Jeremiah · chapter 18 · verse 8
Jeremiah 18:8 in Kannada
ಆ ಜನಾಂಗಕ್ಕೆ ವಿರೋಧವಾಗಿ ನಾನು ಮಾತನಾಡಿದ ತನ್ನ ಕೆಟ್ಟತನವನ್ನು ಬಿಟ್ಟು ತಿರುಗಿದರೆ ನಾನು ಅದಕ್ಕೆ ಮಾಡಬೇಕೆಂದು ಯೋಚಿಸಿದ ಕೆಟ್ಟದ್ದನ್ನು ಕುರಿತು ಪಶ್ಚಾ ತ್ತಾಪ ಪಡುವೆನು.
Aa janaangakke virodhavaagi naanu maatanaadida tanna kettatanavannu bittu tirugidare naanu adakke maadabekendu yochisida kettaddannu kuritu pashchaa ttaapa paduvenu.
Jeremiah 18:8 in English
- King James Version (KJV)
- If that nation, against whom I have pronounced, turn from their evil, I will repent of the evil that I thought to do unto them.
- World English Bible (WEB)
- if that nation, concerning which I have spoken, turns from their evil, I will repent of the evil that I thought to do to them.
- American Standard Version (ASV)
- if that nation, concerning which I have spoken, turn from their evil, I will repent of the evil that I thought to do unto them.
- Bible in Basic English (BBE)
- If, in that very minute, that nation of which I was talking is turned away from its evil, my purpose of doing evil to them will be changed.
- Darby Translation (DBY)
- if that nation, concerning which I have spoken, turn from their evil, then I will repent of the evil that I thought to do unto them.
- Webster's Bible (WBS)
- If that nation against which I have pronounced, shall turn from their evil, I will repent of the evil that I thought to do to them.
- Young's Literal Translation (YLT)
- And that nation hath turned from its evil, Because I have spoken against it, Then I have repented of the evil that I thought to do to it.
Read in context
- 6ಓ ಇಸ್ರಾಯೇಲಿನ ಮನೆತನದ ವರೇ, ನಾನು ಈ ಕುಂಬಾರನ ಹಾಗೆ ನಿಮಗೆ ಮಾಡ ಕೂಡದೋ ಎಂದು ಕರ್ತನು ಅನ್ನುತ್ತಾನೆ. ಇಗೋ, ಕುಂಬಾರನ ಕೈಯಲ್ಲಿ ಮಣ್ಣು ಹೇಗೋ ಹಾಗೆಯೇ ಓ ಇಸ್ರಾಯೇಲಿನ ಮನೆತನದವರೇ, ನನ್ನ ಕೈಯಲ್ಲಿ ನೀವು ಇದ್ದೀರಿ.
- 7ಯಾವ ಕ್ಷಣದಲ್ಲಿ ನಾನು ಒಂದು ಜನಾಂಗದ ವಿಷಯವಾಗಿ ಮತ್ತು ಒಂದು ರಾಜ್ಯದ ವಿಷಯವಾಗಿ ಅದನ್ನು ಕೀಳುವದಕ್ಕೂ ಕೆಡವುವ ದಕ್ಕೂ ನಾಶಮಾಡುವದಕ್ಕೂ ಮಾತಾಡುತ್ತೇನೋ
- 8ಆ ಜನಾಂಗಕ್ಕೆ ವಿರೋಧವಾಗಿ ನಾನು ಮಾತನಾಡಿದ ತನ್ನ ಕೆಟ್ಟತನವನ್ನು ಬಿಟ್ಟು ತಿರುಗಿದರೆ ನಾನು ಅದಕ್ಕೆ ಮಾಡಬೇಕೆಂದು ಯೋಚಿಸಿದ ಕೆಟ್ಟದ್ದನ್ನು ಕುರಿತು ಪಶ್ಚಾ ತ್ತಾಪ ಪಡುವೆನು.
- 9ಇದಲ್ಲದೆ ಯಾವ ಕ್ಷಣದಲ್ಲಿ ನಾನು ಒಂದು ಜನಾಂಗದ ವಿಷಯವಾಗಿಯೂ ಒಂದು ರಾಜ್ಯದ ವಿಷಯವಾಗಿಯೂ ಅದನ್ನು ಕಟ್ಟುವದಕ್ಕೂ ನೆಡುವದಕ್ಕೂ ಮಾತನಾಡುತ್ತೇನೋ
- 10ಅದು ನನ್ನ ಸ್ವರಕ್ಕೆ ವಿಧೇಯವಾಗದೆ ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದರೆ ನಾನು ಅದಕ್ಕೆ ಮೇಲನ್ನು ಮಾಡುತ್ತೇನೆಂದು ಹೇಳಿದ ಒಳ್ಳೇದನ್ನು ಕುರಿತು ಪಶ್ಚಾತ್ತಾಪಪಡುವೆನು.
Cross references
- Ezekiel 18:21 ಯೆಹೆಜ್ಕೇಲನು 18:21ಆದರೆ ದುಷ್ಟನು ತಾನು ಮಾಡಿದ ಪಾಪಗಳನ್ನೆಲ್ಲಾ ಬಿಟ್ಟು ತಿರುಗಿಕೊಂಡು ನನ್ನ ನಿಯಮಗಳನ್ನೆಲ್ಲಾ ಕೈಕೊಂಡು ನ್ಯಾಯವನ್ನೂ ನೀತಿಯನ್ನೂ ನಡೆಸಿದರೆ ಅವನು ಸಾಯದೆ ನಿಶ್ಚಯವಾಗಿ ಬದುಕುವನು.
- Jeremiah 26:13 ಯೆರೆಮೀಯ 26:13ಹೀಗಿ ರುವದರಿಂದ ನಿಮ್ಮ ಮಾರ್ಗಗಳನ್ನೂ ಕೃತ್ಯಗಳನೂ ತಿದ್ದಿಕೊಳ್ಳಿರಿ; ನಿಮ್ಮ ದೇವರಾದ ಕರ್ತನ ಸ್ವರಕ್ಕೆ ವಿಧೇಯರಾಗಿರಿ; ಆಗ ಕರ್ತನು ನಿಮಗೆ ವಿರೋಧವಾಗಿ ಮಾತನಾಡಿದ ಕೇಡಿನ ವಿಷಯಕ್ಕಾಗಿ ಪಶ್ಚಾತ್ತಾಪಪಡು ವನು.
- Jonah 3:9–10 ಯೋನ 3:9–10ದೇವರು ತಿರುಗಿ ಕೊಂಡು ಪಶ್ಚಾತ್ತಾಪಪಟ್ಟು ನಾವು ನಾಶವಾಗದ ಹಾಗೆ ತನ್ನ ಕೋಪದ ಉರಿಯನ್ನು ಬಿಟ್ಟಾನೇನೋ ಯಾರು ಬಲ್ಲರು ಅಂದನು.ಆಗ ದೇವರು ಅವರ ಕ್ರಿಯೆಗಳನ್ನೂ ಅವರು ತಮ್ಮ ಕೆಟ್ಟ ಮಾರ್ಗವನ್ನೂ ಬಿಟ್ಟು ತಿರುಗಿದರೆಂದು ನೋಡಿದನು; ದೇವರು ಅವರಿಗೆ ಮಾಡುತ್ತೇನೆಂದು ಹೇಳಿದ ಕೇಡಿನ ವಿಷಯವಾಗಿ ಪಶ್ಚಾತ್ತಾಪಪಟ್ಟು ಅದನ್ನು ಮಾಡಲಿಲ್ಲ. ಆಗ ದೇವರು ಅವರ ಕ್ರಿಯೆಗಳನ್ನೂ ಅವರು ತಮ್ಮ ಕೆಟ್ಟ ಮಾರ್ಗವನ್ನೂ ಬಿಟ್ಟು ತಿರುಗಿದರೆಂದು ನೋಡಿದನು; ದೇವರು ಅವರಿಗೆ ಮಾಡುತ್ತೇನೆಂದು ಹೇಳಿದ ಕೇಡಿನ ವಿಷಯವಾಗಿ ಪಶ್ಚಾತ್ತಾಪಪಟ್ಟು ಅದನ್ನು ಮಾಡಲಿಲ್ಲ.
- Hosea 11:8 ಹೋಶೇಯ 11:8ಎಫ್ರಾಯಾಮೇ, ನಾನು ನಿನ್ನನ್ನು ಬಿಟ್ಟು ಬಿಡುವದು ಹೇಗೆ? ಇಸ್ರಾಯೇಲೇ, ನಿನ್ನನ್ನು ನಾನು ಬಿಡಿಸುವದು ಹೇಗೆ? ನಾನು ನಿನ್ನನ್ನು ಅದ್ಮದ ಹಾಗೆ ಮಾಡುವದು ಹೇಗೆ? ನಾನು ನಿನ್ನನ್ನು ಜೆಬೋಯಾಮಿನ ಹಾಗೆ ಸ್ಥಾಪಿಸುವದು ಹೇಗೆ? ನನ್ನ ಹೃದಯವು ನನ್ನಲ್ಲಿ ತಿರುಗಿಕೊಂಡಿದೆ. ನನ್ನ ಪಶ್ಚಾತ್ತಾಪಗಳು ಒಟ್ಟಿಗೆ ಹತ್ತಿ ಕೊಂಡಿವೆ.
- Jeremiah 26:3 ಯೆರೆಮೀಯ 26:3ಒಂದು ವೇಳೆ ಅವರು ಕೇಳಿ ನಾನು ಅವರ ಕೃತ್ಯಗಳ ಕೆಟ್ಟತನದ ನಿಮಿತ್ತ ಅವರಿಗೆ ಮಾಡುವದಕ್ಕೆ ಆಲೋಚಿಸಿದ ಕೇಡಿನ ವಿಷಯ ಪಶ್ಚಾತ್ತಾಪಪಡುವ ಹಾಗೆ ತಮ್ಮ ತಮ್ಮ ಕೆಟ್ಟ ಮಾರ್ಗ ವನ್ನು ಬಿಟ್ಟು ತಿರುಗಿಕೊಂಡಾರು.
- Amos 7:3–6 ಆಮೋಸ 7:3–6ಕರ್ತನು ಇದನ್ನು ಕುರಿತು ಪಶ್ಚಾತ್ತಾಪಪಟ್ಟು ಇದು ಆಗ ಬಾರ ದೆಂದು ಹೇಳಿದನು. ಕರ್ತನಾದ ದೇವರು ನನಗೆ ಹೀಗೆ ತೋರಿಸಿದನು; ಇಗೋ, ಕರ್ತನಾದ ದೇವರು ಬೆಂಕಿಯಿಂದ ತರ್ಕ ಮಾಡುವದಕ್ಕೆ ಕರೆದನು. ಅದು ದೊಡ್ಡ ಅಗಾಧವನ್ನೂ ನುಂಗಿತು ಮತ್ತು ವಿಭಾಗವನ್ನು ತಿಂದುಬಿಟ್ಟಿತು. ಆಗ ನಾನು--ಓ ದೇವರಾದ ಕರ್ತನೇ, ನಿಲ್ಲಿಸಿಬಿಡು ಎಂದು ಬೇಡಿಕೊಳ್ಳುತ್ತೇನೆ; ಯಾಕೋಬು ಯಾರಿಂದ ಎಬ್ಬಿಸ ಲ್ಪಟ್ಟಿತು? ಅದು ಚಿಕ್ಕ ಜನಾಂಗ ಎಂದು ಹೇಳಿದನು. ಕರ್ತನು ಇದಕ್ಕಾಗಿ ಪಶ್ಚಾತ್ತಾಪಪಟ್ಟು ಇವು ಸಹ ಆಗಬಾರದೆಂದು ಕರ್ತನಾದ ದೇವರು ಹೇಳುತ್ತಾನೆ.
- Judges 2:18 ನ್ಯಾಯಸ್ಥಾಪಕರು 2:18ಕರ್ತನು ಅವರಿಗೆ ನ್ಯಾಯಾಧಿಪತಿಗಳನ್ನು ಎಬ್ಬಿಸಿ ಆತನು ನ್ಯಾಯಾಧಿಪತಿಯ ಸಂಗಡ ಇದ್ದು ಆ ನ್ಯಾಯಾಧಿಪತಿಯ ದಿನಗಳೆಲ್ಲಾ ಅವರನ್ನು ಅವರ ಶತ್ರುಗಳ ಕೈಯಿಂದ ರಕ್ಷಿಸುತ್ತಿದ್ದನು. ಯಾಕಂದರೆ ಅವರು ತಮ್ಮನ್ನು ಬಾಧಿಸಿ ಶ್ರಮೆಪಡಿಸುವವರ ನಿಮಿತ್ತ ಗೋಳಾಡುವದರಿಂದ ಕರ್ತನು ಪಶ್ಚಾತ್ತಾಪಪಟ್ಟನು.
- Joel 2:13–14 ಯೋವೇಲ 2:13–14ನಿಮ್ಮ ಬಟ್ಟೆಗಳನ್ನಲ್ಲ, ನಿಮ್ಮ ಹೃದಯವನ್ನು ಹರಕೊಂಡು ನಿಮ್ಮ ದೇವರಾದ ಕರ್ತನ ಕಡೆಗೆ ತಿರುಗಿಕೊಳ್ಳಿರಿ; ಆತನು ದಯೆ ಕರುಣೆ ದೀರ್ಘಶಾಂತಿ ಮಹಾ ಕೃಪೆಯೂ ಉಳ್ಳವನಾಗಿ ಕೇಡಿಗೆ ಪಶ್ಚಾತ್ತಾಪಪಡುತ್ತಾನೆ. ಆತನು ತಿರುಗಿಕೊಂಡು ಪಶ್ಚಾತ್ತಾಪಪಟ್ಟು ತನ್ನ ಹಿಂದೆ ಆಶೀರ್ವಾದವನ್ನು ಅಂದರೆ ನಿಮ್ಮ ದೇವರಾದ ಕರ್ತನಿಗಾಗಿ ಆಹಾರ ದರ್ಪಣೆಯನ್ನೂ ಪಾನದರ್ಪಣೆಯನ್ನೂ ಉಳಿಸುವ ನೇನೋ ಯಾರು ಬಲ್ಲರು?
- Psalm 106:45 ಕೀರ್ತನೆಗಳು 106:45ಅವರಿಗಾಗಿ ತನ್ನ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಂಡು ತನ್ನ ಅತಿಶಯವಾದ ಕರು ಣೆಯ ಪ್ರಕಾರ ಪಶ್ಚಾತ್ತಾಪಪಟ್ಟನು.
- Jeremiah 7:3–7 ಯೆರೆಮೀಯ 7:3–7ಇಸ್ರಾಯೇಲಿನ ದೇವರಾಗಿರುವ ಸೈನ್ಯಗಳ ಕರ್ತನು ಹೀಗೆ ಹೇಳು ತ್ತಾನೆ--ನಿಮ್ಮ ಮಾರ್ಗಗಳನ್ನೂ ನಿಮ್ಮ ಕ್ರಿಯೆಗಳನ್ನೂ ನೆಟ್ಟಗೆ ಮಾಡಿರಿ; ಆಗ ನಿಮ್ಮನ್ನು ಈ ಸ್ಥಳದಲ್ಲಿ ವಾಸಿಸುವಂತೆ ಮಾಡುವೆನು. ಇವುಗಳೇ ಕರ್ತನ ಆಲಯ, ಕರ್ತನ ಆಲಯ, ಕರ್ತನ ಆಲಯ ಎಂದು ಹೇಳುವ ಸುಳ್ಳು ಮಾತುಗಳಲ್ಲಿ ನಂಬಿಕೆ ಇಡಬೇಡಿರಿ. ನೀವು ನಿಮ್ಮ ಮಾರ್ಗಗಳನ್ನೂ ನಿಮ್ಮ ಕ್ರಿಯೆಗಳನ್ನೂ ಪೂರ್ಣವಾಗಿ ನೆಟ್ಟಗೆ ಮಾಡಿ ಮನುಷ್ಯನಿಗೂ ಅವನ ನೆರೆಯವನಿಗೂ ಪೂರ್ಣವಾಗಿ ನ್ಯಾಯನಡಿಸಿ ಪರದೇಶಿಯನ್ನೂ ದಿಕ್ಕಿಲ್ಲದವನನ್ನೂ ವಿಧವೆಯನ್ನೂ ಸಂಕಟಪಡಿಸದೆ ಈ ಸ್ಥಳದಲ್ಲಿ ಅಪರಾಧ ವಿಲ್ಲದ ರಕ್ತವನ್ನು ಚೆಲ್ಲದಿದ್ದರೆ ಇಲ್ಲವೆ ನಿಮ್ಮ ಕೇಡಿಗಾಗಿ ಬೇರೆ ದೇವರುಗಳನ್ನು ಹಿಂಬಾಲಿಸದಿದ್ದರೆ ನಾನು ನಿಮ್ಮನ್ನು ಈ ಸ್ಥಳದಲ್ಲಿ ಅಂದರೆ ನಾನು ನಿಮ್ಮ ಪಿತೃಗಳಿಗೆ ಕೊಟ್ಟ ದೇಶದಲ್ಲಿ ಎಂದೆಂದಿಗೂ ವಾಸಿಸುವಂತೆ ಮಾಡುವೆನು.
- Exodus 32:12 ವಿಮೋಚನಕಾಂಡ 32:12ಕೇಡಿನ ನಿಮಿತ್ತವೂ ಬೆಟ್ಟಗಳಲ್ಲಿ ಅವರನ್ನು ಕೊಲ್ಲುವದಕ್ಕೂ ಭೂಮಿಯ ಮೇಲಿನಿಂದ ಅವರನ್ನು ದಹಿಸಿಬಿಡುವದಕ್ಕೂ ಆತನು ಅವರನ್ನು ಹೊರಗೆ ಬರಮಾಡಿದ್ದಾನೆ ಎಂದು ಐಗುಪ್ತ್ಯರು ಯಾಕೆ ಹೇಳಬೇಕು? ನಿನ್ನ ಕೋಪದುರಿ ಯನ್ನು ಬಿಟ್ಟು ತಿರುಗಿಕೋ, ನಿನ್ನ ಜನರಿಗೆ ವಿರೋಧ ವಾದ ಈ ಕೇಡಿನ ವಿಷಯದಲ್ಲಿ ನಿನ್ನ ಮನಸ್ಸನ್ನು ಬದಲಾಯಿಸು.
- Psalm 90:13 ಕೀರ್ತನೆಗಳು 90:13ಕರ್ತನೇ, ಎಷ್ಟರವರೆಗೆ ಹಿಂತಿರುಗದಿರುವಿ? ನಿನ್ನ ಸೇವಕರ ವಿಷಯದಲ್ಲಿ ಅಂತಃಕರಣವಿರಲಿ.