Jeremiah · chapter 1 · verse 8
Jeremiah 1:8 in Kannada
ಅವರಿಗೆ ಭಯಪಡಬೇಡ; ನಿನ್ನನ್ನು ತಪ್ಪಿಸುವದಕ್ಕೆ ನಾನೇ ನಿನ್ನ ಸಂಗಡ ಇದ್ದೇನೆ ಎಂದು ಕರ್ತನು ಅಂದನು.
Avarige bhayapadabeda; ninnannu tappisuvadakke naane ninna sangada iddene endu kartanu andanu.
Jeremiah 1:8 in English
- King James Version (KJV)
- Be not afraid of their faces: for I [am] with thee to deliver thee, saith the LORD.
- World English Bible (WEB)
- Don’t be afraid because of them, for I am with you to rescue you,” says the LORD.
- American Standard Version (ASV)
- Be not afraid because of them; for I am with thee to deliver thee, saith Jehovah.
- Bible in Basic English (BBE)
- Have no fear because of them: for I am with you, to keep you safe, says the Lord.
- Darby Translation (DBY)
- Be not afraid of them; for I am with thee to deliver thee, saith Jehovah.
- Webster's Bible (WBS)
- Be not afraid of their faces: for I [am] with thee to deliver thee, saith the LORD.
- Young's Literal Translation (YLT)
- Be not afraid of their faces, for with thee [am] I to deliver thee, — an affirmation of Jehovah.'
Read in context
- 6ಆಗ ನಾನು--ಹಾ! ಕರ್ತನಾದ ದೇವರೇ ಇಗೋ, ನಾನು ಮಾತನಾಡಲಾರೆನು, ನಾನು ಚಿಕ್ಕವನು ಅಂದೆನು.
- 7ಆಗ ಕರ್ತನು ನನಗೆ--ನಾನು ಚಿಕ್ಕವನೆಂದು ಹೇಳಬೇಡ; ನಾನು ನಿನ್ನನ್ನು ಕಳುಹಿಸುವವರೆಲ್ಲರ ಬಳಿಗೆ ಹೋಗಬೇಕು; ನಾನು ನಿನಗೆ ಆಜ್ಞಾಪಿಸುವದನ್ನೆಲ್ಲಾ ಮಾತನಾಡಬೇಕು.
- 8ಅವರಿಗೆ ಭಯಪಡಬೇಡ; ನಿನ್ನನ್ನು ತಪ್ಪಿಸುವದಕ್ಕೆ ನಾನೇ ನಿನ್ನ ಸಂಗಡ ಇದ್ದೇನೆ ಎಂದು ಕರ್ತನು ಅಂದನು.
- 9ಆಗ ಕರ್ತನು ಕೈಚಾಚಿ ನನ್ನ ಬಾಯಿಯನ್ನು ಮುಟ್ಟಿದನು; ನನಗೆ--ಇಗೋ, ನನ್ನ ವಾಕ್ಯಗಳನ್ನು ನಿನ್ನ ಬಾಯಲ್ಲಿ ಇಟ್ಟಿದ್ದೇನೆ.
- 10ನೋಡು, ನಿನ್ನನ್ನು ಕೀಳುವದಕ್ಕೂ ಕೆಳಗೆ ಹಾಕಿ ಬಿಡುವದಕ್ಕೂ ನಾಶಮಾಡುವದಕ್ಕೂ ಕೆಡವಿಹಾಕುವದಕ್ಕೂ ಕಟ್ಟುವದಕ್ಕೂ ನೆಡುವದಕ್ಕೂ ಜನಾಂಗಗಳ ಮೇಲೆಯೂ ರಾಜ್ಯಗಳ ಮೇಲೆಯೂ ಈ ದಿನ ನಿನ್ನನ್ನು ನೇಮಿಸಿದ್ದೇನೆ ಅಂದನು.
Cross references
- Joshua 1:5 ಯೆಹೋಶುವ 1:5ಆದರೆ ನೀನು ಜೀವಿಸುವ ದಿವಸಗಳಲ್ಲೆಲ್ಲಾ ಯಾವನೂ ನಿನ್ನ ಮುಂದೆ ನಿಲ್ಲಲಾರನು. ನಾನು ಮೋಶೆಯ ಸಂಗಡ ಇದ್ದ ಹಾಗೆಯೇ ನಿನ್ನ ಸಂಗಡ ಇರುವೆನು. ನಾನು ನಿನ್ನನ್ನು ಕೈಬಿಡುವುದಿಲ್ಲ, ಇಲ್ಲವೆ ನಿನ್ನನ್ನು ತೊರೆಯುವದಿಲ್ಲ.
- Joshua 1:9 ಯೆಹೋಶುವ 1:9ನಿನಗೆ ಆಜ್ಞಾ ಪಿಸಿದ್ದೇನಲ್ಲಾ; ಬಲವಾಗಿರು, ಒಳ್ಳೆ ಧೈರ್ಯದಿಂದಿರು; ಭಯಪಡಬೇಡ, ನಿರಾಶೆಗೊಳ್ಳಬೇಡ. ನೀನು ಹೋಗು ವಲ್ಲೆಲ್ಲಾ ನಿನ್ನ ದೇವರಾದ ಕರ್ತನು ನಿನ್ನ ಸಂಗಡ ಇದ್ದಾನೆ ಎಂದು ಹೇಳಿದನು.
- Isaiah 51:7 ಯೆಶಾಯ 51:7ನೀತಿಯನ್ನು ಅರಿತು ನನ್ನ ನ್ಯಾಯಪ್ರಮಾಣವನ್ನು ಹೃದಯದಲ್ಲಿಟ್ಟು ಕೊಂಡಿರುವ ಜನರೇ, ನನಗೆ ಕಿವಿಗೊಡಿರಿ, ಮನುಷ್ಯರ ನಿಂದೆಗೆ ಭಯಪಡಬೇಡಿರಿ; ಇಲ್ಲವೆ ಅವರ ದೂಷಣೆಗೆ ಹೆದರ ಬೇಡಿರಿ.
- Luke 12:4–5 ಲೂಕನು 12:4–5ನನ್ನ ಸ್ನೇಹಿತರಾದ ನಿಮಗೆ ನಾನು ಹೇಳುವದೇನಂದರೆ--ದೇಹವನ್ನು ಕೊಂದು ಅದಕ್ಕಿಂತ ಹೆಚ್ಚೇನೂ ಮಾಡಲಾರ ದವರಿಗೆ ಹೆದರಬೇಡಿರಿ. ಆದರೆ ಯಾರಿಗೆ ನೀವು ಭಯಪಡಬೇಕೆಂದು ಮುಂದಾಗಿ ನಾನು ನಿಮ್ಮನ್ನು ಎಚ್ಚರಿಸುತ್ತೇನೆ; ಕೊಂದಮೇಲೆ ನರಕದಲ್ಲಿ ಹಾಕುವದಕ್ಕೆ ಅಧಿಕಾರವಿರುವಾತನಿಗೇ ಭಯಪಡಿರಿ; ಹೌದು, ಆತನಿಗೆ ಭಯಪಡಿರಿ ಎಂದು ನಾನು ನಿಮಗೆ ಹೇಳುತ್ತೇನೆ.
- Deuteronomy 31:6 ಧರ್ಮೋಪದೇಶಕಾಂಡ 31:6ಬಲವಾಗಿರ್ರಿ; ಧೈರ್ಯವಾಗಿರ್ರಿ; ಭಯಪಡಬೇಡಿರಿ; ಅವರಿಗೆ ಹೆದರಬೇಡಿರಿ; ನಿನ್ನ ದೇವರಾದ ಕರ್ತನು ತಾನೇ ನಿನ್ನ ಸಂಗಡ ಹೋಗುತ್ತಾನೆ; ಆತನು ನಿನ್ನನ್ನು ಬಿಡುವದಿಲ್ಲ, ವಿಸರ್ಜಿಸುವದೂ ಇಲ್ಲ ಎಂದು ಹೇಳಿದನು.
- Jeremiah 15:20–21 ಯೆರೆಮೀಯ 15:20–21ಇದಲ್ಲದೆ ನಾನು ನಿನ್ನನ್ನು ಈ ಜನಕ್ಕೆ ಬಲವಾದ ತಾಮ್ರದ ಗೋಡೆಯಾಗಮಾಡುತ್ತೇನೆ; ನಿನಗೆ ವಿರೋಧವಾಗಿ ಯುದ್ಧಮಾಡುವರು, ಆದರೆ ನಿನ್ನನ್ನು ಜಯಿಸಲಾರರು; ನಾನೇ ನಿನ್ನನ್ನು ರಕ್ಷಿಸುವದಕ್ಕೂ ತಪ್ಪಿಸು ವದಕ್ಕೂ ನಿನ್ನ ಸಂಗಡ ಇದ್ದೇನೆ ಎಂದು ಕರ್ತನು ಅನ್ನುತ್ತಾನೆ.ಕೆಟ್ಟವರ ಕೈಯೊಳಗಿಂದ ನಿನ್ನನ್ನು ತಪ್ಪಿಸುತ್ತೇನೆ, ಭಯಂಕರವಾದ ಕೈಯೊಳಗಿಂದ ನಿನ್ನನ್ನು ವಿಮೋಚಿಸುತ್ತೇನೆ. ಕೆಟ್ಟವರ ಕೈಯೊಳಗಿಂದ ನಿನ್ನನ್ನು ತಪ್ಪಿಸುತ್ತೇನೆ, ಭಯಂಕರವಾದ ಕೈಯೊಳಗಿಂದ ನಿನ್ನನ್ನು ವಿಮೋಚಿಸುತ್ತೇನೆ.
- Hebrews 13:5–6 ಇಬ್ರಿಯರಿಗೆ 13:5–6ನಿಮ್ಮ ನಡತೆಯು ದ್ರವ್ಯಾಶೆ ಯಿಲ್ಲದ್ದಾಗಿರಲಿ; ನಿಮಗಿರುವವುಗಳಲ್ಲಿ ತೃಪ್ತರಾಗಿರ್ರಿ; ಯಾಕಂದರೆ--ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ ಇಲ್ಲವೆ ತೊರೆಯುವದಿಲ್ಲವೆಂದು ಆತನು ಹೇಳಿದ್ದಾನೆ. ಆದದರಿಂದ--ಕರ್ತನು ನನ್ನ ಸಹಾಯಕನು, ಭಯಪಡೆನು, ಮನುಷ್ಯನು ನನಗೆ ಏನು ಮಾಡಾನು ಎಂದು ನಾವು ಧೈರ್ಯವಾಗಿ ಹೇಳಬಲ್ಲೆವು.
- Ezekiel 2:6–7 ಯೆಹೆಜ್ಕೇಲನು 2:6–7ಇದಲ್ಲದೆ ಮನುಷ್ಯಪುತ್ರನೇ, ನೀನು ಅವರಿಗಾ ಗಲೀ ಅವರ ಮಾತುಗಳಿಗಾಗಲೀ ಭಯಪಡಬೇಡ. ಮುಳ್ಳುಗಳೂ ದತ್ತೂರಿಗಳೂ ನಿನ್ನ ಸಂಗಡ ಇದ್ದರೂ ಚೇಳುಗಳ ನಡುವೆ ನೀನು ವಾಸಿಸಿದರೂ ಸರಿ; ನೀನು ಅವರ ಮಾತುಗಳಿಗೆ ಭಯಪಡಬೇಡ, ಅವರು ತಿರುಗಿ ಬೀಳುವ ಮನೆಯವರಾದರೂ ಅವರ ನೋಟಗಳಿಗೆ ಅಂಜಬೇಡ. ಕೇಳಿದರೂ ಸರಿ, ಕೇಳದಿದ್ದರೂ ಸರಿ; ನೀನು ನನ್ನ ಮಾತುಗಳನ್ನು ಅವರಿಗೆ ಹೇಳಬೇಕು; ಅವರು ಖಂಡಿತವಾಗಿಯೂ ತಿರುಗಿಬೀಳುವವರೇ.
- Deuteronomy 31:8 ಧರ್ಮೋಪದೇಶಕಾಂಡ 31:8ಇದಲ್ಲದೆ ಕರ್ತನು ತಾನೇ ನಿನ್ನ ಮುಂದೆ ಹೋಗುತ್ತಾನೆ; ಆತನೇ ನಿನ್ನ ಸಂಗಡ ಇರುವನು; ನಿನ್ನನ್ನು ತೊರೆಯುವದಿಲ್ಲ, ವಿಸರ್ಜಿಸುವದಿಲ್ಲ; ನೀನು ಭಯಪಡಬೇಡ; ಅಂಜಿಕೊಳ್ಳಬೇಡ ಎಂದು ಹೇಳಿದನು.
- Ezekiel 3:8–9 ಯೆಹೆಜ್ಕೇಲನು 3:8–9ಇಗೋ, ನಾನು ನಿನ್ನ ಮುಖವನ್ನು ಅವರ ಮುಖಗಳ ಎದುರಿಗೆ ಕಠಿಣ ಮಾಡಿದ್ದೇನೆ; ಮತ್ತು ನಿನ್ನ ಹಣೆಯನ್ನು ಅವರ ಹಣೆಗಳ ಎದುರಾಗಿ ಬಲಪಡಿಸಿದ್ದೇನೆ. ನಾನು ನಿನ್ನ ಹಣೆಯನ್ನು ಅಭೇದ್ಯವಾದ ಕಲ್ಲಿಗಿಂತ ಗಟ್ಟಿಯಾಗಿ ವಜ್ರದಂತೆ ಮಾಡಿದ್ದೇನೆ; ಇಲ್ಲವೆ ತಿರುಗಿ ಬೀಳುವ ಮನೆತನದವರಾದರೂ ನೀನು ಅವರಿಗೆ ಭಯಪಡ ಬೇಡ; ಮತ್ತು ಅವರ ನೋಟಕ್ಕೆ ನೀನು ಗಾಬರಿಯಾಗ ಬೇಡ.
- 2 Timothy 4:17–18 2 ತಿಮೊಥೆಯನಿಗೆ 4:17–18ಆದರೆ ಕರ್ತನು ನನ್ನ ಬಳಿಯಲ್ಲಿ ನಿಂತು ನನ್ನನ್ನು ಬಲಪಡಿಸಿ ನನ್ನ ಮೂಲಕ ಸಾರಲ್ಪಡುವದು ಸಂಪೂರ್ಣವಾಗಿ ಗ್ರಹಿಕೆ ಯಾಗುವಂತೆಯೂ ಅನ್ಯಜನರೆಲ್ಲರೂ ಅದನ್ನು ಕೇಳುವಂತೆಯೂ ಮಾಡಿದನು; ಇದಲ್ಲದೆ ಆತನು ನನ್ನನ್ನು ಸಿಂಹದ ಬಾಯೊಳಗಿಂದ ತಪ್ಪಿಸಿದನು. ನನ್ನನ್ನು ಪ್ರತಿಯೊಂದು ದುಷ್ಕೃತ್ಯದಿಂದ ಕರ್ತನು ತಪ್ಪಿಸಿ ತನ್ನ ಪರಲೋಕರಾಜ್ಯಕ್ಕೆ ನನ್ನನ್ನು ಕಾಪಾಡು ವನು. ಯುಗಯುಗಾಂತರಗಳಲ್ಲಿಯೂ ಆತನಿಗೆ ಮಹಿಮೆ. ಆಮೆನ್.
- Exodus 3:12 ವಿಮೋಚನಕಾಂಡ 3:12ಆಗ ಆತನು--ನಿಶ್ಚಯವಾಗಿ ನಾನು ನಿನ್ನ ಸಂಗಡ ಇರುವೆನು; ನಾನು ನಿನ್ನನ್ನು ಕಳುಹಿಸುತ್ತೇನೆಂಬದಕ್ಕೆ ಇದೇ ನಿನಗೆ ಗುರುತು. ನೀನು ಜನರನ್ನು ಐಗುಪ್ತದೊಳಗಿಂದ ಹೊರಗೆ ತಂದ ತರುವಾಯ ನೀವು ಈ ಬೆಟ್ಟದಮೇಲೆ ದೇವರನ್ನು ಆರಾಧಿಸುವಿರಿ ಅಂದನು.