Matthew · chapter 24 · verse 38
Matthew 24:38 in Kannada
ನೋಹನು ನಾವೆಯಲ್ಲಿ ಸೇರಿದ ದಿವಸದ ವರೆಗೆ ಪ್ರಳಯವು ಬರುವದಕ್ಕಿಂತ ಮುಂಚಿನ ಆ ದಿವಸಗಳಲ್ಲಿ ಜನರು ತಿನ್ನುತ್ತಾ ಕುಡಿಯುತ್ತಾ ಮದುವೆ ಮಾಡಿಕೊಳ್ಳುತ್ತಾ ಮದುವೆ ಮಾಡಿಕೊಡುತ್ತಾ ಇದ್ದರು.
Nohanu naaveyalli serida divasada varege pralayavu baruvadakkinta munchina aa divasagalalli janaru tinnuttaa kudiyuttaa maduve maadikolluttaa maduve maadikoduttaa iddaru.
Matthew 24:38 in English
- King James Version (KJV)
- For as in the days that were before the flood they were eating and drinking, marrying and giving in marriage, until the day that Noe entered into the ark,
- World English Bible (WEB)
- For as in those days which were before the flood they were eating and drinking, marrying and giving in marriage, until the day that Noah entered into the ship,
- American Standard Version (ASV)
- For as in those days which were before the flood they were eating and drinking, marrying and giving in marriage, until the day that Noah entered into the ark,
- Bible in Basic English (BBE)
- Because as in those days before the overflowing of the waters, they were feasting and taking wives and getting married, till the day when Noah went into the ark,
- Darby Translation (DBY)
- For as they were in the days which were before the flood, eating and drinking, marrying and giving in marriage, until the day on which Noe entered into the ark,
- Webster's Bible (WBS)
- For as in the days that were before the flood, they were eating and drinking, marrying and giving in marriage, until the day that Noah entered into the ark,
- Young's Literal Translation (YLT)
- for as they were, in the days before the flood, eating, and drinking, marrying, and giving in marriage, till the day Noah entered into the ark,
Read in context
- 36ಆದರೆ ಆ ದಿನವಾಗಲೀ ಗಳಿಗೆಯಾಗಲೀ ನನ್ನ ತಂದೆಗೆ ಮಾತ್ರವೇ ಹೊರತು ಮತ್ತಾರಿಗೂ ಪರಲೋಕದ ದೂತರಿಗೂ ತಿಳಿಯದು.
- 37ಆದರೆ ನೋಹನ ದಿವಸಗಳು ಇದ್ದಂತೆಯೇ ಮನುಷ್ಯ ಕುಮಾರನ ಬರೋಣವೂ ಇರುವದು.
- 38ನೋಹನು ನಾವೆಯಲ್ಲಿ ಸೇರಿದ ದಿವಸದ ವರೆಗೆ ಪ್ರಳಯವು ಬರುವದಕ್ಕಿಂತ ಮುಂಚಿನ ಆ ದಿವಸಗಳಲ್ಲಿ ಜನರು ತಿನ್ನುತ್ತಾ ಕುಡಿಯುತ್ತಾ ಮದುವೆ ಮಾಡಿಕೊಳ್ಳುತ್ತಾ ಮದುವೆ ಮಾಡಿಕೊಡುತ್ತಾ ಇದ್ದರು.
- 39ಪ್ರಳಯವು ಬಂದು ಅವರನ್ನು ಬಡುಕೊಂಡು ಹೊಗುವವರೆಗೂ ಅವರಿಗೆ ತಿಳಿದಿರಲಿಲ್ಲ; ಹಾಗೆಯೇ ಮನುಷ್ಯ ಕುಮಾರನ ಬರೋಣವೂ ಇರುವದು.
- 40ಆಗ ಇಬ್ಬರು ಹೊಲದಲ್ಲಿರುವರು; ಒಬ್ಬನು ತೆಗೆಯಲ್ಪಡು ವನು; ಮತ್ತೊಬ್ಬನು ಬಿಡಲ್ಪಡುವನು.
Cross references
- Luke 17:26–28 ಲೂಕನು 17:26–28ನೋಹನ ದಿವಸಗಳಲ್ಲಿ ಹೇಗೆ ಇತ್ತೋ ಅದೇ ರೀತಿಯಲ್ಲಿ ಮನುಷ್ಯಕುಮಾರನ ದಿವಸಗಳಲ್ಲಿಯೂ ಇರುವದು. ನೋಹನು ನಾವೆಯಲ್ಲಿ ಸೇರಿದ ದಿನದ ವರೆಗೂ ಅವರು ತಿನ್ನುತ್ತಾ ಕುಡಿಯುತ್ತಾ ಮದುವೆಮಾಡಿಕೊಳ್ಳುತ್ತಾ ಮತ್ತು ಮದುವೆಮಾಡಿ ಕೊಡುತ್ತಾ ಇದ್ದರು. ಆಗ ಜಲಪ್ರಳಯವು ಬಂದು ಅವರೆಲ್ಲರನ್ನು ನಾಶಮಾಡಿತ್ತು. ಅದೇ ಪ್ರಕಾರ ಲೋಟನ ದಿವಸಗಳಲ್ಲಿಯೂ ಇತ್ತು. ಅವರು ತಿನ್ನು ತ್ತಿದ್ದರು, ಕುಡಿಯುತ್ತಿದ್ದರು; ಅವರು ಕೊಂಡುಕೊಳ್ಳು ತ್ತಿದ್ದರು, ಮಾರುತ್ತಿದ್ದರು; ಅವರು ನೆಡುತ್ತಿದ್ದರು ಮತ್ತು ಕಟ್ಟುತ್ತಿದ್ದರು.
- Romans 13:13–14 ರೋಮಾಪುರದವರಿಗೆ 13:13–14ದುಂದೌತನ ಕುಡಿಕತನಗಳಲ್ಲಾಗಲಿ ಕಾಮವಿಲಾಸ ನಿರ್ಲಜ್ಜಾಕೃತ್ಯಗಳಲ್ಲಿಯಾಗಲಿ ಜಗಳ ಹೊಟ್ಟೇಕಿಚ್ಚು ಗಳಲ್ಲಿಯಾಗಲಿ ಇರದೆ ಹಗಲು ಹೊತ್ತಿಗೆ ತಕ್ಕ ಹಾಗೆ ಮಾನಸ್ಥರಾಗಿ ನಡೆದುಕೊಳ್ಳೋಣ.ನೀವು ದೇಹದ ಆಶೆಗಳನ್ನು ಪೂರೈಸುವದಕ್ಕಾಗಿ ಚಿಂತಿಸದೆ ಕರ್ತನಾದ ಯೇಸು ಕ್ರಿಸ್ತನನ್ನು ಧರಿಸಿಕೊಳ್ಳಿರಿ. ನೀವು ದೇಹದ ಆಶೆಗಳನ್ನು ಪೂರೈಸುವದಕ್ಕಾಗಿ ಚಿಂತಿಸದೆ ಕರ್ತನಾದ ಯೇಸು ಕ್ರಿಸ್ತನನ್ನು ಧರಿಸಿಕೊಳ್ಳಿರಿ.
- Luke 14:18–20 ಲೂಕನು 14:18–20ಆದರೆ ಅವರೆಲ್ಲರೂ ಒಂದೇ ಮನ ಸ್ಸಿನಿಂದ ನೆವ ಹೇಳಲಾರಂಭಿಸಿ ಮೊದಲನೆಯವನು ಅವನಿಗೆ--ನಾನು ಒಂದು ತುಂಡು ಭೂಮಿಯನ್ನು ಕೊಂಡುಕೊಂಡಿದ್ದೇನೆ, ಹೋಗಿ ಅದನ್ನು ನೋಡುವದು ಅವಶ್ಯವಾಗಿದೆ; ನನ್ನನ್ನು ಕ್ಷಮಿಸಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ ಅಂದನು. ಬೇರೊಬ್ಬನು-- ನಾನು ಐದು ಜೊತೆ ಎತ್ತುಗಳನ್ನು ಕೊಂಡುಕೊಂಡಿ ದ್ದೇನೆ, ಅವುಗಳನ್ನು ಪರೀಕ್ಷಿಸುವದಕ್ಕಾಗಿ ಹೋಗುತ್ತೇನೆ; ನನ್ನನ್ನು ಕ್ಷಮಿಸಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ ಅಂದನು. ಇನ್ನೊಬ್ಬನು--ನಾನು ಒಬ್ಬಳನ್ನು ಮದುವೆ ಮಾಡಿಕೊಂಡಿದ್ದೇನೆ, ಅದಕೋಸ್ಕರ ನಾನು ಬರ ಲಾರೆನು ಅಂದನು.
- Luke 12:45 ಲೂಕನು 12:45ಆದರೆ ಆ ಸೇವಕನು--ನನ್ನ ಒಡೆಯನು ಬರುವದಕ್ಕೆ ತಡಮಾಡುತ್ತಾನೆ ಎಂದು ತನ್ನ ಹೃದಯದಲ್ಲಿ ಅಂದು ಕೊಂಡು ಗಂಡಾಳು ಹೆಣ್ಣಾಳುಗಳನ್ನು ಹೊಡೆಯು ವದಕ್ಕೂ ತಿಂದು ಕುಡಿದು ಮತ್ತನಾಗುವದಕ್ಕೂ ಆರಂಭಿಸಿದರೆ
- Genesis 6:2 ಆದಿಕಾಂಡ 6:2ಆಗ ದೇವಕುಮಾರರು ಮನುಷ್ಯ ಕುಮಾರ್ತೆಯರ ಸೌಂದರ್ಯವನ್ನು ನೋಡಿ ತಾವು ಆರಿಸಿಕೊಂಡವರನ್ನೆಲ್ಲಾ ತಮಗೆ ಹೆಂಡತಿಯ ರನ್ನಾಗಿ ಮಾಡಿಕೊಂಡರು.
- Luke 12:19 ಲೂಕನು 12:19ನಾನು ನನ್ನ ಆತ್ಮಕ್ಕೆ--ಆತ್ಮವೇ, ಅನೇಕ ವರುಷ ಗಳಿಗಾಗಿ ನಿನಗೆ ಬಹಳ ಸರಕು ಇಡಲ್ಪಟ್ಟಿದೆ; ನೀನು ವಿಶ್ರಮಿಸಿಕೋ, ತಿನ್ನು, ಕುಡಿ ಆನಂದವಾಗಿರು ಎಂದು ಹೇಳುವೆನು ಎಂದು ಅಂದುಕೊಂಡನು.
- Amos 6:3–6 ಆಮೋಸ 6:3–6ನೀವು ಕೆಟ್ಟ ದಿನವನ್ನು ದೂರಮಾಡಿ ಕೊಂಡು ಬಲಾತ್ಕಾರದ ಪೀಠವನ್ನು ಹತ್ತಿರ ಮಾಡಿಕೊ ಳ್ಳುತ್ತೀರಿ. ದಂತದ ಮಂಚಗಳ ಮೇಲೆ ಮಲಗಿಕೊಳ್ಳು ತ್ತಾರೆ; ತಮ್ಮ ಹಾಸಿಗೆಗಳ ಮೇಲೆ ಹಾಯಾಗಿ ಒರಗಿ ಕೊಳ್ಳುತ್ತಾರೆ; ಮಂದೆಯೊಳಗಿಂದ ಕುರಿಮರಿಗಳನ್ನು, ಹಟ್ಟಿಯ ಮಂದೆಯೊಳಗಿಂದ ಕರುಗಳನ್ನು ತಿನ್ನುತ್ತಾರೆ. ವೀಣೆಯ ಸ್ವರಕ್ಕೆ ಹಾಡುತ್ತಾರೆ; ದಾವೀದನ ಹಾಗೆ ತಮಗೆ ತಾವೇ ಗಾನ ವಾದ್ಯಗಳನ್ನು ಕಲ್ಪಿಸಿಕೊಳ್ಳು ತ್ತಾರೆ. ದ್ರಾಕ್ಷಾರಸದ ಪಾತ್ರೆಗಳಲ್ಲಿ ಕುಡಿಯುತ್ತಾರೆ. ಶ್ರೇಷ್ಠವಾದ ಎಣ್ಣೆಗಳಿಂದ ತಮ್ಮನ್ನು ಅಭಿಷೇಕಿಸಿ ಕೊಳ್ಳುತ್ತಾರೆ. ಆದರೆ ಯೋಸೇಫನ ನಷ್ಟಕ್ಕೆ ವ್ಯಸನಪಡು ವದಿಲ್ಲ.
- Isaiah 22:12–14 ಯೆಶಾಯ 22:12–14ಆ ದಿವಸದಲ್ಲಿ ಸೈನ್ಯಗಳ ದೇವರಾದ ಕರ್ತನು --ಅಳಬೇಕೆಂದು, ದುಃಖಿಸಬೇಕೆಂದು, ತಲೆಬೋಳಿಸಿ ಕೊಳ್ಳಬೇಕೆಂದು, ಗೋಣೀತಟ್ಟನ್ನು ಸುತ್ತಿಕೊಳ್ಳಬೇ ಕೆಂದು ಆತನು ಕರೆದನು. ಆದರೆ ಇಗೋ, ಉತ್ಸಾ ಹವು ಸಂತೋಷವು, ದನಕೊಯ್ಯುವದು ಕುರಿಕಡಿಯು ವದು ಮಾಂಸವನ್ನು ತಿನ್ನುವದು, ದ್ರಾಕ್ಷಾರಸ ಕುಡಿ ಯುವದು, ನಾಳೆ ಸಾಯುತ್ತೇವೆಂದು ತಿಂದು ಕುಡಿಯು ವದೇ (ಇವೆ, ನಿಮ್ಮ ಕಾರ್ಯ). ಆದದರಿಂದ ಸೈನ್ಯ ಗಳ ಕರ್ತನು ನನ್ನ ಕಿವಿಗಳಲ್ಲಿ ಪ್ರಕಟ ಮಾಡಿದ್ದೇನಂದರೆ ನಿಶ್ಚಯವಾಗಿ ಈ ದುಷ್ಕೃತ್ಯಗಳು ನೀವು ಸಾಯುವ ತನಕ ಮನ್ನಿಸಲ್ಪಡುವದೇ ಇಲ್ಲ.
- Matthew 22:30 ಮತ್ತಾಯನು 22:30ಯಾಕಂದರೆ ಪುನರುತ್ಥಾನದಲ್ಲಿ ಅವರು ಮದುವೆಯಾಗುವದಿಲ್ಲ ಮತ್ತು ಮದುವೆ ಮಾಡಿಕೊಡುವದೂ ಇಲ್ಲ; ಆದರೆ ಅವರು ಪರಲೋಕ ದಲ್ಲಿರುವ ದೇವದೂತರಂತೆ ಇರುತ್ತಾರೆ.
- Luke 21:34 ಲೂಕನು 21:34ಆದರೆ ನಿಮ್ಮ ಮೇಲೆ ಆ ದಿವಸವು ಫಕ್ಕನೆ ಬಾರದಂತೆ ನೀವು ಅತಿ ಭೋಜನದಿಂದಲೂ ಅಮಲಿನಿಂದಲೂ ಈ ಜೀವನದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗದಂತೆ ನಿಮ್ಮ ವಿಷಯದಲಿ ಜಾಗರೂಕರಾಗಿರ್ರಿ.
- 1 Corinthians 7:29–31 1 ಕೊರಿಂಥದವರಿಗೆ 7:29–31ಆದರೆ ಸಹೋದರರೇ, ನಾನು ಹೇಳುವದೇ ನಂದರೆ--ಸಮಯವು ಸಂಕೋಚವಾದದ್ದರಿಂದ ಇನ್ನು ಮೇಲೆ ಹೆಂಡತಿಯುಳ್ಳವರು ಹೆಂಡತಿಯಿಲ್ಲದವ ರಂತೆಯೂ ಅಳುವವರು ಅಳದವರಂತೆಯೂ ಸಂತೋಷಪಡುವವರು ಸಂತೋಷಪಡದವ ರಂತೆಯೂ ಕೊಂಡುಕೊಳ್ಳುವವರು ಇಲ್ಲದವ ರಂತೆಯೂ ಲೋಕವನ್ನು ಅನುಭೋಗಿಸುವವರು ಅದನ್ನು ದುರುಪಯೋಗ ಮಾಡದವರಂತೆಯೂ ಇರಬೇಕು; ಯಾಕಂದರೆ ಈ ಲೋಕದ ಆಡಂಬರವು ಗತಿಸಿಹೋಗುತ್ತದೆ.
- Ezekiel 16:49–50 ಯೆಹೆಜ್ಕೇಲನು 16:49–50ಇಗೋ, ಸೊದೋಮ್ ಎಂಬ ನಿನ್ನ ತಂಗಿಯ ಅಕ್ರಮವನ್ನೂ ಗರ್ವವನ್ನೂ ನೋಡು; ರೊಟ್ಟಿಯ ತೃಪ್ತಿಯು ಅವಳಿಗೂ ಅವಳ ಕುಮಾರ್ತೆ ಯರಿಗೂ ನಿರ್ಭಯವಾದ ಸೌಖ್ಯವಾಗಿದೆ; ಆಕೆಯು ದೀನದರಿದ್ರರಿಗೆ ಬೆಂಬಲವಾಗಿರಲಿಲ್ಲ. ಇದಲ್ಲದೆ ಅವರು ಅಹಂಕಾರಿಗಳಾಗಿದ್ದು ನನ್ನ ಮುಂದೆ ಅಸಹ್ಯ ವಾದವುಗಳನ್ನು ನಡಿಸಿದರು. ಆದದರಿಂದ ನಾನು ಅದನ್ನು ನೋಡಿ ಅವರನ್ನು ನಿರ್ಮೂಲ ಮಾಡಿದೆನು.