Jeremiah · chapter 30 · verse 6
Jeremiah 30:6 in Kannada
ಈಗ ವಿಚಾರಿಸಿ ನೋಡಿರಿ; ಗಂಡಸು ಪ್ರಸವವೇದನೆ ಪಡುವದುಂಟೇ? ನಾನು ಯಾಕೆ ಪುರುಷರೆಲ್ಲರನು ಪ್ರಸವವೇದನೆ ಪಡುವ ಸ್ತ್ರೀಯ ಹಾಗೆ ನಡುವಿನ ಮೇಲೆ ಕೈ ಇಟ್ಟವರ ಹಾಗೆ ನೋಡುತ್ತೇನೆ; ಯಾಕೆ ಮುಖಗಳೆಲ್ಲಾ ಕಳೆಗುಂದಿದವು?
Eega vichaarisi nodiri; gandasu prasavavedane paduvadunte? Naanu yaake purusharellaranu prasavavedane paduva streeya haage naduvina mele kai ittavara haage noduttene; yaake mukhagalellaa kalegundidavu?
Jeremiah 30:6 in English
- King James Version (KJV)
- Ask ye now, and see whether a man doth travail with child? wherefore do I see every man with his hands on his loins, as a woman in travail, and all faces are turned into paleness?
- World English Bible (WEB)
- Ask now, and see whether a man travails with child. Why do I see every man with his hands on his waist, as a woman in travail, and all faces are turned pale?
- American Standard Version (ASV)
- Ask ye now, and see whether a man doth travail with child: wherefore do I see every man with his hands on his loins, as a woman in travail, and all faces are turned into paleness?
- Bible in Basic English (BBE)
- Put the question and see if it is possible for a man to have birth-pains: why do I see every man with his hands gripping his sides, as a woman does when the pains of birth are on her, and all faces are turned green?
- Darby Translation (DBY)
- Ask ye now, and see, whether a male doth travail with child? Wherefore do I see every man with his hands on his loins, as a woman in travail; and all faces are turned into paleness?
- Webster's Bible (WBS)
- Ask ye now, and see whether a man doth travail with child? Why do I see every man with his hands on his loins, as a woman in travail, and all faces are turned into paleness?
- Young's Literal Translation (YLT)
- Ask, I pray you, and see, is a male bringing forth? Wherefore have I seen every man, His hands on his loins, as a travailing woman, And all faces have been turned to paleness?
Read in context
- 4ಕರ್ತನು ಇಸ್ರಾಯೇಲನ್ನೂ ಯೆಹೂದವನ್ನೂ ಕುರಿತು ಹೇಳಿದ ವಾಕ್ಯಗಳು ಇವೇ--
- 5ಕರ್ತನು ಹೀಗೆ ಹೇಳುತ್ತಾನೆ--ನಾವು ನಡುಗುವಿಕೆಯ ಮತ್ತು ಭಯದ ಸ್ವರವನ್ನು ಕೇಳಿದ್ದೇವೆಯೇ ಹೊರತು ಸಮಾಧಾನದ್ದಲ್ಲ.
- 6ಈಗ ವಿಚಾರಿಸಿ ನೋಡಿರಿ; ಗಂಡಸು ಪ್ರಸವವೇದನೆ ಪಡುವದುಂಟೇ? ನಾನು ಯಾಕೆ ಪುರುಷರೆಲ್ಲರನು ಪ್ರಸವವೇದನೆ ಪಡುವ ಸ್ತ್ರೀಯ ಹಾಗೆ ನಡುವಿನ ಮೇಲೆ ಕೈ ಇಟ್ಟವರ ಹಾಗೆ ನೋಡುತ್ತೇನೆ; ಯಾಕೆ ಮುಖಗಳೆಲ್ಲಾ ಕಳೆಗುಂದಿದವು?
- 7ಅಯ್ಯೋ, ಆ ದಿನವು ಭಯಂಕರವಾದದ್ದು; ಅದರಂಥದ್ದು ಯಾವದೂ ಇಲ್ಲ; ಅದು ಯಾಕೋಬನಿಗೆ ಇಕ್ಕಟ್ಟಿನ ಕಾಲವೇ; ಆದಾಗ್ಯೂ ಅವನು ಅದರಿಂದ ರಕ್ಷಿಸಲ್ಪಡುವನು.
- 8ಆ ದಿವಸದಲ್ಲಿ ಆಗುವದೇನಂದರೆ--ನಾನು ಅವನ ನೊಗವನ್ನು ನಿನ್ನ ಕುತ್ತಿಗೆಯ ಮೇಲಿನಿಂದ ಮುರಿದು ಹಾಕುವೆನು; ನಿನ್ನ ಬಂಧನಗಳನ್ನು ಹರಿದುಬಿಡುವೆನು; ಅನ್ಯರು ಇನ್ನು ಅವನಿಂದ ಸೇವೆ ಮಾಡಿಸಿಕೊಳ್ಳುವದಿಲ್ಲವೆಂದು ಸೈನ್ಯ ಗಳ ಕರ್ತನು ಅನ್ನುತ್ತಾನೆ.
Cross references
- Nahum 2:10 ನಹೂಮ 2:10ಅದು ಬರಿದಾಗಿಯೂ, ಬೈಲಾಗಿಯೂ, ಹಾಳಾ ಗಿಯೂ ಇತ್ತು; ಹೃದಯ ಕರಗುತ್ತದೆ; ಮೊಣಕಾಲುಗಳು ಒಟ್ಟಾಗಿ ಬಡಿದುಕೊಳ್ಳುತ್ತವೆ. ಎಲ್ಲಾ ನಡುವುಗಳಲ್ಲಿ ಹೆಚ್ಚು ಸಂಕಟ ಉಂಟು; ಎಲ್ಲಾ ಮುಖಗಳು ಕಳೆ ಗುಂದುತ್ತವೆ.
- Joel 2:6 ಯೋವೇಲ 2:6ಅವರ ಮುಂದೆ ಜನರು ಬಹಳವಾಗಿ ನೊಂದುಕೊಳ್ಳುತ್ತಾರೆ. ಎಲ್ಲಾ ಮುಖಗಳು ಕಳೆಗುಂದುತ್ತವೆ.
- Jeremiah 4:31 ಯೆರೆಮೀಯ 4:31ಪ್ರಸವವೇದನೆ ಪಡುವವಳ ಸ್ವರಕ್ಕೂ ಚೊಚ್ಚಲನ್ನು ಹೆರುವವಳ ಸಂಕಟಕ್ಕೂ ಸಮಾನವಾಗಿ ರುವ ಚೀಯೋನಿನ ಮಗಳ ಸ್ವರವನ್ನು ಕೇಳಿದ್ದೇನೆ; ಆಕೆಯು ಗೋಳಾಡುತ್ತಾಳೆ, ಕೈಗಳನ್ನು ಚಾಚಿ--ನನಗೀಗ ಅಯ್ಯೋ, ಕೊಲೆಗಾರರ ನಿಮಿತ್ತ ನನ್ನ ಪ್ರಾಣವು ಬೇಸರಗೊಳ್ಳುತ್ತದೆ ಎಂದನ್ನುತ್ತಾಳೆ.
- Isaiah 21:3 ಯೆಶಾಯ 21:3ಆದ ದರಿಂದ ನನ್ನ ಸೊಂಟಗಳು ನೋವಿನಿಂದ ತುಂಬಿವೆ. ಹೆರುವವಳ ವೇದನೆಗಳಂತಿರುವ ವೇದನೆಗಳು ನನ್ನನ್ನು ಹಿಡಿದಿವೆ; ಕೇಳಕೂಡದ ಹಾಗೆ ಸಂಕಟಪಡುತ್ತೇನೆ, ನೋಡಕೂಡದ ಹಾಗೆ ಭ್ರಾಂತನಾಗಿದ್ದೇನೆ.
- Psalm 48:6 ಕೀರ್ತನೆಗಳು 48:6ಭೀತಿಯೂ ಹೆರುವವಳ ಹಾಗೆ ನೋವೂ ಅಲ್ಲಿ ಅವರನ್ನು ಹಿಡಿಯಿತು.
- Hosea 13:13 ಹೋಶೇಯ 13:13ಹೆರು ವವಳ ಸಂಕಟಗಳು ಅವನ ಮೇಲೆಯೇ ಬರುವವು. ಅವನು ಬುದ್ಧಿಹೀನ ಮಗನಾಗಿದ್ದಾನೆ; ಮಕ್ಕಳು ಹುಟ್ಟುವ ಸ್ಥಳದಲ್ಲಿ ಅವನು ಬಹಳ ಹೊತ್ತು ನಿಲ್ಲುವದಿಲ್ಲ.
- Jeremiah 6:24 ಯೆರೆಮೀಯ 6:24ಅದರ ಕೀರ್ತಿಯನ್ನು ಕೇಳಿದ್ದೇವೆ, ನಮ್ಮ ಕೈಗಳು ಜೋಲಾ ಡುತ್ತವೆ; ಸಂಕಟವೂ ಹೆರುವವಳಂತಿರುವ ನೋವೂ ನಮ್ಮನ್ನು ಹಿಡಿಯಿತು.
- Jeremiah 22:23 ಯೆರೆಮೀಯ 22:23ಓ ಲೆಬನೋನಿನಲ್ಲಿ ವಾಸಮಾಡು ವವಳೇ, ದೇವದಾರುಗಳಲ್ಲಿ ಗೂಡು ಮಾಡಿಕೊಂಡ ವಳೇ, ನಿನ್ನ ಮೇಲೆ ಬೇನೆಗಳೂ ಹೆರುವವಳಂತಿರುವ ವೇದನೆಯೂ ಬರುವಾಗ ಎಷ್ಟೋ ಸುಖಕರವಾಗಿರುವಿ.
- 1 Thessalonians 5:3 1 ಥೆಸಲೊನೀಕದವರಿಗೆ 5:3ಆದರೆ--ಸಮಾಧಾನವಾಗಿಯೂ ಸುರಕ್ಷಿತವಾಗಿಯೂ ಇರುತ್ತೇ ವೆಂದು ಜನರು ಹೇಳುತ್ತಿರುವಾಗಲೇ ಅವರ ಮೇಲೆ ನಾಶನವು ಗರ್ಭಿಣಿಗೆ ಪ್ರಸವವೇದನೆ ಬರುವ ಪ್ರಕಾರ ಬರುವದು; ಅವರು ಹೇಗೂ ತಪ್ಪಿಸಿಕೊಳ್ಳಲಾರರು.
- Isaiah 29:22 ಯೆಶಾಯ 29:22ಆದದರಿಂದ ಅಬ್ರಹಾಮನನ್ನು ವಿಮೋಚಿಸಿದ ಕರ್ತನು ಯಾಕೋಬನ ಮನೆತನದ ವಿಷಯವಾಗಿ ಹೇಳುವದೇನಂದರೆ--ಈಗ ಯಾಕೋಬ್ಯರು ನಾಚಿಕೆ ಪಡುವದಿಲ್ಲ ಇಲ್ಲವೆ ಅವನ ಮುಖವು ಕಳೆಗುಂದು ವದಿಲ್ಲ.
- Jeremiah 49:24 ಯೆರೆಮೀಯ 49:24ದಮಸ್ಕವು ನಿತ್ರಾಣವಾಯಿತು; ಓಡಿ ಹೋಗುವದಕ್ಕೆ ತಿರುಗಿಕೊಳ್ಳುತ್ತದೆ; ಭಯವು ಅದನ್ನು ಹಿಡುಕೊಂಡಿದೆ. ಹೆರುವ ಸ್ತ್ರೀಯ ಹಾಗೆ ಸಂಕಟವೂ ವೇದನೆಗಳೂ ಅದನ್ನು ಹಿಡಿದವೆ.
- Isaiah 13:6–9 ಯೆಶಾಯ 13:6–9ನೀವು ಗೋಳಾ ಡಿರಿ, ಕರ್ತನ ದಿನವು ಸವಿಾಪವಾಯಿತು; ಅದು ಸರ್ವಶಕ್ತನಿಂದ ನಾಶನದಂತೆ ಬರುವದು. ಆದ ಕಾರಣ ಎಲ್ಲಾ ಕೈಗಳು ಜೋಲು ಬೀಳುವವು ಪ್ರತಿ ಯೊಬ್ಬನ ಹೃದಯವು ಕರಗುವದು. ಅವರು ಭಯ ಪಡುವರು; ನೋವು ಮತ್ತು ಬೇನೆಗಳು ಅವರನ್ನು ಆವರಿಸಿಕೊಳ್ಳುವವು; ಹೆರುವ ಹೆಂಗಸಿನಂತೆ ಸಂಕಟ ಪಡುವರು; ಅವರು ಒಬ್ಬರಿಗೊಬ್ಬರು ಭ್ರಮೆಪಡು ವರು; ಅವರ ಮುಖಗಳು ಜ್ವಾಲೆಯಂತಿರುವವು. ಇಗೋ, ಕರ್ತನ ದಿನವು ಬರುತ್ತದೆ, ಭೂಮಿಯನ್ನು ಹಾಳುಮಾಡುವದಕ್ಕೂ ಅಲ್ಲಿಂದ ಪಾಪಿಗಳನ್ನು ನಿರ್ಮೂಲಮಾಡುವದಕ್ಕೂ ಅದು ಕೋಪೋದ್ರೇಕ ದಿಂದಲೂ ತೀಕ್ಷ್ಣ ರೋಷದಿಂದಲೂ ಕ್ರೂರವಾಗಿರು ವದು.