Jeremiah · chapter 50 · verse 12
Jeremiah 50:12 in Kannada
ನಿಮ್ಮ ತಾಯಿ ಬಹಳವಾಗಿ ನಾಚಿಕೆಪಡುವಳು; ನಿಮ್ಮನ್ನು ಹೆತ್ತವಳು ಲಜ್ಜೆ ಹೊಂದುವಳು; ಇಗೋ, ಜನಾಂಗ ಗಳಲ್ಲಿ ಅಂತ್ಯವಾದದ್ದು ಕಾಡೂ ಒಣ ಭೂಮಿಯೂ ಅರಣ್ಯವೂ ಆಗುವದು.
Nimma taayi bahalavaagi naachikepaduvalu; nimmannu hettavalu lajje honduvalu; igo, janaanga galalli antyavaadaddu kaadoo ona bhoomiyoo aranyavoo aaguvadu.
Jeremiah 50:12 in English
- King James Version (KJV)
- Your mother shall be sore confounded; she that bare you shall be ashamed: behold, the hindermost of the nations [shall be] a wilderness, a dry land, and a desert.
- World English Bible (WEB)
- your mother will be utterly disappointed. She who bore you will be confounded. Behold, she will be the least of the nations, a wilderness, a dry land, and a desert.
- American Standard Version (ASV)
- your mother shall be utterly put to shame; she that bare you shall be confounded: behold, she shall be the hindermost of the nations, a wilderness, a dry land, and a desert.
- Bible in Basic English (BBE)
- Your mother will be put to shame; she who gave you birth will be looked down on: see, she will be the last of the nations, a waste place, a dry and unwatered land.
- Darby Translation (DBY)
- Your mother hath been sorely put to shame; she that bore you hath been covered with reproach: behold, [she is become] hindmost of the nations, a wilderness, a dry land, and a desert.
- Webster's Bible (WBS)
- Your mother shall be greatly confounded; she that bore you shall be ashamed: behold, the hindermost of the nations [shall be] a wilderness, a dry land, and a desert.
- Young's Literal Translation (YLT)
- Ashamed hath been your mother greatly, Confounded hath she been that bare you, Lo, the hindermost of nations [is] a wilderness, A dry land, and a desert.
Read in context
- 10ಕಸ್ದೀಯರ ದೇಶವು ಸುಲಿಗೆಯಾಗುವದು; ಅದನ್ನು ಸುಲುಕೊಳ್ಳುವವರೆಲ್ಲರಿಗೆ ತೃಪ್ತಿಯಾಗುವದೆಂದು ಕರ್ತನು ಅನ್ನುತ್ತಾನೆ.
- 11ನನ್ನ ಸ್ವಾಸ್ತ್ಯವನ್ನು ನಾಶಮಾಡಿದವರೇ, ನೀವು ಸಂತೋಷಿಸಿದ್ದರಿಂದಲೂ ಉಲ್ಲಾಸಿಸಿದ್ದರಿಂದಲೂ ಕೊಬ್ಬಿದ ಕಡಸಿನ ಹಾಗೆ ಗರ್ವಪಟ್ಟದ್ದರಿಂದಲೂ ಹೋರಿಗಳ ಹಾಗೆ ಹೂಂಕರಿಸಿದ್ದರಿಂದಲೂ
- 12ನಿಮ್ಮ ತಾಯಿ ಬಹಳವಾಗಿ ನಾಚಿಕೆಪಡುವಳು; ನಿಮ್ಮನ್ನು ಹೆತ್ತವಳು ಲಜ್ಜೆ ಹೊಂದುವಳು; ಇಗೋ, ಜನಾಂಗ ಗಳಲ್ಲಿ ಅಂತ್ಯವಾದದ್ದು ಕಾಡೂ ಒಣ ಭೂಮಿಯೂ ಅರಣ್ಯವೂ ಆಗುವದು.
- 13ಕರ್ತನ ರೌದ್ರದ ನಿಮಿತ್ತ ಅದರಲ್ಲಿ ಯಾರೂ ವಾಸಮಾಡುವದಿಲ್ಲ; ಸಂಪೂರ್ಣ ಹಾಳಾಗುವದು ಬಾಬೆಲನ್ನು ಹಾದುಹೋಗುವವ ರೆಲ್ಲರು ಅದರ ಎಲ್ಲಾ ಬಾಧೆಗಳ ವಿಷಯ ವಿಸ್ಮಯಪಟ್ಟು ಸಿಳ್ಳಿಡುವರು.
- 14ಬಿಲ್ಲನ್ನು ಬೊಗ್ಗಿಸುವವರೆಲ್ಲರೇ, ಬಾಬೆಲಿಗೆ ವಿರೋಧವಾಗಿ ಸುತ್ತಲೂ ಯುದ್ಧವನ್ನು ಸಿದ್ಧಮಾಡಿರಿ. ಬಾಣಗಳನ್ನು ಅದಕ್ಕೆ ಎಸೆಯಿರಿ; ಕಡಿಮೆ ಮಾಡಬೇಡಿರಿ; ಅದು ಕರ್ತನಿಗೆ ವಿರೋಧವಾಗಿ ಪಾಪಮಾಡಿದೆ.
Cross references
- Jeremiah 51:43 ಯೆರೆಮೀಯ 51:43ಅದರ ಪಟ್ಟಣಗಳು ಹಾಳಾದವು; ಅವು ಒಣನೆಲವೂ ಅಡವಿಯೂ ಯಾರೂ ವಾಸಮಾಡದೆ, ಮನುಷ್ಯನ ಮಗನು ಹಾದುಹೋಗದೆ ಇರುವ ದೇಶವೂ ಆಗಿವೆ.
- Isaiah 23:13 ಯೆಶಾಯ 23:13ಇಗೋ, ಕಸ್ದೀಯರ ದೇಶವು! ಅಶ್ಶೂರರು ಅದನ್ನು ಅರಣ್ಯ ನಿವಾಸಿಗಳಿಗೆ ಈಡು ಮಾಡುವತನಕ ಈ ಜನರು ಇರಲಿಲ್ಲ. (ನಿರ್ನಾ ಮವಾಗಿರಲಿಲ್ಲ) ಅವರು ಗೋಪುರಗಳನ್ನೂ ಅದರ ಅರಮನೆಗಳನ್ನೂ ಕಟ್ಟಿಸಿಕೊಂಡು ಅದನ್ನು ಹಾಳು ಮಾಡಿದ್ದಾರೆ.
- Jeremiah 51:25–26 ಯೆರೆಮೀಯ 51:25–26ನಾಶಮಾಡುವ ಬೆಟ್ಟವೇ! ಭೂಮಿಯನ್ನೆಲ್ಲಾ ನಾಶಮಾಡುವಂಥಾದ್ದೇ! ಇಗೋ, ನಾನು ನಿನಗೆ ವಿರೋಧವಾಗಿದ್ದೇನೆಂದು ಕರ್ತನು ಅನ್ನುತ್ತಾನೆ. ನಿನ್ನ ಮೇಲೆ ನನ್ನ ಕೈಯನ್ನು ಚಾಚಿ ಬಂಡೆಗಳ ಮೇಲಿನಿಂದ ನಿನ್ನನ್ನು ಹೊರಳಿಸಿ ನಿನ್ನನ್ನು ಸುಟ್ಟ ಬೆಟ್ಟವಾಗಿ ಮಾಡುತ್ತೇನೆ. ಒಬ್ಬರೂ ನಿನ್ನಿಂದ ಮೂಲೆಯ ಕಲ್ಲನ್ನಾಗಲಿ, ಅಸ್ತಿವಾರದ ಕಲ್ಲನ್ನಾಗಲಿ ತೆಗೆಯರು; ನೀನು ಎಂದೆಂದಿಗೂ ಹಾಳಾಗುವಿ ಎಂದು ಕರ್ತನು ಅನ್ನುತ್ತಾನೆ.
- Jeremiah 25:12 ಯೆರೆಮೀಯ 25:12ಎಪ್ಪತ್ತು ವರುಷ ತುಂಬಿದ ಮೇಲೆ ನಾನು ಬಾಬೆಲಿನ ಅರಸನನ್ನೂ ಆ ಜನಾಂಗವನ್ನೂ ಕಸ್ದೀಯರ ದೇಶವನ್ನೂ ಅವರ ಅಕ್ರಮಕ್ಕಾಗಿ ವಿಚಾರಿಸಿ ದಂಡಿಸುವೆನು. ಅದನ್ನು ನಿತ್ಯವಾಗಿ ಹಾಳುಮಾಡುವೆನು.
- Jeremiah 25:26 ಯೆರೆಮೀಯ 25:26ಹತ್ತಿರದ ಲ್ಲಿಯೂ ದೂರದಲ್ಲಿಯೂ ಒಬ್ಬರ ಬಳಿಯಲ್ಲಿ ಒಬ್ಬರಿ ರುವ ಉತ್ತರದಿಕ್ಕಿನ ಅರಸರೆಲ್ಲರಿಗೂ ಭೂಮಿಯ ಮೇಲ್ಭಾಗದಲ್ಲಿರುವಂಥ ಲೋಕದ ಎಲ್ಲಾ ರಾಜ್ಯ ಗಳಿಗೂ ಕುಡಿಸಿದೆನು; ಶೇಷಕಿನ ಅರಸನು ಅವರ ತರುವಾಯ ಕುಡಿಯುವನು.
- Isaiah 13:20–22 ಯೆಶಾಯ 13:20–22ಅದು ಎಂದಿಗೂ ನಿವಾಸ ಸ್ಥಳ ವಾಗದು, ಇಲ್ಲವೆ ತಲತಲಾಂತರಕ್ಕೂ ಅಲ್ಲಿ ಯಾರೂ ವಾಸಿಸರು; ಇಲ್ಲವೆ ಯಾವ ಅರಬಿಯನೂ ಗುಡಾರ ಹಾಕನು; ಅಥವಾ ಕುರುಬರು ಮಂದೆಯನ್ನು ತಂಗಿಸರು. ಆದರೆ ಮರುಭೂಮಿಯ ಕಾಡುಮೃಗಗಳು ಅಲ್ಲಿ ಮಲಗುವವು; ಅವರ ಮನೆಗಳು ವ್ಯೆಥೆಯಿಂದ ತುಂಬಿರುವವು; ಅಲ್ಲಿ ಗೂಬೆಗಳು ವಾಸಿಸುವವು, ದೆವ್ವಗಳು ಕುಣಿದಾಡುವವು.ಅವರ ಹಾಳಾದ ಮನೆಗಳಲ್ಲಿ ದ್ವೀಪಗಳ ಕಾಡುಮೃಗಗಳು ಕೂಗುವವು; ಅವರ ಮೆಚ್ಚಿಕೆಯಾದ ಅರಮನೆಗಳಲ್ಲಿ ಸರ್ಪಗಳು ವಾಸಿಸುವವು; ಅವಳ ಕಾಲವು ಸವಿಾಪಿಸಿತು, ಇನ್ನು ಅವಳ ದಿನಗಳು ಮುಂದುವರಿಯವು. ಅವರ ಹಾಳಾದ ಮನೆಗಳಲ್ಲಿ ದ್ವೀಪಗಳ ಕಾಡುಮೃಗಗಳು ಕೂಗುವವು; ಅವರ ಮೆಚ್ಚಿಕೆಯಾದ ಅರಮನೆಗಳಲ್ಲಿ ಸರ್ಪಗಳು ವಾಸಿಸುವವು; ಅವಳ ಕಾಲವು ಸವಿಾಪಿಸಿತು, ಇನ್ನು ಅವಳ ದಿನಗಳು ಮುಂದುವರಿಯವು.
- Galatians 4:26 ಗಲಾತ್ಯದವರಿಗೆ 4:26ಆದರೆ ಮೇಲಣ ಯೆರೂಸಲೇಮ್ ಎಂಬವಳು ಸ್ವತಂತ್ರಳು, ಇವಳೇ ನಮ್ಮೆಲ್ಲರಿಗೆ ತಾಯಿ.
- Jeremiah 51:62–64 ಯೆರೆಮೀಯ 51:62–64ಈ ವಾಕ್ಯಗಳನ್ನೆಲ್ಲಾ ನೋಡಿ ಓದುತ್ತಿರುವಾಗ ಹೇಳತಕ್ಕದ್ದೇನಂದರೆ--ಓ ಕರ್ತನೇ, ಈ ಸ್ಥಳಕ್ಕೆ ವಿರೋಧವಾಗಿ ಅದರಲ್ಲಿ ಮನುಷ್ಯ ರಾಗಲಿ, ಮೃಗಗಳಾಗಲಿ ನಿವಾಸಿಗಳು ಎಂದಿಗೂ ಇರದ ಹಾಗೆಯೂ ಅದು ನಿತ್ಯವಾಗಿ ಹಾಳಾಗುವ ಹಾಗೆಯೂ ಅದನ್ನು ಕಡಿದುಬಿಡುತ್ತೇನೆಂದು ನೀನೇ ಮಾತನಾ ಡಿದ್ದೀ. ನೀನು ಈ ಪುಸ್ತಕವನ್ನು ಓದಿ ಮುಗಿಸಿದ ಮೇಲೆ ಅದಕ್ಕೆ ಕಲ್ಲುಕಟ್ಟಿ ಅದನ್ನು ಯೂಫ್ರೇಟೀಸಿನ ಮಧ್ಯದಲ್ಲಿ ಬಿಸಾಡಿ ಹೀಗೆ ಹೇಳು--ಈ ಪ್ರಕಾರ ಬಾಬೆಲ್ ಮುಳುಗಿಹೋಗುವದು;ನಾನು ಅವಳ ಮೇಲೆ ತರುವ ಕೇಡಿನೊಳಗಿಂದ ಏಳದು, ಅವರು ಆಯಾಸ ಪಡುವರು. ಇಲ್ಲಿಯ ತನಕ ಯೆರೆವಿಾಯನ ವಾಕ್ಯಗಳು. ನಾನು ಅವಳ ಮೇಲೆ ತರುವ ಕೇಡಿನೊಳಗಿಂದ ಏಳದು, ಅವರು ಆಯಾಸ ಪಡುವರು. ಇಲ್ಲಿಯ ತನಕ ಯೆರೆವಿಾಯನ ವಾಕ್ಯಗಳು.
- Revelation 17:5 ಪ್ರಕಟನೆ 17:5ಇದಲ್ಲದೆ ಮರ್ಮ, ಮಹಾ ಬಾಬೆಲು, ಭೂಮಿಯಲ್ಲಿರುವ ಜಾರಸ್ತ್ರೀಯರಿಗೂ ಅಸಹ್ಯವಾದ ವುಗಳಿಗೂ ತಾಯಿ ಎಂಬ ಹೆಸರು ಅವಳ ಹಣೆಯ ಮೇಲೆ ಬರೆದಿತ್ತು.
- Isaiah 14:22 ಯೆಶಾಯ 14:22ಅವರಿಗೆ ವಿರುದ್ಧವಾಗಿ ಏಳುತ್ತೇನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ. ಬಾಬೆಲಿನಿಂದ ಹೆಸರನ್ನೂ ಉಳಿದ ಜನರನ್ನೂ ಮಗನನ್ನೂ ಸೋದರಳಿಯನನ್ನೂ ನಿರ್ಮೂಲ ಮಾಡುವೆನು ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- Revelation 18:21–23 ಪ್ರಕಟನೆ 18:21–23ಆಗ ಬಲಿಷ್ಠನಾದ ಒಬ್ಬ ದೂತನು ಬೀಸುವ ದೊಡ್ಡ ಕಲ್ಲಿನಂತಿರುವ ಒಂದು ಕಲ್ಲನ್ನು ಎತ್ತಿ ಸಮುದ್ರ ದೊಳಗೆ ಹಾಕಿ--ಮಹಾ ಪಟ್ಟಣವಾದ ಆ ಬಾಬೆಲು ಹೀಗೆಯೇ ಬಲಾತ್ಕಾರದಿಂದ ಕೆಡವಲ್ಲಟ್ಟು ಇನ್ನೆಂದಿಗೂ ಕಾಣಿಸುವದಿಲ್ಲ. ನಿನ್ನಲ್ಲಿ ವೀಣೆಗಾರರೂ ವಾದ್ಯ ಗಾರರೂ ಕೊಳಲೂದುವವರೂ ತುತೂರಿಯವರು ಮಾಡುವ ಧ್ವನಿಯೂ ಇನ್ನೆಂದಿಗೂ ಕೇಳಿಸುವದಿಲ್ಲ. ಯಾವ ವಿಧವಾದ ಕೈಗಾರಿಕೆಯನ್ನು ಮಾಡುವವರು ನಿಮ್ಮಲ್ಲಿ ಇನ್ನೆಂದಿಗೂ ಸಿಕ್ಕುವದಿಲ್ಲ; ಬೀಸುವ ಕಲ್ಲಿನ ಶಬ್ದವೂ ನಿನ್ನಲ್ಲಿ ಇನ್ನೆಂದಿಗೂ ಕೇಳಿಸುವದಿಲ್ಲ. ದೀಪದ ಬೆಳಕು ನಿನ್ನಲ್ಲಿ ಇನ್ನೆಂದಿಗೂ ಪ್ರಕಾಶಿಸು ವದಿಲ್ಲ. ವಧೂವರರ ಸ್ವರವು ನಿನ್ನಲ್ಲಿ ಇನ್ನೆಂದಿಗೂ ಕೇಳಿಸುವದಿಲ್ಲ; ನಿನ್ನ ವರ್ತಕರು ಭೂಮಿಯ ಪ್ರಧಾನ ರಾಗಿದ್ದದ್ದಲ್ಲದೆ ನಿನ್ನ ಮಾಟದಿಂದ ಎಲ್ಲಾ ಜನಾಂಗ ದವರು ಮೋಸ ಹೋದರು.ಪ್ರವಾದಿಗಳ, ಪರಿ ಶುದ್ಧರ ಮತ್ತು ಭೂಮಿಯ ಮೇಲೆ ಕೊಲ್ಲಲ್ಪಟ್ಟವರೆಲ್ಲರ ರಕ್ತವು ನಿನ್ನಲ್ಲಿ ಸಿಕ್ಕಿತು ಎಂದು ಹೇಳಿದನು.
- Jeremiah 50:35–40 ಯೆರೆಮೀಯ 50:35–40ಕಸ್ದೀಯರಿಗೂ ಬಾಬೆಲಿನ ನಿವಾಸಿಗಳಿಗೂ ಅದರ ಪ್ರಧಾನರಿಗೂ ಜ್ಞಾನಿಗಳಿಗೂ ವಿರೋಧವಾಗಿ ಕತ್ತಿ ಉಂಟೆಂದು ಕರ್ತನು ಅನ್ನುತ್ತಾನೆ. ಸುಳ್ಳುಗಾರರಿಗೆ ವಿರೋಧವಾಗಿ ಖಡ್ಗ ಉಂಟು; ಅವರು ಮೂರ್ಖರಾಗು ವರು; ಅದರ ಪರಾಕ್ರಮಶಾಲಿಗಳಿಗೆ ವಿರೋಧವಾಗಿ ಖಡ್ಗ ಉಂಟು; ಅವರು ಭಯಭ್ರಾಂತಿ ಪಡುವರು. ಅವರ ಕುದುರೆಗಳಿಗೂ ರಥಗಳಿಗೂ ಅದರೊಳ ಗಿರುವ ಎಲ್ಲಾ ಜನರಿಗೆ ವಿರೋಧವಾಗಿ ಖಡ್ಗ ಉಂಟು. ಅವರು ಹೆಂಗಸರ ಹಾಗೆ ಬೆದರುವರು; ಅದರ ಬೊಕ್ಕಸಗಳಿಗೆ ವಿರೋಧವಾಗಿಯೂ ಖಡ್ಗ ಉಂಟು. ಅವು ಕೊಳ್ಳೆಯಾಗುವವು. ಬೇಗೆಯು ಅವರ ನೀರನ್ನೆಲ್ಲಾ ಹೀರಲಿ; ಅದು ಬತ್ತಿ ಹೋಗುವದು; ಅದು ವಿಗ್ರಹಗಳ ದೇಶವೇ, ಅವರು ವಿಗ್ರಹಗಳಿಂದ ಹುಚ್ಚರಾದರು. ಆದದರಿಂದ ಅರಣ್ಯದ ಕಾಡು ಮೃಗಗಳು, ನರಿಗಳು ಕೂಡ ಅಲ್ಲಿ ವಾಸಮಾಡುವವು. ಗೂಬೆಗಳೂ ಸಹ ಅದರಲ್ಲಿ ವಾಸಮಾಡುವವು; ಅದು ಇನ್ನು ಮೇಲೆ ಎಂದೆಂದಿಗೂ ನಿವಾಸವಾಗುವದಿಲ್ಲ; ತಲತಲಾಂತರಗಳ ವರೆಗೂ ಯಾರೂ ಅದರಲ್ಲಿ ತಂಗುವದಿಲ್ಲ. ದೇವರು ಸೊದೋಮನ್ನೂ ಗೊಮೋರವನ್ನು ಅವುಗಳ ಸವಿಾಪದಲ್ಲಿದ್ದ ಪಟ್ಟಣಗಳನ್ನೂ ಕೆಡವಿಹಾಕಿದಾಗ ಆದ ಹಾಗೆ ಅಲ್ಲಿ ಯಾವ ಮನುಷ್ಯನಾದರೂ ವಾಸಮಾಡುವದಿಲ್ಲ; ಅದರಲ್ಲಿ ಯಾವ ನರಪುತ್ರನಾದರೂ ತಂಗುವದಿ ಲ್ಲವೆಂದು ಕರ್ತನು ಅನ್ನುತ್ತಾನೆ.