Galatians · chapter 4 · verse 26
Galatians 4:26 in Kannada
ಆದರೆ ಮೇಲಣ ಯೆರೂಸಲೇಮ್ ಎಂಬವಳು ಸ್ವತಂತ್ರಳು, ಇವಳೇ ನಮ್ಮೆಲ್ಲರಿಗೆ ತಾಯಿ.
Aadare melana yeroosalem embavalu svatantralu, ivale nammellarige taayi.
Galatians 4:26 in English
- King James Version (KJV)
- But Jerusalem which is above is free, which is the mother of us all.
- World English Bible (WEB)
- But the Jerusalem that is above is free, which is the mother of us all.
- American Standard Version (ASV)
- But the Jerusalem that is above is free, which is our mother.
- Bible in Basic English (BBE)
- But the Jerusalem on high is free, which is our mother.
- Darby Translation (DBY)
- but the Jerusalem above is free, which is our mother.
- Webster's Bible (WBS)
- But Jerusalem which is above is free, which is the mother of us all.
- Young's Literal Translation (YLT)
- and the Jerusalem above is the free-woman, which is mother of us all,
Read in context
- 24ಈ ಸಂಗತಿಗಳು ಉಪಮಾನವಾಗಿವೆ; ಹೇಗಂದರೆ, ಇವರು ಎರಡು ಒಡಂಬಡಿಕೆಗಳೆ, ಒಂದು ಒಡಂಬಡಿಕೆ ಸೀನಾಯಿ ಪರ್ವತದಿಂದ ಉತ್ಪನ್ನವಾಗಿ ದಾಸತ್ವದಲ್ಲಿರಬೇಕಾದ ಮಕ್ಕಳನ್ನು ಹೆರುವಂಥದ್ದು; ಅದೇ ಹಾಗರ್.
- 25ಹಾಗರ್ ಅಂದರೆ ಅರಬಸ್ಥಾನದಲ್ಲಿ ಸೀನಾಯಿ ಪರ್ವತ. ಆಕೆಯು ಈಗಿನ ಯೆರೂಸಲೇಮ್ ಎಂಬವಳಿಗೆ ಸರಿಬೀಳುತ್ತಾಳೆ; ಹೇಗಂದರೆ, ಈಕೆಯು ತನ್ನ ಮಕ್ಕಳ ಸಹಿತ ದಾಸತ್ವದಲ್ಲಿದ್ದಾಳೆ.
- 26ಆದರೆ ಮೇಲಣ ಯೆರೂಸಲೇಮ್ ಎಂಬವಳು ಸ್ವತಂತ್ರಳು, ಇವಳೇ ನಮ್ಮೆಲ್ಲರಿಗೆ ತಾಯಿ.
- 27ಯಾಕಂದರೆ--ಬಂಜೆಯೇ, ಹೆರದವಳೇ, ಸಂತೋಷಿಸು; ಪ್ರಸವ ವೇದನೆ ಪಡದವಳೇ, ಸ್ವರವೆತ್ತಿ ಕೂಗು; ಯಾಕಂದರೆ ಗಂಡನುಳ್ಳವಳಿಗಿಂತ ಬಿಡಲ್ಪಟ್ಟವಳಿಗೆ ಎಷ್ಟೋ ಹೆಚ್ಚು ಮಕ್ಕಳಿದ್ದಾರೆಂದು ಬರೆದದೆ.
- 28ಸಹೋದರರೇ, ನಾವು ಈಗ ಇಸಾಕನಂತೆ ವಾಗ್ದಾನದ ಮಕ್ಕಳಾಗಿದ್ದೇವೆ.
Cross references
- Hebrews 12:22 ಇಬ್ರಿಯರಿಗೆ 12:22ಆದರೆ ನೀವು ಚೀಯೋನ್ ಪರ್ವತಕ್ಕೂ ಜೀವಸ್ವರೂಪನಾದ ದೇವರ ಪಟ್ಟಣವಾಗಿರುವ ಪರಲೋಕದ ಯೆರೂಸಲೇಮಿಗೂ ಎಣಿಸಲಸಾಧ್ಯವಾದ ದೂತ ಗಣಗಳ ಬಳಿಗೂ
- Philippians 3:20 ಫಿಲಿಪ್ಪಿಯವರಿಗೆ 3:20ನಾವಾದರೊ ಪರಲೋಕ ನಿವಾಸಿಗಳು; ಅಲ್ಲಿಂದಲೇ ರಕ್ಷಕನು ಬರುವದನ್ನು ಎದುರು ನೋಡುತ್ತಾ ಇದ್ದೇವೆ; ಆತನೇ ಕರ್ತನಾದ ಯೇಸು ಕ್ರಿಸ್ತನು.ಆತನು ಎಲ್ಲವನ್ನೂ ತನಗೆ ಅಧೀನ ಮಾಡಿಕೊಳ್ಳಲಾಗುವ ಪರಾಕ್ರಮವನ್ನು ಸಾಧಿಸಿ ದೀನಾ ವಸ್ಥೆಯುಳ್ಳ ನಮ್ಮ ದೇಹವನ್ನು ರೂಪಾಂತರಪಡಿಸು ವದಕ್ಕೆ ಶಕ್ತನಾಗಿದ್ದು ಪ್ರಭಾವವುಳ್ಳ ತನ್ನ ದೇಹಕ್ಕೆ ಸಾರೂಪ್ಯವಾಗುವಂತೆ ಮಾಡುವನು.
- Revelation 21:2 ಪ್ರಕಟನೆ 21:2ಇದಲ್ಲದೆ ಪರಲೋಕದಿಂದ ಪರಿಶುದ್ಧ ಪಟ್ಟಣವಾದ ಹೊಸ ಯೆರೂಸಲೇಮು ದೇವರ ಬಳಿಯಿಂದ ಇಳಿದು ಬರುವದನ್ನು ಯೋಹಾನನೆಂಬ ನಾನು ಕಂಡೆನು; ಅದು ತನ್ನ ಮದಲಿಂಗನಿಗೋಸ್ಕರ ಅಲಂಕೃತಳಾದ ಮದಲಗಿತ್ತಿಯಂತೆ ಸಿದ್ಧವಾಗಿತ್ತು.
- Micah 4:1–2 ಮೀಕ 4:1–2ಅಂತ್ಯದಿವಸಗಳಲ್ಲಿ ಆಗುವದೇನಂದರೆ, ಕರ್ತನ ಆಲಯದ ಪರ್ವತವು ಬೆಟ್ಟಗಳ ತುದಿಯಲ್ಲಿ ನೆಲೆಯಾಗಿ ಗುಡ್ಡಗಳಿಗಿಂತ ಎತ್ತರ ವಾಗಿರುವದು; ಜನಗಳು ಅದರ ಬಳಿಗೆ ಪ್ರವಾಹದಂತೆ ಬರುವರು. ಅನೇಕ ಜನಾಂಗಗಳು ಬಂದು ಹೇಳುವ ದೇನಂದರೆ--ಬನ್ನಿರಿ; ಕರ್ತನ ಬೆಟ್ಟಕ್ಕೆ ಯಾಕೋಬಿನ ದೇವರ ಆಲಯಕ್ಕೆ ಹೋಗೋಣ; ಆತನು ತನ್ನ ಮಾರ್ಗಗಳನ್ನು ನಮಗೆ ಬೋಧಿಸುವನು; ನಾವು ಆತನ ಹಾದಿಗಳಲ್ಲಿ ನಡೆಯುವೆವು; ಯಾಕಂದರೆ ಚೀಯೋನಿನೊಳಗಿಂದ ನ್ಯಾಯಪ್ರಮಾಣವೂ ಯೆರೂ ಸಲೇಮಿನೊಳಗಿಂದ ದೇವರ ವಾಕ್ಯವೂ ಹೊರಡು ವದು.
- Revelation 3:12 ಪ್ರಕಟನೆ 3:12ಯಾವನು ಜಯ ಹೊಂದುತ್ತಾನೋ ಅವನನ್ನು ನನ್ನ ದೇವರ ಆಲಯದಲ್ಲಿ ಸ್ತಂಭವಾಗಿ ಮಾಡುವೆನು; ಅವನು ಇನ್ನು ಮುಂದೆ ಅದರೊಳಗಿಂದ ಹೊರಗೆ ಹೋಗುವದೇ ಇಲ್ಲ. ಇದಲ್ಲದೆ ನನ್ನ ದೇವರ ಹೆಸರನ್ನೂ ಪರಲೋಕದಲ್ಲಿರುವ ನನ್ನ ದೇವರ ಬಳಿಯಿಂದ ಇಳಿದು ಬರುವ ಹೊಸ ಯೆರೂಸಲೇಮ್ ಎಂಬ
- Isaiah 66:10 ಯೆಶಾಯ 66:10ಯೆರೂಸಲೇಮಿನ ಸಂಗಡ ನೀವು ಸಂತೋಷಿ ಸಿರಿ, ಅವಳನ್ನು ಪ್ರೀತಿ ಮಾಡುವವರೆಲ್ಲರೇ, ಅವಳೊಂ ದಿಗೆ ಉಲ್ಲಾಸಪಡಿರಿ; ಅವಳಿಗೋಸ್ಕರ ದುಃಖಿಸಿದವ ರೆಲ್ಲರೇ, ಅವಳ ಸಂತೋಷಕ್ಕಾಗಿ ಆನಂದಪಡಿರಿ.
- Isaiah 65:18 ಯೆಶಾಯ 65:18ಆದರೆ ನಾನು ಸೃಷ್ಟಿಸಿದವುಗಳಲ್ಲಿ ನೀವು ಸಂತೋಷಿಸಿ ಎಂದೆಂದಿಗೂ ಉಲ್ಲಾಸಪಡಿರಿ; ಯಾಕಂ ದರೆ ಇಗೋ, ನಾನು ಯೆರೂಸಲೇಮಿನಲ್ಲಿ ಉಲ್ಲಾಸ ವನ್ನೂ ಅವಳ ಜನರಲ್ಲಿ ಸಂತೋಷವನ್ನೂ ಸೃಷ್ಟಿಸು ತ್ತೇನೆ.
- Psalm 87:3–6 ಕೀರ್ತನೆಗಳು 87:3–6ದೇವರ ಪಟ್ಟಣವೇ, ನಿನ್ನ ವಿಷಯವಾಗಿ ಘನವುಳ್ಳವುಗಳು ಹೇಳಲ್ಪಟ್ಟಿವೆ. ರಾಹಬನ್ನೂ ಬಾಬೆಲನ್ನೂ ನನ್ನನ್ನು ತಿಳಿದವರಿಗೆ ಜ್ಞಾಪಕಮಾಡುವೆನು; ಫಿಲಿಷ್ಟಿಯವೂ ತೂರಿನ ಸಂಗಡ ಕೂಷನ್ನೂ ನೋಡು: ಈ ಮನುಷ್ಯನು ಅಲ್ಲಿ ಹುಟ್ಟಿ ದನು. ಚೀಯೋನಿನ ವಿಷಯ ಹೇಳುವದೇನಂದರೆ --ಇಂಥಿಂಥವರು ಅದರಲ್ಲಿ ಹುಟ್ಟಿದರೆಂದೂ ಮಹೋ ನ್ನತನು ತಾನೇ ಅದನ್ನು ಸ್ಥಾಪಿಸುವನು. ಕರ್ತನು ಜನಸಂಖ್ಯೆ ಬರೆಯುವಾಗ ಇವನು ಅಲ್ಲಿ ಹುಟ್ಟಿದ ನೆಂದು ಎಣಿಸುವನು ಸೆಲಾ.ಹಾಡುವವರೂ ವಾದ್ಯ ಗಳನ್ನು ಬಾರಿಸುವವರೂ ಇದ್ದಾರೆ; ನನ್ನ ಬುಗ್ಗೆಗಳೆಲ್ಲಾ ನಿನ್ನಲ್ಲಿಯೇ.
- Romans 6:14 ರೋಮಾಪುರದವರಿಗೆ 6:14ಯಾಕಂದರೆ ಪಾಪವು ನಿಮ್ಮ ಮೇಲೆ ಪ್ರಭುತ್ವ ನಡಿಸಬಾರದು; ಕಾರಣವೇನಂದರೆ ನೀವು ನ್ಯಾಯಪ್ರಮಾಣಾಧೀನ ರಲ್ಲ, ಕೃಪೆಗೆ ಅಧೀನರಾಗಿದ್ದೀರಿ.
- Isaiah 62:1–2 ಯೆಶಾಯ 62:1–2ಚೀಯೋನಿಗೋಸ್ಕರ ನಾನು ಮೌನವಾಗಿರುವದಿಲ್ಲ; ಯೆರೂಸಲೇಮಿಗೋಸ್ಕರ ಅದರ ನೀತಿ ಪ್ರಕಾಶದಂತೆಯೂ ಅದರ ರಕ್ಷಣೆಯು ಉರಿಯುವ ದೀವಿಗೆಯಂತೆಯೂ ಹೊರಡುವ ವರೆಗೆ ನಾನು ವಿಶ್ರಾಂತಿಯಿಂದ ಇರುವದಿಲ್ಲ. ಆಗ ಅನ್ಯ ಜನಾಂಗಗಳು ನಿನ್ನ ನೀತಿಯನ್ನು ಅರಸರೆಲ್ಲರು ನಿನ್ನ ಮಹಿಮೆಯನ್ನು ನೋಡುವರು; ಕರ್ತನ ಬಾಯಿ ಉಚ್ಚರಿಸುವ ಹೊಸ ಹೆಸರಿನಿಂದ ನೀನು ಕರೆಯ ಲ್ಪಡುವಿ.
- Joel 3:17 ಯೋವೇಲ 3:17ಹೀಗೆ ನನ್ನ ಪರಿಶುದ್ಧ ಪರ್ವತವಾದ ಚೀಯೋನಿ ನಲ್ಲಿ ವಾಸಿಸುವ ನಿಮ್ಮ ದೇವರಾದ ಕರ್ತನು ನಾನೇ ಎಂದು ನೀವು ತಿಳುಕೊಳ್ಳುವಿರಿ; ಆಗ ಯೆರೂಸಲೇಮು ಪರಿಶುದ್ಧವಾಗಿರುವದು; ಅನ್ಯರು ಇನ್ನು ಅದರಲ್ಲಿ ಹಾದುಹೋಗರು.
- Romans 6:18 ರೋಮಾಪುರದವರಿಗೆ 6:18ಹೀಗೆ ನೀವು ಪಾಪದಿಂದ ಬಿಡುಗಡೆಯನ್ನು ಹೊಂದಿ ನೀತಿಗೆ ದಾಸರಾದಿರಿ.