Jeremiah · chapter 48 · verse 15
Jeremiah 48:15 in Kannada
ಮೋವಾಬು ಸೂರೆ ಯಾಯಿತು, ಅದರ ಪಟ್ಟಣಗಳು ಏರಿ ಹೋದವು, ಅದರ ಆಯಲ್ಪಟ್ಟ ಯೌವನಸ್ಥರು ಕೊಲೆಗೆ ಇಳಿದು ಹೋದರು ಎಂದು ಸೈನ್ಯಗಳ ಕರ್ತನೆಂಬ ಹೆಸರುಳ್ಳ ಅರಸನು ಅನ್ನುತ್ತಾನೆ.
Movaabu soore yaayitu, adara pattanagalu eri hodavu, adara aayalpatta yauvanastharu kolege ilidu hodaru endu sainyagala kartanemba hesarulla arasanu annuttaane.
Jeremiah 48:15 in English
- King James Version (KJV)
- Moab is spoiled, and gone up [out of] her cities, and his chosen young men are gone down to the slaughter, saith the King, whose name [is] the LORD of hosts.
- World English Bible (WEB)
- Moab is laid waste, and they have gone up into his cities, and his chosen young men have gone down to the slaughter,” says the King, whose name is the LORD of Armies.
- American Standard Version (ASV)
- Moab is laid waste, and they are gone up into his cities, and his chosen young men are gone down to the slaughter, saith the King, whose name is Jehovah of hosts.
- Bible in Basic English (BBE)
- He who makes Moab waste has gone up against her; and the best of her young men have gone down to their death, says the King, whose name is the Lord of armies.
- Darby Translation (DBY)
- Moab is laid waste, and his cities are gone up [in smoke], and his chosen young men are gone down to the slaughter, saith the King, whose name is Jehovah of hosts.
- Webster's Bible (WBS)
- Moab is laid waste, and gone up [out of] her cities, and his chosen young men are gone down to the slaughter, saith the king, whose name [is] the LORD of hosts.
- Young's Literal Translation (YLT)
- Spoiled is Moab, and her cities hath one gone up, And the choice of its young men Have gone down to slaughter, An affirmation of the King, Jehovah of Hosts [is] His name.
Read in context
- 13ಆಗ ಇಸ್ರಾಯೇಲಿನ ಮನೆಯವರು ತಾವು ನಂಬಿಕೊಂಡಿದ್ದ ಬೇತೇಲಿನ ವಿಷಯ ಹೇಗೆ ನಾಚಿಕೆಪಟ್ಟರೋ ಹಾಗೆಯೇ ಮೋವಾಬು ಕೇಮೋ ಷನ ವಿಷಯ ನಾಚಿಕೆಪಡುವದು.
- 14ನಾವು ಪರಾಕ್ರಮ ಶಾಲಿಗಳೂ ಯುದ್ಧಕ್ಕೆ ಬಲಿಷ್ಠರೂ ಎಂದು ನೀವು ಹೇಳುವದು ಹೇಗೆ?
- 15ಮೋವಾಬು ಸೂರೆ ಯಾಯಿತು, ಅದರ ಪಟ್ಟಣಗಳು ಏರಿ ಹೋದವು, ಅದರ ಆಯಲ್ಪಟ್ಟ ಯೌವನಸ್ಥರು ಕೊಲೆಗೆ ಇಳಿದು ಹೋದರು ಎಂದು ಸೈನ್ಯಗಳ ಕರ್ತನೆಂಬ ಹೆಸರುಳ್ಳ ಅರಸನು ಅನ್ನುತ್ತಾನೆ.
- 16ಮೋವಾಬಿನ ಆಪತ್ತು ಬರುವದಕ್ಕೆ ಸವಿಾಪವಾಯಿತು. ಅದರ ಕೇಡು ಬಹು ತ್ವರೆಪಡುತ್ತದೆ.
- 17ಅದರ ಸುತ್ತಲಿರುವವರೆಲ್ಲರೇ, ಅದಕ್ಕೆ ಗೋಳಾಡಿರಿ; ಅದರ ಹೆಸರನ್ನು ಬಲ್ಲವರೆಲ್ಲರೇ-- ಬಲವಾದ ಕೋಲೂ ಸೌಂದರ್ಯವಾದ ಬೆತ್ತವೂ ಹೇಗೆ ಮುರಿದು ಹೋಯಿತು! ಎಂದು ಹೇಳಿರಿ.
Cross references
- Jeremiah 46:18 ಯೆರೆಮೀಯ 46:18ಸೈನ್ಯಗಳ ಕರ್ತ ನೆಂದು ಹೆಸರುಳ್ಳ ಅರಸನು ಅನ್ನುವದೇನಂದರೆ--ನನ್ನ ಜೀವದಾಣೆ, ಬೆಟ್ಟಗಳಲ್ಲಿ ತಾಬೋರಿನಂತೆಯೂ ಸಮುದ್ರದ ಬಳಿಯಲ್ಲಿ ಕರ್ಮೆಲಿನಂತೆಯೂ ನಿಶ್ಚಯ ವಾಗಿ ಬರುವನು.
- Jeremiah 50:27 ಯೆರೆಮೀಯ 50:27ಅದರ ಹೋರಿಗಳನ್ನೆಲ್ಲಾ ಕೊಂದುಹಾಕಿರಿ; ಅವು ಕೊಲೆಗೆ ಇಳಿಯಲಿ; ಅವರಿಗೆ ಅಯ್ಯೋ! ಅವರ ದಿನವೂ ಅವರ ವಿಚಾರಣೆಯ ಕಾಲವೂ ಬಂತು.
- Jeremiah 51:57 ಯೆರೆಮೀಯ 51:57ಇದಲ್ಲದೆ ನಾನು ಅವಳ ಪ್ರಧಾನಿಗಳನ್ನೂ, ಜ್ಞಾನಿಗಳನ್ನೂ, ಅಧಿಪತಿಗಳನ್ನೂ, ಅಧಿಕಾರಿಗಳನ್ನೂ, ಪರಾಕ್ರಮಶಾಲಿಗಳನ್ನೂ, ಮತ್ತರಾಗಮಾಡುತ್ತೇನೆ; ಅವರು ನಿತ್ಯ ನಿದ್ರೆ ಮಾಡುವರು, ಎಚ್ಚರವಾಗುವದಿಲ್ಲವೆಂದು ಸೈನ್ಯಗಳ ಕರ್ತನೆಂಬ ಹೆಸರುಳ್ಳ ಅರಸನು ಅನ್ನುತ್ತಾನೆ.
- Malachi 1:14 ಮಲಾಕಿಯ 1:14ಆದರೆ ತನ್ನ ಮಂದೆಯಲ್ಲಿ ಗಂಡು ಇರಲಾಗಿ ಪ್ರಮಾಣ ಮಾಡಿ ಕರ್ತನಿಗೆ ಕೆಟ್ಟು ಹೋದದ್ದನ್ನು ಅರ್ಪಿಸುವ ಮೋಸಗಾರನಿಗೆ ಶಾಪ; ನಾನು ಮಹಾ ಅರಸನು, ನನ್ನ ಹೆಸರು ಅನ್ಯಜನಾಂಗಗಳಲ್ಲಿ ಭಯಂಕರ ವಾದದ್ದು ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- Isaiah 40:30–31 ಯೆಶಾಯ 40:30–31ಯೌವನಸ್ಥರೋ ದಣಿದು ಬಳಲುವರು ತರುಣರು ಸಂಪೂರ್ಣವಾಗಿ ಬೀಳುವರು.ಆದರೆ ಕರ್ತನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು; ಅವರು ಹದ್ದುಗ ಳಂತೆ ರೆಕ್ಕೆಗಳಿಂದ ಬೆಟ್ಟವನ್ನು ಏರುವರು. ಓಡಿ ದಣಿಯರು, ನಡೆದು ಬಳಲರು. ಆದರೆ ಕರ್ತನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು; ಅವರು ಹದ್ದುಗ ಳಂತೆ ರೆಕ್ಕೆಗಳಿಂದ ಬೆಟ್ಟವನ್ನು ಏರುವರು. ಓಡಿ ದಣಿಯರು, ನಡೆದು ಬಳಲರು.
- Revelation 19:16 ಪ್ರಕಟನೆ 19:16ಆತನ ತೊಡೆಯ ಮೇಲೆಯೂ ವಸ್ತ್ರದ ಮೇಲೆಯೂ--ರಾಜಾ ಧಿರಾಜನೂ ಕರ್ತರ ಕರ್ತನೂ ಎಂಬ ಹೆಸರು ಬರೆದದೆ.
- Jeremiah 48:4 ಯೆರೆಮೀಯ 48:4ಮೋವಾಬು ನಾಶವಾಯಿತು; ಅದರ ಚಿಕ್ಕವರು ಕೂಗನ್ನು ಕೇಳುವಂತೆ ಮಾಡಿದರು.
- Jeremiah 51:40 ಯೆರೆಮೀಯ 51:40ಕುರಿಮರಿಗಳ ಹಾಗೆ ಟಗರು ಗಳ ಹೋತಗಳ ಹಾಗೆ ಅವರನ್ನು ಕೊಲೆಗೆ ಇಳಿಸುವೆನು.
- Psalm 47:2 ಕೀರ್ತನೆಗಳು 47:2ಮಹೋನ್ನತನಾದ ಕರ್ತನು ಭಯಂಕ ರನೂ ಭೂಮಿಯ ಮೇಲೆಲ್ಲಾ ಮಹಾಅರಸನೂ ಆಗಿದ್ದಾನೆ.
- Isaiah 34:2–8 ಯೆಶಾಯ 34:2–8ಕರ್ತನು ಸಕಲ ಜನಾಂಗಗಳ ಮೇಲೆ ಕೋಪಮಾಡಿ ಅವುಗಳ ಎಲ್ಲಾ ಸೈನ್ಯಗಳ ಮೇಲೆ ರೋಷಗೊಂಡು ಅವರನ್ನು ಕೊಲೆಗೆ ಈಡುಮಾಡಿ ಸಂಪೂರ್ಣವಾಗಿ ನಾಶಮಾಡಿದ್ದಾನೆ. ಅವರಲ್ಲಿ ಕೊಂದುಹಾಕಲ್ಪಟ್ಟವರು ಬಿಸಾಡಲ್ಪಡು ವರು. ಅವರ ಹೆಣಗಳ ದುರ್ವಾಸನೆಯು ಮೇಲಕ್ಕೆ ಏರುವದು. ಅವರ ರಕ್ತಪ್ರವಾಹದಿಂದ ಪರ್ವತಗಳು ಕರಗಿಹೋಗುವವು. ಆಕಾಶದ ಸೈನ್ಯವೆಲ್ಲಾ ಗತಿಸಿ ಹೋಗುವದು. ಆಕಾಶಮಂಡಲವು ಸುರುಳಿಯಂತೆ ಸುತ್ತಿಕೊಳ್ಳುವದು, ದ್ರಾಕ್ಷೆಯ ಎಲೆ ಒಣಗಿ ಗಿಡದಿಂದ ಬೀಳುವಂತೆಯೂ ಅಂಜೂರ ಮರದಿಂದ ತರಗು ಉದುರುವ ಹಾಗೂ ಅವುಗಳ ಸೈನ್ಯವೆಲ್ಲಾ ಬಾಡಿ ಕೆಳಗೆ ಬೀಳುವದು. ನನ್ನ ಖಡ್ಗವು ಪರಲೋಕದಲ್ಲಿ ರೋಷ ಪಾನಮಾಡುವದು; ಇಗೋ, ಅದು ಎದೋ ಮಿನ ಮತ್ತು ನಾನು ಶಪಿಸಿದ ಜನರ ಮೇಲೆ ನ್ಯಾಯ ತೀರಿಸುವದಕ್ಕಾಗಿ ಕೆಳಗೆ ಇಳಿದು ಬರುವದು. ಕರ್ತನ ಖಡ್ಗವು ರಕ್ತದಿಂದ ತುಂಬಿದೆ; ಅದು ಕುರಿಹೋತಗಳ ರಕ್ತದಿಂದಲೂ ಟಗರುಗಳ ಮೂತ್ರಪಿಂಡದ ಕೊಬ್ಬಿ ನಿಂದಲೂ ಪುಷ್ಟಿಯಾಯಿತು; ಯಾಕಂದರೆ ಕರ್ತನು ಬೊಚ್ರದಲ್ಲಿ ಬಲಿಯನ್ನೂ ಎದೋಮಿನ ದೇಶದಲ್ಲಿ ದೊಡ್ಡ ಕೊಲೆಯನ್ನೂ ಉಂಟು ಮಾಡಿದ್ದಾನೆ. ಕಾಡು ಕೋಣಗಳು ಅವುಗಳ ಸಂಗಡಲೂ ಎತ್ತುಗಳು ಹೋರಿ ಗಳ ಸಂಗಡಲೂ ಬೀಳುವವು; ಅವರ ದೇಶವು ರಕ್ತ ದಿಂದ ನೆನೆಯುವದು, ಅವರ ಧೂಳು ಕೊಬ್ಬಿನಿಂದ ಪುಷ್ಟಿಯಾಗುವದು-- ಏಕಂದರೆ ಅದು ಕರ್ತನು ಮುಯ್ಯಿ ತೀರಿಸುವ ದಿನವಾಗಿದೆ; ಚೀಯೋನಿನ ವ್ಯಾಜ್ಯದಲ್ಲಿ ದಂಡನೆ ವಿಧಿಸತಕ್ಕ ವರುಷವು ಒದಗಿದೆ.
- Jeremiah 48:8–25 ಯೆರೆಮೀಯ 48:8–25ಒಂದೊಂದು ಪಟ್ಟಣದ ಮೇಲೆ ಸೂರೆಗೊಳ್ಳುವವನು ಬರುವನು; ಕರ್ತನು ಹೇಳಿದ ಹಾಗೆಯೇ ಒಂದು ಪಟ್ಟಣವಾದರೂ ತಪ್ಪಿಸಿಕೊಳ್ಳ ಲಾರದು, ತಗ್ಗೂ ನಾಶವಾಗುವದು; ಬೈಲು ಹಾಳಾಗುವದು. ಹಾರಿಹೋಗುವ ಹಾಗೆ ಮೋವಾಬಿಗೆ ರೆಕ್ಕೆಗಳನ್ನು ಕೊಡಿರಿ; ಅದರ ಪಟ್ಟಣಗಳು ಹಾಳಾಗು ವವು; ಅವುಗಳಲ್ಲಿ ನಿವಾಸಿಗಳಿರುವದಿಲ್ಲ. ಕರ್ತನ ಕೆಲಸವನ್ನು ಮೋಸವಾಗಿ ನಡಿಸುವವನು ಶಾಪಗ್ರಸ್ತ ನಾಗಲಿ; ರಕ್ತದಿಂದ ತನ್ನ ಕತ್ತಿಯನ್ನು ಹಿಂತೆಗೆಯುವವನಿಗೆ ಶಾಪವಾಗಲಿ. ಮೋವಾಬು ತನ್ನ ಚಿಕ್ಕಂದಿನಿಂದ ಸುಖವಾಗಿತ್ತು; ಅದು ತನ್ನ ಮಡ್ಡಿಯ ಮೇಲೆ ಸುಮ್ಮನೆ ಇತ್ತು; ಒಂದು ಪಾತ್ರೆಯೊಳಗಿಂದ ಮತ್ತೊಂದು ಪಾತ್ರೆಗೆ ಹೊಯ್ಯ ಲ್ಪಡಲಿಲ್ಲ; ಸೆರೆಗೆ ಹೋಗಲಿಲ್ಲ; ಆದದರಿಂದ ಅದರ ರುಚಿ ಅದರಲ್ಲಿ ಉಂಟು; ಅದರ ವಾಸನೆ ಬೇರೆ ಆಗಲಿಲ್ಲ. ಆದದರಿಂದ ಇಗೋ, ದಿನಗಳು ಬರುವ ವೆಂದು ಕರ್ತನು ಅನ್ನುತ್ತಾನೆ; ಆಗ ನಾನು ಅದರ ಬಳಿಗೆ ಅಲೆದಾಡುವವರನ್ನು ಕಳುಹಿಸುವೆನು; ಅವರು ಅದು ಅಲೆದಾಡುವಂತೆ ಮಾಡುವರು, ಅದರ ಪಾತ್ರೆಗಳನ್ನು ಬರಿದುಮಾಡಿ ತಮ್ಮ ಬುದ್ದಲಿಗಳನ್ನು ಒಡೆಯುವರು. ಆಗ ಇಸ್ರಾಯೇಲಿನ ಮನೆಯವರು ತಾವು ನಂಬಿಕೊಂಡಿದ್ದ ಬೇತೇಲಿನ ವಿಷಯ ಹೇಗೆ ನಾಚಿಕೆಪಟ್ಟರೋ ಹಾಗೆಯೇ ಮೋವಾಬು ಕೇಮೋ ಷನ ವಿಷಯ ನಾಚಿಕೆಪಡುವದು. ನಾವು ಪರಾಕ್ರಮ ಶಾಲಿಗಳೂ ಯುದ್ಧಕ್ಕೆ ಬಲಿಷ್ಠರೂ ಎಂದು ನೀವು ಹೇಳುವದು ಹೇಗೆ? ಮೋವಾಬು ಸೂರೆ ಯಾಯಿತು, ಅದರ ಪಟ್ಟಣಗಳು ಏರಿ ಹೋದವು, ಅದರ ಆಯಲ್ಪಟ್ಟ ಯೌವನಸ್ಥರು ಕೊಲೆಗೆ ಇಳಿದು ಹೋದರು ಎಂದು ಸೈನ್ಯಗಳ ಕರ್ತನೆಂಬ ಹೆಸರುಳ್ಳ ಅರಸನು ಅನ್ನುತ್ತಾನೆ. ಮೋವಾಬಿನ ಆಪತ್ತು ಬರುವದಕ್ಕೆ ಸವಿಾಪವಾಯಿತು. ಅದರ ಕೇಡು ಬಹು ತ್ವರೆಪಡುತ್ತದೆ. ಅದರ ಸುತ್ತಲಿರುವವರೆಲ್ಲರೇ, ಅದಕ್ಕೆ ಗೋಳಾಡಿರಿ; ಅದರ ಹೆಸರನ್ನು ಬಲ್ಲವರೆಲ್ಲರೇ-- ಬಲವಾದ ಕೋಲೂ ಸೌಂದರ್ಯವಾದ ಬೆತ್ತವೂ ಹೇಗೆ ಮುರಿದು ಹೋಯಿತು! ಎಂದು ಹೇಳಿರಿ. ದೀಬೋನಿನ ನಿವಾಸಿಯಾದ ಮಗಳೇ, ನಿನ್ನ ವೈಭವದಿಂದ ಇಳಿದು ಬಾ; ದಾಹವಾಗಿ ಕೂತುಕೋ, ಮೋವಾಬನ್ನು ಸೂರೆ ಮಾಡುವವನು ನಿನ್ನ ಮೇಲೆ ಬರುವನು, ನಿನ್ನ ಬಲವಾದ ಕೋಟೆಗಳನ್ನು ಕೆಡಿಸಿ ಬಿಡುವನು. ಅರೋಯೇರಿನ ನಿವಾಸಿಯೇ, ದಾರಿಯ ಬಳಿಯಲ್ಲಿ ನಿಂತು ದೃಷ್ಟಿಸು; ಓಡಿಹೋಗು ವವನನ್ನೂ ತಪ್ಪಿಸಿಕೊಳ್ಳುವವನನ್ನೂ ಕೇಳು, ಏನಾಯಿ ತೆಂದು ಹೇಳು. ಮೋವಾಬು ನಾಚಿಕೆಪಡುತ್ತದೆ; ಮುರಿದು ಹೋಯಿತು; ಗೋಳಾಡಿರಿ, ಕೂಗಿರಿ; ಮೋವಾಬು ಸೂರೆಯಾಯಿತೆಂದು ಅರ್ನೋನಿನಲ್ಲಿ ಅದನ್ನು ತಿಳಿಸಿರಿ. ಇದಲ್ಲದೆ ಬೈಲು ಸೀಮೆಯ ಮೇಲೆ ನ್ಯಾಯತೀರ್ವಿಕೆ ಬಂತು; ಹೋಲೋನಿನ ಮೇಲೆಯೂ ಯಾಚದ ಮೇಲೆಯೂ ಮೆಫಾತ್ನ ಮೇಲೆಯೂ ದೀಬೋನಿನ ಮೇಲೆಯೂ ನೇಬೋನಿನ ಮೇಲೆಯೂ ಬೇತ್ದಿಬ್ಲಾತಯಿಮ್ನ ಮೇಲೆಯೂ ಕಿರ್ಯಾತಯಾಮಿನ ಮೇಲೆಯೂ ಬೇತ್ಗಾಮುಲಿನ ಮೇಲೆಯೂ ಬೇತ್ಮೆಯೋನಿನ ಮೇಲೆಯೂ ಕೆರೀಯೋತ್ನ ಮೇಲೆಯೂ ಬೊಚ್ರದ ಮೇಲೆಯೂ ಸವಿಾಪದಲ್ಲಾಗಲಿ ದೂರ ದಲ್ಲಾಗಲಿ ಇರುವ, ಮೋವಾಬಿನ ಸಮಸ್ತ ಪಟ್ಟಣಗಳ ಮೇಲೆಯೂ ಬಂತು. ಮೋವಾಬಿನ ಕೊಂಬು ಕಡಿದು ಹಾಕಲ್ಪಟ್ಟಿದೆ; ಅದರ ತೋಳು ಮುರಿಯಲ್ಪಟ್ಟಿದೆ ಎಂದು ಕರ್ತನು ಅನ್ನುತ್ತಾನೆ.
- Daniel 4:37 ದಾನಿಯೇಲನು 4:37ಈಗ ನೆಬೂಕದ್ನೆಚ್ಚರನಾದ ನಾನು ಪರಲೋಕದ ಅರಸನನ್ನು ಸ್ತುತಿಸಿ, ಹೆಚ್ಚಿಸಿ, ಘನಪಡಿಸುತ್ತೇನೆ; ಆತನ ಕ್ರಿಯೆಗಳೆಲ್ಲಾ ಸತ್ಯವೇ; ಆತನ ಮಾರ್ಗಗಳು ನ್ಯಾಯವೇ; ಗರ್ವದಲ್ಲಿ ನಡೆಯುವವರನ್ನು ಆತನೇ ತಗ್ಗಿಸಬಲ್ಲನು.