Jeremiah · chapter 28 · verse 2
Jeremiah 28:2 in Kannada
ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನಾನು ಬಾಬೆಲಿನ ಅರಸನ ನೊಗವನ್ನು ಮುರಿದಿದ್ದೇನೆ.
Israayelina devaraada sainyagala kartanu heege heluttaane--naanu baabelina arasana nogavannu murididdene.
Jeremiah 28:2 in English
- King James Version (KJV)
- Thus speaketh the LORD of hosts, the God of Israel, saying, I have broken the yoke of the king of Babylon.
- World English Bible (WEB)
- “The LORD of Armies, the God of Israel, says, ‘I have broken the yoke of the king of Babylon.
- American Standard Version (ASV)
- Thus speaketh Jehovah of hosts, the God of Israel, saying, I have broken the yoke of the king of Babylon.
- Bible in Basic English (BBE)
- These are the words of the Lord of armies, the God of Israel: By me the yoke of the king of Babylon has been broken.
- Darby Translation (DBY)
- Thus speaketh Jehovah of hosts, the God of Israel, saying, I have broken the yoke of the king of Babylon.
- Webster's Bible (WBS)
- Thus speaketh the LORD of hosts, the God of Israel, saying, I have broken the yoke of the king of Babylon.
- Young's Literal Translation (YLT)
- 'Thus spake Jehovah of Hosts, God of Israel, saying, I have broken the yoke of the king of Babylon;
Read in context
- 1ಅದೇ ವರುಷದಲ್ಲಿ ಯೆಹೂದದ ಅರಸನಾದ ಚಿದ್ಕೀಯನ ಆಳಿಕೆಯ ಪ್ರಾರಂಭ ದಲ್ಲಿ ನಾಲ್ಕನೇ ವರುಷದ ಐದನೇ ತಿಂಗಳಲ್ಲಿ ಗಿಬ್ಯೋನಿ ನವನಾದ ಅಜ್ಜೂರನ ಮಗನಾದ ಹನನ್ಯನೆಂಬ ಪ್ರವಾ ದಿಯು ಕರ್ತನ ಆಲಯದಲ್ಲಿ ಯಾಜಕರ ಮುಂದೆಯೂ ಜನರೆಲ್ಲರ ಮುಂದೆಯೂ ನನಗೆ ಹೇಳಿದ್ದೇನಂದರೆ --
- 2ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನಾನು ಬಾಬೆಲಿನ ಅರಸನ ನೊಗವನ್ನು ಮುರಿದಿದ್ದೇನೆ.
- 3ಎರಡು ವರುಷದೊಳ ಗಾಗಿ ನಾನು ಬಾಬೆಲಿನ ಅರಸನಾದ ನೆಬೂಕ ದ್ನೆಚ್ಚರನು ಈ ಸ್ಥಳದಿಂದ ತಕ್ಕೊಂಡು ಬಾಬೆಲಿಗೆ ಒಯ್ದ ಕರ್ತನ ಆಲಯದ ಪಾತ್ರೆಗಳನ್ನೆಲ್ಲಾ ತಿರುಗಿಸುವೆನು.
- 4ಯೆಹೂ ದದ ಅರಸನಾದ ಯೆಹೋಯಾಕೀಮನ ಮಗನಾದ ಯೆಕೊನ್ಯನನ್ನೂ ಬಾಬೆಲಿಗೆ ಹೋದ ಯೆಹೂದದ ಸೆರೆಯವರೆಲ್ಲರನ್ನೂ ನಾನು ತಿರುಗಿ ಈ ಸ್ಥಳಕ್ಕೆ ಬರ ಮಾಡುವೆನೆಂದು ಕರ್ತನು ಅನ್ನುತ್ತಾನೆ; ಬಾಬೆಲಿನ ಅರಸನ ನೊಗವನ್ನು ಮುರಿದುಬಿಡುವೆನು.
Cross references
- Jeremiah 27:2–12 ಯೆರೆಮೀಯ 27:2–12ಕರ್ತನು ನನಗೆ ಹೇಳಿದ್ದೇನಂದರೆ--ಬಂಧನಗಳನ್ನೂ ನೊಗಗಳನ್ನೂ ಮಾಡಿಸಿಕೊಂಡು ನಿನ್ನ ಕುತ್ತಿಗೆಯ ಮೇಲೆ ಇಡು. ಅವುಗಳನ್ನು ಎದೋಮಿನ ಅರಸನಿಗೂ ಮೋವಾಬಿನ ಅರಸನಿಗೂ ಅಮ್ಮೋನ್ಯರ ಅರಸನಿಗೂ ತೂರಿನ ಅರಸನಿಗೂ ಚೀದೋನಿನ ಅರಸನಿಗೂ ಯೆಹೂದದ ಅರಸನಾದ ಚಿದ್ಕೀಯನ ಬಳಿಗೆ ಬರುವ ಸುದ್ದಿಗಾರರ ಕೈಯಿಂದ ಕಳುಹಿಸು. ಅವರು ತಮ್ಮ ಯಜಮಾನರಿಗೆ ಹೇಳುವದಕ್ಕೆ ನೀನು ಅಪ್ಪಣೆಕೊಡತಕ್ಕದ್ದೇನಂದರೆ --ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೇಳುವದೇನಂದರೆ--ನೀವು ನಿಮ್ಮ ಯಜಮಾನರಿಗೆ ಹೀಗೆ ಹೇಳಬೇಕು-- ನಾನೇ ಭೂಮಿಯನ್ನೂ ಭೂಮಿಯ ಮೇಲಿರುವ ಮನುಷ್ಯರನ್ನೂ ಮೃಗಗಳನ್ನೂ ನನ್ನ ಮಹಾಬಲದಿಂದ ನಾನು ಕೈಚಾಚಿ ಉಂಟು ಮಾಡಿ ನನಗೆ ಸರಿತೋಚಿದವರಿಗೆ ಅದನ್ನು ಕೊಟ್ಟಿ ದ್ದೇನೆ. ಈಗ ನಾನು ಈ ದೇಶಗಳನ್ನೆಲ್ಲಾ ಬಾಬೆಲಿನ ಅರಸನಾದ ನನ್ನ ಸೇವಕನಾದ ನೆಬೂಕದ್ನೆಚ್ಚರನ ಕೈಯಲ್ಲಿ ಕೊಟ್ಟಿದ್ದೇನೆ; ಭೂಮಿಯ ಮೃಗಗಳನ್ನು ಸಹಾ ಅವ ನಿಗೆ ಸೇವೆಮಾಡುವ ಹಾಗೆ ಅವನಿಗೆ ಕೊಟ್ಟಿದ್ದೇನೆ. ಜನಾಂಗಗಳೆಲ್ಲಾ ಅವನಿಗೂ ಅವನ ಮಗನಿಗೂ ಅವನ ಮಗನ ಮಗನಿಗೂ ಅವನ ದೇಶಕ್ಕೆ ಕಾಲ ಸವಿಾಪಿಸುವ ವರೆಗೂ ಸೇವಿಸುವವು. ಆಮೇಲೆ ಬಹಳ ಜನಾಂಗಗಳೂ ದೊಡ್ಡ ಅರಸರೂ ಅವನಿಂದ ಸೇವೆ ಮಾಡಿಸಿಕೊಳ್ಳುವರು. ಬಾಬೆಲಿನ ಅರಸನಾದ ನೆಬೂಕ ದ್ನೇಚ್ಚರನಿಗೆ ಸೇವೆಮಾಡದೆ ಬಾಬೆಲಿನ ಅರಸನ ನೊಗಕ್ಕೆ ತನ್ನ ಕುತ್ತಿಗೆಯನ್ನು ಕೊಡದೆ ಇರುವ ಜನಾಂಗವೂ ರಾಜ್ಯವೂ ಯಾವದೋ ಆ ಜನಾಂಗವನ್ನು ನಾನು ಕತ್ತಿಯಿಂದಲೂ ಕ್ಷಾಮದಿಂದಲೂ ಜಾಡ್ಯದಿಂದಲೂ ಇವನ ಕೈಯಿಂದ ಅವುಗಳನ್ನು ನಾಶಮಾಡಿಬಿಡುವ ವರೆಗೆ ದಂಡಿಸುವೆನೆಂದು ಕರ್ತನು ಅನ್ನುತ್ತಾನೆ. ಆದ ದರಿಂದ ನೀವು ಬಾಬೆಲಿನ ಅರಸನನ್ನು ಸೇವಿಸಬೇಡಿ ರೆಂದು ನಿಮಗೆ ಹೇಳುವ ನಿಮ್ಮ ಪ್ರವಾದಿಗಳಿಗೂ ಕಣಿಹೇಳುವವರಿಗೂ ಸ್ವಪ್ನಗಾರರಿಗೂ ಮಂತ್ರದ ವರಿಗೂ ನಿಮ್ಮ ಶೂನ್ಯಗಾರರಿಗೂ ಕಿವಿಗೊಡಬೇಡಿರಿ. ನಿಮ್ಮನ್ನು ನಿಮ್ಮ ದೇಶದಿಂದ ದೂರಮಾಡುವ ಹಾಗೆಯೂ ನಾನು ನಿಮ್ಮನ್ನು ಓಡಿಸಿ ಬಿಟ್ಟಮೇಲೆ ನೀವು ನಾಶವಾಗುವ ಹಾಗೆಯೂ ಅವರು ನಿಮಗೆ ಸುಳ್ಳನ್ನು ಪ್ರವಾದಿಸುತ್ತಾರೆ. ಆದರೆ ಬಾಬೆಲಿನ ಅರಸನ ನೊಗದಲ್ಲಿ ತನ್ನ ಕುತ್ತಿಗೆಯನ್ನು ಸೇರಿಸಿ ಅವನಿಗೆ ಸೇವೆ ಮಾಡುವ ಜನಾಂಗವು ಯಾವದೋ ಅದನ್ನು ಸ್ವಂತ ದೇಶದಲ್ಲಿ ನಿಲ್ಲಗೊಡಿಸುತ್ತೇನೆಂದು ಕರ್ತನು ಅನ್ನುತ್ತಾನೆ; ಅವರು ಅದನ್ನು ಬೇಸಾಯಮಾಡಿ ಅದರಲ್ಲಿ ವಾಸಮಾಡುವರು. ಆಗ ನಾನು ಯೆಹೂದದ ಅರಸನಾದ ಚಿದ್ಕೀ ಯನ ಸಂಗಡ ಈ ವಾಕ್ಯಗಳ ಪ್ರಕಾರ ಮಾತನಾಡಿ ದೆನು--ಬಾಬೆಲಿನ ಅರಸನ ನೊಗಕ್ಕೆ ನಿಮ್ಮ ಹೆಗಲು ಗಳನ್ನು ಕೊಟ್ಟು ಅವನಿಗೂ ಅವನ ಜನರಿಗೂ ಸೇವೆಮಾಡಿ ಬದುಕಿರಿ.
- Micah 3:11 ಮೀಕ 3:11ಅದರ ಮುಖ್ಯಸ್ಥರು ಲಂಚಕ್ಕೆ ನ್ಯಾಯತೀರಿಸುತ್ತಾರೆ; ಅದರ ಯಾಜಕರು ಸಂಬಳಕ್ಕೆ ಬೋಧಿಸುತ್ತಾರೆ; ಅದರ ಪ್ರವಾ ದಿಗಳು ಹಣಕ್ಕೆ ಶಕುನ ಹೇಳುತ್ತಾರೆ; ಆದರೂ ಕರ್ತನ ಮೇಲೆ ಆತುಕೊಂಡು--ಕರ್ತನು ನಮ್ಮ ಮಧ್ಯದಲ್ಲಿ ಇಲ್ಲವೋ? ನಮ್ಮ ಮೇಲೆ ಕೇಡು ಬರುವದಿಲ್ಲ ಅನ್ನು ತ್ತಾರೆ.ಆದಕಾರಣ ನಿಮ್ಮ ನಿಮಿತ್ತವೇ, ಚೀಯೋನು ಹೊಲದ ಹಾಗೆ ಉಳಲ್ಪಡುವದು; ಯೆರೂಸಲೇಮು ದಿಬ್ಬೆಗಳಾಗುವದು, ಆಲಯದ ಪರ್ವತವು ಅಡವಿಯ ಉನ್ನತ ಸ್ಥಳಗಳ ಹಾಗಾಗುವದು.
- Ezekiel 13:5–16 ಯೆಹೆಜ್ಕೇಲನು 13:5–16ಕರ್ತನ ದಿನದಲ್ಲಿ ಯುದ್ಧಕ್ಕೆ ನಿಲ್ಲ ಬೇಕೆಂದು ಇಸ್ರಾಯೇಲ್ ಮನೆತನದವರಿಗಾಗಿ ಬೇಲಿ ಯನ್ನು ಕಟ್ಟಲಿಲ್ಲ, ನೀವು ಪೌಳಿಯ ಒಡಕುಗಳನ್ನೇರ ಲಿಲ್ಲ. ಅವರು ವ್ಯರ್ಥವಾದದ್ದನ್ನೂ ಸುಳ್ಳು ಭವಿಷ್ಯ ವಾದದ್ದನ್ನೂ ನೋಡಿದ್ದಾರೆಂದು ಕರ್ತನು ಹೇಳುತ್ತಾನೆ; ಆದರೆ ಕರ್ತನು ಅವರನ್ನು ಕಳುಹಿಸಲಿಲ್ಲ; ತಾವು ನುಡಿದ ಮಾತು ಬೇರೆಯವರು ನಿರೀಕ್ಷಿಸುವಂತೆ ಮಾಡುತ್ತಾರೆ. ವ್ಯರ್ಥ ದರ್ಶನವನ್ನು ನೋಡಿರುವಿ ರಲ್ಲಾ. ಸುಳ್ಳಾದ ಭವಿಷ್ಯವನ್ನು ಹೇಳಿದ್ದೀರಲ್ಲಾ. ನಾನು ಮಾತನಾಡದೆ ಇದ್ದರೂ--ಕರ್ತನೇ ಹೇಳಿದನೆಂದು ಹೇಳಿದ್ದಿರಲ್ಲಾ. ಆದದರಿಂದ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ನೀವು ವ್ಯರ್ಥವಾಗಿ ಮಾತನಾಡಿದ್ದರಿಂದಲೂ ಸುಳ್ಳನ್ನು ಕಂಡದ್ದರಿಂದಲೂ ಇಗೋ, ನಾನು ನಿಮಗೆ ವಿರೋಧವಾಗಿರುವೆನೆಂದು ದೇವರಾದ ಕರ್ತನು ಹೇಳುತ್ತಾನೆ. ವ್ಯರ್ಥವಾದದ್ದನ್ನು ದರ್ಶಿಸಿ, ಸುಳ್ಳು ಭವಿಷ್ಯಗಳನ್ನು ಹೇಳುವ ಪ್ರವಾದಿಗಳ ಮೇಲೆ ನನ್ನ ಕೈ ಮಾಡುವೆನು. ಅವರು ನನ್ನ ಜನರ ಸಭೆಯಲ್ಲಿ ಇರುವದೂ ಇಲ್ಲ, ಇಸ್ರಾಯೇಲನ ಮನೆತನದವರ ಪಟ್ಟಿಯಲ್ಲಿ ಬರೆಯಲ್ಪಡುವದೂ ಇಲ್ಲ; ಇಸ್ರಾಯೇಲಿನ ದೇಶದಲ್ಲಿ ಪ್ರವೇಶಿಸುವದೂ ಇಲ್ಲ; ನಾನೇ ದೇವರಾದ ಕರ್ತನೆಂದು ನೀವು ತಿಳಿದುಕೊಳ್ಳುವಿರಿ. ಸಮಾಧಾನ ವಿಲ್ಲದಿರುವಾಗ ಅವರು ಸಮಾಧಾನವೆಂದು ಹೇಳಿದ್ದರಿಂ ದಲೂ ಮತ್ತು ಇಗೋ, ಒಬ್ಬನು ಗೋಡೆಯನ್ನು ಕಟ್ಟಿದರೆ ಮತ್ತೊಬ್ಬನು ಅದಕ್ಕೆ ಸುಣ್ಣ ಹಚ್ಚಿದ್ದರಿಂದಲೂ ಸುಣ್ಣ ಹಚ್ಚುತ್ತಿರುವವನಿಗೆ--ಅದು ಬೀಳುವದೆಂದು ಹೇಳು; ಅಲ್ಲಿ ವಿಪರೀತ ಮಳೆ ಬರುವದು ಮತ್ತು ದೊಡ್ಡ ಕಲ್ಮಳೆಯು ಬೀಳುವದು; ಬಿರುಗಾಳಿಯು ಅದನ್ನು ಸೀಳಿಬಿಡುವದು. ಇಗೋ, ಗೋಡೆ ಬಿದ್ದು ಹೋದಮೇಲೆ--ನೀವು ಹಚ್ಚಿದ ಸುಣ್ಣ ಎಲ್ಲಿ ಎಂದು ನಿಮಗೆ ಹೇಳುವರಲ್ಲಾ? ಆದದರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಅದನ್ನು ನನ್ನ ಉರಿಯಲ್ಲಿ ಬಿರುಗಾಳಿಯಿಂದ ಸೀಳಿಬಿಡುವೆನು. ಅದನ್ನು ನಾಶ ಪಡಿಸುವ ಹಾಗೆ ನನ್ನ ಕೋಪದಿಂದ ವಿಪರೀತ ಮಳೆಯೂ ನನ್ನ ಉರಿಯಿಂದ ಕಲ್ಮಳೆಯ ಕಲ್ಲುಗಳೂ ಸುರಿಯುವವು; ನೀವು ಸುಣ್ಣ ಬಳಿದ ಗೋಡೆಯನ್ನು ನಾನು ಈಗ ಕೆಡವಿ ನೆಲಸಮ ಮಾಡಿ ಅದರ ಅಸ್ತಿವಾರ ವನ್ನು ಕಾಣದ ಹಾಗೆ ಮಾಡುವೆನು. ಅದು ಬಿದ್ದು ಹೋಗುವದು, ನೀವು ಅದರಲ್ಲಿ ನಾಶ ಮಾಡಲ್ಪಡು ವಿರಿ. ಆಗ ನಾನೇ ಕರ್ತನೆಂದು ನಿಮಗೆ ತಿಳಿದು ಬರುವದು. ಹೀಗೆ ನಾನು ಗೋಡೆಯಲ್ಲಿಯೂ ಅದಕ್ಕೆ ಸುಣ್ಣ ಬಳಿದವರಲ್ಲಿಯೂ ರೋಷವನ್ನು ತೀರಿಸಿ ಕೊಂಡು ಇನ್ನು ಗೋಡೆಯಾದರೂ ಅದಕ್ಕೆ ಸುಣ್ಣ ಹಚ್ಚಿದವರಾದರೂ ಇಲ್ಲವೆಂದು ಯೆರೂಸಲೇಮಿನ ವಿಷಯ ಪ್ರವಾದಿಸಿ ಸಮಾಧಾನವಿಲ್ಲದಿರುವಾಗ ಅದಕ್ಕೆ ಸಮಾಧಾನದ ದರ್ಶನವನ್ನು ಕಂಡ ಇಸ್ರಾಯೇಲಿನ ಪ್ರವಾದಿಗಳು ನಿಮಗೆ ಇಲ್ಲವೆಂದು ದೇವರಾದ ಕರ್ತನು ಹೇಳುತ್ತಾನೆ.