Jeremiah · chapter 49 · verse 14
Jeremiah 49:14 in Kannada
ಕರ್ತನಿಂದ ನಾನು ಸುದ್ದಿಯನ್ನು ಕೇಳಿದ್ದೇನೆ; ಅನ್ಯಜನಾಂಗಗಳೊಳಗೆ ರಾಯಭಾರಿಯು ಕಳುಹಿಸಲ್ಪಟ್ಟಿದ್ದಾನೆ; ನೀವು ಒಟ್ಟು ಗೂಡಿಕೊಂಡು ಅದಕ್ಕೆ ವಿರೋಧವಾಗಿ ಬನ್ನಿರಿ, ಯುದ್ಧಕ್ಕಾಗಿ ಏಳಿರಿ.
Kartaninda naanu suddiyannu keliddene; anyajanaangagalolage raayabhaariyu kaluhisalpattiddaane; neevu ottu goodikondu adakke virodhavaagi banniri, yuddhakkaagi eliri.
Jeremiah 49:14 in English
- King James Version (KJV)
- I have heard a rumour from the LORD, and an ambassador is sent unto the heathen, [saying], Gather ye together, and come against her, and rise up to the battle.
- World English Bible (WEB)
- I have heard news from the LORD, and an ambassador is sent among the nations, saying, “Gather yourselves together! Come against her! Rise up to the battle!”
- American Standard Version (ASV)
- I have heard tidings from Jehovah, and an ambassador is sent among the nations, [saying], Gather yourselves together, and come against her, and rise up to the battle.
- Bible in Basic English (BBE)
- Word has come to me from the Lord, and a representative has been sent to the nations, to say, Come together and go up against her, and take your places for the fight.
- Darby Translation (DBY)
- I have heard a rumour from Jehovah, and an ambassador is sent among the nations: — Gather yourselves together, and come against her and rise up for the battle.
- Webster's Bible (WBS)
- I have heard a rumor from the LORD, and an embassador is sent to the heathen, [saying] , Assemble, and come against her, and rise up to the battle.
- Young's Literal Translation (YLT)
- A report I have heard from Jehovah, And an ambassador among nations is sent, Gather yourselves and come in against her, And rise ye for battle.
Read in context
- 12ಕರ್ತನು ಹೀಗೆ ಹೇಳು ತ್ತಾನೆ--ಇಗೋ ಪಾತ್ರೆಯಲ್ಲಿ ಕುಡಿಯುವದಕ್ಕೆ ಯಾರಿಗೆ ನ್ಯಾಯತೀರ್ವಿಕೆ ಆಗಲಿಲ್ಲವೋ? ಅವರು ಸಹ ಕುಡಿದಿದ್ದಾರೆ; ಹಾಗಾದರೆ ನೀನು ಶುದ್ಧವಾಗಿ ಅಪರಾಧ ವಿಲ್ಲದೆ ಇರುವಿಯೋ? ಅಪರಾಧವಿಲ್ಲದೆ ಇರುವದಿಲ್ಲ ನಿಶ್ಚಯವಾಗಿ ಕುಡಿಯುವಿ.
- 13ಬೊಚ್ರವು ಹಾಳೂ ನಿಂದೆಯೂ ಅಡವಿಯೂ ಶಾಪವೂ ಆಗುವದೆಂದು ಅದರ ಪಟ್ಟಣಗಳೆಲ್ಲಾ ಎಂದೆಂದಿಗೂ ಅಡವಿ ಸ್ಥಳಗಳಾ ಗುವವೆಂದೂ ನನ್ನ ಮೇಲೆ ಪ್ರಮಾಣ ಮಾಡಿಕೊಂಡಿದ್ದೇನೆಂದು ಕರ್ತನು ಅನ್ನುತ್ತಾನೆ.
- 14ಕರ್ತನಿಂದ ನಾನು ಸುದ್ದಿಯನ್ನು ಕೇಳಿದ್ದೇನೆ; ಅನ್ಯಜನಾಂಗಗಳೊಳಗೆ ರಾಯಭಾರಿಯು ಕಳುಹಿಸಲ್ಪಟ್ಟಿದ್ದಾನೆ; ನೀವು ಒಟ್ಟು ಗೂಡಿಕೊಂಡು ಅದಕ್ಕೆ ವಿರೋಧವಾಗಿ ಬನ್ನಿರಿ, ಯುದ್ಧಕ್ಕಾಗಿ ಏಳಿರಿ.
- 15ಇಗೋ, ನಿನ್ನನ್ನು ಅನ್ಯಜನಾಂಗ ಗಳಲ್ಲಿ ಹೀನವಾಗಿಯೂ ಮನುಷ್ಯರಲ್ಲಿ ತಿರಸ್ಕರಿಸಲ್ಪಟ್ಟವ ನನ್ನಾಗಿಯೂ ಮಾಡುವೆನು.
- 16ಬಂಡೆಯ ಬಿರುಕು ಗಳಲ್ಲಿ ವಾಸಮಾಡುವವನೇ ಗುಡ್ಡದ ಕೊನೆಯನ್ನು ಹಿಡಿಯುವವನೇ, ನಿನ್ನ ಭಯಂಕರತ್ವವೂ ಹೃದಯದ ಗರ್ವವೂ ನಿನ್ನನ್ನು ಮೋಸಗೊಳಿಸಿದವು; ನೀನು ಹದ್ದಿನಂತೆ ನಿನ್ನ ಗೂಡನ್ನು ಎತ್ತರ ಮಾಡಿದರೂ ಅಲ್ಲಿಂದ ನಿನ್ನನ್ನು ಇಳಿಸುತ್ತೇನೆಂದು ಕರ್ತನು ಅನ್ನುತ್ತಾನೆ.
Cross references
- Isaiah 30:4 ಯೆಶಾಯ 30:4ಅವನ ಪ್ರಧಾ ನರು ಚೋವನಿನಲ್ಲಿ ಇದ್ದರು. ಅವನ ರಾಯಭಾರಿ ಗಳು ಹಾನೇಸಿಗೆ ಬಂದಿದ್ದಾರೆ.
- Jeremiah 51:11 ಯೆರೆಮೀಯ 51:11ಬಾಣಗಳನ್ನು ಮೆರಗು ಮಾಡಿರಿ, ಡಾಲುಗಳನ್ನು ಕೂಡಿಸಿರಿ; ಕರ್ತನು ಮೇದ್ಯರ ಅರಸರ ಆತ್ಮವನ್ನು ಎಬ್ಬಿಸಿದ್ದಾನೆ; ಆತನ ಆಲೋಚನೆ ಬಾಬೆಲಿಗೆ ವಿರೋಧವಾಗಿ ಅದನ್ನು ನಾಶಮಾಡುವದಕ್ಕೆ ಇದೆ. ಇದು ಕರ್ತನ ಪ್ರತಿದಂಡ ನೆಯೂ ಆತನ ದೇವಾಲಯದ ಪ್ರತಿದಂಡನೆಯೂ ಆಗಿದೆ.
- Jeremiah 51:27–28 ಯೆರೆಮೀಯ 51:27–28ದೇಶದಲ್ಲಿ ಧ್ವಜವನ್ನೆತ್ತಿರಿ; ಜನಾಂಗಗಳಲ್ಲಿ ತುತೂರಿಯನ್ನೂದಿರಿ; ಅದಕ್ಕೆ ವಿರೋಧವಾಗಿ ಜನಾಂಗಗಳನ್ನು ಸಿದ್ಧಮಾಡಿರಿ; ಅರರಾಟ್, ಮಿನ್ನಿ, ಅಷ್ಕೆನಜ್ ರಾಜ್ಯಗಳನ್ನು ಅದಕ್ಕೆ ವಿರೋಧವಾಗಿ ಕರೆಯಿರಿ; ಅದಕ್ಕೆ ವಿರೋಧವಾಗಿ ಸೈನ್ಯಾಧಿಪತಿಯನ್ನು ನೇಮಿಸಿರಿ; ಬಿರುಸಾದ ಮಿಡತೆ ದಂಡಿನಂತೆ ಕುದುರೆ ಗಳನ್ನು ಬರಮಾಡಿರಿ. ಅದಕ್ಕೆ ವಿರೋಧವಾಗಿ ಜನಾಂಗಗಳನ್ನೂ ಮೇದ್ಯರ ಅರಸರನ್ನೂ ಅದರ ಅಧಿಪತಿಗಳನ್ನೂ ಅಧಿಕಾರಿಗಳೆಲ್ಲರನ್ನೂ ಅವನ ರಾಜ್ಯದ ದೇಶವನ್ನೆಲ್ಲಾ ಸಿದ್ಧಮಾಡಿರಿ.
- Obadiah 1:1–4 ಓಬದ್ಯ 1:1–4ಓಬದ್ಯನ ದರ್ಶನವು. ಕರ್ತನಾದ ದೇವರು ಎದೋಮನ್ನು ಕುರಿತು ಹೀಗೆ ಹೇಳುತ್ತಾನೆ--ಕರ್ತನಿಂದ ಸುದ್ಧಿಯನ್ನು ಕೇಳಿದ್ದೇವೆ; ಅನ್ಯಜನಾಂಗಗಳಲ್ಲಿ ರಾಯ ಭಾರಿಯು ಕಳುಹಿಸಲ್ಪಟ್ಟಿದ್ದಾನೆ; ಏಳಿರಿ, ಅದಕ್ಕೆ ವಿರೋಧವಾಗಿ ಯುದ್ಧಕ್ಕೆ ಏಳುವ! ಇಗೋ, ನಿನ್ನನ್ನು ಅನ್ಯಜನಾಂಗಗಳಲ್ಲಿ ಹೀನವಾಗಿ ಮಾಡಿದ್ದೇನೆ. ನೀನು ಬಹಳವಾಗಿ ತಿರಸ್ಕರಿಸಲ್ಪಟ್ಟಿದ್ದೀ. ಬಂಡೆಯ ಬಿರುಕು ಗಳಲ್ಲಿ ವಾಸಮಾಡುವವನೇ, ಉನ್ನತದಲ್ಲಿ ನಿವಾಸ ಮಾಡಿಕೊಂಡವನೇ--ಯಾರು ನನ್ನನ್ನು ನೆಲಕ್ಕೆ ಇಳಿಸ ಬಲ್ಲರೆಂದು ತನ್ನ ಹೃದಯದಲ್ಲಿ ಅನ್ನುವವನೇ, ನಿನ್ನ ಹೃದಯದ ಗರ್ವವು ನಿನ್ನನ್ನು ಮೋಸಗೊಳಿಸಿದೆ. ನೀನು ಹದ್ದಿನಂತೆ ಏರಿಕೊಂಡು ನಿನ್ನ ಗೂಡನ್ನು ನಕ್ಷತ್ರಗಳಲ್ಲಿ ಇಟ್ಟರೂ ಅಲ್ಲಿಂದ ನಿನ್ನನ್ನು ಇಳಿಸುವೆನೆಂದು ಕರ್ತನು ಅನ್ನುತ್ತಾನೆ.
- Isaiah 18:2–3 ಯೆಶಾಯ 18:2–3ಸಮುದ್ರ ಮಾರ್ಗದಿಂದಲೂ ಹಾ! ಆಪಿನ ದೋಣಿಗಳಲ್ಲಿ ನೀರಿನ ಮೇಲೆಯೂ ರಾಯಭಾರಿ ಗಳನ್ನು ಕಳುಹಿಸುವಂತಾದ್ದೇ! ಆಶ್ಚರ್ಯ ತೀವ್ರವಾದ ದೂತರೇ, ಚದುರಿಸಲ್ಪಟ್ಟಿರುವ ಮತ್ತು ಸೂರೆಯಾಗಿ ರುವ ಜನಾಂಗದವರ ಬಳಿಗೂ ಹುಟ್ಟಿದಂದಿನಿಂದ ಇಲ್ಲಿನ ವರೆಗೂ ಭಯಂಕರವಾದ ಜನರ ಬಳಿಗೂ ಮಹಾಬಲದಿಂದ ತುಳಿಯುವವರೂ ನದಿಗಳಿಂದ ವಿಂಗಡವಾಗಿರುವ ಜನಾಂಗದ ಬಳಿಗೂ ಹೋಗಿರಿ. ಭೂಲೋಕದ ನಿವಾಸಿಗಳೆಲ್ಲರೇ! ಭೂಮಿಯಲ್ಲಿ ವಾಸ ವಾಗಿರುವವರೆಲ್ಲರೇ! ಬೆಟ್ಟಗಳಲ್ಲಿ ಆತನು ಧ್ವಜವನ್ನು ಎತ್ತುವಾಗ ನೋಡಿರಿ; ಅವನು ತುತೂರಿಯನ್ನೂದು ವಾಗ ಕೇಳಿರಿ.
- Isaiah 37:7 ಯೆಶಾಯ 37:7ಇಗೋ, ನಾನು ಅವನ ಮೇಲೆ ಒಂದು ವಿಪತ್ತನ್ನು ಕಳುಹಿಸುವೆನು. ಅವನು ಒಂದು ಸುದ್ದಿಯನ್ನು ಕೇಳಿ ತಿರುಗಿಕೊಂಡು ಸ್ವದೇಶಕ್ಕೆ ಹೋಗಿ ಅಲ್ಲಿ ಕತ್ತಿಯಿಂದ ಬೀಳುವಂತೆ ಮಾಡುವೆನು ಎಂಬ ಈ ಮಾತುಗಳನ್ನು ನಿಮ್ಮ ಯಜಮಾನರಿಗೆ ತಿಳಿಸಿರಿ ಎಂದು ಹೇಳಿದನು.
- Jeremiah 51:46 ಯೆರೆಮೀಯ 51:46ನಿಮ್ಮ ಹೃದಯವು ಕುಂದದ ಹಾಗೆ ದೇಶದಲ್ಲಿ ಕೇಳಲ್ಪಡುವ ಸುದ್ದಿಗೆ ನೀವು ಭಯಪಡದ ಹಾಗೆ ಒಂದು ವರುಷದಲ್ಲಿ ಒಂದು ಸುದ್ದಿಯೂ ಇನ್ನೊಂದು ವರುಷದಲ್ಲಿ ಇನ್ನೊಂದು ಸುದ್ದಿಯೂ ಬರುವದು; ದೇಶದಲ್ಲಿ ಬಲಾತ್ಕಾರವಿರು ವದು, ಆಳುವವನು ಆಳುವವನಿಗೆ ವಿರೋಧವಾಗಿರು ವನು.
- Jeremiah 50:9–16 ಯೆರೆಮೀಯ 50:9–16ಇಗೋ, ನಾನು ಉತ್ತರ ದೇಶದಿಂದ ದೊಡ್ಡ ಜನಾಂಗಗಳ ಸಭೆ ಸೇರಿಸಿ; ಬಾಬೆಲಿಗೆ ವಿರೋಧವಾಗಿ ಏಳುವಂತೆ ಮಾಡುತ್ತೇನೆ. ಅವರು ಅದಕ್ಕೆ ವಿರೋಧ ವಾಗಿ ಯುದ್ಧವನ್ನು ಸಿದ್ಧಮಾಡುವರು; ಅಲ್ಲಿಂದ ಅದು ಹಿಡಿಯಲ್ಪಡುವದು; ಅವರ ಬಾಣಗಳು ಬಲಿಷ್ಠನಾದ ಪ್ರವೀಣಶಾಲಿಯ ಹಾಗಿರುವವು. ಯಾವದೂ ವ್ಯರ್ಥವಾಗಿ ತಿರುಗವು. ಕಸ್ದೀಯರ ದೇಶವು ಸುಲಿಗೆಯಾಗುವದು; ಅದನ್ನು ಸುಲುಕೊಳ್ಳುವವರೆಲ್ಲರಿಗೆ ತೃಪ್ತಿಯಾಗುವದೆಂದು ಕರ್ತನು ಅನ್ನುತ್ತಾನೆ. ನನ್ನ ಸ್ವಾಸ್ತ್ಯವನ್ನು ನಾಶಮಾಡಿದವರೇ, ನೀವು ಸಂತೋಷಿಸಿದ್ದರಿಂದಲೂ ಉಲ್ಲಾಸಿಸಿದ್ದರಿಂದಲೂ ಕೊಬ್ಬಿದ ಕಡಸಿನ ಹಾಗೆ ಗರ್ವಪಟ್ಟದ್ದರಿಂದಲೂ ಹೋರಿಗಳ ಹಾಗೆ ಹೂಂಕರಿಸಿದ್ದರಿಂದಲೂ ನಿಮ್ಮ ತಾಯಿ ಬಹಳವಾಗಿ ನಾಚಿಕೆಪಡುವಳು; ನಿಮ್ಮನ್ನು ಹೆತ್ತವಳು ಲಜ್ಜೆ ಹೊಂದುವಳು; ಇಗೋ, ಜನಾಂಗ ಗಳಲ್ಲಿ ಅಂತ್ಯವಾದದ್ದು ಕಾಡೂ ಒಣ ಭೂಮಿಯೂ ಅರಣ್ಯವೂ ಆಗುವದು. ಕರ್ತನ ರೌದ್ರದ ನಿಮಿತ್ತ ಅದರಲ್ಲಿ ಯಾರೂ ವಾಸಮಾಡುವದಿಲ್ಲ; ಸಂಪೂರ್ಣ ಹಾಳಾಗುವದು ಬಾಬೆಲನ್ನು ಹಾದುಹೋಗುವವ ರೆಲ್ಲರು ಅದರ ಎಲ್ಲಾ ಬಾಧೆಗಳ ವಿಷಯ ವಿಸ್ಮಯಪಟ್ಟು ಸಿಳ್ಳಿಡುವರು. ಬಿಲ್ಲನ್ನು ಬೊಗ್ಗಿಸುವವರೆಲ್ಲರೇ, ಬಾಬೆಲಿಗೆ ವಿರೋಧವಾಗಿ ಸುತ್ತಲೂ ಯುದ್ಧವನ್ನು ಸಿದ್ಧಮಾಡಿರಿ. ಬಾಣಗಳನ್ನು ಅದಕ್ಕೆ ಎಸೆಯಿರಿ; ಕಡಿಮೆ ಮಾಡಬೇಡಿರಿ; ಅದು ಕರ್ತನಿಗೆ ವಿರೋಧವಾಗಿ ಪಾಪಮಾಡಿದೆ. ಸುತ್ತಲೂ ಅದಕ್ಕೆ ವಿರೋಧವಾಗಿ ಆರ್ಭಟಿಸಿರಿ; ಒಳಪಟ್ಟಿತು; ಅದರ ಅಸ್ತಿವಾರಗಳು ಬಿದ್ದು ಹೋದವು; ಅದರ ಗೋಡೆಗಳು ಕೆಡವಲ್ಪಟ್ಟವು; ಅದು ಕರ್ತನ ಪ್ರತಿದಂಡನೆಯೇ, ಅದರಿಂದ ಪ್ರತಿ ದಂಡನೆ ತಕ್ಕೊಳ್ಳಿರಿ. ಅದು ಮಾಡಿದ ಹಾಗೆಯೇ ಅದಕ್ಕೆ ಮಾಡಿರಿ. ಬಿತ್ತುವವನನ್ನೂ ಸುಗ್ಗಿ ಕಾಲದಲ್ಲಿ ಕುಡುಗೋಲು ಹಿಡಿಯುವವನನ್ನೂ ಬಾಬೆಲಿನೊಳ ಗಿಂದ ಕಡಿದು ಬಿಡಿರಿ; ಕಷ್ಟಪಡಿಸುವ ಕತ್ತಿಯ ಭಯದಿಂದ ಅವರು ತಮ್ಮ ತಮ್ಮ ಜನರ ಬಳಿಗೆ ತಿರುಗಿಕೊಳ್ಳುವರು; ತಮ್ಮ ತಮ್ಮ ದೇಶಗಳಿಗೆ ಓಡಿ ಹೋಗುವರು.
- Ezekiel 7:25–26 ಯೆಹೆಜ್ಕೇಲನು 7:25–26ನಾಶವು ಬರುತ್ತದೆ ಮತ್ತು ಅವರು ಸಮಾಧಾನವನ್ನು ಹುಡುಕುತ್ತಾರೆ; ಆದರೆ ಅದು ಇರುವದಿಲ್ಲ. ಕೇಡಿನ ಮೇಲೆ ಕೇಡು ಬರು ವದು; ಸುದ್ದಿಯ ಮೇಲೆ ಸುದ್ದಿ ಬರುವದು. ಆಗ ಅವರು ಪ್ರವಾದಿಯ ದರ್ಶನವನ್ನು ಹುಡುಕುವರು. ಆದರೆ ನ್ಯಾಯಪ್ರಮಾಣವು ಯಾಜಕರನ್ನೂ ಆಲೋ ಚನೆಯು ಪೂರ್ವಿಕರನ್ನೂ ಬಿಟ್ಟು ನಾಶವಾಗುವದು.ಅರಸನು ದುಃಖಿಸುವನು, ಪ್ರಧಾನನು ನಿರ್ಗತಿಕನಾ ಗುವನು; ದೇಶದ ಜನರ ಕೈಗಳು ತೊಂದರೆಗೊಳ್ಳು ವವು; ಅವರ ಮಾರ್ಗಗಳ ಪ್ರಕಾರ ಅವರ ಹಾಗೆಯೇ ಮಾಡುವೆನು; ಅವರ ನ್ಯಾಯಗಳ ಪ್ರಕಾರ ಅವರಿಗೆ ನ್ಯಾಯತೀರಿಸುವೆನು. ನಾನೇ ಕರ್ತನೆಂದು ಅವರಿಗೆ ತಿಳಿಯುವದು.
- Isaiah 13:2–3 ಯೆಶಾಯ 13:2–3ಅವರು(ಶತ್ರುಗಳು) ಬಂದು ಘನವಂತ ದ್ವಾರಗಳೊಳಗೆ ಹೋಗುವಂತೆ ಎತ್ತರವಾದ ಪರ್ವತದ ಮೇಲೆ ನೀವು ಧ್ವಜವನ್ನೆತ್ತಿ ಅವರಿಗೆ ನಿಮ್ಮ ಶಬ್ದವನ್ನು ಕೇಳಿಸುವಂತೆ ಜೋರಾಗಿ ಕೂಗಿ ಕರೆಯಿರಿ. ನಾನು ನನ್ನ ಪರಿಶುದ್ಧರಿಗೆ ಆಜ್ಞಾಪಿಸಿ ನನ್ನ ಮಹಿಮೆಯಲ್ಲಿ ಉಲ್ಲಾಸಿಸುವವರನ್ನೂ ಶೂರರನ್ನೂ ನನ್ನ ಕೋಪಕ್ಕೆ ಕರೆದಿದ್ದೇನೆ.
- Matthew 24:6 ಮತ್ತಾಯನು 24:6ಯುದ್ಧಗಳನ್ನೂ ಯುದ್ಧಗಳ ಸುದ್ದಿಗಳನ್ನೂ ನೀವು ಕೇಳುವಿರಿ. ಕಳವಳಗೊಳ್ಳದಂತೆ ನೀವು ನೋಡಿಕೊಳ್ಳಿರಿ; ಯಾಕಂದರೆ ಇವೆಲ್ಲವುಗಳು ಸಂಭವಿಸುವದು ಅಗತ್ಯ; ಆದರೆ ಇದು ಇನ್ನೂ ಅಂತ್ಯವಲ್ಲ.