Isaiah · chapter 66 · verse 14
Isaiah 66:14 in Kannada
ನೀವು ಅದನ್ನು ನೋಡುವಾಗ ನಿಮ್ಮ ಹೃದಯವು ಸಂತೋಷಿಸುವದು, ನಿಮ್ಮ ಎಲುಬು ಗಳು ಹಸಿರು ಪಲ್ಯದ ಹಾಗೆ ಚಿಗುರುವವು; ಕರ್ತನ ಕೈ ಆತನ ಸೇವಕನ ಕಡೆಗೂ ಆತನ ರೌದ್ರವು ಆತನ ಶತ್ರುಗಳ ಕಡೆಗೂ ಕಾಣಬರುವದು.
Neevu adannu noduvaaga nimma hrudayavu santoshisuvadu, nimma elubu galu hasiru palyada haage chiguruvavu; kartana kai aatana sevakana kadegoo aatana raudravu aatana shatrugala kadegoo kaanabaruvadu.
Isaiah 66:14 in English
- King James Version (KJV)
- And when ye see [this], your heart shall rejoice, and your bones shall flourish like an herb: and the hand of the LORD shall be known toward his servants, and [his] indignation toward his enemies.
- World English Bible (WEB)
- You will see it, and your heart shall rejoice, and your bones will flourish like the tender grass. The LORD’s hand will be known among his servants; and he will have indignation against his enemies.
- American Standard Version (ASV)
- And ye shall see [it], and your heart shall rejoice, and your bones shall flourish like the tender grass: and the hand of Jehovah shall be known toward his servants; and he will have indignation against his enemies.
- Bible in Basic English (BBE)
- And you will see it and your heart will be glad, and your bones will get new strength, like young grass: and the hand of the Lord will be seen at work for his servants, and his wrath against his haters.
- Darby Translation (DBY)
- And ye shall see [this], and your heart shall rejoice, and your bones shall flourish like the grass; and the hand of Jehovah shall be known toward his servants, and he will have indignation toward his enemies.
- Webster's Bible (WBS)
- And when ye see [this] , your heart shall rejoice, and your bones shall flourish like an herb: and the hand of the LORD shall be known towards his servants, and [his] indignation towards his enemies.
- Young's Literal Translation (YLT)
- And ye have seen, and rejoiced hath your heart, And your bones as tender grass do flourish, And the hand of Jehovah hath been known unto His servants, And He hath been indignant with His enemies.
Read in context
- 12ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನದಿಯಂತೆ ಸಮಾಧಾನವನ್ನೂ ಹರಿಯುವ ಹಳ್ಳ ದಂತೆ ಜನಾಂಗಗಳ ವೈಭವವನ್ನೂ ಅವಳ ಕಡೆಗೆ ಬರಮಾಡುವೆನು; ಆಗ ನೀವು ಅವುಗಳನ್ನು ಹೀರಿ ಕೊಂಡು ಅವಳ ಪಕ್ಕೆಗಳಲ್ಲಿ ಹೊರಲ್ಪಡುವಿರಿ, ಅವಳ ಮೊಣಕಾಲುಗಳ ಮೇಲೆ ಆಡಿಸಲ್ಪಡುವಿರಿ,
- 13ಒಬ್ಬ ನನ್ನು ಅವನ ತಾಯಿ ಆದರಿಸುವ ಪ್ರಕಾರವೇ ನಾನು ನಿಮ್ಮನ್ನು ಆದರಿಸುವೆನು; ಯೆರೂಸಲೇಮಿನಲ್ಲಿ ಆದ ರಣೆ ಹೊಂದುವಿರಿ.
- 14ನೀವು ಅದನ್ನು ನೋಡುವಾಗ ನಿಮ್ಮ ಹೃದಯವು ಸಂತೋಷಿಸುವದು, ನಿಮ್ಮ ಎಲುಬು ಗಳು ಹಸಿರು ಪಲ್ಯದ ಹಾಗೆ ಚಿಗುರುವವು; ಕರ್ತನ ಕೈ ಆತನ ಸೇವಕನ ಕಡೆಗೂ ಆತನ ರೌದ್ರವು ಆತನ ಶತ್ರುಗಳ ಕಡೆಗೂ ಕಾಣಬರುವದು.
- 15ಇಗೋ, ಕರ್ತನು ಬೆಂಕಿಯೊಡನೆ ಬರುವನು. ಆತನ ರಥಗಳು ಬಿರುಗಾಳಿಯ ಹಾಗೆ ಇರುವವು; ಉಗ್ರದಿಂದ ತನ್ನ ಕೋಪವನ್ನೂ ಅಗ್ನಿಜ್ವಾಲೆಗಳಿಂದ ತನ್ನ ಗದರಿಕೆ ಯನ್ನೂ ಸಲ್ಲಿಸುವದಕ್ಕಾಗಿಯೇ ಬರುವನು.
- 16ಬೆಂಕಿ ಯಿಂದಲೂ ತನ್ನ ಕತ್ತಿಯಿಂದಲೂ ಕರ್ತನು ಮನುಷ್ಯ ರಿಗೆಲ್ಲಾ ನ್ಯಾಯತೀರಿಸುವನು; ಕರ್ತನಿಂದ ಕೊಲ್ಲಲ್ಪಟ್ಟ ವರು ಅನೇಕರಾಗಿರುವರು.
Cross references
- Zechariah 10:7 ಜೆಕರ್ಯ 10:7ಎಫ್ರಾಯಾಮಿನವರು ಶೂರನಂತೆ ಇರುವರು; ಅವರ ಹೃದಯವು ದ್ರಾಕ್ಷಾರಸದಿಂದಾದ ಹಾಗೆ ಸಂತೋಷಪಡುವದು; ಹೌದು, ಅವರ ಮಕ್ಕಳು ನೋಡಿ ಸಂತೋಷಿಸುವರು; ಅವರ ಹೃದಯವು ಕರ್ತ ನಲ್ಲಿ ಉಲ್ಲಾಸಪಡುವದು.
- Ezra 8:31 ಎಜ್ರನು 8:31ನಾವು ಯೆರೂಸಲೇಮಿಗೆ ಹೋದ ಮೊದಲನೇ ತಿಂಗಳ ಹನ್ನೆರಡನೇ ದಿವಸದಲ್ಲಿ ಅಹವಾ ನದಿಯನ್ನು ಬಿಟ್ಟು ಹೊರಟೆವು. ನಮ್ಮ ದೇವರ ಹಸ್ತವು ನಮ್ಮ ಮೇಲೆ ಇದ್ದದ್ದರಿಂದ ಆತನು ಶತ್ರುವಿನ ಕೈಗೂ ಮಾರ್ಗದಲ್ಲಿ ಹೊಂಚಿಕೊಂಡವರ ಕೈಗೂ ನಮ್ಮನ್ನು ತಪ್ಪಿಸಿಬಿಟ್ಟನು.
- Ezra 7:9 ಎಜ್ರನು 7:9ಇವನು ಮೊದಲನೇ ತಿಂಗಳಿನ ಮೊದಲನೇ ದಿವಸದಲ್ಲಿ ಬಾಬೆಲಿನಿಂದ ಹೋಗುವು ದಕ್ಕೆ ಯತ್ನಿಸಿ ತನ್ನ ದೇವರ ಒಳ್ಳೇ ಕೈ ಅವನ ಮೇಲೆ ಇದ್ದದ್ದರಿಂದ ಅವನ ಐದನೇ ತಿಂಗಳಿನ ಮೊದಲನೇ ದಿವಸದಲ್ಲಿ ಯೆರೂಸಲೇಮಿನಲ್ಲಿ ಬಂದು ಸೇರಿದನು.
- Ezra 8:22 ಎಜ್ರನು 8:22ಯಾಕಂದರೆ ಆತನನ್ನು ಹುಡುಕುವವರೆಲ್ಲರ ಮೇಲೆ ಒಳ್ಳೇದಾಗುವದಕ್ಕೆ ನಮ್ಮ ದೇವರ ಹಸ್ತ ಉಂಟು. ಆದರೆ ಆತನನ್ನು ಬಿಟ್ಟುಬಿಡುವವರ ಮೇಲೆ ಆತನ ಬಲವೂ ಆತನ ಕೋಪವೂ ಉಂಟು ಎಂದು ನಾವು ಅರಸನಿಗೆ ಹೇಳಿದ್ದರಿಂದ ಮಾರ್ಗದಲ್ಲಿ ಶತ್ರುವಿಗೆ ವಿರೋಧವಾಗಿ ನಮಗೆ ಸಹಾಯ ಕೊಡಲು ಕಾಲ್ಬಲ ವನ್ನೂ ರಾಹುತರನ್ನೂ ಅರಸನಿಂದ ಕೇಳಲು ನಾಚಿಕೆ ಪಟ್ಟೆವು.
- Proverbs 3:8 ಜ್ಞಾನೋಕ್ತಿಗಳು 3:8ಅದು ನಿನ್ನ ದೇಹಕ್ಕೆ ಆರೋಗ್ಯವೂ ಎಲುಬುಗಳಿಗೆ ಸಾರವೂ ಆಗಿರುವದು.
- Proverbs 17:22 ಜ್ಞಾನೋಕ್ತಿಗಳು 17:22ಹರ್ಷ ಹೃದಯನು ಔಷಧದಂತೆ ಒಳ್ಳೇದು ಮಾಡುತ್ತಾನೆ; ಕುಗ್ಗಿದ ಮನಸ್ಸು ಎಲುಬುಗಳನ್ನು ಒಣಗಿಸುತ್ತದೆ.
- Ezekiel 37:1–14 ಯೆಹೆಜ್ಕೇಲನು 37:1–14ಕರ್ತನ ಕೈ ನನ್ನ ಮೇಲೆ ಇತ್ತು; ಅದು ಕರ್ತನ ಆತ್ಮದ ಮೂಲಕ ನನ್ನನ್ನು ಹೊರಗೆ ತಂದು ಪೂರ್ತಿಯಾಗಿ ಎಲುಬುಗಳು ತುಂಬಿರುವ ಕಣಿವೆಗಳ ಮಧ್ಯ ತಳದಲ್ಲಿ ನನ್ನನ್ನು ಬಿಟ್ಟಿತು. ಅವುಗಳ ಸುತ್ತಲೂ ನನ್ನನ್ನು ಹಾದುಹೋಗುವಂತೆ ಮಾಡಿತು; ಇಗೋ, ತೆರೆದಿರುವ ಆ ಕಣಿವೆಯಲ್ಲಿ ಒಣಗಿಹೋದ ಎಲುಬುಗಳು ಲೆಕ್ಕವಿಲ್ಲದಷ್ಟು ಬಿದ್ದಿದ್ದವು. ಆತನು ನನಗೆ ಹೇಳಿದ್ದು--ಮನಷ್ಯಪುತ್ರನೇ, ಈ ಎಲುಬುಗಳು ಜೀವಿಸುವವೇ ಎಂದಾಗ ನಾನು ಉತ್ತರವಾಗಿ, ಓ ದೇವರಾದ ಕರ್ತನೇ, ನೀನೇ ತಿಳಿದಿರುವೆ ಎಂದೆನು. ಆತನು ನನಗೆ ಹೇಳಿದ್ದೇನಂದರೆ--ಈ ಎಲುಬುಗಳ ಮೇಲೆ ಪ್ರವಾದಿಸು ಮತ್ತು ಅವುಗಳಿಗೆ ಹೇಳು--ಓ ಒಣಗಿದ ಎಲುಬುಗಳೇ, ನೀವು ಕರ್ತನ ವಾಕ್ಯವನ್ನು ಕೇಳಿರಿ. ದೇವರಾದ ಕರ್ತನು ಈ ಎಲುಬುಗಳಿಗೆ ಹೀಗೆ ಹೇಳುತ್ತಾನೆ--ಇಗೋ, ನಾನು ನಿಮ್ಮಲ್ಲಿ ಉಸಿರನ್ನು ಬರಮಾಡುತ್ತೇನೆ; ನೀವು ಬದುಕುವಿರಿ; ನಾನು ನಿಮ್ಮ ಮೇಲೆ ನರಗಳನ್ನು ಹಬ್ಬಿಸಿ ಮಾಂಸವನ್ನು ಹರಡಿ ಚರ್ಮದಿಂದ ಮುಚ್ಚಿ ನಿಮ್ಮೊಳಗೆ ಉಸಿರನ್ನು ಕೊಟ್ಟು ಬದುಕಿಸುತ್ತೇನೆ; ನಾನೇ ಕರ್ತನೆಂದು ನೀವು ತಿಳಿ ಯುವಿರಿ. ಹಾಗೆಯೇ ನಾನು ಆಜ್ಞೆಯನ್ನು ಪಡೆದ ಪ್ರಕಾರ ಪ್ರವಾದಿಸಿದೆನು; ನಾನು ಪ್ರವಾದಿಸುವಾಗ ಅಲ್ಲಿ ಒಂದು ಶಬ್ದವಾಯಿತು; ಇಗೋ, ಅದು ಕದ ಲುತ್ತಿತ್ತು, ಎಲುಬುಗಳೆಲ್ಲಾ ಒಂದು ಗೂಡಿ ಎಲುಬಿಗೆ ಎಲುಬು ಸೇರಿಕೊಂಡಿತು. ನಾನು ನೋಡಿದಾಗ ಇಗೋ, ನರಗಳು ಹಬ್ಬಿಕೊಂಡವು ಮಾಂಸವು ಹರಡಿಕೊಂಡಿತು, ಅವುಗಳ ಮೇಲೆ ಚರ್ಮವು ಮುಚ್ಚಿ ಕೊಂಡಿತು. ಆದರೆ ಅವುಗಳಿಗೆ ಉಸಿರೇ ಇರಲಿಲ್ಲ. ಆಮೇಲೆ ಆತನು ನನಗೆ ಹೇಳಿದ್ದೇನಂದರೆ--ಪ್ರವಾ ದಿಸು, ಉಸಿರಿನ ಕಡೆಗೆ ಪ್ರವಾದಿಸು, ಮನುಷ್ಯ ಪುತ್ರನೇ, ಆ ಉಸಿರಿಗೆ ಹೇಳು--ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಓ ಉಸಿರೇ, ನಾಲ್ಕು ದಿಕ್ಕುಗಳಿಂದ ಬಂದು ಈ ಹತ ಶರೀರಗಳು ಬದುಕುವಂತೆ ಅದರ ಮೇಲೆ ಸುಳಿ, ನಾನು ಆತನ ಆಜ್ಞೆಯ ಹಾಗೆಯೇ ಪ್ರವಾದಿಸಿದೆನು; ಅವುಗಳಲ್ಲಿ ಉಸಿರು ಬಂತು; ಅವುಗಳೆಲ್ಲಾ ಕಾಲೂರಿ ನಿಂತು ಅತ್ಯಂತ ಮಹಾ ಸೈನ್ಯ ವಾದವು. ಆಮೇಲೆ ಆತನು ನನಗೆ ಹೇಳಿದ್ದೇನಂದರೆ--ಮನುಷ್ಯಪುತ್ರನೇ, ಈ ಎಲುಬುಗಳು ಸಂಪೂರ್ಣ ಇಸ್ರಾಯೇಲ್ ಮನೆತನಗಳೇ; ಇಗೋ, ನಮ್ಮ ಎಲುಬುಗಳು ಒಣಗಿಸಲ್ಪಟ್ಟಿವೆ ಮತ್ತು ನಮ್ಮ ನಿರೀಕ್ಷೆಯು ಕಳೆದುಹೋಗಿದೆ; ನಾವು ಶುದ್ಧವಾಗಿ ನಮ್ಮ ಭಾಗಗಳನ್ನು ಕತ್ತರಿಸಿಕೊಂಡಿದ್ದೇವೆ ಎಂದು ಅವರು ಹೇಳುವರು. ಆದದರಿಂದ ನೀನು ಪ್ರವಾದಿಸು ಮತ್ತು ಅವರಿಗೆ ಹೇಳು--ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಓ ನನ್ನ ಜನರೇ, ನಾನು ನಿಮ್ಮ ಸಮಾಧಿಗಳನ್ನು ತೆರೆಯುವೆನು ಮತ್ತು ಸಮಾಧಿಗಳಿಂದ ನೀವು ಹೊರಗೆ ಬರುವಂತೆ ಮಾಡುವೆನು. ಇಸ್ರಾ ಯೇಲ್ ದೇಶಕ್ಕೆ ನಿಮ್ಮನ್ನು ತರುವೆನು. ಓ ನನ್ನ ಜನರೇ, ಯಾವಾಗ ನಾನು ನಿಮ್ಮ ಸಮಾಧಿಗಳನ್ನು ತೆರೆದು ಹೊರಗೆ ಬರಮಾಡುವೆನೋ ಆಗ ನಾನೇ ಕರ್ತನೆಂದು ನೀವು ತಿಳಿದುಕೊಳ್ಳುವಿರಿ. ನನ್ನ ಆತ್ಮ ವನ್ನು ನಿಮ್ಮೊಳಗೆ ಇಟ್ಟಾಗ ನೀವು ಬದುಕುವಿರಿ ಮತ್ತು ನಾನು ನಿಮ್ಮನ್ನು ನಿಮ್ಮ ಸ್ವಂತ ದೇಶದಲ್ಲಿರಿಸುವೆನು; ಆಮೇಲೆ ನಾನೇ ಕರ್ತನು ಮಾತನಾಡಿ ನಡೆಸಿದ್ದೇನೆಂ ದು ನೀವು ತಿಳಿಯುವಿರಿ ಎಂದು ಕರ್ತನು ಹೇಳುತ್ತಾನೆ.
- John 16:22 ಯೋಹಾನನು 16:22ಆದದರಿಂದ ಈಗ ನಿಮಗೆ ದುಃಖವುಂಟು; ಆದರೆ ನಾನು ನಿಮ್ಮನ್ನು ತಿರಿಗಿ ನೋಡುವೆನು; ಆಗ ನಿಮ್ಮ ಹೃದಯವು ಉಲ್ಲಾಸಿಸುವದು; ನಿಮ್ಮ ಆನಂದವನ್ನು ನಿಮ್ಮಿಂದ ಯಾರೂ ತೆಗೆಯುವದಿಲ್ಲ.
- Malachi 3:18 ಮಲಾಕಿಯ 3:18ಆಗ ನೀವು ತಿಳುಕೊಂಡು ನೀತಿವಂತ ನಿಗೂ ದುಷ್ಟನಿಗೂ ದೇವರ ಸೇವೆಮಾಡುವವನಿಗೂ ಮಾಡದವನಿಗೂ ಇರುವ ಹೆಚ್ಚುಕಡಿಮೆಯನ್ನು ತಿಳುಕೊಳ್ಳುವಿರಿ.
- Isaiah 65:12–16 ಯೆಶಾಯ 65:12–16ಆದದರಿಂದ ನಿಮ್ಮನ್ನು ಕತ್ತಿಗೆ ನೇಮಿಸು ವೆನು ನೀವೆಲ್ಲರೂ ಕೊಲೆಗೆ ಬೊಗ್ಗಿಕೊಳ್ಳುವಿರಿ. ನಾನು ಕರೆಯಲು, ನೀವು ಉತ್ತರ ಕೊಡಲಿಲ್ಲ; ನಾನು ಮಾತನಾಡಲು ನೀವು ಕೇಳಿಸಿಕೊಳ್ಳಲಿಲ್ಲ; ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದಿರಿ, ನಾನು ಮೆಚ್ಚದ್ದನ್ನು ಆರಿಸಿಕೊಂಡಿರಿ. ಹೀಗಿರುವದರಿಂದ ದೇವರಾದ ಕರ್ತನು ಹೇಳು ವದೇನಂದರೆ--ಇಗೋ, ನನ್ನ ಸೇವಕರು ತಿನ್ನುವರು ಆದರೆ ನೀವು ಹಸಿದಿರುವಿರಿ; ಇಗೋ, ನನ್ನ ಸೇವಕರು ಕುಡಿಯುವರು, ಆದರೆ ನೀವು ಬಾಯಾರಿರುವಿರಿ; ಇಗೋ, ನನ್ನ ಸೇವಕರು ಸಂತೋಷಪಡುವರು; ಆದರೆ ನೀವು ನಾಚಿಕೆಪಡುವಿರಿ; ಇಗೋ, ನನ್ನ ಸೇವಕರು ಹೃದಯದ ಆನಂದದಿಂದ ಹಾಡುವರು, ಆದರೆ ನೀವು ಹೃದಯದ ವ್ಯಸನದಿಂದ ಅಳುವಿರಿ ಮತ್ತು ಮುರಿದ ಆತ್ಮದಿಂದ ಗೋಳಾಡುವಿರಿ. ನಾನು ಆದುಕೊಂಡವರಿಗೆ ನಿಮ್ಮ ಹೆಸರನ್ನು ಶಾಪವಾಗಿ ಉಳಿ ಸುವಿರಿ; ಕರ್ತನಾದ ಯೆಹೋವನು ನಿಮ್ಮನ್ನು ಕೊಂದು ಹಾಕಿ, ತನ್ನ ಸೇವಕರಿಗೆ ಬೇರೆ ಹೆಸರನ್ನು ಇಡುವನು. ಆಗ ದೇಶದಲ್ಲಿ ತನ್ನನ್ನು ಆಶೀರ್ವದಿಸಿಕೊಳ್ಳು ವವನು ಸತ್ಯ ದೇವರಲ್ಲಿ ಆಶೀರ್ವದಿಸಿಕೊಳ್ಳುವನು. ದೇಶದಲ್ಲಿ ಆಣೆ ಇಟ್ಟುಕೊಳ್ಳುವವನು; ಸತ್ಯದೇವರ ಮೇಲೆ ಆಣೆ ಇಟ್ಟುಕೊಳ್ಳುವನು; ಮುಂಚಿನ ಕಷ್ಟಗಳು ಮರೆತುಹೋಗಿವೆ ಮತ್ತು ಅವು ನನ್ನ ಕಣ್ಣುಗಳಿಗೆ ಮರೆಯಾಗಿವೆ.
- Ezra 8:18 ಎಜ್ರನು 8:18ನಮ್ಮ ದೇವರ ಒಳ್ಳೇ ಹಸ್ತವು ನಮ್ಮ ಮೇಲೆ ಇದ್ದದರಿಂದ ಅವರು ಇಸ್ರಾಯೇಲಿನ ಮಗನಾಗಿರುವ ಲೇವಿಯ ಮಗನಾದ ಮಹ್ಲೀಯ ಕುಮಾರರಲ್ಲಿ ಬುದ್ಧಿ ಯುಳ್ಳವನಾದ ಶೇರೇಬ್ಯನೂ ಅವನ ಕುಮಾರರೂ ಸಹೋದರರೂ ಆದ ಹದಿನೆಂಟು ಮಂದಿಯನ್ನೂ
- Isaiah 58:11 ಯೆಶಾಯ 58:11ಕರ್ತನು ನಿನ್ನನ್ನು ನಿತ್ಯವೂ ನಡಿಸುತ್ತಾ ಮಳೆಯಿಲ್ಲದ ಕಾಲದಲ್ಲಿ ನಿನ್ನ ಪ್ರಾಣವನ್ನು ತೃಪ್ತಿಗೊಳಿಸಿ ನಿನ್ನ ಎಲುಬುಗಳನ್ನು ಬಲಪಡಿಸುವನು ಮತ್ತು ನೀನು ನೀರು ಹಾಕಿದ ತೋಟದ ಹಾಗೆಯೂ ಮುಗಿಯದ ಜಲಬುಗ್ಗೆಯ ಹಾಗೆಯೂ ಇರುವಿ.