Jeremiah · chapter 18 · verse 9
Jeremiah 18:9 in Kannada
ಇದಲ್ಲದೆ ಯಾವ ಕ್ಷಣದಲ್ಲಿ ನಾನು ಒಂದು ಜನಾಂಗದ ವಿಷಯವಾಗಿಯೂ ಒಂದು ರಾಜ್ಯದ ವಿಷಯವಾಗಿಯೂ ಅದನ್ನು ಕಟ್ಟುವದಕ್ಕೂ ನೆಡುವದಕ್ಕೂ ಮಾತನಾಡುತ್ತೇನೋ
Idallade yaava kshanadalli naanu ondu janaangada vishayavaagiyoo ondu raajyada vishayavaagiyoo adannu kattuvadakkoo neduvadakkoo maatanaadutteno
Jeremiah 18:9 in English
- King James Version (KJV)
- And [at what] instant I shall speak concerning a nation, and concerning a kingdom, to build and to plant [it;]
- World English Bible (WEB)
- At the instant I speak concerning a nation, and concerning a kingdom, to build and to plant it,
- American Standard Version (ASV)
- And at what instant I shall speak concerning a nation, and concerning a kingdom, to build and to plant it;
- Bible in Basic English (BBE)
- And whenever I say anything about building up a nation or a kingdom, and planting it;
- Darby Translation (DBY)
- And at the moment that I speak concerning a nation and concerning a kingdom, to build and to plant,
- Webster's Bible (WBS)
- And [at what] instant I shall speak concerning a nation, and concerning a kingdom, to build and to plant [it] ;
- Young's Literal Translation (YLT)
- And the moment I speak concerning a nation, And concerning a kingdom, to build, and to plant,
Read in context
- 7ಯಾವ ಕ್ಷಣದಲ್ಲಿ ನಾನು ಒಂದು ಜನಾಂಗದ ವಿಷಯವಾಗಿ ಮತ್ತು ಒಂದು ರಾಜ್ಯದ ವಿಷಯವಾಗಿ ಅದನ್ನು ಕೀಳುವದಕ್ಕೂ ಕೆಡವುವ ದಕ್ಕೂ ನಾಶಮಾಡುವದಕ್ಕೂ ಮಾತಾಡುತ್ತೇನೋ
- 8ಆ ಜನಾಂಗಕ್ಕೆ ವಿರೋಧವಾಗಿ ನಾನು ಮಾತನಾಡಿದ ತನ್ನ ಕೆಟ್ಟತನವನ್ನು ಬಿಟ್ಟು ತಿರುಗಿದರೆ ನಾನು ಅದಕ್ಕೆ ಮಾಡಬೇಕೆಂದು ಯೋಚಿಸಿದ ಕೆಟ್ಟದ್ದನ್ನು ಕುರಿತು ಪಶ್ಚಾ ತ್ತಾಪ ಪಡುವೆನು.
- 9ಇದಲ್ಲದೆ ಯಾವ ಕ್ಷಣದಲ್ಲಿ ನಾನು ಒಂದು ಜನಾಂಗದ ವಿಷಯವಾಗಿಯೂ ಒಂದು ರಾಜ್ಯದ ವಿಷಯವಾಗಿಯೂ ಅದನ್ನು ಕಟ್ಟುವದಕ್ಕೂ ನೆಡುವದಕ್ಕೂ ಮಾತನಾಡುತ್ತೇನೋ
- 10ಅದು ನನ್ನ ಸ್ವರಕ್ಕೆ ವಿಧೇಯವಾಗದೆ ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದರೆ ನಾನು ಅದಕ್ಕೆ ಮೇಲನ್ನು ಮಾಡುತ್ತೇನೆಂದು ಹೇಳಿದ ಒಳ್ಳೇದನ್ನು ಕುರಿತು ಪಶ್ಚಾತ್ತಾಪಪಡುವೆನು.
- 11ಹೀಗಿರುವದರಿಂದ ಈಗ ಯೆಹೂದದ ಮನುಷ್ಯ ರಿಗೂ ಯೆರೂಸಲೇಮಿನ ನಿವಾಸಿಗಳಿಗೂ ನೀನು ಹೇಳಬೇಕಾದದ್ದೇನಂದರೆ, ಕರ್ತನು ಹೀಗೆ ಹೇಳುತ್ತಾನೆ --ಇಗೋ, ನಾನು ನಿಮಗೆ ವಿರೋಧವಾಗಿ ಕೆಟ್ಟದ್ದನ್ನು ಕಲ್ಪಿಸುತ್ತಾ ಇದ್ದೇನೆ; ನಿಮಗೆ ವಿರೋಧವಾಗಿ ಉಪಾಯವನ್ನು ಆಲೋಚಿಸುತ್ತಾ ಇದ್ದೇನೆ; ನಿಮ್ಮ ನಿಮ್ಮ ಕೆಟ್ಟ ಮಾರ್ಗಗಳನ್ನು ಬಿಟ್ಟು ಹಿಂತಿರುಗಿರಿ, ನಿಮ್ಮ ಮಾರ್ಗಗಳನ್ನೂ ಕ್ರಿಯೆಗಳನ್ನೂ ಒಳ್ಳೇದಾಗ ಮಾಡಿರಿ ಎಂಬದು.
Cross references
- Jeremiah 31:28 ಯೆರೆಮೀಯ 31:28ನಾನು ಕೀಳುವದಕ್ಕೂ ಮುರಿಯುವದಕ್ಕೂ ಕೆಡವುದಕ್ಕೂ ನಾಶಮಾಡು ವದಕ್ಕೂ ಕುಗ್ಗಿಸುವದಕ್ಕೂ ಅವರ ವಿಷಯ ಹೇಗೆ ಎಚ್ಚರವಾಗಿದ್ದೆನೋ ಹಾಗೆಯೇ ಕಟ್ಟುವದಕ್ಕೂ ನೆಡು ವದಕ್ಕೂ ಅವರನ್ನು ಕಾಯುವೆ ನೆಂದು ಕರ್ತನು ಅನ್ನುತ್ತಾನೆ.
- Amos 9:11–15 ಆಮೋಸ 9:11–15ಆ ದಿನದಲ್ಲಿ ಬಿದ್ದ ದಾವೀದನ ಗುಡಾರವನ್ನು ನಾನು ನಿಲ್ಲಿಸಿ ಅದರ ಹರಕುಗಳನ್ನು ಮುಚ್ಚುವೆನು. ಅವನ ಹಾಳಾದದ್ದನ್ನು ಎಬ್ಬಿಸಿ ಹಿಂದಿನ ದಿವಸಗಳಲ್ಲಿ ಮಾಡಿದ ಹಾಗೆ ಕಟ್ಟುವೆನು. ಆಗ ಅವರು ಎದೋ ಮಿನ ಮಿಕ್ಕಭಾಗವನ್ನೂ ನನ್ನ ಹೆಸರಿನಿಂದ ಕರೆಯಲ್ಪ ಡುವ ಎಲ್ಲಾ ಅನ್ಯಜನಾಂಗಗಳನ್ನೂ ಸ್ವಾಧೀನಮಾಡಿ ಕೊಳ್ಳುವರೆಂದು ಇದನ್ನು ಮಾಡುವವನಾದ ಕರ್ತನು ಹೇಳುತ್ತಾನೆ. ಕರ್ತನು ಹೇಳುವದೇನಂದರೆ--ಇಗೋ, ದಿನಗಳು ಬರುವವು, ಆಗ ಉಳುವವನು ಕೊಯ್ಯುವವನನ್ನೂ ದ್ರಾಕ್ಷೇ ಮಾರುವ ವನು ಬೀಜ ಬಿತ್ತುವವನನ್ನೂ ಹಿಂದಟ್ಟುವರು. ಬೆಟ್ಟಗಳು ಹೊಸ ಸಿಹಿ ದ್ರಾಕ್ಷಾರಸವನ್ನು ಸುರಿಯುವವು. ಗುಡ್ಡಗಳೆಲ್ಲಾ ಕರಗುವವು. ನನ್ನ ಜನರಾದ ಇಸ್ರಾಯೇಲ್ಯರನ್ನು ಸೆರೆಯಿಂದ ತಿರಿಗಿ ಬರಮಾಡುವೆನು; ಅವರು ಹಾಳಾದ ಪಟ್ಟಣಗಳನ್ನು ಕಟ್ಟಿ ವಾಸಮಾಡುವರು; ದ್ರಾಕ್ಷೇತೋಟ ಗಳನ್ನು ನೆಟ್ಟು ಅವುಗಳ ದ್ರಾಕ್ಷಾರಸವನ್ನು ಕುಡಿಯು ವರು; ತೋಟಗಳನ್ನು ಮಾಡಿ ಅವುಗಳ ಫಲವನ್ನು ತಿನ್ನುವರು.ನಾನು ಅವರನ್ನು ಅವರ ದೇಶದಲ್ಲಿ ನೆಡುವೆನು; ನಾನು ಅವರಿಗೆ ಕೊಟ್ಟಿರುವ ದೇಶದಿಂದ ಅವರು ಇನ್ನು ಮೇಲೆ ಕಿತ್ತು ಹಾಕಲ್ಪಡರೆಂದು ನಿನ್ನ ದೇವರಾದ ಕರ್ತನು ಹೇಳುತ್ತಾನೆ. ನಾನು ಅವರನ್ನು ಅವರ ದೇಶದಲ್ಲಿ ನೆಡುವೆನು; ನಾನು ಅವರಿಗೆ ಕೊಟ್ಟಿರುವ ದೇಶದಿಂದ ಅವರು ಇನ್ನು ಮೇಲೆ ಕಿತ್ತು ಹಾಕಲ್ಪಡರೆಂದು ನಿನ್ನ ದೇವರಾದ ಕರ್ತನು ಹೇಳುತ್ತಾನೆ.
- Jeremiah 11:17 ಯೆರೆಮೀಯ 11:17ಇಸ್ರಾಯೇಲಿನ ಮನೆಯವರೂ ಯೆಹೂದದ ಮನೆಯವರೂ ನನಗೆ ಕೋಪವನ್ನೆಬ್ಬಿಸುವ ಹಾಗೆ ಬಾಳನಿಗೆ ಧೂಪವನ್ನರ್ಪಿಸಿ ತಮಗೆ ವಿರೋಧವಾಗಿ ಮಾಡಿಕೊಂಡ ಕೇಡಿನ ನಿಮಿತ್ತ ನಿನ್ನನ್ನು ನೆಟ್ಟ ಸೈನ್ಯ ಗಳ ಕರ್ತನು ನಿನ್ನ ಮೇಲೆ ಕೆಡುಕಾಗಲಿ ಎಂದು ಪ್ರಕಟಿಸಿದ್ದಾನೆ.
- Jeremiah 1:10 ಯೆರೆಮೀಯ 1:10ನೋಡು, ನಿನ್ನನ್ನು ಕೀಳುವದಕ್ಕೂ ಕೆಳಗೆ ಹಾಕಿ ಬಿಡುವದಕ್ಕೂ ನಾಶಮಾಡುವದಕ್ಕೂ ಕೆಡವಿಹಾಕುವದಕ್ಕೂ ಕಟ್ಟುವದಕ್ಕೂ ನೆಡುವದಕ್ಕೂ ಜನಾಂಗಗಳ ಮೇಲೆಯೂ ರಾಜ್ಯಗಳ ಮೇಲೆಯೂ ಈ ದಿನ ನಿನ್ನನ್ನು ನೇಮಿಸಿದ್ದೇನೆ ಅಂದನು.
- Jeremiah 31:4 ಯೆರೆಮೀಯ 31:4ಇಸ್ರಾ ಯೇಲಿನ ಕನ್ಯಾಸ್ತ್ರೀಯೇ, ನೀನು ಕಟ್ಟಲ್ಪಟ್ಟಿರುವ ಹಾಗೆ ತಿರುಗಿ ನಿನ್ನನ್ನು ಕಟ್ಟುವೆನು; ನಿನ್ನ ದಮ್ಮಡಿಗಳಿಂದ ತಿರುಗಿ ನಿನ್ನನ್ನು ಅಲಂಕರಿಸಿಕೊಂಡು ಸಂತೋಷಪಡು ವವರ ನಾಟ್ಯದಲ್ಲಿ ಹೊರಡುವಿ.
- Jeremiah 31:38 ಯೆರೆಮೀಯ 31:38ಇಗೋ, ಹನನೇಲನ ಬುರುಜು ಮೊದಲು ಗೊಂಡು ಮೂಲೆಯ ಬಾಗಿಲಿನ ವರೆಗೂ ಕರ್ತನಿಗೆ ಪಟ್ಟಣವು ಕಟ್ಟಲ್ಪಡುವ ದಿನಗಳು ಬರುವವೆಂದು ಕರ್ತನು ಅನ್ನುತ್ತಾನೆ.
- Jeremiah 32:41 ಯೆರೆಮೀಯ 32:41ಹೌದು, ಅವರಿಗೆ ಒಳ್ಳೇದನ್ನು ಮಾಡುವದಕ್ಕೆ ಅವ ರೊಂದಿಗೆ ಆನಂದಪಡುವೆನು; ನಿಜವಾಗಿ ನನ್ನ ಪೂರ್ಣ ಹೃದಯದಿಂದಲೂ ನನ್ನ ಪೂರ್ಣ ಪ್ರಾಣದಿಂದಲೂ ಅವರನ್ನು ಈ ದೇಶದಲ್ಲಿ ನೆಡುತ್ತೇನೆ.
- Jeremiah 30:18 ಯೆರೆಮೀಯ 30:18ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಯಾಕೋಬನ ಗುಡಾರಗಳ ಸೆರೆಯನ್ನು ತಿರುಗಿ ತರುತ್ತೇನೆ; ಅವನ ನಿವಾಸಗಳನ್ನು ಕರುಣಿಸುತ್ತೇನೆ; ಪಟ್ಟಣವು ಅದರ ದಿಣ್ಣೆಯ ಮೇಲೆ ಕಟ್ಟಲ್ಪಡುವದು; ಅರಮನೆಯು ತಕ್ಕಸ್ಥಳದಲ್ಲಿ ನೆಲೆಯಾಗಿರುವದು.
- Ecclesiastes 3:2 ಪ್ರಸಂಗಿ 3:2ಹುಟ್ಟುವದಕ್ಕೆ ಒಂದು ಸಮಯ, ಸಾಯುವದಕ್ಕೆ ಒಂದು ಸಮಯ; ನೆಡುವದಕ್ಕೆ ಒಂದು ಸಮಯ, ನೆಟ್ಟದ್ದನ್ನು ಕಿತ್ತು ಹಾಕು ವದಕ್ಕೆ ಒಂದು ಸಮಯ;