Jeremiah · chapter 49 · verse 13
Jeremiah 49:13 in Kannada
ಬೊಚ್ರವು ಹಾಳೂ ನಿಂದೆಯೂ ಅಡವಿಯೂ ಶಾಪವೂ ಆಗುವದೆಂದು ಅದರ ಪಟ್ಟಣಗಳೆಲ್ಲಾ ಎಂದೆಂದಿಗೂ ಅಡವಿ ಸ್ಥಳಗಳಾ ಗುವವೆಂದೂ ನನ್ನ ಮೇಲೆ ಪ್ರಮಾಣ ಮಾಡಿಕೊಂಡಿದ್ದೇನೆಂದು ಕರ್ತನು ಅನ್ನುತ್ತಾನೆ.
Bochravu haaloo nindeyoo adaviyoo shaapavoo aaguvadendu adara pattanagalellaa endendigoo adavi sthalagalaa guvavendoo nanna mele pramaana maadikondiddenendu kartanu annuttaane.
Jeremiah 49:13 in English
- King James Version (KJV)
- For I have sworn by myself, saith the LORD, that Bozrah shall become a desolation, a reproach, a waste, and a curse; and all the cities thereof shall be perpetual wastes.
- World English Bible (WEB)
- For I have sworn by myself,” says the LORD, “that Bozrah will become an astonishment, a reproach, a waste, and a curse. All its cities will be perpetual wastes.”
- American Standard Version (ASV)
- For I have sworn by myself, saith Jehovah, that Bozrah shall become an astonishment, a reproach, a waste, and a curse; and all the cities thereof shall be perpetual wastes.
- Bible in Basic English (BBE)
- For I have taken an oath by myself, says the Lord, that Bozrah will become a cause of wonder, a name of shame, a waste and a curse; and all its towns will be waste places for ever.
- Darby Translation (DBY)
- For I have sworn by myself, saith Jehovah, that Bozrah shall become an astonishment, a reproach, a waste, and a curse; and all the cities thereof shall be perpetual wastes.
- Webster's Bible (WBS)
- For I have sworn by myself, saith the LORD, that Bozrah shall become a desolation, a reproach, a waste, and a curse; and all her cities shall be perpetual wastes.
- Young's Literal Translation (YLT)
- For, by Myself, I have sworn, An affirmation of Jehovah, That for a desolation, for a reproach, For a waste, and for a reviling — is Bozrah, And all her cities are for wastes age-during.
Read in context
- 11ನಿನ್ನ ದಿಕ್ಕಿಲ್ಲದ ಮಕ್ಕಳನ್ನು ಬಿಡು; ನಾನೇ ರಕ್ಷಿಸುವೆನು; ನಿನ್ನ ವಿಧವೆಯರು ನನ್ನಲ್ಲಿ ನಂಬಿಕೆ ಇಡಲಿ.
- 12ಕರ್ತನು ಹೀಗೆ ಹೇಳು ತ್ತಾನೆ--ಇಗೋ ಪಾತ್ರೆಯಲ್ಲಿ ಕುಡಿಯುವದಕ್ಕೆ ಯಾರಿಗೆ ನ್ಯಾಯತೀರ್ವಿಕೆ ಆಗಲಿಲ್ಲವೋ? ಅವರು ಸಹ ಕುಡಿದಿದ್ದಾರೆ; ಹಾಗಾದರೆ ನೀನು ಶುದ್ಧವಾಗಿ ಅಪರಾಧ ವಿಲ್ಲದೆ ಇರುವಿಯೋ? ಅಪರಾಧವಿಲ್ಲದೆ ಇರುವದಿಲ್ಲ ನಿಶ್ಚಯವಾಗಿ ಕುಡಿಯುವಿ.
- 13ಬೊಚ್ರವು ಹಾಳೂ ನಿಂದೆಯೂ ಅಡವಿಯೂ ಶಾಪವೂ ಆಗುವದೆಂದು ಅದರ ಪಟ್ಟಣಗಳೆಲ್ಲಾ ಎಂದೆಂದಿಗೂ ಅಡವಿ ಸ್ಥಳಗಳಾ ಗುವವೆಂದೂ ನನ್ನ ಮೇಲೆ ಪ್ರಮಾಣ ಮಾಡಿಕೊಂಡಿದ್ದೇನೆಂದು ಕರ್ತನು ಅನ್ನುತ್ತಾನೆ.
- 14ಕರ್ತನಿಂದ ನಾನು ಸುದ್ದಿಯನ್ನು ಕೇಳಿದ್ದೇನೆ; ಅನ್ಯಜನಾಂಗಗಳೊಳಗೆ ರಾಯಭಾರಿಯು ಕಳುಹಿಸಲ್ಪಟ್ಟಿದ್ದಾನೆ; ನೀವು ಒಟ್ಟು ಗೂಡಿಕೊಂಡು ಅದಕ್ಕೆ ವಿರೋಧವಾಗಿ ಬನ್ನಿರಿ, ಯುದ್ಧಕ್ಕಾಗಿ ಏಳಿರಿ.
- 15ಇಗೋ, ನಿನ್ನನ್ನು ಅನ್ಯಜನಾಂಗ ಗಳಲ್ಲಿ ಹೀನವಾಗಿಯೂ ಮನುಷ್ಯರಲ್ಲಿ ತಿರಸ್ಕರಿಸಲ್ಪಟ್ಟವ ನನ್ನಾಗಿಯೂ ಮಾಡುವೆನು.
Cross references
- Genesis 22:16 ಆದಿಕಾಂಡ 22:16ಅವನು ಹೇಳಿದ್ದೇನಂದರೆ--ನಾನು ನನ್ನ ಮೇಲೆ ನಾನೇ ಆಣೆಯಿಟ್ಟು ಕೊಂಡಿದ್ದೇನೆ ಎಂದು ಕರ್ತನು ಹೇಳು ತ್ತಾನೆ. ಯಾಕಂದರೆ ನೀನು ಈ ಕಾರ್ಯವನ್ನು ಮಾಡಿ ನಿನ್ನ ಒಬ್ಬನೇ ಮಗನನ್ನು ನನಗೆ ಕೊಡುವದಕ್ಕೆ ಹಿಂತೆಗೆಯದೆ ಇದ್ದದರಿಂದ
- Isaiah 34:6 ಯೆಶಾಯ 34:6ಕರ್ತನ ಖಡ್ಗವು ರಕ್ತದಿಂದ ತುಂಬಿದೆ; ಅದು ಕುರಿಹೋತಗಳ ರಕ್ತದಿಂದಲೂ ಟಗರುಗಳ ಮೂತ್ರಪಿಂಡದ ಕೊಬ್ಬಿ ನಿಂದಲೂ ಪುಷ್ಟಿಯಾಯಿತು; ಯಾಕಂದರೆ ಕರ್ತನು ಬೊಚ್ರದಲ್ಲಿ ಬಲಿಯನ್ನೂ ಎದೋಮಿನ ದೇಶದಲ್ಲಿ ದೊಡ್ಡ ಕೊಲೆಯನ್ನೂ ಉಂಟು ಮಾಡಿದ್ದಾನೆ.
- Genesis 36:33 ಆದಿಕಾಂಡ 36:33ಬೆಲಗನು ಸತ್ತ ಮೇಲೆ ಅವನ ಬದಲಾಗಿ ಬೊಚ್ರದವನಾದ ಜೆರಹನ ಮಗನಾದ ಯೋಬಾಬನು ಆಳಿದನು.
- Jeremiah 49:22 ಯೆರೆಮೀಯ 49:22ಇಗೋ, ಅವನು ಹದ್ದಿನಂತೆ ಹಾರುವನು; ಬೊಚ್ರದ ಮೇಲೆ ತನ್ನ ರೆಕ್ಕೆಗಳನ್ನು ಚಾಚುವನು; ಎದೋಮಿನ ಪರಾಕ್ರಮ ಶಾಲಿಗಳ ಹೃದಯವು ಆ ದಿವಸದಲ್ಲಿ ಪ್ರಸವ ವೇದನೆಯುಳ್ಳ ಸ್ತ್ರೀಯ ಹೃದಯದ ಹಾಗೆ ಇರುವದು.
- Amos 6:8 ಆಮೋಸ 6:8ಸೈನ್ಯಗಳ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ದೇವರಾದ ಕರ್ತನು ತನ್ನ ಮೇಲೆ ಆಣೆಯಿಟ್ಟುಕೊಂಡಿ ದ್ದಾನೆ; ಅದೇನಂದರೆ--ನಾನು ಯಾಕೋಬಿನ ಹೆಚ್ಚಳ ವನ್ನು ಅಸಹ್ಯಿಸಿಕೊಂಡು ಅವನ ಅರಮನೆಗಳನ್ನು ಹಗೆ ಮಾಡುತ್ತೇನೆ; ಅದಕಾರಣ ಪಟ್ಟಣವನ್ನೂ ಅದರಲ್ಲಿ ರುವ ಸಮಸ್ತವನ್ನೂ ನಾನು ಒಪ್ಪಿಸಿಬಿಡುತ್ತೇನೆ.
- Isaiah 34:9–15 ಯೆಶಾಯ 34:9–15ಪ್ರವಾಹಗಳು ಇಳಿಜಾರಾಗಿ ಮಾರ್ಪಡುವದೂ; ಅದರ ದೂಳು ಗಂಧಕವಾಗುವದು; ದೇಶವು ಉರಿ ಯುವ ಇಳಿಜಾರು ಪ್ರದೇಶವಾಗುವದು. ಅದು ರಾತ್ರಿಯಲ್ಲಾದರೂ ಇಲ್ಲವೆ ಹಗಲಿನಲ್ಲಾದರೂ ಆರು ವದಿಲ್ಲ; ಅದರ ಹೊಗೆಯು ನಿರಂತರವಾಗಿ ಏಳುತ್ತಿರು ವದು; ಅದು ತಲತಲಾಂತರಕ್ಕೂ ಹಾಳಾಗಿ ಬಿದ್ದಿರು ವದು; ಅದನ್ನು ಎಂದೆಂದಿಗೂ ಯಾರೂ ಹಾದು ಹೋಗರು. ಆದರೆ ಬಕ ಪಕ್ಷಿಯು ಮತ್ತು ಮುಳ್ಳು ಹಂದಿಯು ಅದನ್ನು ಆವರಿಸಿಕೊಳ್ಳುವವು; ಗೂಬೆ ಮತ್ತು ಕಾಗೆಗಳು ಸಹ ಅಲ್ಲಿ ವಾಸಿಸುವವು; ಗಲಿಬಿಲಿ ಯೆಂಬ ನೂಲನ್ನು ಶೂನ್ಯವೆಂಬ ಗಟ್ಟಿ ತೂಕವನ್ನು ಆತನು ಅದರ ಮೇಲೆ ಎಳೆಯುವನು. ಅವರ ರಾಜ್ಯಕ್ಕೆ ಪ್ರಮುಖರನ್ನು ಕರೆಯುವರು; ಆದರೆ ಅಲ್ಲಿ ಯಾರೂ ಇರುವದಿಲ್ಲ; (ಅದರ) ಅವಳ ಪ್ರಭುಗಳು ಇಲ್ಲದಂತಾಗುವರು. ಅವಳ ಅರಮನೆಗಳಲ್ಲಿ ಮುಳ್ಳುಗಳು ಬೆಳೆಯುವವು; ಅವಳ ಕೋಟೆಗಳಲ್ಲಿ ತುರುಚಿಯೂ ದತ್ತೂರಿಯೂ ಇರುವವು; ಅದು (ಉಷ್ಟ್ರ ಪಕ್ಷಿಗಳ) ಸರ್ಪಗಳ ನಿವಾಸವೂ ಗೂಬೆಗಳಿಗೆ ಸ್ಥಾನವೂ ಆಗುವದು. ಮರುಭೂಮಿಯ ಕಾಡು ಮೃಗಗಳು ಸಹ ದ್ವೀಪದ ಕಾಡುಮೃಗಗಳೊಂದಿಗೆ ಸಂಧಿಸುವವು; ದೆವ್ವವು ತನ್ನ ಜೊತೆಯನ್ನು ಕೂಗು ವದು; ಅಲ್ಲಿ ಚೀರುಗೂಬೆಯು ಸಹ ವಿಶ್ರಮಿಸಿಕೊಂಡು ಉಪಶಮನ ಸ್ಥಳವನ್ನು ಕಂಡುಕೊಳ್ಳುವದು. ದೊಡ್ಡ ಗೂಬೆಯು ಅಲ್ಲಿ ಗೂಡನ್ನು ಮಾಡಿಕೊಂಡು ಮೊಟ್ಟೆ ಯಿಟ್ಟು ಮರಿ ಮಾಡಿ ಅವುಗಳನ್ನು ತನ್ನ ನೆರಳಿನಲ್ಲಿ ಕೂಡಿಸುವದು; ಅಲ್ಲಿ ಹದ್ದುಗಳಲ್ಲಿ ಪ್ರತಿಯೊಂದು ತಮ್ಮ ಜೊತೆಜೊತೆಯಾಗಿ ಕೂಡಿಕೊಳ್ಳುವವು.
- Amos 1:12 ಆಮೋಸ 1:12ಆದರೆ ನಾನು ತೇಮಾನಿನ ಮೇಲೆ ಬೆಂಕಿಯನ್ನು ಕಳುಹಿಸುವೆನು, ಅದು ಬೊಚ್ರದ ಅರಮನೆಗಳನ್ನು ನುಂಗಿಬಿಡುವದು.
- Isaiah 45:23 ಯೆಶಾಯ 45:23ನನ್ನಷ್ಟಕ್ಕೆ ನಾನೇ ಆಣೆಯನ್ನು ಇಟ್ಟಿದ್ದೇನೆ, ನೀತಿಯುಳ್ಳ ವಾಕ್ಯವು ನನ್ನ ಬಾಯಿಂದ ಹೊರಟಿದೆ, ಅದು ಹಿಂದಿರುಗದು: ಎಲ್ಲರೂ ನನಗೆ ಅಡ್ಡಬೀಳುವರು, ಪ್ರತಿ ನಾಲಿಗೆಯು ಪ್ರತಿಜ್ಞೆ ಮಾಡು ವದು.
- Jeremiah 44:26 ಯೆರೆಮೀಯ 44:26ಆದದರಿಂದ ಐಗುಪ್ತ ದೇಶದಲ್ಲಿ ವಾಸವಾಗಿರುವ ಯೆಹೂದದವರೆಲ್ಲರೇ, ನೀವು ಕರ್ತನ ವಾಕ್ಯವನ್ನು ಕೇಳಿರಿ; ಕರ್ತನು ಹೇಳು ತ್ತಾನೆ--ಇಗೋ, ಕರ್ತನಾದ ದೇವರ ಜೀವದಾಣೆ ಎಂದು ನನ್ನ ಹೆಸರು ಇನ್ನು ಮೇಲೆ ಸಮಸ್ತ ಐಗುಪ್ತ ದೇಶದಲ್ಲಿ ಯೆಹೂದದ ಮನುಷ್ಯರಲ್ಲಿ ಒಬ್ಬನ ಬಾಯಿಂದಲಾದರೂ ಹೇಳಲ್ಪಡುವದಿಲ್ಲವೆಂದು ನನ್ನ ಮಹತ್ತಾದ ಹೆಸರಿನಲ್ಲಿ ಆಣೆ ಇಟ್ಟುಕೊಂಡಿದ್ದೇನೆ.
- Isaiah 63:1 ಯೆಶಾಯ 63:1ಎದೋಮಿನಿಂದಲೂ ರಕ್ತಾಂಬರ ಧರಿಸಿಕೊಂಡು ಬೊಚ್ರದಿಂದಲೂ ಬರುವ ಇವನ್ಯಾರು? ಪ್ರಭೆಯುಳ್ಳ ವಸ್ತ್ರಗಳನ್ನು ತೊಟ್ಟುಕೊಂಡ ವನಾಗಿ ತನ್ನ ಮಹಾಪರಾಕ್ರಮದಲ್ಲಿ ಸಂಚಾರ ಮಾಡುವ ಇವನ್ಯಾರು? ನೀತಿಯಲ್ಲಿ ಮಾತನಾಡು ವವನೂ ರಕ್ಷಿಸಲು ಬಲಿಷ್ಠನೂ ಆಗಿರುವ ನಾನೇ.
- Obadiah 1:18 ಓಬದ್ಯ 1:18ಇದಲ್ಲದೆ ಯಾಕೋಬಿನ ಮನೆತನದವರು ಬೆಂಕಿಯಾಗಿಯೂ ಯೋಸೇಫನ ಮನೆತನದವರು ಜ್ವಾಲೆಯಾಗಿಯೂ ಇರುವರು; ಏಸಾವನ ಮನೆತನದವರು ಕೂಳೆಯಾಗು ವರು. ಅವರು ಹೊತ್ತಿಸಿ ಇವರನ್ನು ತಿಂದುಬಿಡುವರು; ಏಸಾವನ ಮನೆತನದವರಿಗೆ ಯಾರೂ ಉಳಿಯರು; ಕರ್ತನೇ ಅದನ್ನು ನುಡಿದಿದ್ದಾನೆ.
- Joel 3:19 ಯೋವೇಲ 3:19ಐಗುಪ್ತವು ಹಾಳಾಗು ವದು; ಎದೋಮು ಹಾಳಾದ ಅರಣ್ಯವಾಗುವದು; ಅವರು ಯೆಹೂದನ ಮಕ್ಕಳನ್ನು ಬಲಾತ್ಕಾರಮಾಡಿ ತಮ್ಮ ದೇಶದಲ್ಲಿ ಅಪರಾಧವಿಲ್ಲದ ರಕ್ತವನ್ನು ಚೆಲ್ಲಿ ದರು.