Jeremiah · chapter 32 · verse 40
Jeremiah 32:40 in Kannada
ಅವರಿಗೆ ಒಳ್ಳೇದನ್ನು ಮಾಡುವ ಹಾಗೆ ನಾನು ತಿರುಗಿಸಿ ಬಿಡೆನೆಂದು ನಿತ್ಯವಾದ ಒಡಂಬಡಿಕೆಯನ್ನು ಅವರ ಸಂಗಡ ಮಾಡುತ್ತೇನೆ; ಅವರು ನನ್ನನ್ನು ಬಿಡದ ಹಾಗೆ ನನ್ನ ಭಯವನ್ನು ಅವರ ಹೃದಯಗಳಲ್ಲಿ ಇಡುತ್ತೇನೆ.
Avarige olledannu maaduva haage naanu tirugisi bidenendu nityavaada odambadikeyannu avara sangada maaduttene; avaru nannannu bidada haage nanna bhayavannu avara hrudayagalalli iduttene.
Jeremiah 32:40 in English
- King James Version (KJV)
- And I will make an everlasting covenant with them, that I will not turn away from them, to do them good; but I will put my fear in their hearts, that they shall not depart from me.
- World English Bible (WEB)
- I will make an everlasting covenant with them, that I will not turn away from following them, to do them good. I will put my fear in their hearts, that they may not depart from me.
- American Standard Version (ASV)
- and I will make an everlasting covenant with them, that I will not turn away from following them, to do them good; and I will put my fear in their hearts, that they may not depart from me.
- Bible in Basic English (BBE)
- And I will make an eternal agreement with them, that I will never give them up, but ever do them good; and I will put the fear of me in their hearts, so that they will not go away from me.
- Darby Translation (DBY)
- And I will make an everlasting covenant with them, that I will not draw back from them, to do them good; and I will put my fear in their heart, that they may not turn aside from me.
- Webster's Bible (WBS)
- And I will make an everlasting covenant with them, that I will not turn away from them, to do them good; but I will put my fear in their hearts, that they shall not depart from me.
- Young's Literal Translation (YLT)
- and I have made for them a covenant age-during, in that I turn not back from after them for My doing them good, and My fear I put in their heart, so as not to turn aside from me;
Read in context
- 38ಅವರು ನನಗೆ ಜನರಾಗಿರುವರು; ನಾನು ಅವರಿಗೆ ದೇವರಾಗಿರುವೆನು.
- 39ಅವರಿಗೂ ಅವರ ತರುವಾಯ ಅವರ ಮಕ್ಕಳಿಗೂ ಒಳ್ಳೇದಕ್ಕಾಗಿ ಅವರು ಯಾವಾಗಲೂ ನನಗೆ ಭಯ ಪಡುವ ಹಾಗೆ ಅವರಿಗೆ ಒಂದೇ ಹೃದಯವನ್ನೂ ಒಂದೇ ಮಾರ್ಗವನ್ನೂ ಕೊಡುವೆನು.
- 40ಅವರಿಗೆ ಒಳ್ಳೇದನ್ನು ಮಾಡುವ ಹಾಗೆ ನಾನು ತಿರುಗಿಸಿ ಬಿಡೆನೆಂದು ನಿತ್ಯವಾದ ಒಡಂಬಡಿಕೆಯನ್ನು ಅವರ ಸಂಗಡ ಮಾಡುತ್ತೇನೆ; ಅವರು ನನ್ನನ್ನು ಬಿಡದ ಹಾಗೆ ನನ್ನ ಭಯವನ್ನು ಅವರ ಹೃದಯಗಳಲ್ಲಿ ಇಡುತ್ತೇನೆ.
- 41ಹೌದು, ಅವರಿಗೆ ಒಳ್ಳೇದನ್ನು ಮಾಡುವದಕ್ಕೆ ಅವ ರೊಂದಿಗೆ ಆನಂದಪಡುವೆನು; ನಿಜವಾಗಿ ನನ್ನ ಪೂರ್ಣ ಹೃದಯದಿಂದಲೂ ನನ್ನ ಪೂರ್ಣ ಪ್ರಾಣದಿಂದಲೂ ಅವರನ್ನು ಈ ದೇಶದಲ್ಲಿ ನೆಡುತ್ತೇನೆ.
- 42ಕರ್ತನು ಹೀಗೆ ಹೇಳುತ್ತಾನೆ--ನಾನು ಹೇಗೆ ಈ ಜನರ ಮೇಲೆ ದೊಡ್ಡ ಕೇಡನ್ನು ಬರಮಾಡಿದೆನೋ ಹಾಗೆಯೇ ನಾನು ಅವರಿಗೆ ವಾಗ್ದಾನದ ಮೇಲನ್ನೆಲ್ಲಾ ಅವರ ಮೇಲೆ ಬರಮಾಡುವೆನು.
Cross references
- Jeremiah 31:31–33 ಯೆರೆಮೀಯ 31:31–33ಇಗೋ, ನಾನು ಇಸ್ರಾಯೇಲಿನ ಮನೆತನದವರ ಸಂಗಡಲೂ ಯೆಹೂದದ ಮನೆತನದವರ ಸಂಗ ಡಲೂ ಹೊಸ ಒಡಂಬಡಿಕೆಯನ್ನು ಮಾಡಿಕೊಳ್ಳುವ ದಿನಗಳು ಬರುವವೆಂದು ಕರ್ತನು ಅನ್ನುತ್ತಾನೆ. ನಾನು ಅವರ ತಂದೆಗಳ ಸಂಗಡ ಅವರನ್ನು ಐಗುಪ್ತದೇಶದಿಂದ ಹೊರತರುವದಕ್ಕೆ ಅವರ ಕೈ ಹಿಡಿದ ದಿನದಲ್ಲಿ ಮಾಡಿದ ಒಡಂಬಡಿಕೆಯ ಹಾಗಲ್ಲ; ನಾನು ಅವರ ಯಜಮಾನನಾಗಿದ್ದಾಗ್ಯೂ ಆ ನನ್ನ ಒಡಂಬಡಿಕೆಯನ್ನು ಅವರು ವಿಾರಿದರೆಂದು, ಕರ್ತನು ಅನ್ನುತ್ತಾನೆ. ಆದರೆ ನಾನು ಇಸ್ರಾಯೇಲಿನ ಮನೆತನದವರ ಸಂಗಡ ಮಾಡುವ ಒಡಂಬಡಿಕೆ ಇದೇ. ಆ ದಿನಗಳಾದ ಮೇಲೆ ನಾನು ನನ್ನ ನ್ಯಾಯಪ್ರಮಾಣವನ್ನು ಅವರೊಳಗೆ ಇಟ್ಟು ಅವರ ಹೃದಯದಲ್ಲಿ ಅದನ್ನು ಬರೆಯುವೆನು; ನಾನು ಅವರಿಗೆ ದೇವರಾಗಿರುವೆನು ಅವರು ನನಗೆ ಪ್ರಜೆ ಯಾಗಿರುವರು ಎಂದು ಕರ್ತನು ಅನ್ನುತ್ತಾನೆ.
- Ezekiel 36:26 ಯೆಹೆಜ್ಕೇಲನು 36:26ನಿನಗೆ ಹೊಸ ಹೃದಯವನ್ನು ಕೊಟ್ಟು ಹೊಸ ಆತ್ಮ ವನ್ನು ನಿಮ್ಮೊಳಗೆ ಇಡುವೆನು; ನಿಮ್ಮ ದೇಹದಿಂದ ಕಲ್ಲಿನ ಹೃದಯವನ್ನು ಹೊರಗೆ ತೆಗೆದು ನಿಮಗೆ ಮಾಂಸದ ಹೃದಯವನ್ನು ಕೊಡುತ್ತೇನೆ.
- Jeremiah 24:7 ಯೆರೆಮೀಯ 24:7ನಾನೇ ಕರ್ತನೆಂದು ನನ್ನನ್ನು ತಿಳುಕೊಳ್ಳುವದಕ್ಕೆ ಅವರಿಗೆ ಹೃದಯವನ್ನು ಕೊಡುವೆನು. ಅವರು ನನ್ನ ಜನರಾಗಿ ರುವರು; ನಾನು ಅವರ ದೇವರಾಗಿರುವೆನು; ತಮ್ಮ ಪೂರ್ಣ ಹೃದಯದಿಂದ ನನ್ನ ಬಳಿಗೆ ಹಿಂತಿರುಗಿಕೊಳ್ಳು ವರು.
- James 1:17 ಯಾಕೋಬನು 1:17ಪ್ರತಿಯೊಂದು ಒಳ್ಳೇ ದಾನವೂ ಸಂಪೂರ್ಣವಾದ ಪ್ರತಿವರವೂ ಮೇಲಣ ವುಗಳೇ; ಅವು ಬೆಳಕುಗಳ ತಂದೆಯಿಂದ ಇಳಿದು ಬರುತ್ತವೆ. ಆತನಲ್ಲಿ ಚಂಚಲತ್ವವೇನೂ ಇಲ್ಲ, ವ್ಯತ್ಯಾಸದ ನೆರಳೂ ಇಲ್ಲ.
- Hebrews 6:13–18 ಇಬ್ರಿಯರಿಗೆ 6:13–18ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದಾಗ ತನಗಿಂತ ಹೆಚ್ಚಿನವನ ಆಣೆಯಿಡುವದಕ್ಕಾಗದೆ ಇದ್ದದ್ದರಿಂದ ತನ್ನಾ ಣೆಯಿಟ್ಟು-- ಖಂಡಿತವಾಗಿ ನಿನ್ನನ್ನು ಆಶೀರ್ವದಿಸೇ ಆಶೀರ್ವದಿಸುವೇನು. ನಿನ್ನನ್ನು ಹೆಚ್ಚಿಸೇ ಹೆಚ್ಚಿಸುವೆನು ಎಂದು ಹೇಳಿದನಷ್ಟೆ. ಹೀಗೆ ಅವನು ತಾಳ್ಮೆಯಿಂದ ಕಾದಿದ್ದು ವಾಗ್ದಾನವನ್ನು ಹೊಂದಿದನು. ಮನುಷ್ಯರು ನಿಜವಾಗಿಯೂ ತಮಗಿಂತ ಹೆಚ್ಚಿನವನ ಆಣೆಯಿಡು ತ್ತಾರಷ್ಟೆ; ಆಣೆಯನ್ನು ಸ್ಥಿರಪಡಿಸಿದ ಮೇಲೆ ಅವರೊಳಗೆ ವಿವಾದವೇನೂ ಇರುವದಿಲ್ಲ. ಅದರಲ್ಲಿ ದೇವರು ತನ್ನ ಸಂಕಲ್ಪವು ನಿಶ್ಚಲವಾದದ್ದೆಂಬದನ್ನು ವಾಗ್ದಾನಕ್ಕೆ ಬಾಧ್ಯರಾಗುವವರಿಗೆ ಬಹು ಸ್ಪಷ್ಟವಾಗಿ ತೋರಿಸ ಬೇಕೆಂದು ಆಣೆಯಿಟ್ಟು ತನ್ನ ಮಾತನ್ನು ಸ್ಥಿರಪಡಿಸಿದನು. ಆಶ್ರಯವನ್ನು ಹೊಂದುವದಕ್ಕೆ ಓಡಿ ಬಂದು ನಮ್ಮ ಮುಂದೆ ಇಟ್ಟಿರುವ ನಿರೀಕ್ಷೆಯನ್ನು ಹಿಡುಕೊಂಡವರಾದ ನಮಗೆ ಸುಳ್ಳಾಡದ ದೇವರ ಎರಡು ನಿಶ್ಚಲವಾದ ಆಧಾರಗಳಲ್ಲಿ ನಮಗೆ ಬಲವಾದ ಆದರಣೆ ಉಂಟಾ ಯಿತು.
- Ezekiel 39:29 ಯೆಹೆಜ್ಕೇಲನು 39:29ಇಲ್ಲವೇ ನಾನು ನನ್ನ ಮುಖವನ್ನು ಎಂದಿಗೂ ಮರೆಮಾಡುವದಿಲ್ಲ; ನಾನು ನನ್ನ ಆತ್ಮವನ್ನು ಇಸ್ರಾ ಯೇಲಿನ ಮನೆತನದವರ ಮೇಲೆ ಸುರಿದಿರುವೆನೆಂದು ದೇವರಾದ ಕರ್ತನು ಹೇಳುತ್ತಾನೆ.
- 1 Peter 1:5 1 ಪೇತ್ರನು 1:5ಅಂತ್ಯ ಕಾಲದಲ್ಲಿ ಪ್ರಕಟವಾಗುವದಕ್ಕೆ ಸಿದ್ಧವಾಗಿರುವ ರಕ್ಷಣೆಗೆ ನಂಬಿಕೆಯ ಮುಖಾಂತರ ದೇವರು ನಿಮ್ಮನ್ನು ತನ್ನ ಬಲದಿಂದ ಕಾಯುತ್ತಾನೆ.
- Isaiah 55:3 ಯೆಶಾಯ 55:3ನಿಮ್ಮ ಕಿವಿಗಳನ್ನು ಬಾಗಿಸಿಕೊಂಡು ನನ್ನ ಬಳಿಗೆ ಬನ್ನಿರಿ; ಕೇಳಿರಿ, ನಿಮ್ಮ ಪ್ರಾಣವು ಬದುಕು ವದು; ನಿಶ್ಚಯವಾಗಿ ದಾವೀದನಿಗೆ ಖಂಡಿತವಾಗಿ ಮಾಡಿದ ಕರುಣೆಗಳ ಪ್ರಕಾರ ನಿಮ್ಮ ಸಂಗಡ ನಿತ್ಯ ವಾದ ಒಡಂಬಡಿಕೆಯನ್ನು ಮಾಡುವೆನು.
- Jeremiah 50:5 ಯೆರೆಮೀಯ 50:5ಚೀಯೋನಿನ ಕಡೆಗೆ ಅಭಿಮುಖರಾಗಿ ಅದರ ಮಾರ್ಗವನ್ನು ವಿಚಾರಿಸಿ--ಬನ್ನಿ, ಮರೆತುಹೋಗದ ನಿತ್ಯವಾದ ಒಡಂಬಡಿಕೆಯಿಂದ ಕರ್ತನನ್ನು ಸೇರಿಸಿ ಕೊಳ್ಳೋಣ ಅನ್ನುವರು.
- Hebrews 13:20 ಇಬ್ರಿಯರಿಗೆ 13:20ಶಾಶ್ವತವಾದ ಒಡಂಬಡಿಕೆಯ ರಕ್ತದ ಮೂಲಕ ಕುರಿ ಹಿಂಡಿಗೆ ದೊಡ್ಡ ಕುರುಬನಾಗಿರುವ ನಮ್ಮ ಕರ್ತನಾದ ಯೇಸುವನ್ನು ಸತ್ತವರೊಳಗಿಂದ ಬರ ಮಾಡಿದ ಶಾಂತಿದಾಯಕನಾದ ದೇವರು
- 2 Samuel 23:4 2 ಸಮುವೇಲನು 23:4ಸೂರ್ಯನು ಮೂಡಿರುವಂಥ, ಪ್ರಕಾಶದಿಂದ ಮೋಡಗಳಿಲ್ಲದೆ ಇರುವಂಥ, ಉದಯ ಕಾಲದ ಬೆಳಕಿನ ಹಾಗೆಯೂ ಮಳೆ ಬಂದ ಮೇಲೆ ಭೂಮಿಯಿಂದಾಗುವ ಹುಲ್ಲಿನ ಹಾಗೆಯೂ ಇರು ವನು.
- Romans 8:28–39 ರೋಮಾಪುರದವರಿಗೆ 8:28–39ಇದಲ್ಲದೆ ದೇವರ ಸಂಕಲ್ಪದ ಮೇರೆಗೆ ಕರೆಯ ಲ್ಪಟ್ಟು ಆತನನ್ನು ಪ್ರಿತಿಸುವವರ ಒಳ್ಳೇದಕ್ಕಾಗಿ ಎಲ್ಲವು ಗಳು ಒಟ್ಟಾಗಿ ಸಂಭವಿಸುತ್ತವೆಯೆಂದು ನಾವು ಬಲ್ಲೆವು. ಆತನು ಅನೇಕ ಸಹೋದರರಲ್ಲಿ ತನ್ನ ಮಗನು ಜ್ಯೇಷ್ಠಪುತ್ರನಾಗಿರಬೇಕೆಂದು ತಾನು ಯಾರನ್ನು ಮೊದಲು ತಿಳುಕೊಂಡನೋ ಅವರನ್ನು ತನ್ನ ಮಗನ ಸಾರೂಪ್ಯವುಳ್ಳವರಾಗುವಂತೆ ಮೊದಲೇ ನೇಮಿಸಿ ದನು. ಇದಲ್ಲದೆ ಯಾರನ್ನು ಮೊದಲು ನೇಮಿಸಿ ದನೋ ಅವರನ್ನು ಕರೆದನು; ಯಾರನ್ನು ಕರೆದನೋ ಅವರನ್ನು ನೀತಿವಂತರೆಂದು ನಿರ್ಣಯಿಸಿದನು; ಯಾರನ್ನು ನೀತಿವಂತರೆಂದು ನಿರ್ಣಯಿಸಿದನೋ ಅವರನ್ನು ಮಹಿಮೆಪಡಿಸಿದನು. ಹಾಗಾದರೆ ಈ ವಿಷಯಗಳಲ್ಲಿ ನಾವು ಏನು ಹೇಳೋಣ? ದೇವರು ನಮ್ಮ ಕಡೆ ಇದ್ದರೆ ನಮ್ಮನ್ನು ಎದುರಿಸುವವರು ಯಾರು? ದೇವರು ತನ್ನ ಸ್ವಂತ ಮಗನನ್ನು ಉಳಿಸಿಕೊಳ್ಳದೆ ಆತನನ್ನು ನಮ್ಮೆಲ್ಲರಿಗೊಸ್ಕರ ಒಪ್ಪಿಸಿಕೊಟ್ಟ ಮೇಲೆ ಆತನೊಂದಿಗೆ ಎಲ್ಲವುಗಳನ್ನು ಉಚಿತವಾಗಿ ನಮಗೆ ಕೊಡದೆ ಇರುವನೇ? ದೇವರಾದುಕೊಂಡವರ ಮೇಲೆ ಯಾರು ತಪ್ಪು ಹೊರಿಸಾರು? ದೇವರೇ ನಮ್ಮನ್ನು ನೀತಿವಂತರೆಂದು ನಿರ್ಣಯಿಸುವವನಾಗಿದ್ದಾನೆ. ಅಪರಾಧಿಗಳೆಂದು ನಿರ್ಣಯಿಸುವವರು ಯಾರು? ಕ್ರಿಸ್ತನು ಮರಣವನ್ನು ಹೊಂದಿದ್ದಲ್ಲದೆ (ಜೀವಿತನಾಗಿ) ಎದ್ದು ದೇವರ ಬಲಗಡೆಯಲ್ಲಿ ನಮಗೋಸ್ಕರ ವಿಜ್ಞಾಪನೆ ಮಾಡು ವಾತನಾಗಿದ್ದಾನೆ; ಕ್ರಿಸ್ತನ ಪ್ರೀತಿಯಿಂದ ನಮ್ಮನ್ನು ಅಗಲಿಸುವವರು ಯಾರು? ಕಷ್ಟವೋ ಸಂಕಟವೋ ಹಿಂಸೆಯೋ ಬರಗಾಲವೋ ವಸ್ತ್ರವಿಲ್ಲದಿರುವದೋ ಗಂಡಾಂತರವೋ ಖಡ್ಗವೋ? ನಾವು ನಿನ್ನ ನಿಮಿತ್ತ ದಿನವೆಲ್ಲಾ ಕೊಲೆಗೆ ಗುರಿಯಾಗಿದ್ದೇವೆ; ನಾವು ಕೊಯ್ಗುರಿಗಳಂತೆ ಎಣಿಸಲ್ಪಡುತ್ತಿದ್ದೇವೆ ಎಂದು ಬರೆಯಲ್ಪಟ್ಟಿದೆ. ಹೌದು, ನಮ್ಮನ್ನು ಪ್ರಿತಿಸಿದಾತನ ಮೂಲಕವಾಗಿ ನಾವು ಈ ಎಲ್ಲವುಗಳಲ್ಲಿ ಜಯಶಾಲಿ ಗಳಿಗಿಂತಲೂ ಹೆಚ್ಚಿನವರಾಗಿದ್ದೇವೆ. ಹೇಗಂದರೆ ಮರಣವಾಗಲಿ ಜೀವವಾಗಲಿ ದೂತರಾಗಲಿ ರಾಜತ್ವಗಳಾಗಲಿ ಅಧಿಕಾರಗಳಾಗಲಿ ಈಗಿನವುಗಳಾ ಗಲಿ ಮುಂಬರುವವುಗಳಾಗಲಿಉನ್ನತವಾಗಲಿ ಅಗಾಧವಾಗಲಿ ಬೇರೆ ಯಾವ ಸೃಷ್ಟಿಯಾಗಲಿ ನಮ್ಮನ್ನು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ದೇವರ ಪ್ರೀತಿಯಿಂದ ಅಗಲಿಸಲಾರವೆಂದು ನನಗೆ ನಿಶ್ಚಯ ಉಂಟು. ಉನ್ನತವಾಗಲಿ ಅಗಾಧವಾಗಲಿ ಬೇರೆ ಯಾವ ಸೃಷ್ಟಿಯಾಗಲಿ ನಮ್ಮನ್ನು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ದೇವರ ಪ್ರೀತಿಯಿಂದ ಅಗಲಿಸಲಾರವೆಂದು ನನಗೆ ನಿಶ್ಚಯ ಉಂಟು.