Jeremiah · chapter 2 · verse 33
Jeremiah 2:33 in Kannada
ಪ್ರೀತಿಯನ್ನು ಹುಡುಕುವ ಹಾಗೆ ನಿನ್ನ ಮಾರ್ಗವನ್ನು ಯಾಕೆ ಚಂದ ಮಾಡಿಕೊಳ್ಳುತ್ತೀ? ಕೆಟ್ಟ ಹೆಂಗಸರಿಗೂ ನಿನ್ನ ಮಾರ್ಗವನ್ನು ಕಲಿಸಿದ್ದೀ.
Preetiyannu hudukuva haage ninna maargavannu yaake chanda maadikolluttee? Ketta hengasarigoo ninna maargavannu kalisiddee.
Jeremiah 2:33 in English
- King James Version (KJV)
- Why trimmest thou thy way to seek love? therefore hast thou also taught the wicked ones thy ways.
- World English Bible (WEB)
- How well you prepare your way to seek love! Therefore you have even taught the wicked women your ways.
- American Standard Version (ASV)
- How trimmest thou thy way to seek love! therefore even the wicked women hast thou taught thy ways.
- Bible in Basic English (BBE)
- With what care are your ways ordered when you are looking for love! so ... your ways.
- Darby Translation (DBY)
- How dost thou trim thy way to seek love! Therefore hast thou also accustomed thy ways to wickedness.
- Webster's Bible (WBS)
- Why trimmest thou thy way to seek love? therefore hast thou also taught the wicked ones thy ways.
- Young's Literal Translation (YLT)
- What — dost thou make pleasing thy ways to seek love? Therefore even the wicked thou hast taught thy ways.
Read in context
- 31ಓ ಸಂತತಿಯೇ, ನೀವು ಕರ್ತನ ವಾಕ್ಯವನ್ನು ನೋಡಿರಿ; ನಾನು ಇಸ್ರಾಯೇಲಿನ ಅರಣ್ಯವಾ ದೆನೋ? ಕತ್ತಲೆಯ ದೇಶವಾದೆನೋ? ಯಾತಕ್ಕೆ ನನ್ನ ಜನರು--ನಾವು ಪ್ರಭುಗಳು, ಇನ್ನು ಮೇಲೆ ನಿನ್ನ ಬಳಿಗೆ ಎಂದೂ ಬರುವದಿಲ್ಲ ಎಂದು ಹೇಳುತ್ತಾರೆ.
- 32ಯುವತಿಯು ತನ್ನ ಆಭರಣಗಳನ್ನೂ ಮದಲಗಿತ್ತಿಯು ತನ್ನ ಒಡ್ಯಾಣವನ್ನೂ ಮರೆತುಬಿಡುವಳೋ? ಆದಾಗ್ಯೂ ನನ್ನ ಜನರು ಲೆಕ್ಕವಿಲ್ಲದಷ್ಟು ದಿನಗಳು ನನ್ನನ್ನು ಮರೆತುಬಿಟ್ಟಿದ್ದಾರೆ.
- 33ಪ್ರೀತಿಯನ್ನು ಹುಡುಕುವ ಹಾಗೆ ನಿನ್ನ ಮಾರ್ಗವನ್ನು ಯಾಕೆ ಚಂದ ಮಾಡಿಕೊಳ್ಳುತ್ತೀ? ಕೆಟ್ಟ ಹೆಂಗಸರಿಗೂ ನಿನ್ನ ಮಾರ್ಗವನ್ನು ಕಲಿಸಿದ್ದೀ.
- 34ಇದಲ್ಲದೆ ನಿನ್ನ ಸೆರಗುಗಳಲ್ಲಿ ಅಪರಾಧವಿಲ್ಲದ ಬಡಪ್ರಾಣಿಗಳ ರಕ್ತವು ಸಿಕ್ಕಿದೆ; ಅಂತರಂಗದ ಶೋಧನೆಯಿಂದಲ್ಲ, ಆದರೆ ಇವರೆಲ್ಲರ ಮೇಲೆಯೇ ಅದನ್ನು ಕಂಡಿದ್ದೇನೆ.
- 35ಆದಾಗ್ಯೂ ನೀನು--ನಾನು ನಿರಪರಾಧಿಯಾಗಿರುವ ಕಾರಣ ನಿಶ್ಚಯವಾಗಿ ಆತನ ಕೋಪವು ನನ್ನನ್ನು ಬಿಟ್ಟು ತಿರುಗುವದೆಂದು ಹೇಳುತ್ತೀ; ನಾನು ಪಾಪ ಮಾಡಲಿಲ್ಲವೆಂದು ನೀನು ಹೇಳುವದ ರಿಂದ ಇಗೋ, ನಾನು ನಿನಗೆ ನ್ಯಾಯತೀರಿಸುವೆನು.
Cross references
- Isaiah 57:7–10 ಯೆಶಾಯ 57:7–10ಮಹೋನ್ನತ ಪರ್ವತದಲ್ಲಿ ನೀನು ಹಾಸಿಗೆಯನ್ನು ಹಾಕಿಕೊಂಡಿದ್ದೀ. ಬಲಿ ಅರ್ಪಿಸುವ ದಕ್ಕೂ ಅಲ್ಲಿಗೆ ಏರಿದ್ದೀ. ಕದಗಳ ಮತ್ತು ನಿಲುವಿನ ಹಿಂಭಾಗದಲ್ಲಿ ನಿನ್ನ ಜ್ಞಾಪಕ ಚಿಹ್ನೆಯನ್ನು ಇಟ್ಟಿದ್ದೀ. ನನ್ನನ್ನು ಬಿಟ್ಟು ಬೇರೊಬ್ಬನಿಗೆ ನಿನ್ನನ್ನು ತೋರ್ಪಡಿಸಿ ಕೊಂಡಿದ್ದೀ; ಏರಿಹೋಗಿ ನಿನ್ನ ಮಂಚವನ್ನು ಅಗಲ ಮಾಡಿಕೊಂಡು ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದೀ; ಅವರ ಮಂಚವನ್ನು ಕಂಡಲ್ಲಿ ಅದನ್ನು ಪ್ರೀತಿಮಾಡಿದ್ದೀ. ಬಹು ಸುಗಂಧ ದ್ರವ್ಯಗಳನ್ನು ಕೂಡಿಸಿ, ತೈಲದೊಂದಿಗೆ ರಾಜನ ಬಳಿಗೆ ಹೋಗಿದ್ದೀ, ದೂರಕ್ಕೆ ನಿನ್ನ ಸೇವಕರನ್ನು ಕಳುಹಿಸಿದ್ದೀ, ಪಾತಾಳ ದಷ್ಟು ನೀಚಸ್ಥಿತಿಗೆ ಇಳಿದಿದ್ದೀ. ನಿನ್ನ ಮಾರ್ಗದಲ್ಲಿ ಬಹಳವಾಗಿ ದಣಿದಿದ್ದರೂ ನಿರೀಕ್ಷೆಯೇ ಇಲ್ಲ ಎಂದು ಅಂದುಕೊಳ್ಳಲಿಲ್ಲ. ನಿನ್ನ ಕೈಯಲ್ಲಿರುವ ಜೀವವನ್ನು ಕಂಡುಕೊಂಡಿದ್ದೀ, ಆದದರಿಂದ ನೀನು ದುಃಖಿಸಲಿಲ್ಲ.
- Ezekiel 16:47 ಯೆಹೆಜ್ಕೇಲನು 16:47ಆದರೂ ನೀನು ಅವರ ಮಾರ್ಗಗಳಲ್ಲಿ ನಡೆಯಲಿಲ್ಲ, ಅವರ ಅಸಹ್ಯಗಳ ಹಾಗೆ ಮಾಡಲಿಲ್ಲ, ಅವರ ದುರ್ನಡತೆಯು ಅತ್ಯಲ್ಪವೆಂದು ಸದಾ ಅವರಿಗಿಂತ ಬಹಳ ಕೆಟ್ಟವಳಾಗಿ ನಡೆದುಕೊಂಡೆ.
- Ezekiel 16:27 ಯೆಹೆಜ್ಕೇಲನು 16:27ಆದದರಿಂದ ಇಗೋ, ನಾನು ನನ್ನ ಕೈಯನ್ನು ನಿನ್ನ ಮೇಲೆ ಚಾಚಿ ನಿನ್ನ ಸಾಮಾನ್ಯವಾದ ಆಹಾರವನ್ನು ಕಡಿಮೆಮಾಡಿದೆ; ನಿನ್ನ ದುರ್ಮಾರ್ಗಕ್ಕೆ ನಾಚಿಕೆಪಟ್ಟು ನಿನ್ನ ಕೆಟ್ಟ ನಡತೆಗೆ ಅಸಹ್ಯಪಡುವವರಾದ ಫಿಲಿಷ್ಟಿಯರ ಕುಮಾರ್ತೆಯರ ಚಿತ್ತಕ್ಕೆ ನಿನ್ನನ್ನು ಒಪ್ಪಿಸಿಬಿಟ್ಟೆ.
- Jeremiah 3:1–2 ಯೆರೆಮೀಯ 3:1–2ಒಬ್ಬನು ತನ್ನ ಹೆಂಡತಿಯನ್ನು ಬಿಟ್ಟುಬಿಟ್ಟಾಗ ಅವಳು ಅವನನ್ನು ಬಿಟ್ಟು ಹೋಗಿ ಬೇರೆಯವನವಳಾದರೆ ಅವನು ಇನ್ನು ಅವಳ ಹತ್ತಿರ ಹಿಂತಿರುಗುವನೋ? ಆ ದೇಶವು ಬಹಳವಾಗಿ ಅಪವಿತ್ರವಾಗುವದಿಲ್ಲವೋ? ನೀನು ಅನೇಕ ಮಿಂಡರ ಸಂಗಡ ಸೂಳೆತನ ಮಾಡಿದ್ದೀ; ಆದಾಗ್ಯೂ ನನ್ನ ಬಳಿಗೆ ತಿರುಗಿಕೋ ಎಂದು ಕರ್ತನು ಅನ್ನುತ್ತಾನೆ. ನಿನ್ನ ಕಣ್ಣುಗಳನ್ನು ಉನ್ನತ ಸ್ಥಳಗಳ ಮೇಲೆತ್ತುಕೊಂಡು ಎಲ್ಲಿ ನಿನ್ನ ಸಂಗಡ ಮಲಗಲಿಲ್ಲವೋ ನೋಡು. ಅರಣ್ಯದಲ್ಲಿ ಅರಬಿಯನ ಹಾಗೆ ದಾರಿಗಳಲ್ಲಿ ಅವರಿಗೋಸ್ಕರ ಕೂತುಕೊಂಡಿದ್ದೀ; ಹೀಗೆ ನಿನ್ನ ಸೂಳೆತನಗಳಿಂದಲೂ ನಿನ್ನ ಕೆಟ್ಟತನಗಳಿಂದಲೂ ದೇಶವನ್ನು ಅಪವಿತ್ರ ಮಾಡಿದ್ದೀ.
- Jeremiah 2:23 ಯೆರೆಮೀಯ 2:23ನಾನು ಅಶುದ್ಧನಲ್ಲ, ಬಾಳನನ್ನು ಹಿಂಬಾಲಿಸಲಿಲ್ಲ ಎಂದು ನೀನು ಹೇಳುವದು ಹೇಗೆ? ತಗ್ಗಿನಲ್ಲಿ ನಿನ್ನ ಮಾರ್ಗವನ್ನು ನೋಡು; ನೀನು ಮಾಡಿದ್ದನ್ನು ತಿಳುಕೋ; ನೀನು ತೀವ್ರವಾಗಿ ಸಂಚಾರ ಮಾಡುವ ಹೆಣ್ಣು ಒಂಟೆಯೇ;
- Jeremiah 2:36 ಯೆರೆಮೀಯ 2:36ನಿನ್ನ ಮಾರ್ಗವನ್ನು ಬೇರೆಮಾಡಿಕೊಳ್ಳುವಷ್ಟು ಏಕೆ ತಿರುಗಾಡುತ್ತೀ? ನೀನು ಅಶ್ಶೂರಿನ ನಿಮಿತ್ತ ನಾಚಿಕೆ ಪಟ್ಟ ಹಾಗೆ ಐಗುಪ್ತದ ನಿಮಿತ್ತವೂ ನಾಚಿಕೆಪಡುವಿ.ಹೌದು, ಅಲ್ಲಿಂದ ಸಹ ನಿನ್ನ ಕೈಗಳನ್ನು ತಲೆಯ ಮೇಲೆ ಇಟ್ಟುಕೊಂಡು ಹೊರಟುಹೋಗುವಿ; ಕರ್ತನು ನಿನ್ನ ಭರವಸೆಗಳನ್ನು ತಿರಸ್ಕರಿಸಿದ್ದಾನೆ, ಅವುಗಳಲ್ಲಿ ನಿನಗೆ ಸಫಲವಾಗುವದಿಲ್ಲ.
- Ezekiel 16:51–52 ಯೆಹೆಜ್ಕೇಲನು 16:51–52ಸಮಾರ್ಯವೆಂಬಾಕೆಯು ಸಹ ನೀನು ಮಾಡಿದ ಪಾಪಗಳಲ್ಲಿ ಅರ್ಧವನ್ನೂ ಮಾಡಲಿಲ್ಲ. ನೀನು ನಿನ್ನ ಅಕ್ಕತಂಗಿಯರಿಗಿಂತಲೂ ಅತ್ಯಧಿಕವಾದ ಅಸಹ್ಯವಾದ ಕಾರ್ಯಗಳನ್ನು ಮಾಡಿದಿ, ನೀನು ಮಾಡಿದ ಲೆಕ್ಕವಿಲ್ಲ ದಷ್ಟು ದುರಾಚಾರಗಳಿಂದ ಅವರನ್ನು ನೀತಿವಂತರೆಂದು ತೋರ್ಪಡಿಸಿದೆ. ನಿನ್ನ ದೋಷಗಳೇ ನಿನ್ನ ಅಕ್ಕ ತಂಗಿಯರ ಪಕ್ಷವಾಗಿ ನಿಂತಿದ್ದರಿಂದ ನೀನು ನಾಚಿಕೆ ಪಡು; ನೀನು ಅವರಿಗಿಂತ ಅಸಹ್ಯವಾಗಿ ಮಾಡಿದ ನಿನ್ನ ಪಾಪಗಳಿಗೆ ತಕ್ಕ ನಿಂದೆಯನ್ನು ಹೊತ್ತುಕೋ; ಅವರು ನಿನಗಿಂತ ನೀತಿವಂತರು; ಹೌದು, ನೀನು ನಿನ್ನ ಸಹೋದರಿಗಳನ್ನು ನೀತಿವಂತರೆಂದು ತೋರ್ಪಡಿಸಿ ದ್ದರಿಂದ ನೀನೇ ನಾಚಿಕೆಪಟ್ಟು ನಿನ್ನ ನಿಂದೆಯನ್ನು ಹೊತ್ತುಕೋ.
- Hosea 2:5–7 ಹೋಶೇಯ 2:5–7ಅವರ ತಾಯಿ ಸೂಳೆ ತನ ಮಾಡಿದ್ದಾಳೆ; ಅವರನ್ನು ಹೆತ್ತವಳು ನಾಚಿಕೆಯಿ ಲ್ಲದೆ ನಡೆದಿದ್ದಾಳೆ; ಯಾಕಂದರೆ ಅವಳು--ನನ್ನ ರೊಟ್ಟಿ ಯನ್ನೂ ನನ್ನ ನೀರನ್ನೂ ನನ್ನ ಉಣ್ಣೆನಾರು ಗಳನ್ನೂ ನನ್ನ ತೈಲವನ್ನೂ ಪಾನವನ್ನೂ ನನಗೆ ಕೊಡುವ ನನ್ನ ಪ್ರಿಯರ ಹಿಂದೆ ಹೋಗುತ್ತೇನೆಂದು ಅಂದುಕೊಂಡಿದ್ದಾಳೆ. ಆದದರಿಂದ ಇಗೋ, ನಾನು ನಿನ್ನ ಮಾರ್ಗಕ್ಕೆ ಮುಳ್ಳುಗಳ ಬೇಲಿ ಹಾಕುವೆನು; ಅವಳು ತನ್ನ ಹಾದಿಗಳನ್ನು ಕಾಣದ ಹಾಗೆ ಗೋಡೆಯನ್ನು ಕಟ್ಟುವೆನು. ಅವಳು ತನ್ನ ಮಿಂಡರನ್ನು ಹಿಂಬಾಲಿಸಿದರೂ ಅವರನ್ನು ಸಂಧಿಸುವದಿಲ್ಲ, ಹುಡುಕಿದರೂ ಅವರು ಸಿಕ್ಕುವದಿಲ್ಲ; ಆಗ ಅವಳು--ನನ್ನ ಮೊದಲನೆಯ ಗಂಡನ ಬಳಿಗೆ ಹಿಂದಿರುಗಿ ಹೋಗುವೆನು; ಈಗಿರುವದಕ್ಕಿಂತ ಆಗ ನನಗೆ ಎಷ್ಟೋ ಚೆನ್ನಾಗಿತ್ತು ಎಂದು ಅಂದುಕೊಳ್ಳುವಳು.
- 2 Chronicles 33:9 2 ಪೂರ್ವಕಾಲವೃತ್ತಾಂತ 33:9ಹೀಗೆಯೇ ಕರ್ತನು ಇಸ್ರಾಯೇಲಿನ ಮಕ್ಕಳ ಮುಂದೆ ನಾಶ ಮಾಡಿದ ಜನಾಂಗಗಳಿಗಿಂತ ಯೆಹೂದದವರೂ ಯೆರೂಸಲೇಮಿನ ನಿವಾಸಿಗಳೂ ಕೆಟ್ಟದ್ದನ್ನು ಮಾಡು ವದಕ್ಕೆ ತಪ್ಪಿಹೋಗುವಂತೆ ಮನಸ್ಸೆಯು ಮಾಡಿದನು.
- Hosea 2:13 ಹೋಶೇಯ 2:13ತರುವಾಯ ಅವಳು ನನ್ನನ್ನು ಮರೆತು ಕಿವಿಯೋಲೆ ಮೊದಲಾದ ಒಡವೆಗಳಿಂದ ಸಿಂಗರಿಸಿಕೊಂಡು, ಮಿಂಡರ ಹಿಂದೆ ಹೋಗಿ ಬಾಳ್ ದೇವತೆಗಳ ದಿವಸಗಳಲ್ಲಿ ಧೂಪ ಸುಟ್ಟಿದ್ದಕ್ಕೆ ನಾನು ಅವಳನ್ನು ದಂಡಿಸುವೆನು ಎಂದು ಕರ್ತನು ಹೇಳುತ್ತಾನೆ.