Jeremiah · chapter 49 · verse 27
Jeremiah 49:27 in Kannada
ನಾನು ದಮಸ್ಕದ ಗೋಡೆಯಲ್ಲಿ ಬೆಂಕಿಯನ್ನು ಹಚ್ಚುತ್ತೇನೆ; ಅದು ಬೆನ್ಹದದನ ಅರಮನೆಗಳನ್ನು ತಿಂದುಬಿಡುವದು.
Naanu damaskada godeyalli benkiyannu hachchuttene; adu benhadadana aramanegalannu tindubiduvadu.
Jeremiah 49:27 in English
- King James Version (KJV)
- And I will kindle a fire in the wall of Damascus, and it shall consume the palaces of Ben-hadad.
- World English Bible (WEB)
- “I will kindle a fire in the wall of Damascus, and it will devour the palaces of Ben Hadad.”
- American Standard Version (ASV)
- And I will kindle a fire in the wall of Damascus, and it shall devour the palaces of Ben-hadad.
- Bible in Basic English (BBE)
- And I will have a fire lighted on the wall of Damascus, burning up the great houses of Ben-hadad.
- Darby Translation (DBY)
- And I will kindle a fire in the wall of Damascus, and it shall consume the palaces of Ben-Hadad.
- Webster's Bible (WBS)
- And I will kindle a fire in the wall of Damascus, and it shall consume the palaces of Ben-hadad.
- Young's Literal Translation (YLT)
- And I have kindled a fire against the wall of Damascus, And it consumed palaces of Ben-Hadad!'
Read in context
- 25ಹೊಗಳಿಕೆಯ ಪಟ್ಟಣವೂ ನನ್ನ ಸಂತೋಷದ ಪಟ್ಟಣವೂ ಬಿಡಲ್ಪಟ್ಟಿದೆಯಲ್ಲವೋ?
- 26ಆದದರಿಂದ ಅದರ ಯೌವನಸ್ಥರು ಚೌಕಗಳಲ್ಲಿ ಬೀಳುವರು; ಯುದ್ಧಸ್ಥರೆಲ್ಲರೂ ಆ ದಿನದಲ್ಲಿ ಕಡಿದುಹಾಕಲ್ಪಡುವರು ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆ.
- 27ನಾನು ದಮಸ್ಕದ ಗೋಡೆಯಲ್ಲಿ ಬೆಂಕಿಯನ್ನು ಹಚ್ಚುತ್ತೇನೆ; ಅದು ಬೆನ್ಹದದನ ಅರಮನೆಗಳನ್ನು ತಿಂದುಬಿಡುವದು.
- 28ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಹೊಡೆಯಲಿಕ್ಕಿರುವ ಕೇದಾರಿನ ವಿಷಯವಾಗಿಯೂ ಹಾಚೋರಿನ ರಾಜ್ಯಗಳ ವಿಷಯವಾಗಿಯೂ ಕರ್ತನು ಹೀಗೆ ಹೇಳುತ್ತಾನೆ--ಏಳಿರಿ, ಕೇದಾರಿನ ಬಳಿಗೆ ಏರಿ ಹೋಗಿರಿ! ಪೂರ್ವದಿಕ್ಕಿನ ಮನುಷ್ಯರನ್ನು ಸುಲು ಕೊಳ್ಳಿರಿ.
- 29ಅವರ ಗುಡಾರಗಳನ್ನೂ ಮಂದೆಗಳನ್ನೂ ತಕ್ಕೊಳ್ಳುವರು; ಅವರ ತೆರೆಗಳನ್ನೂ ಎಲ್ಲಾ ಪಾತ್ರೆ ಗಳನ್ನೂ ಒಂಟೆಗಳನ್ನೂ ವಶಮಾಡಿಕೊಳ್ಳುವರು; ಸುತ್ತಲೂ ಭಯವೆಂದು ಅವರಿಗೆ ಕೂಗುವರು.
Cross references
- Amos 1:3–5 ಆಮೋಸ 1:3–5ಕರ್ತನು ಹೀಗೆ ಹೇಳುತ್ತಾನೆ--ದಮಸ್ಕದ ಮೂರು ಮತ್ತು ನಾಲ್ಕರ ಅಪರಾಧಗಳ ನಿಮಿತ್ತ ನಾನು ಅವರನ್ನು ದಂಡಿಸದೆ ಹಿಂತಿರುಗುವದಿಲ್ಲ; ಅವರು ಕಬ್ಬಿಣದ ಆಯುಧಗಳಿಂದ ಗಿಲ್ಯಾದನ್ನು ಬಡಿದಿರುವರು. ಆದರೆ ನಾನು ಹಜಾಯೇಲನ ಮನೆಯೊಳಗೆ ಬೆಂಕಿಯನ್ನು ಕಳುಹಿಸುತ್ತೇನೆ; ಅದು ಬೆನ್ಹದದನ ಅರಮನೆಗಳನ್ನು ನುಂಗಿಬಿಡುವದು. ನಾನು ದಮಸ್ಕದ ಅಡ್ಡ ದಂಡೆ ಯನ್ನು ಸಹ ಮುರಿಯುವೆನು; ಆವೆನ್ ತಗ್ಗಿನಿಂದ ನಿವಾಸಿಯನ್ನೂ ಎದೆನಿನ ಮನೆಯಿಂದ ರಾಜದಂಡ ಹಿಡಿಯುವನನ್ನೂ ಕಡಿದುಬಿಡುವೆನು; ಸಿರಿಯಾದ ಜನರು ಸೆರೆಯಾಗಿ ಕೀರಿಗೆ ಹೋಗುವರೆಂದು ಕರ್ತನು ಹೇಳುತ್ತಾನೆ.
- 1 Kings 15:18–20 1 ಅರಸುಗಳು 15:18–20ಆಗ ಆಸನು ಕರ್ತನ ಮಂದಿರದ ಬೊಕ್ಕಸಗಳನ್ನೂ ಮಿಕ್ಕ ಸಮಸ್ತ ಬೆಳ್ಳಿ ಬಂಗಾರವನ್ನು ಅರಮನೆಯ ಬೊಕ್ಕಸಗಳಲ್ಲಿ ತೆಗೆದು ತನ್ನ ಸೇವಕರ ಕೈಯಲ್ಲಿ ಒಪ್ಪಿಸಿ ದಮಸ್ಕ ಪಟ್ಟಣದಲ್ಲಿ ವಾಸವಾಗಿರುವ ಹೆಜ್ಯೋನನ ಮೊಮ್ಮಗನೂ ಟಬ್ರಿಮ್ಮೋನನ ಮಗನೂ ಆಗಿರುವ ಅರಾಮಿನ ಅರಸನಾದ ಬೆನ್ಹದದನಿಗೆ ಅವುಗಳನ್ನು ಕಳುಹಿಸಿ--ನನಗೂ ನಿನಗೂ ನನ್ನ ತಂದೆಗೂ ನಿನ್ನ ತಂದೆಗೂ ಒಡಂಬಡಿಕೆ ಉಂಟಲ್ಲಾ. ಇಗೋ, ನಾನು ಬೆಳ್ಳಿ ಬಂಗಾರವನ್ನು ಕಾಣಿಕೆಯಾಗಿ ನಿನ್ನ ಬಳಿಗೆ ಕಳುಹಿಸಿದ್ದೇನೆ. ಇಸ್ರಾಯೇಲಿನ ಅರಸನಾದ ಬಾಷನು ನನ್ನನ್ನು ಬಿಟ್ಟು ಹೋಗುವ ಹಾಗೆ ನೀನು ಬಂದು ಅವನ ಸಂಗಡ ಮಾಡಿದ ನಿನ್ನ ಒಡಂಬಡಿಕೆಯನ್ನು ಮುರಿಯಬೇಕು ಅಂದನು. ಹಾಗೆಯೇ ಬೆನ್ಹದದನು ಅರಸನಾದ ಆಸನ ಮಾತನ್ನು ಕೇಳಿ ಇಸ್ರಾಯೇಲಿನ ಪಟ್ಟಣಗಳಿಗೆ ವಿರೋಧವಾಗಿ ತನಗುಂಟಾದ ಸೈನ್ಯಗಳ ಅಧಿಪತಿ ಗಳನ್ನು ಕಳುಹಿಸಿ ಇಯ್ಯೋನ್, ದಾನ್, ಆಬೇಲ್ಬೇ ತ್ಮಾಕಾ ಸಮಸ್ತ ಕಿನ್ನೆರೋತ್, ಸಮಸ್ತ ನಫ್ತಾಲಿ ದೇಶವು, ಇವುಗಳನ್ನು ಹೊಡೆದುಬಿಟ್ಟನು.
- Jeremiah 43:12 ಯೆರೆಮೀಯ 43:12ಇದಲ್ಲದೆ ನಾನು ಐಗುಪ್ತದ ದೇವರುಗಳ ಮನೆಗಳಲ್ಲಿ ಬೆಂಕಿ ಹಚ್ಚುವೆನು; ಅವನು ಅವರನ್ನು ಸುಟ್ಟುಬಿಟ್ಟು, ಸೆರೆಯಾಗಿ ಒಯ್ಯುವನು; ಕುರುಬನು ತನ್ನ ವಸ್ತ್ರವನ್ನು ಹೊದ್ದು ಕೊಳ್ಳುವಂತೆ ಐಗುಪ್ತದೇಶವನ್ನು ಹೊದ್ದುಕೊಂಡು ಸಮಾಧಾನವಾಗಿ ಅಲ್ಲಿಂದ ಹೊರಡುವನು.ಇದ ಲ್ಲದೆ ಐಗುಪ್ತದೇಶದಲ್ಲಿರುವ ಬೇತ್ಷೆಮೇಷಿನ ವಿಗ್ರಹ ಗಳನ್ನು ಮುರಿದುಹಾಕಿ ಐಗುಪ್ತದ ದೇವರುಗಳ ಮನೆ ಗಳನ್ನು ಬೆಂಕಿಯಿಂದ ಸುಡುವನು ಎಂಬದು.
- 2 Kings 13:5 2 ಅರಸುಗಳು 13:5ಕರ್ತನು ಇಸ್ರಾಯೇಲಿಗೆ ಒಬ್ಬ ರಕ್ಷಕ ನನ್ನು ಕೊಟ್ಟಿದ್ದರಿಂದ ಅವರು ಅರಾಮ್ಯರ ಕೈಯಿಂದ ತಪ್ಪಿಸಿಕೊಂಡು ಹೋದರು. ಇಸ್ರಾಯೇಲ್ ಮಕ್ಕಳು ಮುಂಚಿನ ಹಾಗೆ ತಮ್ಮ ಡೇರೆಗಳಲ್ಲಿ ವಾಸವಾಗಿದ್ದರು.
- 1 Kings 20:1–22 1 ಅರಸುಗಳು 20:1–22ಅರಾಮಿನ ಅರಸನಾದ ಬೆನ್ಹದದನು ತನ್ನ ಸೈನ್ಯವನ್ನೆಲ್ಲಾ ಕೂಡಿಸಿದನು. ಅವನ ಬಳಿ ಯಲ್ಲಿ ಕುದುರೆಗಳೂ ರಥಗಳೂ ಸಹಿತವಾಗಿ ಮೂವತ್ತೆರಡು ಮಂದಿ ಅರಸುಗಳಿದ್ದರು. ಅವನು ಏರಿ ಹೋಗಿ ಸಮಾರ್ಯವನ್ನು ಮುತ್ತಿಗೆ ಹಾಕಿ ಅದರ ಮೇಲೆ ಯುದ್ಧಮಾಡಿದನು. ಅವನು ಇಸ್ರಾಯೇಲಿನ ಅರಸನಾದ ಅಹಾಬನ ಬಳಿಗೆ ದೂತರನ್ನು ಪಟ್ಟಣ ದೊಳಗೆ ಕಳುಹಿಸಿ--ನಿನ್ನ ಬೆಳ್ಳಿಯೂ ನಿನ್ನ ಬಂಗಾರವೂ ನನ್ನವು; ನಿನ್ನ ಪತ್ನಿಯರೂ ನಿನ್ನ ಸೌಂದರ್ಯರಾದ ವರೆಲ್ಲರೂ ನನ್ನವರೆಂದು ಬೆನ್ಹದದನು ಹೇಳುತ್ತಾ ನೆಂಬದಾಗಿ ಅವನಿಗೆ ಹೇಳಿದನು. ಇಸ್ರಾಯೇಲಿನ ಅರಸನು ಪ್ರತ್ತ್ಯುತ್ತರವಾಗಿ--ಅರಸನಾದ ನನ್ನ ಒಡೆ ಯನೇ, ನಿನ್ನ ಮಾತಿನ ಹಾಗೆಯೇ ನಾನು ನಿನ್ನವನು; ನನ್ನದೆಲ್ಲವೂ ನಿನ್ನದು ಅಂದನು. ಆ ದೂತರು ತಿರಿಗಿ ಬಂದು ಅವನಿಗೆ--ಒಡೆಯನೇ, ಬೆನ್ಹದದನು ಹೇಳುವ ದೇನಂದರೆ--ನಿನ್ನ ಬೆಳ್ಳಿಯನ್ನೂ ಬಂಗಾರವನ್ನೂ ನಿನ್ನ ಸ್ತ್ರೀಯರನ್ನೂ ಮಕ್ಕಳನ್ನೂ ನನಗೆ ಒಪ್ಪಿಸಬೇಕೆಂದು ನಿನಗೆ ಹೇಳಿ ಕಳುಹಿಸಿದೆನು. ನಿಶ್ಚಯವಾಗಿ ನಾಳೆ ಇಷ್ಟು ಹೊತ್ತಿಗೆ ನಾನು ನನ್ನ ಸೇವಕರನ್ನು ನಿನ್ನ ಬಳಿಗೆ ಕಳುಹಿಸುವೆನು; ಅವರು ನಿನ್ನ ಮನೆಯನ್ನೂ ನಿನ್ನ ಸೇವಕರ ಮನೆಗಳನ್ನೂ ಶೋಧಿಸಿ ನಿನ್ನ ಕಣ್ಣಿಗೆ ರಮ್ಯ ವಾದದ್ದನ್ನು ಅವರು ತಮ್ಮ ಕೈಯಲ್ಲಿ ಹಿಡಿದು ತಕ್ಕೊಂಡು ಹೋಗುವರು ಅಂದನು. ಆಗ ಇಸ್ರಾಯೇಲಿನ ಅರಸನು ದೇಶದ ಹಿರಿಯರನ್ನೆಲ್ಲಾ ಕರೆಯಿಸಿ ಅವರಿಗೆಇವನು ಕೇಡನ್ನು ಹುಡುಕುತ್ತಾನೆಂದು ದಯಮಾಡಿ ತಿಳುಕೊಂಡು ನೋಡಿರಿ. ಯಾಕಂದರೆ ಅವನು ನನ್ನ ಹೆಂಡತಿಯರಿಗೋಸ್ಕರ ಮಕ್ಕಳಿಗೋಸ್ಕರವೂ ಬೆಳ್ಳಿಗೋ ಸ್ಕರವೂ ನನ್ನ ಬಂಗಾರಕ್ಕೋಸ್ಕರವೂ ನನ್ನ ಬಳಿಗೆ ಕಳುಹಿಸಿದಾಗ ನಾನು ಕೊಡುವದಿಲ್ಲವೆಂದು ಅವನಿಗೆ ಹೇಳಿದ್ದಿಲ್ಲ ಅಂದನು. ಆಗ ಹಿರಿಯರೂ ಜನರೂ ಅವನಿಗೆ--ಅವನ ಮಾತು ಕೇಳದೆ ಒಪ್ಪದೆ ಇರು ಅಂದರು.? ಆದದರಿಂದ ಅವನು ಬೆನ್ಹದದನ ದೂತ ರಿಗೆ-- ನೀವು ಅರಸನಾದ ನನ್ನ ಒಡೆಯನಿಗೆ ಹೇಳಬೇಕಾದದ್ದೇನಂದರೆ, ನೀನು ಮೊದಲು ಹೇಳಿದ ಸಮಸ್ತವನ್ನೂ ಮಾಡುವೆನು; ಆದರೆ ಈ ಕಾರ್ಯವನ್ನು ನಾನು ಮಾಡಕೂಡದು ಎಂದು ಹೇಳಿರಿ ಅಂದನು. ದೂತರು ಹೋಗಿ ಈ ಮಾತನ್ನು ಅವನಿಗೆ ಹೇಳಿದರು. ಆಗ ಬೆನ್ಹದದನು ಕಳುಹಿಸಿ--ನನ್ನನ್ನು ಹಿಂಬಾಲಿಸುವ ಸಮಸ್ತ ಜನರು ಕೈತುಂಬ ತಕ್ಕೊಳ್ಳಲು ಸಮಾರ್ಯದ ಧೂಳು ಸಾಕಾದರೆ ದೇವರುಗಳು ನನಗೆ ಹೀಗೆಯೂ ಇನ್ನೂ ಹೆಚ್ಚಾಗಿಯೂ ಮಾಡಲಿ ಎಂದು ಅವನಿಗೆ ಹೇಳಿ ಕಳುಹಿಸಿದನು. ಅದಕ್ಕೆ ಇಸ್ರಾಯೇಲಿನ ಅರಸನು ಪ್ರತ್ತ್ಯುತ್ತರವಾಗಿ--ನಡುಕಟ್ಟಿಕೊಳ್ಳುವವನು ಬಿಚ್ಚಿ ಹಾಕುವವನ ಹಾಗೆ ಹೊಗಳಿಕೊಳ್ಳದಿರಲಿ ಎಂದು ಹೇಳು ಅಂದನು. ಅವನೂ ರಾಜರೂ ಅವನ ಜೊತೆ ಡೇರೆಗಳಲ್ಲಿ ಕುಡಿಯುತ್ತಿರಲು ಈ ವಾರ್ತೆಯನ್ನು ಕೇಳುತ್ತಲೇ ಅವನು ತನ್ನ ಸೇವಕರಿಗೆ--ಸಿದ್ಧಮಾಡಿರಿ ಅಂದನು. ಹಾಗೆಯೆ ಪಟ್ಟಣಕ್ಕೆ ವಿರೋಧವಾಗಿ ಯುದ್ಧಕ್ಕೆ ಸಿದ್ಧಮಾಡಿದರು. ಆಗ ಇಗೋ, ಒಬ್ಬ ಪ್ರವಾದಿಯು ಇಸ್ರಾಯೇ ಲಿನ ಅರಸನಾದ ಅಹಾಬನ ಬಳಿಗೆ ಬಂದು--ಈ ದೊಡ್ಡ ಗುಂಪನ್ನು ನೋಡಿದಿಯೋ? ಇಗೋ, ನಾನೇ ಕರ್ತನೆಂದು ನೀನು ತಿಳಿಯುವ ಹಾಗೆ ಈ ಹೊತ್ತು ಅದನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಡುವೆನೆಂದು ಕರ್ತನು ಹೇಳುತ್ತಾನೆ ಅಂದನು. ಅಹಾಬನು--ಯಾರ ಕೈ ಯಿಂದ ಅಂದನು. ಅದಕ್ಕವನು ಪ್ರಾಂತ್ಯಗಳ ಪ್ರಧಾ ನರ ಯೌವನಸ್ಥರಿಂದಲೇ ಎಂದು ಕರ್ತನು ಹೇಳು ತ್ತಾನೆ ಅಂದನು. ಆಗ ಅವನು--ಯುದ್ಧ ನಡಿಸುವವನು ಯಾರು ಅಂದನು. ಅದಕ್ಕವನು--ನೀನೇ ಅಂದನು. ಅವನು ಪ್ರಾಂತಗಳ ಪ್ರಧಾನರ ಯೌವನಸ್ಥರನ್ನು ಲೆಕ್ಕ ಮಾಡಿದಾಗ ಅವರು ಇನ್ನೂರ ಮೂವತ್ತೆರಡು ಜನರಾಗಿದ್ದರು. ಅವರ ತರುವಾಯ ಇಸ್ರಾಯೇಲ್ ಮಕ್ಕಳಾದ ಸಕಲ ಜನರನ್ನು ಲೆಕ್ಕ ಮಾಡಿದಾಗ ಏಳು ಸಾವಿರ ಜನರಾಗಿದ್ದರು. ಅವರು ಮಧ್ಯಾಹ್ನದಲ್ಲಿ ಹೊರಟರು; ಆದರೆ ಬೆನ್ಹದದನೂ ಅವನ ಸಹಾಯ ಕರಾದ ಮೂವತ್ತೆರಡು ಮಂದಿ ಅರಸುಗಳೂ ಕೂಡ ಡೇರೆಗಳಲ್ಲಿ ಅಮಲೇರುವ ಹಾಗೆ ಕುಡಿಯುತ್ತಾ ಇದ್ದರು. ಪ್ರಾಂತಗಳ ಪ್ರಧಾನರ ಸೇವಕರು ಮೊದಲು ಸೈನ್ಯವಾಗಿ ಹೊರಡುವಾಗ ಬೆನ್ಹದದನು ಮನುಷ್ಯರನ್ನು ಕಳುಹಿಸಿದನು. ಅವರು ತಿರಿಗಿ ಬಂದು --ಸಮಾರ್ಯದಿಂದ ಮನುಷ್ಯರು ಬಂದಿದ್ದಾರೆಂದು ಅವನಿಗೆ ತಿಳಿಸಿದರು. ಆಗ ಅವನು--ಅವರು ಸಮಾಧಾನಕ್ಕೋಸ್ಕರ ಹೊರಟು ಬಂದಿದ್ದರೆ ಅವರನ್ನು ಜೀವಿತರಾಗಿ ಹಿಡಿಯಿರಿ; ಯುದ್ಧಕ್ಕೋಸ್ಕರ ಹೊರಟು ಬಂದಿದ್ದರೆ ಅವರನ್ನು ಜೀವಿತರಾಗಿ ಹಿಡಿಯಿರಿ ಅಂದನು. ಪ್ರಾಂತಗಳ ಪ್ರಧಾನರ ಯೌವನಸ್ಥರೂ ಅವರ ಹಿಂದೆ ಬಂದ ಸೈನಿಕರೂ ಪಟ್ಟಣದಿಂದ ಹೊರಗೆ ಬಂದಾಗ ಪ್ರತಿ ಮನುಷ್ಯನು ತನಗೆ ಎದುರು ಬಿದ್ದವರನ್ನು ಕೊಂದುಹಾಕಿದನು. ಆಗ ಅರಾಮ್ಯರು ಓಡಿಹೋದರು; ಇಸ್ರಾಯೇಲ್ಯರು ಅವರನ್ನು ಹಿಂದಟ್ಟಿದರು; ಅರಾಮಿನ ಅರಸನಾದ ಬೆನ್ಹದದನು ಕುದುರೆ ಹತ್ತಿಕೊಂಡು ಕುದುರೆ ರಾಹುತರ ಸಂಗಡ ತಪ್ಪಿಸಿಕೊಂಡನು. ಇದಲ್ಲದೆ ಇಸ್ರಾಯೇಲಿನ ಅರಸನು ಹೊರಟು ಕುದುರೆಗಳನ್ನೂ ರಥಗಳನ್ನೂ ಹೊಡೆದು ರಾಮ್ಯರನ್ನು ಮಹಾ ಸಂಹಾರದಿಂದ ಹೊಡೆದುಬಿಟ್ಟನು. ಪ್ರವಾದಿಯು ಇಸ್ರಾಯೇಲಿನ ಅರಸನ ಬಳಿಗೆ ಬಂದು ಅವನಿಗೆ--ನೀನು ಹೋಗಿ ಬಲಗೊಂಡು ನೀನು ಮಾಡುವದನ್ನು ತಿಳುಕೊಂಡು ನೋಡು; ಯಾಕಂದರೆ ವರುಷಾಂತರದಲ್ಲಿ ಅರಾಮಿನ ಅರಸನು ನಿನಗೆ ವಿರೋಧವಾಗಿ ಬರುವನು ಅಂದನು.
- 2 Kings 13:3 2 ಅರಸುಗಳು 13:3ಆದದ ರಿಂದ ಕರ್ತನು ಇಸ್ರಾಯೇಲಿನ ಮೇಲೆ ಕೋಪಿಸಿ ಕೊಂಡು ಅವರನ್ನು ಅರಾಮ್ಯರ ಅರಸನಾದ ಹಜಾ ಯೇಲನ ಕೈಯಲ್ಲಿಯೂ ಹಜಾಯೇಲನ ಮಗನಾದ ಬೆನ್ಹದದನ ಕೈಯಲ್ಲಿಯೂ ಎಲ್ಲಾ ದಿವಸಗಳಲ್ಲಿ ಒಪ್ಪಿಸಿ ಕೊಟ್ಟನು.