೇಳ ದೆಯೂ ತಮ್ಮ ದೇವರಾದ ಕರ್ತನಲ್ಲಿ ನಂಬಿಕೆ ಇಡ ದೆಯೂ ತಮ್ಮ ಪಿತೃಗಳ ಕುತ್ತಿಗೆಯ ಹಾಗೆ ತಮ್ಮ ಕುತ್ತಿಗೆಯನ್ನು ಕಠಿಣಪಡಿಸಿ ಆತನ ಕಟ್ಟಳೆಗಳನ್ನೂ ಆತನು ತಮ್ಮ ಪಿತೃಗಳ ಸಂಗಡ ಮಾಡಿದ ಆತನ ಒಡಂಬಡಿಕೆಯನ್ನೂ ಆತನು ಅವರಿಗೆ ಹೇಳಿದ ಸಾಕ್ಷಿ ಗಳನ್ನೂ ಅಲಕ್ಷ್ಯಮಾಡಿ ವ್ಯರ್ಥವಾದದ್ದನ್ನು ಹಿಂಬಾ ಲಿಸಿ ವ್ಯರ್ಥವಾದವರಾಗಿ -- ನೀವು ಅವರ ಹಾಗೆ ಮಾಡಬೇಡಿರೆಂದು ಕರ್ತನು ಅವರಿಗೆ ಆಜ್ಞಾಪಿಸಿದರೂ ಅವರ ಸುತ್ತಲಿರುವ ಅನ್ಯಜನಾಂಗಗಳ ಹಿಂದೆ ಹೋದರು. ಇದಲ್ಲದೆ ಅವರು ತಮ್ಮ ದೇವರಾದ ಕರ್ತನ ಎಲ್ಲಾ ಆಜ್ಞೆಗಳನ್ನು ಬಿಟ್ಟು ತಮಗೆ ತಾವೇ ಎರಕ ಹೊಯ್ದ ವಿಗ್ರಹಗಳಾದ ಎರಡು ಹೋರಿಗಳನ್ನು ಮಾಡಿಕೊಂಡು ವಿಗ್ರಹಗಳ ತೋಪನ್ನು ಮಾಡಿ ಆಕಾಶದ ಸೈನ್ಯಕ್ಕೆಲ್ಲಾ ಅಡ್ಡಬಿದ್ದು ಬಾಳನನ್ನು ಸೇವಿಸಿ ತಮ್ಮ ಕುಮಾರರನ್ನೂ ಕುಮಾರ್ತೆಯರನ್ನೂ ಬೆಂಕಿಯಲ್ಲಿ ದಾಟಮಾಡಿ ಕಣಿಗಳನ್ನೂ ಶಕುನಗಳನ್ನೂ ಬಳಸಿ ಕರ್ತ ನಿಗೆ ಕೋಪ ಬರುವಂತೆ ಆತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಲು ತಮ್ಮನ್ನು ಮಾರಿಬಿಟ್ಟರು.
- Jeremiah 32:30–35 ಯೆರೆಮೀಯ 32:30–35ಇಸ್ರಾ ಯೇಲಿನ ಮಕ್ಕಳೂ ಯೆಹೂದದ ಮಕ್ಕಳೂ ತಮ್ಮ ಯೌವನದಾರಭ್ಯ ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನೇ ಮಾಡಿದ್ದಾರೆ; ಇಸ್ರಾಯೇಲಿನ ಮಕ್ಕಳು ತಮ್ಮ ಕೈ ಕೆಲಸಗಳಿಂದ ನನಗೆ ಕೋಪೋದ್ರೇಕವನ್ನೇ ಎಬ್ಬಿಸಿದ್ದಾರೆ ಎಂದು ಕರ್ತನು ಅನ್ನುತ್ತಾನೆ. ಈ ಪಟ್ಟಣವು ಅದು ಕಟ್ಟಲ್ಪಟ್ಟ ದಿನವು ಮೊದಲುಗೊಂಡು ಈ ದಿನದ ವರೆಗೂ ನನ್ನ ಕೋಪಕ್ಕೂ ಉಗ್ರಕ್ಕೂ ಗುರಿಯಾಗಿತ್ತು. ಇಸ್ರಾಯೇಲಿನ ಮಕ್ಕಳೂ ಯೆಹೂದನ ಮಕ್ಕಳೂ ಅವರ ಅರಸರೂ ಪ್ರಧಾನರೂ ಯಾಜಕರೂ ಪ್ರವಾದಿ ಗಳೂ ಯೆಹೂದದ ಜನರೂ ಯೆರೂಸಲೇಮಿನ ನಿವಾಸಿಗಳೂ ಸಹಿತವಾಗಿ ನನಗೆ ಕೋಪೋದ್ರೇಕ ಎಬ್ಬಿಸುವ ಹಾಗೆ ಮಾಡಿದ ಎಲ್ಲಾ ಕೆಟ್ಟತನದ ನಿಮಿತ್ತ ನಾನು ಆ ಪಟ್ಟಣವನ್ನು ನನ್ನ ಸನ್ನಿಧಿಯಿಂದ ತೆಗೆದುಹಾಕಬೇಕು. ಅವರು ನನಗೆ ಮುಖವನ್ನಲ್ಲ ಬೆನ್ನನ್ನು ತಿರುಗಿಸಿದ್ದಾರೆ; ಆದರೂ ನಾನು ಅವರಿಗೆ ಬೋಧಿಸಿದೆನು. ಬೆಳಿಗ್ಗೆ ಎದ್ದು ಬೋಧಿಸಿದೆನು, ಆದಾಗ್ಯೂ ಉಪದೇಶ ಹೊಂದುವದಕ್ಕೆ ಅವರು ಕಿವಿ ಗೊಡಲಿಲ್ಲ. ಆದರೆ ನನ್ನ ಹೆಸರಿನಿಂದ ಕರೆಯ ಲ್ಪಟ್ಟಿರುವ ಮನೆಯಲ್ಲಿ ಅದನ್ನು ಅಪವಿತ್ರ ಮಾಡುವ ಹಾಗೆ ತಮ್ಮ ಅಸಹ್ಯಗಳನ್ನು ಇಟ್ಟಿದ್ದಾರೆ. ತಮ್ಮ ಕುಮಾರ ಕುಮಾರ್ತೆಯರನ್ನು ಮೋಲೆಕನಿಗೆ ಬೆಂಕಿ ದಾಟಿಸುವ ಹಾಗೆ ಹಿನ್ನೋಮನ ಮಗನ ಉನ್ನತ ಸ್ಥಳಗಳನ್ನು ಕಟ್ಟಿಸಿದ್ದಾರೆ; ಅದನ್ನು ನಾನು ಅವರಿಗೆ ಆಜ್ಞಾಪಿಸಲಿಲ್ಲ; ಅಂಥಾ ಅಸಹ್ಯ ನಡಿಸಿ, ಯೆಹೂದ ವನ್ನು ಪಾಪ ಮಾಡಿಸುವದು ನನ್ನ ಮನಸ್ಸಿನೊಳಗೆ ಬರಲಿಲ್ಲ.
- Job 1:11 ಯೋಬನು 1:11ಆದರೆ ನಿನ್ನ ಕೈ ಚಾಚಿ ಅವನಿಗಿದ್ದದ್ದನ್ನೆಲ್ಲಾ ಮುಟ್ಟು; ಅವನು ನಿನ್ನೆದುರಿನಲ್ಲಿಯೇ ನಿನ್ನನ್ನು ಶಪಿಸುವನು ಅಂದನು.
- Isaiah 3:8 ಯೆಶಾಯ 3:8ಯೆರೂಸಲೇಮು ಹಾಳಾಗಿದೆ, ಯೆಹೂ ದವು ಬಿದ್ದುಹೋಗಿದೆ, ಆದದರಿಂದ ಅವರ ನಡೆನುಡಿ ಗಳು ಕರ್ತನಿಗೆ ವಿರುದ್ಧವಾಗಿ ಆತನ ಪ್ರಭಾವದ ದೃಷ್ಟಿ ಯನ್ನು ಕೆರಳಿಸುತ್ತವಲ್ಲವೇ.
- Deuteronomy 32:16–19 ಧರ್ಮೋಪದೇಶಕಾಂಡ 32:16–19ಅನ್ಯದೇವತೆಗಳಿಂದ ಆತನಿಗೆ ಅವರು ರೋಷ ಹುಟ್ಟಿಸಿದರು. ಅಸಹ್ಯವಾದವುಗಳಿಂದ ಆತನಿಗೆ ಕೋಪ ವನ್ನು ಎಬ್ಬಿಸಿದರು. ದೇವರಿಗೆ ಅಲ್ಲ, ದೆವ್ವಗಳಿಗೆ, ಅವರು ಅರಿಯದ ದೇವರುಗಳಿಗೆ, ಇತ್ತಲಾಗಿ ಬಂದ ಹೊಸ ದೇವರು ಗಳಿಗೆ ನಿಮ್ಮ ಪಿತೃಗಳು ಭಯಪಡದವುಗಳಿಗೆ ಬಲಿ ಅರ್ಪಿಸಿದರು. ನಿನ್ನನ್ನು ಹುಟ್ಟಿಸಿದ ಬಂಡೆಯನ್ನು ನೆನಸದೆ ನಿನ್ನನ್ನು ರೂಪಿಸಿದ ದೇವರನ್ನು ಮರೆತುಬಿಟ್ಟಿದ್ದಿ. ಕರ್ತನು ಅದನ್ನು ನೋಡಿ ಕೋಪದಿಂದ ತನ್ನ ಕುಮಾರ ಕುಮಾರ್ತೆಯರನ್ನು ಅಸಹ್ಯಿಸಿಕೊಂಡನು.
- Jeremiah 3:6 ಯೆರೆಮೀಯ 3:6ಕರ್ತನು ಅರಸನಾದ ಯೋಷೀಯನ ದಿವಸಗಳಲ್ಲಿ ನನಗೆ ಹೇಳಿದ್ದೇನಂದರೆ--ಹಿಂದಿರುಗಿದ ಇಸ್ರಾ ಯೇಲು ಮಾಡಿದ್ದನ್ನು ನೀನು ನೋಡಿದ್ದಿಯೋ? ಅವಳು ಒಂದೊಂದು ಎತ್ತರವಾದ ಬೆಟ್ಟದ ಮೇಲೆಯೂ ಒಂದೊಂದು ಹಸುರಾದ ಮರದ ಕೆಳಗೂ ಹೋಗಿ ಸೂಳೆತನ ಮಾಡಿದ್ದಾಳೆ.
- Psalm 78:58 ಕೀರ್ತನೆಗಳು 78:58ತಮ್ಮ ಉನ್ನತ ಸ್ಥಳಗಳಿಂದ ಆತನಿಗೆ ಕೋಪವನ್ನೆಬ್ಬಿಸಿ ಕೆತ್ತಿದ ತಮ್ಮ ವಿಗ್ರಹಗಳಿಂದ ಆತನಿಗೆ ರೋಷವನ್ನೆಬ್ಬಿಸಿದರು.
- Job 2:5 ಯೋಬನು 2:5ಆದರೆ ನಿನ್ನ ಕೈಚಾಚಿ ಅವನ ಎಲುಬನ್ನೂ ಅವನ ಮಾಂಸವನ್ನೂ ಮುಟ್ಟಿದರೆ ಅವನು ನಿನ್ನ ಎದುರಿನಲ್ಲಿ ನಿನ್ನನ್ನು ಶಪಿಸುವನು ಅಂದನು.
- Ezekiel 20:28 ಯೆಹೆಜ್ಕೇಲನು 20:28ನಾನು ಕೈ ಎತ್ತಿ ಅವರಿಗೆ ಕೊಟ್ಟ ದೇಶದಲ್ಲಿ ನಾನು ಅವರನ್ನು ಬರಮಾಡಿದ ಮೇಲೆ ಅವರು ಎತ್ತರವಾದ ಎಲ್ಲಾ ಗುಡ್ಡಗಳನ್ನೂ ಗಾತ್ರವಾದ ಮರಗಳನ್ನೂ ನೋಡಿ ಅಲ್ಲಿ ತಮ್ಮ ಬಲಿಗಳನ್ನರ್ಪಿಸಿ ಅಲ್ಲಿ ರೇಗಿಸುವ ತಮ್ಮ ಕಾಣಿಕೆಗಳನ್ನರ್ಪಿಸಿ ಸುವಾಸನೆ ಗಳನ್ನಿಟ್ಟು ಪಾನದ್ರವ್ಯವನ್ನು ಸುರಿದರು.