James · chapter 3 · verse 4
James 3:4 in Kannada
ಹಡಗುಗಳನ್ನು ಸಹ ನೋಡಿರಿ. ಅವು ಬಹು ದೊಡ್ಡವಾಗಿದ್ದರೂ ಬಲವಾದ ಗಾಳಿಯಿಂದ ಬಡಿಸಿ ಕೊಂಡು ಹೋಗುತ್ತವೆ. ಆದಾಗ್ಯೂ ಬಹು ಸಣ ಚುಕಾಣಿಯಿಂದ ಅವುಗಳನ್ನು ನಡಿಸುವವನು ತನ್ನ ಮನಸ್ಸಿಗೆ ಬಂದ ಕಡೆಗೆ ತಿರುಗಿಸುತ್ತಾನೆ.
Hadagugalannu saha nodiri. Avu bahu doddavaagiddaroo balavaada gaaliyinda badisi kondu hoguttave. Aadaagyoo bahu sana chukaaniyinda avugalannu nadisuvavanu tanna manassige banda kadege tirugisuttaane.
James 3:4 in English
- King James Version (KJV)
- Behold also the ships, which though [they be] so great, and [are] driven of fierce winds, yet are they turned about with a very small helm, whithersoever the governor listeth.
- World English Bible (WEB)
- Behold, the ships also, though they are so big and are driven by fierce winds, are yet guided by a very small rudder, wherever the pilot desires.
- American Standard Version (ASV)
- Behold, the ships also, though they are so great and are driven by rough winds, are yet turned about by a very small rudder, whither the impulse of the steersman willeth.
- Bible in Basic English (BBE)
- And again ships, though they are so great and are moved by violent winds, are turned by a very small guiding-blade, at the impulse of the man who is using it.
- Darby Translation (DBY)
- Behold also the ships, which are so great, and driven by violent winds, are turned about by a very small rudder, wherever the pleasure of the helmsman will.
- Webster's Bible (WBS)
- Behold also the ships, which though they are so great, and [are] driven by fierce winds, yet they are turned about with a very small helm, withersoever the governor willeth.
- Young's Literal Translation (YLT)
- lo, also the ships, being so great, and by fierce winds being driven, are led about by a very small helm, whithersoever the impulse of the helmsman doth counsel,
Read in context
- 2ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುವದುಂಟು. ಒಬ್ಬನು ಮಾತಿನಲ್ಲಿ ತಪ್ಪದಿದ್ದರೆ ಅವನು ಪರಿ ಪೂರ್ಣನೂ ತನ್ನ ದೇಹವನ್ನೆಲ್ಲಾ ಸ್ವಾಧೀನಪಡಿಸಿ ಕೊಳ್ಳುವದಕ್ಕೆ ಸಮರ್ಥನೂ ಆಗಿದ್ದಾನೆ.
- 3ಇಗೋ, ಕುದುರೆಗಳು ನಮಗೆ ವಿಧೇಯವಾಗುವ ಹಾಗೆ ಅವು ಗಳ ಬಾಯಿಗೆ ಕಡಿವಾಣ ಹಾಕುತ್ತೇವಲ್ಲಾ; ಆಗ ಅವುಗಳ ದೇಹವನ್ನೆಲ್ಲಾ ತಿರುಗಿಸುವದಕ್ಕೆ ಆಗುತ್ತದೆ.
- 4ಹಡಗುಗಳನ್ನು ಸಹ ನೋಡಿರಿ. ಅವು ಬಹು ದೊಡ್ಡವಾಗಿದ್ದರೂ ಬಲವಾದ ಗಾಳಿಯಿಂದ ಬಡಿಸಿ ಕೊಂಡು ಹೋಗುತ್ತವೆ. ಆದಾಗ್ಯೂ ಬಹು ಸಣ ಚುಕಾಣಿಯಿಂದ ಅವುಗಳನ್ನು ನಡಿಸುವವನು ತನ್ನ ಮನಸ್ಸಿಗೆ ಬಂದ ಕಡೆಗೆ ತಿರುಗಿಸುತ್ತಾನೆ.
- 5ಹಾಗೆಯೇ ನಾಲಿಗೆಯು ಕೂಡ ಚಿಕ್ಕ ಅಂಗವಾಗಿದ್ದರೂ ದೊಡ್ಡ ಕಾರ್ಯಗಳನ್ನು ಕೊಚ್ಚಿಕೊಳ್ಳುತ್ತದೆ. ಇಗೋ, ಎಷ್ಟು ಕೊಂಚ ಕಿಚ್ಚು ದೊಡ್ಡ ಕಾಡನ್ನು ಸುಡುತ್ತದೆ ನೋಡಿರಿ.
- 6ನಾಲಿಗೆಯು ಬೆಂಕಿಯೂ ದುಷ್ಟಲೋಕವೂ ಆಗಿದೆ. ಹೀಗೆ ಅದು ನಮ್ಮ ಅಂಗಗಳಲ್ಲಿ ಇದ್ದು ದೇಹವನ್ನೆಲ್ಲಾ ಹೊಲೆಮಾಡಿ ಪ್ರಕೃತಿಯ ಕ್ರಮಕ್ಕೆ ಬೆಂಕಿ ಹಚ್ಚುವ ಹಾಗೆಯೂ ನರಕದ ಬೆಂಕಿಯನ್ನು ಹಚ್ಚಿಕೊಳ್ಳುವ ದಾಗಿಯೂ ಇದೆ.
Cross references
- Matthew 8:24 ಮತ್ತಾಯನು 8:24ಆಗ ಇಗೋ, ಸಮುದ್ರದಲ್ಲಿ ದೊಡ್ಡ ತುಫಾನು ಎದ್ದ ಕಾರಣ ದೋಣಿಯು ತೆರೆಗಳಿಂದ ಮುಚ್ಚಲ್ಪಟ್ಟಿತು; ಆದರೆ ಆತನು ನಿದ್ರಿಸುತ್ತಿದ್ದನು.
- Acts 27:14–38 ಅಪೊಸ್ತಲರ ಕೃತ್ಯಗಳು 27:14–38ಆದರೆ ಸ್ವಲ್ಪ ಹೊತ್ತಿನ ಮೇಲೆ ಊರಕಲೋನು ಎಂಬ ಬಿರುಗಾಳಿಯು ಎದುರಾಗಿ ಬೀಸಿತು. ಆಗ ಹಡಗು ಅದಕ್ಕೆ ಸಿಕ್ಕಿಕೊಂಡು ಗಾಳಿಗೆ ತಾಳಲಾರದೆ ಇದ್ದದರಿಂದ ಅದು ನೂಕಿಕೊಂಡು ಹೋಗುವಂತೆ ನಾವು ಬಿಟ್ಟುಕೊಟ್ಟೆವು ನಾವು ಕ್ಲೌಡವೆಂಬ ಒಂದು ದ್ವೀಪದ ಮರೆಯಲ್ಲಿ ಹೋಗುತ್ತಿ ದ್ದದರಿಂದ ದೋಣಿಯನ್ನು ಭದ್ರಮಾಡಿಕೊಳ್ಳುವದು ನಮಗೆ ಬಹಳ ಪ್ರಯಾಸವಾಗಿತ್ತು. ಅದನ್ನು ಮೇಲಕ್ಕೆ ಎತ್ತಿ ಸಾಧನಗಳಿಂದ ಹಡಗಿನ ಕೆಳಭಾಗವನ್ನು ಬಿಗಿಯಾಗಿ ಕಟ್ಟಿದರು. ಆಮೇಲೆ ಕಳ್ಳುಸುಬಿಗೆ ನಾವು ಸಿಕ್ಕಿಕೊಂಡೇವೆಂದು ಭಯಪಟ್ಟು ಹಾಯಿಯನ್ನು ಸಡಿಲು ಮಾಡಿ ನೂಕಿಸಿಕೊಂಡು ಹೋದೆವು. ಬಿರುಗಾಳಿಯು ನಮ್ಮನ್ನು ಬಹಳವಾಗಿ ಹೊಯಿದಾಡಿಸಿದ್ದರಿಂದ ಮರುದಿನ ಅವರು ಹಡಗನ್ನು ಹಗುರವಾಗಿ ಮಾಡಿ ದರು; ಮೂರನೆಯ ದಿನ ನಮ್ಮ ಕೈಗಳಿಂದಲೇ ಹಡಗಿನ ಸಾಮಾನುಗಳನ್ನು ಎತ್ತಿ ಹೊರಗೆ ಹಾಕಿದೆವು. ಅನೇಕ ದಿವಸಗಳವರೆಗೆ ಸೂರ್ಯನಾಗಲಿ ನಕ್ಷತ್ರ ಗಳಾಗಲಿ ಕಾಣಿಸದೆ ದೊಡ್ಡ ಬಿರುಗಾಳಿಯು ನಮ್ಮ ಮೇಲೆ ಹೊಡೆದದ್ದರಿಂದ ನಾವು ಪಾರಾದೇವೆಂಬ ಎಲ್ಲಾ ನಿರೀಕ್ಷೆಯು ತಪ್ಪಿಹೋಯಿತು. ಆದರೆ ಅವರು ಬಹುಕಾಲ ಆಹಾರವಿಲ್ಲದೆ ಇದ್ದಮೇಲೆ ಪೌಲನು ಅವರ ಮಧ್ಯದಲ್ಲಿ ನಿಂತುಕೊಂಡು--ಅಯ್ಯಗಳಿರಾ, ನೀವು ನನ್ನ ಮಾತು ಕೇಳಿ ಕ್ರೇತದಿಂದ ಹೊರಡದೆ ಇದ್ದಿದ್ದರೆ ನಾವು ಈ ಕಷ್ಟನಷ್ಟಕ್ಕೆ ಗುರಿಯಾಗುತ್ತಿರಲಿಲ್ಲ. ಆದಾಗ್ಯೂ ನೀವು ಧೈರ್ಯದಿಂದ ಇರಬೇಕೆಂದು ನಾನು ನಿಮ್ಮನ್ನು ಪ್ರೋತ್ಸಾಹಮಾಡುತ್ತೇನೆ; ಹಡಗಿಗೆ ಹೊರತು ನಿಮ್ಮಲ್ಲಿ ಯಾವ ಮನುಷ್ಯನಿಗೂ ಪ್ರಾಣ ನಷ್ಟವಾಗುವದಿಲ್ಲ. ನಾನು ಯಾರವನಾಗಿದ್ದೇನೋ ಯಾರನ್ನು ಸೇವಿಸುತ್ತೇನೊ ಆ ದೇವರ ದೂತನು ಈ ರಾತ್ರಿಯಲ್ಲಿ ನನ್ನ ಹತ್ತಿರ ನಿಂತು-- ಪೌಲನೇ, ಭಯಪಡಬೇಡ, ನೀನು ಕೈಸರನ ಮುಂದೆ ನಿಲ್ಲತಕ್ಕದ್ದು; ಇಗೋ, ನಿನ್ನೊಂದಿಗೆ ಪ್ರಯಾಣಮಾಡುವವರೆಲ್ಲರನ್ನು ನಿನಗೆ ದೇವರು ಕೊಟ್ಟಿದ್ದಾನೆ ಎಂದು ಹೇಳಿದನು. ಆದಕಾರಣ ಅಯ್ಯಗಳಿರಾ, ನೀವು ಧೈರ್ಯವಾಗಿರ್ರಿ; ನನಗೆ ಹೇಳಲ್ಪಟ್ಟ ಪ್ರಕಾರವೇ ಆಗುವದೆಂದು ನಾನು ದೇವರನ್ನು ನಂಬುತ್ತೇನೆ. ಹೇಗಿದ್ದರೂ ನಾವು ಒಂದು ದ್ವೀಪಕ್ಕೆ ಸೇರಲೇಬೇಕಾಗಿದೆ ಅಂದನು. ಆದರೆ ಹದಿನಾಲ್ಕನೆಯ ರಾತ್ರಿ ಬಂದಾಗ ಆದ್ರಿ ಯಲ್ಲಿ ಅತ್ತ ಇತ್ತ ಬಡಿಸಿಕೊಂಡ ನಂತರ ಸುಮಾರು ಮಧ್ಯರಾತ್ರಿಯಲ್ಲಿ ನಾವಿಕರು ಒಂದು ದೇಶಕ್ಕೆ ಬಂದೆವೆಂದು ನೆನಸಿದರು; ಆಗ ಅವರು ಅಳತೆಯ ಗುಂಡನ್ನು ಇಳಿಸಿ ಇಪ್ಪತ್ತು ಮಾರುದ್ದ ಎಂದು ತಿಳಿದು ಕೊಂಡರು. ಇನ್ನೂ ಸ್ವಲ್ಪ ದೂರ ಹೋಗಿ ತಿರಿಗಿ ಅಳತೆಯ ಗುಂಡನ್ನು ಇಳಿಸಿ ಹದಿನೈದು ಮಾರುದ್ದವೆಂದು ತಿಳಿದರು. ನಾವು ಬಂಡೆಗಳನ್ನು ತಾಕೇವೆಂದು ಭಯ ಪಟ್ಟಾಗ ಅವರು ಹಡಗಿನ ಹಿಂಭಾಗದ ನಾಲ್ಕು ಲಂಗರು ಗಳನ್ನು ಬಿಟ್ಟು ಯಾವಾಗ ಬೆಳಗಾದೀತು ಎಂದು ಹಾರೈ ಸುತ್ತಿದ್ದರು. ನಾವಿಕರು ಹಡಗಿನ ಮುಂಭಾಗದಲ್ಲಿ ಲಂಗರುಗಳನ್ನು ಹಾಕಬೇಕೆಂಬ ನೆವದಿಂದ ದೋಣಿ ಯನ್ನು ಸಮುದ್ರದಲ್ಲಿ ಇಳಿಸಿ ಅವರು ಹಡಗಿನಿಂದ ತಪ್ಪಿಸಿಕೊಂಡು ಹೋಗಬೇಕೆಂದಿದ್ದರು: ಆಗ ಪೌಲನು ಶತಾಧಿಪತಿಗೆ ಮತ್ತು ಸೈನಿಕರಿಗೆ--ಇವರು ಹಡಗಿನಲ್ಲಿ ನಿಲ್ಲದೆ ಹೋದರೆ ನೀವು ತಪ್ಪಿಸಿಕೊಳ್ಳಲಾರಿರಿ ಎಂದು ಹೇಳಿದನು. ಅದಕ್ಕೆ ಸೈನಿಕರು ದೋಣಿಯ ಹಗ್ಗಗಳನ್ನು ಕತ್ತರಿಸಿ ಅದು ಬಿದ್ದು ಹೋಗುವಂತೆ ಮಾಡಿದರು. ಬೆಳಗಾಗುತ್ತಿರುವಷ್ಟರಲ್ಲಿ ಆಹಾರವನ್ನು ತೆಗೆದುಕೊಳ್ಳಬೇಕೆಂದು ಪೌಲನು ಅವರೆಲ್ಲರನ್ನು ಬೇಡಿ ಕೊಳ್ಳುವವನಾಗಿ--ಏನೂ ಆಹಾರವನ್ನು ತೆಗೆದು ಕೊಳ್ಳದೆ ಕಾದುಕೊಂಡು ಉಪವಾಸವಾಗಿರುವದು ಇದು ಹದಿನಾಲ್ಕನೆಯ ದಿವಸ. ನಿಮ್ಮ ಕ್ಷೇಮಕ್ಕಾಗಿ ಸ್ವಲ್ಪ ಆಹಾರವನ್ನು ತೆಗೆದುಕೊಳ್ಳಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ; ನಿಮ್ಮಲ್ಲಿ ಯಾರ ತಲೆ ಯಿಂದ ಒಂದು ಕೂದಲೂ ಕೆಳಗೆ ಬಿದ್ದು ಹೋಗು ವದಿಲ್ಲ ಎಂದು ಹೇಳಿದನು. ಅವನು ಹಾಗೆ ಹೇಳಿದ ತರುವಾಯ ರೊಟ್ಟಿಯನ್ನು ತೆಗೆದುಕೊಂಡು ಅವರೆಲ್ಲರ ಮುಂದೆ ದೇವರಿಗೆ ಸ್ತೋತ್ರಮಾಡಿ ಅದನ್ನು ಮುರಿದು ತಿನ್ನುವದಕ್ಕೆ ಪ್ರಾರಂಭಿಸಿದನು. ಆಗ ಅವರೆಲ್ಲರು ಧೈರ್ಯದಿಂದ ಸ್ವಲ್ಪ ಆಹಾರವನ್ನು ತೆಗೆದುಕೊಂಡರು. ಎಲ್ಲರೂ ಸೇರಿ ಹಡಗಿನಲ್ಲಿ ಇನ್ನೂರ ಎಪ್ಪತ್ತಾರು ಮಂದಿ ಇದ್ದೆವು. ಅವರು ಸಾಕಾದಷ್ಟು ತಿಂದಮೇಲೆ ಗೋದಿಯನ್ನು ಸಮುದ್ರಕ್ಕೆ ಚೆಲ್ಲಿ ಹಡಗನ್ನು ಹಗುರ ಮಾಡಿದರು.
- Psalm 107:25–27 ಕೀರ್ತನೆಗಳು 107:25–27ಆತನು ಆಜ್ಞಾಪಿಸಿ ಬಿರುಗಾಳಿಯನ್ನು ಏಳಮಾಡುತ್ತಾನೆ; ಅದು ಅದರ ತೆರೆಗಳನ್ನು ಎಬ್ಬಿಸುತ್ತದೆ. ಅವರು ಆಕಾಶಕ್ಕೆ ಏರು ತ್ತಾರೆ; ತಿರುಗಿ ಅಗಾಧಗಳಿಗೆ ಇಳಿಯುತ್ತಾರೆ; ಅವರ ಪ್ರಾಣವು ಕಳವಳದಿಂದ ಕರಗಿಹೋಗುತ್ತದೆ. ಅವರು ಅತ್ತಿತ್ತ ತೂಗಾಡಿ ಮತ್ತನ ಹಾಗೆ ಓಲಾ ಡುತ್ತಾರೆ. ಅವರ ಜ್ಞಾನವೆಲ್ಲಾ ನುಂಗಿ ಹೋಯಿತು.
Original words (Greek)
- Behold · G2400ἰδού idoú
- also · G2532καί kaí
- ships · G4143πλοῖον ploîon
- though · G5607ὤν ṓn
- great · G5082τηλικοῦτος tēlikoûtos
- and · G2532καί kaí
- driven · G1643ἐλαύνω elaúnō
- of · G5259ὑπό hypó
- fierce · G4642σκληρός sklērós
- winds · G417ἄνεμος ánemos
- about · G3329μετάγω metágō
- with · G5259ὑπό hypó
- small · G1646ἐλάχιστος eláchistos
- helm · G4079πηδάλιον pēdálion
- whithersoever · G3699ὅπου hópou
- governor · G3730ὁρμή hormḗ
- listeth · G1014βούλομαι boúlomai