Isaiah · chapter 66 · verse 12
Isaiah 66:12 in Kannada
ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನದಿಯಂತೆ ಸಮಾಧಾನವನ್ನೂ ಹರಿಯುವ ಹಳ್ಳ ದಂತೆ ಜನಾಂಗಗಳ ವೈಭವವನ್ನೂ ಅವಳ ಕಡೆಗೆ ಬರಮಾಡುವೆನು; ಆಗ ನೀವು ಅವುಗಳನ್ನು ಹೀರಿ ಕೊಂಡು ಅವಳ ಪಕ್ಕೆಗಳಲ್ಲಿ ಹೊರಲ್ಪಡುವಿರಿ, ಅವಳ ಮೊಣಕಾಲುಗಳ ಮೇಲೆ ಆಡಿಸಲ್ಪಡುವಿರಿ,
Kartanu heege heluttaane--igo, naanu nadiyante samaadhaanavannoo hariyuva halla dante janaangagala vaibhavavannoo avala kadege baramaaduvenu; aaga neevu avugalannu heeri kondu avala pakkegalalli horalpaduviri, avala monakaalugala mele aadisalpaduviri,
Isaiah 66:12 in English
- King James Version (KJV)
- For thus saith the LORD, Behold, I will extend peace to her like a river, and the glory of the Gentiles like a flowing stream: then shall ye suck, ye shall be borne upon [her] sides, and be dandled upon [her] knees.
- World English Bible (WEB)
- For the LORD says, “Behold, I will extend peace to her like a river, and the glory of the nations like an overflowing stream, and you will nurse. You will be carried on her side, and will be dandled on her knees.
- American Standard Version (ASV)
- For thus saith Jehovah, Behold, I will extend peace to her like a river, and the glory of the nations like an overflowing stream: and ye shall suck [thereof]; ye shall be borne upon the side, and shall be dandled upon the knees.
- Bible in Basic English (BBE)
- For the Lord says, See, I will make her peace like a river, and the glory of the nations like an overflowing stream, and she will take her children in her arms, gently caring for them on her knees.
- Darby Translation (DBY)
- For thus saith Jehovah: Behold, I will extend peace to her like a river, and the glory of the nations like an overflowing torrent; and ye shall suck, ye shall be carried upon the side, and be dandled upon the knees.
- Webster's Bible (WBS)
- For thus saith the LORD, Behold, I will extend peace to her like a river, and the glory of the Gentiles like a flowing stream: then shall ye suck, ye shall be borne upon [her] sides, and be dandled upon [her] knees.
- Young's Literal Translation (YLT)
- For thus said Jehovah: 'Lo, I am stretching out to her peace as a river, And as an overflowing stream the honour of nations, And ye have sucked, on the side ye are carried, And on the knees ye are dandled.
Read in context
- 10ಯೆರೂಸಲೇಮಿನ ಸಂಗಡ ನೀವು ಸಂತೋಷಿ ಸಿರಿ, ಅವಳನ್ನು ಪ್ರೀತಿ ಮಾಡುವವರೆಲ್ಲರೇ, ಅವಳೊಂ ದಿಗೆ ಉಲ್ಲಾಸಪಡಿರಿ; ಅವಳಿಗೋಸ್ಕರ ದುಃಖಿಸಿದವ ರೆಲ್ಲರೇ, ಅವಳ ಸಂತೋಷಕ್ಕಾಗಿ ಆನಂದಪಡಿರಿ.
- 11ಅವಳ ಆದರಣೆಗಳ ಮೊಲೆ ಹೀರಿಕೊಂಡು ತೃಪ್ತಿ ಯಾಗುವ ಹಾಗೆ ಅವಳ ಸಮೃದ್ಧಿಯಾದ ವೈಭವ ದೊಂದಿಗೆ ಹಾಲನ್ನು ಕುಡಿದು ಆನಂದಗೊಳ್ಳಿರಿ.
- 12ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನದಿಯಂತೆ ಸಮಾಧಾನವನ್ನೂ ಹರಿಯುವ ಹಳ್ಳ ದಂತೆ ಜನಾಂಗಗಳ ವೈಭವವನ್ನೂ ಅವಳ ಕಡೆಗೆ ಬರಮಾಡುವೆನು; ಆಗ ನೀವು ಅವುಗಳನ್ನು ಹೀರಿ ಕೊಂಡು ಅವಳ ಪಕ್ಕೆಗಳಲ್ಲಿ ಹೊರಲ್ಪಡುವಿರಿ, ಅವಳ ಮೊಣಕಾಲುಗಳ ಮೇಲೆ ಆಡಿಸಲ್ಪಡುವಿರಿ,
- 13ಒಬ್ಬ ನನ್ನು ಅವನ ತಾಯಿ ಆದರಿಸುವ ಪ್ರಕಾರವೇ ನಾನು ನಿಮ್ಮನ್ನು ಆದರಿಸುವೆನು; ಯೆರೂಸಲೇಮಿನಲ್ಲಿ ಆದ ರಣೆ ಹೊಂದುವಿರಿ.
- 14ನೀವು ಅದನ್ನು ನೋಡುವಾಗ ನಿಮ್ಮ ಹೃದಯವು ಸಂತೋಷಿಸುವದು, ನಿಮ್ಮ ಎಲುಬು ಗಳು ಹಸಿರು ಪಲ್ಯದ ಹಾಗೆ ಚಿಗುರುವವು; ಕರ್ತನ ಕೈ ಆತನ ಸೇವಕನ ಕಡೆಗೂ ಆತನ ರೌದ್ರವು ಆತನ ಶತ್ರುಗಳ ಕಡೆಗೂ ಕಾಣಬರುವದು.
Cross references
- Isaiah 60:16 ಯೆಶಾಯ 60:16ಅನ್ಯಜನಾಂಗಗಳ ಹಾಲನ್ನು ಹೀರಿಕೊಳ್ಳುವಿ; ಅರಸರ ಮೊಲೆಯನ್ನು ಸಹ ಹೀರಿಕೊಳ್ಳುವಿ; ಆಗ ಕರ್ತನಾದ ನಾನೇ ನಿನ್ನ ರಕ್ಷಕನೂ ನಿನ್ನ ವಿಮೋ ಚಕನೂ ಯಾಕೋಬನ ಪರಾಕ್ರಮಿಯೂ ಎಂದು ತಿಳುಕೊಳ್ಳುವಿ.
- Isaiah 48:18 ಯೆಶಾಯ 48:18ಓ, ನೀನು ನನ್ನ ಆಜ್ಞೆಗಳಿಗೆ ಕಿವಿಗೊಟ್ಟಿದ್ದರೆ ಚೆನ್ನಾಗಿತ್ತು! ಆಗ ನಿನ್ನ ಸಮಾಧಾನವು ನದಿಯಂತೆಯೂ ನಿನ್ನ ನೀತಿಯು ಸಮುದ್ರದ ಅಲೆಗಳಂತೆಯೂ ಇರುತ್ತಿದ್ದವು;
- Isaiah 45:14 ಯೆಶಾಯ 45:14ಕರ್ತನು ಹೇಳುವದೇನಂದರೆ--ಐಗುಪ್ತದ ಆದಾ ಯವೂ ಇಥಿಯೋಪ್ಯದ ವ್ಯಾಪಾರವೂ ಎತ್ತರದ ಮನುಷ್ಯರಾದ ಸೆಬಾಯರೂ ನಿಮ್ಮಲ್ಲಿಗೆ ಸೇರಿ ನಿಮ್ಮವ ರಾಗಿ ನಿಮ್ಮನ್ನು ಅನುಸರಿಸುವರು; ಸಂಕೋಲೆಗಳನ್ನು ಕಟ್ಟಿಕೊಂಡು ಬಂದು ನಿಮ್ಮ ಮುಂದೆ ಅಡ್ಡಬಿದ್ದು ನಿಶ್ಚಯವಾಗಿ ದೇವರು ನಿಮ್ಮಲ್ಲಿಯೇ ಇದ್ದಾನೆ, ಮತ್ತೊ ಬ್ಬನು ಇಲ್ಲ, ಬೇರೆ ದೇವರು ಇಲ್ಲವೇ ಇಲ್ಲ.
- Isaiah 66:11 ಯೆಶಾಯ 66:11ಅವಳ ಆದರಣೆಗಳ ಮೊಲೆ ಹೀರಿಕೊಂಡು ತೃಪ್ತಿ ಯಾಗುವ ಹಾಗೆ ಅವಳ ಸಮೃದ್ಧಿಯಾದ ವೈಭವ ದೊಂದಿಗೆ ಹಾಲನ್ನು ಕುಡಿದು ಆನಂದಗೊಳ್ಳಿರಿ.
- Isaiah 54:3 ಯೆಶಾಯ 54:3ನೀನು ಬಲಗಡೆಗೂ ಎಡ ಗಡೆಗೂ ಹಬ್ಬಿಕೊಳ್ಳುವಿ; ನಿನ್ನ ಸಂತಾನವು ಅನ್ಯ ಜನಾಂಗಗಳನ್ನು ವಶಪಡಿಸಿಕೊಂಡು ಹಾಳಾದ ಪಟ್ಟಣ ಗಳನ್ನು ನಿವಾಸವಾಗಮಾಡುವದು.
- Isaiah 61:6 ಯೆಶಾಯ 61:6ಆದರೆ ನಿಮಗೆ ಕರ್ತನ ಯಾಜಕರೆಂದು ಹೆಸರಿಡುವರು ನೀವು ನಮ್ಮ ದೇವರ ಸೇವಕರೆಂದು ಜನರು ಕರೆಯುವರು. ಜನಾಂಗಗಳ ಆಸ್ತಿಯನ್ನು ಅನುಭವಿಸುವಿರಿ; ಅವರ ಮಹಿಮೆಯಲ್ಲಿ ನೀವು ಹೆಚ್ಚಳಪಡುವಿರಿ.
- Isaiah 49:19–23 ಯೆಶಾಯ 49:19–23ನಿನ್ನ ಹಾಳಾದ ಸ್ಥಳಗಳೂ ನಿನ್ನ ಏಕಾಂತ ಸ್ಥಳಗಳೂ ಕೆಡವಲ್ಪಟ್ಟ ನಿನ್ನ ದೇಶವೂ ಈಗ ನಿವಾಸಿ ಗಳಿಗೆ ಇಕ್ಕಟ್ಟಾಗುವವು; ನಿನ್ನನ್ನು ನುಂಗಿದವರು ದೂರ ವಾಗುವರು. ನೀನು ಕಳಕೊಂಡ ಮಕ್ಕಳ ಸ್ಥಳವು ನನಗೆ ಇಕ್ಕಟ್ಟಾಯಿತು; ನಾನು ವಾಸಿಸುವದಕ್ಕೆ ಸ್ಥಳ ಕೊಡು ಎಂದು ಹೇಳುವರು. ಆಗ ನೀನು ನನ ಗೋಸ್ಕರ ಇವರನ್ನು ಯಾರು ನನ್ನಲ್ಲಿ ಪಡೆದರು? ನಾನೋ, ಮಕ್ಕಳನ್ನು ಕಳೆದುಕೊಂಡವಳು, ಏಕಾಂತ ವಾಗಿ ಸೆರೆಯಲ್ಲಿದ್ದು ಹೊರಗೆ ಹಾಕಲ್ಪಟ್ಟವಳ ಹಾಗೆ ಇದ್ದೆನು. ಇವರನ್ನು ಸಾಕಿದವರು ಯಾರು? ಅವರೆ ಲ್ಲಿದ್ದರು ಎಂದು ಅಂದುಕೊಳ್ಳುವಿ. ಕರ್ತನಾದ ದೇವರು ಇಂತೆನ್ನುತ್ತಾನೆ--ಇಗೋ, ನಾನು ಅನ್ಯಜನಗಳ ಕಡೆಗೆ ಕೈ ಎತ್ತಿ ಜನರಿಗೆ ನನ್ನ ಧ್ವಜವನ್ನು ಎತ್ತುವೆನು; ಅವರು ನಿನ್ನ ಕುಮಾರರನ್ನು ಕೈಹಿಡಿದು ತರುವರು; ನಿನ್ನ ಕುಮಾರ್ತೆಯರನ್ನು ತಮ್ಮ ಹೆಗಲಮೇಲೆ ತರುವರು. ಅರಸುಗಳು ನಿನಗೆ ಸಾಕು ತಂದೆಗಳು, ಅವರ ರಾಣಿಯರು ನಿನಗೆ ದಾದಿಗಳಾ ಗುವರು; ಅವರು ಭೂಮಿಯ ಕಡೆಗೆ ತಮ್ಮ ಮುಖ ವನ್ನು ಬಾಗಿಸಿ, ಅಡ್ಡಬಿದ್ದು ನಿನ್ನ ಪಾದದ ಧೂಳನ್ನು ನೆಕ್ಕುವರು; ಆಗ ನಾನೇ ಕರ್ತನೆಂದು ನೀನು ತಿಳು ಕೊಳ್ಳುವಿ; ನನ್ನನ್ನು ನಿರೀಕ್ಷಿಸಿಕೊಂಡಿರುವವರು ನಾಚಿ ಕೆಗೆ ಈಡಾಗರು.
- Isaiah 9:7 ಯೆಶಾಯ 9:7ಅದನ್ನು ನೇಮಿಸುವದಕ್ಕೂ ಇಂದಿನಿಂದ ಎಂದೆಂದಿಗೂ ನೀತಿ ನ್ಯಾಯಗಳೊಂದಿಗೆ ಅದನ್ನು ಸ್ಥಾಪಿಸುವದಕ್ಕೂ ದಾವೀದನ ಸಿಂಹಾಸನ ಕ್ಕಾಗಲಿ ಅವನ ರಾಜ್ಯಕ್ಕಾಗಲಿ ಅವನ ಪರಿಪಾಲ ನೆಯ ಮತ್ತು ಶಾಂತಿಯ ಅಭಿವೃದ್ಧಿಗಾಗಲಿ ಅಂತ್ಯವೇ ಇಲ್ಲ; ಸೈನ್ಯಗಳ ಕರ್ತನ ಆಸಕ್ತಿಯು ಇದನ್ನು ನೆರವೇರಿ ಸುವದು.
- Isaiah 66:19–20 ಯೆಶಾಯ 66:19–20ಅವರ ಮಧ್ಯದಲ್ಲಿ ಒಂದು ಗುರುತನ್ನಿಟ್ಟು ಅವರಲ್ಲಿ ತಪ್ಪಿಸಿಕೊಂಡವರನ್ನು ಜನಾಂಗಗಳಿಗೂ ತಾರ್ಷೀಷಿಗೂ ಫೂಲಿಗೂ ಲೂದಿಗೂ ಬಿಲ್ಲು ಬೊಗ್ಗಿಸುವವರಿಗೂ ತೂಬಲಿಗೂ ಯಾವಾನಿಗೂ ನನ್ನ ಸಮಾಚಾರವನ್ನು ಕೇಳದೆ ನನ್ನ ಮಹಿಮೆಯನ್ನು ನೋಡದೆ ಇರುವ ದೂರದ ದ್ವೀಪ ಗಳಿಗೂ ಕಳುಹಿಸುವೆನು; ಅವರು ಅನ್ಯಜನಾಂಗಗಳಲ್ಲಿ ನನ್ನ ಮಹಿಮೆಯನ್ನು ತಿಳಿಸುವರು. ಅವರು ನಿಮ್ಮ ಸಹೋದರರನ್ನು ಕುದುರೆಗಳ ಮೇಲೆಯೂ ರಥ ಗಳಲ್ಲಿಯೂ ಪಾಲ್ಕಿಗಳಲ್ಲಿಯೂ ಹೇಸರ ಕತ್ತೆಗಳ ಮೇಲೆಯೂ ವೇಗವಾಗಿ ಹೋಗುವ ಪ್ರಾಣಿಗಳ ಮೇಲೆಯೂ ಸಮಸ್ತ ಜನಾಂಗಗಳೊಳಗಿಂದ ಕರ್ತ ನಿಗೆ ಕಾಣಿಕೆಯಾಗಿ ಇಸ್ರಾಯೇಲಿನ ಮಕ್ಕಳು ಕಾಣಿಕೆ ಯನ್ನು ಶುದ್ಧ ಪಾತ್ರೆಯಲ್ಲಿ ಕರ್ತನ ಮನೆಗೆ ತರುವ ಪ್ರಕಾರ ನನ್ನ ಪರಿಶುದ್ಧ ಪರ್ವತವಾದ ಯೆರೂಸ ಲೇಮಿಗೆ ತರುವರೆಂದು ಕರ್ತನು ಹೇಳುತ್ತಾನೆ.
- Psalm 72:3–7 ಕೀರ್ತನೆಗಳು 72:3–7ಬೆಟ್ಟಗಳೂ ಚಿಕ್ಕ ಗುಡ್ಡಗಳೂ ನೀತಿಯಿಂದ ಸಮಾಧಾನವನ್ನು ಜನರಿಗೆ ತರುವವು. ಆತನು ಜನರಲ್ಲಿ ದೀನರಿಗೆ ನ್ಯಾಯತೀರಿಸುವನು; ಬಡವನ ಮಕ್ಕಳನ್ನು ರಕ್ಷಿಸುವನು; ಬಲಾತ್ಕಾರಿಯನ್ನು ಮುರಿದು ತುಂಡು ಮಾಡುವನು. ಸೂರ್ಯನೂ ಚಂದ್ರನೂ ಇರುವ ವರೆಗೆ ತಲ ತಲಾಂತರಗಳು ನಿನಗೆ ಭಯಪಡುವರು. ಕೊಯ್ದ ಹುಲ್ಲಿನ ಮೇಲೆ ಬೀಳುವ ಮಳೆಯ ಹಾಗೆಯೂ ಭೂಮಿಯನ್ನು ನೆನಸುವ ಸುರಿಯುವ ಮಳೆಗಳ ಹಾಗೆಯೂ ಆತನು ಇಳಿದು ಬರುವನು. ಆತನ ದಿವಸಗಳಲ್ಲಿ ನೀತಿವಂತನು ವೃದ್ಧಿಯಾಗುವನು. ಸಮೃದ್ಧಿ ಯಾದ ಸಮಾಧಾನವು ಚಂದ್ರನು ಇರುವ ವರೆಗೂ ಇರುವದು.
- Isaiah 60:4–14 ಯೆಶಾಯ 60:4–14ಸುತ್ತಲೂ ನಿನ್ನ ಕಣ್ಣುಗಳನ್ನೆತ್ತಿ ನೋಡು, ಅವರೆಲ್ಲರೂ ಕೂಡಿಕೊಂಡು ನಿನ್ನ ಬಳಿಗೆ ಬರುತ್ತಾರೆ; ನಿನ್ನ ಕುಮಾ ರರು ದೂರದಿಂದ ಬರುವರು ನಿನ್ನ ಕುಮಾರ್ತೆಯರು ನಿನ್ನ ಪಕ್ಕೆಯಲ್ಲಿ ಪೋಷಣೆ ಹೊಂದುವರು. ಆಗ ನೀನು ಅದನ್ನು ನೋಡುವಿ, ನೀವು ಗುಂಪು ಗುಂಪಾಗಿ ಹೋಗುವಿರಿ. ನಿನ್ನ ಹೃದಯವು ಹೆದರಿ ವಿಶಾಲವಾಗು ವದು; ಸಮುದ್ರದ (ವ್ಯಾಪಾರದ) ಸಮೃದ್ಧಿಯು ನಿನ್ನ ಕಡೆಗೆ ತಿರುಗಿಕೊಳ್ಳುವದು; ಅನ್ಯಜನಾಂಗದ ಸೇನಾ ಬಲವು ನಿನ್ನ ಬಳಿಗೆ ಬರುವದು. ಒಂಟೆಗಳ ಸಮೂಹವು ನಿನ್ನನ್ನು ಮುಚ್ಚುವದು; ಮಿದ್ಯಾನಿನ, ಏಫದ ವೇಗವುಳ್ಳ ಒಂಟೆಗಳು ಅವೆಲ್ಲಾ ಶೇಬದಿಂದಲೂ ಬರುವವು; ಅವು ಬಂಗಾರವನ್ನೂ ಧೂಪವನ್ನೂ ತರುವವು; ಅವು ಕರ್ತನ ಸ್ತೋತ್ರ ಗಳನ್ನು ಸಾರುವವು. ಕೇದಾರಿನ ಮಂದೆಗಳೆಲ್ಲಾ ನಿನ್ನ ಬಳಿಗೆ ಕೂಡಿಸಲ್ಪಡುವವು; ನೆಬಾಯೋತಿನ ಟಗರು ಗಳು ನಿನ್ನನ್ನು ಸೇವಿಸುವವು; ಅವು ನನ್ನ ಬಲಿಪೀಠದ ಮೇಲೆ ಅಂಗೀಕಾರವಾಗುವವು, ನಾನು ನನ್ನ ಮಹಿ ಮೆಯ ಆಲಯವನ್ನು ಘನಪಡಿಸುವೆನು. ಮೇಘದಂತೆಯೂ ತಮ್ಮ ಗೂಡುಗಳಿಗೆ ಹೋಗುವ ಪಾರಿವಾಳಗಳಂತೆಯೂ ಹಾರುವ ಇವರು ಯಾರು? ನಿಶ್ಚಯವಾಗಿ ದ್ವೀಪಗಳು, ತಾರ್ಷೀಷಿನ ಹಡಗುಗಳು ಮೊದಲಾಗಿ, ನನಗೋಸ್ಕರ ದೂರದಿಂದ ನಿನ್ನ ಕುಮಾರರನ್ನು ತಮ್ಮ ಬೆಳ್ಳಿಬಂಗಾರದ ಸಹಿತವಾಗಿ ನಿನ್ನ ದೇವರಾದ ಕರ್ತನ ಹೆಸರಿನ ಬಳಿಗೂ ನಿನ್ನನ್ನು ಶೃಂಗರಿಸಿರುವ ಇಸ್ರಾಯೇಲಿನ ಪರಿಶುದ್ಧನ ಬಳಿಗೂ ತರುವದರಲ್ಲಿ ಮುಂದಾಗುತ್ತಿವೆ. ಇದಲ್ಲದೆ ಅನ್ಯರ ಮಕ್ಕಳು ನಿನ್ನ ಗೋಡೆಗಳನ್ನು ಕಟ್ಟುವರು; ಅವರ ಅರಸರು ಸಹ ನಿನಗೆ ಸೇವೆ ಮಾಡುವರು; ನನ್ನ ರೌದ್ರದಲ್ಲಿ ನಿನ್ನನ್ನು ಹೊಡೆದೆನು; ಆದರೆ ನನ್ನ ಕಟಾಕ್ಷದಲ್ಲಿ ನಿನ್ನನ್ನು ಕರುಣಿಸುವೆನು. ಆದದರಿಂದ ನಿನ್ನ ಬಾಗಿಲುಗಳು ಯಾವಾಗಲೂ ತೆರೆದಿರುವವು; ಅನ್ಯಜನಾಂಗಗಳ ಆಸ್ತಿ ನಿನ್ನ ಬಳಿಗೆ ತರಲ್ಪಟ್ಟು, ಅವರ ಅರಸರು ಸಹ ನಡಿಸಲ್ಪಡುವದ ಕ್ಕೋಸ್ಕರವೇ ಹಗಲು ಇಲ್ಲವೆ ರಾತ್ರಿ ಅವು ಮುಚ್ಚಲ್ಪ ಡುವದಿಲ್ಲ. ನಿನ್ನನ್ನು ಸೇವಿಸದ ಜನಾಂಗವೂ ರಾಜ್ಯವೂ ನಾಶವಾಗುವದು; ಹೌದು, ಆ ಜನಾಂಗ ಗಳು ಸಂಪೂರ್ಣವಾಗಿ ಹಾಳಾಗುವವು. ಲೆಬನೋ ನಿನ ವೈಭವವು ಸುರಗಿ, ದಿಂಡುಗ, ಹೊನ್ನೆ ಮರಗಳು ಕೂಡ ನನ್ನ ಪರಿಶುದ್ಧ ಸ್ಥಳವನ್ನು ಶೃಂಗರಿಸುವದಕ್ಕೆ ನಿನ್ನ ಬಳಿಗೆ ಬರುವವು; ನನ್ನ ಪಾದಗಳ ಸ್ಥಳವನ್ನು ನಾನು ಗೌರವವುಳ್ಳದ್ದಾಗಿ ಮಾಡುವೆನು. ಆಗ ನಿನ್ನನ್ನು ಕುಗ್ಗಿಸಿದವರ ಮಕ್ಕಳು ಬೊಗ್ಗಿಕೊಂಡು ನಿನ್ನ ಬಳಿಗೆ ಬರುವರು; ನಿನ್ನನ್ನು ಅಸಡ್ಡೆಮಾಡಿದವರೆಲ್ಲರು ನಿನ್ನ ಅಂಗಾಲುಗಳಿಗೆ ಸರಿಯಾಗಿ ಅಡ್ಡಬಿದ್ದು ನಿನ್ನನ್ನು ಕರ್ತನ ಪಟ್ಟಣವೆಂದು ಇಸ್ರಾಯೇಲಿನ ಪರಿಶುದ್ಧನ ಚೀಯೋ ನೆಂದೂ ಕರೆಯುವರು.
Original words (Hebrew)
- saith · H559אָמַר ʼâmar
- extend · H5186נָטָה nâṭâh
- peace · H7965שָׁלוֹם shâlôwm
- river · H5104נָהָר nâhâr
- glory · H3519כָּבוֹד kâbôwd
- Gentiles · H1471גּוֹי gôwy
- flowing · H7857שָׁטַף shâṭaph
- stream · H5158נַחַל nachal
- suck · H3243יָנַק yânaq
- borne · H5375נָשָׂא nâsâʼ
- sides · H6654צַד tsad
- dandled · H8173שָׁעַע shâʻaʻ
- knees · H1290בֶּרֶךְ berek