Jeremiah · chapter 13 · verse 24
Jeremiah 13:24 in Kannada
ಆದಕಾರಣ ಅಡವಿಯ ಗಾಳಿಯಿಂದ ಹಾರಿ ಹೋಗುವ ಹುಲ್ಲಿನಂತೆ ಅವರನ್ನು ಚದರಿಸುವೆನು.
Aadakaarana adaviya gaaliyinda haari hoguva hullinante avarannu chadarisuvenu.
Jeremiah 13:24 in English
- King James Version (KJV)
- Therefore will I scatter them as the stubble that passeth away by the wind of the wilderness.
- World English Bible (WEB)
- “Therefore I will scatter them as the stubble that passes away by the wind of the wilderness.
- American Standard Version (ASV)
- Therefore will I scatter them, as the stubble that passeth away, by the wind of the wilderness.
- Bible in Basic English (BBE)
- So I will send them in all directions, as dry grass is taken away by the wind of the waste land.
- Darby Translation (DBY)
- And I will scatter them as stubble that passeth away by the wind of the wilderness.
- Webster's Bible (WBS)
- Therefore will I scatter them as the stubble that passeth away by the wind of the wilderness.
- Young's Literal Translation (YLT)
- And I scatter them as stubble, Passing away, by a wind of the wilderness.
Read in context
- 22ಇವು ನನಗೆ ಯಾಕೆ ಸಂಭವಿಸಿದವೆಂದು ನೀನು ನಿನ್ನ ಹೃದಯದಲ್ಲಿ ಅಂದುಕೊಂಡರೆ, ಬಹಳವಾದ ನಿನ್ನ ಅಕ್ರಮದ ನಿಮಿತ್ತ ನಿನ್ನ ಬಟ್ಟೆಗಳು ತೆಗೆಯಲ್ಪಟ್ಟು ನಿನ್ನ ಹಿಮ್ಮಡಿಗಳು ಬೆತ್ತಲೆಯಾದವು.
- 23ಕೂಷ್ಯನು ತನ್ನ ಚರ್ಮವನ್ನೂ ಚಿರತೆಯು ತನ್ನ ಮಚ್ಚೆಗಳನ್ನೂ ಮಾರ್ಪಡಿಸುವದಕ್ಕಾಗುವದೋ? ಹಾಗಾದರೆ ಕೆಟ್ಟ ತನದ ಅಭ್ಯಾಸವುಳ್ಳವರಾದ ನೀವು ಸಹ ಒಳ್ಳೆದನ್ನು ಹೇಗೆ ಮಾಡುವದಕ್ಕಾದೀತು.
- 24ಆದಕಾರಣ ಅಡವಿಯ ಗಾಳಿಯಿಂದ ಹಾರಿ ಹೋಗುವ ಹುಲ್ಲಿನಂತೆ ಅವರನ್ನು ಚದರಿಸುವೆನು.
- 25ಇದೇ ನಿನ್ನ ಭಾಗವು, ನನ್ನಿಂದ ನಿನಗೆ ಅಳತೆ ಮಾಡಿದ ಪಾಲು ಎಂದು ಕರ್ತನು ಅನ್ನುತ್ತಾನೆ; ನನ್ನನ್ನು ಮರೆತುಬಿಟ್ಟು ಸುಳ್ಳಿನಲ್ಲಿ ಭರವಸವಿಟ್ಟಿದ್ದಿ.
- 26ಆದದರಿಂದ ನಾನು ನಿನ್ನ ಬಟ್ಟೆಗಳನ್ನು ನಿನ್ನ ನಾಚಿಕೆ ಕಾಣುವ ಹಾಗೆ ನಿನ್ನ ಮುಖದ ಮೇಲೆ ಎತ್ತುವೆನು.ನಿನ್ನ ವ್ಯಭಿಚಾರಗಳನ್ನೂ ಬುಸುಗುಟ್ಟು ವಿಕೆಗಳನ್ನೂ ಸೂಳೆತನದ ದೋಷವನ್ನೂ ಹೊಲಗಳ ಲ್ಲಿರುವ ಗುಡ್ಡಗಳ ಮೇಲೆ ಆಗುವ ನಿನ್ನ ಅಸಹ್ಯಗಳನ್ನೂ ನೋಡಿದ್ದೇನೆ, ಓ ಯೆರೂಸಲೇಮೇ, ನಿನಗೆ ಅಯ್ಯೋ, ನೀನು ಶುದ್ಧವಾಗುವದಿಲ್ಲವೋ? ಒಂದು ಸಾರಿ ಇದು ಯಾವಾಗ ಆದೀತು?
Cross references
- Psalm 1:4 ಕೀರ್ತನೆಗಳು 1:4ಭಕ್ತಿಹೀನರು ಹಾಗಲ್ಲ, ಅವರು ಗಾಳಿ ಬಡು ಕೊಂಡು ಹೋಗುವ ಹೊಟ್ಟಿನ ಹಾಗೆ ಇದ್ದಾರೆ.
- Leviticus 26:33 ಯಾಜಕಕಾಂಡ 26:33ನಿಮ್ಮನ್ನು ಜನಾಂಗಗಳಲ್ಲಿ ಚದರಿಸಿ ನಿಮ್ಮ ಹಿಂದೆ ಕತ್ತಿಯನ್ನು ಬೀಸುವೆನು; ನಿಮ್ಮ ಭೂಮಿ ಹಾಳಾಗಿ ರುವದು; ನಿಮ್ಮ ಪಟ್ಟಣಗಳು ನಾಶವಾಗಿರುವವು.
- Ezekiel 5:12 ಯೆಹೆಜ್ಕೇಲನು 5:12ನಿನ್ನಲ್ಲಿಯ ಮೂರನೆಯ ಒಂದು ಪಾಲು ವ್ಯಾಧಿಗಳಿಂದ ಸಾಯು ವರು, ಕ್ಷಾಮದಿಂದ ನಿನ್ನಲ್ಲಿ ಅವರು ನಾಶವಾಗುವರು; ಮೂರನೆಯ ಒಂದು ಪಾಲು ನಿನ್ನ ಸುತ್ತಲೂ ಕತ್ತಿಯಿಂದ ಬೀಳುವರು; ಮೂರನೆಯ ಒಂದು ಪಾಲನ್ನು ಎಲ್ಲಾ ದಿಕ್ಕುಗಳಿಗೆ (ಗಾಳಿಗೆ ತೂರಿ) ಚದರಿಸಿ ಅವರ ಮೇಲೆ ಕತ್ತಿಯನ್ನು ಬೀಸುವೆನು.
- Hosea 13:3 ಹೋಶೇಯ 13:3ಆದದರಿಂದ ಅವರು ಪ್ರಾತಃ ಕಾಲದ ಮೇಘದ ಹಾಗೆಯೂ ಬೇಗನೆ ಮಾಯ ವಾಗುವ ಇಬ್ಬನಿ ಹಾಗೆಯೂ ಸುಳಿಗಾಳಿಯು ನೆಲದಿಂದ ಬಡಿದುಕೊಂಡು ಹೋಗುವ ಹೊಟ್ಟಿನ ಹಾಗೆಯೂ ಚಿಮಿಣಿಗೆಯಿಂದ ಹೊರಡುವ ಹೊಗೆಯ ಹಾಗೆಯೂ ಇರುವರು.
- Ezekiel 5:2 ಯೆಹೆಜ್ಕೇಲನು 5:2ಅದರ ಮೂರನೆಯ ಪಾಲನ್ನು ನಗರದ ಮಧ್ಯದಲ್ಲಿ ಮುತ್ತಿಗೆಯ ದಿವಸಗಳು ಮುಗಿದ ಮೇಲೆ ಬೆಂಕಿಯಿಂದ ಸುಡಬೇಕು, ಮೂರನೆಯ ಪಾಲನ್ನು ತೆಗೆದುಕೊಂಡು ಖಡ್ಗದಿಂದ ಸುತ್ತಲೂ ಕಡಿಯಬೇಕು; ಉಳಿದ ಮೂರನೆಯ ಪಾಲನ್ನು ಗಾಳಿಗೆ ಚೆಲ್ಲಬೇಕು ಮತ್ತು ನಾನು ಅವುಗಳ ಹಿಂದೆ ಕತ್ತಿಯನ್ನು ಬೀಸುವೆನು
- Isaiah 41:16 ಯೆಶಾಯ 41:16ನೀನು ಅವುಗಳನ್ನು ತೂರಲು ಗಾಳಿಯು ಅವುಗಳನ್ನು ಬಡಿದುಕೊಂಡು ಹೋಗುವದು, ಬಿರುಗಾಳಿಯು ಚೆಲ್ಲಾಪಿಲ್ಲಿ ಮಾಡುವದು; ನೀನಂತೂ ಕರ್ತನಲ್ಲಿ ಸಂತೋಷಿಸಿ, ಇಸ್ರಾಯೇಲಿನ ಪರಿಶುದ್ಧನಲ್ಲಿ ಮಹಿಮೆಹೊಂದುವಿ.
- Isaiah 17:13 ಯೆಶಾಯ 17:13ಮಹಾ ಜಲಪ್ರವಾಹ ಗಳು ಘೋಷಿಸುವಂತೆ ಜನಾಂಗಗಳು ಘೋಷಿಸು ತ್ತವೆ. ಆದರೆ ದೇವರು ಅವರನ್ನು ಗದರಿಸುತ್ತಲೇ ಅವರು ದೂರ ಓಡಿಹೋಗಿ ಬೆಟ್ಟಗಳಲ್ಲಿ ಗಾಳಿಗೆ ಸಿಕ್ಕಿದ ಹೊಟ್ಟಿನಂತೆಯೂ ಸುಂಟರಗಾಳಿಯಿಂದ ಸುತ್ತಿ ಯಾಡುವ ದೂಳಿನಂತೆಯೂ ಅಟ್ಟಲ್ಪಡುವರು.ಇಗೋ, ಸಾಯಂಕಾಲದಲ್ಲಿ ಭಯಭ್ರಾಂತಿ; ಉದ ಯಕ್ಕೆ ಮುಂಚೆ ಅವನು ಇಲ್ಲದಂತಾಗುವನು. ನಮ್ಮನ್ನು ಸೂರೆಮಾಡುವವರಿಗೆ ಇದೇ ಗತಿ. ನಮ್ಮನ್ನು ಕೊಳ್ಳೆ ಹೊಡೆಯುವವರ ಪಾಡು ಇದೇ.
- Jeremiah 4:11–12 ಯೆರೆಮೀಯ 4:11–12ಆ ಸಮಯದಲ್ಲಿ ಈ ಜನರಿಗೂ ಯೆರೂಸಲೇಮಿಗೂ ಹೇಳಲ್ಪಡುವದೇನಂದರೆ--ಒಣ ಗಾಳಿಯು ಅರಣ್ಯದ ಉನ್ನತ ಸ್ಥಳಗಳಿಂದ ನನ್ನ ಜನರ ಕುಮಾರಿಯ ಕಡೆಗೆ ಬರುತ್ತದೆ. ಅದು ತೂರುವದಕ್ಕೂ ಶುದ್ಧಮಾಡುವದಕ್ಕೂ ಆಗತಕ್ಕದ್ದಲ್ಲ. ಅದಕ್ಕಿಂತ ತುಂಬ ಗಾಳಿ ಆ ಸ್ಥಳಗಳಿಂದ ನನ್ನ ಬಳಿಗೆ ಬರುವದು; ಈಗಲೂ ನಾನು ಅವರಿಗೆ ವಿರೋಧವಾಗಿ ನ್ಯಾಯ ತೀರ್ಪುಗಳನ್ನು ಕೊಡುವೆನು.
- Ezekiel 17:21 ಯೆಹೆಜ್ಕೇಲನು 17:21ಅವನ ಸೈನ್ಯಗಳೆಲ್ಲಾ ಚದರಿಸಲ್ಪಟ್ಟು ಓಡಿಹೋಗಿ ಅವನ ಸಂಗಡ ಕತ್ತಿಯಿಂದ ಬೀಳುವರು; ಉಳಿದವರು ಎಲ್ಲಾ ದಿಕ್ಕುಗಳಿಗೆ ಚದರಿಸ ಲ್ಪಡುವರು; ಆಗ ಕರ್ತನಾದ ನಾನೇ ಅದನ್ನು ಹೇಳಿ ದೆನೆಂದು ನಿಮಗೆ ತಿಳಿಯುವದು.
- Luke 21:24 ಲೂಕನು 21:24ಇದಲ್ಲದೆ ಅವರು ಕತ್ತಿಯ ಬಾಯಿಗೆ ಬೀಳುವರು. ಸೆರೆಯಾಗಿ ಎಲ್ಲಾ ಜನಾಂಗಗಳಲ್ಲಿ ಒಯ್ಯ ಲ್ಪಡುವರು;ಅನ್ಯಜನಗಳ ಕಾಲಗಳು ಪರಿಪೂರ್ಣ ವಾಗುವ ವರೆಗೆ ಯೆರೂಸಲೇಮು ಅನ್ಯಜನಗಳಿಂದ ತುಳಿದಾಡಲ್ಪಡುವದು.
- Deuteronomy 32:26 ಧರ್ಮೋಪದೇಶಕಾಂಡ 32:26ನಾನು--ಅವರನ್ನು ಚದುರಿಸಿಬಿಡುವೆನೆಂದು ಹೇಳಿಕೊಂಡೆನು; ಅವರ ಜ್ಞಾಪಕವನ್ನು ಮನುಷ್ಯರಲ್ಲಿ ಇರದ ಹಾಗೆ ಮಾಡುವೆನು.
- Deuteronomy 28:64 ಧರ್ಮೋಪದೇಶಕಾಂಡ 28:64ಇದ ಲ್ಲದೆ ಕರ್ತನು ನಿನ್ನನ್ನು ಭೂಮಿಯ ಈ ಮೇರೆಯಿಂದ ಆ ಮೇರೆಯ ವರೆಗೂ ಎಲ್ಲಾ ಜನಗಳಲ್ಲಿ ಚದರಿಸು ವನು; ಅಲ್ಲಿ ನೀನೂ ನಿನ್ನ ಪಿತೃಗಳೂ ತಿಳಿಯದಂಥ ಮರವೂ ಕಲ್ಲೂ ಆಗಿರುವಂಥ ಬೇರೆ ದೇವರುಗಳನ್ನು ಸೇವಿಸುವಿ.