Jeremiah · chapter 10 · verse 21
Jeremiah 10:21 in Kannada
ಕುರುಬರು ಪಶು ಗಳಂತಾದರು; ಅವರು ಕರ್ತನನ್ನು ಹುಡುಕಲಿಲ್ಲ, ಆದದರಿಂದ ಅವರು ಸಫಲವಾಗುವದಿಲ್ಲ; ಅವರ ಮಂದೆಗಳೆಲ್ಲಾ ಚದರಿಸಲ್ಪಡುವವು.
Kurubaru pashu galantaadaru; avaru kartanannu hudukalilla, aadadarinda avaru saphalavaaguvadilla; avara mandegalellaa chadarisalpaduvavu.
Jeremiah 10:21 in English
- King James Version (KJV)
- For the pastors are become brutish, and have not sought the LORD: therefore they shall not prosper, and all their flocks shall be scattered.
- World English Bible (WEB)
- For the shepherds have become brutish, and have not inquired of the LORD. Therefore they have not prospered, and all their flocks have scattered.
- American Standard Version (ASV)
- For the shepherds are become brutish, and have not inquired of Jehovah: therefore they have not prospered, and all their flocks are scattered.
- Bible in Basic English (BBE)
- For the keepers of the sheep have become like beasts, not looking to the Lord for directions: so they have not done wisely and all their flocks have been put to flight.
- Darby Translation (DBY)
- For the shepherds are become brutish, and have not sought Jehovah; therefore have they not acted wisely, and all their flock is scattered.
- Webster's Bible (WBS)
- For the pastors have become brutish, and have not sought the LORD: therefore they shall not prosper, and all their flocks shall be scattered.
- Young's Literal Translation (YLT)
- For the shepherds have become brutish, And Jehovah they have not sought, Therefore they have not acted wisely, And all their flock is scattered.
Read in context
- 19ನನ್ನ ನೋವಿನ ನಿಮಿತ್ತ ನನಗೆ ಅಯ್ಯೋ, ನನ್ನ ಗಾಯವು ಕಠಿಣವಾಗಿದೆ; ಆದರೆ ನಾನು--ನಿಶ್ಚಯ ವಾಗಿ ಇದು ಸಂತಾಪವಾಗಿದೆ; ನಾನು ತಾಳಲೇಬೇಕು ಅಂದೆನು.
- 20ನನ್ನ ಗುಡಾರವು ಸೂರೆಯಾಯಿತು; ನನ್ನ ಹಗ್ಗಗಳೆಲ್ಲಾ ಹರಿದಿವೆ; ನನ್ನ ಮಕ್ಕಳು ನನ್ನನ್ನು ಬಿಟ್ಟು ಹೋಗಿದ್ದಾರೆ, ಅವರು ಇಲ್ಲ; ಇನ್ನು ಮೇಲೆ ನನ್ನ ಡೇರೆಯನ್ನು ಹರಡುವದಕ್ಕೂ ನನ್ನ ಪರದೆಗಳನ್ನು ನಿಲ್ಲಿಸುವದಕ್ಕೂ ಒಬ್ಬನೂ ಇಲ್ಲ.
- 21ಕುರುಬರು ಪಶು ಗಳಂತಾದರು; ಅವರು ಕರ್ತನನ್ನು ಹುಡುಕಲಿಲ್ಲ, ಆದದರಿಂದ ಅವರು ಸಫಲವಾಗುವದಿಲ್ಲ; ಅವರ ಮಂದೆಗಳೆಲ್ಲಾ ಚದರಿಸಲ್ಪಡುವವು.
- 22ಇಗೋ, ಯೆಹೂದದ ಪಟ್ಟಣಗಳನ್ನು ಹಾಳು ಮಾಡುವದಕ್ಕೂ ಘಟಸರ್ಪದ ಗುಹೆಯನ್ನಾಗಿ ಮಾಡು ವದಕ್ಕೂ ಸುದ್ದಿಯ ಶಬ್ದವೂ ಉತ್ತರ ದೇಶದಿಂದ ಮಹಾ ಗಲಭೆಯೂ ಬರುತ್ತದೆ.
- 23ಕರ್ತನೇ, ಮನುಷ್ಯನ ಮಾರ್ಗವು ತನ್ನಲ್ಲಿಲ್ಲವೆಂದೂ ತನ್ನ ಹೆಜ್ಜೆ ನೆಟ್ಟಗೆ ಮಾಡುವದು ನಡೆಯುವ ಮನುಷ್ಯನದಲ್ಲವೆಂದೂ ಬಲ್ಲೆನು.
Cross references
- Ezekiel 34:2–10 ಯೆಹೆಜ್ಕೇಲನು 34:2–10ಮನುಷ್ಯಪುತ್ರನೇ, ಇಸ್ರಾಯೇಲಿನ ಕುರುಬರಿಗೆ ವಿರುದ್ಧವಾಗಿ ಪ್ರವಾದಿಸು, ಪ್ರವಾದಿಸಿ ಅವರಿಗೆ ಹೀಗೆ ಹೇಳು--ದೇವರಾದ ಕರ್ತನು ಕುರುಬರಿಗೆ ಹೀಗೆ ಹೇಳುತ್ತಾನೆ--ತಮ್ಮನ್ನು ತಾವೇ ಮೇಯಿಸಿಕೊಳ್ಳುವ ಇಸ್ರಾಯೇಲಿನ ಕುರುಬ ರಿಗೆ ಅಯ್ಯೋ, ಕುರುಬರು ಮಂದೆಗಳನ್ನು ಮೇಯಿಸ ಬಾರದೋ? ನೀವು ಕೊಬ್ಬನ್ನು ತಿನ್ನುತ್ತೀರಿ, ಉಣ್ಣೆಯ ಬಟ್ಟೆಯನ್ನು ಹಾಕುತ್ತೀರಿ, ಅವುಗಳಲ್ಲಿ ಕೊಬ್ಬಿದ್ದನ್ನು ಕೊಲ್ಲುತ್ತೀರಿ, ಆದರೆ ಮಂದೆಯನ್ನು ನೀವು ಮೇಯಿ ಸುವದಿಲ್ಲ, ಕ್ಷೀಣವಾದದ್ದನ್ನು ನೀವು ಬಲಪಡಿಸುವ ದಿಲ್ಲ, ಖಾಯಿಲೆಯಾದದ್ದನ್ನು ವಾಸಿ ಮಾಡಿಸುವದಿಲ್ಲ, ಮುರಿದದ್ದನ್ನು ಕಟ್ಟುವದಿಲ್ಲ; ಕಳೆದು ಹೋದದ್ದನ್ನು ಹುಡುಕುವದಿಲ್ಲ, ಓಡಿಸಿದ್ದನ್ನು ನೀವು ಹಿಂದಕ್ಕೆ ತರು ವದಿಲ್ಲ. ಆದರೆ ಬಲಾತ್ಕಾರದಿಂದ ಮತ್ತು ಕ್ರೂರತನ ದಿಂದ ಅವುಗಳ ಮೇಲೆ ದೊರೆತನ ಮಾಡುತ್ತೀರಿ. ಅವು ಚದರಿಹೋದವು; ಯಾಕಂದರೆ ಅಲ್ಲಿ ಕುರುಬ ರಿಲ್ಲ; ಅವರು ಚದರಿಹೋದಾಗ ಬಯಲಿನಲ್ಲಿರುವ ಎಲ್ಲಾ ಮೃಗಗಳಿಗೆ ಆಹಾರವಾದವು. ನನ್ನ ಕುರಿಗಳು ಎಲ್ಲಾ ಪರ್ವತಗಳ ಮೇಲೆಯೂ ಪ್ರತಿಯೊಂದು ಎತ್ತರವಾದ ಬೆಟ್ಟಗಳ ಮೇಲೆಯೂ ಅಲೆದಾಡುತ್ತಿವೆ; ಹೌದು, ನನ್ನ ಮಂದೆಯು ಭೂಮಂಡಲದಲ್ಲೆಲ್ಲಾ ಚದರಿ ಹೋಗಿದೆ; ಯಾವನೂ ಅವುಗಳಿಗಾಗಿ ವಿಚಾರಿಸಲಿಲ್ಲ ಅಥವಾ ಹುಡುಕಲಿಲ್ಲ. ಆದದರಿಂದ ಕುರುಬರೇ, ನೀವು ಕರ್ತನ ವಾಕ್ಯವನ್ನು ಕೇಳಿರಿ. ದೇವ ರಾದ ಕರ್ತನು ಹೀಗೆ ಹೇಳುತ್ತಾನೆ; ನನ್ನ ಜೀವದಾಣೆ, ನಿಶ್ಚಯವಾಗಿ ನನ್ನ ಮಂದೆಯು ಕೊಳ್ಳೆಯಾದದ ರಿಂದಲೂ ನನ್ನ ಮಂದೆಯು ಕುರುಬ ನಿಲ್ಲದೆ ಬಯಲಿನ ಮೃಗಗಳಿಗೆಲ್ಲಾ ಆಹಾರವಾದದ್ದರಿಂದಲೂ ನನ್ನ ಕುರು ಬರು ನನ್ನ ಮಂದೆಯನ್ನು ಹುಡುಕದೆ ಇದ್ದದರಿಂದಲೂ ಕುರುಬರು ತಮ್ಮನ್ನು ಮೇಯಿಸಿಕೊಂಡರೇ ಹೊರತು ತಮ್ಮ ಕುರಿಗಳನ್ನು ಮೇಯಿಸದಿದ್ದದರಿಂದಲೂ ಓ ಕುರುಬರೇ, ನೀವು ಕರ್ತನ ವಾಕ್ಯವನ್ನು ಕೇಳಿರಿ. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಕುರುಬರಿಗೆ ವಿರುದ್ಧವಾಗಿದ್ದೇನೆ; ನನ್ನ ಮಂದೆ ಯನ್ನು ಅವರ ಕೈಯಿಂದ ವಿಚಾರಿಸುವೆನು; ಅವರು ಮಂದೆ ಮೇಯಿಸುವದನ್ನು ನಿಲ್ಲಿಸಿಬಿಡುತ್ತೇನೆ. ಇನ್ನು ಮೇಲೆ ಕುರುಬರು ತಮ್ಮ ಹೊಟ್ಟೆಯನ್ನು ತುಂಬಿಸಿ ಕೊಳ್ಳರು. ನಾನು ನನ್ನ ಮಂದೆಯನ್ನು ಅವರಿಗೆ ಆಹಾರ ವಾಗದ ಹಾಗೆ ಅವರ ಬಾಯಿಂದ ತಪ್ಪಿಸುತ್ತೇನೆ.
- Jeremiah 12:10 ಯೆರೆಮೀಯ 12:10ಅನೇಕ ಕುರುಬರು ನನ್ನ ದ್ರಾಕ್ಷೇ ತೋಟವನ್ನು ಕೆಡಿಸಿದ್ದಾರೆ, ನನ್ನ ಭಾಗವನ್ನು ತುಳಿದುಬಿಟ್ಟಿದ್ದಾರೆ, ನಾನು ಮೆಚ್ಚಿದ ಭಾಗವನ್ನು ಹಾಳಾದ ಅರಣ್ಯವಾಗ ಮಾಡಿದ್ದಾರೆ.
- Jeremiah 23:1–2 ಯೆರೆಮೀಯ 23:1–2ನನ್ನ ಹುಲ್ಲುಗಾವಲಿನ ಕುರಿಗಳನ್ನು ಹಾಳು ಮಾಡಿ ಚದರಿಸುವ ಕುರುಬರಿಗೆ ಅಯ್ಯೋ, ಎಂದು ಕರ್ತನು ಅನ್ನುತ್ತಾನೆ. ಆದದರಿಂದ ಇಸ್ರಾಯೇಲಿನ ದೇವರಾದ ಕರ್ತನು ನನ್ನ ಜನರನ್ನು ಮೇಯಿಸುವ ಕುರುಬರಿಗೆ ವಿರೋಧ ವಾಗಿ ಹೀಗೆ ಹೇಳುತ್ತಾನೆ--ನೀವು ನನ್ನ ಮಂದೆಯನ್ನು ಚದರಿಸಿ ಓಡಿಸಿಬಿಟ್ಟು ವಿಚಾರಿಸದೆ ಇದ್ದೀರಿ; ಇಗೋ, ನಾನು ನಿಮ್ಮ ಕ್ರಿಯೆಗಳ ಕೆಟ್ಟತನವನ್ನು ನಿಮ್ಮಲ್ಲಿ ವಿಚಾರಿಸುತ್ತೇನೆಂದು ಕರ್ತನು ಅನ್ನುತ್ತಾನೆ.
- Isaiah 56:10–12 ಯೆಶಾಯ 56:10–12ಅವನ ಕಾವಲುಗಾರರು ಕುರುಡರು, ಅವರೆಲ್ಲರೂ ತಿಳುವಳಿಕೆ ಯಿಲ್ಲದವರು; ಅವರೆಲ್ಲರೂ ಮೂಕ ನಾಯಿಗಳು; ಅವು ಬೊಗಳಲಾರವು, ನಿದ್ರಿಸುತ್ತವೆ, ಬಿದ್ದುಕೊಂಡಿ ರುತ್ತವೆ. ತೂಕಡಿಕೆಯನ್ನು ಪ್ರೀತಿಸುತ್ತವೆ. ಹೌದು, ಎಂದಿಗೂ ಸಾಕೆನ್ನದ ಹೊಟ್ಟೇಬಾಕ ನಾಯಿಗಳು, ಅವರು ಗ್ರಹಿಕೆಯಿಲ್ಲದ ಕುರುಬರು; ಅವರೆಲ್ಲರು ತಮ್ಮ ತಮ್ಮ ಸ್ವಂತ ಮಾರ್ಗಕ್ಕೂ ಪ್ರತಿಯೊಬ್ಬನು ತನಗೆ ಲಾಭ ಸಿಕ್ಕುವ ಕಡೆಗೂ ತಿರುಗಿ ಕೊಳ್ಳುವನು.ಬನ್ನಿರಿ, ನಾನು ದ್ರಾಕ್ಷಾರಸವನ್ನು ತರುವೆನು; ನಮ್ಮನ್ನು ನಾವೇ ಅಮಲೇರುವ ಮದ್ಯದಿಂದ ತುಂಬಿಸಿ ಕೊಳ್ಳುವ! ನಾಳೆಯು ಈ ದಿವಸದಂತೆಯೇ ಬಹಳ ಸಮೃದ್ಧಿಯಾಗಿರುವದು. ಬನ್ನಿರಿ, ನಾನು ದ್ರಾಕ್ಷಾರಸವನ್ನು ತರುವೆನು; ನಮ್ಮನ್ನು ನಾವೇ ಅಮಲೇರುವ ಮದ್ಯದಿಂದ ತುಂಬಿಸಿ ಕೊಳ್ಳುವ! ನಾಳೆಯು ಈ ದಿವಸದಂತೆಯೇ ಬಹಳ ಸಮೃದ್ಧಿಯಾಗಿರುವದು.
- Zechariah 13:7 ಜೆಕರ್ಯ 13:7ಓ ಕತ್ತಿಯೇ, ನನ್ನ ಕುರುಬನಿಗೆ ವಿರೋಧವಾಗಿ, ನನ್ನ ಸಂಗಡಿಗನಾದ ಮನುಷ್ಯನಿಗೆ ವಿರೋಧವಾಗಿ, ಎಚ್ಚರವಾಗು ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆ; ಕುರುಬನನ್ನು ಹೊಡೆ, ಆಗ ಕುರಿಗಳು ಚದರಿ ಹೋಗುವವು; ಆದರೆ ಚಿಕ್ಕವುಗಳ ಮೇಲೆ ನನ್ನ ಕೈಯನ್ನು ತಿರುಗಿಸುವೆನು ಎಂದು ಹೇಳುತ್ತಾನೆ.
- Ezekiel 22:25–30 ಯೆಹೆಜ್ಕೇಲನು 22:25–30ಕೊಳ್ಳೆಯನ್ನು ಸುಲಿದುಕೊಳ್ಳುವ ಘರ್ಜಿಸುವ ಸಿಂಹದ ಹಾಗೆ ಅದರ ಮಧ್ಯದಲ್ಲಿ ಪ್ರವಾದಿಗಳ ಒಳಸಂಚು ಉಂಟು; ಪ್ರಾಣಗಳನ್ನು ತಿಂದುಬಿಟ್ಟಿದ್ದಾರೆ. ಸಂಪತ್ತನ್ನೂ ಅಮೂಲ್ಯವಾದ ವಸ್ತುವನ್ನೂ ದೋಚಿ ಕೊಂಡಿದ್ದಾರೆ, ಅವರು ಅದರ ಮಧ್ಯದಲ್ಲಿ ಬಹಳ ಜನರನ್ನು ವಿಧವೆಯರನ್ನಾಗಿ ಮಾಡಿದ್ದಾರೆ. ಅದರ ಯಾಜಕರು ನನ್ನ ವಿಧಿಗಳನ್ನು ಭಂಗಪಡಿಸಿದ್ದಾರೆ; ನನ್ನ ಪರಿಶುದ್ಧ ವಸ್ತುಗಳನ್ನು ಅಪವಿತ್ರಪಡಿಸಿದ್ದಾರೆ; ಪರಿಶುದ್ಧ ವಾದದ್ದಕ್ಕೂ ಅಪವಿತ್ರವಾದದ್ದಕ್ಕೂ ಭೇದವೆಣಿಸಲಿಲ್ಲ; ಶುದ್ಧಾಶುದ್ಧ ವಿವೇಚನೆಯನ್ನು ಬೋಧಿಸಲಿಲ್ಲ, ನನ್ನ ಸಬ್ಬತ್ತುಗಳಿಗೆ ತಮ್ಮ ಕಣ್ಣುಗಳನ್ನು ಮರೆಮಾಡಿದ್ದಾರೆ. ಆದದರಿಂದ ನಾನು ಅವರಲ್ಲಿ ಅಪವಿತ್ರನಾದೆನು. ಅಲ್ಲಿನ ಪ್ರಧಾನರು ಸುಲಿಗೆಗಾಗಿ ರಕ್ತ ಸುರಿಸಿ ಪ್ರಾಣ ಗಳನ್ನು ನುಂಗುವ ಹಾಗೆ ಬೇಟೆಯ ತೋಳಗಳಂತಿ ದ್ದಾರೆ. ಅವರ ಪ್ರವಾದಿಗಳು ಅವರಿಗೆ ಸುಣ್ಣ ಹಚ್ಚುತ್ತಾರೆ, ಮೋಸವನ್ನು ದರ್ಶಿಸಿ ಸುಳ್ಳು ಶಕುನ ಹೇಳುತ್ತಾರೆ; ಕರ್ತನು ಮಾತನಾಡದಿರುವದರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆಂದು ಹೇಳು ತ್ತಾರೆ. ದೇಶದ ಜನರು ಬಲಾತ್ಕಾರ ಮಾಡಿದ್ದಾರೆ, ಕೊಳ್ಳೆಯನ್ನು ಹೊಡೆದಿದ್ದಾರೆ. ಬಡವನನ್ನೂ ದರಿದ್ರ ರನ್ನೂ ಪೀಡಿಸಿದ್ದಾರೆ; ಹೌದು, ಅವರು ನ್ಯಾಯವಿಲ್ಲದೆ ಒಬ್ಬ ಅಪರಿಚಿತನನ್ನು ಬಲಾತ್ಕಾರಪಡಿಸಿದ್ದಾರೆ. ಬೇಲಿ ಕಟ್ಟುವ ಮನುಷ್ಯನನ್ನು ದೇಶಕ್ಕೋಸ್ಕರ ನಾನು ಅದನು ನಾಶಮಾಡದ ಹಾಗೆ ಪೌಳಿಯ ಒಡಕಿನಲ್ಲಿ ನಿಲ್ಲತಕ್ಕ ವನನ್ನು ಹುಡುಕಿದೆನು, ಆದರೆ ಸಿಕ್ಕಲಿಲ್ಲ.ಆದದ ರಿಂದ ನನ್ನ ರೋಷವನ್ನು ಅವರ ಮೇಲೆ ಸುರಿಸಿದ್ದೇನೆ; ನನ್ನ ಸಿಟ್ಟಿನ ಬೆಂಕಿಯಿಂದ ಅವರನ್ನು ಸಂಹರಿಸಿದ್ದೇನೆ; ಅವರ ಮಾರ್ಗವನ್ನು ಅವರ ತಲೆಗಳ ಮೇಲೆ ಮುಯ್ಯಿ ತೀರಿಸಿದ್ದೇನೆಂದು ದೇವರಾದ ಕರ್ತನು ಹೇಳುತ್ತಾನೆ.
- John 10:12–13 ಯೋಹಾನನು 10:12–13ಆದರೆ ಕೂಲಿಯವನು ಕುರುಬನಲ್ಲವಾದದ ರಿಂದಲೂ ಕುರಿಗಳು ತನ್ನವುಗಳಲ್ಲವಾದದರಿಂದಲೂ ತೋಳ ಬರುವದನ್ನು ಕಂಡು ಕುರಿಗಳನ್ನು ಬಿಟ್ಟು ಓಡಿ ಹೋಗುತ್ತಾನೆ; ಆಗ ತೋಳವು ಕುರಿಗಳನ್ನು ಹಿಡಿದು ಕೊಂಡು ಅವುಗಳನ್ನು ಚದರಿಸುತ್ತದೆ. ಕೂಲಿಯವನು ಕೂಲಿಯವನೇ ಆಗಿರುವದರಿಂದ ಕುರಿಗಳಿಗೋಸ್ಕರ ಚಿಂತಿಸದೆ ಓಡಿ ಹೋಗುತ್ತಾನೆ.
- Zechariah 10:3 ಜೆಕರ್ಯ 10:3ಕುರುಬರಿಗೆ ವಿರೋಧವಾಗಿ ನನ್ನ ಕೋಪವು ಉರಿಯಿತು; ಮೇಕೆಗಳನ್ನು ದಂಡಿಸಿದೆನು; ಸೈನ್ಯಗಳ ಕರ್ತನು ತನ್ನ ಮಂದೆಯಾಗಿರುವ ಯೆಹೂದನ ಮನೆ ತನದವರನ್ನು ದರ್ಶಿಸಿ ಅವರನ್ನು ಯುದ್ಧದಲ್ಲಿ ತನ್ನ ಘನವಾದ ಕುದುರೆಯ ಹಾಗೆ ಮಾಡಿದ್ದಾನೆ.
- Jeremiah 8:9 ಯೆರೆಮೀಯ 8:9ಜ್ಞಾನಿಗಳು ನಾಚಿಕೊಂಡಿ ದ್ದಾರೆ, ದಿಗಿಲುಪಟ್ಟು ಸಿಕ್ಕಿಕೊಂಡಿದ್ದಾರೆ; ಇಗೋ, ಕರ್ತನ ವಾಕ್ಯವನ್ನು ನಿರಾಕರಿಸಿದ್ದಾರೆ. ಹಾಗಾದರೆ ಅವರಲ್ಲಿ ಎಂಥಾ ಜ್ಞಾನವಿದೆ?
- Jeremiah 2:8 ಯೆರೆಮೀಯ 2:8ಯಾಜಕರು--ಕರ್ತನು ಎಲ್ಲಿದ್ದಾನೆ ಎಂದು ಹೇಳಲಿಲ್ಲ; ನ್ಯಾಯ ಪ್ರಮಾಣವನ್ನು ಉಪಯೋಗಿಸುವವರು ನನ್ನನ್ನು ತಿಳಿಯಲಿಲ್ಲ; ಪಾಲಕರು ನನಗೆ ವಿರೋಧವಾಗಿ ದ್ರೋಹಮಾಡಿದರು; ಪ್ರವಾದಿಗಳು ಬಾಳನಿಂದ ಪ್ರವಾದಿಸಿದರು; ಪ್ರಯೋಜನವಿಲ್ಲದವುಗಳನ್ನು ಹಿಂದ ಟ್ಟಿದರು.
- Jeremiah 23:9–32 ಯೆರೆಮೀಯ 23:9–32ಪ್ರವಾದಿಗಳ ನಿಮಿತ್ತ ನನ್ನ ಹೃದಯವು ನನ್ನಲ್ಲಿ ಮುರಿದಿದೆ; ನನ್ನ ಎಲುಬುಗಳೆಲ್ಲಾ ಕದಲುತ್ತವೆ; ಕರ್ತನ ನಿಮಿತ್ತವೂ ಆತನ ಪರಿಶುದ್ಧ ವಾಕ್ಯಗಳ ನಿಮಿತ್ತವೂ ಮತ್ತನಾದ ಮನುಷ್ಯನ ಹಾಗೆಯೂ ದ್ರಾಕ್ಷಾರಸಕ್ಕೆ ಒಳಗಾದ ಪುರುಷನ ಹಾಗೆಯೂ ಇದ್ದೇನೆ. ದೇಶವು ವ್ಯಭಿಚಾರಗಳಿಂದ ತುಂಬಿದೆ; ಶಾಪದಿಂದ ದುಃಖಿಸು ತ್ತದೆ; ಅರಣ್ಯದ ಮನೋಹರವಾದ ಸ್ಥಳಗಳು ಒಣಗಿ ಹೋಗಿವೆ; ಅವರ ಓಟವು ಕೆಟ್ಟದ್ದಾಗಿದೆ; ಅವರ ಶಕ್ತಿಯು ಸರಿ ಇಲ್ಲ. ಪ್ರವಾದಿಯೂ ಯಾಜಕನೂ ಕೂಡ ಭ್ರಷ್ಟರೇ; ಹೌದು, ನನ್ನ ಆಲಯದಲ್ಲಿ ಅವರ ಕೆಟ್ಟತನವನ್ನು ಕಂಡಿದ್ದೇನೆಂದು ಕರ್ತನು ಅನ್ನುತ್ತಾನೆ. ಆದದರಿಂದ ಅವರ ಮಾರ್ಗವು ಕತ್ತಲೆಯಲ್ಲಿರುವ ಜಾರುವ ಸ್ಥಳಗಳ ಹಾಗೆ ಅವರಿಗಿರುವದು; ಅವರು ತಳ್ಳಲ್ಪಟ್ಟು ಬೀಳುವರು; ಕೇಡನ್ನು, ಅವರ ವಿಚಾರಣೆಯ ವರುಷವನ್ನು ಅವರ ಮೇಲೆ ಬರಮಾಡುವೆನೆಂದು ಕರ್ತನು ಅನ್ನುತ್ತಾನೆ. ಸಮಾರ್ಯದ ಪ್ರವಾದಿಗಳಲ್ಲಿ ಬುದ್ಧಿಹೀನತೆಯನ್ನು ನೋಡಿದ್ದೇನೆ; ಅವರು ಬಾಳನಿಂದ ಪ್ರವಾದನೆಯನ್ನು ಕೇಳಿ ನನ್ನ ಜನರಾದ ಇಸ್ರಾಯೇ ಲನ್ನು ತಪ್ಪುವಂತೆ ಮಾಡಿದ್ದಾರೆ. ಯೆರೂಸಲೇಮಿನ ಪ್ರವಾದಿಗಳಲ್ಲಿ ಭಯಂಕರವಾದದ್ದನ್ನು ನೋಡಿದ್ದೇನೆ; ಅವರು ವ್ಯಭಿಚಾರಮಾಡಿ ಸುಳ್ಳಿನಲ್ಲಿ ನಡಕೊಂಡದ್ದ ಲ್ಲದೆ ದುಷ್ಟರು ತಮ್ಮ ದುಷ್ಟತ್ವವನ್ನು ಬಿಟ್ಟು ತಿರುಗದ ಹಾಗೆ ಅವರ ಕೈಗಳನ್ನು ಬಲಪಡಿಸುತ್ತಾರೆ; ಅವರೆಲ್ಲರೂ ನನಗೆ ಸೊದೋಮಿನ ಹಾಗೆಯೂ ಅದರ ನಿವಾಸಿಗಳು ಗೊಮೋರದ ಹಾಗೆಯೂ ಇದ್ದಾರೆ. ಆದದರಿಂದ ಸೈನ್ಯಗಳ ಕರ್ತನು ಪ್ರವಾದಿಗಳ ವಿಷಯದಲ್ಲಿ ಹೇಳುವದೇನಂದರೆ--ಇಗೋ, ನಾನು ಅವರಿಗೆ ಮಾಚಿಪತ್ರೆಯನ್ನು ತಿನ್ನುವದಕ್ಕೆ ಕೊಡುತ್ತೇನೆ ವಿಷದ ನೀರನ್ನು ಕುಡಿಯಕೊಡುತ್ತೇನೆ; ಯೆರೂಸಲೇ ಮಿನ ಪ್ರವಾದಿಗಳ ಕಡೆಯಿಂದ ಭ್ರಷ್ಟತ್ವವು ದೇಶಕ್ಕೆಲ್ಲಾ ಹರಡಿದೆ. ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ --ನಿಮಗೆ ಪ್ರವಾದಿಸುವ ಪ್ರವಾದಿಗಳ ವಾಕ್ಯಕ್ಕೆ ಕಿವಿ ಗೊಡಬೇಡಿರಿ; ಅವರು ನಿಮ್ಮನ್ನು ನಿಷ್ಫಲಮಾಡುತ್ತಾರೆ; ಕರ್ತನ ಬಾಯಿಂದಲ್ಲ, ಸ್ವಂತ ಹೃದಯದಿಂದ ದರ್ಶನ ವನ್ನು ಹೇಳುತ್ತಾರೆ. ಆದರೂ ನನ್ನನ್ನು ಅಸಹ್ಯಿಸುವವ ರಿಗೆ ಅವರು--ನಿಮಗೆ ಸಮಾಧಾನವಾಗುವದೆಂದು ಕರ್ತನು ಹೇಳುತ್ತಾನೆ ಎಂದು ಹೇಳುತ್ತಲೇ ಇದ್ದಾರೆ; ತಮ್ಮ ಹೃದಯದ ಕಲ್ಪನೆಯ ಪ್ರಕಾರ ನಡಕೊಳ್ಳುವವ ರೆಲ್ಲರಿಗೆ--ನಿಮ್ಮ ಮೇಲೆ ಕೇಡು ಬರುವದಿಲ್ಲ ಅನ್ನುತ್ತಾರೆ. ಆದರೆ ಯಾರು ಕರ್ತನ ಆಲೋಚನೆಯಲ್ಲಿ ನಿಂತು ಆತನ ವಾಕ್ಯವನ್ನು ತಿಳುಕೊಂಡು ಕೇಳಿದ್ದಾರೆ? ಯಾರು ಆತನ ವಾಕ್ಯದಲ್ಲಿ ಲಕ್ಷ್ಯವಿಟ್ಟು ಕೇಳಿದ್ದಾರೆ? ಇಗೋ, ಕರ್ತನ ಬಿರುಗಾಳಿ ಉಗ್ರವಾಗಿ ಹೊರಟಿದೆ; ಅಘೋರ ವಾದ ಬಿರುಗಾಳಿಯು ದುಷ್ಟರ ತಲೆಯ ಮೇಲೆ ಕಠಿಣ ವಾಗಿ ಬೀಳುವದು. ಆತನು ತನ್ನ ಹೃದಯದ ಅಲೋ ಚನೆಗಳನ್ನು ನಡೆಸಿ ತೀರಿಸುವ ವರೆಗೂ ಕರ್ತನ ಕೋಪವು ತಿರುಗುವದಿಲ್ಲ; ಅಂತ್ಯದಿನಗಳಲ್ಲಿ ಅದನ್ನು ಸಂಪೂರ್ಣವಾಗಿ ಯೋಚನೆ ಮಾಡುವಿರಿ. ನಾನು ಪ್ರವಾದಿಗಳನ್ನು ಕಳುಹಿಸಲಿಲ್ಲ, ಆದಾಗ್ಯೂ ಅವರು ಓಡಿದರು; ನಾನು ಅವರ ಸಂಗಡ ಮಾತನಾಡಲಿಲ್ಲ ಆದಾಗ್ಯೂ ಪ್ರವಾದಿಸಿದರು. ಆದರೆ ಅವರು ನನ್ನ ಆಲೋಚನೆಯಲ್ಲಿ ನಿಂತಿದ್ದರೆ, ಅವರು ಜನರಿಗೆ ನನ್ನ ವಾಕ್ಯಗಳನ್ನು ಕೇಳಕೊಟ್ಟು ಅವರನ್ನು ತಮ್ಮ ಕೆಟ್ಟ ಮಾರ್ಗದಿಂದಲೂ ತಮ್ಮ ಕ್ರಿಯೆಗಳ ಕೆಟ್ಟತನದಿಂದಲೂ ತಿರುಗಿಸುತ್ತಿದ್ದರು. ಕರ್ತನು ಅನ್ನುತ್ತಾನೆ--ನಾನು ಸವಿಾಪದಲ್ಲಿ ದೇವರಾಗಿದ್ದು ದೂರದಲ್ಲಿ ದೇವರ ಲ್ಲವೋ? ನಾನು ಅವನನ್ನು ನೋಡದ ಹಾಗೆ ಒಬ್ಬನು ಮರೆಯಾದ ಸ್ಥಳಗಳಲ್ಲಿ ತನ್ನನ್ನು ಅಡಗಿಸಿಕೊ ಳ್ಳಬಹುದೋ ಎಂದು ಕರ್ತನು ಅನ್ನುತ್ತಾನೆ; ನಾನು ಆಕಾಶದಲ್ಲಿಯೂ ಭೂಮಿಯಲ್ಲಿಯೂ ವ್ಯಾಪಿಸಿರುವವ ನಲ್ಲವೋ? ಎಂದು ಕರ್ತನು ಅನ್ನುತ್ತಾನೆ. ನನ್ನ ಹೆಸರಿನಲ್ಲಿ ಸುಳ್ಳನ್ನು ಪ್ರವಾದಿಸುವ ಪ್ರವಾದಿಗಳು ಹೇಳುವದನ್ನು ಕೇಳಿದ್ದೇನೆ. ಅವರು--ನಾನು ಕನಸು ಕಂಡಿದ್ದೇನೆ, ಕನಸು ಕಂಡಿದ್ದೇನೆ ಅನ್ನುತ್ತಾರೆ. ಸುಳ್ಳು ಪ್ರವಾದಿಸುವ ಪ್ರವಾದಿಗಳ ಹೃದಯದಲ್ಲಿ ಇದು ಎಷ್ಟರ ವರೆಗೆ ಇರುವದು? ಹೌದು, ಅವರು ತಮ್ಮ ಹೃದಯದ ಮೋಸವನ್ನು ಪ್ರವಾದಿಸುವವರೇ; ಅವರ ತಂದೆ ಗಳು ಬಾಳನಿಂದ ನನ್ನ ಹೆಸರನ್ನು ಹೇಗೆ ಮರೆತರೋ ಹಾಗೆಯೇ ಇವರು ತಮ್ಮ ತಮ್ಮ ನೆರೆಯವರಿಗೆ ತಿಳಿಸುವ ಕನಸುಗಳಿಂದ ನನ್ನ ಜನರು ನನ್ನ ಹೆಸರನ್ನು ಮರೆತು ಬಿಡುವಂತೆ ಮಾಡುವದಕ್ಕೆ ಯೋಚಿಸುತ್ತಾರೆ. ಕನಸು ಉಂಟಾದ ಪ್ರವಾದಿಯು ಕನಸನ್ನು ತಿಳಿಸಲಿ, ನನ್ನ ವಾಕ್ಯ ಉಂಟಾದವನು ನನ್ನ ವಾಕ್ಯವನ್ನು ನಂಬಿಗಸ್ತನಾಗಿ ಹೇಳಲಿ; ಗೋಧಿಗೂ ಹೊಟ್ಟಿಗೂ ಸಂಬಂಧವೇನೆಂದು ಕರ್ತನು ಅನ್ನುತ್ತಾನೆ. ನನ್ನ ವಾಕ್ಯವು ಬೆಂಕಿಯ ಹಾಗಲ್ಲವೋ ಎಂದು ಕರ್ತನು ಅನ್ನುತ್ತಾನೆ. ಅದು ಬಂಡೆಯನ್ನು ತುಂಡು ಮಾಡುವ ಸುತ್ತಿಗೆಯ ಹಾಗಲ್ಲವೋ? ಆದದರಿಂದ ಇಗೋ, ಪ್ರತಿಯೊಬ್ಬನೂ ತನ್ನ ನೆರೆಯವನಿಂದ ನನ್ನ ವಾಕ್ಯಗಳನ್ನು ಕದ್ದುಕೊಳ್ಳುವ ಪ್ರವಾದಿಗಳಿಗೆ ವಿರೋಧವಾಗಿದ್ದೇನೆಂದು ಕರ್ತನು ಅನ್ನುತ್ತಾನೆ. ಇಗೋ, ತಮ್ಮ ನಾಲಿಗೆಗಳನ್ನು ಆಡಿ ಸುತ್ತಾ--ಆತನು ನುಡಿಯುತ್ತಾನೆ ಎಂದು ಅನ್ನುವ ಪ್ರವಾದಿಗಳಿಗೆ ನಾನು ವಿರೋಧವಾಗಿದ್ದೇನೆಂದು ಕರ್ತನು ಅನ್ನುತ್ತಾನೆ. ಇಗೋ, ಸುಳ್ಳಿನ ಕನಸುಗಳನ್ನು ಪ್ರವಾದಿಸಿ; ತಮ್ಮ ಸುಳ್ಳುಗಳಿಂದಲೂ ನಿರರ್ಥಕವಾದ ವುಗಳಿಂದಲೂ ನನ್ನ ಜನರು ತಪ್ಪುವಂತೆ ಮಾಡುವವರಿಗೆ ವಿರೋಧವಾಗಿದ್ದೇನೆ; ನಾನು ಅವರನ್ನು ಕಳುಹಿಸಲಿಲ್ಲ, ಅವರಿಗೆ ಅಪ್ಪಣೆಕೊಡಲಿಲ್ಲ; ಆದದರಿಂದ ಅವರು ಹೇಗೂ ಈ ಜನರಿಗೆ ಪ್ರಯೋಜನವಾಗಿರುವದೇ ಇಲ್ಲವೆಂದು ಕರ್ತನು ಅನ್ನುತ್ತಾನೆ.
- Jeremiah 10:8 ಯೆರೆಮೀಯ 10:8ಅವರು ಒಟ್ಟಾರೆ ಕ್ರೂರಿಗಳೂ ಮೂರ್ಖರೂ ಆಗಿದ್ದಾರೆ; ಮರವು ವ್ಯರ್ಥವಾದ ಬೋಧನೆಯಾಗಿವೆ.