Jeremiah · chapter 44 · verse 9
Jeremiah 44:9 in Kannada
ಯೆಹೂದದ ದೇಶದಲ್ಲಿಯೂ ಯೆರೂಸಲೇಮಿನ ಬೀದಿಗಳಲ್ಲಿಯೂ ಅವರು ಮಾಡಿದಂಥ, ನಿಮ್ಮ ತಂದೆಗಳ ಕೆಟ್ಟತನಗಳನ್ನೂ ಯೆಹೂದದ ಅರಸರ ಕೆಟ್ಟತನಗಳನ್ನೂ ಅವರ ಹೆಂಡತಿಯರ ಕೆಟ್ಟತನಗಳನ್ನೂ ನಿಮ್ಮ ಸ್ವಂತ ಕೆಟ್ಟತನಗಳನ್ನೂ ನಿಮ್ಮ ಹೆಂಡತಿಯರ ಕೆಟ್ಟತನಗಳನ್ನೂ ಮರೆತು ಬಿಟ್ಟಿದ್ದೀರೋ?
Yehoodada deshadalliyoo yeroosalemina beedigalalliyoo avaru maadidantha, nimma tandegala kettatanagalannoo yehoodada arasara kettatanagalannoo avara hendatiyara kettatanagalannoo nimma svanta kettatanagalannoo nimma hendatiyara kettatanagalannoo maretu bittiddeero?
Jeremiah 44:9 in English
- King James Version (KJV)
- Have ye forgotten the wickedness of your fathers, and the wickedness of the kings of Judah, and the wickedness of their wives, and your own wickedness, and the wickedness of your wives, which they have committed in the land of Judah, and in the streets of Jerusalem?
- World English Bible (WEB)
- Have you forgotten the wickedness of your fathers, the wickedness of the kings of Judah, the wickedness of their wives, your own wickedness, and the wickedness of your wives which they committed in the land of Judah and in the streets of Jerusalem?
- American Standard Version (ASV)
- Have ye forgotten the wickedness of your fathers, and the wickedness of the kings of Judah, and the wickedness of their wives, and your own wickedness, and the wickedness of your wives, which they committed in the land of Judah, and in the streets of Jerusalem?
- Bible in Basic English (BBE)
- Have you no memory of the evil-doing of your fathers, and the evil-doing of the kings of Judah, and the evil-doing of their wives, and the evil which you yourselves have done, and the evil which your wives have done, in the land of Judah and in the streets of Jerusalem?
- Darby Translation (DBY)
- Have ye forgotten the wickedness of your fathers, and the wickedness of the kings of Judah, and the wickedness of their wives, and your own wickedness, and the wickedness of your wives, which they have committed in the land of Judah and in the streets of Jerusalem?
- Webster's Bible (WBS)
- Have ye forgotten the wickedness of your fathers, and the wickedness of the kings of Judah, and the wickedness of their wives, and your own wickedness, and the wickedness of your wives, which they have committed in the land of Judah, and in the streets of Jerusalem?
- Young's Literal Translation (YLT)
- 'Have ye forgotten the wickedness of your fathers, and the wickedness of the kings of Judah, and the wickedness of their wives, and your own wickedness, and the wickedness of your wives, that they have done in the land of Judah, and in streets of Jerusalem?
Read in context
- 7ಆದದರಿಂದ ಈಗ ಇಸ್ರಾಯೇಲಿನ ದೇವರೂ ಸೈನ್ಯಗಳ ದೇವರೂ ಆಗಿರುವ ಕರ್ತನು ಹೀಗೆ ಹೇಳುತ್ತಾನೆ--ಯಾಕೆ ನಿಮಗೆ ಉಳಿದಿರುವ ವರನ್ನು ಮಿಗಿಸದ ಹಾಗೆ ನೀವು ಗಂಡಸರನ್ನೂ ಹೆಂಗಸರನ್ನೂ ಮಗುವನ್ನೂ ಮೊಲೆ ಕೂಸನ್ನೂ ಯೆಹೂದದೊಳಗಿಂದ ಕಡಿದುಬಿಟ್ಟು ನಿಮ್ಮ ಪ್ರಾಣ ಗಳಿಗೆ ದೊಡ್ಡ ಕೇಡನ್ನು ಮಾಡಿಕೊಳ್ಳು ತ್ತೀರಿ?
- 8ಯಾಕೆ ನೀವು ನೀವೇ ನಿರ್ಮೂಲರಾಗುವ ಹಾಗೆಯೂ ನೀವು ಭೂಮಿಯ ಎಲ್ಲಾ ಜನಾಂಗಗಳಲ್ಲಿ ಶಾಪವೂ ನಿಂದೆಯೂ ಆಗುವ ಹಾಗೆಯೂ ನೀವು ತಂಗುವದಕ್ಕೆ ಹೋಗಿರುವ ಐಗುಪ್ತದೇಶದಲ್ಲಿ ಬೇರೆ ದೇವರುಗಳಿಗೆ ಧೂಪಸುಟ್ಟು, ನನಗೆ ಕೋಪವನ್ನು ಎಬ್ಬಿಸುತ್ತೀರಿ?
- 9ಯೆಹೂದದ ದೇಶದಲ್ಲಿಯೂ ಯೆರೂಸಲೇಮಿನ ಬೀದಿಗಳಲ್ಲಿಯೂ ಅವರು ಮಾಡಿದಂಥ, ನಿಮ್ಮ ತಂದೆಗಳ ಕೆಟ್ಟತನಗಳನ್ನೂ ಯೆಹೂದದ ಅರಸರ ಕೆಟ್ಟತನಗಳನ್ನೂ ಅವರ ಹೆಂಡತಿಯರ ಕೆಟ್ಟತನಗಳನ್ನೂ ನಿಮ್ಮ ಸ್ವಂತ ಕೆಟ್ಟತನಗಳನ್ನೂ ನಿಮ್ಮ ಹೆಂಡತಿಯರ ಕೆಟ್ಟತನಗಳನ್ನೂ ಮರೆತು ಬಿಟ್ಟಿದ್ದೀರೋ?
- 10ಈ ದಿನದ ವರೆಗೂ ಅವರು ತಗ್ಗಿಸಿಕೊಳ್ಳಲಿಲ್ಲ, ಭಯಪಡಲಿಲ್ಲ; ನಾನು ನಿಮ್ಮ ಮುಂದೆಯೂ ನಿಮ್ಮ ತಂದೆಗಳ ಮುಂದೆಯೂ ಇಟ್ಟ ನನ್ನ ನ್ಯಾಯ ಪ್ರಮಾಣದಲ್ಲಿಯೂ ನನ್ನ ನಿಯಮಗಳಲ್ಲಿಯೂ ನಡೆಯಲಿಲ್ಲ.
- 11ಆದದ ರಿಂದ ಇಸ್ರಾಯೇಲಿನ ದೇವರಾಗಿರುವ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಯೆಹೂದವನ್ನೆಲ್ಲಾ ಕಡಿದು ಬಿಡುವದಕ್ಕೆ ನನ್ನ ದೃಷ್ಟಿ ಯನ್ನು ಕೇಡಿಗಾಗಿ ನಿಮಗೆ ವಿರೋಧವಾಗಿ ಇಡುತ್ತೇನೆ.
Cross references
- Jeremiah 7:17–18 ಯೆರೆಮೀಯ 7:17–18ಯೆಹೂದದ ಪಟ್ಟಣಗಳಲ್ಲಿಯೂ ಯೆರೂಸ ಲೇಮಿನ ಬೀದಿಗಳಲ್ಲಿಯೂ ಅವರು ಮಾಡುವದನ್ನು ನೀನು ನೋಡುವದಿಲ್ಲವೋ? ಆಕಾಶದ ರಾಣಿಗೆ ದೋಸೆಗಳನ್ನು ಮಾಡುವದಕ್ಕೂ ಬೇರೆ ದೇವರುಗಳಿಗೆ ಪಾನದರ್ಪಣೆಯನ್ನು ಹೊಯ್ಯುವದಕ್ಕೂ ಮಕ್ಕಳು ಕಟ್ಟಿಗೆ ಕೂಡಿಸುತ್ತಾರೆ, ಅವರು ನನಗೆ ಕೋಪವೆಬ್ಬಿಸು ವದಕ್ಕಾಗಿಯೇ ತಂದೆಗಳು ಬೆಂಕಿ ಹಚ್ಚುತ್ತಾರೆ, ಹೆಂಗಸರು ಹಿಟ್ಟು ನಾದುತ್ತಾರೆ.
- Jeremiah 44:15–19 ಯೆರೆಮೀಯ 44:15–19ಆಗ ತಮ್ಮ ಹೆಂಡತಿಯರು ಬೇರೆ ದೇವರುಗಳಿಗೆ ಧೂಪಸುಟ್ಟರೆಂದು ತಿಳಿದ ಗಂಡಸರೆಲ್ಲರೂ ದೊಡ್ಡ ಗುಂಪಾಗಿ ಹತ್ತಿರ ನಿಂತಿದ್ದ ಹೆಂಗಸರೆಲ್ಲರೂ ಐಗುಪ್ತ ದೇಶದಲ್ಲಿ ಪತ್ರೋಸ್ನಲ್ಲಿ ವಾಸಮಾಡಿದ ಜನ ರೆಲ್ಲರೂ ಯೆರೆವಿಾಯನಿಗೆ ಉತ್ತರಕೊಟ್ಟು ಹೇಳಿದ್ದೇನಂ ದರೆ-- ನೀನು ಕರ್ತನ ಹೆಸರಿನಲ್ಲಿ ನಮ್ಮ ಸಂಗಡ ಮಾತನಾಡಿದ ಮಾತಿನ ವಿಷಯದಲ್ಲಿ ನಾವು ನಿನ್ನನ್ನು ಕೇಳುವದಿಲ್ಲ. ಆದರೆ ಸ್ವಂತ ಬಾಯಿಂದ ಹೊರಡು ವವೆಲ್ಲವನ್ನೂ ಖಂಡಿತವಾಗಿ ಮಾಡುತ್ತೇವೆ; ಗಗನದ ಒಡತಿಗೆ ಧೂಪ ಸುಡುತ್ತೇವೆ. ಪಾನದರ್ಪಣೆಗಳನ್ನು ಅವಳಿಗೆ ಹೊಯ್ಯುತ್ತೇವೆ, ನಮ್ಮ ತಂದೆಗಳೂ ನಮ್ಮ ಅರಸರೂ ನಮ್ಮ ಪ್ರಧಾನರೂ ಯೆಹೂದದ ಪಟ್ಟಣ ಗಳಲ್ಲಿಯೂ ಯೆರೂಸಲೇಮಿನ ಬೀದಿಗಳಲ್ಲಿಯೂ ಮಾಡಿದ ಪ್ರಕಾರವೇ ನಾವೂ ಮಾಡುವೆವು; ಆಗ ಆಹಾರದಿಂದ ಚೆನ್ನಾಗಿದ್ದೆವು, ಕೇಡು ನೋಡಲಿಲ್ಲ. ಆದರೆ ನಾವು ಗಗನದ ಒಡತಿಗೆ ಧೂಪ ಸುಡುವ ದನ್ನೂ ಪಾನದರ್ಪಣೆಗಳನ್ನೂ ಅವಳಿಗೆ ಹೊಯ್ಯುವ ದನ್ನೂ ಬಿಟ್ಟಂದಿನಿಂದ ನಮಗೆ ಎಲ್ಲಾ ಸಾಲದೆ ಹೋಯಿತು ಕತ್ತಿಯಿಂದಲೂ ಕ್ಷಾಮದಿಂದಲೂ ನಿರ್ಮೂಲವಾದೆವು. ಇದಲ್ಲದೆ ನಾವು ಗಗನದ ಒಡತಿಗೆ ಧೂಪಸುಟ್ಟು, ಅವಳಿಗೆ ಪಾನದರ್ಪಣೆ ಹೊಯ್ದಾಗ ನಮ್ಮ ಗಂಡಂದಿರನ್ನು ಬಿಟ್ಟು ಅವಳ ಪೂಜೆ ಗೋಸ್ಕರ ದೋಸೆಗಳನ್ನು ಮಾಡಿ ಅವಳಿಗೆ ಪಾನ ದರ್ಪಣೆಗಳನ್ನೂ ಹೊಯಿದೆವಲ್ಲವೋ?
- Ezra 9:7–15 ಎಜ್ರನು 9:7–15ನಮ್ಮ ತಂದೆಗಳ ದಿವಸಗಳು ಮೊದಲುಗೊ ಂಡು ಈ ದಿವಸದ ವರೆಗೆ ದೊಡ್ಡ ಅಪರಾಧಕ್ಕೊಳಗಾಗಿದ್ದೇವೆ. ಇಂದಿನ ಪ್ರಕಾರವೇ ನಾವು ಈ ದೇಶಗಳ ಅರಸುಗಳ ಕೈಗೆ ಒಪ್ಪಿಸಲ್ಪಟ್ಟು ನಮ್ಮ ಅಕ್ರಮಗಳಿಗೋಸ್ಕರ ನಾವೂ ನಮ್ಮ ಅರಸುಗಳೂ ನಮ್ಮ ಯಾಜಕರೂ ಕತ್ತಿಗೂ ಸೆರೆಗೂ ಕೊಳ್ಳೆಗೂ ನಾಚಿಕೆಗೂ ಗುರಿಯಾಗಿದ್ದೇವೆ ಈಗ ನಮ್ಮ ದೇವರು, ನಮ್ಮ ಕಣ್ಣುಗಳು ಕಳೆಗೊಳ್ಳುವ ಹಾಗೆಯೂ ನಮ್ಮ ದಾಸತ್ವದಲ್ಲಿ ನಮ್ಮನ್ನು ಸ್ವಲ್ಪ ಉಜ್ಜೀವಿಸುವ ಹಾಗೆಯೂ ನಮಗಾಗಿ ಜನಶೇಷವನ್ನು ಉಳಿಸಿ ತನ್ನ ಪರಿಶುದ್ಧ ಸ್ಥಾನದಲ್ಲಿ ನಮಗೆ ಮೊಳೆಯನ್ನು ಕೊಡುವದಕ್ಕೂ ಸ್ವಲ್ಪ ಹೊತ್ತು ನಮ್ಮ ದೇವರಾಗಿರುವ ಕರ್ತನಿಂದ ನಮಗೆ ದಯವು ದೊರಕಿತು. ನಾವು ದಾಸರಾಗಿದ್ದೆವು; ಆದಾಗ್ಯೂ ನಮ್ಮ ದೇವರು ನಮ್ಮ ದಾಸತ್ವದಲ್ಲಿ ನಮ್ಮ ಕೈ ಬಿಟ್ಟುಬಿಡದೆ ನಮ್ಮನ್ನು ಉಜ್ಜೀವಿಸುವದಕ್ಕೂ ನಮ್ಮ ದೇವರ ಆಲಯವನ್ನು ಕಟ್ಟಿಸುವದಕ್ಕೂ ಅದರ ಹಾಳಾ ದವುಗಳನ್ನು ದುರಸ್ತು ಮಾಡುವದಕ್ಕೂ ಯೆಹೂದ ದಲ್ಲಿ ಮತ್ತು ಯೆರೂಸಲೇಮಿನಲ್ಲಿ ನಮಗೆ ಗೋಡೆ ಯನ್ನು ಕೊಡುವದಕ್ಕೂ ಪಾರಸಿಯ ಅರಸುಗಳ ಸಮ್ಮು ಖದಲ್ಲಿ ನಮ್ಮ ಮೇಲೆ ಕೃಪೆಯನ್ನು ಮುಂದುವರಿಸಿದ್ದಾನೆ. ಹಾಗಾದರೆ ನನ್ನ ದೇವರೇ, ಇದರ ತರುವಾಯ ನಾವು ಏನು ಹೇಳೋಣ? ಪ್ರವಾದಿಗಳಾದ ನಿನ್ನ ಸೇವಕರ ಮುಖಾಂತರ ನೀನು ಆಜ್ಞಾಪಿಸಿದ ನಿನ್ನ ಆಜ್ಞೆಗಳನ್ನು ತೊರೆದಿದ್ದೇವೆ. ನೀನು ಹೇಳಿದ್ದುನೀವು ಸ್ವಾಧೀನಮಾಡಿಕೊಳ್ಳಲು ಹೋಗುವ ದೇಶವು ಆ ದೇಶಗಳ ಜನರ ಹೊಲಸಿನಿಂದ ಮೈಲಿಗೆಯಾದ ದೇಶವಾಗಿದೆ. ಅವರು ತಮ್ಮ ಅಸಹ್ಯಗಳಿಂದಲೂ ಹೊಲೆಯಿಂದಲೂ ಅದನ್ನು ಒಂದು ಮೂಲೆಯಿಂದ ಮತ್ತೊಂದು ಮೂಲೆಯ ವರೆಗೂ ತುಂಬಿಸಿದ್ದಾರೆ. ಆದದರಿಂದ ನೀವು ಪ್ರಬಲವಾಗಿ ದೇಶದ ಒಳ್ಳೇ ದನ್ನು ತಿಂದು ಅದನ್ನು ಎಂದಿಗೂ ನಿಮ್ಮ ಮಕ್ಕಳಿಗೆ ಸ್ವಾಸ್ಥ್ಯವಾಗಿ ಕೊಡುವ ಹಾಗೆ ನೀವು ನಿಮ್ಮ ಕುಮಾರ್ತೆ ಯರನ್ನು ಅವರ ಕುಮಾರರಿಗೆ ಕೊಡಬೇಡಿರಿ; ಅವರ ಕುಮಾರ್ತೆಯರನ್ನು ನಿಮ್ಮ ಕುಮಾರರಿಗೆ ತಕ್ಕೊಳ್ಳ ಬೇಡಿರಿ. ಇಲ್ಲವೆ ಅವರ ಸಮಾಧಾನವನ್ನೂ ಅವರ ಮೇಲನ್ನೂ ಎಂದಿಗೂ ಬಯಸಬೇಡಿರಿ ಎಂಬದು. ನಮ್ಮ ದುಷ್ಕರ್ಮಗಳಿಗೋಸ್ಕರವೂ ನಮ್ಮ ಮಹಾ ಅಪರಾಧಕ್ಕೋಸ್ಕರವೂ ನಮ್ಮ ಮೇಲೆ ಬಂದದ್ದೆಲ್ಲ ಬಂದ ತರುವಾಯ ನಮ್ಮ ದೇವರಾಗಿರುವ ನೀನು ನಮ್ಮ ಅಕ್ರಮಗಳಿಗೆ ತಕ್ಕಹಾಗೆ ನಮ್ಮನ್ನು ಶಿಕ್ಷಿಸದೆ ಈಗ ಇರುವ ಪ್ರಕಾರ ನಮಗೆ ವಿಮೋಚನೆಯನ್ನು ಕೊಟ್ಟ ತರುವಾಯ ನಾವು ತಿರಿಗಿ ನಿನ್ನ ಆಜ್ಞೆಗಳನ್ನು ವಿಾರಿ ಈ ಅಸಹ್ಯವಾದವುಗಳನ್ನು ಮಾಡುವ ಜನರ ಸಂಗಡ ಬಂಧುತ್ವ ಮಾಡಬಹುದೋ? ಹಾಗಾದರೆ ಉಳಿದವರೂ ತಪ್ಪಿಸಿಕೊಂಡವರೂ ಇಲ್ಲದೆ ಇರುವ ಹಾಗೆ ಹಾಳಾಗುವ ವರೆಗೂ ನೀನು ನಮ್ಮ ಮೇಲೆ ಕೋಪಮಾಡುವದಿಲ್ಲವೋ?ಇಸ್ರಾಯೇಲ್ ದೇವ ರಾಗಿರುವ ಕರ್ತನೇ, ನೀನು ನೀತಿವಂತನಾಗಿದ್ದೀ; ಇಂದಿನ ಪ್ರಕಾರ ನಾವು ತಪ್ಪಿಸಿಕೊಂಡವರಾಗಿ ಉಳಿ ದಿದ್ದೇವೆ. ಇಗೋ, ನಾವು ನಿನ್ನ ಮುಂದೆ ನಮ್ಮ ಅಪರಾಧಗಳಲ್ಲಿದ್ದೇವೆ. ಇದರ ನಿಮಿತ್ತವಾಗಿ ನಿನ್ನ ಮುಂದೆ ನಿಲ್ಲಲಾರದವರಾಗಿದ್ದೇವೆ. ಇಸ್ರಾಯೇಲ್ ದೇವ ರಾಗಿರುವ ಕರ್ತನೇ, ನೀನು ನೀತಿವಂತನಾಗಿದ್ದೀ; ಇಂದಿನ ಪ್ರಕಾರ ನಾವು ತಪ್ಪಿಸಿಕೊಂಡವರಾಗಿ ಉಳಿ ದಿದ್ದೇವೆ. ಇಗೋ, ನಾವು ನಿನ್ನ ಮುಂದೆ ನಮ್ಮ ಅಪರಾಧಗಳಲ್ಲಿದ್ದೇವೆ. ಇದರ ನಿಮಿತ್ತವಾಗಿ ನಿನ್ನ ಮುಂದೆ ನಿಲ್ಲಲಾರದವರಾಗಿದ್ದೇವೆ.
- Daniel 9:5–8 ದಾನಿಯೇಲನು 9:5–8ನಾವು ಪಾಪ ಅಕ್ರಮವನ್ನು ಮಾಡಿದ್ದೇವೆ; ಇದಲ್ಲದೆ ಕೆಟ್ಟವರಾಗಿ ನಡೆದು ತಿರುಗಿಬಿದ್ದಿದ್ದೇವೆ; ಅಂದರೆ ನಿನ್ನ ಕಟ್ಟಳೆಗಳನ್ನೂ ನ್ಯಾಯಗಳನ್ನೂ ಬಿಟ್ಟುಹೋಗಿದ್ದೇವೆ. ಇಲ್ಲವೆ ನಿನ್ನ ಹೆಸರಿನಲ್ಲಿ ನಮ್ಮ ಅರಸರಿಗೂ ಪ್ರಧಾನ ರಿಗೂ ತಂದೆಗಳಿಗೂ ದೇಶದ ಎಲ್ಲಾ ಜನರಿಗೂ ಮಾತ ನಾಡಿದ ನಿನ್ನ ಸೇವಕರಾದ ಪ್ರವಾದಿಗಳಿಗೆ ಕಿವಿಗೊಡ ಲಿಲ್ಲ. ಓ ಕರ್ತನೇ, ನೀನು ನೀತಿವಂತನು; ಆದರೆ ನಾವು ಈ ದಿನದ ಪ್ರಕಾರ ನಾಚಿಕೆಗೀಡಾದವರು; ಯೆಹೂದದ ಮನುಷ್ಯರನ್ನೂ ಯೆರೂಸಲೇಮಿನ ನಿವಾ ಸಿಗಳನ್ನೂ ಸಮಸ್ತ ಇಸ್ರಾಯೇಲ್ಯರನ್ನೂ ಹತ್ತಿರದಲ್ಲಿ ರುವವರನ್ನೂ ಮತ್ತು ದೂರದಲ್ಲಿರುವವರನ್ನೂ ಅವರು ನಿನಗೆ ವಿರುದ್ಧವಾಗಿ ಮಾಡಿರುವ ಅವರ ಅಪರಾಧದ ನಿಮಿತ್ತ ನೀನು ಅವರನ್ನು ಎಲ್ಲಾ ದೇಶಗಳಲ್ಲಿಯೂ ಓಡಿಸಿ ಬಿಟ್ಟಿದ್ದೀ. ಓ ಕರ್ತನೇ, ನಿನಗೆ ವಿರುದ್ಧವಾಗಿ ನಾವು ಪಾಪಮಾಡಿದ್ದರಿಂದ ನಮ್ಮ ಅರಸರಿಗೂ ಪ್ರಧಾ ನರಿಗೂ ಮತ್ತು ನಮ್ಮ ತಂದೆಗಳಿಗೂ ನಮಗೂ ನಾಚಿಕೆಯ ಮುಖಗಳಿವೆ.
- Joshua 22:17–20 ಯೆಹೋಶುವ 22:17–20ಪೆಗೋರದಲ್ಲಿ ಆದ ದುಷ್ಟ ತನವು ನಮಗೆ ಅಲ್ಪವೋ? ಕರ್ತನ ಸಭೆಯ ಮೇಲೆ ವ್ಯಾಧಿ ಬಂದಾಗ್ಯೂ ಈ ದಿನದ ವರೆಗೂ ಅದರಿಂದ ನಾವು ಶುದ್ಧವಾಗಲಿಲ್ಲ. ಈಹೊತ್ತು ಕರ್ತನ ಕಡೆ ಯಿಂದ ತಿರಿಗಿ ಹೋಗುತ್ತೀರಲ್ಲಾ? ಈಹೊತ್ತು ಕರ್ತ ನಿಗೆ ವಿರೋಧವಾಗಿ ತಿರುಗಿ ಬಿದ್ದಾಗ ನಾಳೆ ಆತನು ಇಸ್ರಾಯೇಲ್ ಸಭೆಯಲ್ಲಾದರ ಮೇಲೆ ರೌದ್ರವುಳ್ಳವ ನಾಗುವನು. ನಿಮ್ಮ ಸ್ವಾಸ್ತ್ಯದ ದೇಶವು ಅಶುದ್ಧ ವಾಗಿದ್ದರೆ ಕರ್ತನ ಗುಡಾರವಿರುವ ಕರ್ತನ ಸ್ವಾಸ್ತ್ಯದ ದೇಶಕ್ಕೆ ನೀವು ದಾಟಿ ಬಂದು ನಮ್ಮ ಮಧ್ಯದಲ್ಲಿ ಸ್ವಾಸ್ತ್ಯವನ್ನು ತೆಗೆದುಕೊಳ್ಳಿರಿ. ಕರ್ತನ ಬಲಿಪೀಠದ ಹೊರತಾಗಿ ನಿಮಗೋಸ್ಕರ ಒಂದು ಬಲಿಪೀಠವನ್ನು ಕಟ್ಟಿಕೊಳ್ಳುವದರಿಂದ ನೀವು ಕರ್ತನಿಗೂ ನಮಗೂ ವಿರೋಧವಾಗಿ ತಿರುಗಿಬೀಳಬೇಡಿರಿ; ಜೆರಹನ ಮಗನಾದ ಆಕಾನನು ಶಪಿಸಲ್ಪಟ್ಟದ್ದರಲ್ಲಿ ಅಪರಾಧಮಾಡಿದಾಗ ಈ ರೌದ್ರವು ಎಲ್ಲಾ ಸಭೆಯ ಮೇಲೆ ಬಿತ್ತಲ್ಲವೋ? ಅವನು ಮಾತ್ರ ತನ್ನ ಅಪರಾಧದಲ್ಲಿ ನಾಶವಾಗಲಿಲ್ಲ ಎಂದು ಹೇಳಿದರು.
- Jeremiah 44:21 ಯೆರೆಮೀಯ 44:21ನೀವೂ ನಿಮ್ಮ ಪಿತೃಗಳೂ ನಿಮ್ಮ ಅರಸರೂ ನಿಮ್ಮ ಪ್ರಧಾನರೂ ದೇಶದ ಜನರೂ ಯೆಹೂದದ ಪಟ್ಟಣ ಗಳಲ್ಲಿಯೂ ಯೆರೂಸಲೇಮಿನ ಬೀದಿಗಳಲ್ಲಿಯೂ ಸುಟ್ಟಧೂಪವನ್ನೇ ಕರ್ತನು ಜ್ಞಾಪಕ ಮಾಡಿಕೊಂಡದ್ದು ಅಲ್ಲವೋ? ಆತನ ಮನಸ್ಸಿಗೆ ಬಂದದ್ದು ಅದೇ ಅಲ್ಲವೋ?
Original words (Hebrew)
- forgotten · H7911שָׁכַח shâkach
- wickedness · H7451רַע raʻ
- fathers · H1אָב ʼâb
- wickedness · H7451רַע raʻ
- kings · H4428מֶלֶךְ melek
- Judah · H3063יְהוּדָה Yᵉhûwdâh
- wickedness · H7451רַע raʻ
- wives · H802אִשָּׁה ʼishshâh
- wickedness · H7451רַע raʻ
- wickedness · H7451רַע raʻ
- wives · H802אִשָּׁה ʼishshâh
- committed · H6213עָשָׂה ʻâsâh
- land · H776אֶרֶץ ʼerets
- Judah · H3063יְהוּדָה Yᵉhûwdâh
- streets · H2351חוּץ chûwts
- Jerusalem · H3389יְרוּשָׁלַ͏ִם Yᵉrûwshâlaim