Jeremiah · chapter 46 · verse 5
Jeremiah 46:5 in Kannada
ಅವರು ದಿಗಿಲುಪಟ್ಟು ಹಿಂತಿರುಗಿದ್ದನ್ನು ನಾನು ಕಂಡದ್ದೇನು? ಅವರ ಪರಾಕ್ರಮಶಾಲಿಗಳು ಬಡಿಯಲ್ಪಟ್ಟಿದ್ದಾರೆ; ಹಿಂದೆ ನೋಡದೆ ಓಡಿಹೋಗು ತ್ತಾರೆ; ಸುತ್ತಲು ಅಂಜಿಕೆ ಇದೆ ಎಂದು ಕರ್ತನು ಅನ್ನುತ್ತಾನೆ.
Avaru digilupattu hintirugiddannu naanu kandaddenu? Avara paraakramashaaligalu badiyalpattiddaare; hinde nodade odihogu ttaare; suttalu anjike ide endu kartanu annuttaane.
Jeremiah 46:5 in English
- King James Version (KJV)
- Wherefore have I seen them dismayed [and] turned away back? and their mighty ones are beaten down, and are fled apace, and look not back: [for] fear [was] round about, saith the LORD.
- World English Bible (WEB)
- Why have I seen it? They are dismayed and are turned backward. Their mighty ones are beaten down, have fled in haste, and don’t look back. Terror is on every side,” says the LORD.
- American Standard Version (ASV)
- Wherefore have I seen it? they are dismayed and are turned backward; and their mighty ones are beaten down, and are fled apace, and look not back: terror is on every side, saith Jehovah.
- Bible in Basic English (BBE)
- What have I seen? they are overcome with fear and turned back; their men of war are broken and have gone in flight, not looking back: fear is on every side, says the Lord.
- Darby Translation (DBY)
- Why do I see them dismayed, turned away back? And their mighty ones are beaten down, and take to flight, and look not back? Terror [is] on every side, saith Jehovah.
- Webster's Bible (WBS)
- Why have I seen them dismayed [and] turned away back? and their mighty ones are beaten down, and have fled apace, and look not back: [for] fear [was] on all sides, saith the LORD.
- Young's Literal Translation (YLT)
- Wherefore have I seen them dismayed — They are turned backward, And their mighty ones are beaten down, And [to] a refuge they have fled, and not turned the face? Fear [is] round about — an affirmation of Jehovah.
Read in context
- 3ಗುರಾಣಿಯನ್ನೂ ಖೇಡ್ಯವನ್ನೂ ಸಿದ್ಧಮಾಡಿರಿ; ಯುದ್ಧಕ್ಕೆ ಸವಿಾಪಿಸಿರಿ;
- 4ಕುದುರೆಗಳನ್ನು ಕಟ್ಟಿರಿ; ರಾಹುತರೇ, ಎದ್ದು ಶಿರಸ್ತ್ರಾಣಗಳನ್ನಿಟ್ಟು ನಿಂತುಕೊಳ್ಳಿರಿ, ಈಟಿಗಳನ್ನು ಮೆರುಗು ಮಾಡಿರಿ, ಕವಚಗಳನ್ನು ತೊಟ್ಟು ಕೊಳ್ಳಿರಿ;
- 5ಅವರು ದಿಗಿಲುಪಟ್ಟು ಹಿಂತಿರುಗಿದ್ದನ್ನು ನಾನು ಕಂಡದ್ದೇನು? ಅವರ ಪರಾಕ್ರಮಶಾಲಿಗಳು ಬಡಿಯಲ್ಪಟ್ಟಿದ್ದಾರೆ; ಹಿಂದೆ ನೋಡದೆ ಓಡಿಹೋಗು ತ್ತಾರೆ; ಸುತ್ತಲು ಅಂಜಿಕೆ ಇದೆ ಎಂದು ಕರ್ತನು ಅನ್ನುತ್ತಾನೆ.
- 6ವೇಗಶಾಲಿಗಳು ಓಡಿಹೋಗದಿರಲಿ; ಪರಾಕ್ರಮಶಾಲಿಗಳು ತಪ್ಪಿಸಿಕೊಳ್ಳದಿರಲಿ; ಉತ್ತರದಲ್ಲಿ ಯೂಫ್ರೇಟೀಸ್ ನದಿಯ ತೀರದಲ್ಲಿ ಅವರು ಎಡವಿ ಬೀಳುವರು.
- 7ಹೊಳೆಗಳ ಹಾಗೆ ಕದಲುವ ನೀರುಗಳಂತಿದ್ದು ಪ್ರಳಯದ ಹಾಗೆ ಬರುವವನು ಯಾರು?
Cross references
- Jeremiah 6:25 ಯೆರೆಮೀಯ 6:25ಹೊಲಕ್ಕೆ ಹೊರಡಬೇಡ; ದಾರಿಯಲ್ಲಿ ನಡೆಯಬೇಡ; ಯಾಕಂದರೆ ಶತ್ರುವಿನ ಕತ್ತಿಯೂ ಅಂಜಿಕೆಯೂ ಸುತ್ತಲು ಆವೆ.
- Jeremiah 49:29 ಯೆರೆಮೀಯ 49:29ಅವರ ಗುಡಾರಗಳನ್ನೂ ಮಂದೆಗಳನ್ನೂ ತಕ್ಕೊಳ್ಳುವರು; ಅವರ ತೆರೆಗಳನ್ನೂ ಎಲ್ಲಾ ಪಾತ್ರೆ ಗಳನ್ನೂ ಒಂಟೆಗಳನ್ನೂ ವಶಮಾಡಿಕೊಳ್ಳುವರು; ಸುತ್ತಲೂ ಭಯವೆಂದು ಅವರಿಗೆ ಕೂಗುವರು.
- Jeremiah 46:21 ಯೆರೆಮೀಯ 46:21ಅದರೊಳಗಿರುವ ಅದರ ಸಂಬಳದವರು ಕೊಬ್ಬಿದ ಹೋರಿಗಳ ಹಾಗಿದ್ದಾರೆ; ಅವರು ಸಹ ಹಿಂದಕ್ಕೆ ತಿರುಗಿಕೊಂಡು ಏಕವಾಗಿ ಓಡಿಹೋಗುತ್ತಾರೆ; ಅವರು ನಿಲ್ಲಲಿಲ್ಲ; ಅವರ ಆಪತ್ತಿನ ದಿವಸವೂ ಅವರ ವಿಚಾರಣೆಯ ಕಾಲವೂ ಅವರ ಮೇಲೆ ಬಂತು.
- Isaiah 19:16 ಯೆಶಾಯ 19:16ಆ ದಿನದಲ್ಲಿ ಐಗುಪ್ತವು ಹೆಂಗಸರ ಹಾಗೆ ಇರು ವದು. ಸೈನ್ಯಗಳ ಕರ್ತನು ಅದರ ಮೇಲೆ ಆಡಿಸುವ ಕೈಯನ್ನು ಬೀಸುತ್ತಿರುವದರಿಂದ ಹೆದರಿ ಭಯಪಡು ವದು.
- Jeremiah 20:10 ಯೆರೆಮೀಯ 20:10ಅನೇಕರ ಚಾಡಿಯನ್ನು ಕೇಳಿದೆನು; ಸುತ್ತಲೂ ಭಯವದೆ--ತಿಳಿಸಿರಿ, ಆಗ ಅದನ್ನು ನಾವು ತಿಳಿಸುತ್ತೇವೆ ಎಂದು ಅನ್ನುತ್ತಾರೆ; ನನ್ನ ಆಪ್ತರೆಲ್ಲರೂ ನಾನು ಕುಂಟುವದನ್ನು ನೋಡಿಕೊಳ್ಳುತ್ತಾ--ಒಂದು ವೇಳೆ ಅವನು ಮೋಸ ಗೊಂಡಾನು; ಆಗ ನಾವು ಅವನನ್ನು ಗೆದ್ದು ಅವನಲ್ಲಿ ಮುಯ್ಯಿ ತೀರಿಸಿಕೊಳ್ಳುವೆವು ಅನ್ನುತ್ತಾರೆ.
- Revelation 6:15–17 ಪ್ರಕಟನೆ 6:15–17ಭೂರಾಜರೂ ದೊಡ್ಡ ವರೂ ಐಶ್ವರ್ಯವಂತರೂ ಮುಖ್ಯಾಧಿಪತಿಗಳೂ ಪರಾ ಕ್ರಮಶಾಲಿಗಳೂ ಎಲ್ಲಾ ದಾಸರೂ ಸ್ವತಂತ್ರರೂ ಗವಿ ಗಳಲ್ಲಿಯೂ ಬೆಟ್ಟಗಳ ಬಂಡೆಗಳಲ್ಲಿಯೂ ಅಡಗಿ ಕೊಂಡು ಪರ್ವತಗಳಿಗೂ ಬಂಡೆಗಳಿಗೂ--ನಮ್ಮ ಮೇಲೆ ಬೀಳಿರಿ, ಸಿಂಹಾಸನದ ಮೇಲೆ ಕೂತಿದ್ದಾತನ ಮುಖಕ್ಕೂ ಕುರಿಮರಿಯಾದಾತನ ಕೋಪಕ್ಕೂ ನಮ್ಮನ್ನು ಮರೆಮಾಡಿರಿ;ಆತನ ಕೋಪದ ಮಹಾದಿನ ಬಂದದೆ; ಅದರ ಮುಂದೆ ನಿಲ್ಲುವದಕ್ಕೆ ಯಾರು ಶಕ್ತರು ಎಂದು ಹೇಳಿದರು. ಆತನ ಕೋಪದ ಮಹಾದಿನ ಬಂದದೆ; ಅದರ ಮುಂದೆ ನಿಲ್ಲುವದಕ್ಕೆ ಯಾರು ಶಕ್ತರು ಎಂದು ಹೇಳಿದರು.
- Jeremiah 20:3–4 ಯೆರೆಮೀಯ 20:3–4ಮರುದಿನದಲ್ಲಿ ಆದದ್ದೇನಂದರೆ, ಪಷ್ಹೂರನು ಯೆರೆವಿಾಯನನ್ನು ಕೋಳದಿಂದ ಬಿಡಿಸಿದನು. ಆಗ ಯೆರೆವಿಾಯನು ಅವನಿಗೆ--ಕರ್ತನು ನಿನಗೆ ಇನ್ನು ಪಷ್ಹೂರನೆಂಬ ಹೆಸರಿನಿಂದಲ್ಲ, ಮಾಗೋರ್ ಮಿಸ್ಸಾ ಬೀಬ್ನೆಂದು ಕರೆಯುತ್ತಾನೆಂದು ಹೇಳಿದನು. ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನಿನ್ನನ್ನು ನಿನ್ನ ಸ್ನೇಹಿತರೆಲ್ಲರೂ ದಿಗಿಲುಪಡುವಂತೆ ಮಾಡುತ್ತೇನೆ; ಅವರು ತಮ್ಮ ಶತ್ರುಗಳ ಕತ್ತಿಯಿಂದ ಬೀಳುವರು; ನಿನ್ನ ಕಣ್ಣುಗಳು ಅದನ್ನು ನೋಡುವವು; ಯೆಹೂದವನ್ನೆಲ್ಲಾ ನಾನು ಬಾಬೆಲಿನ ಅರಸನ ಕೈಗೆ ಒಪ್ಪಿಸುವೆನು; ಅವನು ಅವರನ್ನು ಬಾಬೆಲಿಗೆ ಒಯ್ದು ಕತ್ತಿಯಿಂದ ಕೊಲ್ಲುವನು.
- Ezekiel 32:10 ಯೆಹೆಜ್ಕೇಲನು 32:10ಹೌದು, ನಾನು ಅನೇಕ ಜನರನ್ನು ನಿನ್ನ ವಿಷಯದಲ್ಲಿ ವಿಸ್ಮಯಗೊಳಿಸುವೆನು, ನಾನು ಅವರ ಮುಂದೆ ನನ್ನ ಕತ್ತಿಯನ್ನು ಬೀಸುವಾಗ ಅವರ ಅರಸರು ನಿನ್ನ ವಿಷಯದಲ್ಲಿ ಭಯಭ್ರಾಂತಿಗೊಳ್ಳುವರು. ನೀನು ಬೀಳುವ ಆ ದಿನದಲ್ಲಿ ಅವರು ಕ್ಷಣಕ್ಷಣಕ್ಕೆ ತಮ್ಮ ತಮ್ಮ ಪ್ರಾಣದ ಬಗ್ಗೆ ನಡುಗುವರು.
- Genesis 19:17 ಆದಿಕಾಂಡ 19:17ಅವರನ್ನು ಹೊರಗೆ ತಂದ ಮೇಲೆ ಆತನು--ನಿನ್ನ ಪ್ರಾಣಕ್ಕೋಸ್ಕರ ತಪ್ಪಿಸಿಕೋ; ನಿನ್ನ ಹಿಂದೆ ನೋಡಬೇಡ. ಸುತ್ತಲಿರುವ ಯಾವ ಮೈದಾನದಲ್ಲಿಯೂ ನಿಂತುಕೊಳ್ಳಬೇಡ, ನೀನು ನಾಶ ವಾಗದ ಹಾಗೆ ತಪ್ಪಿಸಿಕೊಂಡು ಬೆಟ್ಟಕ್ಕೆ ಹೋಗು ಅಂದನು.
- Nahum 2:8 ನಹೂಮ 2:8ನಿನೆವೆ ಹುಟ್ಟಿದಂದಿನಿಂದ ನೀರಿನ ಕೆರೆಯ ಹಾಗಿತ್ತು; ಆದರೂ ಅವರು ಓಡಿಹೋಗುತ್ತಾರೆ; ನಿಲ್ಲಿರಿ, ನಿಲ್ಲಿರಿ ಅಂದರೂ ಒಬ್ಬನೂ ಹಿಂದಕ್ಕೆ ನೋಡುವದಿಲ್ಲ.
- Jeremiah 46:15 ಯೆರೆಮೀಯ 46:15ನಿನ್ನ ಬಲಿಷ್ಠರು ಯಾಕೆ ಬಡಕೊಂಡು ಹೋಗಿದ್ದಾರೆ? ಕರ್ತನು ಅವರನ್ನು ಓಡಿಸಿದ್ದದರಿಂದ ಅವರು ನಿಲ್ಲಲಿಲ್ಲ.
- 2 Kings 7:6–7 2 ಅರಸುಗಳು 7:6–7ಕರ್ತನು ಪಾಳೆಯದಲ್ಲಿರುವ ಅರಾಮ್ಯರಿಗೆ ರಥಗಳ ಶಬ್ದವೂ ಕುದುರೆಗಳ ಶಬ್ದವೂ ಮಹಾಸೈನ್ಯದ ಶಬ್ದವೂ ಕೇಳಲ್ಪಡುವಂತೆ ಮಾಡಿದ್ದರಿಂದ ಅವರು ಒಬ್ಬರಿಗೊ ಬ್ಬರು--ಇಗೋ, ಇಸ್ರಾಯೇಲಿನ ಅರಸನು ನಮ್ಮ ಮೇಲೆ ಬೀಳಲು ಹಿತ್ತಿಯರ ಅರಸುಗಳನ್ನೂ ಐಗುಪ್ತದ ಅರಸುಗಳನ್ನೂ ಕೂಲಿಗೆ ಕರೆದಿದ್ದಾನೆ ಅಂದುಕೊಂಡರು. ಅವರು ಸಂಜೆಯಲ್ಲಿ ಎದ್ದು ಪಾಳೆಯದಲ್ಲಿದ್ದ ಹಾಗೆ ತಮ್ಮ ಗುಡಾರಗಳನ್ನೂ ಕುದುರೆಗಳನ್ನೂ ಕತ್ತೆಗಳನ್ನೂ ಬಿಟ್ಟು ಬಿಟ್ಟು ತಮ್ಮ ಪ್ರಾಣಕ್ಕೋಸ್ಕರ ಓಡಿಹೋದರು.