Jeremiah · chapter 22 · verse 6
Jeremiah 22:6 in Kannada
ಕರ್ತನು ಯೆಹೂದದ ಅರಸನ ಮನೆಗೆ ಹೀಗೆ ಹೇಳುತ್ತಾನೆ --ನೀನು ನನಗೆ ಗಿಲ್ಯಾದೂ ಲೆಬನೋನಿನ ತಲೆಯೂ ಆಗಿದ್ದೀ; ಆದರೂ ನಿಶ್ಚಯವಾಗಿ ನಿನ್ನನ್ನು ಅರಣ್ಯ ವಾಗಿಯೂ ನಿವಾಸಿಗಳಿಲ್ಲದ ಪಟ್ಟಣಗಳಾಗಿಯೂ ಮಾಡುವೆನು.
Kartanu yehoodada arasana manege heege heluttaane --neenu nanage gilyaadoo lebanonina taleyoo aagiddee; aadaroo nishchayavaagi ninnannu aranya vaagiyoo nivaasigalillada pattanagalaagiyoo maaduvenu.
Jeremiah 22:6 in English
- King James Version (KJV)
- For thus saith the LORD unto the king’s house of Judah; Thou [art] Gilead unto me, [and] the head of Lebanon: [yet] surely I will make thee a wilderness, [and] cities [which] are not inhabited.
- World English Bible (WEB)
- For the LORD says concerning the house of the king of Judah: “You are Gilead to me, the head of Lebanon. Yet surely I will make you a wilderness, cities which are not inhabited.
- American Standard Version (ASV)
- For thus saith Jehovah concerning the house of the king of Judah: Thou art Gilead unto me, [and] the head of Lebanon; [yet] surely I will make thee a wilderness, [and] cities which are not inhabited.
- Bible in Basic English (BBE)
- For this is what the Lord has said about the family of the king of Judah: You are Gilead to me, and the top of Lebanon: but, truly, I will make you waste, with towns unpeopled.
- Darby Translation (DBY)
- For thus saith Jehovah concerning the house of the king of Judah: Thou art a Gilead unto me, the summit of Lebanon: verily I will make thee a wilderness, cities not inhabited.
- Webster's Bible (WBS)
- For thus saith the LORD to the king's house of Judah; Thou [art] Gilead to me, [and] the head of Lebanon; [yet] surely I will make thee a wilderness, [and] cities [which] are not inhabited.
- Young's Literal Translation (YLT)
- For thus said Jehovah, Concerning the house of the king of Judah: Gilead [art] thou to Me — head of Lebanon, If not — I make thee a wilderness, Cities not inhabited.
Read in context
- 4ನೀವು ನಿಶ್ಚಯವಾಗಿ ಈ ಕಾರ್ಯವನ್ನು ಮಾಡಿದರೆ ದಾವೀದನ ಸಿಂಹಾಸನದ ಮೇಲೆ ಕೂತುಕೊಳ್ಳು ವವರೂ ರಥಗಳಲ್ಲಿಯೂ ಕುದುರೆಗಳ ಮೇಲೆಯೂ ಸವಾರಿಮಾಡುವ ಅರಸರ ತಮ್ಮ ಸೇವಕರ ಜನರ ಸಹಿತವಾಗಿ, ಈ ಮನೆಯ ಬಾಗಿಲುಗಳಿಂದ ಪ್ರವೇಶಿಸು ವರು.
- 5ನೀವು ಈ ವಾಕ್ಯಗಳನ್ನು ಕೇಳದೆಹೋದರೆ, ಈ ಮನೆ ಹಾಳಾಗುವದೆಂದು ನನ್ನ ಮೇಲೆ ಆಣೆ ಇಡುತ್ತೇನೆ ಎಂದು ಕರ್ತನು ಅನ್ನುತ್ತಾನೆ.
- 6ಕರ್ತನು ಯೆಹೂದದ ಅರಸನ ಮನೆಗೆ ಹೀಗೆ ಹೇಳುತ್ತಾನೆ --ನೀನು ನನಗೆ ಗಿಲ್ಯಾದೂ ಲೆಬನೋನಿನ ತಲೆಯೂ ಆಗಿದ್ದೀ; ಆದರೂ ನಿಶ್ಚಯವಾಗಿ ನಿನ್ನನ್ನು ಅರಣ್ಯ ವಾಗಿಯೂ ನಿವಾಸಿಗಳಿಲ್ಲದ ಪಟ್ಟಣಗಳಾಗಿಯೂ ಮಾಡುವೆನು.
- 7ನಿನಗೆ ವಿರೋಧವಾಗಿ ತಮ್ಮತಮ್ಮ ಆಯುಧಗಳಿಂದ ನಾಶಮಾಡುವವರನ್ನು ಸಿದ್ಧಮಾಡು ತ್ತೇನೆ; ಅವರು ನಿನ್ನ ಶ್ರೇಷ್ಠ ದೇವದಾರುಗಳನ್ನು ಕಡಿದು ಬೆಂಕಿಯಲ್ಲಿ ಹಾಕುವರು.
- 8ಅನೇಕ ಜನಾಂಗಗಳು ಈ ಪಟ್ಟಣವನ್ನು ಹಾದುಹೋಗುವರು, ಕರ್ತನು ಈ ದೊಡ್ಡ ಪಟ್ಟಣಕ್ಕೆ ಯಾಕೆ ಈ ಪ್ರಕಾರ ಮಾಡಿ ದ್ದಾನೆಂದು ನೆರೆಯವರು ಒಬ್ಬರಿಗೊಬ್ಬರು ಹೇಳಿಕೊಳ್ಳು ವರು.
Cross references
- Isaiah 6:11 ಯೆಶಾಯ 6:11ಆಗ ನಾನು ಕರ್ತನೇ, ಇದು ಎಷ್ಟರ ವರೆಗೆ ಅಂದೆನು. ಅದಕ್ಕೆ ಆತನು--ಪಟ್ಟಣಗಳು ನಿವಾಸಿಗಳಿಲ್ಲದೆ, ಮನೆಗಳು ಮನುಷ್ಯ ನಿಲ್ಲದೆ ದೇಶವು ಸಂಪೂರ್ಣವಾಗಿ ಹಾಳಾಗುವ ವರೆಗೆ
- Psalm 107:34 ಕೀರ್ತನೆಗಳು 107:34ಫಲ ವುಳ್ಳ ಭೂಮಿಯನ್ನು ಬಂಜರಾಗಿಯೂ ಅದರ ನಿವಾಸಿ ಗಳ ಕೆಟ್ಟತನಕ್ಕೋಸ್ಕರ ಮಾರ್ಪಡಿಸುತ್ತಾನೆ.
- Isaiah 27:10 ಯೆಶಾಯ 27:10ಕೋಟೆಯ ಪಟ್ಟಣವಾಗಿದ್ದಾಗ್ಯೂ ಹಾಳಾಗಿ ಕಾಡಿನಂತೆ ಜನರಿಲ್ಲದೆ ಶೂನ್ಯ ನಿವಾಸಸ್ಥಾನವಾಗಿದೆ; ಅಲ್ಲಿ ಕರುಗಳು ಮೇದು ಮಲಗುವವು. ಅಲ್ಲಿನ ಚಿಗುರುಗಳನ್ನು ತಿಂದು ಬಿಡು ವವು.
- Micah 3:12 ಮೀಕ 3:12ಆದಕಾರಣ ನಿಮ್ಮ ನಿಮಿತ್ತವೇ, ಚೀಯೋನು ಹೊಲದ ಹಾಗೆ ಉಳಲ್ಪಡುವದು; ಯೆರೂಸಲೇಮು ದಿಬ್ಬೆಗಳಾಗುವದು, ಆಲಯದ ಪರ್ವತವು ಅಡವಿಯ ಉನ್ನತ ಸ್ಥಳಗಳ ಹಾಗಾಗುವದು.
- Jeremiah 9:11 ಯೆರೆಮೀಯ 9:11ಇದಲ್ಲದೆ ಯೆರೂಸಲೇಮನ್ನು ದಿಬ್ಬೆಗಳಾಗಿಯೂ ನರಿಗಳ ಸ್ಥಾನವಾಗಿಯೂ ಮಾಡು ತ್ತೇನೆ; ಯೆಹೂದದ ಪಟ್ಟಣಗಳನ್ನು ನಿವಾಸಿಗಳಿಲ್ಲದೆ ಹಾಳುಮಾಡುತ್ತೇನೆ.
- Jeremiah 26:18 ಯೆರೆಮೀಯ 26:18ಮೋರೇಷೆತಿನವನಾದ ವಿಾಕಾಯನು ಯೆಹೂದದ ಅರಸನಾದ ಹಿಜ್ಕೀಯನ ದಿನಗಳಲ್ಲಿ ಪ್ರವಾದಿಸಿ ಯೆಹೂದದ ಜನರಿಗೆಲ್ಲಾ ಹೇಳಿದ್ದೇನಂದರೆ--ಸೈನ್ಯಗಳ ಕರ್ತನು ಹೀಗೆ ಹೇಳು ತ್ತಾನೆ--ಚೀಯೋನು ಹೊಲದ ಹಾಗೆ ಉಳಲ್ಪಡು ವದು; ಯೆರೂಸಲೇಮು ದಿಬ್ಬಗಳಾಗುವದು; ಮಂದಿ ರದ ಬೆಟ್ಟವು ಅಡವಿಯ ಉನ್ನತ ಸ್ಥಳವಾಗುವದು.
- Jeremiah 7:34 ಯೆರೆಮೀಯ 7:34ಆಗ ನಾನು ಯೆಹೂದದ ಪಟ್ಟಣ ಗಳಲ್ಲಿಯೂ ಯೆರೂಸಲೇಮಿನ ಬೀದಿಗಳಲ್ಲಿಯೂ ಉಲ್ಲಾಸ ಸಂತೋಷದ ಧ್ವನಿಯನ್ನೂ ಮದಲಿಂಗನ ಮದಲಗಿತ್ತಿಯ ಸ್ವರವನ್ನೂ ನಿಲ್ಲಿಸುವೆನು; ಯಾಕಂದರೆ ದೇಶವು ಹಾಳಾಗುವದು.
- Genesis 37:25 ಆದಿಕಾಂಡ 37:25ಅವರು ಊಟಕ್ಕೆ ಕೂತುಕೊಂಡಾಗ ತಮ್ಮ ಕಣ್ಣುಗಳನ್ನೆತ್ತಿ ನೋಡಲಾಗಿ ಇಗೋ, ಇಷ್ಮಾಯೇಲ್ಯರ ಗುಂಪು ಗಿಲ್ಯಾದಿನಿಂದ ಬರುತ್ತಿತ್ತು. ಅವರ ಒಂಟೆಗಳು ಸಾಂಬ್ರಾಣಿ ಸುಗಂಧತೈಲ ರಕ್ತಬೋಳಗಳನ್ನು ಹೊರು ತ್ತಿದ್ದವು. ಅವರು ಅವುಗಳನ್ನು ಐಗುಪ್ತಕ್ಕೆ ತೆಗೆದು ಕೊಂಡು ಹೋಗುತ್ತಿದ್ದರು.
- Jeremiah 19:7–8 ಯೆರೆಮೀಯ 19:7–8ನಾನು ಈ ಸ್ಥಳದಲ್ಲಿ ಯೆಹೂದದ, ಯೆರೂಸಲೇಮಿನ ಆಲೋಚನೆಯನ್ನು ಶೂನ್ಯ ಮಾಡುವೆನು; ಅವರ ಶತ್ರುಗಳ ಮುಂದೆಯೂ ಅವರ ಪ್ರಾಣವನ್ನು ಹುಡುಕು ವವರ ಕೈಯಿಂದಲೂ ಅವರನ್ನು ಕತ್ತಿಯಿಂದ ಬೀಳು ವಂತೆ ಮಾಡುವೆನು; ಅವರ ಹೆಣಗಳನ್ನು ಆಕಾಶದ ಪಕ್ಷಿಗಳಿಗೂ ಭೂಮಿಯ ಮೃಗಗಳಿಗೂ ಆಹಾರವಾಗಿ ಕೊಡುವೆನು. ಈ ಪಟ್ಟಣಗಳನ್ನು ಹಾಳಾಗಿಯೂ ತಿರಸ್ಕರಿಸಲ್ಪಡುವಂತೆಯೂ ಮಾಡುವೆನು; ಅದನ್ನು ಹಾದುಹೋಗುವವರೆಲ್ಲರು ಅದರ ಎಲ್ಲಾ ಬಾಧೆಗಳ ನಿಮಿತ್ತ ವಿಸ್ಮಯಹೊಂದಿ ಸಿಳ್ಳು ಹಾಕುವರು.
- Jeremiah 25:9–10 ಯೆರೆಮೀಯ 25:9–10ನೀವು ನನ್ನ ಮಾತುಗಳನ್ನು ಕೇಳದ ಕಾರಣ ಇಗೋ, ಕರ್ತನು ಹೇಳುವದೇನಂದರೆ--ನಾನು ಕಳು ಹಿಸಿ ಉತ್ತರ ದಿಕ್ಕಿನ ಗೋತ್ರಗಳೆಲ್ಲವನ್ನೂ ನನ್ನ ಸೇವಕ ನಾದ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನನ್ನೂ ತಕ್ಕೊಂಡು, ಈ ದೇಶಕ್ಕೆ ವಿರೋಧವಾಗಿಯೂ ಅದರ ನಿವಾಸಿಗಳಿಗೆ ವಿರೋಧವಾಗಿಯೂ ಸುತ್ತಲಿರುವ ಈ ಎಲ್ಲಾ ಜನಾಂಗಗಳಿಗೆ ವಿರೋಧವಾಗಿಯೂ ಕರೆಯಿಸಿ ಅವರನ್ನು ಸಂಪೂರ್ಣ ನಾಶಮಾಡಿ ಅವರನ್ನು ವಿಸ್ಮ ಯಕ್ಕೂ ಸಿಳ್ಳಿಡುವಿಕೆಗೂ ಗುರಿಯಾಗಿಯೂ ನಿತ್ಯ ಹಾಳಾಗಿಯೂ ಮಾಡುತ್ತೇನೆ. ಇದಲ್ಲದೆ ಉಲ್ಲಾಸದ ಶಬ್ದವನ್ನೂ ಸಂತೋಷದ ಸ್ವರವನ್ನೂ ಮದಲಿಂಗನ ಸ್ವರವನ್ನೂ ಮದಲಗಿತ್ತಿಯ ಸ್ವರವನ್ನೂ ಬೀಸುವ ಕಲ್ಲಿನ ಶಬ್ದವನ್ನೂ ದೀಪದ ಬೆಳಕನ್ನೂ ಅವರೊಳಗಿಂದ ತೆಗೆದುಹಾಕುತ್ತೇನೆ.
- Jeremiah 22:24 ಯೆರೆಮೀಯ 22:24ಕರ್ತನು ಹೇಳುವದೇನಂದರೆ--ನನ್ನ ಜೀವ ದಾಣೆ, ಯೆಹೋಯಾಕೀಮನ ಮಗನಾದ ಯೆಹೂ ದದ ಅರಸನಾದ ಕೊನ್ಯನು ನನ್ನ ಬಲಗೈಯ ಮುದ್ರೆ ಯುಂಗರವಾಗಿದ್ದರೂ ನಿನ್ನನ್ನು ಅಲ್ಲಿಂದ ಕಿತ್ತುಹಾಕಿ
- Jeremiah 21:14 ಯೆರೆಮೀಯ 21:14ನಿಮ್ಮ ಕ್ರಿಯೆಗಳ ಫಲದ ಪ್ರಕಾರ ನಿಮ್ಮನ್ನು ಶಿಕ್ಷಿಸು ತ್ತೇನೆಂದು ಕರ್ತನು ಅನ್ನುತ್ತಾನೆ; ಅದರ ಅಡವಿಗೆ ಬೆಂಕಿಹಚ್ಚುತ್ತೇನೆ; ಅದರ ಸುತ್ತಲಿರುವದನ್ನೆಲ್ಲಾ ಅದು ತಿಂದುಬಿಡುವದು.