Jeremiah · chapter 49 · verse 29
Jeremiah 49:29 in Kannada
ಅವರ ಗುಡಾರಗಳನ್ನೂ ಮಂದೆಗಳನ್ನೂ ತಕ್ಕೊಳ್ಳುವರು; ಅವರ ತೆರೆಗಳನ್ನೂ ಎಲ್ಲಾ ಪಾತ್ರೆ ಗಳನ್ನೂ ಒಂಟೆಗಳನ್ನೂ ವಶಮಾಡಿಕೊಳ್ಳುವರು; ಸುತ್ತಲೂ ಭಯವೆಂದು ಅವರಿಗೆ ಕೂಗುವರು.
Avara gudaaragalannoo mandegalannoo takkolluvaru; avara teregalannoo ellaa paatre galannoo ontegalannoo vashamaadikolluvaru; suttaloo bhayavendu avarige kooguvaru.
Jeremiah 49:29 in English
- King James Version (KJV)
- Their tents and their flocks shall they take away: they shall take to themselves their curtains, and all their vessels, and their camels; and they shall cry unto them, Fear [is] on every side.
- World English Bible (WEB)
- They will take their tents and their flocks. they will carry away for themselves their curtains, all their vessels, and their camels; and they will cry to them, ‘Terror on every side!’
- American Standard Version (ASV)
- Their tents and their flocks shall they take; they shall carry away for themselves their curtains, and all their vessels, and their camels; and they shall cry unto them, Terror on every side!
- Bible in Basic English (BBE)
- Their tents and their flocks they will take; they will take away for themselves their curtains and all their vessels and their camels: they will give a cry to them, Fear on every side.
- Darby Translation (DBY)
- Their tents and their flocks shall they take; their curtains and all their vessels, and their camels, shall they carry away for themselves; and they shall cry unto them, Terror on every side!
- Webster's Bible (WBS)
- Their tents and their flocks shall they take away: they shall take to themselves their curtains, and all their vessels, and their camels; and they shall cry to them, Fear [is] on every side.
- Young's Literal Translation (YLT)
- Their tents and their flock they do take, Their curtains, and all their vessels, And their camels, they bear away for themselves, And they called concerning them, Fear [is] round about.
Read in context
- 27ನಾನು ದಮಸ್ಕದ ಗೋಡೆಯಲ್ಲಿ ಬೆಂಕಿಯನ್ನು ಹಚ್ಚುತ್ತೇನೆ; ಅದು ಬೆನ್ಹದದನ ಅರಮನೆಗಳನ್ನು ತಿಂದುಬಿಡುವದು.
- 28ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಹೊಡೆಯಲಿಕ್ಕಿರುವ ಕೇದಾರಿನ ವಿಷಯವಾಗಿಯೂ ಹಾಚೋರಿನ ರಾಜ್ಯಗಳ ವಿಷಯವಾಗಿಯೂ ಕರ್ತನು ಹೀಗೆ ಹೇಳುತ್ತಾನೆ--ಏಳಿರಿ, ಕೇದಾರಿನ ಬಳಿಗೆ ಏರಿ ಹೋಗಿರಿ! ಪೂರ್ವದಿಕ್ಕಿನ ಮನುಷ್ಯರನ್ನು ಸುಲು ಕೊಳ್ಳಿರಿ.
- 29ಅವರ ಗುಡಾರಗಳನ್ನೂ ಮಂದೆಗಳನ್ನೂ ತಕ್ಕೊಳ್ಳುವರು; ಅವರ ತೆರೆಗಳನ್ನೂ ಎಲ್ಲಾ ಪಾತ್ರೆ ಗಳನ್ನೂ ಒಂಟೆಗಳನ್ನೂ ವಶಮಾಡಿಕೊಳ್ಳುವರು; ಸುತ್ತಲೂ ಭಯವೆಂದು ಅವರಿಗೆ ಕೂಗುವರು.
- 30ಹಾಚೋರಿನ ನಿವಾಸಿಗಳೇ, ಓಡಿಹೋಗಿರಿ, ದೂರಕ್ಕೆ ಹೋಗಿಬಿಡಿರಿ, ಆಳವಾದ ಸ್ಥಳದಲ್ಲಿ ವಾಸ ವಾಗಿರ್ರಿ ಎಂದು ಕರ್ತನು ಅನ್ನುತ್ತಾನೆ. ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ನಿಮಗೆ ವಿರೋಧವಾಗಿ ಆಲೋಚನೆಯನ್ನೂ ಕಲ್ಪನೆಯನ್ನೂ ಮಾಡಿದ್ದಾನೆ.
- 31ಏಳಿರಿ, ಭದ್ರವಾಗಿ ವಾಸಿಸುವ ಸುಖವುಳ್ಳ ಜನಾಂಗದ ಬಳಿಗೆ ಹೋಗಿರಿ ಎಂದು ಕರ್ತನು ಅನ್ನುತ್ತಾನೆ; ಅದಕ್ಕೆ ಬಾಗಲುಗಳು ಇಲ್ಲ; ಅಗುಳಿಗಳು ಇಲ್ಲ; ಏಕಾಂತವಾಗಿ ವಾಸಮಾಡುತ್ತದೆ.
Cross references
- Jeremiah 46:5 ಯೆರೆಮೀಯ 46:5ಅವರು ದಿಗಿಲುಪಟ್ಟು ಹಿಂತಿರುಗಿದ್ದನ್ನು ನಾನು ಕಂಡದ್ದೇನು? ಅವರ ಪರಾಕ್ರಮಶಾಲಿಗಳು ಬಡಿಯಲ್ಪಟ್ಟಿದ್ದಾರೆ; ಹಿಂದೆ ನೋಡದೆ ಓಡಿಹೋಗು ತ್ತಾರೆ; ಸುತ್ತಲು ಅಂಜಿಕೆ ಇದೆ ಎಂದು ಕರ್ತನು ಅನ್ನುತ್ತಾನೆ.
- Jeremiah 6:25 ಯೆರೆಮೀಯ 6:25ಹೊಲಕ್ಕೆ ಹೊರಡಬೇಡ; ದಾರಿಯಲ್ಲಿ ನಡೆಯಬೇಡ; ಯಾಕಂದರೆ ಶತ್ರುವಿನ ಕತ್ತಿಯೂ ಅಂಜಿಕೆಯೂ ಸುತ್ತಲು ಆವೆ.
- Habakkuk 3:7 ಹಬಕ್ಕೂಕ 3:7ಕೂಷಾನಿನ ಡೇರೆಗಳನ್ನು ಕಷ್ಟದೊಳಗೆ ನೋಡಿ ದೆನು; ಮಿದ್ಯಾನಿನ ದೇಶದ ತೆರೆಗಳು ನಡುಗಿದವು.
- Psalm 120:5 ಕೀರ್ತನೆಗಳು 120:5ಕೇದಾರಿನ ಗುಡಾರಗಳ ಬಳಿಯಲ್ಲಿ ವಾಸ ಮಾಡಿ ಮೇಷೆಕಿನಲ್ಲಿ ಪ್ರವಾಸಿಯಾಗಿರುವದರಿಂದ ನನಗೆ ಅಯ್ಯೋ!
- Jeremiah 20:3–4 ಯೆರೆಮೀಯ 20:3–4ಮರುದಿನದಲ್ಲಿ ಆದದ್ದೇನಂದರೆ, ಪಷ್ಹೂರನು ಯೆರೆವಿಾಯನನ್ನು ಕೋಳದಿಂದ ಬಿಡಿಸಿದನು. ಆಗ ಯೆರೆವಿಾಯನು ಅವನಿಗೆ--ಕರ್ತನು ನಿನಗೆ ಇನ್ನು ಪಷ್ಹೂರನೆಂಬ ಹೆಸರಿನಿಂದಲ್ಲ, ಮಾಗೋರ್ ಮಿಸ್ಸಾ ಬೀಬ್ನೆಂದು ಕರೆಯುತ್ತಾನೆಂದು ಹೇಳಿದನು. ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನಿನ್ನನ್ನು ನಿನ್ನ ಸ್ನೇಹಿತರೆಲ್ಲರೂ ದಿಗಿಲುಪಡುವಂತೆ ಮಾಡುತ್ತೇನೆ; ಅವರು ತಮ್ಮ ಶತ್ರುಗಳ ಕತ್ತಿಯಿಂದ ಬೀಳುವರು; ನಿನ್ನ ಕಣ್ಣುಗಳು ಅದನ್ನು ನೋಡುವವು; ಯೆಹೂದವನ್ನೆಲ್ಲಾ ನಾನು ಬಾಬೆಲಿನ ಅರಸನ ಕೈಗೆ ಒಪ್ಪಿಸುವೆನು; ಅವನು ಅವರನ್ನು ಬಾಬೆಲಿಗೆ ಒಯ್ದು ಕತ್ತಿಯಿಂದ ಕೊಲ್ಲುವನು.
- Jeremiah 4:20 ಯೆರೆಮೀಯ 4:20ನಾಶ ನದ ಮೇಲೆ ನಾಶನವು ಕೂಗಲ್ಪಟ್ಟಿದೆ, ದೇಶವೆಲ್ಲಾ ಹಾಳಾಯಿತು; ಫಕ್ಕನೆ ನನ್ನ ಗುಡಾರಗಳೂ ಕ್ಷಣ ಮಾತ್ರದಲ್ಲಿ ನನ್ನ ತೆರೆಗಳೂ ಹಾಳಾದವು.
- 2 Corinthians 4:8 2 ಕೊರಿಂಥದವರಿಗೆ 4:8ಎಲ್ಲಾ ಕಡೆಗಳಲ್ಲಿ ನಮಗೆ ಕಳವಳ ವಿದ್ದರೂ ನಾವು ಸಂಕಟಪಡುವವರಲ್ಲ; ನಾವು ದಿಕ್ಕು ಕಾಣದವರಾಗಿದ್ದರೂ ಕೇವಲ ದೆಸೆಗೆಟ್ಟವರಲ್ಲ.
- Genesis 37:25 ಆದಿಕಾಂಡ 37:25ಅವರು ಊಟಕ್ಕೆ ಕೂತುಕೊಂಡಾಗ ತಮ್ಮ ಕಣ್ಣುಗಳನ್ನೆತ್ತಿ ನೋಡಲಾಗಿ ಇಗೋ, ಇಷ್ಮಾಯೇಲ್ಯರ ಗುಂಪು ಗಿಲ್ಯಾದಿನಿಂದ ಬರುತ್ತಿತ್ತು. ಅವರ ಒಂಟೆಗಳು ಸಾಂಬ್ರಾಣಿ ಸುಗಂಧತೈಲ ರಕ್ತಬೋಳಗಳನ್ನು ಹೊರು ತ್ತಿದ್ದವು. ಅವರು ಅವುಗಳನ್ನು ಐಗುಪ್ತಕ್ಕೆ ತೆಗೆದು ಕೊಂಡು ಹೋಗುತ್ತಿದ್ದರು.
- Isaiah 13:20 ಯೆಶಾಯ 13:20ಅದು ಎಂದಿಗೂ ನಿವಾಸ ಸ್ಥಳ ವಾಗದು, ಇಲ್ಲವೆ ತಲತಲಾಂತರಕ್ಕೂ ಅಲ್ಲಿ ಯಾರೂ ವಾಸಿಸರು; ಇಲ್ಲವೆ ಯಾವ ಅರಬಿಯನೂ ಗುಡಾರ ಹಾಕನು; ಅಥವಾ ಕುರುಬರು ಮಂದೆಯನ್ನು ತಂಗಿಸರು.
- Judges 8:26 ನ್ಯಾಯಸ್ಥಾಪಕರು 8:26ಆದರೆ ಆಭರಣಗಳೂ ಕಂಠಮಾಲೆ ಗಳೂ ಮಿದ್ಯಾನ್ಯರ ಅರಸುಗಳು ಹೊದ್ದುಕೊಂಡಿದ್ದ ರಕ್ತಾಂಬರ ವಸ್ತ್ರಗಳೂ ಅವರ ಒಂಟೆಗಳ ಕೊರಳಿಗೆ ಇದ್ದ ಸರಪಣಿಗಳೂ ಹೊರತು ಅವನು ಕೇಳಿ ತೆಗೆದು ಕೊಂಡ ಬಂಗಾರದ ವಾಲೆಗಳ ತೂಕವು ಸಾವಿರದ ಏಳು ನೂರು ಶೆಕೆಲ್ ತೂಕವಾಗಿತ್ತು.
- 1 Chronicles 5:20–21 1 ಪೂರ್ವಕಾಲವೃತ್ತಾಂತ 5:20–21ಇವರು ಅವರಿಗೆ ವಿರೋಧವಾಗಿ ಸಹಾಯಹೊಂದಿ ದ್ದರಿಂದ ಹಗ್ರೀಯರೂ ಅವರ ಸಂಗಡ ಕೂಡಿದ್ದ ವರೆಲ್ಲರೂ ಇವರ ಕೈಯಲ್ಲಿ ಒಪ್ಪಿಸಲ್ಪಟ್ಟರು. ಯಾಕಂದರೆ ಅವರು ಯುದ್ಧದಲ್ಲಿ ದೇವರಿಗೆ ಮೊರೆಯಿಟ್ಟು ಆತನಲ್ಲಿ ಭರವಸವಿಟ್ಟದ್ದರಿಂದ ಆತನು ಅವರ ಮನವಿಯನ್ನು ಕೇಳಿದನು. ಅವರು ಸುಲುಕೊಂಡ ಪಶುಗಳುಅವರ ಒಂಟೆಗಳು ಐವತ್ತು ಸಾವಿರ, ಕುರಿಗಳು ಎರಡು ವರೆ ಲಕ್ಷ, ಕತ್ತೆಗಳು ಎರಡು ಸಾವಿರ, ಮನುಷ್ಯರು ಒಂದುಲಕ್ಷ ಮಂದಿ.
- Judges 6:5 ನ್ಯಾಯಸ್ಥಾಪಕರು 6:5ಅವರು ತಮ್ಮ ಕುರಿದನಗಳೂ ಡೇರೆ ಗಳೂ ಸಹಿತವಾಗಿ ಮಿಡಿತೆಗಳ ಹಾಗೆ ಗುಂಪಾಗಿ ಬಂದರು. ಅವರಿಗೂ ಅವರ ಒಂಟೆಗಳಿಗೂ ಎಣಿಕೆ ಇರಲಿಲ್ಲ. ಹೀಗೆ ಅವರು ಅದನ್ನು ಕೆಡಿಸಿಬಿಡುವದಕ್ಕೆ ದೇಶದಲ್ಲಿ ಬಂದರು.