Jeremiah 36:31 in Kannada
ಅವ ನನ್ನೂ ಅವನ ಸಂತಾನವನ್ನೂ ಸೇವಕರನ್ನೂ ಅವರ ಅಕ್ರಮಕ್ಕಾಗಿ ದಂಡಿಸುವೆನು; ಅವರ ಮೇಲೆಯೂ ಯೆರೂಸಲೇಮಿನ ನಿವಾಸಿಗಳ ಮೇಲೆಯೂ ಯೆಹೂದದ ಮನುಷ್ಯರ ಮೇಲೆಯೂ ನಾನು ಅವರಿಗೆ ವಿರೋಧವಾಗಿ ಮಾತಾಡಿದಂಥ ಅವರು ಕಿವಿಗೊಡ ದಂಥ ಕೇಡನ್ನೆಲ್ಲಾ ಬರಮಾಡುವೆನು.ಆಗ ಯೆರೆವಿಾ ಯನು ಮತ್ತೊಂದು ಸುರಳಿಯನ್ನು ತಕ್ಕೊಂಡು ನೇರೀಯನ ಮಗನಾದ ಲೇಖಕನಾದ ಬಾರೂಕನಿಗೆ ಕೊಟ್ಟನು; ಇವನು ಯೆಹೂದದ ಅರಸನಾದ ಯೆಹೋಯಾಕೀಮನು ಬೆಂಕಿಯಲ್ಲಿ ಸುಟ್ಟ ಪುಸ್ತಕದ ವಾಕ್ಯಗಳನ್ನೆಲ್ಲಾ ಯೆರೆವಿಾಯನ ಬಾಯಿಂದ ಬಂದ ಹಾಗೆ ಬರೆದನು; ಇದಲ್ಲದೆ ಅವುಗಳ ಹಾಗಿರುವ ಅನೇಕ ವಾಕ್ಯಗಳು ಅವುಗಳ ಸಂಗಡ ಕೂಡಿಸಲ್ಪಟ್ಟವು.
Ava nannoo avana santaanavannoo sevakarannoo avara akramakkaagi dandisuvenu; avara meleyoo yeroosalemina nivaasigala meleyoo yehoodada manushyara meleyoo naanu avarige virodhavaagi maataadidantha avaru kivigoda dantha kedannellaa baramaaduvenu.aaga yereviా yanu mattondu suraliyannu takkondu nereeyana maganaada lekhakanaada baarookanige kottanu; ivanu yehoodada arasanaada yehoyaakeemanu benkiyalli sutta pustakada vaakyagalannellaa yereviాyana baayinda banda haage baredanu; idallade avugala haagiruva aneka vaakyagalu avugala sangada koodisalpattavu.
Jeremiah 36:31 in English
- King James Version (KJV)
- And I will punish him and his seed and his servants for their iniquity; and I will bring upon them, and upon the inhabitants of Jerusalem, and upon the men of Judah, all the evil that I have pronounced against them; but they hearkened not.
- World English Bible (WEB)
- I will punish him, his offspring, and his servants for their iniquity. I will bring on them, on the inhabitants of Jerusalem, and on the men of Judah, all the evil that I have pronounced against them, but they didn’t listen.”’”
- American Standard Version (ASV)
- And I will punish him and his seed and his servants for their iniquity; and I will bring upon them, and upon the inhabitants of Jerusalem, and upon the men of Judah, all the evil that I have pronounced against them, but they hearkened not.
- Bible in Basic English (BBE)
- And I will send punishment on him and on his seed and on his servants for their evil-doing; I will send on them and on the people of Jerusalem and the men of Judah, all the evil which I said against them, but they did not give ear.
- Darby Translation (DBY)
- And I will visit their iniquity upon him, and upon his seed, and upon his servants; and I will bring upon them, and upon the inhabitants of Jerusalem, and upon the men of Judah, all the evil that I have pronounced against them; and they have not hearkened.
- Webster's Bible (WBS)
- And I will punish him and his seed and his servants for their iniquity; and I will bring upon them, and upon the inhabitants of Jerusalem, and upon the men of Judah, all the evil that I have pronounced against them; but they hearkened not.
- Young's Literal Translation (YLT)
- and I have charged on him, and on his seed, and on his servants, their iniquity; and I have brought in on them, and on the inhabitants of Jerusalem, and unto the men of Judah, all the evil that I have spoken unto them, and they hearkened not.'
Read in context
- 29ಯೆಹೂದದ ಅರಸನಾದ ಯೆಹೋಯಾಕೀಮನಿಗೆ ನೀನು ಹೇಳತಕ್ಕದ್ದೇನಂದರೆ--ಕರ್ತನು ಹೀಗೆ ಹೇಳು ತ್ತಾನೆ--ಬಾಬೆಲಿನ ಅರಸನು ನಿಶ್ಚಯವಾಗಿ ಬಂದು ಈ ದೇಶವನ್ನು ನಾಶಮಾಡಿ ಮನುಷ್ಯರನ್ನೂ ಪ್ರಾಣ ಗಳನ್ನೂ ಅದರೊಳಗಿಂದ ಹಾಳು ಮಾಡುವದು ಖಂಡಿತ ಎಂದು ಇದರಲ್ಲಿ ಯಾಕೆ ಬರೆದಿದ್ದೀ ಎಂದು ಹೇಳಿ ನೀನು ಈ ಸುರಳಿಯನ್ನು ಸುಟ್ಟಿದ್ದೀ.
- 30ಆದದರಿಂದ ಯೆಹೂದದ ಅರಸನಾದ ಯೆಹೋಯಾಕೀಮನನ್ನು ಕುರಿತು ಕರ್ತನು ಹೇಳುವದೇನಂದರೆ--ದಾವೀದನ ಸಿಂಹಾಸನದಲ್ಲಿ ಕೂತುಕೊಳ್ಳುವವನು ಅವನಿಗೆ ಇರು ವದಿಲ್ಲ; ಅವನ ಹೆಣವು ಹಗಲಿನಲ್ಲಿ ಬಿಸಲಿಗೂ ರಾತ್ರಿಯಲ್ಲಿ ಹಿಮಕ್ಕೂ ಬಿಸಾಡಲ್ಪಡುವದು.
- 31ಅವ ನನ್ನೂ ಅವನ ಸಂತಾನವನ್ನೂ ಸೇವಕರನ್ನೂ ಅವರ ಅಕ್ರಮಕ್ಕಾಗಿ ದಂಡಿಸುವೆನು; ಅವರ ಮೇಲೆಯೂ ಯೆರೂಸಲೇಮಿನ ನಿವಾಸಿಗಳ ಮೇಲೆಯೂ ಯೆಹೂದದ ಮನುಷ್ಯರ ಮೇಲೆಯೂ ನಾನು ಅವರಿಗೆ ವಿರೋಧವಾಗಿ ಮಾತಾಡಿದಂಥ ಅವರು ಕಿವಿಗೊಡ ದಂಥ ಕೇಡನ್ನೆಲ್ಲಾ ಬರಮಾಡುವೆನು.ಆಗ ಯೆರೆವಿಾ ಯನು ಮತ್ತೊಂದು ಸುರಳಿಯನ್ನು ತಕ್ಕೊಂಡು ನೇರೀಯನ ಮಗನಾದ ಲೇಖಕನಾದ ಬಾರೂಕನಿಗೆ ಕೊಟ್ಟನು; ಇವನು ಯೆಹೂದದ ಅರಸನಾದ ಯೆಹೋಯಾಕೀಮನು ಬೆಂಕಿಯಲ್ಲಿ ಸುಟ್ಟ ಪುಸ್ತಕದ ವಾಕ್ಯಗಳನ್ನೆಲ್ಲಾ ಯೆರೆವಿಾಯನ ಬಾಯಿಂದ ಬಂದ ಹಾಗೆ ಬರೆದನು; ಇದಲ್ಲದೆ ಅವುಗಳ ಹಾಗಿರುವ ಅನೇಕ ವಾಕ್ಯಗಳು ಅವುಗಳ ಸಂಗಡ ಕೂಡಿಸಲ್ಪಟ್ಟವು.
- 32ಆಗ ಯೆರೆವಿಾ ಯನು ಮತ್ತೊಂದು ಸುರಳಿಯನ್ನು ತಕ್ಕೊಂಡು ನೇರೀಯನ ಮಗನಾದ ಲೇಖಕನಾದ ಬಾರೂಕನಿಗೆ ಕೊಟ್ಟನು; ಇವನು ಯೆಹೂದದ ಅರಸನಾದ ಯೆಹೋಯಾಕೀಮನು ಬೆಂಕಿಯಲ್ಲಿ ಸುಟ್ಟ ಪುಸ್ತಕದ ವಾಕ್ಯಗಳನ್ನೆಲ್ಲಾ ಯೆರೆವಿಾಯನ ಬಾಯಿಂದ ಬಂದ ಹಾಗೆ ಬರೆದನು; ಇದಲ್ಲದೆ ಅವುಗಳ ಹಾಗಿರುವ ಅನೇಕ ವಾಕ್ಯಗಳು ಅವುಗಳ ಸಂಗಡ ಕೂಡಿಸಲ್ಪಟ್ಟವು.
Cross references
- Proverbs 29:1 ಜ್ಞಾನೋಕ್ತಿಗಳು 29:1ಅನೇಕ ಸಲ ಗದರಿಸಲ್ಪಟ್ಟರೂ ಬಗ್ಗದಕುತ್ತಿಗೆಯವನು ಏಳದ ಹಾಗೆ ಫಕ್ಕನೆ ಮುರಿದು ಬೀಳುವನು.
- Jeremiah 19:15 ಯೆರೆಮೀಯ 19:15ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಈ ಪಟ್ಟಣದ ಮೇಲೆಯೂ ಅದರ ಎಲ್ಲಾ ಊರುಗಳ ಮೇಲೆಯೂ ನಾನು ಅದಕ್ಕೆ ವಿರೋಧವಾಗಿ ಹೇಳಿದ ಕೇಡನ್ನೆಲ್ಲಾ ಬರ ಮಾಡುತ್ತೇನೆ; ಅವರು ನನ್ನ ಮಾತುಗಳನ್ನು ಕೇಳದ ಹಾಗೆ ತಮ್ಮ ಕುತ್ತಿಗೆಗಳನ್ನು ಕಠಿಣ ಮಾಡಿಕೊಂಡಿದ್ದಾರೆ.
- Jeremiah 23:34 ಯೆರೆಮೀಯ 23:34ಕರ್ತನ ಭಾರವೆಂದೆನ್ನುವ ಪ್ರವಾದಿ ಯಾಗಲಿ ಯಾಜಕನಾಗಲಿ ಜನರಾಗಲಿ ಅವರ ವಿಷಯ ವೇನಂದರೆ--ನಾನು ಅಂಥಾ ಮನುಷ್ಯನನ್ನೂ ಅವನ ಮನೆಯನ್ನೂ ಶಿಕ್ಷಿಸುವೆನು.
- Jeremiah 35:17 ಯೆರೆಮೀಯ 35:17ಇಸ್ರಾಯೇಲಿನ ದೇವರೂ ಸೈನ್ಯಗಳ ದೇವರಾದ ಕರ್ತನೂ ಹೇಳುವದೇನಂದರೆ--ಇಗೋ, ನಾನು ಯೆಹೂದದ ಮೇಲೆಯೂ ಯೆರೂಸಲೇಮಿನ ನಿವಾಸಿ ಗಳೆಲ್ಲರ ಮೇಲೆಯೂ ಅವರ ವಿಷಯವಾಗಿ ಹೇಳಿದ ಕೇಡನ್ನೆಲ್ಲಾ ಬರಮಾಡುತ್ತೇನೆ; ನಾನು ಅವರ ಸಂಗಡ ಮಾತನಾಡುವಾಗ ಅವರು ಕೇಳಲಿಲ್ಲ ಅವರನ್ನು ಕರೆಯು ವಾಗ ಉತ್ತರ ಕೊಡಲಿಲ್ಲ.
- Leviticus 26:14 ಯಾಜಕಕಾಂಡ 26:14ನೀವು ನನ್ನ ಮಾತನ್ನು ಕೇಳದೆ ಈ ಎಲ್ಲಾ ಆಜ್ಞೆಗಳ ಪ್ರಕಾರ ನಡೆಯದೆ ಹೋದರೆ
- Jeremiah 11:8 ಯೆರೆಮೀಯ 11:8ಆದರೆ ಅವರು ಕೇಳಲಿಲ್ಲ, ಕಿವಿಗೊಡಲಿಲ್ಲ; ತಮ್ಮ ಕೆಟ್ಟ ಹೃದಯದ ಕಲ್ಪನೆಯಂತೆ ನಡಕೊಂಡರು; ಆದದರಿಂದ ಅವರು ಮಾಡಬೇಕೆಂದು ನಾನು ಆಜ್ಞಾಪಿಸಿದಂಥ, ಅವರು ಮಾಡುವಂಥ, ಈ ಒಡಂಬಡಿಕೆಯ ಮಾತು ಗಳನ್ನೆಲ್ಲಾ ಅವರ ಮೇಲೆ ಬರಮಾಡುವೆನು.
- Jeremiah 44:4–14 ಯೆರೆಮೀಯ 44:4–14ಆದಾಗ್ಯೂ ನಾನು ನಿಮ್ಮ ಬಳಿಗೆ ನನ್ನ ಸೇವಕರಾದ ಪ್ರವಾದಿಗಳೆಲ್ಲರನ್ನು ಬೆಳಿಗ್ಗೆ ಎದ್ದು ಕಳುಹಿಸಿ--ಓ, ನಾನು ಹಗೆಮಾಡುವ ಈ ಅಸಹ್ಯವಾದ ಕಾರ್ಯವನ್ನು ಮಾಡಲೇ ಬೇಡಿರೆಂದು ಹೇಳಿದೆನು. ಆದರೆ ಅವರು ಕೇಳಲಿಲ್ಲ; ತಮ್ಮ ಕೆಟ್ಟತನದಿಂದ ತಿರುಗದೆಯೂ, ಬೇರೆ ದೇವರುಗಳಿಗೆ ಧೂಪಸುಡು ವದನ್ನು ಬಿಡದೆಯೂ ಇದ್ದರು; ನನ್ನ ಮಾತಿಗೆ ಕಿವಿ ಗೊಡಲಿಲ್ಲ. ಆದದರಿಂದ ನನ್ನ ಉರಿಯೂ ನನ್ನ ಕೋಪವೂ ಹೊಯ್ಯಲ್ಪಟ್ಟು, ಯೆಹೂದದ ಪಟ್ಟಣ ಗಳಲ್ಲಿಯೂ ಯೆರೂಸಲೇಮಿನ ಬೀದಿಗಳಲ್ಲಿಯೂ ಉರಿಯಿತು; ಅವು ಈ ಹೊತ್ತಿನಂತೆ ಹಾಳೂ ಬೀಡೂ ಆದವು. ಆದದರಿಂದ ಈಗ ಇಸ್ರಾಯೇಲಿನ ದೇವರೂ ಸೈನ್ಯಗಳ ದೇವರೂ ಆಗಿರುವ ಕರ್ತನು ಹೀಗೆ ಹೇಳುತ್ತಾನೆ--ಯಾಕೆ ನಿಮಗೆ ಉಳಿದಿರುವ ವರನ್ನು ಮಿಗಿಸದ ಹಾಗೆ ನೀವು ಗಂಡಸರನ್ನೂ ಹೆಂಗಸರನ್ನೂ ಮಗುವನ್ನೂ ಮೊಲೆ ಕೂಸನ್ನೂ ಯೆಹೂದದೊಳಗಿಂದ ಕಡಿದುಬಿಟ್ಟು ನಿಮ್ಮ ಪ್ರಾಣ ಗಳಿಗೆ ದೊಡ್ಡ ಕೇಡನ್ನು ಮಾಡಿಕೊಳ್ಳು ತ್ತೀರಿ? ಯಾಕೆ ನೀವು ನೀವೇ ನಿರ್ಮೂಲರಾಗುವ ಹಾಗೆಯೂ ನೀವು ಭೂಮಿಯ ಎಲ್ಲಾ ಜನಾಂಗಗಳಲ್ಲಿ ಶಾಪವೂ ನಿಂದೆಯೂ ಆಗುವ ಹಾಗೆಯೂ ನೀವು ತಂಗುವದಕ್ಕೆ ಹೋಗಿರುವ ಐಗುಪ್ತದೇಶದಲ್ಲಿ ಬೇರೆ ದೇವರುಗಳಿಗೆ ಧೂಪಸುಟ್ಟು, ನನಗೆ ಕೋಪವನ್ನು ಎಬ್ಬಿಸುತ್ತೀರಿ? ಯೆಹೂದದ ದೇಶದಲ್ಲಿಯೂ ಯೆರೂಸಲೇಮಿನ ಬೀದಿಗಳಲ್ಲಿಯೂ ಅವರು ಮಾಡಿದಂಥ, ನಿಮ್ಮ ತಂದೆಗಳ ಕೆಟ್ಟತನಗಳನ್ನೂ ಯೆಹೂದದ ಅರಸರ ಕೆಟ್ಟತನಗಳನ್ನೂ ಅವರ ಹೆಂಡತಿಯರ ಕೆಟ್ಟತನಗಳನ್ನೂ ನಿಮ್ಮ ಸ್ವಂತ ಕೆಟ್ಟತನಗಳನ್ನೂ ನಿಮ್ಮ ಹೆಂಡತಿಯರ ಕೆಟ್ಟತನಗಳನ್ನೂ ಮರೆತು ಬಿಟ್ಟಿದ್ದೀರೋ? ಈ ದಿನದ ವರೆಗೂ ಅವರು ತಗ್ಗಿಸಿಕೊಳ್ಳಲಿಲ್ಲ, ಭಯಪಡಲಿಲ್ಲ; ನಾನು ನಿಮ್ಮ ಮುಂದೆಯೂ ನಿಮ್ಮ ತಂದೆಗಳ ಮುಂದೆಯೂ ಇಟ್ಟ ನನ್ನ ನ್ಯಾಯ ಪ್ರಮಾಣದಲ್ಲಿಯೂ ನನ್ನ ನಿಯಮಗಳಲ್ಲಿಯೂ ನಡೆಯಲಿಲ್ಲ. ಆದದ ರಿಂದ ಇಸ್ರಾಯೇಲಿನ ದೇವರಾಗಿರುವ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಯೆಹೂದವನ್ನೆಲ್ಲಾ ಕಡಿದು ಬಿಡುವದಕ್ಕೆ ನನ್ನ ದೃಷ್ಟಿ ಯನ್ನು ಕೇಡಿಗಾಗಿ ನಿಮಗೆ ವಿರೋಧವಾಗಿ ಇಡುತ್ತೇನೆ. ಐಗುಪ್ತದೇಶಕ್ಕೆ ಹೋಗಿ ಅಲ್ಲಿ ತಂಗಬೇಕೆಂದು ತಮ್ಮ ಮುಖಗಳನ್ನು ತಿರುಗಿಸಿರುವ ಯೆಹೂದದಲ್ಲಿ ಉಳಿದಿರುವವರನ್ನು ತಕ್ಕೊಳ್ಳುತ್ತೇನೆ; ಅವರೆಲ್ಲರೂ ಕಡಿದು ಬಿಡಲ್ಪಟ್ಟ ಐಗುಪ್ತದೇಶದಲ್ಲಿ ಬೀಳುವರು; ಕತ್ತಿಯಿಂದಲೂ ಕ್ಷಾಮದಿಂದಲೂ ಕಡಿದು ಬಿಡಲ್ಪಡು ವರು; ಚಿಕ್ಕವನು ಮೊದಲುಗೊಂಡು ದೊಡ್ಡವನ ವರೆಗೂ ಕತ್ತಿಯಿಂದಲೂ ಕ್ಷಾಮದಿಂದಲೂ ಸಾಯು ವರು. ಅವರು ಅಸಹ್ಯವೂ ವಿಸ್ಮಯವೂ ಶಾಪವೂ ನಿಂದೆಯೂ ಆಗುವರು. ನಾನು ಯೆರೂಸಲೇಮನ್ನು ಶಿಕ್ಷಿಸಿದ ಹಾಗೆ ಐಗುಪ್ತದೇಶದಲ್ಲಿ ವಾಸಮಾಡು ವವರನ್ನು ಕತ್ತಿಯಿಂದಲೂ ಕ್ಷಾಮದಿಂದಲೂ ಜಾಡ್ಯ ದಿಂದಲೂ ಶಿಕ್ಷಿಸುವೆನು. ಐಗುಪ್ತ ದೇಶದಲ್ಲಿ ವಾಸಿಸುವದಕ್ಕೆ ಹೋಗಿರುವ ಯೆಹೂದದ ಉಳಿದಿರು ವವರು ತಾವು ತಿರುಗಿಕೊಂಡು ಯೆಹೂದದಲ್ಲಿ ವಾಸಮಾಡಬೇಕೆಂದು ಮನಸ್ಸು ಮಾಡಿರುವವರಲ್ಲಿ ಒಬ್ಬನಾದರೂ ಯೆಹೂದ ದೇಶಕ್ಕೆ ತಿರುಗಿಕೊಳ್ಳು ವದಕ್ಕೆ ತಪ್ಪಿಸಿಕೊಳ್ಳುವದಿಲ್ಲ, ನಿಲ್ಲುವದಿಲ್ಲ; ಓಡಿಹೋಗುವ ವರು ಅಲ್ಲದೆ ಇನ್ಯಾರೂ ಅಲ್ಲಿಗೆ ತಿರುಗಿ ಕೊಳ್ಳುವದಿಲ್ಲ.
- Deuteronomy 28:15–68 ಧರ್ಮೋಪದೇಶಕಾಂಡ 28:15–68ಆದರೆ ನೀನು ನಿನ್ನ ದೇವರಾದ ಕರ್ತನ ಮಾತನ್ನು ಕೇಳದೆ ನಾನು ಈ ಹೊತ್ತು ನಿನಗೆ ಆಜ್ಞಾಪಿಸುವ ಆತನ ಎಲ್ಲಾ ಆಜ್ಞೆಗಳನ್ನು ಕಾಪಾಡಿ ಕೈಕೊಳ್ಳದೆ ಹೋದರೆ ಈ ಎಲ್ಲಾ ಶಾಪಗಳು ನಿನ್ನ ಮೇಲೆ ಬಂದು ನಿನಗೆ ಪ್ರಾಪ್ತವಾಗುವವು. ಪಟ್ಟಣದಲ್ಲಿ ನಿನಗೆ ಶಾಪ; ಹೊಲದಲ್ಲಿ ನಿನಗೆ ಶಾಪ; ನಿನ್ನ ಪುಟ್ಟಿಗೂ ಕಣಜಕ್ಕೂ ಶಾಪ. ನಿನ್ನ ಗರ್ಭದ ಫಲಕ್ಕೂ ನಿನ್ನ ಭೂಮಿಯ ಫಲಕ್ಕೂ ಪಶುಗಳ ಹಿಂಡಿಗೂ ಕುರಿಗಳ ಮಂದೆಗಳಿಗೂ ಶಾಪ. ಬರು ವಾಗ ನಿನಗೆ ಶಾಪ; ಹೊರಡುವಾಗ ನಿನಗೆ ಶಾಪ. ನೀನು ನನ್ನನ್ನು ಬಿಟ್ಟು ನಿನ್ನ ದುಷ್ಕ್ರಿಯೆಗಳ ಕೆಟ್ಟತ ನದ ನಿಮಿತ್ತ ನೀನು ನಾಶವಾಗುವ ವರೆಗೂ ಶೀಘ್ರ ವಾಗಿ ಕೆಟ್ಟುಹೋಗುವ ವರೆಗೂ ನೀನು ಮಾಡುವ ಎಲ್ಲಾ ಕೈಕೆಲಸದಲ್ಲಿ ಶಾಪವನ್ನೂ ಗಾಬರಿಯನ್ನೂ ಗದರಿಕೆಯನ್ನೂ ಕರ್ತನು ನಿನ್ನ ಮೇಲೆ ಕಳುಹಿಸುವನು. ನೀನು ಸ್ವಾಧೀನಮಾಡಿಕೊಳ್ಳುವದಕ್ಕೆ ಹೋಗುವ ದೇಶದಲ್ಲಿಂದ ಹಾಳಾಗಿ ಹೋಗುವ ವರೆಗೆ ವ್ಯಾಧಿಯು ನಿನಗೆ ಅಂಟಿಕೊಳ್ಳುವಂತೆ ಕರ್ತನು ಮಾಡುವನು. ಕ್ಷಯರೋಗದಿಂದಲೂ ಜ್ವರದಿಂದಲೂ ಉರಿಪಾತ ದಿಂದಲೂ ಮಹಾತಾಪದಿಂದಲೂ ಕತ್ತಿಯಿಂದಲೂ ಕಾಡಿಗೆಯಿಂದಲೂ ಬಾಣಂತಿ ರೋಗದಿಂದಲೂ ಕರ್ತನು ನಿನ್ನನ್ನು ಹೊಡೆಯುವನು; ನೀನು ನಾಶ ವಾಗುವ ಪರ್ಯಂತರ ಅವು ನಿನ್ನನ್ನು ಹಿಂದಟ್ಟುವವು. ನಿನ್ನ ತಲೆಯ ಮೇಲಿರುವ ಆಕಾಶವು ತಾಮ್ರ ವಾಗಿಯೂ ನಿನ್ನ ಕೆಳಗಿರುವ ಭೂಮಿಯು ಕಬ್ಬಿಣ ವಾಗಿಯೂ ಇರುವವು. ಕರ್ತನು ನಿನ್ನ ದೇಶದ ಮಳೆಯನ್ನು ಹುಡಿಯೂ ಧೂಳೂ ಆಗುವಂತೆ ಮಾಡು ವನು; ನೀನು ನಾಶವಾಗುವ ವರೆಗೆ ಅದು ಆಕಾಶದಿಂದ ನಿನ್ನ ಮೇಲೆ ಇಳಿದು ಬರುವದು. ಕರ್ತನು ನಿನ್ನನ್ನು ನಿನ್ನ ಶತ್ರುಗಳ ಮುಂದೆ ಹೊಡೆದುಬಿಡುವನು; ನೀನು ಒಂದೇ ಮಾರ್ಗದಲ್ಲಿ ಅವರಿಗೆ ವಿರೋಧವಾಗಿ ಹೊರಟು ಏಳು ಮಾರ್ಗಗಳಲ್ಲಿ ಅವರ ಮುಂದೆ ಓಡಿಹೋಗಿ ಭೂಮಿಯ ಎಲ್ಲಾ ರಾಜ್ಯಗಳಿಗೆ ಚದರಿ ಹೋಗುವಿ. ನಿಮ್ಮ ಹೆಣಗಳು ಆಕಾಶದ ಎಲ್ಲಾ ಪಕ್ಷಿಗಳಿಗೂ ಭೂಮಿಯ ಮೃಗಗಳಿಗೂ ಆಹಾರವಾಗು ವವು; ಯಾರೂ ಅವುಗಳನ್ನು ಬೆದರಿಸುವದಿಲ್ಲ. ಕರ್ತನು ನಿನ್ನನ್ನು ಐಗುಪ್ತದ ಹುಣ್ಣುಗಳಿಂದಲೂ ಗಡ್ಡೆವ್ಯಾಧಿಯಿಂದಲೂ ಕಜ್ಜಿಯಿಂದಲೂ ಇಸಬಿನಿಂದ ಲೂ ನೀನು ವಾಸಿಯಾಗಕೂಡದ ಹಾಗೆ ಹೊಡೆ ಯುವನು. ಕರ್ತನು ನಿನ್ನನ್ನು ಹುಚ್ಚುತನದಿಂದಲೂ ಕುರುಡುತನದಿಂದಲೂ ಹೃದಯದ ವಿಸ್ಮಯದಿಂದಲೂ ಹೊಡೆಯುವನು. ಕುರುಡನು ಕತ್ತಲಲ್ಲಿ ತಡವರಿಸು ವಂತೆ ಮಧ್ಯಾಹ್ನದಲ್ಲಿ ತಡವರಿಸುತ್ತಾ ಇರುವಿ; ನಿನ್ನ ಮಾರ್ಗಗಳಲ್ಲಿ ಸಫಲವಾಗುವದಿಲ್ಲ; ನೀನು ಯಾವಾ ಗಲೂ ರಕ್ಷಿಸುವವನಿಲ್ಲದೆ ಬಲಾತ್ಕಾರವನ್ನೂ ಸುಲಿಗೆ ಯನ್ನೂ ಅನುಭವಿಸುವವನಾಗುವಿ. ಹೆಂಡತಿಯನ್ನು ನಿಶ್ಚಯಿಸಿಕೊಂಡರೆ ಮತ್ತೊಬ್ಬನು ಅವಳನ್ನು ಮದುವೆ ಮಾಡಿಕೊಳ್ಳುವನು; ಮನೆಯನ್ನು ಕಟ್ಟಿದರೆ ಅದರಲ್ಲಿ ವಾಸಮಾಡುವದಿಲ್ಲ; ದ್ರಾಕ್ಷೇತೋಟವನ್ನು ನೆಟ್ಟರೆ ಅದರ ಫಲವನ್ನು ಕೂಡಿಸುವದಿಲ್ಲ. ನಿನ್ನ ಎತ್ತು ನಿನ್ನ ಕಣ್ಣುಗಳ ಮುಂದೆ ಕೊಯ್ಯಲ್ಪಟ್ಟಾಗ ನೀನು ಅದರಲ್ಲಿ ತಿನ್ನುವದಿಲ್ಲ; ನಿನ್ನ ಕತ್ತೆ ನಿನ್ನ ಕಣ್ಣುಗಳ ಮುಂದೆ ಬಲಾತ್ಕಾರವಾಗಿ ಒಯ್ಯಲ್ಪಟ್ಟು ನಿನಗೆ ಮತ್ತೆ ಸಿಕ್ಕುವದಿಲ್ಲ; ನಿನ್ನ ಕುರಿಗಳು ನಿನ್ನ ಶತ್ರುವಿಗೆ ಕೊಡಲ್ಪಡುವವು; ಅವುಗಳನ್ನು ರಕ್ಷಿಸುವದಕ್ಕೆ ಯಾರೂ ಇರುವದಿಲ್ಲ. ನಿನ್ನ ಕುಮಾರ ಕುಮಾರ್ತೆಯರು ಬೇರೆ ಜನಕ್ಕೆ ಕೊಡಲ್ಪಟ್ಟಿರಲಾಗಿ ನಿನ್ನ ಕಣ್ಣುಗಳು ಅದನ್ನು ನೋಡಿ ಅವರ ನಿಮಿತ್ತ ಕ್ಷೀಣಿಸುತ್ತಾ ಇರುವಾಗ ನಿನ್ನ ಕೈಯಲ್ಲಿ ಏನೂ ತ್ರಾಣವಿಲ್ಲದೆ ಇರುವದು. ನಿನ್ನ ಭೂಮಿಯ ಫಲವನ್ನೂ ನಿನ್ನ ಎಲ್ಲಾ ಆದಾಯವನ್ನೂ ನೀನರಿಯದ ಜನವು ತಿಂದುಬಿಡುವದು; ನೀನು ಯಾವಾ ಗಲೂ ಬಲಾತ್ಕಾರವನ್ನೂ ಸಂಕಟವನ್ನೂ ಅನುಭವಿ ಸುವಿ. ನಿನ್ನ ಕಣ್ಣುಗಳು ನೋಡುವ ನೋಟದಿಂದ ಹುಚ್ಚನಾಗುವಿ. ಕರ್ತನು ನಿನ್ನನ್ನು ಮೊಣಕಾಲುಗಳಲ್ಲಿಯೂ ಕಾಲು ಗಳಲ್ಲಿಯೂ ವಾಸಿಮಾಡಕೂಡದ ಕೆಟ್ಟ ಉರಿ ಹುಣ್ಣಿ ನಿಂದ ಅಂಗಾಲು ಮೊದಲುಗೊಂಡು ನೆತ್ತಿಯ ವರೆಗೆ ಹೊಡೆಯುವನು. ಕರ್ತನು ನಿನ್ನನ್ನೂ ನೀನು ನಿನ್ನ ಮೇಲೆ ಇರಿಸಿಕೊಳ್ಳುವ ಅರಸನನ್ನೂ ನೀನೂ ನಿನ್ನ ಪಿತೃಗಳೂ ಅರಿಯದ ಜನಾಂಗದ ಬಳಿಗೆ ಹೋಗ ಮಾಡುವನು; ಅಲ್ಲಿ ಮರವೂ ಕಲ್ಲೂ ಆಗಿರುವ ಬೇರೆ ದೇವರುಗಳನ್ನು ನೀನು ಸೇವಿಸುವಿ. ಇದಲ್ಲದೆ ದೇವರು ನಿನ್ನನ್ನು ನಡಿಸುವ ಎಲ್ಲಾ ಜನಾಂಗಗಳಲ್ಲಿ ವಿಸ್ಮಯಕ್ಕೂ ಗಾದೆಗೂ ಹಾಸ್ಯಕ್ಕೂ ಗುರಿಯಾಗುವಿ. ಬಹಳ ಬೀಜವನ್ನು ಹೊಲಕ್ಕೆ ತಂದು ಸ್ವಲ್ಪ ಕೂಡಿಸುವಿ; ಯಾಕಂದರೆ ಮಿಡತೆ ಅದನ್ನು ತಿಂದು ಬಿಡುವದು. ದ್ರಾಕ್ಷೇತೋಟಗಳನ್ನು ನೆಟ್ಟು ಕಾಪಾ ಡುವಿ; ಆದರೆ ದ್ರಾಕ್ಷಾರಸವನ್ನು ಕುಡಿಯುವದಿಲ್ಲ. ಹಣ್ಣು ಕೂಡಿಸುವದಿಲ್ಲ; ಯಾಕಂದರೆ ಹುಳ ಅದನ್ನು ತಿಂದುಬಿಡುವದು. ಎಣ್ಣೇ ಮರಗಳು ನಿನ್ನ ಎಲ್ಲಾ ಮೇರೆಗಳಲ್ಲಿ ಇರುವವು. ಆದರೆ ನೀನು ಎಣ್ಣೆ ಹಚ್ಚಿಕೊಳ್ಳುವದಿಲ್ಲ; ಯಾಕಂದರೆ ನಿನ್ನ ಎಣ್ಣೇ ಫಲಗಳು ಉದುರುವವು. ಕುಮಾರ ಕುಮಾರ್ತೆಯರನ್ನು ಪಡೆಯುವಿ; ಆದರೆ ಅವರ ಕೂಡ ಸಂತೋಷಿಸು ವದಿಲ್ಲ; ಯಾಕಂದರೆ ಅವರು ಸೆರೆಯಾಗಿ ಹೋಗು ವರು. ನಿನ್ನ ಎಲ್ಲಾ ಮರಗಳನ್ನೂ ಹೊಲದ ಪೈರನ್ನೂ ಈ ಮಿಡತೆ ತಿಂದುಬಿಡುವದು. ನಿನ್ನ ಮಧ್ಯದಲ್ಲಿರುವ ಪರವಾಸಿ ಮೇಲೆ ಮೇಲಕ್ಕೆ ನಿನ್ನ ಮೇಲೆ ಏರುವನು; ಆದರೆ ನೀನು ಕೆಳ ಕೆಳಗೆ ಇಳಿಯುವಿ. ಅವನು ನಿನಗೆ ಸಾಲಕೊಡುವನು; ನೀನು ಅವನಿಗೆ ಸಾಲ ಕೊಡುವದಿಲ್ಲ. ಅವನು ತಲೆಯಾಗುವನು, ನೀನು ಬಾಲವಾಗುವಿ. ಇದಲ್ಲದೆ ನೀನು ನಿನ್ನ ದೇವರಾದ ಕರ್ತನ ವಾಕ್ಯವನ್ನು ಕೇಳದೆ ಆತನ ಆಜ್ಞೆಗಳನ್ನೂ ಆತನು ನಿನಗೆ ಆಜ್ಞಾಪಿಸಿದ ನಿಯಮಗಳನ್ನೂ ಕೈಕೊಳ್ಳದೆ ಇದ್ದದರಿಂದ ಈ ಶಾಪಗಳೆಲ್ಲಾ ನಿನ್ನ ಮೇಲೆ ಬಂದು ನಿನ್ನನ್ನು ನಾಶಮಾಡುವ ವರೆಗೂ ನಿನ್ನನ್ನು ಹಿಂದಟ್ಟಿ ನಿನಗೆ ಪ್ರಾಪ್ತವಾಗುವವು. ಅವು ನಿನ್ನ ಮೇಲೆಯೂ ನಿನ್ನ ಸಂತತಿಯ ಮೇಲೆಯೂ ನಿತ್ಯವಾಗಿ ಗುರುತೂ ಅದ್ಭುತವೂ ಆಗಿರುವವು. ನೀನು ಎಲ್ಲವುಗಳ ಸಮೃದ್ಧಿಯಲ್ಲಿ ನಿನ್ನ ದೇವರಾದ ಕರ್ತನಿಗೆ ಸಂತೋಷದಿಂದಲೂ ಮನಸ್ಸಿನ ಸೌಖ್ಯ ದಿಂದಲೂ ಸೇವಿಸದೆ ಇದದ್ದರಿಂದ ಹಸಿವೆಯಲ್ಲಿ, ದಾಹದಲ್ಲಿ, ಬೆತ್ತಲೆಯಲ್ಲಿ, ಎಲ್ಲವುಗಳ ಕೊರತೆಯಲ್ಲಿ ದೇವರು ನಿನ್ನ ಮೇಲೆ ಕಳುಹಿಸುವ ನಿನ್ನ ಶತ್ರುಗಳನ್ನು ಸೇವಿಸಬೇಕು; ಆತನು ನಿನ್ನನ್ನು ನಾಶಮಾಡುವ ವರೆಗೆ ಕಬ್ಬಿಣದ ನೊಗವನ್ನು ನಿನ್ನ ಕುತ್ತಿಗೆಯ ಮೇಲೆ ಹೊರಿ ಸುವನು. ಕರ್ತನು ದೂರದಿಂದ ಅಂದರೆ ಭೂಮಿಯ ಅಂತ್ಯದಿಂದ ಹಾರುವ ಹದ್ದಿಗೆ ಸಮಾನವಾದ ಜನಾಂಗ ವನ್ನೂ ನಿನಗೆ ತಿಳಿಯದ ಭಾಷೆಯ ಜನಾಂಗವನ್ನೂ ಮುದುಕರ ಮುಖದಾಕ್ಷಿಣ್ಯ ನೋಡದೆಯೂ ಚಿಕ್ಕವ ರಿಗೆ ದಯೆತೋರಿಸದೆ ಇರುವಂಥ ಕಠಿಣ ಮುಖವುಳ್ಳ ಜನಾಂಗವನ್ನೂ ನಿನ್ನ ಮೇಲೆ ಬರಮಾಡುವನು. ಅದು ನಿನ್ನ ಪಶುಗಳ ಫಲವನ್ನೂ ನಿನ್ನ ಭೂಮಿಯ ಫಲವನ್ನೂ ನೀನು ನಾಶವಾಗುವ ವರೆಗೆ ತಿಂದು ಬಿಡುವದು; ಅದು ನಿನ್ನನ್ನು ಕೆಡಿಸುವ ವರೆಗೆ ಧಾನ್ಯ ದ್ರಾಕ್ಷಾರಸ ಎಣ್ಣೆಗಳನ್ನೂ ಪಶುಗಳ ಅಭಿವೃದ್ಧಿಯನ್ನೂ ಕುರಿಗಳ ಮಂದೆಗಳನ್ನೂ ನಿನಗೆ ಉಳಿಸದು. ನಿನ್ನ ದೇಶದಲ್ಲೆಲ್ಲಾ ನೀನು ನಂಬಿಕೊಂಡಿರುವ ಉದ್ದವಾದ ಮತ್ತು ಭದ್ರವಾದ ನಿನ್ನ ಗೋಡೆಗಳೆಲ್ಲಾ ಬೀಳುವ ವರೆಗೆ ನಿನ್ನ ಎಲ್ಲಾ ಬಾಗಲುಗಳಲ್ಲಿ ನಿನಗೆ ಮುತ್ತಿಗೆ ಹಾಕುವದು; ನಿನ್ನ ದೇವರಾದ ಕರ್ತನು ನಿನಗೆ ಕೊಟ್ಟ ನಿನ್ನ ದೇಶದಲ್ಲೆಲ್ಲಾ ನಿನ್ನ ಎಲ್ಲಾ ಬಾಗಲುಗಳಲ್ಲಿ ನಿನಗೆ ಮುತ್ತಿಗೆಹಾಕುವನು. ಆಗ ಮುತ್ತಿಗೆಯಲ್ಲಿಯೂ ನಿನ್ನ ಶತ್ರುಗಳು ನಿನಗೆ ಮಾಡುವ ಇಕ್ಕಟ್ಟಿನಲ್ಲಿಯೂ ನಿನ್ನ ಗರ್ಭದ ಫಲವನ್ನೂ ನಿನ್ನ ದೇವರಾದ ಕರ್ತನು ನಿನಗೆ ಕೊಟ್ಟ ಕುಮಾರ ಕುಮಾರ್ತೆಯರ ಮಾಂಸವನ್ನೂ ತಿನ್ನುವಿ. ನಿನ್ನಲ್ಲಿ ಮೃದುವಾದವನೂ ಬಹಳ ಸೂಕ್ಷ್ಮ ಗುಣವುಳ್ಳವನೂ ಯಾವನೋ ಅವನ ಕಣ್ಣು ತನ್ನ ಸಹೋದರನ ಕಡೆಗೂ ತನ್ನ ಮಗ್ಗುಲಲ್ಲಿರುವ ತನ್ನ ಹೆಂಡತಿಯ ಕಡೆಗೂ ಅವನು ಉಳಿಸಿಕೊಳ್ಳುವ ಮಕ್ಕಳ ಕಡೆಗೂ ಕಠಿಣವಾಗುವದು. ಮುತ್ತಿಗೆಯಲ್ಲಿಯೂ ನಿನ್ನ ಶತ್ರುಗಳು ನಿನ್ನ ಎಲ್ಲಾ ಬಾಗಲುಗಳಲ್ಲಿ ನಿನಗೆ ಮಾಡುವ ಇಕ್ಕಟ್ಟಿನಲ್ಲಿಯೂ ತನಗೆ ಸಾಕಾಗುವದಿಲ್ಲ ಅಂದುಕೊಂಡು ಅವನು ತಿನ್ನುವ ತನ್ನ ಮಕ್ಕಳ ಮಾಂಸದಲ್ಲಿ ಅವರೊಳಗೆ ಒಬ್ಬನಿಗಾದರೂ ಏನೂ ಕೊಡುವದಿಲ್ಲ. ನಿನ್ನಲ್ಲಿ ಮೃದುವಾದವಳೂ ಬಹಳ ಸೂಕ್ಷ್ಮಗುಣವುಳ್ಳವಳೂ ಯಾವಳೋ ಮೃದುತನ ದಿಂದಲೂ ಸೂಕ್ಷ್ಮಗುಣದಿಂದಲೂ ನೆಲಕ್ಕೆ ಅಂಗಾಲನ್ನು ನಿಲ್ಲಿಸಲಾರದವಳು ಯಾವಳೋ ಅವಳು ತನ್ನ ಮಗ್ಗುಲ ಲ್ಲಿರುವ ಗಂಡನ ಕಡೆಗೂ ತನ್ನ ಮಗನ, ಮಗಳ ಕಡೆಗೂ ತನ್ನ ಕಾಲುಗಳ ನಡುವೆಯಿಂದ ಬರುವ ಶಿಶುವಿನ ಕಡೆಗೂ ತಾನು ಹೆತ್ತಮಕ್ಕಳ ಕಡೆಗೂ ಕಠಿಣ ಕಣ್ಣುಳ್ಳವಳಾಗಿರುವಳು; ಯಾಕಂದರೆ ಎಲ್ಲಾದರ ಕೊರತೆಯಲ್ಲಿಯೂ ಮುತ್ತಿಗೆಯಲ್ಲಿಯೂ ನಿನ್ನ ಶತ್ರು ನಿನಗೆ ನಿನ್ನ ಬಾಗಲುಗಳಲ್ಲಿ ಮಾಡುವ ಇಕ್ಕಟ್ಟಿನಲ್ಲಿಯೂ ಅವರನ್ನು ಗುಪ್ತವಾಗಿ ತಿಂದು ಬಿಡುವಳು. ನಿನ್ನ ದೇವರಾದ ಕರ್ತನೆಂಬ ಈ ಘನವುಳ್ಳ ಭಯಂಕರವಾದ ಹೆಸರಿಗೆ ಭಯಪಡಬೇಕೆಂದು ಈ ಪುಸ್ತಕದಲ್ಲಿ ಬರೆದಿರುವ ಈ ನ್ಯಾಯಪ್ರಮಾಣದ ಮಾತುಗಳನ್ನು ಕಾಪಾಡದೆ, ಕೈಕೊಳ್ಳದೆ ಹೋದರೆ ಕರ್ತನು ನಿನ್ನ ಬಾಧೆಗಳನ್ನೂ ನಿನ್ನ ಸಂತತಿಯ ಬಾಧೆಗಳನ್ನೂ ಆಶ್ಚರ್ಯವಾಗ ಮಾಡುವನು; ಅವು ದೊಡ್ಡದಾದ ಮತ್ತು ಸ್ಥಿರವಾದ ಬಾಧೆಗಳೂ ಘೋರ ವಾದ ಮತ್ತು ಸ್ಥಿರವಾದ ರೋಗಗಳೂ ಆಗುವವು. ಇದಲ್ಲದೆ ನೀನು ಹೆದರಿಕೊಂಡ ಐಗುಪ್ತದ ರೋಗ ಗಳನ್ನೆಲ್ಲಾ ಆತನು ತಿರಿಗಿ ನಿನ್ನ ಮೇಲೆ ಬರಮಾಡು ವನು; ಅವು ನಿನ್ನನ್ನು ಅಂಟಿಕೊಳ್ಳುವವು. ನೀನು ಪೂರ್ಣವಾಗಿ ನಾಶವಾಗುವ ವರೆಗೆ ಈ ನ್ಯಾಯ ಪ್ರಮಾಣದ ಪುಸ್ತಕದಲ್ಲಿ ಬರೆಯದ ರೋಗಗಳನ್ನೂ ಬೇನೆಗಳನ್ನೂ ಕರ್ತನು ನಿನ್ನ ಮೇಲೆ ತರುವನು. ಆಗ ನೀನು ನಿನ್ನ ದೇವರಾದ ಕರ್ತನ ಮಾತನ್ನು ಕೇಳದೆ ಇರುವದರಿಂದ ನೀವು ಅಸಂಖ್ಯವಾದ ಆಕಾಶದ ನಕ್ಷತ್ರಗಳ ಹಾಗಿದ್ದದ್ದಕ್ಕೆ ಬದಲಾಗಿ ಸ್ವಲ್ಪ ಮಂದಿಯಾಗಿ ಉಳಿಯುವಿರಿ. ಆಗುವದೇನಂದರೆ, ಕರ್ತನು ಹೇಗೆ ನಿಮಗೆ ಒಳ್ಳೇದನ್ನು ಮಾಡುವದಕ್ಕೂ ನಿಮ್ಮನ್ನು ಹೆಚ್ಚಿಸು ವದಕ್ಕೂ ನಿಮಗೋಸ್ಕರ ಸಂತೋಷಿಸಿದನೋ ಹಾಗೆ ಕರ್ತನು ನಿಮ್ಮನ್ನು ಕೆಡಿಸುವದಕ್ಕೂ ನಿಮ್ಮನ್ನು ನಾಶ ಮಾಡುವದಕ್ಕೂ ನಿಮಗೆ ವಿರೋಧವಾಗಿ ಸಂತೋಷಿ ಸುವನು; ನೀವು ಸ್ವಾಧೀನಮಾಡಿಕೊಳ್ಳುವದಕ್ಕೆ ಹೋಗುವ ದೇಶದಿಂದ ನೀನು ಕೀಳಲ್ಪಡುವಿ. ಇದ ಲ್ಲದೆ ಕರ್ತನು ನಿನ್ನನ್ನು ಭೂಮಿಯ ಈ ಮೇರೆಯಿಂದ ಆ ಮೇರೆಯ ವರೆಗೂ ಎಲ್ಲಾ ಜನಗಳಲ್ಲಿ ಚದರಿಸು ವನು; ಅಲ್ಲಿ ನೀನೂ ನಿನ್ನ ಪಿತೃಗಳೂ ತಿಳಿಯದಂಥ ಮರವೂ ಕಲ್ಲೂ ಆಗಿರುವಂಥ ಬೇರೆ ದೇವರುಗಳನ್ನು ಸೇವಿಸುವಿ. ಈ ಜನಾಂಗಗಳಲ್ಲಿ ನಿನಗೆ ನೆಮ್ಮದಿ ಇರುವದಿಲ್ಲ; ನಿನ್ನ ಅಂಗಾಲಿಗೆ ವಿಶ್ರಾಂತಿ ಆಗುವದಿಲ್ಲ; ಅಲ್ಲಿ ಕರ್ತನು ನಿನಗೆ ನಡುಗುವ ಹೃದಯವನ್ನೂ ಕ್ಷೀಣಿಸುವ ಕಣ್ಣುಗಳನ್ನೂ ಕುಗ್ಗಿದ ಮನಸ್ಸನ್ನೂ ಕೊಡು ವನು. ನಿನ್ನ ಜೀವವು ನಿನ್ನ ಮುಂದೆ ತೂಗಾಡುವದು. ರಾತ್ರಿ ಹಗಲು ನಿನ್ನ ಜೀವನಕ್ಕೆ ನಿಶ್ಚಯವಿಲ್ಲದೆ ಹೆದರುವಿ. ನಿನ್ನ ಹೃದಯದಲ್ಲಿ ಆಗುವ ಹೆದರಿಕೆಯ ನಿಮಿತ್ತವೂ ನಿನ್ನ ಕಣ್ಣುಗಳು ನೋಡುವ ನೋಟದ ನಿಮಿತ್ತವೂ ಮುಂಜಾನೆಯಲ್ಲಿ--ಅಯ್ಯೋ, ಸಂಜೆ ಆಗ ಬೇಕು ಅನ್ನುವಿ. ಸಂಜೆಯಲ್ಲಿ--ಅಯ್ಯೋ, ಮುಂಜಾನೆ ಆಗಬೇಕು ಅನ್ನುವಿ.ಇದಲ್ಲದೆ ಕರ್ತನು--ನೀನು ಇನ್ನು ಮೇಲೆ ನೋಡುವದಿಲ್ಲವೆಂದು ನಾನು ಹೇಳಿದ ಮಾರ್ಗದಿಂದ ಹಡಗುಗಳಲ್ಲಿ ನಿನ್ನನ್ನು ಐಗುಪ್ತ್ಯಕ್ಕೆ ತಿರಿಗಿ ಬರಮಾಡುವೆನು; ಅಲ್ಲಿ ದಾಸ ರಾಗಿಯೂ ದಾಸಿಗಳಾಗಿಯೂ ನಿಮ್ಮ ಶತ್ರುಗಳಿಗೆ ಮಾರಲ್ಪಡುವಿರಿ. ಆದರೆ ಕೊಂಡುಕೊಳ್ಳುವವ ನೊಬ್ಬನೂ ಇರುವದಿಲ್ಲ. ಇದಲ್ಲದೆ ಕರ್ತನು--ನೀನು ಇನ್ನು ಮೇಲೆ ನೋಡುವದಿಲ್ಲವೆಂದು ನಾನು ಹೇಳಿದ ಮಾರ್ಗದಿಂದ ಹಡಗುಗಳಲ್ಲಿ ನಿನ್ನನ್ನು ಐಗುಪ್ತ್ಯಕ್ಕೆ ತಿರಿಗಿ ಬರಮಾಡುವೆನು; ಅಲ್ಲಿ ದಾಸ ರಾಗಿಯೂ ದಾಸಿಗಳಾಗಿಯೂ ನಿಮ್ಮ ಶತ್ರುಗಳಿಗೆ ಮಾರಲ್ಪಡುವಿರಿ. ಆದರೆ ಕೊಂಡುಕೊಳ್ಳುವವ ನೊಬ್ಬನೂ ಇರುವದಿಲ್ಲ.
- Matthew 23:37 ಮತ್ತಾಯನು 23:37ಓ ಯೆರೂಸಲೇಮೇ, ಯೆರೂಸಲೇಮೇ, ಪ್ರವಾದಿಗಳನ್ನು ಕೊಲ್ಲುವವಳೇ, ನಿನ್ನ ಬಳಿಗೆ ಕಳುಹಿಸ ಲ್ಪಟ್ಟವರನ್ನು ಕಲ್ಲೆಸೆಯುವವಳೇ, ಕೋಳಿಯು ಮರಿಗಳನ್ನು ತನ್ನ ರೆಕ್ಕೆಗಳ ಕೆಳಗೆ ಕೂಡಿಸುವಂತೆ ನಿನ್ನ ಮಕ್ಕಳನ್ನು ಕೂಡಿಸುವದಕ್ಕೆ ನನಗೆ ಎಷ್ಟೋ ಸಾರಿ ಮನಸ್ಸಿತ್ತು; ಆದರೆ ನಿನಗೆ ಮನ
- Jeremiah 29:17–19 ಯೆರೆಮೀಯ 29:17–19ಸೈನ್ಯಗಳ ಕರ್ತನು ಹೇಳುವದೇನಂದರೆ-- ಇಗೋ, ನಾನು ಅವರಲ್ಲಿ ಕತ್ತಿಯನ್ನೂ ಕ್ಷಾಮವನ್ನೂ ಜಾಡ್ಯವನ್ನೂ ಕಳುಹಿಸಿ, ಅವರನ್ನು ಕೆಟ್ಟವರನ್ನಾಗಿ ಮಾಡಿ ರುವದರಿಂದ, ತಿನ್ನಕೂಡದ ಅಸಹ್ಯವಾದ ಅಂಜೂರ ಗಳ ಹಾಗೆ ಮಾಡುವೆನು. ಕತ್ತಿಯಿಂದಲೂ ಕ್ಷಾಮ ದಿಂದಲೂ ಜಾಡ್ಯದಿಂದಲೂ ಅವರನ್ನು ಹಿಂಸಿಸಿ ನಾನು ಅವರನ್ನು ಓಡಿಸಿಬಿಟ್ಟ ಎಲ್ಲಾ ಜನಾಂಗಗಳಲ್ಲಿ ಶಾಪಕ್ಕೂ ವಿಸ್ಮಯಕ್ಕೂ ಸಿಳ್ಳಿಡುವಿಕೆಗೂ ನಿಂದೆಗೂ ಗುರಿಯಾಗುವ ಹಾಗೆ ಒಪ್ಪಿಸಿಬಿಡುವೆನು. ಅವರು ನನ್ನ ವಾಕ್ಯಗಳನ್ನು ಕೇಳಲಿಲ್ಲ ಎಂದು ಕರ್ತನು ಅನ್ನುತ್ತಾನೆ; ನಾನು ಅವರಿಗೆ ನನ್ನ ಸೇವಕರಾದ ಪ್ರವಾದಿಗಳನ್ನು ಬೆಳಗಿನಲ್ಲಿಯೇ ಕಳುಹಿಸಿದೆನು; ಆದರೆ ನೀವು ಕೇಳಲಿಲ್ಲವೆಂದು ಕರ್ತನು ಅನ್ನುತ್ತಾನೆ.
- Jeremiah 17:18 ಯೆರೆಮೀಯ 17:18ನನ್ನನ್ನು ಹಿಂಸಿಸುವವರು ನಾಚಿಕೆ ಪಡಲಿ; ಆದರೆ ನನಗೆ ನಾಚಿಕೆಯಾಗದಿರಲಿ. ಅವರು ದಿಗಿಲುಪಡಲಿ; ಆದರೆ ನಾನು ದಿಗಿಲುಪಡದಂತೆ ಮಾಡುವ ಕೆಟ್ಟದಿನವನ್ನು ಅವರ ಮೇಲೆ ಬರಮಾಡು, ಎರಡರಷ್ಟು ಅವರನ್ನು ನಾಶಪಡಿಸು.
Original words (Hebrew)
- punish · H6485פָּקַד pâqad
- seed · H2233זֶרַע zeraʻ
- servants · H5650עֶבֶד ʻebed
- iniquity · H5771עָוֺן ʻâvôn
- bring · H935בּוֹא bôwʼ
- inhabitants · H3427יָשַׁב yâshab
- Jerusalem · H3389יְרוּשָׁלַ͏ִם Yᵉrûwshâlaim
- men · H376אִישׁ ʼîysh
- Judah · H3063יְהוּדָה Yᵉhûwdâh
- evil · H7451רַע raʻ
- pronounced · H1696דָבַר dâbar
- hearkened · H8085שָׁמַע shâmaʻ