Jeremiah · chapter 16 · verse 8
Jeremiah 16:8 in Kannada
ಅವರ ಸಂಗಡ ಕೂತುಕೊಂಡು ಉಣ್ಣುವದಕ್ಕೂ ಕುಡಿಯುವದಕ್ಕೂ ಔತಣದ ಮನೆಯಲ್ಲಿ ಪ್ರವೇಶಿಸ ಬೇಡ.
Avara sangada kootukondu unnuvadakkoo kudiyuvadakkoo autanada maneyalli praveshisa beda.
Jeremiah 16:8 in English
- King James Version (KJV)
- Thou shalt not also go into the house of feasting, to sit with them to eat and to drink.
- World English Bible (WEB)
- “You shall not go into the house of feasting to sit with them, to eat and to drink.”
- American Standard Version (ASV)
- And thou shalt not go into the house of feasting to sit with them, to eat and to drink.
- Bible in Basic English (BBE)
- And you are not to go into the house of feasting, or be seated with them to take food or drink.
- Darby Translation (DBY)
- And thou shalt not go into the house of feasting, to sit with them, to eat and to drink.
- Webster's Bible (WBS)
- Also thou shalt not go into the house of feasting, to sit with them to eat and to drink.
- Young's Literal Translation (YLT)
- A house of banqueting thou dost not enter, To sit with them, to eat and to drink,
Read in context
- 6ದೊಡ್ಡವರೂ ಚಿಕ್ಕವರೂ ಈ ದೇಶದಲ್ಲಿ ಸಾಯುವರು; ಅವರು ಹೂಣಿಡಲ್ಪಡುವದಿಲ್ಲ, ಅವರಿ ಗೋಸ್ಕರ ಯಾರೂ ಗೋಳಾಡುವದಿಲ್ಲ; ಅವರಿ ಗೋಸ್ಕರ ತಮ್ಮನ್ನು ಕೊಯ್ದು ಕೊಳ್ಳುವದಿಲ್ಲ, ಬೋಳಿಸಿ ಕೊಳ್ಳುವದೂ ಇಲ್ಲ.
- 7ಸತ್ತವರ ವಿಷಯದಲ್ಲಿ ಅವರನ್ನು ಆದರಿಸುವ ಹಾಗೆ ಜನರು ಹರಿದುಕೊಳ್ಳುವದಿಲ್ಲ; ಅವರ ತಂದೆ ತಾಯಿಗಳ ವಿಷಯವಾದರೋ ಅವರಿಗೆ ಆದರಣೆಯ ಪಾತ್ರೆಯನ್ನು ಕುಡಿಯಲು ಕೊಡುವದಿಲ್ಲ.
- 8ಅವರ ಸಂಗಡ ಕೂತುಕೊಂಡು ಉಣ್ಣುವದಕ್ಕೂ ಕುಡಿಯುವದಕ್ಕೂ ಔತಣದ ಮನೆಯಲ್ಲಿ ಪ್ರವೇಶಿಸ ಬೇಡ.
- 9ಇಸ್ರಾಯೇಲಿನ ದೇವರಾಗಿರುವ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನಿಮ್ಮ ಕಣ್ಣುಗಳ ಮುಂದೆ ನಿಮ್ಮ ದಿನಗಳಲ್ಲಿಯೇ ಉಲ್ಲಾಸ ಸಂತೋಷದ ಧ್ವನಿಯನ್ನೂ ಮದಲಿಂಗನ ಸ್ವರವನ್ನೂ ಮದಲಗಿತ್ತಿಯ ಸ್ವರವನ್ನೂ ಈ ಸ್ಥಳದೊಳಗಿಂದ ನಿಲ್ಲಿಸಿ ಬಿಡುತ್ತೇನೆ.
- 10ಇದಲ್ಲದೆ ನೀನು ಈ ಜನರಿಗೆ ಈ ಮಾತುಗಳನ್ನೆಲ್ಲಾ ತಿಳಿಸಿದ ಮೇಲೆ ಅವರು ನಿನಗೆ--ಕರ್ತನು ನಮ್ಮ ಮೇಲೆ ಈ ದೊಡ್ಡ ಕೇಡನ್ನು ಏಕೆ ವಿಧಿಸಿದ್ದಾನೆ? ನಮ್ಮ ಅಕ್ರಮ ಏನು? ನಾವು ನಮ್ಮ ದೇವರಾದ ಕರ್ತನಿಗೆ ವಿರೋಧವಾಗಿ ಮಾಡಿರುವ ಪಾಪವೇನು ಎಂದು ಹೇಳಿದರೆ ನೀನು ಅವರಿಗೆ ಹೇಳಬೇಕಾದದ್ದೇನಂದರೆ--ಕರ್ತನು ಹೀಗನ್ನುತ್ತಾನೆ.
Cross references
- Jeremiah 15:17 ಯೆರೆಮೀಯ 15:17ನಾನು ಹಾಸ್ಯಗಾರರ ಕೂಟದಲ್ಲಿ ಕೂತುಕೊಂಡು ಉತ್ಸಾಹಪಡಲಿಲ್ಲ, ನಿನ್ನ ಕೈ ನಿಮಿತ್ತ ಒಂಟಿಯಾಗಿ ಕೂತುಕೊಂಡಿದ್ದೇನೆ; ನನ್ನನ್ನು ಉಗ್ರತೆಯಿಂದ ತುಂಬಿಸಿದ್ದೀ.
- Ecclesiastes 7:2–4 ಪ್ರಸಂಗಿ 7:2–4ಔತಣದ ಮನೆಗೆ ಹೋಗುವದಕ್ಕಿಂತ ಗೋಳಾಟದ ಮನೆಗೆ ಹೋಗು ವದು ಲೇಸು; ಎಲ್ಲಾ ಮನುಷ್ಯರ ಅಂತ್ಯವು ಇದಾಗಿದೆ; ಇದರಿಂದ ಜೀವಿತನು ಅದನ್ನು ತಮ್ಮ ಹೃದಯದಲ್ಲಿ ಇಟ್ಟು ಸ್ಮರಿಸಿಕೊಳ್ಳುವನು. ನಗೆಗಿಂತ ದುಃಖವು ವಾಸಿ; ಹೃದಯದ ದುಃಖದ ಭಾವನೆಯಿಂದ ಹೃದಯವು ಗುಣವಾಗುತ್ತದೆ. ಗೋಳಾಟದ ಮನೆಯಲ್ಲಿ ಜ್ಞಾನಿಯ ಹೃದಯವು ಇರುವದು; ಮೂಢರ ಹೃದಯವು ಉಲ್ಲಾ ಸದ ಮನೆಯಲ್ಲಿರುವದು.
- Isaiah 22:12–14 ಯೆಶಾಯ 22:12–14ಆ ದಿವಸದಲ್ಲಿ ಸೈನ್ಯಗಳ ದೇವರಾದ ಕರ್ತನು --ಅಳಬೇಕೆಂದು, ದುಃಖಿಸಬೇಕೆಂದು, ತಲೆಬೋಳಿಸಿ ಕೊಳ್ಳಬೇಕೆಂದು, ಗೋಣೀತಟ್ಟನ್ನು ಸುತ್ತಿಕೊಳ್ಳಬೇ ಕೆಂದು ಆತನು ಕರೆದನು. ಆದರೆ ಇಗೋ, ಉತ್ಸಾ ಹವು ಸಂತೋಷವು, ದನಕೊಯ್ಯುವದು ಕುರಿಕಡಿಯು ವದು ಮಾಂಸವನ್ನು ತಿನ್ನುವದು, ದ್ರಾಕ್ಷಾರಸ ಕುಡಿ ಯುವದು, ನಾಳೆ ಸಾಯುತ್ತೇವೆಂದು ತಿಂದು ಕುಡಿಯು ವದೇ (ಇವೆ, ನಿಮ್ಮ ಕಾರ್ಯ). ಆದದರಿಂದ ಸೈನ್ಯ ಗಳ ಕರ್ತನು ನನ್ನ ಕಿವಿಗಳಲ್ಲಿ ಪ್ರಕಟ ಮಾಡಿದ್ದೇನಂದರೆ ನಿಶ್ಚಯವಾಗಿ ಈ ದುಷ್ಕೃತ್ಯಗಳು ನೀವು ಸಾಯುವ ತನಕ ಮನ್ನಿಸಲ್ಪಡುವದೇ ಇಲ್ಲ.
- Amos 6:4–6 ಆಮೋಸ 6:4–6ದಂತದ ಮಂಚಗಳ ಮೇಲೆ ಮಲಗಿಕೊಳ್ಳು ತ್ತಾರೆ; ತಮ್ಮ ಹಾಸಿಗೆಗಳ ಮೇಲೆ ಹಾಯಾಗಿ ಒರಗಿ ಕೊಳ್ಳುತ್ತಾರೆ; ಮಂದೆಯೊಳಗಿಂದ ಕುರಿಮರಿಗಳನ್ನು, ಹಟ್ಟಿಯ ಮಂದೆಯೊಳಗಿಂದ ಕರುಗಳನ್ನು ತಿನ್ನುತ್ತಾರೆ. ವೀಣೆಯ ಸ್ವರಕ್ಕೆ ಹಾಡುತ್ತಾರೆ; ದಾವೀದನ ಹಾಗೆ ತಮಗೆ ತಾವೇ ಗಾನ ವಾದ್ಯಗಳನ್ನು ಕಲ್ಪಿಸಿಕೊಳ್ಳು ತ್ತಾರೆ. ದ್ರಾಕ್ಷಾರಸದ ಪಾತ್ರೆಗಳಲ್ಲಿ ಕುಡಿಯುತ್ತಾರೆ. ಶ್ರೇಷ್ಠವಾದ ಎಣ್ಣೆಗಳಿಂದ ತಮ್ಮನ್ನು ಅಭಿಷೇಕಿಸಿ ಕೊಳ್ಳುತ್ತಾರೆ. ಆದರೆ ಯೋಸೇಫನ ನಷ್ಟಕ್ಕೆ ವ್ಯಸನಪಡು ವದಿಲ್ಲ.
- Psalm 26:4 ಕೀರ್ತನೆಗಳು 26:4ನಿಷ್ಪ್ರಯೋಜಕರೊಂದಿಗೆ ನಾನು ಕೂತುಕೊಳ್ಳ ಲಿಲ್ಲ; ವಂಚಕರ ಸಂಗಡ ನಾನು ಹೋಗುವದಿಲ್ಲ.
- Luke 17:27–29 ಲೂಕನು 17:27–29ನೋಹನು ನಾವೆಯಲ್ಲಿ ಸೇರಿದ ದಿನದ ವರೆಗೂ ಅವರು ತಿನ್ನುತ್ತಾ ಕುಡಿಯುತ್ತಾ ಮದುವೆಮಾಡಿಕೊಳ್ಳುತ್ತಾ ಮತ್ತು ಮದುವೆಮಾಡಿ ಕೊಡುತ್ತಾ ಇದ್ದರು. ಆಗ ಜಲಪ್ರಳಯವು ಬಂದು ಅವರೆಲ್ಲರನ್ನು ನಾಶಮಾಡಿತ್ತು. ಅದೇ ಪ್ರಕಾರ ಲೋಟನ ದಿವಸಗಳಲ್ಲಿಯೂ ಇತ್ತು. ಅವರು ತಿನ್ನು ತ್ತಿದ್ದರು, ಕುಡಿಯುತ್ತಿದ್ದರು; ಅವರು ಕೊಂಡುಕೊಳ್ಳು ತ್ತಿದ್ದರು, ಮಾರುತ್ತಿದ್ದರು; ಅವರು ನೆಡುತ್ತಿದ್ದರು ಮತ್ತು ಕಟ್ಟುತ್ತಿದ್ದರು. ಆದರೆ ಲೋಟನು ಸೊದೋಮಿನಿಂದ ಹೊರಗೆ ಹೋದ ದಿನವೇ ಆಕಾಶದಿಂದ ಬೆಂಕಿಯೂ ಗಂಧಕವೂ ಸುರಿದು ಎಲ್ಲರನ್ನು ನಾಶಪಡಿಸಿದವು.
- Ephesians 5:11 ಎಫೆಸದವರಿಗೆ 5:11ತ್ತಲೆಗೆ ಸಂಬಂಧ ವಾದ ಕೃತ್ಯಗಳಿಂದ ಯಾವ ಫಲವೂ ಬರಲಾರದು; ಅವುಗಳಲ್ಲಿ ಪಾಲುಗಾರರಾಗಿರದೆ ಅವುಗಳನ್ನು ಖಂಡಿಸಿರಿ.
- 1 Corinthians 5:11 1 ಕೊರಿಂಥದವರಿಗೆ 5:11ಆದರೆ ಸಹೋದರ ನೆನಿಸಿಕೊಂಡ ವನು ಜಾರನಾದರೂ ಲೋಭಿಯಾದರೂ ವಿಗ್ರಹಾ ರಾಧಕನಾದರೂ ಬೈಯುವವನಾದರೂ ಕುಡುಕ ನಾದರೂ ಸುಲುಕೊಳ್ಳುವವನಾದರೂ ಆಗಿದ್ದ ಪಕ್ಷದಲ್ಲಿ ಅಂಥವನ ಸಹವಾಸ ಮಾಡಬಾರದು, ಅಂಥವನ ಸಂಗಡ ಊಟ ಮಾಡಲೂಬಾರದು ಎಂದು ನಾನು ಈಗ ಬರೆದಿದ್ದೇನೆ.
- Matthew 24:38 ಮತ್ತಾಯನು 24:38ನೋಹನು ನಾವೆಯಲ್ಲಿ ಸೇರಿದ ದಿವಸದ ವರೆಗೆ ಪ್ರಳಯವು ಬರುವದಕ್ಕಿಂತ ಮುಂಚಿನ ಆ ದಿವಸಗಳಲ್ಲಿ ಜನರು ತಿನ್ನುತ್ತಾ ಕುಡಿಯುತ್ತಾ ಮದುವೆ ಮಾಡಿಕೊಳ್ಳುತ್ತಾ ಮದುವೆ ಮಾಡಿಕೊಡುತ್ತಾ ಇದ್ದರು.