Jeremiah · chapter 27 · verse 15
Jeremiah 27:15 in Kannada
ನಾನು ಅವರನ್ನು ಕಳುಹಿಸಲಿಲ್ಲವೆಂದು ಕರ್ತನು ಅನ್ನುತ್ತಾನೆ; ಆದಾಗ್ಯೂ ಅವರು ನಾನು ನಿಮ್ಮನ್ನು ಓಡಿಸಿಬಿಡುವ ಹಾಗೆಯೂ ನೀವೂ ನಿಮಗೆ ಪ್ರವಾದಿಸುವ ಪ್ರವಾದಿಗಳೂ ನಾಶವಾಗುವ ಹಾಗೆಯೂ ನನ್ನ ಹೆಸರಿನಲ್ಲಿ ನಿಮಗೆ ಸುಳ್ಳಾಗಿ ಪ್ರವಾದಿಸುತ್ತಾರೆ.
Naanu avarannu kaluhisalillavendu kartanu annuttaane; aadaagyoo avaru naanu nimmannu odisibiduva haageyoo neevoo nimage pravaadisuva pravaadigaloo naashavaaguva haageyoo nanna hesarinalli nimage sullaagi pravaadisuttaare.
Jeremiah 27:15 in English
- King James Version (KJV)
- For I have not sent them, saith the LORD, yet they prophesy a lie in my name; that I might drive you out, and that ye might perish, ye, and the prophets that prophesy unto you.
- World English Bible (WEB)
- For I have not sent them,” says the LORD, “but they prophesy falsely in my name; that I may drive you out, and that you may perish, you, and the prophets who prophesy to you.”
- American Standard Version (ASV)
- For I have not sent them, saith Jehovah, but they prophesy falsely in my name; that I may drive you out, and that ye may perish, ye, and the prophets that prophesy unto you.
- Bible in Basic English (BBE)
- For I have not sent them, says the Lord, but they are saying what is false in my name, so that I might send you out by force, causing destruction to come on you and on your prophets.
- Darby Translation (DBY)
- For I have not sent them, saith Jehovah, yet they prophesy falsely in my name; in order that I should drive you out, and that ye should perish, ye, and the prophets who prophesy unto you.
- Webster's Bible (WBS)
- For I have not sent them, saith the LORD, yet they prophesy a lie in my name; that I might drive you out, and that ye might perish, ye, and the prophets that prophesy to you.
- Young's Literal Translation (YLT)
- For I have not sent them — an affirmation of Jehovah — and they are prophesying in My name falsely, so as to drive you out, and ye have perished, ye, and the prophets who are prophesying to you.'
Read in context
- 13ಬಾಬೆಲಿನ ಅರಸನಿಗೆ ಸೇವೆ ಮಾಡದ ಜನಾಂಗಕ್ಕೆ ವಿರೋಧವಾಗಿ ಕರ್ತನು ಮಾತ ನಾಡಿದ ಪ್ರಕಾರ--ನೀನೂ ನಿನ್ನ ಜನರೂ ಯಾಕೆ ಕತ್ತಿಯಿಂದಲೂ ಕ್ಷಾಮದಿಂದಲೂ ಜಾಡ್ಯದಿಂದಲೂ ಸಾಯುವಿರಿ?
- 14ಆದದರಿಂದ ಬಾಬೆಲಿನ ಅರಸನಿಗೆ ನೀವು ಸೇವೆಮಾಡಬೇಡಿರೆಂದು ನಿಮಗೆ ಹೇಳುವ ಪ್ರವಾದಿಗಳ ವಾಕ್ಯಗಳಿಗೆ ಕಿವಿಗೊಡಬೇಡಿರಿ; ಅವರು ನಿಮಗೆ ಸುಳ್ಳನ್ನು ಪ್ರವಾದಿಸುತ್ತಾರೆ.
- 15ನಾನು ಅವರನ್ನು ಕಳುಹಿಸಲಿಲ್ಲವೆಂದು ಕರ್ತನು ಅನ್ನುತ್ತಾನೆ; ಆದಾಗ್ಯೂ ಅವರು ನಾನು ನಿಮ್ಮನ್ನು ಓಡಿಸಿಬಿಡುವ ಹಾಗೆಯೂ ನೀವೂ ನಿಮಗೆ ಪ್ರವಾದಿಸುವ ಪ್ರವಾದಿಗಳೂ ನಾಶವಾಗುವ ಹಾಗೆಯೂ ನನ್ನ ಹೆಸರಿನಲ್ಲಿ ನಿಮಗೆ ಸುಳ್ಳಾಗಿ ಪ್ರವಾದಿಸುತ್ತಾರೆ.
- 16ನಾನು ಯಾಜಕರ ಸಂಗಡಲೂ ಈ ಜನರೆಲ್ಲರ ಸಂಗಡಲೂ ಮಾತನಾಡಿದೆನು; ಏನಂದರೆ, ಕರ್ತನು ಹೀಗೆ ಹೇಳುತ್ತಾನೆ--ಇಗೋ, ಕರ್ತನ ಆಲಯದ ಪಾತ್ರೆಗಳು ಬೇಗ ಬಾಬೆಲಿನಿಂದ ತಿರುಗಿ ತರಲ್ಪಡು ವದೆಂದು ನಿಮಗೆ ಪ್ರವಾದಿಸುವ ನಿಮ್ಮ ಪ್ರವಾದಿಗಳ ಮಾತುಗಳಿಗೆ ಕಿವಿಗೊಡಬೇಡಿರಿ; ಅವರು ನಿಮಗೆ ಸುಳ್ಳನ್ನು ಪ್ರವಾದಿಸುತ್ತಾರೆ.
- 17ಅವರಿಗೆ ಕಿವಿಗೊಡ ಬೇಡಿರಿ; ಬಾಬೆಲಿನ ಅರಸನಿಗೆ ಸೇವೆಮಾಡಿ ಬದುಕಿರಿ; ಈ ಪಟ್ಟಣವು ಯಾಕೆ ಹಾಳಾಗಬೇಕು?
Cross references
- Jeremiah 27:10 ಯೆರೆಮೀಯ 27:10ನಿಮ್ಮನ್ನು ನಿಮ್ಮ ದೇಶದಿಂದ ದೂರಮಾಡುವ ಹಾಗೆಯೂ ನಾನು ನಿಮ್ಮನ್ನು ಓಡಿಸಿ ಬಿಟ್ಟಮೇಲೆ ನೀವು ನಾಶವಾಗುವ ಹಾಗೆಯೂ ಅವರು ನಿಮಗೆ ಸುಳ್ಳನ್ನು ಪ್ರವಾದಿಸುತ್ತಾರೆ.
- Jeremiah 6:13–15 ಯೆರೆಮೀಯ 6:13–15ಅವ ರಲ್ಲಿ ಚಿಕ್ಕವನು ಮೊದಲುಗೊಂಡು ದೊಡ್ಡವರ ವರೆಗೆ ಅವರೆಲ್ಲರೂ ತಮ್ಮನ್ನು ಲೋಭಕ್ಕೆ ಒಪ್ಪಿಸಿ ಕೊಟ್ಟಿದ್ದಾರೆ. ಪ್ರವಾದಿ ಮೊದಲುಗೊಂಡು ಯಾಜಕರ ವರೆಗೆ ಪ್ರತಿ ಯೊಬ್ಬನು ಸುಳ್ಳಾಗಿ ನಡಕೊಳ್ಳುತ್ತಾನೆ. ಸಮಾಧಾನ ವಿಲ್ಲದಿರುವಾಗ--ಸಮಾಧಾನ ಎಂದು ಹೇಳಿ ನನ್ನ ಜನರ ಕುಮಾರ್ತೆಯ ಗಾಯವನ್ನು ಹಗುರವಾಗಿ ಸ್ವಸ್ಥಮಾಡಿದ್ದಾರೆ. ಅಸಹ್ಯವನ್ನು ಮಾಡಿದ ಮೇಲೆ ನಾಚಿಕೆಪಟ್ಟರೋ? ಇಲ್ಲ, ಸ್ವಲ್ಪವಾದರೂ ನಾಚಿಕೆಪಡ ಲಿಲ್ಲ; ಇಲ್ಲವೆ ಲಜ್ಜೆಯನ್ನು ಅರಿಯರು; ಆದದರಿಂದ ಅವರು ಬೀಳುವವರೊಳಗೆ ಬೀಳುವರು; ನಾನು ಅವ ರನ್ನು ವಿಚಾರಿಸುವ ಕಾಲದಲ್ಲಿ ಅವರು ಕೆಳಗೆ ಹಾಕ ಲ್ಪಡುವರು ಎಂದು ಕರ್ತನು ಹೇಳುತ್ತಾನೆ.
- 2 Chronicles 25:16 2 ಪೂರ್ವಕಾಲವೃತ್ತಾಂತ 25:16ಅವನು ಅರ ಸನ ಸಂಗಡ ಮಾತನಾಡುತ್ತಿರುವಾಗ ಅರಸನು ಅವ ನಿಗೆ--ಅರಸನ ಯೋಚನಾಕರ್ತರಲ್ಲಿ ನೀನು ಒಬ್ಬ ನಾಗಿದ್ದೀಯೋ? ನೀನು ಯಾಕೆ ಹೊಡೆಯಲ್ಪಡಬೇಕು ಅಂದನು. ಆಗ ಪ್ರವಾದಿಯು--ನೀನು ನನ್ನ ಯೋಚನೆ ಯನ್ನು ಕೇಳದೆ ಇದನ್ನು ಮಾಡಿದ್ದರಿಂದ ದೇವರು ನಿನ್ನನ್ನು ನಾಶಮಾಡಲು ತೀರ್ಮಾನಿಸಿದ್ದಾನೆಂದು ನಾನು ಬಲ್ಲೆನು ಎಂದು ಹೇಳಿಬಿಟ್ಟನು.
- Jeremiah 14:15–16 ಯೆರೆಮೀಯ 14:15–16ಆದದರಿಂದ ಕರ್ತನು ತಾನು ಕಳುಹಿಸದೆ ತನ್ನ ಹೆಸರಿನಲ್ಲಿ ಪ್ರವಾದಿಸುವಂಥ ಮತ್ತು ಈ ದೇಶದಲ್ಲಿ ಕತ್ತಿಯೂ ಬರವೂ ಇರುವದಿಲ್ಲವೆಂದು ಹೇಳುವಂಥ ಪ್ರವಾದಿಗಳನ್ನು ಕುರಿತು ಹೇಳುವದೇನಂದರೆ--ಕತ್ತಿ ಯಿಂದಲೂ ಕ್ಷಾಮದಿಂದಲೂ ಆ ಪ್ರವಾದಿಗಳು ತಾವೇ ನಿರ್ಮೂಲವಾಗುತ್ತಾರೆ. ಅವರ ಪ್ರವಾದನೆಯನು ಕೇಳುವ ಜನರು ಕ್ಷಾಮದ ಮತ್ತು ಕತ್ತಿಯ ನಿಮಿತ್ತ ಯೆರೂಸಲೇಮಿನ ಬೀದಿಗಳಲ್ಲಿ ಬಿಸಾಡಲ್ಪಡುವರು; ಅವರನ್ನೂ ಹೆಂಡತಿಯರನ್ನೂ ಕುಮಾರರನ್ನೂ ಕುಮಾರ್ತೆಯರನ್ನೂ ಹೂಣಿಡುವದಕ್ಕೆ ಯಾರೂ ಇರು ವದಿಲ್ಲ; ನಾನು ಅವರ ಕೆಟ್ಟತನವನ್ನು ಅವರ ಮೇಲೆ ಹೊಯಿದು ಬಿಡುವೆನು.
- Jeremiah 23:15 ಯೆರೆಮೀಯ 23:15ಆದದರಿಂದ ಸೈನ್ಯಗಳ ಕರ್ತನು ಪ್ರವಾದಿಗಳ ವಿಷಯದಲ್ಲಿ ಹೇಳುವದೇನಂದರೆ--ಇಗೋ, ನಾನು ಅವರಿಗೆ ಮಾಚಿಪತ್ರೆಯನ್ನು ತಿನ್ನುವದಕ್ಕೆ ಕೊಡುತ್ತೇನೆ ವಿಷದ ನೀರನ್ನು ಕುಡಿಯಕೊಡುತ್ತೇನೆ; ಯೆರೂಸಲೇ ಮಿನ ಪ್ರವಾದಿಗಳ ಕಡೆಯಿಂದ ಭ್ರಷ್ಟತ್ವವು ದೇಶಕ್ಕೆಲ್ಲಾ ಹರಡಿದೆ.
- Matthew 24:24 ಮತ್ತಾಯನು 24:24ಯಾಕಂದರೆ ಸುಳ್ಳು ಕ್ರಿಸ್ತರು ಮತ್ತು ಸುಳ್ಳು ಪ್ರವಾದಿಗಳು ಎದ್ದು ಸಾಧ್ಯವಾದರೆ ಆಯಲ್ಪಟ್ಟವರನ್ನು ಸಹ ಮೋಸಗೊಳಿಸುವಂತೆ ದೊಡ್ಡ ಸೂಚಕ ಕಾರ್ಯ ಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡಿ ತೋರಿಸು ವರು.
- Jeremiah 8:10–12 ಯೆರೆಮೀಯ 8:10–12ಆದದರಿಂದ ಅವರ ಹೆಂಡತಿಯರನ್ನು ಬೇರೊಬ್ಬರಿಗೂ ಅವರ ಹೊಲಗಳನ್ನು ಸ್ವಾಧೀನಮಾಡಿಕೊಳ್ಳುವವರಿಗೂ ನಾನು ಕೊಡುವೆನು; ಚಿಕ್ಕವನು ಮೊದಲುಗೊಂಡು ದೊಡ್ಡವನ ತನಕ ಅವರೆಲ್ಲರು ಲೋಭಕ್ಕೆ ಒಪ್ಪಿಸಿಕೊಟ್ಟಿದ್ದಾರೆ. ಪ್ರವಾದಿ ಮೊದಲುಗೊಂಡು ಯಾಜಕನ ವರೆಗೂ ಪ್ರತಿ ಯೊಬ್ಬನು ಮೋಸದಿಂದ ವರ್ತಿಸುತ್ತಾನೆ. ಅವರು ನನ್ನ ಜನರ ಮಗಳ ಗಾಯವನ್ನು ಸ್ವಲ್ಪವಾಗಿ ಸ್ವಸ್ಥಮಾಡಿ ಸಮಾಧಾನವಿಲ್ಲದಿರುವಾಗ--ಸಮಾಧಾನ, ಸಮಾ ಧಾನ ಎಂದನ್ನುತ್ತಾರೆ. ಅಸಹ್ಯವಾದದ್ದನ್ನು ಮಾಡಿದ ಮೇಲೆ ಅವರು ನಾಚಿಕೆಪಟ್ಟರೋ? ಇಲ್ಲ, ಸ್ವಲ್ಪ ವಾದರೂ ನಾಚಿಕೆಪಡಲಿಲ್ಲ; ಇಲ್ಲವೆ ಅವರು ಲಜ್ಜೆ ಯನ್ನು ಅರಿಯರು. ಆದದರಿಂದ ಬೀಳುವವರೊಳಗೆ ಅವರು ಬೀಳುವರು; ಅವರು ವಿಚಾರಿಸಲ್ಪಡುವ ಕಾಲದಲ್ಲಿ ಕೆಳಗೆ ಹಾಕಲ್ಪಡು ವರು ಎಂದು ಕರ್ತನು ಹೇಳುತ್ತಾನೆ.
- Ezekiel 14:3–10 ಯೆಹೆಜ್ಕೇಲನು 14:3–10ಮನುಷ್ಯಪುತ್ರನೇ, ಈ ಮನು ಷ್ಯರು ತಮ್ಮ ವಿಗ್ರಹಗಳನ್ನು ತಮ್ಮ ಹೃದಯಗಳಲ್ಲೇ ಸ್ಥಾಪಿಸಿ ತಮ್ಮ ಅಕ್ರಮವಾದ ಎಡೆತಡೆಗಳನ್ನು ತಮ್ಮ ಮುಖದ ಮುಂದೆಯೇ ಇಟ್ಟುಕೊಂಡಿದ್ದಾರೆ. ಇವರೆಲ್ಲ ರನ್ನೂ ನಾನು ವಿಚಾರಿಸಬೇಕೇ? ಆದದರಿಂದ ನೀನು ಅವರ ಸಂಗಡ ಮಾತನಾಡಿ ಹೇಳಬೇಕಾದದ್ದೇನಂದರೆ --ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇಸ್ರಾ ಯೇಲಿನ ಮನೆತನದವರ ಪ್ರತಿಯೊಬ್ಬನೂ ತಮ್ಮ ವಿಗ್ರಹಗಳನ್ನು ಹೃದಯಗಳಲ್ಲಿ ನೆಲೆಗೊಳಿಸಿ ಅಕ್ರಮದ ಎಡೆತಡೆಗಳನ್ನು ತಮ್ಮ ಮುಂದೆ ಇಟ್ಟುಕೊಂಡು ಪ್ರವಾ ದಿಯ ಬಳಿಗೆ ಬರುವ ಮನುಷ್ಯನು ಯಾವನೋ ಅವನಿಗೆ ಕರ್ತನಾದ ನಾನು ಅವರ ವಿಗ್ರಹಗಳ ಸಮೂ ಹಕ್ಕೆ ತಕ್ಕ ಹಾಗೆ ಉತ್ತರ ಕೊಡುತ್ತೇನೆ. ಹೀಗೆ ನಾನು ಇಸ್ರಾಯೇಲಿನ ಮನೆತನ ದವರನ್ನು ಅವರ ಸ್ವಂತ ಹೃದಯದಿಂದಲೇ ಸಿಕ್ಕಿಸಿ ಹಿಡಿಯುತ್ತೇನೆ. ಯಾಕಂದರೆ ಅವರೆಲ್ಲರೂ ತಮ್ಮ ವಿಗ್ರಹಗಳ ಮುಖಾಂತರ ನನಗೆ ಅನ್ಯರಾದರು. ಇಸ್ರಾಯೇಲಿನ ಮನೆತನದವರಿಗೆ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಮಾನ ಸಾಂತರಪಟ್ಟು ನಿಮ್ಮ ವಿಗ್ರಹಗಳನ್ನು ಬಿಟ್ಟು ನೀವಾ ಗಿಯೇ ತಿರುಗಿ ಕೊಳ್ಳಿರಿ; ನಿಮ್ಮ ಅಸಹ್ಯವಾದವುಗಳ ನ್ನೆಲ್ಲಾ ಬಿಟ್ಟು ನಿಮ್ಮ ಮುಖಗಳನ್ನು ತಿರುಗಿಸಿರಿ. ನನಗೆ ತನ್ನನ್ನು ಅನ್ಯನನ್ನಾಗಿ ಮಾಡಿಕೊಂಡು ತನ್ನ ಹೃದಯದಲ್ಲಿ ವಿಗ್ರಹಗಳನ್ನು ಸ್ಥಾಪಿಸಿ ಅಕ್ರಮದ ಎಡೆತಡೆಯನ್ನು ತನ್ನ ಮುಖದ ಮುಂದೆ ಇಟ್ಟುಕೊಂಡು ಪ್ರವಾದಿಯ ಬಳಿಗೆ ನನ್ನ ವಿಷಯವಾಗಿ ವಿಚಾರಿಸಲು ಬರುವ ಪ್ರತಿಯೊಬ್ಬ ಇಸ್ರಾಯೇಲಿನ ಮನೆತನದವರಲ್ಲಿಯೂ ಇಸ್ರಾಯೇಲಿನಲ್ಲಿ ತಂಗುವ ಅನ್ಯರಲ್ಲಿಯೂ ಪ್ರತಿಯೊ ಬ್ಬನಿಗೂ ಕರ್ತನಾದ ನಾನೇ ಉತ್ತರ ಕೊಡುತ್ತೇನೆ. ನಾನು ಆ ಮನುಷ್ಯನ ಮೇಲೆ ಉಗ್ರಕೋಪಗೊಂಡು ಅವು ನನ್ನ ಗುರುತನ್ನಾಗಿಯೂ ಗಾದೆಯನ್ನಾಗಿಯೂ ಮಾಡಿಕೊಂಡು ನನ್ನ ಜನರ ಮಧ್ಯದೊಳಗಿಂದ ಕಡಿದು ಬಿಡುವೆನು; ನಾನೇ ಕರ್ತನೆಂದು ತಿರಿಗಿ ತಿಳಿದುಕೊಳ್ಳು ವಿರಿ. ಪ್ರವಾದಿಯು ಮೋಸಹೋಗಿ ವಾಕ್ಯವನ್ನು ಹೇಳಿದರೆ ಕರ್ತನಾದ ನಾನೇ ಆ ಪ್ರವಾದಿಯನ್ನು ಮೋಸಗೊಳಿಸಿರುತ್ತೇನೆ; ನಾನು ನನ್ನ ಕೈಯನ್ನು ಅವನ ಮೇಲೆ ಚಾಚಿ ನನ್ನ ಜನರಾದ ಇಸ್ರಾಯೇಲ್ಯರ ಮಧ್ಯ ದೊಳಗಿಂದ ನಾಶಪಡಿಸುವೆನು. ಅವರು ತಮ್ಮ ಅಕ್ರಮದ ದಂಡನೆಯನ್ನು ಹೊರುವರು; ವಿಚಾರಿಸು ವವನ ದಂಡನೆಯು ಹೇಗೋ ಹಾಗೆಯೇ ಪ್ರವಾ ದನೆಯ ದಂಡನೆಯೂ ಇರುವದು.
- Jeremiah 29:9 ಯೆರೆಮೀಯ 29:9ಅವರು ನಿಮಗೆ ನನ್ನ ಹೆಸರಿನಲ್ಲಿ ಸುಳ್ಳಾಗಿ ಪ್ರವಾದಿಸುತ್ತಾರೆ; ನಾನು ಅವರನ್ನು ಕಳುಹಿಸಲಿಲ್ಲವೆಂದು ಕರ್ತನು ಅನ್ನುತ್ತಾನೆ.
- 2 Timothy 2:17–19 2 ತಿಮೊಥೆಯನಿಗೆ 2:17–19ಅವರ ಮಾತು ವ್ರಣವ್ಯಾಧಿಯಂತೆ ತಿನ್ನುವದು; ಅವರಲ್ಲಿ ಹುಮೆನಾಯನೂ ಪಿಲೇತನೂ ಇದ್ದಾರೆ; ಅವರು ಪುನರುತ್ಥಾನವು ಆಗಲೇ ಆಗಿಹೋಯಿ ತೆಂದು ಹೇಳುತ್ತಾ ಸತ್ಯಭ್ರಷ್ಠರಾಗಿ ಕೆಲವರ ನಂಬಿಕೆ ಯನ್ನು ಕೆಡಿಸುವವರಾಗಿದ್ದಾರೆ. ಆದರೂ ದೇವರ ಅಸ್ತಿವಾರವು ಖಂಡಿತವಾಗಿ ನಿಲ್ಲುತ್ತದೆ. ಅದರ ಮೇಲೆ--ತನ್ನವರು ಯಾರಾರೆಂಬದನ್ನು ಕರ್ತನು ತಿಳಿದಿದ್ದಾನೆಂತಲೂ ಮತ್ತು ಕ್ರಿಸ್ತನ ನಾಮವನ್ನು ಹೇಳಿಕೊಳ್ಳುವವರೆಲ್ಲರು ದುಷ್ಟತ್ವವನ್ನು ಬಿಟ್ಟುಬಿಡ ಬೇಕೆಂತಲೂ ಮುದ್ರೆ ಉಂಟು.
- Jeremiah 29:22–23 ಯೆರೆಮೀಯ 29:22–23ಬಾಬೆಲಿನಲ್ಲಿರುವ ಯೆಹೂದದ ಸೆರೆಯವರೆಲ್ಲರೂ ಅವರಿಂದ ಶಾಪವನ್ನು ತಕ್ಕೊಂಡು--ಬಾಬೆಲಿನ ಅರಸನು ಬೆಂಕಿಯಲ್ಲಿ ಸುಟ್ಟುಬಿಟ್ಟ ಚಿದ್ಕೀಯನ ಹಾಗೆಯೂ ಅಹಾಬನ ಹಾಗೆಯೂ ಕರ್ತನು ನಿನಗೆ ಮಾಡಲಿ ಎಂದು ಹೇಳುವರು ಅವರು ತಮ್ಮ ನೆರೆಯವರ ಹೆಂಡತಿಯರ ಸಂಗಡ ವ್ಯಭಿಚಾರ ಮಾಡಿ ನನ್ನ ಹೆಸರಿನಲ್ಲಿ ಸುಳ್ಳಾಗಿ ನಾನು ಅವರಿಗೆ ಆಜ್ಞಾಪಿಸದೆ ಇದ್ದ ಮಾತುಗಳನ್ನಾಡಿ ಇಸ್ರಾಯೇಲಿನಲ್ಲಿ ನೀಚತನವನ್ನು ನಡಿಸಿದರು; ನಾನೇ ಅದನ್ನು ತಿಳಿದು ಸಾಕ್ಷಿಯಾಗಿದ್ದೇನೆಂದು ಕರ್ತನು ಅನ್ನುತ್ತಾನೆ.
- Jeremiah 23:21 ಯೆರೆಮೀಯ 23:21ನಾನು ಪ್ರವಾದಿಗಳನ್ನು ಕಳುಹಿಸಲಿಲ್ಲ, ಆದಾಗ್ಯೂ ಅವರು ಓಡಿದರು; ನಾನು ಅವರ ಸಂಗಡ ಮಾತನಾಡಲಿಲ್ಲ ಆದಾಗ್ಯೂ ಪ್ರವಾದಿಸಿದರು.