Jeremiah · chapter 51 · verse 26
Jeremiah 51:26 in Kannada
ಒಬ್ಬರೂ ನಿನ್ನಿಂದ ಮೂಲೆಯ ಕಲ್ಲನ್ನಾಗಲಿ, ಅಸ್ತಿವಾರದ ಕಲ್ಲನ್ನಾಗಲಿ ತೆಗೆಯರು; ನೀನು ಎಂದೆಂದಿಗೂ ಹಾಳಾಗುವಿ ಎಂದು ಕರ್ತನು ಅನ್ನುತ್ತಾನೆ.
Obbaroo ninninda mooleya kallannaagali, astivaarada kallannaagali tegeyaru; neenu endendigoo haalaaguvi endu kartanu annuttaane.
Jeremiah 51:26 in English
- King James Version (KJV)
- And they shall not take of thee a stone for a corner, nor a stone for foundations; but thou shalt be desolate for ever, saith the LORD.
- World English Bible (WEB)
- They won’t take a cornerstone from you, nor a stone for foundations; but you will be desolate forever,” says the LORD.
- American Standard Version (ASV)
- And they shall not take of thee a stone for a corner, nor a stone for foundations; but thou shalt be desolate for ever, saith Jehovah.
- Bible in Basic English (BBE)
- And they will not take from you a stone for the angle of a wall or the base of a building; but you will be a waste place for ever, says the Lord.
- Darby Translation (DBY)
- And they shall not take of thee a stone for a corner, nor a stone for foundations; for thou shalt be desolate for ever, saith Jehovah.
- Webster's Bible (WBS)
- And they shall not take of thee a stone for a corner, nor a stone for foundations; but thou shalt be desolate for ever, saith the LORD.
- Young's Literal Translation (YLT)
- And they take not out of thee a stone for a corner, And a stone for foundations, For desolations age-during art thou, An affirmation of Jehovah.
Read in context
- 24ಬಾಬೆಲಿಗೂ ಕಸ್ದೀಯರ ನಿವಾಸಿಗಳೆಲ್ಲ ರಿಗೂ--ಅವರು ಚೀಯೋನಿನಲ್ಲಿ ನಿಮ್ಮ ಸನ್ನಿಧಿಯಲ್ಲಿ ಮಾಡಿದ ಕೇಡನ್ನೆಲ್ಲಾ ಸಲ್ಲಿಸುವೆನೆಂದು ಕರ್ತನು ಅನ್ನುತ್ತಾನೆ.
- 25ನಾಶಮಾಡುವ ಬೆಟ್ಟವೇ! ಭೂಮಿಯನ್ನೆಲ್ಲಾ ನಾಶಮಾಡುವಂಥಾದ್ದೇ! ಇಗೋ, ನಾನು ನಿನಗೆ ವಿರೋಧವಾಗಿದ್ದೇನೆಂದು ಕರ್ತನು ಅನ್ನುತ್ತಾನೆ. ನಿನ್ನ ಮೇಲೆ ನನ್ನ ಕೈಯನ್ನು ಚಾಚಿ ಬಂಡೆಗಳ ಮೇಲಿನಿಂದ ನಿನ್ನನ್ನು ಹೊರಳಿಸಿ ನಿನ್ನನ್ನು ಸುಟ್ಟ ಬೆಟ್ಟವಾಗಿ ಮಾಡುತ್ತೇನೆ.
- 26ಒಬ್ಬರೂ ನಿನ್ನಿಂದ ಮೂಲೆಯ ಕಲ್ಲನ್ನಾಗಲಿ, ಅಸ್ತಿವಾರದ ಕಲ್ಲನ್ನಾಗಲಿ ತೆಗೆಯರು; ನೀನು ಎಂದೆಂದಿಗೂ ಹಾಳಾಗುವಿ ಎಂದು ಕರ್ತನು ಅನ್ನುತ್ತಾನೆ.
- 27ದೇಶದಲ್ಲಿ ಧ್ವಜವನ್ನೆತ್ತಿರಿ; ಜನಾಂಗಗಳಲ್ಲಿ ತುತೂರಿಯನ್ನೂದಿರಿ; ಅದಕ್ಕೆ ವಿರೋಧವಾಗಿ ಜನಾಂಗಗಳನ್ನು ಸಿದ್ಧಮಾಡಿರಿ; ಅರರಾಟ್, ಮಿನ್ನಿ, ಅಷ್ಕೆನಜ್ ರಾಜ್ಯಗಳನ್ನು ಅದಕ್ಕೆ ವಿರೋಧವಾಗಿ ಕರೆಯಿರಿ; ಅದಕ್ಕೆ ವಿರೋಧವಾಗಿ ಸೈನ್ಯಾಧಿಪತಿಯನ್ನು ನೇಮಿಸಿರಿ; ಬಿರುಸಾದ ಮಿಡತೆ ದಂಡಿನಂತೆ ಕುದುರೆ ಗಳನ್ನು ಬರಮಾಡಿರಿ.
- 28ಅದಕ್ಕೆ ವಿರೋಧವಾಗಿ ಜನಾಂಗಗಳನ್ನೂ ಮೇದ್ಯರ ಅರಸರನ್ನೂ ಅದರ ಅಧಿಪತಿಗಳನ್ನೂ ಅಧಿಕಾರಿಗಳೆಲ್ಲರನ್ನೂ ಅವನ ರಾಜ್ಯದ ದೇಶವನ್ನೆಲ್ಲಾ ಸಿದ್ಧಮಾಡಿರಿ.
Cross references
- Isaiah 13:19–22 ಯೆಶಾಯ 13:19–22ರಾಜ್ಯಗಳ ಘನತೆಯೂ ಕಸ್ದೀಯರ ಶ್ರೇಷ್ಠವಾದ ಸೌಂದರ್ಯವೂ ಆದ ಬಾಬೆಲಿಗೆ ದೇವರು ಸೊದೋ ಮ್ ಗೊಮೋರಗಳನ್ನು ಕೆಡವಿಬಿಟ್ಟಂತೆ ಇದನ್ನು ಸಹ ಕೆಡವಿಬಿಡುವನು. ಅದು ಎಂದಿಗೂ ನಿವಾಸ ಸ್ಥಳ ವಾಗದು, ಇಲ್ಲವೆ ತಲತಲಾಂತರಕ್ಕೂ ಅಲ್ಲಿ ಯಾರೂ ವಾಸಿಸರು; ಇಲ್ಲವೆ ಯಾವ ಅರಬಿಯನೂ ಗುಡಾರ ಹಾಕನು; ಅಥವಾ ಕುರುಬರು ಮಂದೆಯನ್ನು ತಂಗಿಸರು. ಆದರೆ ಮರುಭೂಮಿಯ ಕಾಡುಮೃಗಗಳು ಅಲ್ಲಿ ಮಲಗುವವು; ಅವರ ಮನೆಗಳು ವ್ಯೆಥೆಯಿಂದ ತುಂಬಿರುವವು; ಅಲ್ಲಿ ಗೂಬೆಗಳು ವಾಸಿಸುವವು, ದೆವ್ವಗಳು ಕುಣಿದಾಡುವವು.ಅವರ ಹಾಳಾದ ಮನೆಗಳಲ್ಲಿ ದ್ವೀಪಗಳ ಕಾಡುಮೃಗಗಳು ಕೂಗುವವು; ಅವರ ಮೆಚ್ಚಿಕೆಯಾದ ಅರಮನೆಗಳಲ್ಲಿ ಸರ್ಪಗಳು ವಾಸಿಸುವವು; ಅವಳ ಕಾಲವು ಸವಿಾಪಿಸಿತು, ಇನ್ನು ಅವಳ ದಿನಗಳು ಮುಂದುವರಿಯವು. ಅವರ ಹಾಳಾದ ಮನೆಗಳಲ್ಲಿ ದ್ವೀಪಗಳ ಕಾಡುಮೃಗಗಳು ಕೂಗುವವು; ಅವರ ಮೆಚ್ಚಿಕೆಯಾದ ಅರಮನೆಗಳಲ್ಲಿ ಸರ್ಪಗಳು ವಾಸಿಸುವವು; ಅವಳ ಕಾಲವು ಸವಿಾಪಿಸಿತು, ಇನ್ನು ಅವಳ ದಿನಗಳು ಮುಂದುವರಿಯವು.
- Jeremiah 51:43 ಯೆರೆಮೀಯ 51:43ಅದರ ಪಟ್ಟಣಗಳು ಹಾಳಾದವು; ಅವು ಒಣನೆಲವೂ ಅಡವಿಯೂ ಯಾರೂ ವಾಸಮಾಡದೆ, ಮನುಷ್ಯನ ಮಗನು ಹಾದುಹೋಗದೆ ಇರುವ ದೇಶವೂ ಆಗಿವೆ.
- Revelation 18:20–24 ಪ್ರಕಟನೆ 18:20–24ಪರಲೋಕವೇ, ಪರಿಶುದ್ಧರಾದ ಅಪೊಸ್ತಲರೇ, ಪ್ರವಾದಿಗಳೇ, ಅವಳ ವಿಷಯವಾಗಿ ಆನಂದಪಡಿರಿ. ಯಾಕಂದರೆ ನಿಮ್ಮ ನಿಮಿತ್ತವಾಗಿ ದೇವರು ಇವಳಿಗೆ ಪ್ರತಿ ದಂಡನೆಯನ್ನು ಮಾಡಿದನು ಎಂದು ಹೇಳಿತು. ಆಗ ಬಲಿಷ್ಠನಾದ ಒಬ್ಬ ದೂತನು ಬೀಸುವ ದೊಡ್ಡ ಕಲ್ಲಿನಂತಿರುವ ಒಂದು ಕಲ್ಲನ್ನು ಎತ್ತಿ ಸಮುದ್ರ ದೊಳಗೆ ಹಾಕಿ--ಮಹಾ ಪಟ್ಟಣವಾದ ಆ ಬಾಬೆಲು ಹೀಗೆಯೇ ಬಲಾತ್ಕಾರದಿಂದ ಕೆಡವಲ್ಲಟ್ಟು ಇನ್ನೆಂದಿಗೂ ಕಾಣಿಸುವದಿಲ್ಲ. ನಿನ್ನಲ್ಲಿ ವೀಣೆಗಾರರೂ ವಾದ್ಯ ಗಾರರೂ ಕೊಳಲೂದುವವರೂ ತುತೂರಿಯವರು ಮಾಡುವ ಧ್ವನಿಯೂ ಇನ್ನೆಂದಿಗೂ ಕೇಳಿಸುವದಿಲ್ಲ. ಯಾವ ವಿಧವಾದ ಕೈಗಾರಿಕೆಯನ್ನು ಮಾಡುವವರು ನಿಮ್ಮಲ್ಲಿ ಇನ್ನೆಂದಿಗೂ ಸಿಕ್ಕುವದಿಲ್ಲ; ಬೀಸುವ ಕಲ್ಲಿನ ಶಬ್ದವೂ ನಿನ್ನಲ್ಲಿ ಇನ್ನೆಂದಿಗೂ ಕೇಳಿಸುವದಿಲ್ಲ. ದೀಪದ ಬೆಳಕು ನಿನ್ನಲ್ಲಿ ಇನ್ನೆಂದಿಗೂ ಪ್ರಕಾಶಿಸು ವದಿಲ್ಲ. ವಧೂವರರ ಸ್ವರವು ನಿನ್ನಲ್ಲಿ ಇನ್ನೆಂದಿಗೂ ಕೇಳಿಸುವದಿಲ್ಲ; ನಿನ್ನ ವರ್ತಕರು ಭೂಮಿಯ ಪ್ರಧಾನ ರಾಗಿದ್ದದ್ದಲ್ಲದೆ ನಿನ್ನ ಮಾಟದಿಂದ ಎಲ್ಲಾ ಜನಾಂಗ ದವರು ಮೋಸ ಹೋದರು.ಪ್ರವಾದಿಗಳ, ಪರಿ ಶುದ್ಧರ ಮತ್ತು ಭೂಮಿಯ ಮೇಲೆ ಕೊಲ್ಲಲ್ಪಟ್ಟವರೆಲ್ಲರ ರಕ್ತವು ನಿನ್ನಲ್ಲಿ ಸಿಕ್ಕಿತು ಎಂದು ಹೇಳಿದನು. ಪ್ರವಾದಿಗಳ, ಪರಿ ಶುದ್ಧರ ಮತ್ತು ಭೂಮಿಯ ಮೇಲೆ ಕೊಲ್ಲಲ್ಪಟ್ಟವರೆಲ್ಲರ ರಕ್ತವು ನಿನ್ನಲ್ಲಿ ಸಿಕ್ಕಿತು ಎಂದು ಹೇಳಿದನು.
- Jeremiah 50:12–13 ಯೆರೆಮೀಯ 50:12–13ನಿಮ್ಮ ತಾಯಿ ಬಹಳವಾಗಿ ನಾಚಿಕೆಪಡುವಳು; ನಿಮ್ಮನ್ನು ಹೆತ್ತವಳು ಲಜ್ಜೆ ಹೊಂದುವಳು; ಇಗೋ, ಜನಾಂಗ ಗಳಲ್ಲಿ ಅಂತ್ಯವಾದದ್ದು ಕಾಡೂ ಒಣ ಭೂಮಿಯೂ ಅರಣ್ಯವೂ ಆಗುವದು. ಕರ್ತನ ರೌದ್ರದ ನಿಮಿತ್ತ ಅದರಲ್ಲಿ ಯಾರೂ ವಾಸಮಾಡುವದಿಲ್ಲ; ಸಂಪೂರ್ಣ ಹಾಳಾಗುವದು ಬಾಬೆಲನ್ನು ಹಾದುಹೋಗುವವ ರೆಲ್ಲರು ಅದರ ಎಲ್ಲಾ ಬಾಧೆಗಳ ವಿಷಯ ವಿಸ್ಮಯಪಟ್ಟು ಸಿಳ್ಳಿಡುವರು.
- Isaiah 14:23 ಯೆಶಾಯ 14:23ಅದನ್ನು ಸಹ ಮುಳ್ಳುಹಂದಿಗೆ ಬಾಧ್ಯ ವಾಗಿಯೂ ನೀರಿನ ಕುಣಿಗಳಾಗಿಯೂ ಮಾಡಿ ನಾಶ ವೆಂಬ ಕಸಬರಿಕೆಯಿಂದ ಗುಡಿಸುತ್ತೇನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- Jeremiah 51:29 ಯೆರೆಮೀಯ 51:29ಆಗ ದೇಶವು ಕದಲಿ ವೇದನೆಪಡುವದು; ಬಾಬೆಲಿನ ದೇಶವನ್ನು ನಿವಾಸಿ ಇಲ್ಲದೆ ಹಾಳುಮಾಡುವ ವಿಷಯವಾಗಿ ಬಾಬೆಲಿಗೆ ವಿರೋಧವಾದ ಕರ್ತನ ಆಲೋಚನೆಗಳು ಮಾಡಲ್ಪಡು ವವು.
- Jeremiah 51:37 ಯೆರೆಮೀಯ 51:37ಬಾಬೆಲ್ ದಿಬ್ಬೆಗಳಾಗುವದು; ನಿವಾಸಿಗಳು ಇಲ್ಲದೆ ನರಿಗಳ ವಾಸಸ್ಥಳವೂ ಆಶ್ಚರ್ಯವೂ ಹಾಳೂ ಸಿಳ್ಳಿಡುವಿಕೆಯೂ ಆಗುವದು.
- Isaiah 34:8–17 ಯೆಶಾಯ 34:8–17ಏಕಂದರೆ ಅದು ಕರ್ತನು ಮುಯ್ಯಿ ತೀರಿಸುವ ದಿನವಾಗಿದೆ; ಚೀಯೋನಿನ ವ್ಯಾಜ್ಯದಲ್ಲಿ ದಂಡನೆ ವಿಧಿಸತಕ್ಕ ವರುಷವು ಒದಗಿದೆ. ಪ್ರವಾಹಗಳು ಇಳಿಜಾರಾಗಿ ಮಾರ್ಪಡುವದೂ; ಅದರ ದೂಳು ಗಂಧಕವಾಗುವದು; ದೇಶವು ಉರಿ ಯುವ ಇಳಿಜಾರು ಪ್ರದೇಶವಾಗುವದು. ಅದು ರಾತ್ರಿಯಲ್ಲಾದರೂ ಇಲ್ಲವೆ ಹಗಲಿನಲ್ಲಾದರೂ ಆರು ವದಿಲ್ಲ; ಅದರ ಹೊಗೆಯು ನಿರಂತರವಾಗಿ ಏಳುತ್ತಿರು ವದು; ಅದು ತಲತಲಾಂತರಕ್ಕೂ ಹಾಳಾಗಿ ಬಿದ್ದಿರು ವದು; ಅದನ್ನು ಎಂದೆಂದಿಗೂ ಯಾರೂ ಹಾದು ಹೋಗರು. ಆದರೆ ಬಕ ಪಕ್ಷಿಯು ಮತ್ತು ಮುಳ್ಳು ಹಂದಿಯು ಅದನ್ನು ಆವರಿಸಿಕೊಳ್ಳುವವು; ಗೂಬೆ ಮತ್ತು ಕಾಗೆಗಳು ಸಹ ಅಲ್ಲಿ ವಾಸಿಸುವವು; ಗಲಿಬಿಲಿ ಯೆಂಬ ನೂಲನ್ನು ಶೂನ್ಯವೆಂಬ ಗಟ್ಟಿ ತೂಕವನ್ನು ಆತನು ಅದರ ಮೇಲೆ ಎಳೆಯುವನು. ಅವರ ರಾಜ್ಯಕ್ಕೆ ಪ್ರಮುಖರನ್ನು ಕರೆಯುವರು; ಆದರೆ ಅಲ್ಲಿ ಯಾರೂ ಇರುವದಿಲ್ಲ; (ಅದರ) ಅವಳ ಪ್ರಭುಗಳು ಇಲ್ಲದಂತಾಗುವರು. ಅವಳ ಅರಮನೆಗಳಲ್ಲಿ ಮುಳ್ಳುಗಳು ಬೆಳೆಯುವವು; ಅವಳ ಕೋಟೆಗಳಲ್ಲಿ ತುರುಚಿಯೂ ದತ್ತೂರಿಯೂ ಇರುವವು; ಅದು (ಉಷ್ಟ್ರ ಪಕ್ಷಿಗಳ) ಸರ್ಪಗಳ ನಿವಾಸವೂ ಗೂಬೆಗಳಿಗೆ ಸ್ಥಾನವೂ ಆಗುವದು. ಮರುಭೂಮಿಯ ಕಾಡು ಮೃಗಗಳು ಸಹ ದ್ವೀಪದ ಕಾಡುಮೃಗಗಳೊಂದಿಗೆ ಸಂಧಿಸುವವು; ದೆವ್ವವು ತನ್ನ ಜೊತೆಯನ್ನು ಕೂಗು ವದು; ಅಲ್ಲಿ ಚೀರುಗೂಬೆಯು ಸಹ ವಿಶ್ರಮಿಸಿಕೊಂಡು ಉಪಶಮನ ಸ್ಥಳವನ್ನು ಕಂಡುಕೊಳ್ಳುವದು. ದೊಡ್ಡ ಗೂಬೆಯು ಅಲ್ಲಿ ಗೂಡನ್ನು ಮಾಡಿಕೊಂಡು ಮೊಟ್ಟೆ ಯಿಟ್ಟು ಮರಿ ಮಾಡಿ ಅವುಗಳನ್ನು ತನ್ನ ನೆರಳಿನಲ್ಲಿ ಕೂಡಿಸುವದು; ಅಲ್ಲಿ ಹದ್ದುಗಳಲ್ಲಿ ಪ್ರತಿಯೊಂದು ತಮ್ಮ ಜೊತೆಜೊತೆಯಾಗಿ ಕೂಡಿಕೊಳ್ಳುವವು. ಕರ್ತನ ಪುಸ್ತಕದಲ್ಲಿ ನೀವು ಹುಡುಕಿ ಓದಿರಿ; ಇವು ಗಳಲ್ಲಿ ಒಂದಾದರೂ ತಪ್ಪದು, ಜೊತೆಯಿಲ್ಲದೆ ಒಂದೂ ಇಲ್ಲ; ನನ್ನ ಬಾಯಿಯೇ ಅದನ್ನು ಆಜ್ಞಾಪಿ ಸಿತು; ಆತನ ಆತ್ಮವೇ ಅವುಗಳನ್ನು ಒಟ್ಟುಗೂಡಿಸಿತುಆತನೇ ಅವುಗಳಿಗೋಸ್ಕರ ಚೀಟು ಹಾಕಿದ್ದಾನೆ, ಆತನ ಕೈಯೇ ಅದನ್ನು ಗೆರೆ ಎಳೆದು ಅವರಿಗೆ ಹಂಚಿ ಕೊಟ್ಟಿದೆ. ಅವು ಅದನ್ನು ನಿರಂತರಕ್ಕೂ ವಶಮಾಡಿ ಕೊಳ್ಳುವವು. ಅವು ತಲತಲಾಂತರಕ್ಕೂ ಅದರಲ್ಲಿ ವಾಸವಾಗಿರುವವು. ಆತನೇ ಅವುಗಳಿಗೋಸ್ಕರ ಚೀಟು ಹಾಕಿದ್ದಾನೆ, ಆತನ ಕೈಯೇ ಅದನ್ನು ಗೆರೆ ಎಳೆದು ಅವರಿಗೆ ಹಂಚಿ ಕೊಟ್ಟಿದೆ. ಅವು ಅದನ್ನು ನಿರಂತರಕ್ಕೂ ವಶಮಾಡಿ ಕೊಳ್ಳುವವು. ಅವು ತಲತಲಾಂತರಕ್ಕೂ ಅದರಲ್ಲಿ ವಾಸವಾಗಿರುವವು.
- Jeremiah 50:40–41 ಯೆರೆಮೀಯ 50:40–41ದೇವರು ಸೊದೋಮನ್ನೂ ಗೊಮೋರವನ್ನು ಅವುಗಳ ಸವಿಾಪದಲ್ಲಿದ್ದ ಪಟ್ಟಣಗಳನ್ನೂ ಕೆಡವಿಹಾಕಿದಾಗ ಆದ ಹಾಗೆ ಅಲ್ಲಿ ಯಾವ ಮನುಷ್ಯನಾದರೂ ವಾಸಮಾಡುವದಿಲ್ಲ; ಅದರಲ್ಲಿ ಯಾವ ನರಪುತ್ರನಾದರೂ ತಂಗುವದಿ ಲ್ಲವೆಂದು ಕರ್ತನು ಅನ್ನುತ್ತಾನೆ. ಇಗೋ, ಒಂದು ಜನಾಂಗ ಉತ್ತರದಿಂದ ಬರುತ್ತದೆ; ಅದು ದೊಡ್ಡ ಜನಾಂಗವು. ಭೂಮಿಯ ಮೇರೆಗಳಿಂದ ಅನೇಕ ಅರಸರು ಎಬ್ಬಿಸಲ್ಪಡುವರು.