Jeremiah · chapter 13 · verse 5
Jeremiah 13:5 in Kannada
ಆಗ ನಾನು ಹೋಗಿ ಕರ್ತನು ನನಗೆ ಆಜ್ಞಾಪಿಸಿದ ಪ್ರಕಾರ ಅದನ್ನು ಯೂಫ್ರೇಟೀಸ್ ಬಳಿ ಯಲ್ಲಿ ಅಡಗಿಸಿದೆನು.
Aaga naanu hogi kartanu nanage aajnyaapisida prakaara adannu yoophretees bali yalli adagisidenu.
Jeremiah 13:5 in English
- King James Version (KJV)
- So I went, and hid it by Euphrates, as the LORD commanded me.
- World English Bible (WEB)
- So I went and hid it by the Euphrates, as the LORD commanded me.
- American Standard Version (ASV)
- So I went, and hid it by the Euphrates, as Jehovah commanded me.
- Bible in Basic English (BBE)
- So I went and put it in a secret place by Parah, as the Lord had said to me.
- Darby Translation (DBY)
- So I went and hid it by the Euphrates, as Jehovah had commanded me.
- Webster's Bible (WBS)
- So I went, and hid it by Euphrates, as the LORD commanded me.
- Young's Literal Translation (YLT)
- and I go and hide it by Phrat, as Jehovah commanded me.
Read in context
- 3ಆಗ ಕರ್ತನ ವಾಕ್ಯವು ನನಗೆ ಎರಡನೇ ಸಾರಿ ಉಂಟಾಗಿ ಹೇಳಿದ್ದೆನಂದರೆ--ನೀನು ನಿನ್ನ ನಡುವಿನಲ್ಲಿರುವ
- 4ದಟ್ಟಿಯನ್ನು ತಕ್ಕೊಂಡು ಎದ್ದು ಯೂಫ್ರೇಟೀಸ್ಗೆ ಹೋಗಿ ಅದನ್ನು ಅಲ್ಲಿ ಬಂಡೆಯ ಬಿರುಕಿನಲ್ಲಿ ಅಡಗಿಸು ಎಂದಿತು.
- 5ಆಗ ನಾನು ಹೋಗಿ ಕರ್ತನು ನನಗೆ ಆಜ್ಞಾಪಿಸಿದ ಪ್ರಕಾರ ಅದನ್ನು ಯೂಫ್ರೇಟೀಸ್ ಬಳಿ ಯಲ್ಲಿ ಅಡಗಿಸಿದೆನು.
- 6ಬಹಳ ದಿವಸಗಳಾದ ಮೇಲೆ ಕರ್ತನು ನನಗೆ--ನೀನು ಎದ್ದು ಯೂಫ್ರೆಟೀ ಸ್ಗೆ ಹೋಗಿ ಅಲ್ಲಿ ಅಡಗಿಸಬೇಕೆಂದು ನಾನು ಆಜ್ಞಾಪಿಸಿದ ದಟ್ಟಿಯನ್ನು ಅಲ್ಲಿಂದ ತಕ್ಕೋ ಅಂದನು.
- 7ಆಗ ನಾನು ಯೂಫ್ರೇಟೀಸಿಗೆ ಹೋಗಿ ಅಗೆದು ಆ ದಟ್ಟಿಯನ್ನು ನಾನು ಅಡಗಿಸಿದ್ದಲ್ಲಿಂದ ತೆಗೆದೆನು; ಇಗೋ, ಆ ದಟ್ಟಿಯು ಯಾವ ಕೆಲಸಕ್ಕಾದರೂ ಬಾರದೆ ಕೆಟ್ಟು ಹೋಗಿತ್ತು.
Cross references
- Exodus 40:16 ವಿಮೋಚನಕಾಂಡ 40:16ಮೋಶೆಯು ಹಾಗೆಯೇ ಮಾಡಿದನು. ಕರ್ತನು ತನಗೆ ಆಜ್ಞಾಪಿಸಿದ ಪ್ರಕಾರವೇ ಅವನು ಎಲ್ಲವನ್ನು ಮಾಡಿದನು.
- Exodus 39:42–43 ವಿಮೋಚನಕಾಂಡ 39:42–43ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಇಸ್ರಾಯೇಲ್ ಮಕ್ಕಳು ಈ ಕೆಲಸಗಳನ್ನೆಲ್ಲಾ ಮಾಡಿ ದರು.ಮೋಶೆಯು ಆ ಕೆಲಸವನ್ನೆಲ್ಲಾ ನೋಡಿದಾಗ ಇಗೋ, ಕರ್ತನು ಆಜ್ಞಾಪಿಸಿದ ಪ್ರಕಾರವೇ ಅವರು ಅದನ್ನು ಮಾಡಿದ್ದರು. ಆಗ ಮೋಶೆಯು ಅವರನ್ನು ಆಶೀರ್ವದಿಸಿದನು. ಮೋಶೆಯು ಆ ಕೆಲಸವನ್ನೆಲ್ಲಾ ನೋಡಿದಾಗ ಇಗೋ, ಕರ್ತನು ಆಜ್ಞಾಪಿಸಿದ ಪ್ರಕಾರವೇ ಅವರು ಅದನ್ನು ಮಾಡಿದ್ದರು. ಆಗ ಮೋಶೆಯು ಅವರನ್ನು ಆಶೀರ್ವದಿಸಿದನು.
- 2 Timothy 2:3 2 ತಿಮೊಥೆಯನಿಗೆ 2:3ಆದದರಿಂದ ನೀನು ಯೇಸು ಕ್ರಿಸ್ತನ ಒಳ್ಳೇ ಸೈನಿಕನಂತೆ ಶ್ರಮೆಯನ್ನ ನುಭವಿಸು.
- Hebrews 11:8 ಇಬ್ರಿಯರಿಗೆ 11:8ನಂಬಿಕೆಯಿಂದಲೇ ಅಬ್ರಹಾಮನು ಕರೆಯ ಲ್ಪಟ್ಟಾಗ ವಿಧೇಯನಾಗಿ ತಾನು ಬಾಧ್ಯವಾಗಿ ಹೊಂದ ಬೇಕಾಗಿದ್ದ ಸ್ಥಳಕ್ಕೆ ಹೊರಟುಹೋದನು; ತಾನು ಹೋಗಬೇಕಾದ ಸ್ಥಳವು ಯಾವದೆಂದು ತಿಳಿಯದೆ ಹೊರಟನು.
- Hebrews 11:17–19 ಇಬ್ರಿಯರಿಗೆ 11:17–19ಅಬ್ರಹಾಮನು ಶೋಧಿತನಾಗಿ ನಂಬಿಕೆ ಯಿಂದಲೇ ಇಸಾಕನನ್ನು ಸಮರ್ಪಿಸಿದನು; ಆ ವಾಗ್ದಾನ ಗಳನ್ನು ಹೊಂದಿದ ಅವನು ತನ್ನ ಒಬ್ಬನೇ ಮಗನನ್ನು ಸಮರ್ಪಿಸಿದನು. ಅವನ ವಿಷಯದಲ್ಲಿ ಇಸಾಕ ನಲ್ಲಿಯೇ ನಿನ್ನ ಸಂತತಿ ಕರೆಯಲ್ಪಡುವದೆಂದು ಹೇಳ ಲ್ಪಟ್ಟಿತು. ತನ್ನ ಮಗನನ್ನು ಸತ್ತವರೊಳಗಿಂದಲೂ ದೇವರು ಎಬ್ಬಿಸ ಸಮರ್ಥನಾಗಿದ್ದಾನೆಂದು ಎಣಿಸಿದನು. ಸತ್ತವರೊಳಗಿಂದಲೇ ಜೀವಿತನಾಗಿ ಬಂದವನಂತೆ ಅವನನ್ನು ಉಪಮಾನವಾಗಿ ಹೊಂದಿದನು.
- Matthew 22:2–6 ಮತ್ತಾಯನು 22:2–6ಪರಲೋಕ ರಾಜ್ಯವು ತನ್ನ ಮಗನ ಮದುವೆ ಮಾಡಿದ ಒಬ್ಬಾನೊಬ್ಬ ಅರಸನಿಗೆ ಹೋಲಿಕೆಯಾಗಿದೆ. ಅವನು ಮದುವೆಗೆ ಬರ ಹೇಳಿದವರನ್ನು ಕರೆಯು ವದಕ್ಕೆ ತನ್ನ ಸೇವಕರನ್ನು ಕಳುಹಿಸಿದನು; ಆದರೆ ಅವರು ಬರಲೊಲ್ಲದೆ ಇದ್ದರು. ಅವನು ತಿರಿಗಿ ಬೇರೆ ಸೇವಕರನ್ನು ಕಳುಹಿಸಿ ಅವರಿಗೆ--ಇಗೋ, ನಾನು ಔತಣವನ್ನು ಸಿದ್ಧಮಾಡಿದ್ದೇನೆ, ನನ್ನ ಎತ್ತುಗಳೂ ಕೊಬ್ಬಿದ ಪಶುಗಳೂ ಕೊಯ್ಯಲ್ಪಟ್ಟಿವೆ ಮತ್ತು ಎಲ್ಲವು ಗಳು ಸಿದ್ಧವಾಗಿವೆ; ಮದುವೆಗೆ ಬನ್ನಿರಿ ಎಂದು ಕರೆಯಲ್ಪಟ್ಟವರಿಗೆ ಹೇಳಿರಿ ಅಂದನು. ಕರೆಯಲ್ಪಟ್ಟವರು ಅದನ್ನು ಅಲಕ್ಷ್ಯಮಾಡಿ ಒಬ್ಬನು ತನ್ನ ಹೊಲಕ್ಕೂ ಇನ್ನೊಬ್ಬನು ತನ್ನ ವ್ಯಾಪಾರಕ್ಕೂ ಹೊರಟುಹೋದರು. ಉಳಿದವರು ಅವನ ಸೇವಕರನ್ನು ಹಿಡಿದು ಅವಮಾನ ಪಡಿಸಿ ಅವರನ್ನು ಕೊಂದುಹಾಕಿದರು.
- John 2:5–8 ಯೋಹಾನನು 2:5–8ಆತನ ತಾಯಿಯು ಸೇವಕರಿಗೆ--ಆತನು ನಿಮಗೆ ಏನು ಹೇಳುತ್ತಾನೋ ಅದನ್ನು ಮಾಡಿರಿ ಅಂದಳು. ಯೆಹೂದ್ಯರ ಶುದ್ಧೀ ಕರಣದ ಪ್ರಕಾರ ಅಲ್ಲಿ ಪ್ರತಿಯೊಂದು ಎರಡು ಇಲ್ಲವೆ ಮೂರು ಕೊಳಗ ನೀರು ಹಿಡಿಯುವಷ್ಟು ಆರು ಕಲ್ಲಿನ ಬಾನೆಗಳು ಇದ್ದವು. ಯೇಸು ಅವರಿಗೆ--ಆ ಬಾನೆ ಗಳಲ್ಲಿ ನೀರು ತುಂಬಿರಿ ಅಂದನು. ಅವರು ಅವುಗಳನ್ನು ಕಂಠದವರೆಗೆ ತುಂಬಿದ್ದರು. ಆತನು ಅವರಿಗೆ--ಈಗ ಇದನ್ನು ತೋಡಿಕೊಂಡು ಹೋಗಿ ಔತಣದ ಪಾರುಪತ್ಯಗಾರನಿಗೆ ಕೊಡಿರಿ ಎಂದು ಹೇಳಲು ಅವರು ತಕ್ಕೊಂಡು ಹೋಗಿ ಕೊಟ್ಟರು.
- Acts 26:19–20 ಅಪೊಸ್ತಲರ ಕೃತ್ಯಗಳು 26:19–20ಆದ ಕಾರಣ ಓ ಅಗ್ರಿಪ್ಪ ರಾಜನೇ, ಪರಲೋಕದ ಆ ದರ್ಶನಕ್ಕೆ ನಾನು ಅವಿಧೇಯನಾಗಲಿಲ್ಲ. ಆದರೆ ಅವರು ಮಾನಸಾಂತರಪಟ್ಟು ದೇವರ ಕಡೆಗೆ ತಿರುಗಿ ಕೊಂಡು ಮಾನಸಾಂತರಪಟ್ಟದ್ದಕ್ಕಾಗಿ ಯೋಗ್ಯವಾದ ಕ್ರಿಯೆಗಳನ್ನು ಮಾಡಬೇಕೆಂದು ಮೊದಲನೆಯದಾಗಿ ದಮಸ್ಕದವರಿಗೂ ಯೆರೂಸಲೇಮಿನಲ್ಲಿಯೂ ಯೂದಾಯದ ಎಲ್ಲಾ ಕಡೆಯ ತೀರಗಳಲ್ಲಿಯೂ ಅನ್ಯಜನಾಂಗದವರಿಗೂ ಪ್ರಕಟಿಸಿದೆನು.