Jeremiah · chapter 13 · verse 21
Jeremiah 13:21 in Kannada
ಆತನು ನಿನ್ನನ್ನು ಶಿಕ್ಷಿಸುವಾಗ ಏನು ಹೇಳುವಿ? ನಿನ್ನ ಮೇಲೆ ಅವರು ಮುಖ್ಯ ಪ್ರಭುಗಳೂ ಮುಖ್ಯಸ್ಥರೂ ಆಗಿರುವದಕ್ಕೆ ನೀನೇ ಅವರಿಗೆ ಕಲಿಸಿದಿಯಲ್ಲಾ? ಹೆರುವ ಸ್ತ್ರೀಯ ಪ್ರಕಾರ ನಿನ್ನನ್ನು ದುಃಖಗಳು ಹಿಡಿಯುವವಲ್ಲವೋ?
Aatanu ninnannu shikshisuvaaga enu heluvi? Ninna mele avaru mukhya prabhugaloo mukhyastharoo aagiruvadakke neene avarige kalisidiyallaa? Heruva streeya prakaara ninnannu duhkhagalu hidiyuvavallavo?
Jeremiah 13:21 in English
- King James Version (KJV)
- What wilt thou say when he shall punish thee? for thou hast taught them [to be] captains, [and] as chief over thee: shall not sorrows take thee, as a woman in travail?
- World English Bible (WEB)
- What will you say when he sets over you as head those whom you have yourself taught to be friends to you? Won’t sorrows take hold of you, as of a woman in travail?
- American Standard Version (ASV)
- What wilt thou say, when he shall set over thee as head those whom thou hast thyself taught to be friends to thee? shall not sorrows take hold of thee, as of a woman in travail?
- Bible in Basic English (BBE)
- What will you say when he puts over you those whom you yourself have made your friends? will not pains take you like a woman in childbirth?
- Darby Translation (DBY)
- What wilt thou say when he shall visit thee, since thou thyself hast trained them to be princes in chief over thee? Shall not sorrows take thee, as a woman in travail?
- Webster's Bible (WBS)
- What wilt thou say when he shall punish thee? for thou hast taught them [to be] captains, [and] as chief over thee: shall not sorrows take thee, as a woman in travail?
- Young's Literal Translation (YLT)
- What dost thou say, when He looketh after thee? And thou — thou hast taught them [to be] over thee — leaders for head? Do not pangs seize thee as a travailing woman?
Read in context
- 19ದಕ್ಷಿಣದ ಪಟ್ಟಣಗಳು ತೆರೆಯುವ ವನಿಲ್ಲದೆ ಮುಚ್ಚಲ್ಪಡುವವು, ಯೆಹೂದವೆಲ್ಲವೂ ಸಂಪೂರ್ಣವಾಗಿ ಸೆರೆಯಾಗಿ ಒಯ್ಯಲ್ಪಡುವದು.
- 20ನಿಮ್ಮ ಕಣ್ಣುಗಳನ್ನು ಎತ್ತಿ ಉತ್ತರದಿಂದ ಬರುವವ ರನ್ನು ನೋಡಿರಿ; ನಿನಗೆ ಕೊಡಲ್ಪಟ್ಟ ಹಿಂಡೂ ನನ್ನ ಶೃಂಗಾರದ ಮಂದೆಯೂ ಎಲ್ಲಿ?
- 21ಆತನು ನಿನ್ನನ್ನು ಶಿಕ್ಷಿಸುವಾಗ ಏನು ಹೇಳುವಿ? ನಿನ್ನ ಮೇಲೆ ಅವರು ಮುಖ್ಯ ಪ್ರಭುಗಳೂ ಮುಖ್ಯಸ್ಥರೂ ಆಗಿರುವದಕ್ಕೆ ನೀನೇ ಅವರಿಗೆ ಕಲಿಸಿದಿಯಲ್ಲಾ? ಹೆರುವ ಸ್ತ್ರೀಯ ಪ್ರಕಾರ ನಿನ್ನನ್ನು ದುಃಖಗಳು ಹಿಡಿಯುವವಲ್ಲವೋ?
- 22ಇವು ನನಗೆ ಯಾಕೆ ಸಂಭವಿಸಿದವೆಂದು ನೀನು ನಿನ್ನ ಹೃದಯದಲ್ಲಿ ಅಂದುಕೊಂಡರೆ, ಬಹಳವಾದ ನಿನ್ನ ಅಕ್ರಮದ ನಿಮಿತ್ತ ನಿನ್ನ ಬಟ್ಟೆಗಳು ತೆಗೆಯಲ್ಪಟ್ಟು ನಿನ್ನ ಹಿಮ್ಮಡಿಗಳು ಬೆತ್ತಲೆಯಾದವು.
- 23ಕೂಷ್ಯನು ತನ್ನ ಚರ್ಮವನ್ನೂ ಚಿರತೆಯು ತನ್ನ ಮಚ್ಚೆಗಳನ್ನೂ ಮಾರ್ಪಡಿಸುವದಕ್ಕಾಗುವದೋ? ಹಾಗಾದರೆ ಕೆಟ್ಟ ತನದ ಅಭ್ಯಾಸವುಳ್ಳವರಾದ ನೀವು ಸಹ ಒಳ್ಳೆದನ್ನು ಹೇಗೆ ಮಾಡುವದಕ್ಕಾದೀತು.
Cross references
- Isaiah 13:8 ಯೆಶಾಯ 13:8ಅವರು ಭಯ ಪಡುವರು; ನೋವು ಮತ್ತು ಬೇನೆಗಳು ಅವರನ್ನು ಆವರಿಸಿಕೊಳ್ಳುವವು; ಹೆರುವ ಹೆಂಗಸಿನಂತೆ ಸಂಕಟ ಪಡುವರು; ಅವರು ಒಬ್ಬರಿಗೊಬ್ಬರು ಭ್ರಮೆಪಡು ವರು; ಅವರ ಮುಖಗಳು ಜ್ವಾಲೆಯಂತಿರುವವು.
- Jeremiah 4:31 ಯೆರೆಮೀಯ 4:31ಪ್ರಸವವೇದನೆ ಪಡುವವಳ ಸ್ವರಕ್ಕೂ ಚೊಚ್ಚಲನ್ನು ಹೆರುವವಳ ಸಂಕಟಕ್ಕೂ ಸಮಾನವಾಗಿ ರುವ ಚೀಯೋನಿನ ಮಗಳ ಸ್ವರವನ್ನು ಕೇಳಿದ್ದೇನೆ; ಆಕೆಯು ಗೋಳಾಡುತ್ತಾಳೆ, ಕೈಗಳನ್ನು ಚಾಚಿ--ನನಗೀಗ ಅಯ್ಯೋ, ಕೊಲೆಗಾರರ ನಿಮಿತ್ತ ನನ್ನ ಪ್ರಾಣವು ಬೇಸರಗೊಳ್ಳುತ್ತದೆ ಎಂದನ್ನುತ್ತಾಳೆ.
- Isaiah 10:3 ಯೆಶಾಯ 10:3ವಿಚಾರಣೆಯ ದಿನದಲ್ಲಿಯೂ ದೂರ ದಿಂದ ಬರುವ ನಾಶನದಲ್ಲಿಯೂ ನೀವು ಏನು ಮಾಡು ವಿರಿ? ಸಹಾಯಕ್ಕಾಗಿ ನೀವು ಯಾರ ಬಳಿಗೆ ಓಡುವಿರಿ? ನಿಮ್ಮ ವೈಭವವನ್ನು ಎಲ್ಲಿ ಬಿಡುವಿರಿ?
- Jeremiah 38:22 ಯೆರೆಮೀಯ 38:22ಇಗೋ, ಯೆಹೂದದ ಅರಸನ ಮನೆ ಯಲ್ಲಿ ಉಳಿದ ಹೆಂಗಸರೆಲ್ಲರು ಬಾಬೆಲಿನ ಅರಸನ ಪ್ರಧಾನರ ಬಳಿಗೆ ಹೊರಗೆ ತರಲ್ಪಟ್ಟು ಹೇಳುವದೇ ನಂದರೆ--ನಿನ್ನ ಸ್ನೇಹಿತರು ನಿನ್ನನ್ನು ಪ್ರೇರೇಪಿಸಿ, ನಿನ್ನನ್ನು ಗೆದ್ದಿದ್ದಾರೆ; ನಿನ್ನ ಕಾಲುಗಳು ಕೆಸರಿನಲ್ಲಿ ಮುಳುಗಿವೆ; ಆದರೆ ಅವರು ಹಿಂಜರಿದಿದ್ದಾರೆ.
- Isaiah 39:2–4 ಯೆಶಾಯ 39:2–4ಹಿಜ್ಕೀ ಯನು ಅದಕ್ಕೆ ಸಂತೋಷಪಟ್ಟು ಅವರಿಗೆ ಬೆಳ್ಳಿ, ಬಂಗಾರ, ಸುಗಂಧದ್ರವ್ಯ, ಪರಿಮಳತೈಲ ಮೊದ ಲಾದ ಅಮೂಲ್ಯ ಪದಾರ್ಥಗಳಿರುವ ಮನೆಯನ್ನೂ ಆಯುಧಶಾಲೆಯನ್ನೂ ತನ್ನ ಭಂಡಾರದಲ್ಲಿದ್ದದ್ದೆಲ್ಲ ವನ್ನೂ ತೋರಿಸಿದನು; ಹೀಗೆ ಹಿಜ್ಕೀಯನು ತನ್ನ ಅರಮನೆಯಲ್ಲಿಯೂ ರಾಜ್ಯದಲ್ಲಿಯೂ ಅವರಿಗೆ ತೋರಿಸದಿದ್ದ ವಸ್ತುವು ಒಂದೂ ಇರಲಿಲ್ಲ. ಆಗ ಪ್ರವಾದಿಯಾದ ಯೆಶಾಯನು ಅರಸನಾದ ಹಿಜ್ಕೀ ಯನ ಬಳಿಗೆ ಬಂದು ಅವನಿಗೆ--ಈ ಮನುಷ್ಯರು ಎಲ್ಲಿಂದ ನಿನ್ನ ಬಳಿಗೆ ಬಂದರು, ಅವರು ನಿನಗೆ ಏನು ಹೇಳಿದರು ಎಂದು ಕೇಳಲು, ಹಿಜ್ಕೀಯನು--ಅವರು ಬಹುದೂರ ದೇಶವಾದ ಬಾಬೆಲಿನಿಂದ ಬಂದರು ಎಂದು ಹೇಳಿದನು. ಅದಕ್ಕೆ ಅವನು ಅವನನ್ನು--ಅವರು ನಿನ್ನ ಮನೆಯಲ್ಲಿ ಏನನ್ನು ನೋಡಿದರು ಎಂದು ಕೇಳಲು, ಹಿಜ್ಕೀಯನು--ನನ್ನ ಮನೆಯಲ್ಲಿರುವದೆಲ್ಲ ವನ್ನು ಅವರು ನೋಡಿದರು; ನನ್ನ ಭಂಡಾರದಲ್ಲಿ ನಾನು ಅವರಿಗೆ ತೋರಿಸದೆ ಇದ್ದದ್ದು ಏನೂ ಇರು ವದಿಲ್ಲ ಎಂದು ಉತ್ತರಕೊಟ್ಟನು.
- Jeremiah 5:31 ಯೆರೆಮೀಯ 5:31ಏನಂದರೆ ಪ್ರವಾದಿಗಳು ಸುಳ್ಳಾಗಿ ಪ್ರವಾದಿಸು ತ್ತಾರೆ, ಯಾಜಕರು ತಮ್ಮ ಆದಾಯದಿಂದ ದೊರೆತನ ಮಾಡುತ್ತಾರೆ; ನನ್ನ ಜನರು ಅದನ್ನು ಪ್ರೀತಿ ಮಾಡು ತ್ತಾರೆ; ಆದರೆ ಅದರ ಅಂತ್ಯದಲ್ಲಿ ನೀವು ಏನು ಮಾಡುವಿರಿ?
- 1 Thessalonians 5:3 1 ಥೆಸಲೊನೀಕದವರಿಗೆ 5:3ಆದರೆ--ಸಮಾಧಾನವಾಗಿಯೂ ಸುರಕ್ಷಿತವಾಗಿಯೂ ಇರುತ್ತೇ ವೆಂದು ಜನರು ಹೇಳುತ್ತಿರುವಾಗಲೇ ಅವರ ಮೇಲೆ ನಾಶನವು ಗರ್ಭಿಣಿಗೆ ಪ್ರಸವವೇದನೆ ಬರುವ ಪ್ರಕಾರ ಬರುವದು; ಅವರು ಹೇಗೂ ತಪ್ಪಿಸಿಕೊಳ್ಳಲಾರರು.
- Ezekiel 28:9 ಯೆಹೆಜ್ಕೇಲನು 28:9ನಿನ್ನನ್ನು ಕೊಲ್ಲಲು ಬರುವವನ ಮುಂದೆ ಇನ್ನು ನಾನು ದೇವರೆಂದು ಹೇಳುವಿಯೋ? ನಿನ್ನನ್ನು ಕೊಲ್ಲುವವನ ಕೈಯಲ್ಲಿ ನೀನು ದೇವರಲ್ಲ ನರ ಪ್ರಾಣಿಯೇ;
- Jeremiah 22:23 ಯೆರೆಮೀಯ 22:23ಓ ಲೆಬನೋನಿನಲ್ಲಿ ವಾಸಮಾಡು ವವಳೇ, ದೇವದಾರುಗಳಲ್ಲಿ ಗೂಡು ಮಾಡಿಕೊಂಡ ವಳೇ, ನಿನ್ನ ಮೇಲೆ ಬೇನೆಗಳೂ ಹೆರುವವಳಂತಿರುವ ವೇದನೆಯೂ ಬರುವಾಗ ಎಷ್ಟೋ ಸುಖಕರವಾಗಿರುವಿ.
- Jeremiah 30:6 ಯೆರೆಮೀಯ 30:6ಈಗ ವಿಚಾರಿಸಿ ನೋಡಿರಿ; ಗಂಡಸು ಪ್ರಸವವೇದನೆ ಪಡುವದುಂಟೇ? ನಾನು ಯಾಕೆ ಪುರುಷರೆಲ್ಲರನು ಪ್ರಸವವೇದನೆ ಪಡುವ ಸ್ತ್ರೀಯ ಹಾಗೆ ನಡುವಿನ ಮೇಲೆ ಕೈ ಇಟ್ಟವರ ಹಾಗೆ ನೋಡುತ್ತೇನೆ; ಯಾಕೆ ಮುಖಗಳೆಲ್ಲಾ ಕಳೆಗುಂದಿದವು?
- Jeremiah 6:24 ಯೆರೆಮೀಯ 6:24ಅದರ ಕೀರ್ತಿಯನ್ನು ಕೇಳಿದ್ದೇವೆ, ನಮ್ಮ ಕೈಗಳು ಜೋಲಾ ಡುತ್ತವೆ; ಸಂಕಟವೂ ಹೆರುವವಳಂತಿರುವ ನೋವೂ ನಮ್ಮನ್ನು ಹಿಡಿಯಿತು.
- 2 Kings 16:7 2 ಅರಸುಗಳು 16:7ಆದರೆ ಆಹಾಜನು ಅಶ್ಶೂರಿನ ಅರಸನಾದ ತಿಗ್ಲತ್ಪಿಲೇ ಸೆರನಿಗೆ--ನಾನು ನಿನ್ನ ಸೇವಕನೂ ನಿನ್ನ ಮಗನೂ ಆಗಿದ್ದೇನೆ; ನನಗೆ ವಿರೋಧವಾಗಿ ಎದ್ದ ಅರಾಮ್ಯರ ಅರಸನ ಕೈಗೂ ಇಸ್ರಾಯೇಲಿನ ಅರಸನ ಕೈಗೂ ನನ್ನನ್ನು ತಪ್ಪಿಸಿ ರಕ್ಷಿಸುವ ಹಾಗೆ ಬರ ಹೇಳು ಅಂದನು.