Jeremiah · chapter 3 · verse 6
Jeremiah 3:6 in Kannada
ಕರ್ತನು ಅರಸನಾದ ಯೋಷೀಯನ ದಿವಸಗಳಲ್ಲಿ ನನಗೆ ಹೇಳಿದ್ದೇನಂದರೆ--ಹಿಂದಿರುಗಿದ ಇಸ್ರಾ ಯೇಲು ಮಾಡಿದ್ದನ್ನು ನೀನು ನೋಡಿದ್ದಿಯೋ? ಅವಳು ಒಂದೊಂದು ಎತ್ತರವಾದ ಬೆಟ್ಟದ ಮೇಲೆಯೂ ಒಂದೊಂದು ಹಸುರಾದ ಮರದ ಕೆಳಗೂ ಹೋಗಿ ಸೂಳೆತನ ಮಾಡಿದ್ದಾಳೆ.
Kartanu arasanaada yosheeyana divasagalalli nanage heliddenandare--hindirugida israa yelu maadiddannu neenu nodiddiyo? Avalu ondondu ettaravaada bettada meleyoo ondondu hasuraada marada kelagoo hogi sooletana maadiddaale.
Jeremiah 3:6 in English
- King James Version (KJV)
- The LORD said also unto me in the days of Josiah the king, Hast thou seen [that] which backsliding Israel hath done? she is gone up upon every high mountain and under every green tree, and there hath played the harlot.
- World English Bible (WEB)
- Moreover, the LORD said to me in the days of Josiah the king, “Have you seen that which backsliding Israel has done? She has gone up on every high mountain and under every green tree, and has played the prostitute there.
- American Standard Version (ASV)
- Moreover Jehovah said unto me in the days of Josiah the king, Hast thou seen that which backsliding Israel hath done? she is gone up upon every high mountain and under every green tree, and there hath played the harlot.
- Bible in Basic English (BBE)
- And the Lord said to me in the days of Josiah the king, Have you seen what Israel, turning away from me, has done? She has gone up on every high mountain and under every branching tree, acting like a loose woman there.
- Darby Translation (DBY)
- And Jehovah said unto me in the days of Josiah the king, Hast thou seen what backsliding Israel hath done? She hath gone up upon every high mountain and under every green tree, and there hath committed fornication.
- Webster's Bible (WBS)
- The LORD said also to me in the days of Josiah the king, Hast thou seen [that] which backsliding Israel hath done? she hath gone up upon every high mountain, and under every green tree, and there hath played the harlot.
- Young's Literal Translation (YLT)
- And Jehovah saith unto me, in the days of Josiah the king, 'Hast thou seen that which backsliding Israel hath done? She is going on every high mountain, and unto the place of every green tree, and committeth fornication there.
Read in context
- 4ಈಗಿನಿಂದಲೇ ನನಗೆ --ನನ್ನ ತಂದೆಯೇ, ನನ್ನ ಯೌವನದ ಮಾರ್ಗ ದರ್ಶಕನು ನೀನೇ ಎಂದು ನೀನು ಕೂಗುವದಿಲ್ಲವೋ?
- 5ಆತನು ಎಂದೆಂದಿಗೂ ತನ್ನ ಕೋಪವನ್ನು ಕಾದಿರಿಸಿ ಕೊಂಡಿರುವನೋ? ಇಗೋ, ನೀನು ಅಪೇಕ್ಷಿಸಿದ ಹಾಗೆ ಮಾತನಾಡಿದ್ದೀ ಮತ್ತು ಕೆಟ್ಟವುಗಳನ್ನು ನಡಿಸಿದ್ದೀ.
- 6ಕರ್ತನು ಅರಸನಾದ ಯೋಷೀಯನ ದಿವಸಗಳಲ್ಲಿ ನನಗೆ ಹೇಳಿದ್ದೇನಂದರೆ--ಹಿಂದಿರುಗಿದ ಇಸ್ರಾ ಯೇಲು ಮಾಡಿದ್ದನ್ನು ನೀನು ನೋಡಿದ್ದಿಯೋ? ಅವಳು ಒಂದೊಂದು ಎತ್ತರವಾದ ಬೆಟ್ಟದ ಮೇಲೆಯೂ ಒಂದೊಂದು ಹಸುರಾದ ಮರದ ಕೆಳಗೂ ಹೋಗಿ ಸೂಳೆತನ ಮಾಡಿದ್ದಾಳೆ.
- 7ಅವಳು ಇವುಗಳನ್ನೆಲ್ಲಾ ಮಾಡಿದ ಮೇಲೆ ನಾನು--ನನ್ನ ಬಳಿಗೆ ತಿರುಗಿಕೋ ಅಂದೆನು; ಆದರೆ ಅವಳು ತಿರುಗಿಕೊಳ್ಳಲಿಲ್ಲ; ಅವಳ ವಂಚನೆಯುಳ್ಳ ಸಹೋದರಿಯಾದ ಯೆಹೂದಳು ಅದನ್ನು ನೋಡಿದಳು.
- 8ಆಗ ನಾನು ನೋಡಿದ್ದೇ ನಂದರೆ, ಹಿಂದಿರುಗಿದ ಇಸ್ರಾಯೇಲು ವ್ಯಭಿಚಾರ ಮಾಡಿದ ಎಲ್ಲಾ ಕಾರಣಗಳ ನಿಮಿತ್ತ ನಾನು ಅವಳನ್ನು ಬಿಟ್ಟುಬಿಟ್ಟು ತ್ಯಾಗಪತ್ರವನ್ನು ಕೊಟ್ಟಿದ್ದಾಗ್ಯೂ ವಂಚನೆ ಯುಳ್ಳ ಅವಳ ಸಹೋದರಿಯಾದ ಯೆಹೂದಳು ಭಯಪಡದೆ ತಾನು ಕೂಡ ಹೋಗಿ ಸೂಳೆತನವನ್ನು ಮಾಡಿದಳು.
Cross references
- Jeremiah 3:8 ಯೆರೆಮೀಯ 3:8ಆಗ ನಾನು ನೋಡಿದ್ದೇ ನಂದರೆ, ಹಿಂದಿರುಗಿದ ಇಸ್ರಾಯೇಲು ವ್ಯಭಿಚಾರ ಮಾಡಿದ ಎಲ್ಲಾ ಕಾರಣಗಳ ನಿಮಿತ್ತ ನಾನು ಅವಳನ್ನು ಬಿಟ್ಟುಬಿಟ್ಟು ತ್ಯಾಗಪತ್ರವನ್ನು ಕೊಟ್ಟಿದ್ದಾಗ್ಯೂ ವಂಚನೆ ಯುಳ್ಳ ಅವಳ ಸಹೋದರಿಯಾದ ಯೆಹೂದಳು ಭಯಪಡದೆ ತಾನು ಕೂಡ ಹೋಗಿ ಸೂಳೆತನವನ್ನು ಮಾಡಿದಳು.
- Jeremiah 7:24 ಯೆರೆಮೀಯ 7:24ಆದರೆ ಅವರು ಕೇಳಲಿಲ್ಲ, ಇಲ್ಲವೆ ಕಿವಿಗೊಡಲಿಲ್ಲ; ಅವರು ತಮ್ಮ ದುಷ್ಟ ಹೃದಯದ ಆಲೋಚನೆಯ ಪ್ರಕಾರವೂ ಕಲ್ಪನೆಯ ಪ್ರಕಾರವೂ ನಡಕೊಂಡು ಮುಂದಕ್ಕೆ ಅಲ್ಲ, ಹಿಂದಕ್ಕೆ ಹೋದರು.
- Jeremiah 17:2 ಯೆರೆಮೀಯ 17:2ಅವರ ಮಕ್ಕಳು ಅವರ ಬಲಿಪೀಠಗ ಳನ್ನೂ ಹಸುರಾದ ಗಿಡಗಳಲ್ಲಿಯೂ ಎತ್ತರವಾದ ಗುಡ್ಡಗಳ ಮೇಲೆಯೂ ಇರುವ ಅವರ ತೋಪುಗಳನ್ನೂ ಜ್ಞಾಪಕಮಾಡಿಕೊಳ್ಳುತ್ತಾರಲ್ಲಾ.
- 2 Kings 17:7–17 2 ಅರಸುಗಳು 17:7–17ಯಾಕೆ ಹೀಗಾಯಿತಂದರೆ, ಇಸ್ರಾಯೇಲಿನ ಮಕ್ಕಳು, ಐಗುಪ್ತದ ಅರಸನಾದ ಫರೋಹನ ಕೈಯಿಂದ ತಪ್ಪಿಸಿ ಐಗುಪ್ತದೇಶದೊಳಗಿಂದ ಬರ ಮಾಡಿದ ತಮ್ಮ ದೇವರಾದ ಕರ್ತನಿಗೆ ವಿರೋಧ ವಾಗಿ ಪಾಪಮಾಡಿ ಇತರ ದೇವರುಗಳಿಗೆ ಭಯಪಟ್ಟರು. ಇಸ್ರಾಯೇಲ್ಯರ ಮುಂದೆ ಕರ್ತನು ಹೊರ ಡಿಸಿಬಿಟ್ಟ ಅನ್ಯ ಜನಾಂಗಗಳ ಕಟ್ಟಳೆಗಳಲ್ಲಿಯೂ ಇಸ್ರಾ ಯೇಲಿನ ಅರಸುಗಳು ಮಾಡಿದ ಕಟ್ಟಳೆಗಳಲ್ಲಿಯೂ ನಡೆದರು. ಇಸ್ರಾಯೇಲಿನ ಮಕ್ಕಳು ಗುಪ್ತವಾಗಿ ತಮ್ಮ ದೇವರಾದ ಕರ್ತನಿಗೆ ವಿರೋಧವಾಗಿ ಅಯುಕ್ತ ವಾದವುಗಳನ್ನು ಮಾಡಿ ಬರುವ ಸ್ಥಳಗಳು ಮೊದಲು ಗೊಂಡು ಕೋಟೆಯುಳ್ಳ ಪಟ್ಟಣಗಳ ವರೆಗೂ ತಮ್ಮ ಎಲ್ಲಾ ಪಟ್ಟಣಗಳಲ್ಲಿ ತಮಗೆ ಉನ್ನತ ಸ್ಥಳಗಳನ್ನು ಕಟ್ಟಿಸಿ ಕೊಂಡಿದ್ದರು. ಇದಲ್ಲದೆ ಅವರು ಎತ್ತರವಾದ ಎಲ್ಲಾ ಗುಡ್ಡಗಳಲ್ಲಿ ತೋಪುಗಳನ್ನು ಹಾಕಿ ಹಸುರಾದ ಎಲ್ಲಾ ಮರಗಳ ಕೆಳಗೂ ತಮಗೆ ವಿಗ್ರಹಗಳನ್ನು ನಿಲ್ಲಿಸಿ ಅಲ್ಲಿ ಕರ್ತನು ತಮ್ಮ ಮುಂದೆ ಓಡಿಸಿಬಿಟ್ಟ ಅನ್ಯ ಜನಾಂಗಗಳ ಹಾಗೆ ಅವರು ಎಲ್ಲಾ ಉನ್ನತ ಸ್ಥಳಗಳಲ್ಲಿ ಧೂಪವನ್ನು ಸುಟ್ಟು ಕರ್ತನನ್ನು ಸಿಟ್ಟುಗೊಳಿಸುವ ಹಾಗೆ ಕೆಟ್ಟ ಕಾರ್ಯಗಳನ್ನು ಮಾಡಿದರು-- ನೀವು ಈ ಕಾರ್ಯವನ್ನು ಮಾಡಬೇಡಿರೆಂದು ಕರ್ತನು ತಮಗೆ ಹೇಳಿದ ಮಣ್ಣು ಪ್ರತಿಮೆಗಳನ್ನು ಸೇವಿಸಿದರು. ನೀವು ನಿಮ್ಮ ದುರ್ಮಾರ್ಗಗಳನ್ನು ಬಿಟ್ಟು ತಿರುಗಿ ನಾನು ನಿಮ್ಮ ಪಿತೃಗಳಿಗೆ ಆಜ್ಞಾಪಿಸಿದ, ಪ್ರವಾದಿಗಳಾದ ನನ್ನ ಸೇವಕರ ಮುಖಾಂತರ ನಾನು ನಿಮಗೆ ಕಳುಹಿಸಿದ ನ್ಯಾಯಪ್ರಮಾಣದ ಪ್ರಕಾರ ನನ್ನ ಆಜ್ಞೆಗಳನ್ನೂ ಕಟ್ಟಳೆಗಳನ್ನೂ ಕೈಕೊಳ್ಳಿರೆಂದು ಕರ್ತನು ಎಲ್ಲಾ ಪ್ರವಾ ದಿಗಳ ಮುಖಾಂತರವಾಗಿಯೂ ಎಲ್ಲಾ ದರ್ಶಿಗಳ ಮುಖಾಂತರವಾಗಿಯೂ ಇಸ್ರಾಯೇಲಿಗೂ ಯೆಹೂ ದಕ್ಕೂ ಸಾಕ್ಷಿ ಹೇಳಿದನು. ಆದರೆ ಅವರು ಕೇಳ ದೆಯೂ ತಮ್ಮ ದೇವರಾದ ಕರ್ತನಲ್ಲಿ ನಂಬಿಕೆ ಇಡ ದೆಯೂ ತಮ್ಮ ಪಿತೃಗಳ ಕುತ್ತಿಗೆಯ ಹಾಗೆ ತಮ್ಮ ಕುತ್ತಿಗೆಯನ್ನು ಕಠಿಣಪಡಿಸಿ ಆತನ ಕಟ್ಟಳೆಗಳನ್ನೂ ಆತನು ತಮ್ಮ ಪಿತೃಗಳ ಸಂಗಡ ಮಾಡಿದ ಆತನ ಒಡಂಬಡಿಕೆಯನ್ನೂ ಆತನು ಅವರಿಗೆ ಹೇಳಿದ ಸಾಕ್ಷಿ ಗಳನ್ನೂ ಅಲಕ್ಷ್ಯಮಾಡಿ ವ್ಯರ್ಥವಾದದ್ದನ್ನು ಹಿಂಬಾ ಲಿಸಿ ವ್ಯರ್ಥವಾದವರಾಗಿ -- ನೀವು ಅವರ ಹಾಗೆ ಮಾಡಬೇಡಿರೆಂದು ಕರ್ತನು ಅವರಿಗೆ ಆಜ್ಞಾಪಿಸಿದರೂ ಅವರ ಸುತ್ತಲಿರುವ ಅನ್ಯಜನಾಂಗಗಳ ಹಿಂದೆ ಹೋದರು. ಇದಲ್ಲದೆ ಅವರು ತಮ್ಮ ದೇವರಾದ ಕರ್ತನ ಎಲ್ಲಾ ಆಜ್ಞೆಗಳನ್ನು ಬಿಟ್ಟು ತಮಗೆ ತಾವೇ ಎರಕ ಹೊಯ್ದ ವಿಗ್ರಹಗಳಾದ ಎರಡು ಹೋರಿಗಳನ್ನು ಮಾಡಿಕೊಂಡು ವಿಗ್ರಹಗಳ ತೋಪನ್ನು ಮಾಡಿ ಆಕಾಶದ ಸೈನ್ಯಕ್ಕೆಲ್ಲಾ ಅಡ್ಡಬಿದ್ದು ಬಾಳನನ್ನು ಸೇವಿಸಿ ತಮ್ಮ ಕುಮಾರರನ್ನೂ ಕುಮಾರ್ತೆಯರನ್ನೂ ಬೆಂಕಿಯಲ್ಲಿ ದಾಟಮಾಡಿ ಕಣಿಗಳನ್ನೂ ಶಕುನಗಳನ್ನೂ ಬಳಸಿ ಕರ್ತ ನಿಗೆ ಕೋಪ ಬರುವಂತೆ ಆತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಲು ತಮ್ಮನ್ನು ಮಾರಿಬಿಟ್ಟರು.
- Ezekiel 23:11 ಯೆಹೆಜ್ಕೇಲನು 23:11ಅವಳ ಸಹೋದರಿ ಒಹೊಲೀಬಳು ಇದನ್ನು ನೋಡಿದಾಗ ಅವಳಿಗಿಂತ ಅಧಿಕವಾಗಿ ಮೋಹಗೊಂಡಳು. ತನ್ನ ಸಹೋದರಿಯ ವ್ಯಭಿಚಾರಕ್ಕಿಂತಲೂ ಹೆಚ್ಚಾಗಿ ವ್ಯಭಿಚಾರಗಳನ್ನು ನಡೆ ಸಿದಳು.
- Isaiah 57:7 ಯೆಶಾಯ 57:7ಮಹೋನ್ನತ ಪರ್ವತದಲ್ಲಿ ನೀನು ಹಾಸಿಗೆಯನ್ನು ಹಾಕಿಕೊಂಡಿದ್ದೀ. ಬಲಿ ಅರ್ಪಿಸುವ ದಕ್ಕೂ ಅಲ್ಲಿಗೆ ಏರಿದ್ದೀ.
- Jeremiah 3:11–14 ಯೆರೆಮೀಯ 3:11–14ಕರ್ತನು ನನಗೆ ಹೇಳಿದ್ದೇ ನಂದರೆ--ಹಿಂದಿರುಗಿದ ಇಸ್ರಾಯೇಲು ವಂಚನೆಯುಳ್ಳ ಯೆಹೂದಕ್ಕಿಂತ ಹೆಚ್ಚಾಗಿ ತನ್ನನ್ನು ನೀತಿವಂತಳನ್ನಾಗಿ ಮಾಡಿಕೊಂಡಿದ್ದಾಳೆ. ನೀನು ಹೋಗಿ ಉತ್ತರ ದಿಕ್ಕಿಗೆ ಈ ಮಾತುಗಳನ್ನು ಸಾರು; ಯಾವವಂದರೆ--ಹಿಂದಿ ರುಗಿದ ಇಸ್ರಾಯೇಲೇ, ತಿರುಗಿಕೋ ಎಂದು ಕರ್ತನು ಅನ್ನುತ್ತಾನೆ. ನಾನು ನನ್ನ ಕೋಪವನ್ನು ನಿನ್ನ ಮೇಲೆ ಬೀಳ ಮಾಡುವದಿಲ್ಲ; ನಾನು ದಯಾಪರನು ಎಂದು ಕರ್ತನು ಅನ್ನುತ್ತಾನೆ, ಎಂದೆಂದಿಗೂ ಕೋಪವಿಟ್ಟು ಕೊಳ್ಳುವದಿಲ್ಲ. ನಿನ್ನ ದೇವರಾದ ಕರ್ತನಿಗೆ ವಿರೋಧ ವಾಗಿ ದ್ರೋಹಮಾಡಿ ಒಂದೊಂದು ಹಸಿರು ಮರದ ಕೆಳಗೆ ನಿನ್ನ ಮಾರ್ಗಗಳನ್ನು ಅನ್ಯರಿಗೆ ಚದರಿಸಿ ನನ್ನ ಶಬ್ದಕ್ಕೆ ಕಿವಿಗೊಡಲಿಲ್ಲವೆಂಬ ನಿನ್ನ ಅಕ್ರಮವನ್ನು ಮಾತ್ರ ಅರಿಕೆಮಾಡೆಂದು ಕರ್ತನು ಅನ್ನುತ್ತಾನೆ. ಹಿಂಜರಿದ ಮಕ್ಕಳೇ, ತಿರುಗಿಕೊಳ್ಳಿರೆಂದು ಕರ್ತನು ಅನ್ನುತ್ತಾನೆ; ನಾನು ನಿಮ್ಮನ್ನು ಮದುವೆಯಾಗಿದ್ದೇನೆ; ನಿಮ್ಮನ್ನು ಪಟ್ಟಣದೊಳಗಿಂದ ಒಬ್ಬನಂತೆಯೂ ಗೋತ್ರ ದೊಳಗಿಂದ ಇಬ್ಬರಂತೆಯೂ ತೆಗೆದುಕೊಂಡು ಚೀಯೋನಿಗೆ ಕರಕೊಂಡು ಬರುವೆನು.
- Jeremiah 2:19–20 ಯೆರೆಮೀಯ 2:19–20ನಿನ್ನ ಕೆಟ್ಟತನವೇ ನಿನ್ನನ್ನು ತಿದ್ದುವದು; ನಿನ್ನ ಹಿಂಜಾರಿಕೆಗಳೇ ನಿನ್ನನ್ನು ಗದರಿಸುವವು; ಹೀಗಿ ರುವದರಿಂದ ನೀನು ನಿನ್ನ ದೇವರಾದ ಕರ್ತನನ್ನು ಬಿಟ್ಟದ್ದೂ ನನ್ನ ಭಯವೂ ನಿನ್ನಲ್ಲಿ ಇಲ್ಲದಿರುವದೂ ಕೆಟ್ಟದ್ದೂ ಕಹಿಯಾದದ್ದೂ ಎಂದು ತಿಳುಕೊಂಡು ನೋಡು ಎಂದು ಸೈನ್ಯಗಳ ಕರ್ತನಾದ ದೇವರು ಅನ್ನುತ್ತಾನೆ. ಪೂರ್ವದಲ್ಲಿ ನಾನು ನಿನ್ನ ನೊಗವನ್ನು ಮುರಿದು ನಿನ್ನ ಬಂಧನಗಳನ್ನು ಹರಿದುಬಿಟ್ಟೆನು; ನೀನು--ನಾನು ವಿಾರುವದಿಲ್ಲ ಎಂದು ನೀನು ಹೇಳಿದಿ; ಆದರೆ ಒಂದೊಂದು ಎತ್ತರವಾದ ಗುಡ್ಡದ ಮೇಲೆಯೂ ಒಂದೊಂದು ಹಸುರಾದ ಮರದ ಕೆಳಗೂ ನೀನು ಸೂಳೆಯಾಗಿ ಅಲೆದಾಡುತ್ತಿ.
- Ezekiel 20:28 ಯೆಹೆಜ್ಕೇಲನು 20:28ನಾನು ಕೈ ಎತ್ತಿ ಅವರಿಗೆ ಕೊಟ್ಟ ದೇಶದಲ್ಲಿ ನಾನು ಅವರನ್ನು ಬರಮಾಡಿದ ಮೇಲೆ ಅವರು ಎತ್ತರವಾದ ಎಲ್ಲಾ ಗುಡ್ಡಗಳನ್ನೂ ಗಾತ್ರವಾದ ಮರಗಳನ್ನೂ ನೋಡಿ ಅಲ್ಲಿ ತಮ್ಮ ಬಲಿಗಳನ್ನರ್ಪಿಸಿ ಅಲ್ಲಿ ರೇಗಿಸುವ ತಮ್ಮ ಕಾಣಿಕೆಗಳನ್ನರ್ಪಿಸಿ ಸುವಾಸನೆ ಗಳನ್ನಿಟ್ಟು ಪಾನದ್ರವ್ಯವನ್ನು ಸುರಿದರು.
- Ezekiel 16:24–25 ಯೆಹೆಜ್ಕೇಲನು 16:24–25ನೀನು ಪ್ರತಿಯೊಂದು ಬೀದಿಯಲ್ಲಿಯೂ ಉನ್ನತ ಸ್ಥಳಗಳನ್ನು ಕಟ್ಟಿ ನಿನಗೆ ಉತ್ತಮವಾದ ಸ್ಥಳಗ ಳನ್ನು ಮಾಡಿಕೊಂಡಿರುವಿ. ಪ್ರತಿಯೊಂದು ಕಡೆ ಮೂಲೆ ಮೂಲೆಗೂ ಉನ್ನತ ಸ್ಥಳವನ್ನು ಕಟ್ಟಿ ನಿನ್ನ ಸೌಂದರ್ಯವನ್ನು ದುರುಪಯೋಗಪಡಿಸಿಕೊಂಡು ಹಾದು ಹೋಗುವ ಪ್ರತಿಯೊಬ್ಬರಿಗೂ ನಿನ್ನ ಕಾಲು ಗಳನ್ನು ಅಗಲಿಸಿದಿ; ನಿನ್ನ ವ್ಯಭಿಚಾರವನ್ನು ವೃದ್ಧಿಸಿದಿ.
- Ezekiel 16:31 ಯೆಹೆಜ್ಕೇಲನು 16:31ಪ್ರತಿಯೊಂದು ಬೀದಿಯ ಕೊನೆಯಲ್ಲಿಯೂ ಗದ್ದುಗೆಯನ್ನು ಕಟ್ಟಿ ಪ್ರತಿಯೊಂದು ಹಾದಿಯಲ್ಲಿಯೂ ಉನ್ನತಸ್ಥಾನವನ್ನು ಮಾಡಿಕೊಂಡು ಕೂಲಿಯನ್ನು ಉದಾಸೀನ ಮಾಡುವ ವ್ಯಭಿಚಾರಿಣಿಯು ನೀನಲ್ಲ;
- 1 Kings 14:23 1 ಅರಸುಗಳು 14:23ಅವರು ಎತ್ತರವಾದ ಪ್ರತಿ ಗುಡ್ಡದ ಮೇಲೆಯೂ ಹಸುರಾದ ಪ್ರತಿ ಗಿಡದ ಕೆಳಗೂ ತೋಪು ಗಳನ್ನು ವಿಗ್ರಹಗಳನ್ನು ಉನ್ನತ ಸ್ಥಳಗಳನ್ನು ತಮಗಾಗಿ ಮಾಡಿಕೊಂಡರು. ಇದಲ್ಲದೆ ದೇಶದಲ್ಲಿ ಪುರುಷ ಸಂಗಮರಿದ್ದರು.
Original words (Hebrew)
- said · H559אָמַר ʼâmar
- days · H3117יוֹם yôwm
- Josiah · H2977יֹאשִׁיָּה Yôʼshîyâh
- king · H4428מֶלֶךְ melek
- seen · H7200רָאָה râʼâh
- backsliding · H4878מְשׁוּבָה mᵉshûwbâh
- Israel · H3478יִשְׂרָאֵל Yisrâʼêl
- done · H6213עָשָׂה ʻâsâh
- up · H1980הָלַךְ hâlak
- high · H1364גָּבֹהַּ gâbôahh
- mountain · H2022הַר har
- under · H8478תַּחַת tachath
- green · H7488רַעֲנָן raʻănân
- tree · H6086עֵץ ʻêts
- harlot · H2181זָנָה zânâh