Jeremiah · chapter 48 · verse 13
Jeremiah 48:13 in Kannada
ಆಗ ಇಸ್ರಾಯೇಲಿನ ಮನೆಯವರು ತಾವು ನಂಬಿಕೊಂಡಿದ್ದ ಬೇತೇಲಿನ ವಿಷಯ ಹೇಗೆ ನಾಚಿಕೆಪಟ್ಟರೋ ಹಾಗೆಯೇ ಮೋವಾಬು ಕೇಮೋ ಷನ ವಿಷಯ ನಾಚಿಕೆಪಡುವದು.
Aaga israayelina maneyavaru taavu nambikondidda betelina vishaya hege naachikepattaro haageye movaabu kemo shana vishaya naachikepaduvadu.
Jeremiah 48:13 in English
- King James Version (KJV)
- And Moab shall be ashamed of Chemosh, as the house of Israel was ashamed of Beth-el their confidence.
- World English Bible (WEB)
- Moab will be ashamed of Chemosh, as the house of Israel was ashamed of Bethel, their confidence.
- American Standard Version (ASV)
- And Moab shall be ashamed of Chemosh, as the house of Israel was ashamed of Beth-el their confidence.
- Bible in Basic English (BBE)
- And Moab will be shamed on account of Chemosh, as the children of Israel were shamed on account of Beth-el their hope.
- Darby Translation (DBY)
- And Moab shall be ashamed of Chemosh, as the house of Israel was ashamed of Bethel, their confidence.
- Webster's Bible (WBS)
- And Moab shall be ashamed of Chemosh, as the house of Israel was ashamed of Beth-el their confidence.
- Young's Literal Translation (YLT)
- And ashamed hath been Moab because of Chemosh, As the house of Israel have been ashamed Because of Beth-El their confidence.
Read in context
- 11ಮೋವಾಬು ತನ್ನ ಚಿಕ್ಕಂದಿನಿಂದ ಸುಖವಾಗಿತ್ತು; ಅದು ತನ್ನ ಮಡ್ಡಿಯ ಮೇಲೆ ಸುಮ್ಮನೆ ಇತ್ತು; ಒಂದು ಪಾತ್ರೆಯೊಳಗಿಂದ ಮತ್ತೊಂದು ಪಾತ್ರೆಗೆ ಹೊಯ್ಯ ಲ್ಪಡಲಿಲ್ಲ; ಸೆರೆಗೆ ಹೋಗಲಿಲ್ಲ; ಆದದರಿಂದ ಅದರ ರುಚಿ ಅದರಲ್ಲಿ ಉಂಟು; ಅದರ ವಾಸನೆ ಬೇರೆ ಆಗಲಿಲ್ಲ.
- 12ಆದದರಿಂದ ಇಗೋ, ದಿನಗಳು ಬರುವ ವೆಂದು ಕರ್ತನು ಅನ್ನುತ್ತಾನೆ; ಆಗ ನಾನು ಅದರ ಬಳಿಗೆ ಅಲೆದಾಡುವವರನ್ನು ಕಳುಹಿಸುವೆನು; ಅವರು ಅದು ಅಲೆದಾಡುವಂತೆ ಮಾಡುವರು, ಅದರ ಪಾತ್ರೆಗಳನ್ನು ಬರಿದುಮಾಡಿ ತಮ್ಮ ಬುದ್ದಲಿಗಳನ್ನು ಒಡೆಯುವರು.
- 13ಆಗ ಇಸ್ರಾಯೇಲಿನ ಮನೆಯವರು ತಾವು ನಂಬಿಕೊಂಡಿದ್ದ ಬೇತೇಲಿನ ವಿಷಯ ಹೇಗೆ ನಾಚಿಕೆಪಟ್ಟರೋ ಹಾಗೆಯೇ ಮೋವಾಬು ಕೇಮೋ ಷನ ವಿಷಯ ನಾಚಿಕೆಪಡುವದು.
- 14ನಾವು ಪರಾಕ್ರಮ ಶಾಲಿಗಳೂ ಯುದ್ಧಕ್ಕೆ ಬಲಿಷ್ಠರೂ ಎಂದು ನೀವು ಹೇಳುವದು ಹೇಗೆ?
- 15ಮೋವಾಬು ಸೂರೆ ಯಾಯಿತು, ಅದರ ಪಟ್ಟಣಗಳು ಏರಿ ಹೋದವು, ಅದರ ಆಯಲ್ಪಟ್ಟ ಯೌವನಸ್ಥರು ಕೊಲೆಗೆ ಇಳಿದು ಹೋದರು ಎಂದು ಸೈನ್ಯಗಳ ಕರ್ತನೆಂಬ ಹೆಸರುಳ್ಳ ಅರಸನು ಅನ್ನುತ್ತಾನೆ.
Cross references
- Isaiah 45:16 ಯೆಶಾಯ 45:16ಅವರೆಲ್ಲರೂ ನಾಚಿಕೆಪಟ್ಟು ನಿಂದಿತರಾಗುವರು. ವಿಗ್ರಹಗಳನ್ನು ಮಾಡುವವರು ಒಟ್ಟಾಗಿ ಗಲಿಬಿಲಿಗೆ ಒಳಗಾಗುವರು.
- Judges 11:24 ನ್ಯಾಯಸ್ಥಾಪಕರು 11:24ನಿನ್ನ ದೇವರಾದ ಕೆಮೋಷನು ಸ್ವತಂತ್ರಿ ಸಿಕೊಳ್ಳಲು ನಿನಗೆ ಕೊಡುವ ದೇಶವನ್ನು ನೀನು ಸ್ವತಂತ್ರಿಸಿಕೊಳ್ಳುವದಿಲ್ಲವೋ? ಹಾಗೆಯೇ ನಮ್ಮ ದೇವರಾದ ಕರ್ತನು ಯಾರನ್ನು ನಮ್ಮ ಮುಂದೆ ಹೊರಡಿಸುವನೋ ಅವರನ್ನು ನಾವು ಸ್ವಾಧೀನಮಾಡಿ ಕೊಳ್ಳುವೆವು.
- Jeremiah 48:39 ಯೆರೆಮೀಯ 48:39ಅದು ಹೇಗೆ ಮುರಿದು ಹೋಯಿತು! ಮೋವಾಬು ಹೇಗೆ ನಾಚಿಕೆಪಟ್ಟು ಬೆನ್ನು ತಿರುಗಿಸಿತು ಎಂದು ಗೋಳಿಡುವರು. ಹೀಗೆ ಮೋವಾಬು ಅದರ ಸುತ್ತಲಿರು ವವರೆಲ್ಲರಿಗೆ ಹಾಸ್ಯಕ್ಕೂ ಹೆದರಿಕೆಗೂ ಆಗುವದು.
- Hosea 8:5–6 ಹೋಶೇಯ 8:5–6ಓ ಸಮಾ ರ್ಯವೇ, ನಿನ್ನ ಬಸವನನ್ನು ನಾನು ತಳ್ಳಿಹಾಕಿದ್ದೇನೆ; ನನ್ನ ಕೋಪವು ಅವರ ಮೇಲೆ ಉರಿಯುತ್ತದೆ; ಅವರು ನಿರಪರಾಧಿಗಳಾಗದೆ ಇರುವದು ಎಷ್ಟರ ವರೆಗೆ? ಅದು ಇಸ್ರಾಯೇಲ್ಯರಿಂದಲೂ ಆಗಿದೆ; ಕೆಲಸಗಾರನು ಅದನ್ನು ಮಾಡಿದನು, ಆದ್ದರಿಂದ ಅದು ದೇವರಲ್ಲ; ಆದರೆ ಸಮಾರ್ಯದ ಕರುವು ಪುಡಿಪುಡಿಯಾಗಿ ಮುರಿಯಲ್ಪಡುವದು.
- Jeremiah 48:7 ಯೆರೆಮೀಯ 48:7ನಿನ್ನ ಕ್ರಿಯೆಗಳಲ್ಲಿಯೂ ದ್ರವ್ಯಗಳಲ್ಲಿಯೂ ನಂಬಿಕೆ ಇಟ್ಟದ್ದ ರಿಂದ ನೀನು ಸಹ ಹಿಡಿಯಲ್ಪಡುವಿ; ಕೆಮೋಷನು, ಅವನ ಯಾಜಕರು, ಪ್ರಧಾನರು ಸಹಿತವಾಗಿ ಸೆರೆಗೆ ಹೋಗುವರು.
- 1 Kings 18:40 1 ಅರಸುಗಳು 18:40ಆಗ ಎಲೀಯನು ಅವರಿಗೆ--ನೀವು ಬಾಳನ ಪ್ರವಾದಿಗಳನ್ನು ಹಿಡಿಯಿರಿ; ಅವರಲ್ಲಿ ಒಬ್ಬನೂ ತಪ್ಪಿಸಿ ಕೊಳ್ಳದೆ ಇರಲಿ ಅಂದನು. ಇವರು ಅವರನ್ನು ಹಿಡಿ ದರು; ಎಲೀಯನು ಅವರನ್ನು ಕೀಷೋನ್ಹಳ್ಳದ ಬಳಿಗೆ ತಕ್ಕೊಂಡುಹೋಗಿ ಅಲ್ಲಿ ಅವರನ್ನು ಕೊಂದು ಹಾಕಿದನು.
- 1 Kings 12:28–29 1 ಅರಸುಗಳು 12:28–29ಎಂದು ಅರಸನು ಆಲೋ ಚನೆ ಕೇಳಿಕೊಂಡು ಎರಡು ಬಂಗಾರದ ಹೋರಿಗ ಳನ್ನು ಮಾಡಿಸಿ ಜನರಿಗೆ--ಯೆರೂಸಲೇಮಿನ ವರೆಗೂ ಹೋಗುವದು ನಿಮಗೆ ಕಷ್ಟವಾಗಿದೆ. ಓ ಇಸ್ರಾಯೇಲೇ, ಇಗೋ, ಐಗುಪ್ತದಿಂದ ನಿನ್ನನ್ನು ಬರಮಾಡಿದ ನಿನ್ನ ಈ ದೇವರುಗಳು ಅಂದನು. ಅವನು ಒಂದನ್ನು ಬೇತೇಲಿನಲ್ಲಿಯೂ ಮತ್ತೊಂದನ್ನು ದಾನಿನಲ್ಲಿಯೂ ಇಟ್ಟನು.
- Jeremiah 48:46 ಯೆರೆಮೀಯ 48:46ಮೋವಾಬೇ ನಿನಗೆ ಅಯ್ಯೋ! ಕೆಮೋಷಿನ ಜನರು ನಾಶವಾದರು; ನಿನ್ನ ಕುಮಾರರು ಕುಮಾರ್ತೆಯರು ಸೆರೆಯಾಗಿಯೂ ಹಿಡಿಯಲ್ಪಟ್ಟರು.ಆದಾಗ್ಯೂ ನಾನು ಕಡೇ ದಿವಸಗಳಲ್ಲಿ ಮೋವಾಬಿನ ಸೆರೆಯನ್ನು ತಿರುಗಿ ತರುತ್ತೇನೆಂದು ಕರ್ತನು ಅನ್ನುತ್ತಾನೆ. ಈ ವರೆಗೆ ಮೋವಾಬಿನ ನ್ಯಾಯತೀರ್ವಿಕೆಯು ಇರುವದು.
- Isaiah 16:12 ಯೆಶಾಯ 16:12ಹೀಗಿರುವಲ್ಲಿ ಮೋವಾಬು ಉನ್ನತ ಸ್ಥಳದಲ್ಲಿ ಆಯಾಸಗೊಂಡಂತೆ ಕಾಣಿಸಿಕೊಂಡು ಪರಿಶುದ್ಧಸ್ಥಳಕ್ಕೆ ಪ್ರಾರ್ಥನೆಗಾಗಿ ಬಂದರೂ ಅವನಿಗೆ ಸಫಲವಾಗದು.
- 1 Kings 18:26–29 1 ಅರಸುಗಳು 18:26–29ಅವರು ತಮಗೆ ಕೊಡಲ್ಪಟ್ಟ ಹೋರಿ ಯನ್ನು ತೆಗೆದುಕೊಂಡು ಸಿದ್ಧಮಾಡಿ--ಓ ಬಾಳನೇ, ನಮ್ಮನ್ನು ಕೇಳೆಂದು ಉದಯದಿಂದ ಮಧ್ಯಾಹ್ನದ ವರೆಗೂ ಬಾಳನ ಹೆಸರನ್ನು ಕರೆಯುತ್ತಿದ್ದರು. ಆದರೆ ಒಂದು ಶಬ್ದವಾಗಲಿ ಪ್ರತ್ಯುತ್ತರ ಕೊಡುವವನಾಗಲಿ ಇರಲಿಲ್ಲ. ಅವರು ಮಾಡಿದ ಬಲಿಪೀಠದ ಹತ್ತಿರ ಕುಣಿದಾಡಿದರು. ಮಧ್ಯಾಹ್ನದಲ್ಲಿ ಎಲೀಯನು ಅವ ರನ್ನು ಗೇಲಿಮಾಡಿ ಅವರಿಗೆ--ದೊಡ್ಡ ಶಬ್ದದಿಂದ ಕೂಗಿರಿ, ಯಾಕಂದರೆ ಅವನು ಒಬ್ಬ ದೇವರು; ಇಲ್ಲವೆ ಮಾತನಾಡುತ್ತಿದ್ದಾನು; ಇಲ್ಲವೆ ಹಿಂದಟ್ಟುತ್ತಿದ್ದಾನು.; ಇಲ್ಲವೆ ಪ್ರಯಾಣದಲ್ಲಿದ್ದಾನು; ಇಲ್ಲವೆ ಅವನು ನಿದ್ರೆ ಮಾಡುತ್ತಿದ್ದಾನು; ಈಗ ಅವನು ಎಚ್ಚರಿಸಲ್ಪಡಬೇಕು ಅಂದನು. ಅವರು ದೊಡ್ಡ ಶಬ್ದದಿಂದ ಕೂಗಿ ತಮ್ಮ ಕ್ರಮದ ಪ್ರಕಾರವೇ ರಕ್ತವು ತಮ್ಮ ಮೇಲೆ ಸೋರುವ ಮಟ್ಟಿಗೂ ಕತ್ತಿಗಳಿಂದಲೂ ಚೂರಿಗಳಿಂದಲೂ ತಮ್ಮನ್ನು ಕೊಯ್ದುಕೊಂಡರು. ಮಧ್ಯಾಹ್ನವಾದ ತರುವಾಯ ಸಾಯಂಕಾಲದ ಬಲಿ ಅರ್ಪಿಸಲ್ಪಡುವ ವೇಳೆಯ ವರೆಗೂ ಪ್ರವಾದಿಸುತ್ತಾ ಇದ್ದರು. ಆದರೆ ಶಬ್ದವಾ ದರೂ ಪ್ರತ್ಯುತ್ತರಕೊಡುವವನಾದರೂ ಲಕ್ಷಿಸುವವ ನಾದರೂ ಇರಲಿಲ್ಲ.
- Isaiah 45:20 ಯೆಶಾಯ 45:20ಜನಾಂಗಗಳಲ್ಲಿ ತಪ್ಪಿಸಿಕೊಂಡವರಾದ ನೀವು ಒಟ್ಟಾಗಿ ಕೂಡಿಕೊಂಡು ಸವಿಾಪಕ್ಕೆ ಬನ್ನಿರಿ. ಮರದಿಂದ ಕೆತ್ತಿದ ತಮ್ಮ ವಿಗ್ರಹವನ್ನು ಹೊತ್ತು ಕೊಂಡು, ರಕ್ಷಿಸಲಾರದ ಆ ದೇವರಿಗೆ ಬಿನ್ನಹಿಸುವವರು ಏನೂ ತಿಳಿಯದವರಾಗಿದ್ದಾರೆ.
- Isaiah 46:1–2 ಯೆಶಾಯ 46:1–2ಬೇಲ್(ದೇವತೆಯು)ಬೊಗ್ಗಿದೆ, ನೆಬೋ (ದೇವತೆಯು) ಕುಗ್ಗಿದೆ; ಅವರ ವಿಗ್ರಹಗಳು ಮೃಗಗಳ ಮತ್ತು ಪಶುಗಳ ಮೇಲೆ ಇದ್ದವು, ನೀವು ಹೊರುತ್ತಿದ್ದವುಗಳು ಭಾರವಾದ ಹೊರೆಯಾಗಿದ್ದವು. ಆಯಾಸವುಳ್ಳ ಮೃಗಗಳಿಗೆ ಅವು ಭಾರವಾದವು. ಒಟ್ಟಿಗೆ ಕುಗ್ಗಿ, ಬೊಗ್ಗಿವೆ. ತಮ್ಮ ಮೇಲೆ ಬಿದ್ದ ಭಾರವನ್ನು ಹೊತ್ತು ನಿರ್ವಹಿಸಲಾರದೆ ತಾವೇ ಸೆರೆಗೆ ಹೋದವು.