Jeremiah · chapter 41 · verse 12
Jeremiah 41:12 in Kannada
ಆ ಮನುಷ್ಯರನ್ನೆಲ್ಲಾ ಕರಕೊಂಡು, ನೆತನ್ಯನ ಮಗನಾದ ಇಷ್ಮಾಯೇಲನ ಸಂಗಡ ಯುದ್ಧ ಮಾಡುವದಕ್ಕೆ ಹೋಗಿ ಗಿಬ್ಯೋನಿ ನಲ್ಲಿರುವ ದೊಡ್ಡ ನೀರುಗಳ ಬಳಿಯಲ್ಲಿ ಅವನನ್ನು ಕಂಡರು.
Aa manushyarannellaa karakondu, netanyana maganaada ishmaayelana sangada yuddha maaduvadakke hogi gibyoni nalliruva dodda neerugala baliyalli avanannu kandaru.
Jeremiah 41:12 in English
- King James Version (KJV)
- Then they took all the men, and went to fight with Ishmael the son of Nethaniah, and found him by the great waters that [are] in Gibeon.
- World English Bible (WEB)
- then they took all the men, and went to fight with Ishmael the son of Nethaniah, and found him by the great waters that are in Gibeon.
- American Standard Version (ASV)
- then they took all the men, and went to fight with Ishmael the son of Nethaniah, and found him by the great waters that are in Gibeon.
- Bible in Basic English (BBE)
- They took their men and went out to make war on Ishmael, the son of Nethaniah, and they came face to face with him by the great waters in Gibeon.
- Darby Translation (DBY)
- and they took all the men, and went to fight with Ishmael the son of Nethaniah, and found him by the great waters that are at Gibeon.
- Webster's Bible (WBS)
- Then they took all the men, and went to fight with Ishmael the son of Nethaniah, and found him by the great waters that [are] in Gibeon.
- Young's Literal Translation (YLT)
- and they take all the men, and go to fight with Ishmael son of Nethaniah, and they find him at the great waters that [are] in Gibeon.
Read in context
- 10ಇಷ್ಮಾಯೇಲನು ಮಿಚ್ಪದ ಲ್ಲಿದ್ದ ಉಳಿದವರನ್ನೆಲ್ಲಾ ಅರಸನ ಕುಮಾರ್ತೆಯರನ್ನೂ ಕಾವಲಿನವರ ಅಧಿಪತಿಯಾದ ನೆಬೂಜರದಾನನು ಅಹೀಕಾಮನ ಮಗನಾದ ಗೆದಲ್ಯನಿಗೆ ಒಪ್ಪಿಸಿಕೊಟ್ಟ ಉಳಿದ ಜನರೆಲ್ಲರನ್ನೂ ಸೆರೆಯಾಗಿ ಒಯ್ದನು; ನೆತನ್ಯನ ಮಗನಾದ ಇಷ್ಮಾಯೇಲನು ಅವರನ್ನು ಸೆರೆಯಾಗಿ ಒಯ್ದು ಅಮ್ಮೋನ್ಯನ ಮಕ್ಕಳ ಬಳಿಗೆ ದಾಟಿ ಹೋಗು ವದಕ್ಕೆ ಹೊರಟನು.
- 11ಆದರೆ ಕಾರೇಹನ ಮಗನಾದ ಯೋಹಾನಾ ನನೂ ಅವನ ಸಂಗಡ ಇದ್ದ ಸೈನ್ಯಾಧಿಪತಿಗಳೆಲ್ಲರೂ ನೆತನ್ಯನ ಮಗನಾದ ಇಷ್ಮಾಯೇಲನು ಮಾಡಿದ್ದ ಕೇಡನ್ನೆಲ್ಲಾ ಕೇಳಿದ ಮೇಲೆ
- 12ಆ ಮನುಷ್ಯರನ್ನೆಲ್ಲಾ ಕರಕೊಂಡು, ನೆತನ್ಯನ ಮಗನಾದ ಇಷ್ಮಾಯೇಲನ ಸಂಗಡ ಯುದ್ಧ ಮಾಡುವದಕ್ಕೆ ಹೋಗಿ ಗಿಬ್ಯೋನಿ ನಲ್ಲಿರುವ ದೊಡ್ಡ ನೀರುಗಳ ಬಳಿಯಲ್ಲಿ ಅವನನ್ನು ಕಂಡರು.
- 13ಆಗ ಆದದ್ದೇನಂದರೆ--ಇಷ್ಮಾಯೇಲನ ಸಂಗಡ ಇದ್ದ ಜನರೆಲ್ಲರೂ ಕಾರೇಹನ ಮಗನಾದ ಯೋಹಾನಾನನನ್ನೂ ಅವನ ಸಂಗಡ ಇದ್ದ ಸೈನ್ಯಾಧಿ ಪತಿಗಳೆಲ್ಲರನ್ನೂ ನೋಡಿದಾಗ ಸಂತೋಷಪಟ್ಟರು.
- 14ಇಷ್ಮಾಯೇಲನು ಮಿಚ್ಪದಿಂದ ಸೆರೆಯಾಗಿ ತಂದ ಜನರೆಲ್ಲರೂ ಕೂಡಿ ತಿರುಗಿಕೊಂಡು ಕಾರೇಹನ ಮಗ ನಾದ ಯೋಹಾನಾನನ ಬಳಿಗೆ ಬಂದರು.
Cross references
- 2 Samuel 2:13 2 ಸಮುವೇಲನು 2:13ಹಾಗೆಯೇ ಚೆರೂಯಳ ಮಗನಾದ ಯೋವಾಬನೂ ದಾವೀದನ ಸೇವಕರೂ ಹೊರಟು ಗಿಬ್ಯೋನಿನ ಕೊಳದ ಬಳಿಯಲ್ಲಿ ಕೂಡಿಬಂದರು; ಅವರು ಕೊಳದ ಆಚೆಯಲ್ಲಿಯೂ ಇವರು ಕೊಳದ ಈಚೆಯಲ್ಲಿಯೂ ಕೂತುಕೊಂಡರು.
- Genesis 14:14–16 ಆದಿಕಾಂಡ 14:14–16ತನ್ನ ಸಹೋದರನು ಸೆರೆ ಯಾಗಿ ಒಯ್ಯಲ್ಪಟ್ಟನೆಂದು ಕೇಳಿ ಅಬ್ರಾಮನು ತನ್ನ ಮನೆಯಲ್ಲಿ ಹುಟ್ಟಿ ಶಿಕ್ಷಿತರಾಗಿದ್ದ ಮುನ್ನೂರ ಹದಿನೆಂಟು ಸೇವಕರನ್ನು ಯುದ್ಧಕ್ಕೆ ಸಿದ್ಧಮಾಡಿ ದಾನಿನ ವರೆಗೆ ಹಿಂದಟ್ಟಿ ರಾತ್ರಿಯಲ್ಲಿ ಅವರಿಗೆ ವಿರೋಧ ವಾಗಿ ತನ್ನ ಸೇವಕರ ಸೈನ್ಯವನ್ನು ವಿಭಾಗಿಸಿ ಅವರನ್ನು ಹೊಡೆದು ದಮಸ್ಕದ ಬಲಗಡೆಯಲ್ಲಿರುವ ಹೋಬಾದ ವರೆಗೆ ಅವರನ್ನು ಸಂಹರಿಸಿ ಸಂಪತ್ತನ್ನೆಲ್ಲಾ ಹಿಂದಕ್ಕೆ ತೆಗೆದುಕೊಂಡು ಬಂದನು. ತನ್ನ ಸಹೋದರನಾದ ಲೋಟನನ್ನೂ ಅವನ ಸಂಪತ್ತನ್ನೂ ಸ್ತ್ರೀಯರನ್ನೂ ಜನರನ್ನೂ ಹಿಂದಕ್ಕೆ ತಕ್ಕೊಂಡು ಬಂದನು.
- 1 Samuel 30:1–8 1 ಸಮುವೇಲನು 30:1–8ದಾವೀದನೂ ಅವನ ಜನರೂ ಮೂರನೇದಿವಸದಲ್ಲಿ ಚಿಕ್ಲಗಿಗೆ ಬಂದು ಸೇರುವಷ್ಟರಲ್ಲಿ ಏನಾಯಿತಂದರೆ, ಅಮಾಲೇಕ್ಯರು ದಕ್ಷಿಣ ಸೀಮೆಯ ಮೇಲೆಯೂ ಚಿಕ್ಲಗಿನ ಮೇಲೆಯೂ ಬಂದು ಬಿದ್ದು ಚಿಕ್ಲಗನ್ನು ಹೊಡೆದು ಅದನ್ನು ಬೆಂಕಿಯಿಂದ ಸುಟ್ಟುಬಿಟ್ಟು ಅದರಲ್ಲಿದ್ದ ಸ್ತ್ರೀಯರನ್ನು ಸೆರೆಹಿಡಿದು ಹಿರಿಯರ ನ್ನಾದರೂ ಕಿರಿಯರನ್ನಾದರೂ ಕೊಂದುಹಾಕದೆ ಅವ ರನ್ನು ಸೆರೆಯಾಗಿ ತೆಗೆದುಕೊಂಡು ತಮ್ಮ ಮಾರ್ಗ ವಾಗಿ ಹೊರಟುಹೋದರು. ದಾವೀದನೂ ಅವನ ಜನರೂ ಆ ಪಟ್ಟಣಕ್ಕೆ ಬಂದಾಗ ಇಗೋ, ಅದು ಬೆಂಕಿಯಿಂದ ಸುಟ್ಟು ಹಾಕಲ್ಪಟ್ಟಿತ್ತು. ಇದಲ್ಲದೆ ಅವರ ಹೆಂಡತಿಯರೂ ಕುಮಾರರೂ ಕುಮಾರ್ತೆಯರೂ ಸೆರೆಯಾಗಿ ಒಯ್ಯಲ್ಪಟ್ಟಿದ್ದರು. ದಾವೀದನೂ ಅವನ ಸಂಗಡವಿದ್ದ ಜನರೂ ಅಳುವದಕ್ಕೆ ತಮ್ಮಲ್ಲಿ ಶಕ್ತಿ ಇಲ್ಲದೆ ಹೋಗುವವರೆಗೂ ಗಟ್ಟಿಯಾಗಿ ಅತ್ತರು. ದಾವೀದನ ಇಬ್ಬರು ಹೆಂಡತಿಯರಾಗಿದ್ದ ಇಜ್ರೇಲಿನವಳಾದ ಅಹೀನೋವಮಳೂ ಕರ್ಮೆಲಿನವಳಾದ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲಳೂ ಸೆರೆಯಾಗಿ ಒಯ್ಯ ಲ್ಪಟ್ಟರು. ಆದರೆ ಜನರಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ಕುಮಾರ ಕುಮಾರ್ತೆಯರಿಗೋಸ್ಕರವಾಗಿಯೂ ಮನೋವ್ಯಥೆಪಟ್ಟು ದಾವೀದನನ್ನು ಕಲ್ಲೆಸೆಯಬೇಕೆಂದು ಹೇಳಿಕೊಂಡದ್ದರಿಂದ ಅವನು ಬಹಳ ಇಕ್ಕಟ್ಟಿನಲ್ಲಿ ಬಿದ್ದನು. ಆದರೂ ದಾವೀದನು ಕರ್ತನಾದ ದೇವರಲ್ಲಿ ತನ್ನನ್ನು ಬಲಪಡಿಸಿಕೊಂಡನು. ಆಗ ದಾವೀದನು ಅಹೀಮೆಲೆಕನ ಮಗನಾದ ಎಬ್ಯಾತಾರನೆಂಬ ಯಾಜಕ ನಿಗೆ--ನೀನು ದಯಮಾಡಿ ಏಫೋದನ್ನು ನನಗಾಗಿ ತಕ್ಕೊಂಡು ಬಾ ಅಂದನು. ಹಾಗೆಯೇ ಎಬ್ಯಾತಾರನು ಎಫೋದನ್ನು ದಾವೀದನ ಬಳಿಗೆ ತಂದನು. ದಾವೀದನು ಕರ್ತನಿಗೆ--ನಾನು ಆ ದಂಡಿನ ಹಿಂದೆ ಬೆನ್ನಟ್ಟಲೋ? ನಾನು ಅವರನ್ನು ಹಿಂದಟ್ಟಬಹುದೋ ಎಂದು ಕೇಳಿದನು. ಅದಕ್ಕೆ ಆತನು--ನೀನು ಹಿಂದಟ್ಟು; ನಿಶ್ಚಯವಾಗಿ ನೀನು ಅವರನ್ನು ಹಿಂದಟ್ಟಿ ಎಲ್ಲರನ್ನು ಬಿಡಿಸಿಕೊಳ್ಳುವಿ ಅಂದನು.
- 1 Samuel 30:18–20 1 ಸಮುವೇಲನು 30:18–20ಅಮಾ ಲೇಕ್ಯರು ತಕ್ಕೊಂಡು ಹೋದದ್ದನ್ನೆಲ್ಲಾ ದಾವೀದನು ಬಿಡಿಸಿಕೊಂಡನು. ತನ್ನ ಇಬ್ಬರು ಹೆಂಡತಿಯರನ್ನು ದಾವೀದನು ಬಿಡಿಸಿಕೊಂಡನು. ಅವರು ತಕ್ಕೊಂಡು ಹೋದ ಕಿರಿಯರ ಹಿರಿಯರಲ್ಲಾದರೂ ಕುಮಾರ ಕುಮಾರ್ತೆಯರಲ್ಲಾದರೂ ಕೊಳ್ಳೆಯಾದ ಯಾವ ವಸ್ತು ಗಳಲ್ಲಾದರೂ ಒಂದೂ ಕೊರತೆ ಇಲ್ಲದ ಹಾಗೆ ದಾವೀ ದನು ಎಲ್ಲವನ್ನೂ ತಿರಿಗಿ ತಕ್ಕೊಂಡನು. ಇದಲ್ಲದೆ ದಾವೀದನು ಅವರ ಎಲ್ಲಾ ಕುರಿ ಪಶುಗಳ ಮಂದೆಗ ಳನ್ನು ಹಿಡಿದನು; ಅವುಗಳನ್ನು ಇವರು ತಮ್ಮ ಪಶು ಗಳಿಗೆ ಮುಂದಾಗಿ ಹೊಡಕೊಂಡು ಹೋಗುತ್ತಾಇವು ದಾವೀದನ ಕೊಳ್ಳೆ ಎಂದು ಅಂದುಕೊಂಡರು.