Jeremiah · chapter 27 · verse 2
Jeremiah 27:2 in Kannada
ಕರ್ತನು ನನಗೆ ಹೇಳಿದ್ದೇನಂದರೆ--ಬಂಧನಗಳನ್ನೂ ನೊಗಗಳನ್ನೂ ಮಾಡಿಸಿಕೊಂಡು ನಿನ್ನ ಕುತ್ತಿಗೆಯ ಮೇಲೆ ಇಡು.
Kartanu nanage heliddenandare--bandhanagalannoo nogagalannoo maadisikondu ninna kuttigeya mele idu.
Jeremiah 27:2 in English
- King James Version (KJV)
- Thus saith the LORD to me; Make thee bonds and yokes, and put them upon thy neck,
- World English Bible (WEB)
- the LORD says to me: “Make bonds and bars, and put them on your neck.
- American Standard Version (ASV)
- Thus saith Jehovah to me: Make thee bonds and bars, and put them upon thy neck;
- Bible in Basic English (BBE)
- This is what the Lord has said to me: Make for yourself bands and yokes and put them on your neck;
- Darby Translation (DBY)
- Thus hath Jehovah said unto me: Make thee bonds and yokes, and put them upon thy neck;
- Webster's Bible (WBS)
- Thus saith the LORD to me; Make for thee bonds and yokes, and put them upon thy neck,
- Young's Literal Translation (YLT)
- 'Thus said Jehovah unto me, Make to thee bands and yokes,
Read in context
- 1ಯೆಹೂದ ಅರಸನಾದ ಯೋಷೀಯನ ಮಗನಾದ ಯೆಹೋಯಾಕೀಮನ ಆಳಿ ಕೆಯ ಪ್ರಾರಂಭದಲ್ಲಿ ಈ ವಾಕ್ಯವು ಕರ್ತನಿಂದ ಯೆರೆ ವಿಾಯನಿಗೆ ಬಂತು ಯಾವದಂದರೆ
- 2ಕರ್ತನು ನನಗೆ ಹೇಳಿದ್ದೇನಂದರೆ--ಬಂಧನಗಳನ್ನೂ ನೊಗಗಳನ್ನೂ ಮಾಡಿಸಿಕೊಂಡು ನಿನ್ನ ಕುತ್ತಿಗೆಯ ಮೇಲೆ ಇಡು.
- 3ಅವುಗಳನ್ನು ಎದೋಮಿನ ಅರಸನಿಗೂ ಮೋವಾಬಿನ ಅರಸನಿಗೂ ಅಮ್ಮೋನ್ಯರ ಅರಸನಿಗೂ ತೂರಿನ ಅರಸನಿಗೂ ಚೀದೋನಿನ ಅರಸನಿಗೂ ಯೆಹೂದದ ಅರಸನಾದ ಚಿದ್ಕೀಯನ ಬಳಿಗೆ ಬರುವ ಸುದ್ದಿಗಾರರ ಕೈಯಿಂದ ಕಳುಹಿಸು.
- 4ಅವರು ತಮ್ಮ ಯಜಮಾನರಿಗೆ ಹೇಳುವದಕ್ಕೆ ನೀನು ಅಪ್ಪಣೆಕೊಡತಕ್ಕದ್ದೇನಂದರೆ --ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೇಳುವದೇನಂದರೆ--ನೀವು ನಿಮ್ಮ ಯಜಮಾನರಿಗೆ ಹೀಗೆ ಹೇಳಬೇಕು--
Cross references
- Amos 7:1 ಆಮೋಸ 7:1ದೇವರಾದ ಕರ್ತನು ನನಗೆ ಹೀಗೆ ತೋರಿಸಿದನು; ಇಗೋ, ಹಿಂಗಾರು ಮಳೆ ಬಿದ್ದು ಪೈರು ಸೊಂಪಾಗುವದಕ್ಕೆ ಆರಂಭವಾದಾಗ ಅಂದರೆ, ರಾಜಾದಾಯದ ಹುಲ್ಲನ್ನು ಕೊಯ್ದ ಮೇಲೆ ಬೆಳೆಯು ವೃದ್ಧಿಯಾಗುತ್ತಿದ್ದಾಗ ಇಗೋ, ಕರ್ತನು ಮಿಡತೆಗಳನ್ನು ಉಂಟುಮಾಡಿದನು.
- Ezekiel 4:1–5 ಯೆಹೆಜ್ಕೇಲನು 4:1–5ಇದಲ್ಲದೆ ಮನುಷ್ಯಪುತ್ರನೇ, ನೀನು ಒಂದು ಹಂಚನ್ನು ತೆಗೆದುಕೊಂಡು ನಿನ್ನ ಮುಂದಿಟ್ಟು ಅದರ ಮೇಲೆ ಯೆರೂಸಲೇಮ್ ನಗರದ ನಕ್ಷೆಯನ್ನು ಬರೆ. ಅದಕ್ಕೆ ಮುತ್ತಿಗೆ ಹಾಕಿ ಎದುರಾಗಿ ಒಂದು ಕೋಟೆಯನ್ನು ಕಟ್ಟು. ಇದಲ್ಲದೆ ಎದುರಾಗಿ ಒಂದು ದಿಬ್ಬವನ್ನು ಕಟ್ಟು; ಎದುರಾಗಿ ಒಂದು ದಂಡನ್ನು ಇರಿಸಿ ವಿರೋಧವಾಗಿ ಸುತ್ತಲೂ ಭಿತ್ತಿಭೇದಕ ಮಾಡು ವಂಥ ಆಯುಧಗಳನ್ನು ಇಡು. ಇದಾದ ಮೇಲೆ ನೀನು ಒಂದು ಕಬ್ಬಿಣದ ತಟ್ಟೆಯನ್ನು ತೆಗೆದುಕೊಂಡು ಅದನ್ನು ಕಬ್ಬಿಣದ ಗೋಡೆಯೆಂದು ತಿಳಿದು ನಿನಗೂ ನಗರಕ್ಕೂ ಮಧ್ಯದಲ್ಲಿ ಇರಿಸು. ಆಮೇಲೆ ಅದಕ್ಕೆ ಎದುರಾಗಿ ನಿನ್ನ ಮುಖವನ್ನು ಇಡು. ಆಗ ಅದು ಮುತ್ತಲ್ಪಡುವದು; ನೀನು ಅದಕ್ಕೆ ಎದುರಾಗಿ ಮುತ್ತಿ ದಂತಾಗುವದು. ಇದು ಇಸ್ರಾಯೇಲ್ ಮನೆತನದ ಗುರುತಾಗಿರುವದು. ನೀನು ನಿನ್ನ ಎಡಪಾರ್ಶ್ವದಲ್ಲಿ ಮಲಗಿ ಇಸ್ರಾ ಯೇಲ್ ವಂಶದವರ ಅಕ್ರಮಗಳನ್ನು ಅದರ ಮೇಲಿಡ ಬೇಕು; ನೀನು ಅದರ ಮೇಲೆ ಮಲಗುವ ದಿವಸಗಳ ಲೆಕ್ಕದ ಪ್ರಕಾರ ಅವರ ಅಕ್ರಮಗಳನ್ನು ಹೊತ್ತುಕೊಂಡಿ ರಬೇಕು. ನಾನು ದಿವಸಗಳ ಲೆಕ್ಕದ ಪ್ರಕಾರ ಅವರ ಅಕ್ರಮದ ವರ್ಷಗಳನ್ನು ನಿನಗೆ ನೇಮಿಸಿದ್ದೇನೆ. ಅವು ಮುನ್ನೂರತೊಂಭತ್ತು ದಿವಸಗಳಾಗಿವೆ; ಹೀಗೆ ನೀನು ಇಸ್ರಾಯೇಲ್ಯರ ಮನೆತನದವರ ಅಕ್ರಮಗಳನ್ನು ಹೊರಬೇಕು.
- Ezekiel 12:1–28 ಯೆಹೆಜ್ಕೇಲನು 12:1–28ಕರ್ತನ ವಾಕ್ಯವು ಮತ್ತೆ ಬಂದು ನನಗೆ ಹೇಳಿದ್ದೇನಂದರೆ-- ಮನುಷ್ಯಪುತ್ರನೇ, ನೀನು ತಿರುಗಿ ಬೀಳುವ ಮನೆತನದವರ ಮಧ್ಯದಲ್ಲಿ ವಾಸಿಸುತ್ತಿರುವಿ, ಅವರಿಗೆ ನೋಡುವದಕ್ಕೆ ಕಣ್ಣು ಗಳುಂಟು ನೋಡುವದಿಲ್ಲ, ಕೇಳುವದಕ್ಕೆ ಕಿವಿಗಳುಂಟು ಕೇಳುವದಿಲ್ಲ; ಅವರು ತಿರುಗಿ ಬೀಳುವ ಮನೆತನ ದವರು. ಮನುಷ್ಯ ಪುತ್ರನೇ, ನೀನು ತೆಗೆದುಹಾಕು ವದಕ್ಕೆ ಸಾಮಾನುಗಳನ್ನು ಸಿದ್ಧಮಾಡಿ ಹಗಲಿನಲ್ಲಿ ಅವರ ದೃಷ್ಟಿಯಿಂದ ತೊಲಗಿ ಹೋಗು; ಹೌದು, ಅವರ ಕಣ್ಣುಗಳ ಮುಂದೆಯೇ ನಿನ್ನ ಸ್ಥಳವನ್ನು ಬಿಟ್ಟು ಬೇರೊಂದು ಸ್ಥಳಕ್ಕೆ ಹೋಗು; ಅವರು ತಿರುಗಿ ಬೀಳುವ ಮನೆತನದವರಾದಾಗ್ಯೂ ಒಂದು ವೇಳೆ ಮನಸ್ಸು ಮಾಡಿಯಾರು. ನಿನ್ನ ಸಾಮಾಗ್ರಿಗಳನ್ನು ತೆಗೆದುಹಾಕು ವದಕ್ಕಾಗುವಂತ ಸಾಮಾಗ್ರಿಗಳನ್ನು ಹಗಲಿನಲ್ಲಿ ಅವರ ಕಣ್ಣುಗಳ ಮುಂದೆ ಹೊರಗೆ ತರಬೇಕು; ಸಂಜೆಯಲ್ಲಿ ಸೆರೆಗೆ ಹೋಗುವವರ ಹಾಗೆ ನೀನು ಅವರ ಕಣ್ಣುಗಳ ಮುಂದೆಹೋಗಬೇಕು. ಅವರ ಕಣ್ಣುಗಳ ಮುಂದೆಯೇ ನೀನು ಗೋಡೆಯನ್ನು ಕೊರೆದು ಅಲ್ಲಿಂದ ಹೊತ್ತು ಕೊಂಡು ಹೊರಗೆ ಹೊರಟುಹೋಗು. ಅವರ ಕಣ್ಣು ಗಳ ಮುಂದೆ ಸಾಮಾಗ್ರಿಯನ್ನು ಹೆಗಲಿನ ಮೇಲೆ ಹೊತ್ತುಕೊಂಡು ನಸುಬೆಳಕಿನಲ್ಲಿ ಹೋಗಬೇಕು; ನೆಲ ವನ್ನು ನೋಡದ ಹಾಗೆ ನಿನ್ನ ಮುಖವನ್ನು ಮುಚ್ಚಿ ಕೊಳ್ಳಬೇಕು. ನಾನು ನಿನ್ನನ್ನು ಇಸ್ರಾಯೇಲಿನ ಮನೆತನ ದಲ್ಲಿರುವವರಿಗೆ ಗುರುತನ್ನಾಗಿ ಇಟ್ಟಿದ್ದೇನೆ. ನಾನು ಆಜ್ಞೆಯನ್ನು ಹೊಂದಿದ ಪ್ರಕಾರ ಮಾಡಿದೆನು; ನನ್ನ ಸಾಮಗ್ರಿಗಳನ್ನು ಸೆರೆಯ ಸಾಮಗ್ರಿಗಳಂತೆ ಹಗಲಿ ನಲ್ಲಿಯೇ ಹೊರಗೆ ತಂದೆನು; ನಸುಬೆಳಕಿನಲ್ಲಿ ನನ್ನ ಕೈಯಿಂದಲೇ ಗೋಡೆಯನ್ನು ಕೊರೆದೆನು; ಅದನ್ನು ನಾನು ನಸುಬೆಳಕಿನಲ್ಲಿ ಹೊರಗೆ ತಂದು ಅವರ ಕಣ್ಣುಗಳ ಮುಂದೆ ಅದನ್ನು ಹೆಗಲ ಮೇಲೆ ಹೊತ್ತುಕೊಂಡು ಹೋದೆನು. ಬೆಳಗಿನ ಜಾವದಲ್ಲಿ ಕರ್ತನ ವಾಕ್ಯವು ನನ್ನ ಕಡೆಗೆ ಬಂದು ಹೇಳಿದ್ದೇನಂದರೆ-- ಮನುಷ್ಯ ಪುತ್ರನೇ, ಆ ಇಸ್ರಾಯೇಲಿನ ಮನೆತನದವರು ತಿರುಗಿ ಬೀಳುವ ಮನೆತನದವರಲ್ಲವೇ? ನೀನು ಏನು ಮಾಡುತ್ತೀ ಎಂದು ಹೇಳುತ್ತಾರಲ್ಲಾ. ಅವರಿಗೆ ನೀನು ಹೀಗೆ ಹೇಳಬೇಕು ಎಂದು ದೇವರಾದ ಕರ್ತನು ಹೇಳುತ್ತಾನೆ--ಈ ಭಾರವು ಯೆರೂಸಲೇಮಿನಲ್ಲಿರುವ ಪ್ರಭುವನ್ನೂ ಅದರ ಮಧ್ಯದಲ್ಲಿರುವ ಸಮಸ್ತ ಇಸ್ರಾ ಯೇಲಿನ ಮನೆತನದವರನ್ನೂ ಕುರಿತದ್ದಾಗಿದೆ. ಹೀಗೆ ಹೇಳು--ನಾನು ನಿಮಗೆ ಗುರುತಾಗಿದ್ದೇನೆ. ನಾನು ಮಾಡಿದ ಹಾಗೆ ಅವರಿಗೆ ಮಾಡಲ್ಪಡುವದು, ಅವರು ಸಾಗಿ ಸೆರೆಗೆ ಹೋಗುವರು. ಅವರ ಮಧ್ಯದಲ್ಲಿರುವ ಪ್ರಭುವು ಹೆಗಲ ಮೇಲೆ ಹೊರೆಯನ್ನು ಹೊತ್ತು ಕೊಂಡು ಕತ್ತಲಲ್ಲಿ ಹೊರಟು ಹೋಗುವನು; ಅವರು ಗೋಡೆಯನ್ನು ಕೊರೆದು ಆ ಕಿಂಡಿಯ ಮೂಲಕ ತಮ್ಮ ಸಾಮಗ್ರಿಗಳನ್ನು ಹೊರಗೆ ಸಾಗಿಸುವರು. ಅವನು ತನ್ನ ಕಣ್ಣುಗಳಿಂದ ನೆಲವನ್ನು ನೋಡದ ಹಾಗೆ ಮುಖ ವನ್ನು ಮುಚ್ಚಿಕೊಳ್ಳುವನು. ನನ್ನ ಬಲೆಯನ್ನು ಸಹ ನಾನು ಅವನ ಮೇಲೆ ಹರಡುವೆನು. ಅವನು ನನ್ನ ಉರ್ಲಿನಲ್ಲಿ ಸಿಕ್ಕಿಬೀಳುವನು. ನಾನು ಅವನನ್ನು ಕಸ್ದೀಯ ದೇಶದ ಬಾಬೆಲಿಗೆ ಒಯ್ಯುವೆನು. ಆದರೆ ಅವನು ಅದನ್ನು ನೋಡದೆ ಅಲ್ಲಿಯೇ ಸಾಯುವನು. ಅವನ ಸುತ್ತಲೂ ಅವನಿಗೆ ಸಹಾಯ ಮಾಡುವವರೆಲ್ಲರನ್ನೂ ಅವನ ಎಲ್ಲಾ ಸೈನ್ಯಗಳನ್ನೂ ಎಲ್ಲಾ ದಿಕ್ಕುಗಳಿಗೆ ಚದರಿಸಿ ಅವರ ಹಿಂದೆ ಕತ್ತಿಯನ್ನು ಬೀಸುವೆನು. ನಾನು ಅವರನ್ನು ಜನಾಂಗಗಳಲ್ಲಿ ಚದರಿಸಿ ದೇಶಗಳ ಮೇಲೆ ಚದರಿಸುವಾಗ ನಾನೇ ಕರ್ತನು ಎಂದು ಅವರು ತಿಳಿದುಕೊಳ್ಳುವರು. ಆದರೆ ಅವರು ಎಲ್ಲಿ ಬರು ವರೋ ಆ ಅನ್ಯಜನಾಂಗಗಳೊಳಗೆ ತಮ್ಮ ಅಸಹ್ಯಗಳ ನ್ನೆಲ್ಲಾ ತಿಳಿಸುವ ಹಾಗೆ ಅವರಲ್ಲಿ ಕೆಲವರನ್ನು ಕತ್ತಿ ಯಿಂದಲೂ ಬರಗಾಲದಿಂದಲೂ ವ್ಯಾಧಿಯಿಂದಲೂ ಉಳಿಸುವೆನು. ಆಗ ನಾನೇ ಕರ್ತನು ಎಂದು ಅವರು ತಿಳಿದುಕೊಳ್ಳುವರು. ಇದಲ್ಲದೆ ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ-- ಮನುಷ್ಯಪುತ್ರನೇ, ನಿನ್ನ ರೊಟ್ಟಿ ಯನ್ನು ನಡುಕದಿಂದ ತಿನ್ನು ಮತ್ತು ನೀರನ್ನು ದಿಗಿಲಿ ನಿಂದಲೂ ಎಚ್ಚರಿಕೆಯಿಂದಲೂ ಕುಡಿ. ನಿನ್ನ ದೇಶದ ಜನರಿಗೆ ಹೀಗೆ ಹೇಳು--ಯೆರೂಸಲೇಮಿನ ನಿವಾಸಿ ಗಳಿಗೆ ಮತ್ತು ಇಸ್ರಾಯೇಲ್ಯರ ದೇಶಕ್ಕೆ ದೇವರಾದ ಕರ್ತನು ಹೇಳಿದ್ದೇನಂದರೆ--ಅವರು ತಮ್ಮ ರೊಟ್ಟಿ ಯನ್ನು ಎಚ್ಚರಿಕೆಯಿಂದಲೇ ತಿನ್ನುವರು; ನೀರನ್ನು ವಿಸ್ಮಯ ದಿಂದಲೇ ಕುಡಿಯುವರು. ಯಾಕಂದರೆ ಅದರಲ್ಲಿ ವಾಸ ವಾಗಿರುವವರೆಲ್ಲರ ಬಲಾತ್ಕಾರದಿಂದ ಅವರ ದೇಶವು ಅವರ ಪರಿಪೂರ್ಣತೆಯನ್ನೆಲಾ ಬಿಟ್ಟು ಹಾಳಾಗು ವದು. ನಿವಾಸಿಗಳುಳ್ಳ ಪಟ್ಟಣಗಳು ಹಾಳಾಗುವವು. ದೇಶವು ನಿರ್ಜನವಾಗುವದು; ಆಗ ನಾನೇ ಕರ್ತ ನೆಂದು ನೀವು ತಿಳಿಯುವಿರಿ. ಕರ್ತನ ವಾಕ್ಯವು ನನ್ನ ಕಡೆಗೆ ಬಂದು ಹೇಳಿದ್ದೇ ನಂದರೆ-- ಮನುಷ್ಯಪುತ್ರನೇ, ದಿನಗಳು ಬಹಳವಾ ಗುತ್ತಿವೆ; ಪ್ರತಿ ದರ್ಶನವು ತಪ್ಪುತ್ತದೆ ಎಂದು ಇಸ್ರಾ ಯೇಲ್ ದೇಶದಲ್ಲಿ ಹೇಳಿಕೊಳ್ಳುವ ಆ ಗಾದೆ ಏನು? ಆದದರಿಂದ ಅವರಿಗೆ ಹೀಗೆ ಹೇಳು ದೇವರಾದ ಕರ್ತನು ಹೇಳುವದೇನಂದರೆ--ನಾನು ಈ ಗಾದೆ ಯನ್ನು ನಿಲ್ಲಿಸುತ್ತೇನೆ, ಅದನ್ನು ಇನ್ನು ಮೇಲೆ ಇಸ್ರಾ ಯೇಲಿನಲ್ಲಿ ಗಾದೆಯಂತೆ ಉಪಯೋಗಿಸುವದಿಲ್ಲ; ದಿನಗಳು ಹತ್ತಿರವಾಗಿವೆ ಪ್ರತಿ ದರ್ಶನವು ಸವಿಾಪ ವಾಗಿದೆ ಎಂದು ಅವರಿಗೆ ಹೇಳು. ಇಸ್ರಾಯೇಲಿನ ಮನೆತನದವರೊಳಗೆ ಇನ್ನು ಮೇಲೆ ಯಾವ ವ್ಯರ್ಥ ದರ್ಶನವೂ ಮೋಸದ ಶಕುನವೂ ಇರುವದಿಲ್ಲ. ನಾನೇ ಕರ್ತನು, ನಾನೇ ಮಾತನಾಡುತ್ತೇನೆ. ನಾನು ಆಡುವ ಮಾತು ನೆರವೇರುವದು, ಅದು ಇನ್ನು ನಿಧಾನವಾಗುವದಿಲ್ಲ. ಓ ತಿರುಗಿ ಬೀಳುವ ಮನೆತನ ದವರೇ, ನಿಮ್ಮ ದಿವಸಗಳಲ್ಲಿ ನಾನು ನುಡಿದದ್ದನ್ನು ನಡಿಸುವೆನೆಂದು ದೇವರಾದ ಕರ್ತನು ಹೇಳುತ್ತಾನೆ. ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ -- ಮನುಷ್ಯಪುತ್ರನೇ, ಇಗೋ, ಇಸ್ರಾಯೇಲಿನ ಮನೆತನದವರು--ಇವನಿಗಾದ ದರ್ಶನವು ಬಹು ದೂರ ಕಾಲಕ್ಕೆ ಸಂಬಂಧಿಸಿದ್ದು, ದೂರ ಕಾಲವನ್ನು ಕುರಿತು ಪ್ರವಾದಿಸುತ್ತಾನೆಂದು ಹೇಳುತ್ತಾರೆ.ಆದದರಿಂದ ಅವರು ಹೀಗೆ ಹೇಳುವರೆಂದು ದೇವರಾದ ಕರ್ತನು ಹೇಳುತ್ತಾನೆ; ನನ್ನ ಮಾತುಗಳಲ್ಲಿ ಒಂದಾದರೂ ಇನ್ನು ಮೇಲೆ ದೂರವಾಗುವದಿಲ್ಲ; ನಾನು ಆಡಿದ ಮಾತು ನಡಿಸಲ್ಪಡುವದೆಂದು ದೇವರಾದ ಕರ್ತನು ಹೇಳುತ್ತಾನೆ. ಆದದರಿಂದ ಅವರು ಹೀಗೆ ಹೇಳುವರೆಂದು ದೇವರಾದ ಕರ್ತನು ಹೇಳುತ್ತಾನೆ; ನನ್ನ ಮಾತುಗಳಲ್ಲಿ ಒಂದಾದರೂ ಇನ್ನು ಮೇಲೆ ದೂರವಾಗುವದಿಲ್ಲ; ನಾನು ಆಡಿದ ಮಾತು ನಡಿಸಲ್ಪಡುವದೆಂದು ದೇವರಾದ ಕರ್ತನು ಹೇಳುತ್ತಾನೆ.
- Jeremiah 27:12 ಯೆರೆಮೀಯ 27:12ಆಗ ನಾನು ಯೆಹೂದದ ಅರಸನಾದ ಚಿದ್ಕೀ ಯನ ಸಂಗಡ ಈ ವಾಕ್ಯಗಳ ಪ್ರಕಾರ ಮಾತನಾಡಿ ದೆನು--ಬಾಬೆಲಿನ ಅರಸನ ನೊಗಕ್ಕೆ ನಿಮ್ಮ ಹೆಗಲು ಗಳನ್ನು ಕೊಟ್ಟು ಅವನಿಗೂ ಅವನ ಜನರಿಗೂ ಸೇವೆಮಾಡಿ ಬದುಕಿರಿ.
- Jeremiah 18:2–10 ಯೆರೆಮೀಯ 18:2–10ಎದ್ದು ಕುಂಬಾರನ ಮನೆಗೆ ಇಳಿದು ಹೋಗು; ಅಲ್ಲಿ ನಿನಗೆ ನನ್ನ ವಾಕ್ಯಗಳನ್ನು ಕೇಳಮಾಡುವೆನು ಎಂಬದೇ. ಆಗ ನಾನು ಕುಂಬಾರನ ಮನೆಗೆ ಇಳಿದುಹೋದೆನು; ಇಗೋ, ಅವನು ಚಕ್ರದ ಮೇಲೆ ಕೆಲಸಮಾಡುತ್ತಿದ್ದನು. ಅವನು ಮಣ್ಣಿನಿಂದ ಮಾಡಿದ ಪಾತ್ರೆ ಕುಂಬಾರನ ಕೈಯಲ್ಲಿ ಕೆಟ್ಟುಹೋಯಿತು; ಆಗ ಕುಂಬಾರನಿಗೆ ಒಳ್ಳೇದೆಂದು ತೋರುವ ಪ್ರಕಾರ ಅದನ್ನು ಮತ್ತೊಂದು ಪಾತ್ರೆ ಯನ್ನಾಗಿ ಮಾಡಿದನು. ಆಗ ಕರ್ತನ ವಾಕ್ಯವು ನನಗೆ ಉಂಟಾಗಿ ಹೇಳಿದ್ದೇನಂದರೆ-- ಓ ಇಸ್ರಾಯೇಲಿನ ಮನೆತನದ ವರೇ, ನಾನು ಈ ಕುಂಬಾರನ ಹಾಗೆ ನಿಮಗೆ ಮಾಡ ಕೂಡದೋ ಎಂದು ಕರ್ತನು ಅನ್ನುತ್ತಾನೆ. ಇಗೋ, ಕುಂಬಾರನ ಕೈಯಲ್ಲಿ ಮಣ್ಣು ಹೇಗೋ ಹಾಗೆಯೇ ಓ ಇಸ್ರಾಯೇಲಿನ ಮನೆತನದವರೇ, ನನ್ನ ಕೈಯಲ್ಲಿ ನೀವು ಇದ್ದೀರಿ. ಯಾವ ಕ್ಷಣದಲ್ಲಿ ನಾನು ಒಂದು ಜನಾಂಗದ ವಿಷಯವಾಗಿ ಮತ್ತು ಒಂದು ರಾಜ್ಯದ ವಿಷಯವಾಗಿ ಅದನ್ನು ಕೀಳುವದಕ್ಕೂ ಕೆಡವುವ ದಕ್ಕೂ ನಾಶಮಾಡುವದಕ್ಕೂ ಮಾತಾಡುತ್ತೇನೋ ಆ ಜನಾಂಗಕ್ಕೆ ವಿರೋಧವಾಗಿ ನಾನು ಮಾತನಾಡಿದ ತನ್ನ ಕೆಟ್ಟತನವನ್ನು ಬಿಟ್ಟು ತಿರುಗಿದರೆ ನಾನು ಅದಕ್ಕೆ ಮಾಡಬೇಕೆಂದು ಯೋಚಿಸಿದ ಕೆಟ್ಟದ್ದನ್ನು ಕುರಿತು ಪಶ್ಚಾ ತ್ತಾಪ ಪಡುವೆನು. ಇದಲ್ಲದೆ ಯಾವ ಕ್ಷಣದಲ್ಲಿ ನಾನು ಒಂದು ಜನಾಂಗದ ವಿಷಯವಾಗಿಯೂ ಒಂದು ರಾಜ್ಯದ ವಿಷಯವಾಗಿಯೂ ಅದನ್ನು ಕಟ್ಟುವದಕ್ಕೂ ನೆಡುವದಕ್ಕೂ ಮಾತನಾಡುತ್ತೇನೋ ಅದು ನನ್ನ ಸ್ವರಕ್ಕೆ ವಿಧೇಯವಾಗದೆ ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದರೆ ನಾನು ಅದಕ್ಕೆ ಮೇಲನ್ನು ಮಾಡುತ್ತೇನೆಂದು ಹೇಳಿದ ಒಳ್ಳೇದನ್ನು ಕುರಿತು ಪಶ್ಚಾತ್ತಾಪಪಡುವೆನು.
- Jeremiah 19:1–11 ಯೆರೆಮೀಯ 19:1–11ಕರ್ತನು ಹೀಗೆ ಹೇಳುತ್ತಾನೆ--ಹೋಗಿ, ಕುಂಬಾರನ ಮಣ್ಣಿನ ಕೂಜೆಯನ್ನು ತಕ್ಕೊಂಡು, ಜನರ ಹಿರಿಯರಿಂದಲೂ ಯಾಜಕರ ಹಿರಿಯರಿಂದಲೂ ಕೆಲವರನ್ನು ಕರಕೊಂಡು ಮೂಡಣ ಬಾಗಿಲಿನ ಪ್ರವೇಶದ ಬಳಿಯಲ್ಲಿ ಹಿನ್ನೋಮನ ಮಗನ ತಗ್ಗಿಗೆ ಹೋಗಿ, ನಾನು ನಿನಗೆ ಹೇಳುವ ಮಾತುಗಳನ್ನು ಅಲ್ಲಿ ಸಾರಿ ಹೇಳು. ಓ ಯೆಹೂದದ ಅರಸರೇ, ಯೆರೂಸಲೇಮಿನ ನಿವಾಸಿಗಳೇ, ಕರ್ತನ ವಾಕ್ಯವನ್ನು ಕೇಳಿರಿ. ಇಸ್ರಾಯೇಲಿನ ದೇವರಾಗಿರುವ ಸೈನ್ಯಗಳ ಕರ್ತನು ಹೀಗನ್ನುತ್ತಾನೆ--ಇಗೋ, ನಾನು ಈ ಸ್ಥಳದ ಮೇಲೆ ಕೇಡನ್ನು ಬರಮಾಡುತ್ತೇನೆ; ಅದನ್ನು ಕೇಳುವವ ರೆಲ್ಲರ ಕಿವಿಗಳು ಗುಂಯ್ಗುಟ್ಟುವವು. ಅವರು ನನ್ನನ್ನು ಬಿಟ್ಟು ಈ ಸ್ಥಳವನ್ನು ಪರಸ್ಥಳ ಮಾಡಿ, ಅವರೂ ಅವರ ತಂದೆಗಳೂ ಯೆಹೂದದ ಅರಸರೂ ಅರಿಯದ ಬೇರೆ ದೇವರುಗಳಿಗೆ ಅಲ್ಲಿ ಧೂಪಸುಟ್ಟು ಈ ಸ್ಥಳವನ್ನು ಅಪರಾಧವಿಲ್ಲದವರ ರಕ್ತ ದಿಂದ ತುಂಬಿಸಿ ತಮ್ಮ ಮಕ್ಕಳನ್ನು ಬಾಳನಿಗೆ ದಹನ ಬಲಿಗಳಾಗಿ ಬೆಂಕಿಯಲ್ಲಿ ಸುಡುವದಕ್ಕೆ ಬಾಳನ ಉನ್ನತ ಸ್ಥಳಗಳನ್ನು ಕಟ್ಟಿದ್ದಾರೆ. ಇಂಥದ್ದನ್ನು ನಾನು ಆಜ್ಞಾ ಪಿಸಲಿಲ್ಲ, ನಾನು ಹೇಳಲಿಲ್ಲ, ನನ್ನ ಮನಸ್ಸಿಗೆ ಬರಲಿಲ್ಲ. ಹೀಗಿರುವದರಿಂದ ಕರ್ತನು ಹೇಳುವದೇನಂದರೆ --ಇಗೋ, ದಿನಗಳು ಬರುವವು; ಆಗ ಈ ಸ್ಥಳವು ಇನ್ನು ತೋಫೆತೆಂದು, ಹಿನ್ನೋಮನ ಮಗನ ತಗ್ಗೆಂದು ಅಲ್ಲ, ಕೊಲೆಯ ತಗ್ಗೆಂದು ಕರೆಯಲ್ಪಡುವದು. ನಾನು ಈ ಸ್ಥಳದಲ್ಲಿ ಯೆಹೂದದ, ಯೆರೂಸಲೇಮಿನ ಆಲೋಚನೆಯನ್ನು ಶೂನ್ಯ ಮಾಡುವೆನು; ಅವರ ಶತ್ರುಗಳ ಮುಂದೆಯೂ ಅವರ ಪ್ರಾಣವನ್ನು ಹುಡುಕು ವವರ ಕೈಯಿಂದಲೂ ಅವರನ್ನು ಕತ್ತಿಯಿಂದ ಬೀಳು ವಂತೆ ಮಾಡುವೆನು; ಅವರ ಹೆಣಗಳನ್ನು ಆಕಾಶದ ಪಕ್ಷಿಗಳಿಗೂ ಭೂಮಿಯ ಮೃಗಗಳಿಗೂ ಆಹಾರವಾಗಿ ಕೊಡುವೆನು. ಈ ಪಟ್ಟಣಗಳನ್ನು ಹಾಳಾಗಿಯೂ ತಿರಸ್ಕರಿಸಲ್ಪಡುವಂತೆಯೂ ಮಾಡುವೆನು; ಅದನ್ನು ಹಾದುಹೋಗುವವರೆಲ್ಲರು ಅದರ ಎಲ್ಲಾ ಬಾಧೆಗಳ ನಿಮಿತ್ತ ವಿಸ್ಮಯಹೊಂದಿ ಸಿಳ್ಳು ಹಾಕುವರು. ಅವರು ತಮ್ಮ ಕುಮಾರರ ಕುಮಾರ್ತೆಯರ ಮಾಂಸವನ್ನೂ ತಿನ್ನುವಂತೆ ಮಾಡುವೆನು; ಮುತ್ತಿಗೆಯಲ್ಲಿ ಸಹ ಅವರ ಶತ್ರುಗಳೂ ಅವರ ಪ್ರಾಣವನ್ನು ಹುಡುಕುವವರೂ ಅವರಿಗೆ ಮಾಡುವ ಇಕ್ಕಟ್ಟಿನಲ್ಲಿಯೂ ಅವರು ತಮ್ಮ ತಮ್ಮ ಸ್ನೇಹಿತರ ಮಾಂಸವನ್ನು ತಿನ್ನುವರು. ಆಗ ನೀನು ನಿನ್ನ ಸಂಗಡ ಬಂದ ಮನುಷ್ಯರ ಮುಂದೆ ಆ ಕೂಜೆಯನ್ನು ಒಡೆದು, ಅವರಿಗೆ ಹೇಳಬೇಕಾದದ್ದೇ ನಂದರೆ, ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ --ಯಾವ ಪ್ರಕಾರ ಒಬ್ಬನು ಕುಂಬಾರನ ಪಾತ್ರೆಯನ್ನು ಅದು ತಿರಿಗಿ ಒಂದುಗೂಡದ ಹಾಗೆ ಒಡೆಯುತ್ತಾನೋ ಅದೇ ಪ್ರಕಾರ ನಾನು ಈ ಜನವನ್ನೂ ಈ ಪಟ್ಟಣ ವನ್ನೂ ಒಡೆದು ಬಿಡುವೆನು; ಆಗ ಹೂಣಿಡುವದಕ್ಕೆ ಸ್ಥಳವಿಲ್ಲದೆ ತೋಫೆತಿನಲ್ಲಿ ಅವರು ಹೂಣಿಡುವರು.
- Amos 7:4 ಆಮೋಸ 7:4ಕರ್ತನಾದ ದೇವರು ನನಗೆ ಹೀಗೆ ತೋರಿಸಿದನು; ಇಗೋ, ಕರ್ತನಾದ ದೇವರು ಬೆಂಕಿಯಿಂದ ತರ್ಕ ಮಾಡುವದಕ್ಕೆ ಕರೆದನು. ಅದು ದೊಡ್ಡ ಅಗಾಧವನ್ನೂ ನುಂಗಿತು ಮತ್ತು ವಿಭಾಗವನ್ನು ತಿಂದುಬಿಟ್ಟಿತು.
- Jeremiah 28:10–14 ಯೆರೆಮೀಯ 28:10–14ಆಗ ಪ್ರವಾದಿಯಾದ ಹನನ್ಯನು ಪ್ರವಾದಿಯಾದ ಯೆರವಿಾಯನ ಕುತ್ತಿಗೆ ಯಿಂದ ನೊಗವನ್ನು ತೆಗೆದು ಅದನ್ನು ಮುರಿದುಬಿಟ್ಟನು. ಹನನ್ಯನು ಜನರೆಲ್ಲರ ಮುಂದೆ ಹೇಳಿದ್ದೇನಂದರೆ --ಕರ್ತನು ಹೀಗೆ ಹೇಳುತ್ತಾನೆ--ಇದೇ ಪ್ರಕಾರ ನಾನು ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ನೊಗವನ್ನು ಎರಡು ವರುಷದೊಳಗಾಗಿ ಎಲ್ಲಾ ಜನಾಂಗಗಳ ಕುತ್ತಿ ಗೆಯ ಮೇಲಿನಿಂದ ಮುರಿದು ಹಾಕುವೆನು ಅಂದನು. ಆಗ ಪ್ರವಾದಿಯಾದ ಯೆರೆವಿಾಯನು ತನ್ನ ಮಾರ್ಗ ವಾಗಿ ಹೋದನು. ಆಗ ಪ್ರವಾದಿಯಾದ ಹನನ್ಯನು ಆ ನೊಗವನ್ನು ಪ್ರವಾದಿಯಾದ ಯೆರೆವಿಾಯನ ಕುತ್ತಿಗೆಯ ಮೇಲಿನಿಂದ ಮುರಿದು ಹಾಕಿದ ಮೇಲೆ ಕರ್ತನ ವಾಕ್ಯವು ಯೆರೆವಿಾಯನಿಗೆ ಉಂಟಾಗಿ ಹೇಳಿದ್ದೇನಂದರೆ-- ಹೋಗಿ ಹನನ್ಯನಿಗೆ ಹೀಗೆ ಹೇಳು--ನೀನು ಮರದ ನೊಗಗಳನ್ನು ಮುರಿದಿದ್ದೀ; ಆದರೆ ಅವುಗಳಿಗೆ ಬದಲಾಗಿ ಕಬ್ಬಿಣದ ನೊಗಗಳನ್ನು ಉಂಟುಮಾಡುವಿ ಎಂದು ಕರ್ತನು ಹೇಳುತ್ತಾನೆ. ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನಾನು ಈ ಎಲ್ಲಾ ಜನಾಂಗಗಳ ಕುತ್ತಿಗೆಗಳ ಮೇಲೆ ಅವರು ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನಿಗೆ ಸೇವೆ ಮಾಡುವ ಹಾಗೆ ಕಬ್ಬಿಣದ ನೊಗವನ್ನು ಇಟ್ಟಿದ್ದೇನೆ; ಅವರು ಅವನಿಗೆ ಸೇವೆ ಮಾಡುವರು; ಭೂಮಿಯ ಮೃಗಗಳನ್ನು ಸಹ ಅವನಿಗೆ ಕೊಟ್ಟಿದ್ದೇನೆ.
- Isaiah 20:2–4 ಯೆಶಾಯ 20:2–4ಅದೇ ಸಮಯದಲ್ಲಿ ಕರ್ತನು ಆಮೋ ಚನ ಮಗನಾದ ಯೆಶಾಯನಿಗೆ ಹೋಗಿ ನಿನ್ನ ನಡುವಿನ ಮೇಲಿರುವ ಗೋಣಿತಟ್ಟನ್ನು ಬಿಚ್ಚು, ನಿನ್ನ ಪಾದಗಳ ಲ್ಲಿರುವ ಕೆರಗಳನ್ನು ತೆಗೆದಿಡು ಎಂದು ಹೇಳಿದನು. ಅವನು ಹಾಗೆ ಮಾಡಿ ಬೆತ್ತಲೆಯಾಗಿ ಕೆರವಿಲ್ಲದೆ ತಿರು ಗುತ್ತಿದ್ದನು. ಕರ್ತನು ಹೇಳಿದ್ದೇನಂದರೆ, ನನ್ನ ಸೇವಕ ನಾದ ಯೆಶಾಯನು ಐಗುಪ್ತಕ್ಕೂ ಐಥಿಯೋಪಿ ಯಕ್ಕೂ ಗುರುತಾಗಿಯೂ ಆಶ್ಚರ್ಯವಾಗಿಯೂ ಹೀಗೆ ಮೂರು ವರ್ಷ ಬೆತ್ತಲೆಯಾಗಿ ಕೆರವಿಲ್ಲದೆ ನಡೆದನು. ಹಾಗೆಯೇ ಅಶ್ಶೂರಿನ ಅರಸನು ಐಗುಪ್ತ್ಯರನ್ನು ಬಂಧಿಸಿ ಐಥಿಯೋಪಿಯಾದ ಕೈದಿಗಳನ್ನು ಅವರು ದೊಡ್ಡವರಾಗಲಿ ಸಣ್ಣವರಾಗಲಿ ಬಟ್ಟೆ ಕೆರಗಳಿಲ್ಲದೆ ಬರಿ ಕುಂಡಿಯವರಾಗಿ ಐಗುಪ್ತದ ಮಾನಭಂಗಕ್ಕೋ ಸ್ಕರ ಸೆರೆಗೆ ನಡೆಯುವಂತೆ ಮಾಡುವನು.
- Ezekiel 24:3–12 ಯೆಹೆಜ್ಕೇಲನು 24:3–12ತಿರುಗಿ ಬೀಳುವ ಮನೆತನ ದವರಿಗೆ ಸಾಮ್ಯವನ್ನು ತಿಳಿಸಿ ಅವರಿಗೆ ಹೇಳಬೇಕಾದದ್ದೇ ನಂದರೆ, ದೇವರಾದ ಕರ್ತನು ಹೀಗೆ ಹೇಳುತ್ತಾನೆ-- ಹಂಡೆಯನ್ನು ಒಲೆಯ ಮೇಲಿಡು, ಅದರಲ್ಲಿ ನೀರನ್ನು ಸುರಿ. ತೊಡೆಯನ್ನೂ ಹೆಗಲನ್ನೂ ಎಲ್ಲಾ ಒಳ್ಳೇ ತುಂಡುಗಳನ್ನೂ ಒಟ್ಟಿಗೆ ಸೇರಿಸಿ ಒಳ್ಳೆ ಎಲುಬುಗಳ ಜೊತೆ ಅದನ್ನು ತುಂಬಿಸಿ; ಹಿಂಡಿನಲ್ಲಿ ಶ್ರೇಷ್ಠವಾದ ದ್ದನ್ನು ತೆಗೆದುಕೊಂಡು ಎಲುಬಿನ ರಾಶಿಯನ್ನೂ ಅದರ ಕೆಳಗೆ ಇಟ್ಟು ಅದನ್ನು ಚೆನ್ನಾಗಿ ಕುದಿಸು; ಆ ಎಲುಬುಗಳೂ ಅದರಲ್ಲಿ ಚೆನ್ನಾಗಿ ಬೇಯಲಿ. ಆದಕಾರಣ ದೇವರಾದ ಕರ್ತನು ಹೀಗೆ ಹೇಳು ತ್ತಾನೆ; ರಕ್ತಮಯವಾದ ಆ ಪಟ್ಟಣಕ್ಕೆ ಅಯ್ಯೋ! ಯಾವದರ ಕಲ್ಮಶವು ಹೊರಗೆ ಬಾರದೆ ಅದರಲ್ಲಿ ಉಳಿದಿರುವದೋ ಆ ಹಂಡೆಗೆ ಅಯ್ಯೋ, ಅದರಿಂದ ತುಂಡು ತುಂಡಾಗಿ ಹೊರಗೆ ತೆಗೆ; ಆಯ್ಕೆಯ ಚೀಟಿಯು ಅದರ ಮೇಲೆ ಬೀಳದಿರಲಿ. ಅದರ ರಕ್ತವು ಅದರ ಮಧ್ಯದಲ್ಲಿದೆ; ಅದು ಅದನ್ನು ಬಂಡೆಯ ತುದಿಯಲ್ಲಿ ಇಟ್ಟಿದೆ; ದೂಳು ಮುಚ್ಚುವ ಹಾಗೆ ನೆಲದ ಮೇಲೆ ಚೆಲ್ಲಲಿಲ್ಲ; ಮುಯ್ಯಿಗೆಮುಯ್ಯಿ ತೀರಿಸುವದಕ್ಕೆ ರೋಷ ವನ್ನೆಬ್ಬಿಸುವ ಹಾಗೆ ನಾನು ಅದರ ರಕ್ತಾಪರಾಧವನ್ನು ಮುಚ್ಚಿಬಿಡದಂತೆ ಬಂಡೆಯ ತುದಿಯ ಮೇಲೆ ಇಟ್ಟಿ ದ್ದೇನೆ; ಆದದರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಆ ರಕ್ತಾಪರಾಧವುಳ್ಳ ಪಟ್ಟಣವು ಹಾಳಾ ಗಲಿ, ನಾನೇ ಬೆಂಕಿಯನ್ನು ರಾಶಿಯಾಗಿ ಹೆಚ್ಚಿಸುವೆನು. ಬಹಳ ಸೌದೆ ಹಾಕಿ, ಬೆಂಕಿಯನ್ನು ಹೆಚ್ಚಿಸಿ, ಮಾಂಸ ವನ್ನು ಬೇಯಿಸು; ಮಸಾಲೆ ಚೆನ್ನಾಗಿ ಇರಲಿ, ಮತ್ತು ಎಲುಬುಗಳು ಸುಡಲಿ. ಆಮೇಲೆ ಅದರ ಹಿತ್ತಾಳೆ ಬಿಸಿಯಾಗಿ ಮೈಲಿಗೆ ಕರಗಿ ಕಲ್ಮಶವು ಹೋಗುವ ಹಾಗೆ ಅದನ್ನು ಬರಿದು ಮಾಡಿ ಕೆಂಡಗಳ ಮೇಲೆ ಇಡು. ಅದರ ಕಲ್ಮಶವು ಆಯಾಸವನ್ನುಂಟು ಮಾಡಿತೇ ಹೊರತು ಅದಕ್ಕೆ ಹತ್ತಿದ್ದ ಆ ಬಹಳವಾದ ಕಿಲುಬು ಹೋಗಲಿಲ್ಲ, ಅದು ಬೆಂಕಿಯಲ್ಲಿರಲಿ;
- 1 Kings 11:30–31 1 ಅರಸುಗಳು 11:30–31ಅವನು ಹೊಸ ವಸ್ತ್ರವನ್ನು ಹೊದ್ದು ಕೊಂಡಿದ್ದನು. ಅವರಿಬ್ಬರೂ ಹೊಲದಲ್ಲಿ ಒಂಟಿಯಾ ಗಿದ್ದರು. ಆಗ ಅಹೀಯನು ತನ್ನ ಮೇಲೆ ಇರುವ ವಸ್ತ್ರವನ್ನು ಹಿಡಿದು ಹನ್ನೆರಡು ತುಂಡುಗಳಾಗಿ ಹರಿದು ಯಾರೊಬ್ಬಾಮನಿಗೆ--ಈ ಹತ್ತು ತುಂಡುಗಳನ್ನು ನೀನು ತೆಗೆದುಕೋ. ಇದಕ್ಕೆ ಇಸ್ರಾಯೇಲಿನ ದೇವರಾದ ಕರ್ತನು--ಇಗೋ, ನಾನು ಸೊಲೊಮೋನನ ಕೈ ಯಿಂದ ರಾಜ್ಯವನ್ನು ಕಿತ್ತುಕೊಂಡು ಹತ್ತು ಗೋತ್ರ ಗಳನ್ನು ನಿನಗೆ ಕೊಡುವೆನು.
- Jeremiah 13:1–11 ಯೆರೆಮೀಯ 13:1–11ಕರ್ತನು ನನಗೆ--ನೀನು ಹೋಗಿ ನಾರಿನ ದಟ್ಟಿಯನ್ನು ತೆಗೆದುಕೊಂಡು ನಿನ್ನ ನಡುವಿಗೆ ಕಟ್ಟು, ಆದರೆ ಅದನ್ನು ನೀರಿನಲ್ಲಿ ಹಾಕಬೇಡ ಅಂದನು; ಆಗ ಕರ್ತನ ಮಾತಿನ ಪ್ರಕಾರ ನಾನು ಆ ದಟ್ಟಿಯನ್ನು ತಕ್ಕೊಂಡು ನನ್ನ ನಡುವಿಗೆ ಕಟ್ಟಿಕೊಂಡೆನು. ಆಗ ಕರ್ತನ ವಾಕ್ಯವು ನನಗೆ ಎರಡನೇ ಸಾರಿ ಉಂಟಾಗಿ ಹೇಳಿದ್ದೆನಂದರೆ--ನೀನು ನಿನ್ನ ನಡುವಿನಲ್ಲಿರುವ ದಟ್ಟಿಯನ್ನು ತಕ್ಕೊಂಡು ಎದ್ದು ಯೂಫ್ರೇಟೀಸ್ಗೆ ಹೋಗಿ ಅದನ್ನು ಅಲ್ಲಿ ಬಂಡೆಯ ಬಿರುಕಿನಲ್ಲಿ ಅಡಗಿಸು ಎಂದಿತು. ಆಗ ನಾನು ಹೋಗಿ ಕರ್ತನು ನನಗೆ ಆಜ್ಞಾಪಿಸಿದ ಪ್ರಕಾರ ಅದನ್ನು ಯೂಫ್ರೇಟೀಸ್ ಬಳಿ ಯಲ್ಲಿ ಅಡಗಿಸಿದೆನು. ಬಹಳ ದಿವಸಗಳಾದ ಮೇಲೆ ಕರ್ತನು ನನಗೆ--ನೀನು ಎದ್ದು ಯೂಫ್ರೆಟೀ ಸ್ಗೆ ಹೋಗಿ ಅಲ್ಲಿ ಅಡಗಿಸಬೇಕೆಂದು ನಾನು ಆಜ್ಞಾಪಿಸಿದ ದಟ್ಟಿಯನ್ನು ಅಲ್ಲಿಂದ ತಕ್ಕೋ ಅಂದನು. ಆಗ ನಾನು ಯೂಫ್ರೇಟೀಸಿಗೆ ಹೋಗಿ ಅಗೆದು ಆ ದಟ್ಟಿಯನ್ನು ನಾನು ಅಡಗಿಸಿದ್ದಲ್ಲಿಂದ ತೆಗೆದೆನು; ಇಗೋ, ಆ ದಟ್ಟಿಯು ಯಾವ ಕೆಲಸಕ್ಕಾದರೂ ಬಾರದೆ ಕೆಟ್ಟು ಹೋಗಿತ್ತು. ಆಗ ಕರ್ತನ ವಾಕ್ಯವು ನನಗೆ ಉಂಟಾಗಿ ಹೇಳಿದ್ದೇನಂದರೆ-- ಕರ್ತನು ಹೀಗೆ ಹೇಳುತ್ತಾನೆ --ಈ ಪ್ರಕಾರ ನಾನು ಯೆಹೂದದ ಗರ್ವವನ್ನೂ ಯೆರೂಸಲೇಮಿನ ದೊಡ್ಡ ಗರ್ವವನ್ನೂ ಕೆಡಿಸುವೆನು. ನನ್ನ ವಾಕ್ಯಗಳನ್ನು ಕೇಳಲೊಲ್ಲದೆ ತಮ್ಮ ಹೃದಯದ ಕಲ್ಪನೆಯಂತೆ ನಡಕೊಂಡು ಬೇರೆ ದೇವರುಗಳನ್ನು ಸೇವಿಸುವದಕ್ಕೂ ಅವುಗಳನ್ನು ಆರಾಧಿಸುವದಕ್ಕೂ ಹಿಂಬಾಲಿಸುವ ಈ ಕೆಟ್ಟ ಜನರು ಯಾವ ಕೆಲಸಕ್ಕಾದರೂ ಬಾರದ ಈ ನಡುಕಟ್ಟಿನ ಹಾಗಿರುವರು. ಯಾವ ಪ್ರಕಾರ ದಟ್ಟಿಯು ಮನುಷ್ಯನ ನಡುವಿಗೆ ಹತ್ತಿಕೊ ಳ್ಳುವದೋ ಅದೇ ಪ್ರಕಾರ ನಾನು ಇಸ್ರಾಯೇಲಿನ ಮನೆತನವನ್ನೆಲ್ಲವನ್ನೂ ಯೆಹೂದದ ಮನೆತನವ ನ್ನೆಲ್ಲವನ್ನೂ ನನಗೆ ಜನರೂ ಹೆಸರೂ ಸ್ತೋತ್ರವೂ ಮಹಿಮೆಯೂ ಆಗುವ ಹಾಗೆ ನನಗೆ ಹತ್ತಿಕೊಳ್ಳುವಂತೆ ಮಾಡಿದೆನು; ಆದರೆ ಅವರು ಕೇಳಲಿಲ್ಲ.